ವಿಷಯಾನುಕ್ರಮಣಿಕೆ
This text was machine-transcribed from the printed book and may contain errors. Select the words and choose “Report a mistake”.
- ಘರ್ಷಣಾರಹಿತ ಜೀವನ 5
- ಕಲ್ಪನೆ ಹಾಗೂ ದೃಶ್ಯೀಕರಣ 7
- ಯುದ್ಧ ಮತ್ತು ಭಯೋತ್ಪಾದನೆಗಳಿಗೆ ಪರಿಹಾರ 8
- ಜೀವನ್ಮುಕ್ತರಾಗಿ ಬಾಳಲು ತಂತ್ರಗಳು 10
- ಶಕ್ತಿ – ಬದಲಾಯಿಸಲು ಬೇಕಾದ ಚೈತನ್ಯ 11
- ಸಣ್ಣ ಪರಿವರ್ತನೆಗಳ ಪ್ರಭಾವ 17
- ಧರ್ಮ-ವಿಶ್ವದ ಕಾನೂನು 20
- ಚಟಗಳ ಬಗ್ಗೆ ಇನ್ನೂ ಆಳವಾದ ರಹಸ್ಯಗಳು 22
- ಬುದ್ಧಿ-ಸ್ವೀಕರಿಸುವ ಜಾಣ್ಮೆ 26
- ಶಕ್ತಿಯಿಂದ ಬದಲಾಯಿಸುವುದೋ ಅಥವಾ 26 ಬುದ್ಧಿಯಿಂದ ಸಮ್ಮತಿಸುವುದೋ ?
- ನಿರ್ಲಕ್ಷಿಸಲಾಗದಷ್ಟು ಒಳ್ಳೆಯತನ 32
- ನೀವು ವಿಶ್ವದ ಪರಿಪೂರ್ಣತೆ 33 * ಸರಿಯಾದ ಜನರನ್ನು ಆಕರ್ಷಿಸುವುದು 35
- ನಿಮ್ಮನ್ನು ಹಾಗೂ ಇತರರನ್ನು ಅಳೆಯಲು ಒಂದೇ ಮಾಪನ 44
- ಯುಕ್ತಿ - ಸ್ಪಷ್ಟತೆ 46
- ಒಂದು ಅಮಿತ ಅಖಂಡ ಧಾರೆ 49
- ಸೋಮಾರಿತನವನ್ನು ಬಿಡಲು ಸ್ಪಷ್ಟತೆಯು ಅನುವಾಗುತ್ತದೆ 52
- ಭಕ್ತಿ 56
- ನಿರಾಕಾರವೋ, ಸಾಕಾರವೋ 58
- ಜೀವನ್ಮುಕ್ತಿಯ ಸಾರ 60
ಜೀವನ್ಮುಕ್ತಿ
- ಒಂದು ಪರಿಚಯ
ಘರ್ಷಣಾರಹಿತ ಜೀವನ
ನಾನು ನಿಮ್ಮೆಲ್ಲರನ್ನೂ ನನ್ನ ಪ್ರೀತಿ ಹಾಗೂ ಆದರಗಳಿಂದ ಸ್ವಾಗತಿಸುತ್ತೇನೆ.
ಇಂದಿನ ವಿಷಯ, ಜೀವನ್ಮುಕ್ತಿ.
ವೇದಾಂತದಲ್ಲಿ ಶ್ರವಣ, ಮನನ ಹಾಗೂ ನಿಧಿಧ್ಯಾಸನ ಎಂಬ ಮೂರು ಪದಗಳಿವೆ. ಶ್ರವಣ ಎಂದರೆ ಮಹಾಸತ್ಯಗಳನ್ನು ಆಲಿಸುವುದು, ಮನನ ಎಂದರೆ ಮಹಾಸತ್ಯಗಳನ್ನು ಆಳವಾಗಿ ಗ್ರಹಿಸುವುದು ಮತ್ತು ನಿಧಿಧ್ಯಾಸನ ಎಂದರೆ ಅವುಗಳನ್ನು ಬಾಳುವುದು. ಆದ್ದರಿಂದ ಇಂದು ಜೀವನ್ಮುಕ್ತಿಯ ವಿಷಯವಾಗಿ ಕೆಲವು ಸತ್ಯಗಳನ್ನು ಕೇಳೋಣ ಹಾಗೂ ಆಳವಾಗಿ ಗ್ರಹಿಸಿಕೊಳ್ಳುವ ಪ್ರಯತ್ನ ಮಾಡೋಣ. ಆಗ ಸಹಜವಾಗಿಯೇ ನೀವು ಜೀವನ್ಮುಕ್ತರಾಗಿ ಬಾಳುವಿರಿ.
ನಾನು ಜೀವನ್ಮುಕ್ತರಾಗಿ ಬಾಳುವುದು ಎಂದಾಗ ಅದರ ಅರ್ಥವೇನು ?
ಜೀವನ್ಮುಕ್ತಿ - ಒಂದು ಪರಿಚಯ
ಜೀವನ್ಮುಕ್ತಿ ಎಂದರೆ ಒಂದು ಘರ್ಷಣಾರಹಿತ ಜೀವನ, ಅಂದರೆ ಯಾವ ಘರ್ಷಣೆಗಳೂ ಇಲ್ಲದೇ ಬಾಳುವುದು. ನಿಮ್ಮ ದೇಹ, ಮಾನಸ್ಸು ಹಾಗೂ ಹೊರ ಪ್ರಪಂಚವೆಂದು ನೀವು ಭಾವಿಸುವ ನಿಮ್ಮ ಪರಿಸರದೊಂದಿಗೆ ಸಂಪೂರ್ಣವಾಗಿ ನೆಮ್ಮದಿಯಿರುವುದು ಎಂದರ್ಥ.
ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಘರ್ಷಣೆಗಳಿಂದ ತುಂಬಿರುವ ಈ ಪ್ರಪಂಚದಲ್ಲಿ ಘರ್ಷಣಾರಹಿತವಾಗಿರಲು ಹೇಗೆ ಸಾಧ್ಯ ? ಅದು ಸಾಧ್ಯವಿಲ್ಲ. ಇಡೀ ಪ್ರಪಂಚವು ಮೌನವಾಗಿ, ಸಂತೋಷವಾಗಿ ಮತ್ತು ಶಾಂತಿಯುತವಾಗಿದ್ದಾಗ ಮಾತ್ರ, ನಾನು ಘರ್ಷಣಾರಹಿತನಾಗಿರಲು ಸಾಧ್ಯ' ಎಂದು.
ತಿಳಿಯಿರಿ, 'ಅದೆಂದಿಗೂ ಸಾಧ್ಯವಾಗುವುದಿಲ್ಲ. ಇಡೀ ಪ್ರಪಂಚದ ಶಾಂತಿ ಎಂಬಂತಹದು ಇಲ್ಲ. ಅದು ಎಂದಿಗೂ ಇರಲೂ ಇಲ್ಲ, ಇರಲು ಸಾಧ್ಯವೂ ಇಲ್ಲ. ಇಡೀ ಪ್ರಪಂಚವನ್ನು ಶಾಂತಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಪ್ರಪಂಚವನ್ನು ಶಾಂತಗೊಳಿಸಲು ಯತ್ನಿಸುವ ಜನರಿಂದಲೇ ಎಲ್ಲಾ ಸಮಸ್ಯೆಗಳೂ ಹುಟ್ಟುட்டாகುವುದು.
ನಾನು ಅನೇಕ ಬಾರಿ ಧ್ಯಾನ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ, ವಾಸ್ತವವಾಗಿ ಧ್ಯಾನ ಮಂದಿರದಲ್ಲಿ ಮಾತನಾಡುವ ಕೆಲವು ಜನರ ಗಲಾಟೆಗಿಂತಲೂ 'ಮಾತನಾಡಬೇಡಿ! ಸುಮ್ಮನಿರಿ!' ಎಂದು ಕೂಗುವ ಸ್ವಯಂ ಸೇವಕರ ಗಲಾಟೆಯೇ ಹೆಚ್ಚಾಗಿರುತ್ತದೆ. ಅವರು
ಮೌನವನ್ನು ಪಾಲಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾರಾದರೂ, ಭಾಗವಹಿಸುವವರಿಗಿಂತಲೂ ಅವರೇ ಹೆಚ್ಚು ಗಲಾಟೆಯನ್ನು ಮಾಡುತ್ತಿರುತ್ತಾರೆ; ಅದೇ ರೀತಿ, ಶಾಂತಿಯನ್ನು ಸಾಧಿಸಲೆತ್ನಿಸುವವರು ಇನ್ನೂ ಹೆಚ್ಚಿನ ಸಮಸ್ಯೆಗಳನ್ನೇ ಸೃಷ್ಟಿಸುತ್ತಿರುತ್ತಾರೆ.
ಕಳೆದ ಮೂರು ಸಾವಿರ ವರ್ಷಗಳಲ್ಲಿ ಐದು ಸಾವಿರ ಯುದ್ಧಗಳು ನಡೆದಿವೆ! ಪ್ರತಿಯೊಂದು ಯುದ್ಧವೂ ವಿಶ್ವಶಾಂತಿಗಾಗಿ ಮಾಡಲಾಯಿತೆಂದೇ ಅವರು ಸಮರ್ಥಿಸಿಕೊಂಡದ್ದು. ಯುದ್ಧವನ್ನು ಘೋಷಿಸಿದ ಪ್ರತಿಯೊಬ್ಬ ಮುಖಂಡನೂ ವಿಶ್ವಕ್ಕೆ ಶಾಂತಿಯನ್ನು ತರುವುದಾಗಿಯೇ ಸಮರ್ಥಿಸಿಕೊಳ್ಳುತ್ತಿದ್ದನು. ಆದರೆ, ಬಹುಮುಖ್ಯ ವಾದ ಸತ್ಯವು ಅವರೆಲ್ಲರಿಂದಲೂ ತಪ್ಪಿಸಿಕೊಂಡಿತ್ತು. ಘರ್ಷಣೆಗಳಿಲ್ಲದೆ ಜೀವನವನ್ನು ನಡೆಸಲಾರಂಭಿಸಿದಾಗ, ನೀವು ಅನುಭವಿಸುವ ಪ್ರಪಂಚವೂ ಘರ್ಷಣಾರಹಿತವಾಗುತ್ತದೆ. ನೀವು ನೋಡುವ ಪ್ರಪಂಚವೂ ಘರ್ಷಣಾರಹಿತವಾಗುತ್ತದೆ.
ಕಲ್ಪನೆ ಹಾಗೂ ದೃಶ್ಯೀಕರಣ
ನೋಡಿರಿ, ಮನಸ್ಸಿನಲ್ಲಿ ದೃಶ್ಯೀಕರಿಸಿ(Visualisation)ಕೊಳ್ಳುವುದು ಕಲ್ಪನೆಗಿಂತ (Imagination) ಬೇರೆಯಾದುದು. ನೀವು ದೃಶ್ಯೀಕರಿಸಿಕೊಳ್ಳುವಾಗ, ಏನನ್ನು ಚಿತ್ರಿಸಿಕೊಳ್ಳುತ್ತೀರೋ, ಅದು ಸಾಧ್ಯ ಎಂದು ನಿಮ್ಮ ಹೃದಯಕ್ಕೆ ತಿಳಿದಿರುತ್ತದೆ. ಕಲ್ಪನೆಯಲ್ಲಿ, ನಿಮ್ಮ ಕಲ್ಪನೆಗೂ ನಿಮ್ಮ ನಿಜ ಪರಿಸ್ಥಿತಿಗೂ ಏನೇನೂ ಸಂಬಂಧವಿಲ್ಲವೆಂದು ನಿಮ್ಮ ಮನಸ್ಸಿಗೆ ಬಹಳ ಸ್ಪಷ್ಟವಾಗಿ ತಿಳಿದಿರುತ್ತದೆ.
ಕಲ್ಪನೆ ಹಾಗೂ ದೃಶ್ಯೀಕರಣಗಳ ವ್ಯತ್ಯಾಸವನ್ನು ಸರಿಯಾಗಿ ತಿಳಿಯಿರಿ. ಕಲ್ಪನೆಯ ವಿಷಯದಲ್ಲಿ, ನೀವು ಕಲ್ಪಿಸಿಕೊಳ್ಳುತ್ತಿರುವಾಗ, ನೀವು ಕೇವಲ ಕಲ್ಪಿಸಿಕೊಳ್ಳುತ್ತಿದ್ದೀರೆಂದು ನಿಮ್ಮ ಮನಸ್ಸಿಗೆ ತಿಳಿದಿರುತ್ತದೆ. ಚಿತ್ರಿಸಿಕೊಳ್ಳುವುದರ ವಿಷಯದಲ್ಲಿ, ಇದ್ದಕ್ಕಿದ್ದಂತೆ, ಅದು ನಿಜವಾಗಿಯೂ ಸಾಧ್ಯವಾಗುತ್ತದೆ ಎಂದು ಅರಿತುಕೊಳ್ಳುವಿರಿ. ಅದರೆಡೆಗೆ ಆಲೋಚಿಸುವಿರಿ; ಅದಕ್ಕಾಗಿ ಶ್ರಮಿಸುವಿರಿ. ಇದೇ ಕಲ್ಪನೆ ಹಾಗೂ ಚಿತ್ರಿಸಿಕೊಳ್ಳುವುದರ ನಡುವಿನ ಸೂಕ್ಷ್ಮವಾದ ವ್ಯತ್ಯಾಸ. ನಿಮ್ಮ ಚಿತ್ರಿಸಿಕೊಳ್ಳುವಿಕೆಯು ಘರ್ಷಣಾರಹಿತವಾದಾಗ, ನೀವು ಆಂತರಿಕವಾಗಿ ನಿಮ್ಮೊಂದಿಗೆ ಸಾಮರಸ್ಯದಿಂದಿದ್ದಾಗ, ನೀವು ಜೀವನ್ಮುಕ್ತರಾಗಿ ಬಾಳಿದಂತೆ; ನೀವು ವಿಶ್ವಕ್ಕೆ ಶಾಂತಿಯನ್ನು ತರುತ್ತೀರಿ. ಅದೊಂದೇ ಸಾಧ್ಯ, ಮಿಕ್ಕೆಲ್ಲವೂ ಅಸಾಧ್ಯ.
ಒಂದು ಸಣ್ಣ ಕಥೆ : ಒಬ್ಬ ಬಾಲಕನು ಸಮುದ್ರ ದಡದಲ್ಲಿ ಸ್ನಾನ ಮಾಡಲು ಕಾಯುತ್ತಿದ್ದನು. ಅವನ ತಾಯಿಯು, 'ಸ್ನಾನ ಮಾಡದೆ ಏತಕ್ಕಾಗಿ ಕಾಯುತ್ತಿರುವೆ ? ಎನ್ನಲು, ಬಾಲಕನು, 'ಇಲ್ಲ, ಸಮುದ್ರದ ಎಲ್ಲಾ ಅಲೆಗಳು ನಿಲ್ಲಲಿ, ನಂತರ ಸ್ನಾನ ಮಾಡುತ್ತೇನೆ' ಎಂದನು.
'ಹಾಗೆ ಆಗಲು ಸಾಧ್ಯವಿಲ್ಲ ! ಅದರಂತೆಯೇ ಜೀವನ್ಮುಕ್ತರಾಗಿ ಬಾಳಲು ಇಡೀ
ಪ್ರಪಂಚವು ಸಂತೋಷಮಯ ಹಾಗೂ ಶಾಂತಿಯುತವಾಗಲೆಂದು ಕಾಯಲಾಗುವುದಿಲ್ಲ. ಈ ಸತ್ಯವನ್ನು ತಿಳಿದರೆ, ನೀವು ಶಾಂತಿಯನ್ನು ಸೃಷ್ಟಿಸುವ ನಿಮ್ಮ ಅನಾವಶ್ಯಕ ಪ್ರಯತ್ನಗಳಿಂದ ಮುಕ್ತರಾಗುತ್ತೀರಿ.
ಯುದ್ಧ ಮತ್ತು ಭಯೋತ್ಪಾದನೆಗಳಿಗೆ ಪರಿಹಾರ
ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಇಷ್ಟೊಂದು ಸ್ಥಳಗಳಲ್ಲಿ ಯುದ್ಧ ಮತ್ತು ಭಯೋತ್ಪಾದನೆಗಳನ್ನು ನೋಡಿ ನಿಮಗೆ ವೇದನೆಯಾಗುವುದಿಲ್ಲವೇ ? ದಾರಿದ್ರ್ಯ ನಿವಾರಣೆಗೆ ನಿಮ್ಮ ಪರಿಹಾರವೇನು ?' ಎಂದು.
ಇತರರ ವೇದನೆಯಿಂದ ನೀವು ಕ್ಷೋಭೆಗೊಂಡರೆ, ಭೂಗ್ರಹಕ್ಕೆ ಇನ್ನೂ ಹೆಚ್ಚಿನ ವೇದನೆಯನ್ನು ಸೇರಿಸುತ್ತೀರಿ ಎಂದು ನಾನವರಿಗೆ ಹೇಳುತ್ತೇನೆ. ಅವರನ್ನು ನಿಮ್ಮ ಮಟ್ಟಕ್ಕೆ ಏರಿಸುವ ಬದಲು, ನೀವೇ ಅವರ ಮಟ್ಟಕ್ಕೆ ಇಳಿಯುತ್ತೀರಿ. ಅವರನ್ನು ನಿಮ್ಮ ಮಟ್ಟಕ್ಕೆ ತರಲು ಯತ್ನಿಸಿರಿ. ಜೀವನದ ಬಗ್ಗೆ ಅವರ ಅರಿವು ಹಾಗೂ ಅಭಿಪ್ರಾಯವನ್ನು ಬದಲಾಯಿಸಿರಿ. ನೀವು ಅವರ ಬಗ್ಗೆ ಸತತವಾಗಿ ಯೋಚಿಸಿ ಖಿನ್ನರಾದರೆ, ನೀವೂ ಅವರ ಮಟ್ಟವನ್ನೇ ತಲುಪುತ್ತೀರಿ. ಆಗ ನಾವು ವೇದನೆ ಹೊಂದಿರುವ ಮತ್ತೊಬ್ಬ ವ್ಯಕ್ತಿಯನ್ನು ಪಡೆದಂತಾಗುತ್ತದೆ, ಅಷ್ಟೇ ! ಅದು ಯಾವ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ. ಜೀವನ್ಮುಕ್ತರಾಗಿ ಬಾಳಿದಾಗ ಮಾತ್ರ ಶಾಂತಿಯನ್ನು ನಿರ್ಮಿಸಲು ಸಾಧ್ಯ.
ಜೀವನ್ಮುಕ್ತಿ - ಒಂದು ಪರಿಚಯ
ಆದ್ದರಿಂದ, ನಾನು 'ಜೀವನ್ಮುಕ್ತಿ' ಎಂದಾಗ ಅದರ ಅರ್ಥವೇನು ?
ಜೀವನ್ಮುಕ್ತಿ ಎಂದರೆ, ನಿಮ್ಮ ದೇಹ, ಮನಸ್ಸು ಹಾಗೂ ನೀವು ಭಾವಿಸುವ ಪ್ರಪಂಚದಲ್ಲಿ ಘರ್ಷಣೆಗಳಿಲ್ಲದೆ ಬಾಳುವುದು. ನಾನು 'ಪ್ರಪಂಚ'ವೆಂಬ ಪದವನ್ನು ಬಳಸಲಿಲ್ಲ. ಇಲ್ಲ. ನಾನು 'ನೀವು ಭಾವಿಸುವ ಪ್ರಪಂಚ'ವೆಂಬ ಪದಗಳನ್ನು ಬಳಸುತ್ತಿದ್ದೇನೆ. ಅದೊಂದೇ ಸಾಧ್ಯತೆ, ಮತ್ತಾವುದೂ ಸಾಧ್ಯವಿಲ್ಲ. ಇದು ಸಾಧ್ಯವಾದರೆ, ಆಗ ಜೀವನ್ಮುಕ್ತಿಯನ್ನು ಬಾಳಿದಂತೆ.
ಸಾಮಾನ್ಯವಾಗಿ, ನಾವೆಲ್ಲರೂ ಅಸಾಧ್ಯವಾದ ಗುರಿಗಳನ್ನಿಟ್ಟುಕೊಂಡು, ಅದನ್ನು ಸಾಧಿಸಲು ಯತ್ನಿಸುತ್ತೇವೆ. ನಂತರ ಸೋತಾಗ, ಅದು ನಿಜವಾಗಿಯೂ ಅಸಾಧ್ಯವಾದುದೆಂದು ನಿರ್ಣಯಿಸುತ್ತೇವೆ. ಹಾಗೂ ಅದು ಅಸಾಧ್ಯವಾದುದೆಂದು ನಿಶ್ಚಯಿಸಿದಾಗ ನಾವು ಮಾಡುತ್ತಿದ್ದ ಅಲ್ಪಸ್ವಲ್ಪ ಪ್ರಯತ್ನವನ್ನೂ ನಿಲ್ಲಿಸುತ್ತೇವೆ. ನಂತರ ನಾವು ಮಾಡುವುದೇನೆಂದರೆ, ಪ್ರಪಂಚವನ್ನು, ದೇವರನ್ನು, ಎಲ್ಲವನ್ನೂ ನಿಂದಿಸುವುದು. ನಮ್ಮ ಜೀವನವೆಲ್ಲವೂ ಇತರರನ್ನು ನಿಂದಿಸುವುದರಲ್ಲೇ ಕೊನೆಗೊಳ್ಳುತ್ತದೆ.
ಆದ್ದರಿಂದ, ಮಾಡಲು ಸಾಧ್ಯವಾಗುವಂತಹ ಒಂದು ಗುರಿಯನ್ನಿಟ್ಟುಕೊಳ್ಳಿರಿ. ಯಾವುದು ಸಾಧ್ಯವೆಂಬುದನ್ನರಿತು, ಅದಕ್ಕಾಗಿ ಕಾರ್ಯಶೀಲರಾಗಿರಿ. ಏನಾದರೂ ಸಾಧ್ಯವೆಂದು ನಿಮಗೆ ಅರಿವಾದಾಗ, ಹಾಗೂ ಅದಕ್ಕಾಗಿ ಶ್ರಮಿಸಲಾರಂಭಿಸಿದಾಗ, ನೀವು
ಪಡೆಯುವ ಸಣ್ಣ ಸಣ್ಣ ಗೆಲುವುಗಳೂ ಅಗಾಧವಾದ ಪ್ರೋತ್ಸಾಹವನ್ನು ನೀಡುತ್ತವೆ. ಅವು ಮಹತ್ತರವಾದ ಧೈರ್ಯ ಮತ್ತು ಭರವಸೆಯನ್ನು ಕೊಡುತ್ತವೆ. ಆಗ ನೀವು ಇನ್ನೂ ಆಳವಾದ ಸತ್ಯದೆಡೆಗೆ ಸ್ಥಿರವಾಗಿ ಹೋಗಲಾರಂಭಿಸುವಿರಿ. ನಾನು ‘ಜೀವನ್ಮುಕ್ತಿ’ ಎನ್ನುವುದನ್ನು ನೀವು ಪಡೆದು ಜೀವಿಸಲಾರಂಭಿಸುವಿರಿ.
ಜೀವನ್ಮುಕ್ತರಾಗಿ ಬಾಳಲು ತಂತ್ರಗಳು
ಈಗ ಜೀವನ್ಮುಕ್ತಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ತಂತ್ರಗಳೊಡನೆ ಇನ್ನೂ ಹೆಚ್ಚು ವಿಸ್ತಾರವಾಗಿ ವಿವರಿಸುತ್ತೇನೆ. ದೇಹ, ಮನಸ್ಸು ಹಾಗೂ ನೀವು ಭಾವಿಸುವ ಪ್ರಪಂಚದಲ್ಲಿ ಘರ್ಷಣಾರಹಿತವಾಗಿ ಜೀವಿಸುವುದನ್ನು ಜೀವನ್ಮುಕ್ತಿ ಎಂದು ನಾನು ಹೇಳಿದೆ. ಅದೇ ಸತ್ಯ. ಈಗ ನಾನು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಾಗುವಂತ ವಿಜ್ಞಾನವಾಗಿ ಉಪಯೋಗಿಸಲು ತಂತ್ರಗಳನ್ನು ಕೊಡುತ್ತೇನೆ.
ಜೀವನ್ಮುಕ್ತಿಯನ್ನು ಅನ್ವಯಿತ ವಿಜ್ಞಾನವನ್ನಾಗಿ ಮಾಡುವ ತಂತ್ರಗಳನ್ನು ನೀಡುತ್ತೇನೆ.
ಜೀವನ್ಮುಕ್ತ ಬಾಳಿಗಾಗಿ ನಾಲ್ಕು ತಂತ್ರಗಳಿವೆ
ಜೀವನ್ಮುಕ್ತಿ – ಒಂದು ಪರಿಚಯ
ಶಕ್ತಿ–ಬದಲಾಯಿಸಲು ಬೇಕಾದ ಚೈತನ್ಯ
ಮೊದಲನೆಯದಾಗಿ, ನೀವು ಏನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವುದು. ನಿಮ್ಮ ಜೀವನದಲ್ಲಿ ಏನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ತಪಡಿಸಿರಿ.
ಆಧ್ಯಾತ್ಮಿಕತೆಯು ತಾಮಸಿಕ ಜೀವನದ ಅಂಗೀಕಾರವಲ್ಲವೆಂಬುದನ್ನು ತಿಳಿದುಕೊಳ್ಳಿರಿ. ತಮಸ್ಸು ಎಂದರೆ ಸೋಮಾರಿತನ, ಮತ್ತು ಸೋಮಾರಿತನವು ಆಧ್ಯಾತ್ಮಿಕತೆಯಲ್ಲ. ಭಾರತದಲ್ಲಿ ಅನೇಕ ವೇಳೆ ಆಧ್ಯಾತ್ಮಿಕತೆಯನ್ನು ಸೋಮಾರಿತನವೆಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಭಾರತದ ನಾಗರಿಕತೆಯು ಜೀವನ್ಮುಕ್ತಿಯನ್ನು ಪ್ರತಿಪಾದಿಸುತ್ತಿತ್ತು; ಇಡೀ ದೇಶದ ಮೂಲಭೂತ ವ್ಯವಸ್ಥೆಯು ಜೀವನ್ಮುಕ್ತಿಯ ಮೇಲೆ ನಿರ್ಮಾಣವಾಗಿತ್ತು.
ಆದರೆ ಏಕೋ ಏನೋ, ಕಾಲ ಕಳೆದಂತೆ, ‘ಯೋಗೋ ನಷ್ಟಃ ಪರಂತಪ’ ಎಂದು ಶ್ರೀಕೃಷ್ಣನು ಹೇಳಿದಂತೆ, ಯೋಗವು ಇಲ್ಲವಾಗಿದೆ, ಆ ಪವಿತ್ರ ವಿಜ್ಞಾನವು ಕಣ್ಮರೆಯಾಗಿದೆ. ಆ ವಿಜ್ಞಾನವು ನಾಶವಾದಾಗ, ಸೋಮಾರಿತನವು ಜೀವನ್ಮುಕ್ತಿ ಎಂಬುದಾಗಿ ಪರಿಗಣಿಸಲ್ಪಡುತ್ತದೆ, ಮತ್ತು ಆಧ್ಯಾತ್ಮಿಕತೆಯು ಸೋಮಾರಿತನವಾಗುತ್ತದೆ.
ನಿಮ್ಮ ಜೀವನದಲ್ಲಿ ಸಾಧ್ಯವಾದುದನ್ನೆಲ್ಲಾ ಬದಲಾಯಿಸುವ ಶಕ್ತಿ ನಿಮಗಿದೆ. ಜನರು, 'ಸ್ವಾಮೀಜಿ, ಜೀವನವು ಪೂರ್ವನಿಯಾಮಕವೋ ಅಥವಾ ನಮಗೆ ಇಚ್ಛಾಶಕ್ತಿ ಇದೆಯೋ?' ಎಂದು ನನ್ನನ್ನು ಕೇಳುತ್ತಾರೆ.
ಜೀವನವು ಒಂದು ಟೇಪ್ರೆಕಾರ್ಡರ್ನಂತೆ. ನೀವು ಅಡ್ಡ ಬರದಿದ್ದರೆ ಅದು ಪೂರ್ವ ನಿಯಾಮಕದಂತೆ ನಡೆಯುತ್ತದೆ. ಆದರೆ ನೀವು ಇಚ್ಛಿಸಿದರೆ, ಯಾವುದೇ ಸನ್ನಿವೇಶದಲ್ಲಿಯಾದರೂ ನೀವು ಮಧ್ಯೆ ಬಂದು, ಸರಳವಾದ ಪ್ರಯತ್ನದಿಂದ ವಿಷಯಗಳನ್ನು ಬದಲಾಯಿಸಬಹುದು. ಅದಕ್ಕೆ ಬಹಳ ಬಲವಾದ ಸಂಕಲ್ಪವೇನೂ ಬೇಕಾಗುವುದಿಲ್ಲ. ಅನೇಕ ಚಟಗಳನ್ನು, ಮನೋವ್ಯವಸ್ಥೆಗಳನ್ನು ಬದಲಾಯಿಸಲು ಕೇವಲ ಸರಳವಾದ ಪ್ರಯತ್ನವೇ ಸಾಕು. ಮದ್ಯಪಾನ ಅಥವಾ ಧೂಮಪಾನದಂತಹ ಪ್ರಧಾನವಾದ ಚಟಗಳ ಬಗ್ಗೆ ನಾನು ಹೇಳುತ್ತಿಲ್ಲ. ಸಾಮಾನ್ಯವಾದ ಮಾನಸಿಕ ವೇದನೆಗಳು, ಸತತವಾಗಿ ಅನುಭವಿಸುವ ಅಶಾಂತಿ ಮತ್ತು ಕಿರಿಕಿರಿಯ ಬಗ್ಗೆ ಹೇಳುತ್ತಿದ್ದೇನೆ.
ಈ ಸತತ ಕಿರಿಕಿರಿಯು ಒಂದು ಚಟವಾಗಿಬಿಟ್ಟಿರುತ್ತದೆ. ನೋಡಿರಿ, ನಿಮ್ಮಲ್ಲಿ ಕಿರಿಕಿರಿ ಉಂಟು ಮಾಡಲು ಒಂದು ಘಟನೆಯೇನೂ ಸಂಭವಿಸಬೇಕಾಗಿಲ್ಲ; ಕೇವಲ ಜನರ ಮೇಲೆರಗಲು ಕಾದಿರುತ್ತೀರಿ. ಅವರು ತಪ್ಪನ್ನೇನೂ ಮಾಡಬೇಕಾಗಿಲ್ಲ. ಅವರು ಕೇವಲ ನಿಮ್ಮ
ಜೀವನ್ಮುಕ್ತಿ – ಒಂದು ಪರಿಚಯ
ಮುಂದೆ ಕಾಣಿಸಿಕೊಂಡರೆ ಸಾಕು, ಅವರಿಗೆ ನಿಮ್ಮ ಆಶೀರ್ವಾದವಾಗಿಬಿಡುತ್ತದೆ! ಜನರ ಮೇಲೆರಗಲು ಕೇವಲ ಹವಣಿಸುತ್ತಿರುತ್ತೀರಿ! ಬೆಳಗಿನಿಂದಲೂ ಕುದಿಯುತ್ತಿರುತ್ತೀರಿ. ಇದೂ ಸಹ ಒಂದು ಚಟವೇ. ಆದರೆ, ಇವುಗಳನ್ನೆಲ್ಲಾ ಬದಲಾಯಿಸಿಕೊಳ್ಳಬಹುದು. ಈಗಲೇ ಈ ಸಾಧಾರಣವಾದ ವಿಷಯಗಳನ್ನು ಬದಲಾಯಿಸಿಕೊಳ್ಳಬಹುದು. ಇದಕ್ಕೆ ಬೇಕಾದುದು ಕೇವಲ ಅರಿವು.
ನೀವು, 'ಇಲ್ಲ, ಸ್ವಾಮೀಜಿ, ನಾನು ಬಹಳ ಸಲ ಪ್ರಯತ್ನಿಸಿ ಸೋತಿದ್ದೇನೆ, ಇನ್ನು ನನ್ನಿಂದ ಸಾಧ್ಯವಿಲ್ಲ' ಎನ್ನಬಹುದು.
ತಿಳಿಯಿರಿ, ಹಿಂದೆ ಶಾಂತಿಗಾಗಿ ನೀವು ಪ್ರಯತ್ನಿಸಿದಾಗಲೆಲ್ಲಾ, ನಿಮ್ಮ ಪ್ರಯತ್ನವಿದ್ದಷ್ಟು ಕಾಲವೂ ಶಾಂತಿ ಇರುತ್ತಿತ್ತು. ಒಮ್ಮೆ ಶಾಂತಿ ನೆಲೆಸಿದಾಗ, ಪ್ರಯತ್ನ ಮಾಡುವುದನ್ನು ಬಿಟ್ಟಿರಿ.
ನೀವು ಮರೆತಾಗ, ನಿಮ್ಮ ಪ್ರಯತ್ನವನ್ನು ನಿಲ್ಲಿಸಿದಾಗ, ಅಶಾಂತಿ ಮರುಕಳಿಸುತ್ತಿತ್ತು. ಆದರೆ ಅದು ಏಕೆ ಮತ್ತು ಹೇಗೆ ಮರುಕಳಿಸಿತು ಎಂಬುದು ನಿಮಗೆ ನೆನಪಿರುವುದಿಲ್ಲ. ನಿಮಗೆ ಕೇವಲ ಅಶಾಂತಿ ಮರುಕಳಿಸಿದುದು ಮಾತ್ರ ತಿಳಿದಿರುತ್ತದೆ. ವಾಸ್ತವವಾಗಿ, ನೀವು ನಿಮ್ಮ ಪ್ರಯತ್ನವನ್ನು ನಿಲ್ಲಿಸಿದುದರಿಂದಲೇ ಅಶಾಂತಿ ಹಿಂತಿರುಗಿದುದು.
ನೀವು, 'ಇಲ್ಲ ಸ್ವಾಮೀಜಿ, ನೆನ್ನೆ ಬೆಳಗ್ಗೆ ಶಾಂತವಾಗಿರಲು ಪ್ರಯತ್ನಿಸಿದೆ. ಆದರೆ ಇಂದು ನಾನು ಶಾಂತನಾಗಿಲ್ಲ !' ಎನ್ನಬಹುದು.
ನೆನ್ನೆ ಬೆಳಗ್ಗೆ ನೀವು ಶಾಂತವಾಗಿರಲು ಪ್ರಯತ್ನಿಸಿದಿರಿ, ಆದರೆ ಸಂಜೆಯ ವೇಳೆಗೆ ಶಾಂತವಾಗಿರಬೇಕೆಂಬುದನ್ನು ಮರೆತಿರಿ ! ನಿಮ್ಮ ಪ್ರಯತ್ನವನ್ನು ಬಿಟ್ಟಿರಿ, ಆದುದರಿಂದಲೇ ನಿಮ್ಮ ಅಶಾಂತಿ ಹಿಂತಿರುಗಿತು. ನೀವು ನಿಮ್ಮ ಪ್ರಯತ್ನವನ್ನು ಮಾಡಿದಾಗಲೆಲ್ಲಾ ಪರಿಣಾಮವಿರುತ್ತದೆ. ಪ್ರಯತ್ನವನ್ನು ನಿಲ್ಲಿಸಿದಾಗ ಮಾತ್ರ ಮನಸ್ಸು ಹಿಂದಕ್ಕೆ ಸರಿಯುತ್ತದೆ. ನೀವು ಆ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ನೀವು ನಿಮ್ಮ ಪ್ರಯತ್ನವನ್ನು ಪ್ರಾರಂಭಿಸಿದುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಿರಿ, ಆದರೆ ಮರೆತುದನ್ನಲ್ಲ. ನೀವು ನಿಮ್ಮ ಮನಸ್ಸನ್ನು ಅಲೆದಾಡಲು ಬಿಟ್ಟು ಅಶಾಂತರಾಗುತ್ತೀರಿ.
ಆದುದರಿಂದ, ಈ ಮುಖ್ಯವಾದ ಸತ್ಯವನ್ನು ತಿಳಿದುಕೊಳ್ಳಿರಿ. ನೀವೇನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವುದು ಶಕ್ತಿ. ನಿಮ್ಮಿಂದೇನನ್ನು ಬದಲಾಯಿಸಲು ಸಾಧ್ಯವೋ ಅದನ್ನು ಬದಲಾಯಿಸುವ ಶಕ್ತಿ ನಿಮಗಿದೆ. ನಿಮ್ಮ ಜೀವನದಲ್ಲಿ
ಜೀವನ್ಮುಕ್ತಿ - ಒಂದು ಪರಿಚಯ
ಬದಲಾಯಿಸಲು ಸಾಧ್ಯವಾಗುವ ಅದೆಷ್ಟೋ ವಿಷಯಗಳಿವೆ. ಆದರೆ ಅದಕ್ಕೆ ನಿಮ್ಮ ಶಕ್ತಿಯನ್ನು ವಿನಿಯೋಗಿಸುವುದಿಲ್ಲ.
ನಡೆದ ಒಂದು ಘಟನೆಯನ್ನು ಹೇಳುತ್ತೇನೆ.
ಒಂದು ದಿನ ಒಬ್ಬಾತನು ಬಂದು, 'ಸ್ವಾಮೀಜಿ, ನಾನು ನಿಮಗೆ ಶರಣಾಗಿದ್ದೇನೆ. ನೀವೇ ನನ್ನನ್ನು ಕಾಪಾಡಬೇಕು' ಎಂದನು.
'ಶರಣಾಗಿದ್ದೇನೆ ಎಂದರೆ ನಿನ್ನ ಅರ್ಥವೇನು ? ನಿನ್ನನ್ನು ನಾನು ಕಾಪಾಡಬೇಕೆಂದೇಕೆ ಬಯಸುತ್ತಿದ್ದೀಯೆ ?' ಎಂದು ನಾನು ಕೇಳಿದೆ.
ಆತನು, 'ಸ್ವಾಮೀಜಿ, ನಾನು ಹೋಗಬಾರದ ಸ್ಥಳಗಳಿಗೆ ಹೋಗುವ ದುರಭ್ಯಾಸವನ್ನಿಟ್ಟುಕೊಂಡಿದ್ದೇನೆ. ನಾನು ನನ್ನ ಹೆಂಡತಿಗೆ ಪ್ರಾಮಾಣಿಕನಾಗಿಲ್ಲ. ಈಗ ನಾನು ನಿಮಗೆ ಶರಣಾಗಿರುವುದರಿಂದ ನೀವು ಈ ದುರಭ್ಯಾಸವನ್ನು ಹೋಗಲಾಡಿಸಲು ಸಹಾಯ ಮಾಡಬೇಕು' ಎಂದನು.
ನಾನು ಆತನೊಡನೆ ಕುಳಿತು ಸ್ವಲ್ಪ ಕಾಲ ಕಳೆದೆ. 'ಇದು ಸರಿಯಲ್ಲ, ನಿನ್ನ ಹೆಂಡತಿಯ ಬಗ್ಗೆ ಏಕೆ ಚಿಂತಿಸುವುದಿಲ್ಲ ? ನೀನು ಪ್ರೀತಿಗೆ ಸ್ಪಂದಿಸುತ್ತಿಲ್ಲ, ನೀನು ದಾಂಪತ್ಯ ಸಂಬಂಧವನ್ನು ಗೌರವಿಸುತ್ತಿಲ್ಲ' ಎಂದೆ. ನಾನು ಹೀಗೆಯೇ ಕೆಲವು ಮಾತುಗಳನ್ನಾಡಿದ ಮೇಲೆ ಆತನು ಹೊರಟು ಹೋದನು.
ಕೆಲವು ವಾರಗಳ ನಂತರ ಆತನು ಮತ್ತೆ ಬಂದು, 'ಸ್ವಾಮೀಜಿ, ನೀವು ನನ್ನನ್ನು ಉದ್ಧಾರ ಮಾಡಿಯೇ ಇಲ್ಲ! ನಾನು ನಿಮಗೆ ಶರಣಾಗಿದ್ದೇನೆ. ಆದರೆ ನಾನು ಇನ್ನೂ ಅದನ್ನೇ ಮಾಡುತ್ತಿದ್ದೇನೆ!' ಎಂದನು.
ನಾನು, ‘ನಿನ್ನ ಅರ್ಥವಾದರೂ ಏನು?' ಎಂದು ಕೇಳಿದೆ.
ಆತನು, 'ಹಾಗಲ್ಲ, ನಾನು ನಿಮಗೆ ಶರಣಾದೆ. ಆದರೂ ನಾನಿನ್ನೂ ಆ ಹಳಬನಾಗಿಯೇ ಇದ್ದೇನಲ್ಲಾ!' ಎಂದನು.
ನಾನು, 'ಹಾಗೆಂದರೇನು ? ನಾನು ನಿನ್ನ ಕಾರಿನ ಬೀಗದ ಕೈಯನ್ನು ಬಚ್ಚಿಟ್ಟು, ಬೇರೆಲ್ಲೂ ಹೋಗಬೇಡವೆನ್ನಬೇಕೆ ? ನಿನಗೇ ಸ್ವಾತಂತ್ರ್ಯವಿದೆಯಲ್ಲಾ ! ನೋಡು, ನಿನಗೆ ಸ್ವಾತಂತ್ರ್ಯ ಬೇಕಾಗಿದ್ದಾಗ.... ನಿನ್ನ ಇಷ್ಟ ಬಂದಂತೆ ಇರಲಿಚ್ಛಿಸಿದಾಗ.... ನಾನು ನಿನಗೆ ತಿಳಿವಳಿಕೆಯನ್ನು ಮಾತ್ರ ಕೊಡಬಲ್ಲೆ. ಅದನ್ನು ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದವನು ನೀನು' ಎಂದೆ.
ನಂತರ, 'ಶರಣಾದೆ' ಎನ್ನುವ ನಿನ್ನ ಮಾತಿನ ಅರ್ಥವೇನು ? ನಾನು ನಿನ್ನನ್ನು ಕಾಪಾಡಬೇಕೆಂಬ ನಿನ್ನ ಅರ್ಥವಾದರೂ ಏನು ? ನೀನು ಆ ವಿಪರೀತಕ್ಕೆ ಹೋಗಬೇಕೆಂದಿದ್ದ ಪಕ್ಷದಲ್ಲಿ, ಇಲ್ಲಿಯೇ ಕುಳಿತುಕೋ, ಬೇರೆಲ್ಲಿಯೂ ಹೋಗಬೇಡ !' ಎಂದೆ.
ಅಂತಹ ಸಂದರ್ಭದಲ್ಲಿ ನೀವು, 'ಇಲ್ಲ, ಇಲ್ಲ ! ನನಗೆ ಸ್ವಾತಂತ್ರ್ಯ ಬೇಕು' ಎನ್ನುವಿರಿ, ಆಗ ನಾನು, 'ಆಗಲಿ, ಸ್ವತಂತ್ರವಾಗಿರಿ ! ನಿಮ್ಮ ಜೀವನವನ್ನು ಅರಿವಿನಿಂದ ಸಾಗಿಸಲು
ಜೀವನ್ಮುಕ್ತಿ - ಒಂದು ಪರಿಚಯ
ಸ್ವತಂತ್ರದ ಜೊತೆಗೆ ಈ ತಿಳಿವಳಿಕೆಯನ್ನೂ ಪಡೆಯಿರಿ' ಎನ್ನಬೇಕಾಗುತ್ತದೆ.
ವಾಸ್ತವವಾಗಿ, ನಿಮಗೆ ತಿಳಿವಳಿಕೆ ಬೇಕಾಗಿಲ್ಲ, ನೀವು ಬಯಸುವುದು ಸ್ವಾತಂತ್ರ್ಯವನ್ನು. ಆದರೆ ಏನಾದರೂ ಸರಿಯಾಗದಿದ್ದಾಗ, 'ಇಲ್ಲ, ಇಲ್ಲ! ನಾನು ಈ ದೇವರಿಗೆ ಶರಣಾಗಿದ್ದೇನೆ. ನಾನು ಆ ಗುರುವಿಗೆ ಶರಣಾಗಿದ್ದೇನೆ; ಆದರೂ ಏನೂ ಆಗಿಲ್ಲ!' ಎಂದು ಹೇಳುತ್ತೀರಿ.
ನಿಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಬದಲಾಯಿಸುವ ಸ್ವಾತಂತ್ರ್ಯ ನಿಮಗಿದೆ. ಆದರೂ, ನಿಮಗೆ ಇಷ್ಟವಿರುವುದಿಲ್ಲ. ನಿಮಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ನಿಮಗೆ ತಿಳಿವಳಿಕೆ ಇದ್ದರೆ, ನಿಮ್ಮ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯೊಂದಿಗೆ ಉಪಯೋಗಿಸುತ್ತೀರಿ. ಅದನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಿಮ್ಮ ಜೀವನಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ.
ನಿಮ್ಮನ್ನು ರಕ್ಷಿಸುವ ದೇವರು ನೀವೇ ಎಂದು ತಿಳಿಯಿರಿ. ನಿಮ್ಮನ್ನು ಉದ್ಧರಿಸಿಕೊಳ್ಳುವವರು ನೀವೇ ಎಂದು ತಿಳಿಯಿರಿ. ನಿಮ್ಮನ್ನು ನೀವು ಉದ್ಧರಿಸಿಕೊಳ್ಳಲಾಗದಿದ್ದರೆ, ನಿಮಗೆ ನೀವೇ ಅತ್ಯಂತ ಕೆಟ್ಟ ಶತ್ರು. ನಿಮ್ಮನ್ನು ನೀವು ಉದ್ಧರಿಸಿಕೊಳ್ಳಲು ಸಾಧ್ಯವಾದರೆ, ನಿಮಗೆ ನೀವೇ ಆಪ್ತಸ್ನೇಹಿತ. ಇದನ್ನು ನೀವೇ ಮಾಡಬೇಕು.
ಆದ್ದರಿಂದ ಜೀವನ್ಮುಕ್ತಿಯ ಮೊದಲ ತಂತ್ರವು ನಿಮ್ಮ ಜೀವನದಲ್ಲಿ ಬದಲಾಯಿಸಲಾಗುವುದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ತಪಡಿಸುವುದು.
ಸಣ್ಣ ಪರಿವರ್ತನೆಗಳ ಪ್ರಭಾವ
ಮತ್ತೊಂದು ವಿಷಯ: ನೀವು ಮಾಡುವ ಸಣ್ಣ ಬದಲಾವಣೆಗಳೂ ನಿಮ್ಮ ಜೀವನದಲ್ಲಿ ಒಂದು ವ್ಯತ್ಯಾಸವನ್ನು ಮಾಡುತ್ತವೆ. ತಿಳಿಯಿರಿ, ನೀವು ಮಾಡುವ ಸಣ್ಣ ಬದಲಾವಣೆಗಳ ಪ್ರಭಾವವು ನಿಮಗೆ ತಿಳಿದಿಲ್ಲ. ಪ್ರತಿದಿನವೂ ಸರಳವಾದ, ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಿದ್ದರೆ, ಒಂದೆರಡು ವರ್ಷಗಳಲ್ಲಿಯೇ ಮಹತ್ತರವಾದ ಪರಿವರ್ತನೆಯನ್ನು ಕಾಣುವಿರಿ !
ಇದ್ದಕ್ಕಿದ್ದಂತೆ, ಆ ಸಣ್ಣ ಬದಲಾವಣೆಗಳ ಸಮಷ್ಟಿಯ ಪ್ರಭಾವವನ್ನು ಕಾಣುತ್ತೀರಿ. ಕಾಲ ಕಳೆದಂತೆ, ಅವು ಒಂದು ದೊಡ್ಡ ಪರಿವರ್ತನೆಗೆ ಕಾರಣವಾಗುತ್ತವೆ. ಅದು ಕೆಲವು ಸರಳವಾದ ಬದಲಾವಣೆಗಳ ಸಮಷ್ಟಿಯ ಪ್ರಭಾವ. ಆದರೆ ಏಕೋ ಏನೋ ನಾವು ಆ ಸರಳವಾದ ಬದಲಾವಣೆಗಳನ್ನು ಗೌರವಿಸುವುದೇ ಇಲ್ಲ. ನಮಗೆ ಧಿಡೀರ್ ಪರಿವರ್ತನೆ ಬೇಕಾಗಿರುತ್ತದೆ, ಆದರೆ ಅದಕ್ಕೆ ಬೇಕಾದ ತೀವ್ರತೆ ಇರುವುದಿಲ್ಲ. ಇರುವ ಒಂದೇ ಆಯ್ಕೆ ಎಂದರೆ ನಿಮ್ಮಿಂದ ಬದಲಾಗುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸುವುದು.
ಜೀವನ್ಮುಕ್ತಿ - ಒಂದು ಪರಿಚಯ
ಜನರು ಸಾಮಾನ್ಯವಾಗಿ, 'ಇಲ್ಲ ಸ್ವಾಮೀಜಿ, ನಾನು ಬದಲಾಗಬೇಕು, ಆದರೆ ನನ್ನಿಂದ ಕುಡಿಯುವುದನ್ನು, ಧೂಮಪಾನ ಸೇವನೆಯನ್ನು ಬಿಡಲಾಗುತ್ತಿಲ್ಲ. ನನ್ನಿಂದ ಬದಲಾಗಲು ಆಗುತ್ತಿಲ್ಲ' ಎಂದು ಗೊಣಗುತ್ತಾರೆ.
ಈ ಎಲ್ಲವನ್ನೂ ನಿಮ್ಮಿಂದ ಬದಲಾಯಿಸಲು ಆಗಬಹುದು ಅಥವಾ ಆಗದಿರಬಹುದು, ಏಕೆಂದರೆ ಅದು ನಿಮ್ಮ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದು ತಿಳಿಯಿರಿ. ಆದರೆ ನಿಮ್ಮಿಂದ ಕೂಡಲೆ ಬದಲಾಯಿಸಿಕೊಳ್ಳಬಹುದಾದ ಒಂದು ವಿಷಯವಿದೆ. ಅದನ್ನೇ ನಾನು ಸ್ಥಿತ್ಯಂತರ ಎನ್ನುವುದು. ಇದ್ದಕ್ಕಿದ್ದಂತೆ ಬದಲಾಗುವುದನ್ನೇ ನಾನು ಸ್ಥಿತ್ಯಂತರ ಎನ್ನುವುದು. ಇದು ಉಂಟಾಗಲು ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಿಕೊಳ್ಳಬೇಕು.
ನಿಮ್ಮ ಬಗ್ಗೆ, ಪ್ರಪಂಚದ ಬಗ್ಗೆ ಹಾಗೂ ನಿಮ್ಮ ಜೀವನದ ಬಗ್ಗೆ ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಿಕೊಳ್ಳಿರಿ. ಮತ್ತೇನೂ ಮಾಡಬೇಕಾಗಿಲ್ಲ. ಅದು ಸರಳವೆಂಬಂತೆ ತೋರಬಹುದು. ಆದರೆ ಅನುಸರಿಸಿದಾಗ, ಅದೊಂದು ಮಹತ್ತರ ಪರಿವರ್ತನೆಯನ್ನು ತರುತ್ತದೆ. ಆಗ ಸ್ಥಿತ್ಯಂತರವು ಶ್ರಮವಿಲ್ಲದೆಯೇ ಆಗುತ್ತದೆ.
ನೋಡಿರಿ, ನೀವು ಸಾಧ್ಯವಾದದ್ದನ್ನು ಬದಲಾಯಿಸಲು ಬೇಕಾದ 'ಶಕ್ತಿ' ಎಂಬ ಪದವನ್ನು ನಾನು ಉಪಯೋಗಿಸಿದಾಗಲೆಲ್ಲಾ, ಅದರ ಅರ್ಥವೇನೆಂದರೆ, ನೀವು ಯೋಚಿಸುವ ರೀತಿಯನ್ನು ಬದಲಾಯಿಸಿರಿ, ಎಂದು. ನಾನು ಜನರಿಗೆ ಬದಲಾಗಿರೆಂದು ಹೇಳಿದಾಗಲೆಲ್ಲಾ, ಅವರು ಕೂಡಲೆ ಮದ್ಯಪಾನ ಹಾಗೂ ಧೂಮಪಾನ ಸೇವನೆಗಳನ್ನು ಬಿಡಲು ಯತ್ನಿಸುತ್ತಾರೆ. ಅವರು ತಪ್ಪಾದ ದೃಷ್ಟಿಕೋನದಿಂದ ಆರಂಭಿಸುತ್ತಾರೆ. ಮದ್ಯಪಾನ, ಧೂಮಪಾನ ಅಥವಾ ಯಾವುದಾದರೂ ಪ್ರಬಲವಾದ ಚಟವನ್ನು ಬಿಡಲು ಒದ್ದಾಡುತ್ತಾರೆ. ಆಗ ಸೋಲಾಗುವುದು ಖಂಡಿತ.
ಮೊದಲು, ನಿಮ್ಮ ಚಿಂತನೆಯ ವಿಧಾನವನ್ನು, ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಬೇಕು. ಪ್ರಪಂಚದ ಬಗ್ಗೆ ನಿಮ್ಮನ್ನೂ, ಇತರರನ್ನೂ ಅನೇಕ ಬಾರಿ ವಿಚಲಿತಗೊಳಿಸುವ ಬಹಳ ಅಭಿಪ್ರಾಯಗಳೂ ತಿಳಿವಳಿಕೆಗಳೂ ನಿಮಗಿವೆ. ಅವನ್ನು ಮೊದಲು ಬದಲಾಯಿಸಿರಿ.
ವಾಸ್ತವವಾಗಿ, ಕೇವಲ ನೀವು ಯೋಚಿಸುವ ರೀತಿಯನ್ನು ಬದಲಾಯಿಸಿದರೆ, ನಿಮ್ಮ ಚಟಗಳು ತಾವಾಗಿಯೇ ಬದಲಾಗುತ್ತವೆ. ಅವು ಬದಲಾಗದಿದ್ದರೂ ಪರವಾಗಿಲ್ಲ. ಹಾಗೆಂದ ಮಾತ್ರಕ್ಕೆ ನಿಮಗೆ ಬೇಕಾದುದನ್ನು ಮಾಡಲು ನಾನು ಪರವಾನಗಿಯನ್ನು ನೀಡುತ್ತಿಲ್ಲ. ಇಲ್ಲ! ನೀವು ಯೋಚಿಸುವ ರೀತಿಯನ್ನು ಬದಲಾಯಿಸಲಾರಂಭಿಸಿದರೆ, ಅನೇಕ ಚಟಗಳು ತಾವಾಗಿಯೇ ಬಿ ಟ ೨ ಟೆ ಹೋಗುತ್ತವೆ.
ನೀವಾಗಿಯೇ ಬದಲಾಗುತ್ತೀರಿ. ನಿಮ್ಮ ಇಡೀ ಜೀವನವೇ ಬದಲಾಗಿರುವುದನ್ನು ಮನಗಾಣುತ್ತೀರಿ. ನಿಮ್ಮ ತಿಳಿವಳಿಕೆ, ನೀವು ಯೋಚಿಸುವ ರೀತಿ, ಎಲ್ಲವೂ ಬದಲಾಗುತ್ತದೆ. ನಿಮ್ಮ ಆಂತರಿಕ ಸಾಫ್ಟ್ವೇರ್(ಮನಸ್ಸಿನ ಕಾರ್ಯ ವಿಧಾನ)ನ್ನು ರೀ-ಪ್ರೋಗ್ರಾಂ (ಪುನರ್ ಯೋಜನೆ) ಮಾಡಬಹುದು. ನೀವು ಎಲ್ಲದರ ಬಗ್ಗೆಯೂ ಹೆಚ್ಚು ಸ್ಪಷ್ಟತೆ ಹಾಗೂ ತಿಳಿವಳಿಕೆಯನ್ನು ಪಡೆಯಬಹುದು.
ಧರ್ಮ-ವಿಶ್ವದ ಕಾನೂನು
ಧರ್ಮವೆಂಬ ಮತ್ತೊಂದು ಸತ್ಯದ ಬಗ್ಗೆ ತಿಳಿದುಕೊಳ್ಳಿರಿ. ಧರ್ಮವೆಂದರೆ, ಬ್ರಹ್ಮಾಂಡವು ನಡೆಯುವ ರೀತಿಯ ಬಗ್ಗೆ ಇರುವ ನೈತಿಕ ಅಭಿಪ್ರಾಯ! ಧರ್ಮವು ಒಂದು ನಂಬಿಕೆಯ ವ್ಯವಸ್ಥೆಯಲ್ಲ. ಒಬ್ಬ ವಕೀಲರೊಡನೆ ಮಾತನಾಡಿದರೆ, ದೇಶವು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿಯಬಹುದು. ಅದೇ ರೀತಿ, ವಿಶ್ವಪ್ರೇಮವನ್ನು ಸವಿದಿರುವ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯೊಂದಿಗೆ ಮಾತನಾಡಿ, ಅವರನ್ನು ಸಂಪರ್ಕಿಸಿ, ಅವರ ಅಭಿಪ್ರಾಯಗಳನ್ನು ಪಡೆದರೆ, ವಿಶ್ವವು ಹೇಗೆ ಕೆಲಸ ಮಾಡುತ್ತಿದೆಯೆಂಬುದರ ಬಗ್ಗೆ
ಅಭಿಪ್ರಾಯವನ್ನು ಪಡೆಯುತ್ತೀರಿ !
ನಾನು ಮಾತನಾಡುವುದೆಲ್ಲವೂ ವಿಶ್ವದ ನೈತಿಕ ಅಭಿಪ್ರಾಯ. ಅದನ್ನೇ ನಾನು ಧರ್ಮ ಎನ್ನುವುದು. ಆದ್ದರಿಂದ, ಧರ್ಮವನ್ನು ಅಂತರ್ಗತಗೊಳಿಸಿಕೊಳ್ಳುವುದು ಎಂದರೆ, ಕೇವಲ ಕೆಲವು ವಿಷಯಗಳನ್ನು ನಂಬುವುದಲ್ಲ. ವಿಶ್ವವು ಹೇಗೆ ನಡೆಯುತ್ತಿದೆ, ಪ್ರಕೃತಿಯ ಕಾನೂನುಗಳು ಹೇಗೆ ಕೆಲಸ ಮಾಡುತ್ತವೆಯೆಂಬ ವಿಷಯಗಳನ್ನು ತಿಳಿಯುವುದೇ ಧರ್ಮ. ಸ್ಪಷ್ಟವಾಗಿ ತಿಳಿಯಿರಿ, ಇಂದು ಏನಾದರೂ ಕೆಟ್ಟದ್ದನ್ನು ಮಾಡಿ, ಆ ಕಾರಣದಿಂದ ನಾಳೆ ನಿಮಗೆ ಏನೋ ಕೆಟ್ಟದ್ದಾಗುತ್ತದೆ ಎಂದು ನಂಬಿದರೆ, ಅದು ಧರ್ಮವಲ್ಲ.
ನಿಜವಾಗಿ ಏನು ನಡೆಯುತ್ತದೆಯೋ ಅದರೊಂದಿಗೆ ವಿತರ್ಕದ ಭಾವನೆಯನ್ನು (ಅಂದರೆ ಆಳವಾದ ಸಂಬಂಧವಿರುವ ಭಾವನೆಯನ್ನು ಹೊಂದಿ - feeling connected), ಅದನ್ನು ಮನನ ಮಾಡಿಕೊಂಡು, ಅದನ್ನು ತಿಳಿಯುವುದೇ ಧರ್ಮ. ಅದನ್ನು ನಿಮ್ಮ ಮಿತಿಯಾದ ತರ್ಕದಿಂದ ಇಂದು ತಿಳಿಯಲಾಗದಿರಬಹುದು, ಆದರೆ, ಧರ್ಮವನ್ನು ತಿಳಿಯಲು ನಿಮ್ಮ ತರ್ಕವನ್ನು ವಿಸ್ತರಿಸಿದಾಗ, ನಿಮ್ಮ ಮನೋವ್ಯವಸ್ಥೆಯು ಬದಲಾಗುತ್ತದೆ. ಸ್ಥಿತ್ಯಂತರವು ಸುಲಭವಾಗಿ ಆಗುತ್ತದೆ.
ಜೀವನ್ಮುಕ್ತಿ - ಒಂದು ಪರಿಚಯ
ನೀವು ತಿಳಿಯಬೇಕಾದ ಮುಖ್ಯವಾದ ಒಂದು ವಿಷಯವೆಂದರೆ, ಸ್ಥಿತ್ಯಂತರವಾದಾಗ, ನಿಮ್ಮ ಮಾನಸಿಕ ವ್ಯವಸ್ಥೆಯು ಬದಲಾದಾಗ, ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳು ಜಾಗೃತವಾಗುತ್ತವೆ.
ಕೇವಲ ನೀವು ಮನುಷ್ಯರಾಗಿರುವ ಕಾರಣದಿಂದ, ನೀವು ಹುಟ್ಟಿದ ಕ್ಷಣದಿಂದಲೇ ನಿಮ್ಮ ಮೆದುಳಿನ ಯಾಂತ್ರಿಕ ಭಾಗಗಳು ಕ್ರಿಯಾಶೀಲವಾಗಿರುತ್ತವೆ. ಆದರೆ, ಮಹಾ ಸತ್ಯಗಳನ್ನು, ವಿಶ್ವದ ಧರ್ಮವನ್ನು ತಿಳಿಯಲಾರಂಭಿಸಿದಾಗ, ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳೂ ಜಾಗೃತವಾಗುತ್ತವೆ. ಇದನ್ನು ದ್ವಿಜ, ಎರಡನೆಯ ಜನನ ಅಥವಾ ಪುನರ್ಜನ್ಮವೆನ್ನುತ್ತಾರೆ. ಆದ್ದರಿಂದಲೇ ಭಾರತದ ಸಂಪ್ರದಾಯದಲ್ಲಿ ಆಧ್ಯಾತ್ಮಿಕತೆಗೆ ದೀಕ್ಷೆ ನೀಡಿದಾಗ, ನಿಮ್ಮನ್ನು ದ್ವಿಜ ಎನ್ನುತ್ತಾರೆ. ಈಗ ನೀವು ವಿಶ್ವದ ಧರ್ಮವನ್ನು ತಿಳಿಯಬಲ್ಲವರೆಂದು ಅದರ್ಥ. ನಿಮ್ಮ ಚಿಂತನೆಯು ಹೊಸದಾಗುತ್ತದೆ. ಅದು ಪ್ರಾಣಿಗಳಂತೆ ಭಯ ಹಾಗೂ ದುರಾಸೆಯ ಮೇಲೆ ಆಧಾರಿತವಾಗಿರುವುದಿಲ್ಲ.
ಪ್ರಾಣಿಗಳು ಯೋಚಿಸಬೇಕಾಗಿಲ್ಲ, ಏಕೆಂದರೆ ಅವು ಏನನ್ನೂ ಮಾಡಬೇಕಾಗಿಲ್ಲ. ಅವು ಮಾಡುವುದೆಲ್ಲವೂ ಭಯ ಹಾಗೂ ದುರಾಸೆಗಳ ಮೇಲೆ ಆಧಾರಿತವಾಗಿಯೇ ಇರುತ್ತದೆ. ನೀವು ಭಯ ಮತ್ತು ದುರಾಸೆಗಳ ಆಧಾರದ ಮೇಲೆಯೇ ವರ್ತಿಸಿದರೆ, ನಿಮ್ಮ ಮೆದುಳಿನ ಯಾಂತ್ರಿಕ ಭಾಗಗಳೇ ಸಾಕಾಗುತ್ತವೆ. ಆದರೆ, ಭಯ ಹಾಗೂ ದುರಾಸೆಗಳನ್ನು ಮೀರಿ ಹೋಗಲು, ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳೂ ಜಾಗೃತವಾಗಬೇಕು. ಯಾಂತ್ರಿಕವಲ್ಲದ ಮೆದುಳಿನ ಭಾಗಗಳ ಜಾಗೃತಿಯನ್ನೇ ಕುಂಡಲಿನೀ ಜಾಗೃತಿ ಎನ್ನುವುದು.
ಚಟಗಳ ಬಗ್ಗೆ ಇನ್ನೂ ಆಳವಾದ ರಹಸ್ಯಗಳು
ತಿಳಿವಳಿಕೆಯನ್ನು ಬದಲಾಯಿಸುವ ಮಾತ್ರದಿಂದಲೇ, ಶಕ್ತಿಯನ್ನು ಹೇಗೆ ಜಾಗೃತಗೊಳಿಸಲು ಸಾಧ್ಯವೆಂದು ಜನರು ನನ್ನನ್ನು ಕೇಳುತ್ತಾರೆ. ನೋಡಿರಿ, ನಿಮ್ಮ ದಿನನಿತ್ಯ ಜೀವನದಲ್ಲಿ, ಒಂದು ನಿರ್ದಿಷ್ಟ ವೇಳೆಗೆ ನಿಮಗೆ ಆಯಾಸವಾಗುವಂತೆ ಅಭ್ಯಾಸ ಮಾಡಿಕೊಂಡಿದ್ದರೆ, ಆ ನಿರ್ದಿಷ್ಟ ಸಮಯಕ್ಕೆ ನಿಮಗೆ ಆಯಾಸವಾಗುತ್ತದೆ. ಇಡೀ ದಿನ ಕೆಲಸ ಮಾಡದಿದ್ದಾಗಲೂ, ನಿಮಗೆ ಆಯಾಸವಾಗುತ್ತದೆ!
ಉದಾಹರಣೆಗೆ, ನೀವು ಆಫೀಸಿಗೆ ಹೋಗಬೇಕೆಂಬ ಕಾರಣದಿಂದ ಸಾಮಾನ್ಯವಾಗಿ ಬೆಳಗ್ಗೆ 9.30 ಕ್ಕೆ ನಿರುತ್ಸಾಹ ಉಂಟಾಗುತ್ತದೆ ಎಂದಿಟ್ಟುಕೊಳ್ಳೋಣ. ನೀವು ಆಫೀಸಿಗೆ ಹೋಗಬೇಕಾಗಿಲ್ಲದ ಭಾನುವಾರಗಳಂದೂ ಆ ನಿರ್ದಿಷ್ಟ ಸಮಯದಲ್ಲಿ ಮಂಕಾಗಿರುತ್ತೀರಿ. ನಿಮ್ಮಲ್ಲಿ ಖಿನ್ನತೆ ಉಂಟಾಗುತ್ತದೆ. ಇದ್ದಕ್ಕಿದ್ದಂತೆ ನೀವೆಂದುಕೊಳ್ಳುವಿರಿ,
'ಓ, ಇಂದು ಭಾನುವಾರ. ನಾನು ಆಫೀಸಿಗೆ ಹೋಗಬೇಕಾಗಿಲ್ಲ. ಇನ್ನು ಹಾಯಾಗಿರೋಣ' ಎಂದು. ಆದರೆ ಆಗಲೂ ಸಹ, ಖಿನ್ನತೆ ಹೋಗುವುದಿಲ್ಲ. ನೀವಿನ್ನೂ ನಿರುತ್ಸಾಹದಿಂದಲೇ ಇರುತ್ತೀರಿ.
ನಿಮ್ಮ ಮಾನಸಿಕ ವ್ಯವಸ್ಥೆಯು ನಿಮ್ಮ ಕುಂಡಲಿನೀ ಜಾಗೃತಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ನಿಮ್ಮಿಂದ ಬದಲಾಯಿಸಲಾಗುವುದನ್ನು ಬದಲಾಯಿಸಲು, ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಲು ಶಕ್ತಿಯನ್ನು ಉಪಯೋಗಿಸಿದಾಗ, ನಿಮ್ಮಲ್ಲಿರುವ ಅಸಾಧಾರಣ ಶಕ್ತಿಯನ್ನು ಜಾಗೃತಗೊಳಿಸುತ್ತೀರಿ.
ನಿಮ್ಮಲ್ಲಿರುವ ಯಾವುದೇ ಒಂದು ಚಟದೊಂದಿಗೆ ಹೋರಾಡಿದಾಗ, ಅದು ನಿಮ್ಮಲ್ಲಿ ಅಸಾಧಾರಣ ಶಕ್ತಿಯನ್ನು ಜಾಗೃತಗೊಳಿಸುತ್ತದೆಂದು ಪತಂಜಲಿ ಮಹರ್ಷಿಗಳು ಸುಂದರವಾಗಿ ಹೇಳುತ್ತಾರೆ. ಚಟ ಎಂದರೆ ಶಕ್ತಿಯನ್ನು ಅನಾವಶ್ಯಕವಾಗಿ ತಪ್ಪು ದಾರಿಯಲ್ಲಿ ವ್ಯಯಿಸುವುದು ಎಂದರ್ಥ. ಅದು ಬೆಳಗಾಗೆದ್ದು ಕಾಫಿ ಕುಡಿಯುವಂತಹ ಸರಳವಾದದ್ದೇ ಆದರೂ, ಒಂದು ಚಟವನ್ನು ಮುರಿದಾಗ, ನಿಮ್ಮ ವ್ಯವಸ್ಥೆಯೊಳಗೆ ಅಸಾಧಾರಣವಾದ ಶಕ್ತಿ ಬಿಡುಗಡೆಯಾಗುತ್ತದೆ. ಆದ್ದರಿಂದಲೇ ನಮ್ಮ ಸಂಪ್ರದಾಯಗಳಲ್ಲಿ ಉಪವಾಸ ಹಾಗೂ ಜಾಗರಣೆ ಮಾಡುವ ಪದ್ಧತಿಗಳಿರುವುದು. ನಮ್ಮ ಅಭ್ಯಾಸಗಳನ್ನು ಮುರಿದು, ಒಂದು ನವಶಕ್ತಿಯ ಹರಿವನ್ನು ಸೃಷ್ಟಿಸಲೆಂದೇ ಅವು ಇರುವವು.
ಚಟವೆಂದರೇನೆಂದು ನೀವು ಕೇಳಬಹುದು. ನಿಮ್ಮ ಅರಿವನ್ನು ಈ ಕ್ಷಣಕ್ಕೆ ತಂದುಕೊಳ್ಳದೆ, ಒಂದು ಯಾಂತ್ರಿಕ ರೀತಿಯಲ್ಲಿ ಬಾಳುವುದನ್ನೇ ಚಟವೆನ್ನುವುದು. ನಿಮ್ಮ ಇಡೀ ಜೀವನವು ಎರಡು ಭಾಗಗಳನ್ನೊಳಗೊಂಡಿದೆ: ಒಂದು ಚಟ, ಮತ್ತೊಂದು ಧ್ಯಾನ. ಅರಿವಿಲ್ಲದೆಯೇ ಏನನ್ನಾದರೂ ಮಾಡುವುದೇ ಚಟ; ಏನನ್ನಾದರೂ, ಯಾವುದೇ ಕ್ರಿಯೆಯನ್ನಾದರೂ ಅರಿವಿನಿಂದ ಮಾಡುವುದೇ ಧ್ಯಾನ.
ವಾಹನ ಚಾಲನೆ ಮಾಡುವುದೂ ಒಂದು ಚಟ ! ಇದನ್ನು ಕೇಳಲು ನಿಮಗೆ ಆಶ್ಚರ್ಯವಾಗಬಹುದು. ವಾಹನ ಚಾಲನೆಯು ಹೇಗೆ ಒಂದು ಚಟವಾಗಬಲ್ಲದೆಂದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಆಫೀಸ್ವರೆಗಿನ ನಿಮ್ಮ ವಾಹನ ಚಾಲನೆಯನ್ನು ಗಮನಿಸಿರಿ. ನಿಮ್ಮ ಕಾರನ್ನು ಚಲಿಸಲಾರಂಭಿಸಿ, ಅರ್ಧ ಗಂಟೆ ಚಾಲನೆ ಮಾಡಿ, ಕಾರ್ಯಾಲಯವನ್ನು ತಲುಪಿ, ಕಾರನ್ನು ವಾಹನ ನಿಲ್ದಾಣದಲ್ಲಿ ನಿಲ್ಲಿಸಿದಾಗಲೇ ನೀವು ವಾಹನ ಚಾಲನೆ ಮಾಡುತ್ತಿದ್ದಿರೆಂದು ನೆನಪಿಗೆ ಬರುವುದು ! ಅಲ್ಲಿಯವರೆಗೂ ನೀವು ಸುಮಾರು 200- 300 ನಿರ್ಧಾರಗಳನ್ನು ತೆಗೆದುಕೊಂಡಿರುತ್ತೀರಿ. ಎಡತಿರುವು, ಬಲ ತಿರುವು, ಸೂಚನೆಗಳಲ್ಲಿ ನಿಲ್ಲುವುದು, ಹಾರನ್ನಿನ ಶಬ್ದ ಮಾಡುವುದು ಮುಂತಾದವು, ಆದರೆ ಆಫೀಸನ್ನು ತಲುಪಿದ ನಂತರವೇ
ಜೀವನ್ಮುಕ್ತಿ - ಒಂದು ಪರಿಚಯ
ನೀವು ವಾಹನ ಚಾಲನೆ ಮಾಡುತ್ತಿದ್ದ ನೆನಪು ಬರುವುದು.
ನಿಮ್ಮ ವಾಹನ ಚಾಲನೆಯು ಒಂದು ಚಟವಾಗಿ ಬಿಟ್ಟಿರುತ್ತದೆ. ನಿಮ್ಮ ಜೀವನದ ಧ್ಯಾನವಲ್ಲದ ಯಾವುದೇ ಭಾಗವು, ಒಂದು ಚಟ. ಅಂದರೆ, ಈ ಕ್ಷಣದವರೆಗೂ, ಬಹುಶಃ ನಮ್ಮ ಇಡೀ ಜೀವನವೇ ಒಂದು ಚಟವಾಗಿದ್ದಿತು - ಕೇವಲ ಮುಂದುವರಿಯುತ್ತಲೇ ಇದ್ದ ಒಂದು ಚಟ !
ನಿಮ್ಮ ಚಟಗಳಿಗೆ ಅರಿವನ್ನು ತನ್ನಿರಿ. ಅರಿವನ್ನು ತರುವುದೇ ನಿಮ್ಮಿಂದ ಬದಲಾಯಿಸಲಾಗುವುದನ್ನು ಬದಲಾಯಿಸಲು ಪ್ರಯತ್ನಿಸುವುದು, ಅಂದರೆ ಶಕ್ತಿಯನ್ನು ಬಳಸುವುದು. ನಿಮ್ಮಿಂದಾಗುವುದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ತಪಡಿಸುವುದನ್ನೇ ನಾನು ಮೊದಲ ತಂತ್ರ, ಮೊದಲ ವಿಧಾನ, ಎನ್ನುವುದು. ನಿಮ್ಮಿಂದ ಸಾಧ್ಯವಾದರೆ ಸರಳವಾದದ್ದನ್ನೂ ಸಹ ಬದಲಿಸಿರಿ. ಸತತವಾಗಿ ಬದಲಾಯಿಸುತ್ತಿರಿ. ಇದು ಜೀವನ್ಮುಕ್ತಿಯ ಮೊದಲ ಭಾಗ, ಮುಕ್ತ ಜೀವನದ ಮೊದಲ ತಂತ್ರ.
ಎರಡನೆಯ ತಂತ್ರವು, ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವುದು.
ಈಗ ಒಂದು ದೊಡ್ಡ ಪ್ರಶ್ನೆಯು ಮೇಲೇಳುತ್ತದೆ. 'ಆ ಎಲ್ಲೆಯು ಎಲ್ಲಿದೆ ಸ್ವಾಮೀಜಿ ? ನಾನು ಏನನ್ನು ಬದಲಾಯಿಸಬಹುದು, ಏನನ್ನು ಬದಲಾಯಿಸಲಾಗುವುದಿಲ್ಲ ?' ಎಂಬುದು.
ಒಪ್ಪಿಗೆ ಎಂದರೆ ಏನೆಂದು ಮೊದಲು ನಿರೂಪಿಸುತ್ತೇನೆ. ಆಗ ಈ ಪ್ರಶ್ನೆಗೆ ತಾನಾಗಿಯೇ ಉತ್ತರ ಸಿಗುತ್ತದೆ.
ಬುದ್ಧಿ-ಸ್ವೀಕರಿಸುವ ಜಾಣ್ಮೆ
ಮೊದಲು, ನಿಮ್ಮಿಂದಾಗುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸಿರೆಂದು ಹೇಳಿದೆ. ಈಗ ಹೇಳುತ್ತೇನೆ, ಏನನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಸ್ವೀಕರಿಸುವ, ಒಪ್ಪಿಕೊಳ್ಳುವ ಬುದ್ಧಿಯನ್ನು ಹೊಂದಿಲಿ, ಎಂದು. ಜೀವನದಲ್ಲಿ ಸಾವಿನಂತಹ ಅನೇಕ ವಿಷಯಗಳನ್ನು ಬದಲಾಯಿಸಲಾಗುವುದಿಲ್ಲ. ಬದಲಾಯಿಸಲಾಗದಿರುವುದನ್ನು ಒಪ್ಪಿಕೊಂಡು ಅದರೊಂದಿಗೆ ನೆಮ್ಮದಿಯಿಂದಿರುವುದೇ ಬುದ್ಧಿವಂತಿಕೆ.
ಶಕ್ತಿಯಿಂದ ಬದಲಾಯಿಸುವುದೋ ಅಥವಾ ಬುದ್ಧಿಯಿಂದ ಸಮ್ಮತಿಸುವುದೋ ?
ಈಗ ಒಂದು ದೊಡ್ಡ ಪ್ರಶ್ನೆ ಏಳುತ್ತದೆ, 'ನನ್ನ ಜೀವನದಲ್ಲಿ ಒಂದು ಸಂದರ್ಭವೊದಗಿದಾಗ, ನನ್ನ ಶಕ್ತಿಯನ್ನು ಉಪಯೋಗಿಸಿ ಅದನ್ನು ಬದಲಾಯಿಸಬೇಕೋ ಅಥವಾ ನನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಅದನ್ನು ಸಮ್ಮತಿಸುವುದೋ ಎಂಬುದು ನನಗೆ ಹೇಗೆ ತಿಳಿಯುತ್ತದೆ ? ಇದನ್ನು ನಿರ್ಧರಿಸುವುದು ಹೇಗೆ ?" ಎಂದು.
ಜೀವನ್ಮುಕ್ತಿ - ಒಂದು ಪರಿಚಯ
ಬದಲಾಯಿಸಲಾಗದ ವಿಷಯಗಳನ್ನು ಬದಲಾಯಿಸುವ ಪ್ರಯತ್ನದಲ್ಲಿ ನೀವು ನಿಮ್ಮ ಶಕ್ತಿಯನ್ನು ವ್ಯಯಿಸುತ್ತಾ ಪ್ರಯಾಸಪಡುತ್ತಿರುವಿರೋ ಅಥವಾ ಬದಲಾಯಿಸಲಾಗದುದನ್ನು ಒಪ್ಪಿಕೊಂಡು ನೆಮ್ಮದಿಯಾಗಿರುವಿರೋ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವಂತಹ ಒಂದು ಮಾಪನವನ್ನು ನೀಡುತ್ತೇನೆ. ಈ ಒಂದು ಮಾಪನವು ಬಹಳ ಮುಖ್ಯವಾದುದು.
ಬೆಳಗಿನ ಜಾವದಲ್ಲಿ, ನಿದ್ರಾ ಸ್ಥಿತಿಯಿಂದ ಎದ್ದು ಓಡಾಡಲಾರಂಭಿಸಿದಾಗ, ಗಾಢನಿದ್ರಾಸ್ಥಿತಿಯಿಂದ ಜಾಗೃತ ಸ್ಥಿತಿಗೆ ಬರಲಾರಂಭಿಸಿದಾಗ, ಗಾಢ ನಿದ್ರಾ ಸ್ಥಿತಿಯಿಂದ, ಜಾಗೃತ ಸ್ಥಿತಿಗೆ ಬರುವ ಪರಿವರ್ತನೆಯು ಬಹಳ ಸರಾಗವಾಗಿದ್ದರೆ, ನಿಮ್ಮ ಜೀವನವು ಬಹಳ ಸುಗಮವಾಗಿ ಸಾಗುತ್ತಿದೆಯೆಂದು ತಿಳಿಯಿರಿ.
ಯಾವುದನ್ನು ಒಪ್ಪಿಕೊಳ್ಳಬೇಕೋ ಅದನ್ನು ಒಪ್ಪಿಕೊಳ್ಳುತ್ತಿದ್ದೀರಿ, ಯಾವುದನ್ನು ಬದಲಾಯಿಸುವ ಅವಶ್ಯಕತೆ ಇದೆಯೋ ಅದನ್ನು ಮಾತ್ರ ಬದಲಾಯಿಸುತ್ತಿದ್ದೀರಿ, ಎಂದರೆ, ನೀವು ಪರದಾಡುತ್ತಿಲ್ಲವೆಂದರ್ಥ. ಒಂದು ವೇಳೆ ಆ ಪರಿವರ್ತನೆಯು ಬಹಳ ತೊಂದರೆಗೊಳಿಸುತ್ತಿದ್ದರೆ, ನೀವು ಇನ್ನೂ ಹೆಚ್ಚಾಗಿ ಒಪ್ಪಿಕೊಳ್ಳುವುದನ್ನು ಕಲಿಯಬೇಕೆಂದು ತಿಳಿಯಿರಿ. ನಿಮ್ಮ ಶಕ್ತಿಯನ್ನು ವ್ಯಯಿಸುವ ಅಗತ್ಯವಿಲ್ಲ. ಈಗ ನಿಮಗೆ ಬೇಕಾಗಿರುವುದೆಲ್ಲವೂ ಒಪ್ಪಿಗೆ.
ಇದನ್ನು ಚೆನ್ನಾಗಿ ಸ್ಪಷ್ಟಪಡಿಸುತ್ತೇನೆ. ಇದು ಬಹಳ ಆಳವಾದ, ಸೂಕ್ಷ್ಮವಾದ ಹಾಗೂ ರಹಸ್ಯವಾದ ಅಂಶ. ಇದೊಂದು ನಿಜವಾಗಿಯೂ ಮಾಡಲು ಸಾಧ್ಯವಾದ ಅಂಶವೆನ್ನುತ್ತೇನೆ. ಬೆಳಗ್ಗೆ ಗಾಢನಿದ್ರಾ ಸ್ಥಿತಿಯಿಂದ ಜಾಗೃತಸ್ಥಿತಿಗೆ ಜರುಗಿ, ಜಾಗೃತ ಸ್ಥಿತಿಗೆ ಬಂದನಂತರ, ಈ ಎರಡರಲ್ಲಿ ಯಾವುದಾದರೊಂದು ಭಾವನೆ ಇರುತ್ತದೆ: ಕೆಲವು ಬಾರಿ ಎಚ್ಚರದ ಸ್ಥಿತಿಗೆ ಬಂದಾಗ, ‘ಓ ದೇವರೇ ! ನಿದ್ರಿಸಿದ್ದರೆ ಮೇಲಾಗಿತ್ತು. ಅದೇ ಚೆನ್ನಾಗಿರುತ್ತಿತ್ತು.' ಎನಿಸಬಹುದು, ಅಥವಾ, ‘ಓ ದೇವರೇ ! ಎಂತಹ ಭಯಂಕರ ಕನಸು ! ಎಂತಹ ಚಿತ್ರಹಿಂಸೆಯಾಗಿತ್ತು. ಸಧ್ಯ, ಎದ್ದೆನಲ್ಲಾ' ಎನಿಸಬಹುದು. ಅದರಲ್ಲೂ ಒಂದು ಘೋರ ಸ್ವಪ್ನದ ನಂತರ, ಅದರಿಂದ ಹೊರಬಂದ ಮೇಲೆ, ‘ಓ ದೇವರೇ ! ಅದು ಎಷ್ಟು ಭಯಂಕರ ಸನ್ನಿವೇಶ. ಈಗ ಎಷ್ಟೋ ನೆಮ್ಮದಿಯಾಗಿದ್ದೇನೆ !' ಎನಿಸಲೂಬಹುದು.
ಗಾಢನಿದ್ರಾಸ್ಥಿತಿ ಹಾಗೂ ಸಂಪೂರ್ಣ ಜಾಗೃತಸ್ಥಿತಿಗಳೆರಡರಲ್ಲಿಯೂ ಸಂಪೂರ್ಣ ವಿಶ್ರಾಂತರಾಗಿದ್ದರೆ, ಏನನ್ನೂ ಮಾಡಬೇಕಾದ ಅವಶ್ಯಕತೆ ಇಲ್ಲ. ಆರಾಮವಾಗಿರಿ, ನೀವು ಸರಿಯಾದ ವಲಯದಲ್ಲಿರುವಿರಿ. ನೀವು ಸರಿಯಾದಷ್ಟು ಶಕ್ತಿಯನ್ನು ಹಾಗೂ ಬುದ್ಧಿಯನ್ನು ವ್ಯಕ್ತಪಡಿಸುತ್ತಿದ್ದೀರಿ. ನಿಮಗೆ ಸಾಧ್ಯವಾದುದನ್ನು ಬದಲಾಯಿಸುತ್ತಿದ್ದೀರಿ, ಹಾಗೂ ಸಾಧ್ಯವಾಗದುದನ್ನು ಒಪ್ಪಿಕೊಳ್ಳುತ್ತಿದ್ದೀರಿ. ನೀವು ಸರಿಯಾದ ಮಾರ್ಗದಲ್ಲಿರುವಿರಿ.
ಜೀವನ್ಮುಕ್ತಿ - ಒಂದು ಪರಿಚಯ
ನೀವು ಜಾಗೃತಸ್ಥಿತಿಯಲ್ಲಿ ಹೆಚ್ಚು ಸಂತೋಷವಾಗಿಯೂ, ಅದಕ್ಕೆ ಹೊಂದಿಕೊಂಡಂತೆಯೂ ಭಾಸವಾದರೆ, ಹಾಗೂ ಗಾಢನಿದ್ರಾವಸ್ಥೆಯಲ್ಲಿ ಖಿನ್ನತೆಯುಂಟಾದರೆ, ನಿಮಗೆ ಶಕ್ತಿಯ ಅ ಗ ತ್ಯ ವಿ ರು ತ್ತ ದೆ . ಎಂದರೆ, ಕೆಲವು ವಿಷಯಗಳನ್ನು ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ ಎಂದರ್ಥ.
ಕೆಲವು ಬಾರಿ ಜನರು ಬಂದು, 'ಸ್ವಾಮೀಜಿ, ನೆನ್ನೆ ರಾತ್ರಿ ಒಂದು ದೆವ್ವ ಬಂದು ನನ್ನ ಎದೆಯ ಮೇಲೆ ಕುಳಿತು ನನ್ನನ್ನು ಉಸಿರು ಗಟ್ಟಿಸುತ್ತಿತ್ತು' ಎಂದು ಗೋಳಾಡುತ್ತಾರೆ.
ತಿಳಿಯಿರಿ, ಯಾವ ದೆವ್ವವೂ ನಿಮ್ಮನ್ನು ತೊಂದರೆಪಡಿಸಲಾಗುವುದಿಲ್ಲ. ವಾಸ್ತವವಾಗಿ ಯಾವುದೇ ದೆವ್ವಕ್ಕಿಂತಲೂ ನೀವೇ ಹೆಚ್ಚು ಪ್ರಭಾವಶಾಲಿಗಳು. ಕೆಲವರಿಗೆ ಗಾಢನಿದ್ರೆಯಲ್ಲಿ ಉಸಿರುಗಟ್ಟಿದಂತೆ ಭಾಸವಾಗುತ್ತದೆ. ಅದನ್ನವರು ದೆವ್ವ ತಮ್ಮ ಎದೆಯ ಮೇಲೆ ಕುಳಿತಿತ್ತೆಂದೂ, ಉಸಿರುಗಟ್ಟಿಸಿತೆಂದೂ ವರ್ಣಿಸುತ್ತಾರೆ. ಗಾಢನಿದ್ರಾ ಸ್ಥಿತಿಯಲ್ಲಿ ಉಸಿರುಗಟ್ಟಿದಂತೆಯೂ ಹಾಗೂ ಎಚ್ಚರದ ಸ್ಥಿತಿಯಲ್ಲಿ ಆರಾಮವಾದಂತೆಯೂ; ಎಚ್ಚರದ ಸ್ಥಿತಿಯಲ್ಲಿ ಸಂತೋಷವಾಗಿದ್ದು ಅದಕ್ಕೆ ಹೊಂದಿಕೊಂಡಂತಿದ್ದು, ಗಾಢನಿದ್ರಾ ಸ್ಥಿತಿಯಲ್ಲಿ ಕಷ್ಟಪಡುತ್ತೀರೆನಿಸಿದರೆ, ನೀವು ನಿಮ್ಮ ಜೀವನದಲ್ಲಿ ಅನೇಕ
ವಿಷಯಗಳನ್ನು ಬದಲಾಯಿಸಬೇಕೆಂದು ಸ್ಪಷ್ಟವಾಗಿ ತಿಳಿಯಿರಿ. ನೀವು ನಿಮ್ಮ ಶಕ್ತಿಯನ್ನು ಬಳಸಬೇಕಾಗಿದೆ, ಬುದ್ಧಿಯನ್ನಲ್ಲ. ಪರಿಸ್ಥಿತಿಯನ್ನು ನೀವೀಗ ಬದಲಾಯಿಸಬೇಕು.
ಗಾಢನಿದ್ರಾಸ್ಥಿತಿಯಲ್ಲಿ ಆರಾಮವಾಗಿದ್ದು, ಜಾಗೃತಸ್ಥಿತಿಗೆ ಬಂದ ಕೂಡಲೇ ಕದಡಿದಂತೆ, ಅಥವಾ ಒತ್ತಡವಾದಂತೆನಿಸಿದರೆ, ನೀವು ಬುದ್ಧಿಯನ್ನು ಪಯೋಗಿಸಬೇಕೆಂದರ್ಥ. ನೀವು ವಿಷಯಗಳನ್ನು ಬದಲಾಯಿಸ ಬೇಕಾಗಿಲ್ಲ. ನೀವು ಆರಾಮವಾಗಿದ್ದು, ಬದಲಾಯಿಸಲಾಗದುದಕ್ಕೆ ಒಪ್ಪಿಗೆಯಿಂದಿರಬೇಕಷ್ಟೆ.
ಅದರಲ್ಲೂ ಪಾಶ್ಚಿಮಾತ್ಯರಲ್ಲಿ, ಶೇಕಡಾ ತೊಂಬತ್ತರಷ್ಟು ಹೃದಯಾಘಾತಗಳು ಬೆಳಗಿನ ಹೊತ್ತಿನಲ್ಲಿ ಸಂಭವಿಸುತ್ತವೆ ಎನ್ನುತ್ತಾರೆ. ಅದನ್ನವರು 'ಮಂಡೇ ಮಾರ್ನಿಂಗ್ ಬ್ಲೂಸ್' ಎಂದು ಕರೆಯುತ್ತಾರೆ. ಅದು ಒತ್ತಡದಿಂದ ಉಂಟಾಗಿ, ನಿದ್ರೆಯಿಂದೆದ್ದಾಗ ಉಸಿರುಗಟ್ಟಿದಂತೆ ವ್ಯಕ್ತವಾಗುತ್ತದೆ. ಬುದ್ಧಿಯನ್ನು ಉಪಯೋಗಿಸಬೇಕು ಎಂದು ಇದು ಸೂಚಿಸುತ್ತದೆ. ವಿಷಯಗಳನ್ನು ಬದಲಾಯಿಸಬೇಕಾಗಿಲ್ಲ. ವಿಶ್ರಾಂತವಾಗಿರಲಾರಂಭಿಸಬೇಕು. ವಿಷಯಗಳನ್ನು ಬದಲಾಯಿಸಲು ಶ್ರಮಿಸಬೇಕೋ ಅಥವಾ ಆರಾಮವಾಗಿದ್ದು ವಿಷಯಗಳನ್ನು ಒಪ್ಪಿಕೊಳ್ಳಬೇಕೋ ಎಂಬುದರ ಮಾಪನ ಇದು. ಪ್ರತಿದಿನವೂ ಎದ್ದ ಕ್ಷಣವೇ ಹೇಗನ್ನಿಸುತ್ತದೆ ಎಂಬುದನ್ನು ಕೇವಲ ಗಮನಿಸಿರಿ. ಗಾಢನಿದ್ರಾ ಸ್ಥಿತಿಯಲ್ಲಿಯೋ ಅಥವಾ ಜಾಗೃತ ಸ್ಥಿತಿಯಲ್ಲಿಯೋ, ಯಾವ ಸ್ಥಿತಿಯಲ್ಲಿ ಹೆಚ್ಚಾಗಿ
ನೆಮ್ಮದಿ ಇದೆ ಎಂಬುದನ್ನು ನೀವೇ ಕಂಡುಕೊಳ್ಳಬಹುದು. ಶಕ್ತಿಯನ್ನೋ ಅಥವಾ ಬುದ್ಧಿಯನ್ನೋ, ಯಾವುದನ್ನು ಉಪಯೋಗಿಸಬೇಕು ಎಂದು ಕಂಡುಕೊಳ್ಳಲು ಇದು ಬಹಳ ಪ್ರಾಯೋಗಿಕವಾದ ಸೂತ್ರ. ಯಾವುದೇ ಆಧ್ಯಾತ್ಮಿಕ ಅನ್ವೇಷಕನಿಗೆ ಇವೆರಡು ವಿಷಯಗಳ ನಡುವೆ ದ್ವಂದ್ವವಿರುವುದು.
ಅನೇಕರು ತಮ್ಮ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಂಡು, 'ಸ್ವಾಮೀಜಿ, ಇದು ನನ್ನ ಪರಿಸ್ಥಿತಿ. ಇದನ್ನು ದೈವೇಚ್ಛೆ ಎಂದುಕೊಳ್ಳಬೇಕೇ ಅಥವಾ ಇದನ್ನು ನಾನೇ ಜಯಿಸಬೇಕೇ ? ಹೇಳಿರಿ ಸ್ವಾಮೀಜಿ' ಎಂದು ಕೇಳುತ್ತಾರೆ.
ಸರಿಯಾಗಿ ತಿಳಿಯಿರಿ, ನಾನು ಕೇವಲ ಸೂತ್ರವನ್ನು ಕೊಡಬಲ್ಲೆ, ಪರಿಹಾರವನ್ನು ನೀವೇ ಕಂಡುಕೊಳ್ಳಬೇಕು.
ಪ್ರತಿ ಬೆಳ್ಳಗೆಯೂ ನಿಮ್ಮನ್ನು ನೀವೇ ವಿಶ್ಲೇಷಿಸಿಕೊಳ್ಳಿರಿ. ಜಾಗೃತ ಸ್ಥಿತಿಯಲ್ಲಿ ಹೆಚ್ಚು ಪ್ರಯಾಸವಿದ್ದರೆ, ನೀವು ಬಹಳ ಸೆಣಸಾಡುತ್ತಿದ್ದೀರೆಂದರ್ಥ. ನೀವು ನಿಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸಬೇಕು. ಸುಮ್ಮನಿದ್ದು ವಿಷಯಗಳಿರುವಂತೆಯೇ ಅವುಗಳನ್ನು ಒಪ್ಪಿಕೊಳ್ಳಿರಿ.
ಗಾಢ ನಿದ್ರಾಸ್ಥಿತಿಯಲ್ಲಿ, ಪ್ರಜ್ಞಾರಹಿತ ಸ್ಥಿತಿಯಲ್ಲಿ, ಹೆಚ್ಚಾಗಿ ಒತ್ತಡ ಅಥವಾ ಪ್ರಯಾಸವಿದ್ದರೆ ಒಪ್ಪಿಗೆಯ ಅವಶ್ಯಕವಲ್ಲ. ನಿಮಗೆ ಹೋರಾಟದ ಸ್ಪೂರ್ತಿ ಬೇಕಾಗಿರುತ್ತದೆ. ವಿಷಯಗಳನ್ನು ಬದಲಾಯಿಸಲು ಪ್ರಾರಂಭಿಸಿರಿ. ಈ ಒಂದು ತಂತ್ರದಿಂದ, ಜೀವನದಲ್ಲಿ ಹೊಡೆದಾಡುವುದೋ ಅಥವಾ ಅದು ನಡೆಯುವಂತೆ ಒಪ್ಪಿಕೊಳ್ಳುವುದೋ ಎಂಬುದನ್ನು 24 ಗಂಟೆಗಳಲ್ಲಿ ನಿರ್ಧರಿಸಬಹುದು.
ಮತ್ತೊಂದು ವಿಷಯ: ನಾನು ಹೇಳುತ್ತಿರುವುದಕ್ಕೆ ನಾನು ಜವಾಬ್ದಾರನಾಗಿದ್ದೇನೆ. ನಾನು ಇದನ್ನು ನನ್ನ ಮೇಲೆಯೇ ಪ್ರಯೋಗಿಸಿಕೊಂಡಿರುವುದಲ್ಲದೆ, ಸಾವಿರಾರು ಶಿಷ್ಯರ ಮೇಲೆಯೂ ಪ್ರಯೋಗಿಸಿದ್ದೇನೆ. ಅದು ಸಿದ್ಧಿಸಿದೆ. ನಮ್ಮ ಜೀವನದಲ್ಲಿ ವಿಷಯಗಳೊಂದಿಗೆ ಹೋರಾಡಬೇಕೇ ಅಥವಾ ಒಪ್ಪಿಕೊಳ್ಳಬೇಕೇ ಎಂಬುದನ್ನು ತಿಳಿಯಲು ಇದೇ ವಿಧಾನ.
ರಾತ್ರಿ ಕೇವಲ ಯಾವುದಾದರೊಂದು ಸಮಸ್ಯೆಯೊಂದಿಗೆ ನಿದ್ರಿಸಿರಿ. ಮರುದಿನ ಬೆಳಗ್ಗೆ ಎದ್ದಾಗ ಏನನಿಸುತ್ತದೆಯೋ ನೋಡಿರಿ. ನಿಮಗೆ ರಾತ್ರಿ ಉಸಿರುಗಟ್ಟಿಸಿದ್ದಂತೆನಿಸಿದರೆ, ಆಗ ನಿಮಗೆ ಹೋರಾಡಲು, ವಿಷಯಗಳನ್ನು ಬದಲಾಯಿಸಲು, ಶಕ್ತಿಯನ್ನುಪಯೋಗಿಸುವ ಕಾಲ ಬಂದಿದೆ ಎಂದರಿತುಕೊಳ್ಳಿರಿ. ಬೆಳಗ್ಗೆ ಎದ್ದನಂತರ ಒತ್ತಡದ ಭಾವನೆಯಿದ್ದರೆ, ಆಗ ನೀವು ವಿಶ್ರಮಿಸುವ, ಬುದ್ಧಿಯನ್ನು ಉಪಯೋಗಿಸುವ ಕಾಲ ಬಂದಿದೆ ಎಂದರ್ಥ.
ನಿಮ್ಮ ಬುದ್ಧಿಶಕ್ತಿಯು ನೀವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚು ಬುದ್ಧಿಶಾಲಿಯಾದುದು ಎಂಬುದನ್ನು ತಿಳಿಯಿರಿ.
ನಿರ್ಲಕ್ಷಿಸಲಾಗದಷ್ಟು ಒಳ್ಳೆಯತನ
ನಿಮ್ಮ ಜೀವನದಲ್ಲಿ ನೀವು ಬದಲಾಯಿಸಲಾಗದ ಎಷ್ಟೋ ವಿಷಯಗಳಿವೆ. ಅವುಗಳನ್ನು ಅವು ಇರುವಂತೆಯೇ ಒಪ್ಪಿಕೊಳ್ಳ ಬೇಕು. ಕೇವಲ ವಿಷಯಗಳ ಒಪ್ಪಿಗೆಯೇ ನಿಮ್ಮನ್ನು ಅವುಗಳಿಂದಾಚೆಗೆ ಒಯ್ಯುತ್ತದೆ. ಅದು ಯಾವುದೇ ಸಮಸ್ಯೆ ಆಗಿರಬಹುದು, ಯಾವುದೇ ತೊಂದರೆ ಆಗಿರಬಹುದು. ಅದನ್ನು ಅಂಗೀಕರಿಸುವುದರಿಂದ ಅದನ್ನು ಮೀರಿ ಹೋಗಬಹುದು. ಕೇವಲ ಒಪ್ಪಿಕೊಳ್ಳುವುದರಿಂದಲೇ ಎಷ್ಟೋ ಸಮಸ್ಯೆಗಳನ್ನು ಮೀರಿ ಹೋಗಬಹುದು. ನಿಮ್ಮೊಡನೆ ಹೋರಾಟಕ್ಕೆ ಬಂದ ಎಷ್ಟೋ ಜನರು ಸಹ ಅವರನ್ನು ನೀವು ಒಪ್ಪಿಕೊಳ್ಳುವುದರಿಂದಲೇ ಇದ್ದಕ್ಕಿದ್ದಂತೆಯೇ ನಿಮ್ಮೊಡನೆ ಹೋರಾಡುವ ಛಲವನ್ನೇ ಕಳೆದುಕೊಳ್ಳುತ್ತಾರೆ. 'ಇವರೊಡನೆ ಹೋರಾಡುವುದರಿಂದ ಏನು ಪ್ರಯೋಜನ?' ಎಂದುಕೊಳ್ಳುತ್ತಾರೆ.
ತಿಳಿಯಿರಿ, ನೀವು ಬಹಳ ಒಳ್ಳೆಯವರಾದರೆ, ನಿಮ್ಮನ್ನು ಅಗೌರವಿಸಲಾಗುವುದಿಲ್ಲ, ನಿಮ್ಮನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದು ಅತ್ಯಂತ ಮುಖ್ಯವಾದ ಸೂತ್ರ. ಬಹಳ ಒಳ್ಳೆಯವರಾಗಿರಿ, ನಿಮ್ಮನ್ನು ನಿರ್ಲಕ್ಷಿಸಲಾಗುವುದಿಲ್ಲ. ನಿಮ್ಮನ್ನು ಹೀನಾಯವಾಗಿ ಕಾಣಲಾಗುವುದಿಲ್ಲ. ಬಹಳ ಒಳ್ಳೆಯವರಾಗಿರಲು ಬೇಕಾದ ಸಹನೆ ನಮಗೆ ಇಲ್ಲದಿರುವುದೇ ಸಮಸ್ಯೆ.
ಆದ್ದರಿಂದ ನೀವು, 'ಇಲ್ಲ ಸ್ವಾಮೀಜಿ ! ಇದು ಕಲಿಯುಗ. ಹಾಗಾಗಿ, ಒಳ್ಳೆಯವರು ಕಷ್ಟಪಡುತ್ತಲೇ ಕೊನೆಗೊಳ್ಳುತ್ತಾರೆ ಹಾಗೂ ಕೆಟ್ಟವರು ಸಂತೋಷವಾಗಿ ಬಾಳುತ್ತಾರೆ' ಎಂದು ದೂರಲಾರಂಭಿಸುವಿರಿ.
ವಿರಮಿಸಿರಿ ! ವಿಶ್ವವು ಕ್ರೂರವಲ್ಲ. ಅದು ಇನ್ನೂ ಧರ್ಮದ ಮೇಲೆ ನಿಂತಿದೆ. ಕಲಿಯುಗವೆಂಬುದಿಲ್ಲ. ಕಲಿಯುಗವೆಂಬುದೆಲ್ಲವೂ ನಿಮ್ಮ ಮಾನಸ್ಸಲ್ಲದೆ ಬೇರೆಯಲ್ಲ. ಕಲಿಯುಗವೆಂಬುದು ನಿಮ್ಮ ಅಹಂಕಾರವಲ್ಲದೆ ಬೇರೆ ಏನೂ ಅಲ್ಲ. ಕಲಿಯುಗ ಎಂಬುದು ಸತ್ಯವನ್ನವಲೋಕಿಸಲು ನಿಮಗಿರುವ ಅಸಹನೆಯಲ್ಲದೆ ಇನ್ನೇನೂ ಅಲ್ಲ.
ಒಂದು ರೀತಿಯಲ್ಲಿ ನೋಡಿದರೆ, ನಮ್ಮ ಕಷ್ಟವು ನಮ್ಮ ಅಹಂಕಾರಕ್ಕೆ ಭೂಷಣವಾಗಿರುವುದರಿಂದ ಅದರ ಬಗ್ಗೆ ನಾವು ನಿಜವಾಗಿಯೂ ಸಂತೋಷಪಡುತ್ತೇವೆ. ನಾವು ಅನೇಕ ಸಮಸ್ಯೆಗಳನ್ನು ಹೊತ್ತಿರುವೆವೆಂದು ನಮ್ಮ ಅಹಂಕಾರವು ಭಾವಿಸುತ್ತದೆ. ಆ ಕಾರಣದಿಂದಲೇ ನಾವು ಹಿಂಸೆಪಡುತ್ತಲೇ ಇರುವುದು. ಆದರೆ ನಮಗೆ ಅದರ ಬಗ್ಗೆ ತಪ್ಪಿತಸ್ಥ ಭಾವನೆ, ಪ್ರಜ್ಞೆಯುಂಟಾಗುತ್ತದೆ. ಹಾಗಾಗಿ ಏನು ಮಾಡುತ್ತೇವೆ? ಇಡೀ ಜಗತ್ತನ್ನು ದೂರಲಾರಂಭಿಸುತ್ತೇವೆ. ಒಳ್ಳೆಯವರನ್ನೆಲ್ಲಾ ದೇವರು ಶಿಕ್ಷಿಸುತ್ತಾನೆಂದೂ, ಕೆಟ್ಟವರನ್ನೆಲ್ಲಾ ಸುಖಪಡಲು ದಾರಿಮಾಡಿ ಕೊಡುವನೆಂದೂ ಹೇಳುತ್ತೇವೆ.
ನೀವು ವಿಶ್ವದ ಪರಿಪೂರ್ಣತೆ
ತಿಳಿಯಿರಿ: ವಿಶ್ವವು ನಿಮ್ಮ ಮೂಲಕ ತನ್ನನ್ನೇ ತಾನು ಪೂರ್ಣವಾಗಿಸಿಕೊಳ್ಳುತ್ತಿದೆ. ನೀವು ವಿಶ್ವದ ಪವಾಡ; ನೀವು ಆಕಸ್ಮಿಕವಲ್ಲ. ನಾವು ಆಕಸ್ಮಿಕವೆಂದೂ, ವಿಶ್ವವು ನಮ್ಮನ್ನು ಹಿಂಸಿಸುತ್ತಿದೆಯೆಂದೂ ಸತತವಾಗಿ ಭಾವಿಸುತ್ತೇವೆ. ಇಲ್ಲ! ವಿಶ್ವವು ಹಿಂಸಾಸಕ್ತವಾದುದಲ್ಲ. ದೇವರು ನಿಮ್ಮನ್ನು ಶಿಕ್ಷಿಸುವುದಿಲ್ಲ.
ಕೆಲವರು, 'ಇಲ್ಲ ಸ್ವಾಮೀಜಿ, ನಿಮಗೆ ತಿಳಿಯದು! ದೇವರು ನನ್ನನ್ನು ಶಿಕ್ಷಿಸುತ್ತಿದ್ದಾನೆ!' ಎನ್ನುತ್ತಾರೆ. ದೇವರು ನಿಮ್ಮನ್ನು ಶಿಕ್ಷಿಸುವ ಮಟ್ಟಕ್ಕೆ ಇಳಿಯುವುದಿಲ್ಲವೆಂಬುದನ್ನು ಮನಗಾಣಿರಿ, ಅಲ್ಲದೆ, ದೇವರಿಂದ ಶಿಕ್ಷಿಸಲ್ಪಡುವ ಮಟ್ಟಕ್ಕೆ ನೀವು ಏರಿಲ್ಲ! ನೀವು ಸತತವಾಗಿ ಧರ್ಮವನ್ನು (ವಿಶ್ವದ ನಿಯಮಗಳು) ತೆಗಳುತ್ತಲೇ ಇರುತ್ತೀರಿ.
ನೀವು, 'ಇಲ್ಲ ಎನ್ನಬಹುದು ಸ್ವಾಮೀಜಿ! ನಿಮಗೆ ತಿಳಿಯದು! ಇದು ಕಲಿಯುಗವೇ. ಧರ್ಮವು ಇನ್ನಿಲ್ಲ. ಈ ಚರಿತ್ರೆ, ಆ ಕಾವ್ಯ, ಭಾಗವತ, ಆ ಸೂತ್ರವು... ಇದು ಕಲಿಯುಗ ಎನ್ನುತ್ತದೆ. ಜೀವನವು ಹೀಗೆಯೇ ಇರುವುದು!'
ಸ್ಪಷ್ಟವಾಗಿ ತಿಳಿಯಿರಿ, ಕಲಿಯುಗ ಎಂಬುದಿಲ್ಲ. ಹೇಳುತ್ತೇನೆ ಕೇಳಿರಿ, ನಾನು ಆಡುತ್ತಿರುವ ಮಾತಿಗೆ ನಾನು ಜವಾಬ್ದಾರನಾಗಿದ್ದೇನೆ. ನಾನೇನು ಹೇಳುತ್ತಿದ್ದೇನೆಂಬುದು ನನಗೆ ಗೊತ್ತು. ಕಲಿಯುಗ ಎಂಬುದು ಇಲ್ಲ. ಅದು ಸತ್ಯವನ್ನು ವೀಕ್ಷಿಸಲು ನೀವು ತೋರುವ ಅಸಹನೆ. ಸತ್ಯವನ್ನು ಸ್ವಲ್ಪ ಆಳವಾಗಿ ನೋಡಿದಲ್ಲಿ ಧರ್ಮವು ಎಲ್ಲೆಡೆಯಲ್ಲೂ ಇರುವುದನ್ನು ಕಾಣುತ್ತೀರಿ.
ಇದು ನಿಜವಾಗಿಯೂ ಸತ್ಯಯುಗ. ನೀವು ತೋರಿಕೆಯವರಾದಾಗ, ವಿಷಯಗಳನ್ನು ಬಹಳ ಆಳವಾಗಿ ಗಮನಿಸದಿದ್ದಾಗ, ನಿಮಗೆ ಪ್ರಪಂಚವು ಕಲಿಯುಗವೆನಿಸುತ್ತದೆ ಹಾಗೂ ನೀವು ಕಲಿಯುಗದಲ್ಲಿ ಇದ್ದೀರೇನಿಸುತ್ತದೆ. ಆದ್ದರಿಂದ ನಿಮ್ಮ ಸುತ್ತಲೂ ಅಂತಹ ಜನರನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸ್ನೇಹಿತರನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸಂಬಂಧಗಳನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸನ್ನಿವೇಶಗಳನ್ನೇ ಆಕರ್ಷಿಸುತ್ತೀರಿ. ಕಲಿಯುಗದಲ್ಲಿಯೇ ಜೀವಿಸುತ್ತಿರುತ್ತೀರಿ.
ಸರಿಯಾದ ಜನರನ್ನು ಆಕರ್ಷಿಸುವುದು
ವಾಸ್ತವವಾಗಿ ನೀವು ಯಾವ ಪ್ರಜ್ಞಾಮಟ್ಟದಲ್ಲಿರುತ್ತೀರೋ ನಿಮ್ಮ ಸ ು ತ ್ ತ ಲ ೂ ಅಂತಹ ಜನರನ್ನು ಮಾತ್ರವೇ ಆಕರ್ಷಿಸುತ್ತೀರಿ. ಸ್ವಲ್ಪ ಗಾಢವಾಗಿ
ಜೀವನ್ಮುಕ್ತಿ - ಒಂದು ಪರಿಚಯ
ಪರಿಶೀಲಿಸಿದಲ್ಲಿ, ನೈಜತೆಯನ್ನು, ಸತ್ಯವನ್ನು ಈಕ್ಷಿಸುವ ಸಹನೆ ಇದ್ದಲ್ಲಿ, ವಾಸ್ತವವಾಗಿ ಇದು ಸತ್ಯಯುಗವೆಂದು ಆ ಕೂಡಲೆ ತಿಳಿಯುತ್ತೀರಿ. ಕೃಷ್ಣನ ಲೀಲೆ ಇನ್ನೂ ನಡೆಯುತ್ತಿದೆ. ರಾಮನು ಇನ್ನೂ ಜೀವಂತವಾಗಿದ್ದಾನೆ. ಎಲ್ಲಾ ಮಹಾನ್ ಗುರುಗಳೂ ಸಜೀವವಾಗಿದ್ದಾರೆ. ಇದು ಸತ್ಯಯುಗ. ಧರ್ಮವು ಇನ್ನೂ ಅಸ್ತಿತ್ವದಲ್ಲಿದೆ.
ಜನರು, 'ಇದರರ್ಥವಾದರೂ ಏನು ? ಎಷ್ಟೊಂದು ಭಯೋತ್ಪಾದಕತೆ ನಡೆಯುತ್ತಿದೆ; ಎಷ್ಟೊಂದು ದಾರಿದ್ರ್ಯವಿದೆ, ಇಷ್ಟೇ ಅಲ್ಲದೆ, ಯುದ್ಧ ನಡೆಯುತ್ತಿದೆ ! ಇದು ಸತ್ಯಯುಗವೆಂದು ಹೇಗೆ ಹೇಳುವಿರಿ ?' ಎಂದು ನನ್ನನ್ನು ಕೇಳುತ್ತಾರೆ.
ಕೃಷ್ಣನ ಕಾಲದಲ್ಲಿ ಯುದ್ಧವೇ ಇರಲಿಲ್ಲವೆಂದುಕೊಂಡಿದ್ದೀರಾ ? ರಾಮನ ಕಾಲದಲ್ಲಿ ಬಡತನವಿರಲಿಲ್ಲವೆಂದುಕೊಂಡಿದ್ದೀರಾ ? ಇಲ್ಲ ! ತಿಳಿಯಿರಿ, ರಾಮನ ಕಾಲದಲ್ಲಿಯೂ ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಕೆಲವರು ಕಲಿಯುಗದಲ್ಲಿಯೂ ಇದ್ದರು. ಅದೇ ರೀತಿ, ಈಗಲೂ ಕೆಲವರು ಸತ್ಯಯುಗದಲ್ಲಿದ್ದಾರೆ.
ಸತ್ಯಯುಗ ಹಾಗೂ ಕಲಿಯುಗಗಳು ಕಾಲಗಣನೆಗೆ ಅನ್ವಯಿಸುವ ಕಾಲಗಳಲ್ಲ, ಅದು ವೈಯಕ್ತಿಕ ನಿರ್ಧಾರ. ನಿಮಗೆ ಬೇಕಾದರೆ ಈಗಲೇ ಸತ್ಯಯುಗದಲ್ಲಿರಬಹುದು; ಅದನ್ನು ಇಂದಿನಿಂದಲೇ ನಿರ್ಧರಿಸಿದರೆ,
ನಿಮ್ಮ ಮನೋವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬಹುದು. ಆಗ ನಿಮ್ಮ ಜೀವನದಲ್ಲಿ ಸಹಜವಾಗಿಯೇ ಸರಿಯಾದ ಸನ್ನಿವೇಶಗಳನ್ನು ಹಾಗೂ ಸ್ನೇಹಿತರನ್ನು ಆಕರ್ಷಿಸುತ್ತೀರಿ.
ಆದರೆ, ನಿಮ್ಮ ಜೀವನದಲ್ಲಿ ನೀವು ಸತತವಾಗಿ ದುಃಖದಲ್ಲಿದ್ದರೆ, ನಿಮಗೆ ಸತತವಾಗಿ ಸ್ವಾನುಕಂಪವಿದ್ದರೆ, ನಿಮ್ಮ ಜೀವನವನ್ನು ಇನ್ನೂ ಹೆಚ್ಚು ದುಃಖಪೂರಿತವಾಗಿ ಮಾಡುವ ಸಂಬಂಧಗಳನ್ನೂ, ಸ್ನೇಹಿತರನ್ನೂ ಆಕರ್ಷಿಸುವುದನ್ನು ನೋಡಬಹುದು. ನಿಮ್ಮನ್ನು ವಂಚಿಸುವವರನ್ನು ಸತತವಾಗಿ ಆಕರ್ಷಿಸುತ್ತೀರಿ, ಏಕೆಂದರೆ ಅವರೊಂದಿಗೆ ನಿಮಗೆ ನೆಮ್ಮದಿಯಾಗಿರುವಂತೆನಿಸುತ್ತದೆ. ಅವರು ವಂಚಿಸಿದರೂ, ವಂಚಿಸಿದರೆಂಬುದನ್ನು ಮರೆತು, ಅವರೊಂದಿಗೆ ಪುನಃ ಸಂಬಂಧ ಕಂಡುಕೊಳ್ಳಲಾರಂಭಿಸುವಿರಿ.
ನೀವು, 'ಇಲ್ಲ ಸ್ವಾಮೀಜಿ, ಪರವಾಗಿಲ್ಲ, ಆತನು ಒಳ್ಳೆಯವನು; ಆತನ ಮನಸ್ಸು ಬಹಳ ಒಳ್ಳೆಯದು' ಎನ್ನುತ್ತೀರಿ.
'ಆತನು ನನ್ನನ್ನು ತೆಗಳಿದರೂ ಆತನ ಮನಸ್ಸು ಬಹಳ ಒಳ್ಳೆಯದು!' ಎನ್ನುವ ಅವರ ಮಾತುಗಳ ಅರ್ಥವೇನೆಂದು ನನಗೆ ತಿಳಿಯುವುದಿಲ್ಲ. ನಡೆಯುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಅವರಿಗೆ ತಮ್ಮದೇ ಆದ ತಾಂತ್ರಿಕ ಪದಗಳಿರುತ್ತವೆ, ನೀವು ಅಂತಹ ಮಾನಸಿಕ ಸ್ಥಿತಿಯಲ್ಲಿದ್ದರೆ, ಅಂತಹ ಪ್ರಜ್ಞೆಯಲ್ಲಿದ್ದರೆ, ನಿಮ್ಮ ಸುತ್ತಲೂ ವಂಚಿಸುವ ಸಂಬಂಧಗಳನ್ನು ಹಾಗೂ ತೆಗಳುವ ಜನರನ್ನು ಆಕರ್ಷಿಸುತ್ತೀರಿ.
ಆದುದರಿಂದ ಸ್ಪಷ್ಟವಾಗಿರಿ, ಇಡೀ ಪ್ರಪಂಚವು ಧರ್ಮದ ಪ್ರಕಾರವೇ ನಡೆಯುತ್ತಿದೆ ಎಂಬುದನ್ನು ನೀವು ತಿಳಿದ ಕ್ಷಣವೇ ಅದು ಸತ್ಯಯುಗ. ಆ ಕೂಡಲೇ ನೀವು ಸತ್ಯಯುಗದಲ್ಲಿ ಬಾಳುತ್ತಿರುವ ಜನರನ್ನು ಆಕರ್ಷಿಸಲಾರಂಭಿಸುತ್ತೀರಿ. ನಿಮ್ಮ ಸುತ್ತಲೂ ಅಂತಹದೇ ಆನಂದದ ವರ್ತುಲವನ್ನು ನಿರ್ಮಿಸಿಕೊಳ್ಳುತ್ತೀರಿ. ಇದ್ದಕ್ಕಿದ್ದಂತೆ ನೀವು ಸತ್ಯಯುಗದಲ್ಲಿರುವುದನ್ನು ಮನಗಾಣುತ್ತೀರಿ !
ಸತ್ಯಯುಗದಲ್ಲಿರಲು, ಅದನ್ನು ನೀವು ನಿರ್ಮಿಸುವ ಅಗತ್ಯವಿಲ್ಲ. ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ಅದಕ್ಕೆ ನಿಮ್ಮನ್ನು ಶ್ರುತಿಗೂಡಿಸಿಕೊಳ್ಳುವುದು. ಅಷ್ಟೇ ! ನಿಮ್ಮ ಚರ್ಮದೊಳಗಿರುವ ಆರು ಅಡಿ ದೇಹವನ್ನು 'ಸತ್ಯಯುಗ'ದಂತೆ ಮಾಡಿಕೊಳ್ಳಿರಿ ! ಇದ್ದಕ್ಕಿದ್ದಂತೆ ನಿಮ್ಮ ಚರ್ಮದ ಹೊರಗಿರುವುದೆಲ್ಲವೂ ಸಹ ಸತ್ಯಯುಗವಾಗುತ್ತದೆ. ಬೇರೇನೂ ಮಾಡುವ ಅವಶ್ಯಕತೆ ಇಲ್ಲ.
ನೀವು ಪ್ರಪಂಚವನ್ನೆಲ್ಲಾ ಬದಲಾಯಿಸುವ ಅವಶ್ಯಕತೆ ಇಲ್ಲ. ಪ್ರತಿಯೊಂದು ಊರಿಗೂ ಹೋಗಿ ಸತ್ಯಯುಗದ ಬಗ್ಗೆ ಪ್ರವಚನಗಳನ್ನು ನೀಡಬೇಕಾಗಿಲ್ಲ. 'ಪ್ರಪಂಚವೆಲ್ಲವೂ ಸತ್ಯಯುಗವಾಗಲಿ, ಆಗ ಮಾತ್ರವೇ ನಾನು ಸತ್ಯಯುಗದಲ್ಲಿರಲು ಸಾಧ್ಯ' ಎಂದು ಹೇಳಬೇಕಾದ ಅಗತ್ಯವಿಲ್ಲ. ಇಲ್ಲ, ಕೇವಲ ನಿಮ್ಮ ಅಂತರಂಗವನ್ನು ಸತ್ಯಯುಗವಾಗಿ ಬದಲಾಯಿಸಿರಿ. ಇದ್ದಕ್ಕಿದ್ದಂತೆ ಅಂತಹ ಸ್ನೇಹಿತರನ್ನೇ ಆಕರ್ಷಿಸುತ್ತೀರಿ. ಇದ್ದಕ್ಕಿದ್ದಂತೆ, ಅಂತಹ
ಜೀವನ್ಮುಕ್ತಿ - ಒಂದು ಪರಿಚಯ
ಪುಸ್ತಕಗಳು ನಿಮ್ಮನ್ನು ತಲುಪುತ್ತವೆ, ಅಂತಹ ವೆಬ್ಸೈಟ್ಗಳು, ಅಂತಹ ಡಿ.ವಿ.ಡಿ.ಗಳು, ಅಂತಹ ದಿನಪತ್ರಿಕೆಗಳು ನಿಮ್ಮನ್ನು ತಲುಪುತ್ತವೆ. ಅಲ್ಲದೆ ಇತರ ವಿಷಯಗಳೆಲ್ಲವೂ ನಿಮ್ಮ ಜೀವನದಲ್ಲಿ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇದ್ದಕ್ಕಿದ್ದಂತೆ ನೀವು ಮಿಕ್ಕೆಲ್ಲಾ ವಿಷಯಗಳಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ.
ನನ್ನ ಇಡೀ ಜೀವನದಲ್ಲಿ, ನಾನು ಒಂದು ಬಾರಿಯೂ ಚಿತ್ರಮಂದಿರಕ್ಕೆ ಹೋಗಿಲ್ಲ! ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಕಾಲೇಜಿನಲ್ಲಿದ್ದಾಗಲಾದರೂ, ಒಮ್ಮೆಯೂ ಸಿನಿಮಾಗೆ ಹೋಗದೆ ಹೇಗಿದ್ದಿರಿ?' ಎಂದು.
ನಾನವರಿಗೆ, 'ಹೇಗೋ ಏನೋ, ಅದು ನನ್ನ ಜೀವನದ ಭಾಗವೆಂದೇ ನನಗನಿಸಲಿಲ್ಲ' ಎಂದು ಹೇಳುತ್ತೇನೆ. ನಾನೇನು 60 ವರ್ಷಗಳ ಹಿಂದೆ ಯುವಕನಾಗಿದ್ದೆ ಎಂದು ಹೇಳಿಕೊಳ್ಳಬೇಕಾದ ಮುದುಕನೇನಲ್ಲ. ನನಗೀಗ ಕೇವಲ 31 ವರ್ಷಗಳು! ಹೇಗೋ ಏನೋ ನನಗೆ ಟಿ.ವಿ. ಅಥವಾ ಸಿನಿಮಾಗಳಲ್ಲಿ ಆಸಕ್ತಿಯೇ ಇರಲಿಲ್ಲ. ಅದು ಎಂದೂ ನನ್ನ ಜೀವನದ ಭಾಗವಾಗಿಯೇ ಇರಲಿಲ್ಲ!
'ಅದು ಅಸಾಧ್ಯ! ಸಿನಿಮಾ ಹಾಗೂ ಟಿ.ವಿ.ಗಳಿಂದ ಆಕರ್ಷಿತರಾಗದೇ ಇರುವವರು ಹೇಗೆ ತಾನೇ ಬದುಕಿರಲು ಸಾಧ್ಯ?' ಎಂದು ಜನರು ಕೇಳುತ್ತಾರೆ.
ಹೇಗೋ ಏನೋ, ನಾನಿರುವುದೇ ಹೀಗೆ.
'ನೀವು ಅಸಾಮಾನ್ಯರು. ನೀವು ಜ್ಞಾನಿಗಳು' ಎಂದು ಅವರು ಹೇಳುತ್ತಾರೆ. ಆದರೆ ಜ್ಞಾನೋದಯಕ್ಕೆ ಮುಂಚೆಯೂ, ಅದು ನನ್ನ ಜೀವನದ ಭಾಗವಾಗಿರಲಿಲ್ಲ'.
ಆದ್ದರಿಂದ ಸರಿಯಾಗಿ ತಿಳಿಯಿರಿ. ನೀವು ಸತ್ಯಯುಗವನ್ನು ಪ್ರವೇಶಿಸಿದರೆ, ಎಲ್ಲವೂ ಧರ್ಮದ ಅನುಗುಣವಾಗಿ ನಡೆಯುತ್ತದೆಂದು ತಿಳಿದರೆ, ವಿಶ್ವವು ನಿಮ್ಮನ್ನು ಹಿಂಸಿಸಿ ಆನಂದಿಸುವುದಂತಹದಲ್ಲ ಎಂದು ತಿಳಿಯುವಿರಿ. ಇದ್ದಕ್ಕಿದ್ದಂತೆ, ನಿಮ್ಮ ಸುತ್ತ ಮುತ್ತ ಸರಿಯಾದ ಜನರು ಹಾಗೂ ಸರಿಯಾದ ವಿಷಯಗಳನ್ನು ಆಕರ್ಷಿಸಲಾರಂಭಿಸುತ್ತೀರಿ. ನಿಮ್ಮ ಇಡೀ ಪ್ರಪಂಚವೇ ಬದಲಾಗುತ್ತದೆ. ಇದೊಂದು ದೃಢವಾದ, ನೇರವಾದ, ಸರಳವಾದ, ಪ್ರಾಮಾಣಿಕವಾದ, ಅನುಭವಾತ್ಮಕ ಸತ್ಯ. ನಿಮ್ಮ ಅಂತರಂಗವನ್ನು ಇಂದು ಬದಲಾಯಿಸಿಕೊಂಡರೆ, ಹನ್ನೆರಡು ವರ್ಷಗಳ ನಂತರ ನಿಮ್ಮ ಪರಿಸರವು ಬದಲಾಗುತ್ತದೆಂದು ನಾನು ಹೇಳುತ್ತಿಲ್ಲ, ಇಲ್ಲ ! ನೀವು ಈಗ ಬದಲಾದರೆ, ಈ ಕ್ಷಣದಲ್ಲಿಯೇ ಬದಲಾವಣೆಯನ್ನು ಕಾಣುತ್ತೀರೆಂದು ಹೇಳುತ್ತಿದ್ದೇನೆ. ನಾನು ಯಾವ ತತ್ತ್ವಗಳನ್ನೂ ಪ್ರತಿಪಾದಿಸುತ್ತಿಲ್ಲ. ನಾನೇನು ಮಾತನಾಡುತ್ತಿದ್ದೇನೆಂದು ನನಗೆ ತಿಳಿದಿದೆ. ನನ್ನ ಮಾತುಗಳಿಗೆ ನಾನು ಜವಾಬ್ದಾರನಾಗಿದ್ದೇನೆ.
ನೋಡಿರಿ, ಅನೇಕ ಬಗೆಯ ಜನರಿದ್ದಾರೆ. ಯಾವಾಗಲೂ ಟೀಕೆ ಮಾಡುವವರು ಏನಾದರೊಂದನ್ನು ಟೀಕಿಸುತ್ತಲೇ ಇರುತ್ತಾರೆ. ಅವರು, 'ಇಲ್ಲ ! ಈ ಸ್ವಾಮೀಜಿ ಏನು ಮಾತನಾಡುತ್ತಾರೆ ? ಇವರು ಬಣ್ಣ ಬಣ್ಣದ ಮಾತುಗಳಿಂದ ಕಟ್ಟುಕಥೆಗಳನ್ನು ಹೇಳುತ್ತಾರೆ. ನಾನು ಎಲ್ಲವನ್ನೂ ಅನುಭವಿಸಿದ್ದೇನೆ. ನಾನು ಇವೆಲ್ಲದರ ಬಗ್ಗೆ ಈ ಹಿಂದೆಯೇ ಓದಿದ್ದೇನೆ. ನಾನು ಈ ಎಲ್ಲವನ್ನೂ ಸಾಕಷ್ಟು ಕೇಳಿದ್ದೇನೆ. ಇವು ಪ್ರಾಯೋಗಿಕ ಸತ್ಯಗಳಲ್ಲ' ಎಂದು ಹೇಳುತ್ತಾರೆ.
ನೋಡಿರಿ, ಇವುಗಳ ಬಗ್ಗೆ ನೀವು ಓದಿ, ಕೇಳಿರುವಿರಿ. ಆದರೆ ಅ ವೆ ಜ ರ್ಗ ಳ ನ್ ನ ನೀವು ಅಭ್ಯಾಸ ಮಾಡಿದ್ದೀರೇನು ? ಇಲ್ಲ ! ನೀವು ಅವುಗಳ ಬಗ್ಗೆ ಕೇವಲ ಓದಿದ್ದೀರಿ. ಕೆಲವು ಕಥೆಗಳನ್ನು, ವದಂತಿಗಳನ್ನು ಆಲಿಸಿ, ನಿರ್ಧಾರಕ್ಕೆ ಬರುತ್ತೀರಿ. ಅಷ್ಟೇ ಅಲ್ಲದೆ, ನೀವು ಏನೇ ಹೇಳಿದರೂ, ಅದನ್ನು ವಿರೋಧಿಸುವ ಒಂದು ಗುಂಪು ಯಾವಾಗಲೂ ಇದ್ದೇ ಇರುತ್ತದೆ.
ಒಂದು ಸಣ್ಣಕಥೆ : ಒಂದು ಹಳ್ಳಿಯಲ್ಲಿ, ಒಬ್ಬ ವ್ಯಕ್ತಿಯನ್ನು ಮೂರ್ಖನೆಂದು ಎಲ್ಲರೂ ತೆಗಳುತ್ತಿದ್ದರು. ಒಮ್ಮೆ ಒಬ್ಬ ಜ್ಞಾನಿಯು ಆ ಹಳ್ಳಿಯ ಮಾರ್ಗವಾಗಿ ಸಾಗುತ್ತಿದ್ದರು.
ಆ ವ್ಯಕ್ತಿಯು ಆ ಜ್ಞಾನಿಯ ಬಳಿಗೆ ಹೋಗಿ, 'ಈ ಹಳ್ಳಿಯವರೆಲ್ಲರೂ ನನ್ನನ್ನು ಗೇಲಿ ಮಾಡುತ್ತಾರೆ. ನಾನೊಬ್ಬ ಮೂರ್ಖ. ನನ್ನನ್ನು ಯಾರೂ ಗೌರವಿಸುವುದಿಲ್ಲ. ಸಣ್ಣ ಮಕ್ಕಳೂ ಸಹ ಕಲ್ಲುಗಳಿಂದ ಹೊಡೆದು ನನ್ನನ್ನು ಮೂರ್ಖನೆಂದು ಕರೆಯುತ್ತಾರೆ. ದಯವಿಟ್ಟು ನಾನು ಬುದ್ಧಿವಂತನೆಂದು ತೋರುವಂತೆ ಮಾಡಿ' ಎಂದು ಕೇಳಿಕೊಂಡನು.
ಜೀವನ್ಮುಕ್ತಿ - ಒಂದು ಪರಿಚಯ
ಗುರುಗಳು, 'ಹಾಗೆಯೇ ಆಗಲಿ. ಚಿಂತಿಸಬೇಡ. ನಿನಗೆ ಒಂದು ಸರಳವಾದ ತಂತ್ರವನ್ನು ಹೇಳಿಕೊಡುತ್ತೇನೆ. ಒಂದು ವಾರದವರೆಗೆ ಅದನ್ನು ಅಭ್ಯಾಸ ಮಾಡು. ನೀನು ಬುದ್ಧಿವಂತನೆಂಬಂತೆ ಕಾಣುವೆ. ನೀನು ಇಡೀ ಹಳ್ಳಿಯವರಿಂದ ಗೌರವಿಸಲ್ಪಡುವೆ' ಎಂದು ಹೇಳಿದರು.
ಆ ವ್ಯಕ್ತಿಯು ಆಶ್ಚರ್ಯದಿಂದ, 'ಏನು? ಒಂದೇ ವಾರದಲ್ಲಿ! ಹಳ್ಳಿಯವರೆಲ್ಲರೂ ನನ್ನನ್ನು ಗೌರವಿಸುತ್ತಾರೇಯೇ! ಹೇಳಿರಿ. ತಲೆಕೆಳಗಾಗಿ ನಿಲ್ಲುವುದಾದರೂ, ನಾನು ಅದನ್ನು ಮಾಡುತ್ತೇನೆ' ಎಂದು ಹೇಳಿದನು.
ಗುರುಗಳು, 'ನೀನು ತಲೆಕೆಳಗಾಗಿ ನಿಲ್ಲಬೇಕಾಗಿಲ್ಲ. ಅದು ಅಷ್ಟೊಂದು ಕಷ್ಟವಾದದ್ದೇನಲ್ಲ. ಇಷ್ಟನ್ನು ಮಾತ್ರ ಮಾಡು; ಏನನ್ನು ಕಂಡರೂ, ಅದನ್ನು ಟೀಕಿಸು. ಬೇರೇನೂ ಮಾಡುವ ಅಗತ್ಯವಿಲ್ಲ. ಯಾರಾದರೂ, 'ಚಂದ್ರ ಎಷ್ಟು ಸುಂದರವಾಗಿದ್ದಾನೆ!' ಎಂದರೆ, 'ಅದೇನು ಮಹಾ? ಅದರಲ್ಲಿ ಎಷ್ಟೊಂದು ಕಪ್ಪು ಕಲೆಗಳಿವೆ!' ಎಂದು ಹೇಳು. ಯಾರಾದರೂ 'ಈ ರೋಜಾ ಹೂ ಎಷ್ಟು ಸುಂದರವಾಗಿದೆ' ಎಂದರೆ, ಅದನ್ನು ಟೀಕಿಸುತ್ತಾ 'ಇದೆಂತಹ ಸೊಬಗು? ಅದರಲ್ಲಿ ಎಷ್ಟು ಮುಳ್ಳುಗಳಿವೆ' ಎಂದು ಹೇಳು. ಸತತವಾಗಿ ಎಲ್ಲವನ್ನೂ ಟೀಕಿಸು. ಬೇರೇನೂ ಮಾಡುವ ಅಗತ್ಯವಿಲ್ಲ' ಎಂದು ಹೇಳಿದರು.
ಆ ವ್ಯಕ್ತಿಯು ಇದಕ್ಕೊಪ್ಪಿ ಇದನ್ನು ಕ್ರಮಬದ್ಧವಾಗಿ ಅನುಸರಿಸಿದನು. ಕೆಲವು ದಿನಗಳ ನಂತರ ಗುರುಗಳು ತಮ್ಮ ತೀರ್ಥಯಾತ್ರೆಯನ್ನು ಮುಗಿಸಿ, ಆ ಹಳ್ಳಿಗೆ ಹಿಂದಿರುಗಿದರು. ಒಂದು ದೊಡ್ಡ ಬೇವಿನಮರದ ಕೆಳಗೆ ಈ ವ್ಯಕ್ತಿಯು ಕುಳಿತಿರುವುದನ್ನು ಕಂಡರು. ಇಡೀ ಹಳ್ಳಿಯವರೆಲ್ಲಾ ಆತನ ಮಾತನ್ನು ಕೇಳುತ್ತಾ ಆತನ ಸುತ್ತಲೂ ಕುಳಿತಿರುವುದನ್ನು ಕಂಡರು. ಗುರುಗಳು ಬಂದಾಗ, ಅವನು ಅವರತ್ತ ನೋಡಿದನು.
ಗುರುಗಳು, ‘ನಾನು ನಿನ್ನೊಡನೆ ಮಾತನಾಡಬೇಕು’ ಎಂದು ಹೇಳಿದರು. ಆ ವ್ಯಕ್ತಿಯು, ‘ನನ್ನ ಉಪನ್ಯಾಸದ ನಂತರ ಬಂದು ನಿಮ್ಮನ್ನು ನೋಡುತ್ತೇನೆ’ ಎಂದು ಹೇಳಿದನು.
ಎಲ್ಲರೂ ಹೊರಟು ಹೋದಮೇಲೆ, ಆ ವ್ಯಕ್ತಿಯು ಗುರುಗಳ ಪಾದಗಳಿಗರಗಿ ಹೇಳಿದನು, ‘ಓ ಗುರುವೇ! ನಿಮ್ಮ ಉಪಾಯವು ನಿಜವಾಗಿಯೂ ಪವಾಡಸದೃಶವಾಗಿದೆ. ನಾನು ಎಲ್ಲವನ್ನೂ ನಿಂದಿಸಲಾರಂಭಿಸಿದೆ. ಕಂಡ ಕಂಡದ್ದನ್ನೆಲ್ಲಾ ಟೀಕಿಸಲಾರಂಭಿಸಿದೆ. ಕೆಲವು ದಿನಗಳ ನಂತರ, ಜನರು ನನ್ನನ್ನು ಬುದ್ಧಿವಂತನೆಂದುಕೊಂಡರು. ನಾನೀಗ ಹಳ್ಳಿಯಲ್ಲಿ ಬಹಳವಾಗಿ ಗೌರವಿಸಲ್ಪಟ್ಟಿದ್ದೇನೆ’ ಎಂದನು.
ಅದಕ್ಕೆ ಬೇಕಾಗಿರುವುದು ಇಷ್ಟೇ! ಬುದ್ಧಿವಂತರಾಗಿ ತೋರಲು, ನಿಮ್ಮ ಸುತ್ತಲಿರುವುದೆಲ್ಲವನ್ನೂ ಸತತವಾಗಿ ಟೀಕಿಸುತ್ತಿರಬೇಕು. ಬ ಾರದ ೇನ ೂ ಮಾಡುವ ಅಗತ್ಯವಿಲ್ಲ. ಕೇವಲ ಎಲ್ಲವನ್ನೂ ನಿಂದಿಸುವುದರಿಂದಲೇ ಪ್ರಸಿದ್ಧರಾಗುವವರಿದ್ದಾರೆ. ಅವರಿಂದ ಯಾವುದನ್ನೂ ಸ ೃಷ್ಟಿ ಸ ಲಾಗು ವುದಿಲ್ಲ, ಆದರೆ ಸತತವಾಗಿ ಟೀಕಿಸುವ ಮೂಲಕ ಅವರು ಏನನ್ನು ಬೇಕಾದರೂ ನಾಶ ಮಾಡುತ್ತಾರೆ.
ಕೆಲವೊಮ್ಮೆ ಜನರು ನನ್ನನ್ನು ಟೀಕಿಸಿದಾಗ, ನನ್ನ ಸುತ್ತಲಿರುವವರು ಸಿಟ್ಟಿಗೆದ್ದು, 'ಸ್ವಾಮೀಜಿ, ಈ ವ್ಯಕ್ತಿಯು ನಿಮ್ಮನ್ನು ಟೀಕೆ ಮಾಡಿದ್ದಾನೆ. ಆತನನ್ನು ದಂಡಿಸಿರಿ. ಆತನು ನಿಮ್ಮನ್ನು ಅಗೌರವದಿಂದ ನೋಡಿದ್ದಾನೆ' ಎನ್ನುತ್ತಾರೆ.
ನಾನು, 'ಆತನಿಗೆ ಯಾವ ಶಿಕ್ಷೆಯೂ ಬೇಕಾಗಿಲ್ಲ. ಆತನು ಈಗಾಗಲೇ ನರಕದಲ್ಲಿದ್ದಾನೆ! ಆತನಿಗೆ ಯಾವ ಶಿಕ್ಷೆಯೂ ಅಗತ್ಯವಿಲ್ಲ. ಆತನಿರುವ ಪ್ರಜ್ಞಾಸ್ಥಿತಿಯೇ ಆತನಿಗೆ ಅತ್ಯಂತ ಕೆಟ್ಟ ಶಿಕ್ಷೆ. ಆತನಿಗೆ ಬೇರೆ ಒಂದು ನರಕವೇ ಬೇಕಾಗಿಲ್ಲ' ಎಂದು ಅವರಿಗೆ ಹೇಳುತ್ತೇನೆ.
ತಿಳಿಯಿರಿ, ಆತನಿಗೆ ಬೇರೆ ನರಕವೇ ಬೇಕಾಗಿಲ್ಲ! ಆತನಿಗೆ ಬೇರೆ ಶಿಕ್ಷೆಯು ಬೇಕಾಗಿಲ್ಲ. ಆತನಾಗಲೇ ನರಕದಲ್ಲಿದ್ದಾನೆ! ಸರಿಯಾಗಿ ತಿಳಿಯಿರಿ, ನಿಮಗೆ ಎರಡು ಮನಸ್ಸುಗಳಿದ್ದು, ಒಂದು ಮನಸ್ಸಿನಿಂದ ಬೇರೆಯವರನ್ನು ಅಳೆದು, ಇನ್ನೊಂದು ಮನಸ್ಸಿನಿಂದ ನಿಮ್ಮೊಂದಿಗೆ ನೀವು ಬಾಳುವಷ್ಟು
ನೀವು ಬುದ್ಧಿವಂತರಾಗಿರುವುದಿಲ್ಲ. ನೀವು ಇನ್ನೊಬ್ಬರನ್ನು ಸತತವಾಗಿ ನಿಂದಿಸುತ್ತಿದ್ದಾಗ, ಒಳಗಿನ ಆ ಮನಸ್ಸಿನೊಡನೆಯೇ ಜೀ ವಿಸು ತ್ತಿ ರು ತ್ತೀ ರಿ . ನೀವು ಪ್ರಜ್ಞಾರಹಿತವಾಗಿ ನಿಮ್ಮನ್ನೇ ನಿಂದಿಸಿ ಕೊಳ್ಳುತ್ತಿರುತ್ತೀರಿ. ನೀವು ನಿಮ್ಮನ್ನೇ ಸತತವಾಗಿ ಟೀಕಿಸಿಕೊಳ್ಳುತ್ತಿರುತ್ತೀರಿ. ಇತರರನ್ನು ಯಾರು ಸದಾ ಟೀಕಿಸುತ್ತಿರುತ್ತಾರೋ, ಅವರು ತಮ್ಮನ್ನೂ ಸತತವಾಗಿ ಹಿಂಸೆಪಡಿಸಿಕೊಳ್ಳುತ್ತಿರುತ್ತಾರೆ. ಇದೊಂದು ಮೂಲಭೂತ ಧರ್ಮ.
ನೀವು ಹೇಳಬಹುದು, 'ಇಲ್ಲ ಸ್ವಾಮೀಜಿ, ನಾನು ಬೇರೆಯವರನ್ನು ಮಾತ್ರ ಟೀಕಿಸುತ್ತೇನೆ, ನನ್ನನ್ನಲ್ಲ. ನನ್ನ ವಿಷಯವಾಗಿ ಹೇಳುವುದಾದರೆ, ನಾನು ಅದೇ ತಪ್ಪನ್ನು ಮಾಡಿದರೆ, ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುತ್ತೇನೆ' ಎಂದು.
ನಿಮ್ಮನ್ನು ಹಾಗೂ ಇತರರನ್ನು ಅಳೆಯಲು ಒಂದೇ ಮಾಪನ
ತಿಳಿಯಿರಿ, ಒಂದು ಮನಸ್ಸಿನಿಂದ ಬೇರೆಯವರನ್ನು ಅಳೆದು, ಇನ್ನೊಂದು ಮನಸ್ಸಿನಿಂದ ನಿಮ್ಮನ್ನು ನೀವೇ ಅಳೆಯುವ ಎರಡು ಮನಸ್ಸುಗಳನ್ನು ಹೊಂದಿರುವಷ್ಟು ಪ್ರಜ್ಞಾವಂತಿಕೆ ನಿಮಗಿರುವುದಿಲ್ಲ. ಬೇರೆಯವರನ್ನು ಹೇಗೆ ತೂಗಿ ನೋಡುವಿರೋ, ನಿಮ್ಮನ್ನೂ ಹಾಗೆಯೇ ತೂಗಿನೋಡುವಿರಿ. ಬೇರೆಯವರ ಮೇಲೆ ತೀರ್ಪು ನೀಡುವ ಹಾಗೆಯೇ ನಿಮ್ಮ ಮೇಲೆಯೂ ತೀರ್ಪು ನೀಡುತ್ತೀರಿ.
ನಾವು ಯೋಚಿಸಬಹುದು, 'ಇಲ್ಲ! ಬೇರೆಯವರು ಒಂದು ತಪ್ಪನ್ನು ಮಾಡಿದರೆ, ನಾನು ಟೀಕಿಸುತ್ತೇನೆ. ಆದರೆ, ನಾನೇ ಆ ತಪ್ಪನ್ನು ಮಾಡಿದಾಗ, ನನ್ನನ್ನು ನಾನು ಟೀಕಿಸಿಕೊಳ್ಳುವುದಿಲ್ಲ' ಎಂದು. ಸುಮ್ಮನೆ ನಿಮ್ಮ ಜೀವನವನ್ನೇ ನೋಡಿರಿ. ನೀವು ಇತರರ ಹುಳುಕನ್ನು ಹುಡುಕುತ್ತಿದ್ದರೆ, ನಿಮಗೆ ಬೇಕೋ ಬೇಡವೋ, ನೀವೂ ಅದೇ ಮನೋವ್ಯವಸ್ಥೆಯನ್ನು ಹೊಂದುತ್ತೀರಿ. ನೀವು ಸತತವಾಗಿ ನಿಮ್ಮನ್ನೇ ತೂಗಿನೋಡುತ್ತಾ ತಪ್ಪಿತಸ್ಥ ಭಾವನೆ ಹಾಗೂ ಕೀಳರಿಮೆಯಿಂದ ಹಿಂಸೆ ಪಡುತ್ತಿರುತ್ತೀರಿ.
ಯಾವೊಬ್ಬನು ತನ್ನನ್ನೇ ಒಪ್ಪಿಕೊಳ್ಳುತ್ತಾನೆಯೋ ಆತನು ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುತ್ತಾನೆ. ಯಾವೊಬ್ಬನು ತನ್ನನ್ನೇ ವಿಮರ್ಶಿಸಿ, ದೂಷಿಸಿಕೊಳ್ಳುತ್ತಾನೋ, ಆತನು ಎಲ್ಲರನ್ನೂ ಸತತವಾಗಿ ವಿಮರ್ಶಿಸಿ ದೂಷಿಸುತ್ತಾನೆ.
ಆದ್ದರಿಂದ, ಜನರು ಯಾವಾಗಲಾದರೂ, 'ಸ್ವಾಮೀಜಿ, ಇವರು ನಿಮ್ಮನ್ನು ಟೀಕಿಸಿದ್ದಾರೆ. ಇವರು ನಿಮ್ಮನ್ನು ಅಗೌರವಿಸಿದ್ದಾರೆ. ಅವರಿಗೆ ಶಿಕ್ಷೆ ನೀಡಿರಿ...... ಏನಾದರೂ ಹೇಳಿರಿ ಸ್ವಾಮೀಜಿ' ಎಂಬಂತಹ ಸುದ್ದಿಯನ್ನು ತಂದಾಗ, ನಾನು ಅವರಿಗೆ, 'ವಿಶ್ರಮಿಸಿರಿ! ಆತನನ್ನು ಶಿಕ್ಷಿಸುವ ಅಗತ್ಯವಿಲ್ಲ. ಆತನು ಈಗಾಗಲೇ ಆ ಪ್ರಜ್ಞಾಸ್ಥಿತಿಯಲ್ಲಿ ಇದ್ದಾನೆ. ಆತನು ವೇದನೆಯನ್ನನುಭವಿಸುತ್ತಿದ್ದಾನೆ. ಆತನಿಗೆ ಸಾಕಷ್ಟು ಶಿಕ್ಷೆಯಾಗಿದೆ' ಎನ್ನುತ್ತೇನೆ.
ನೀವು ನಕಾರಾತ್ಮಕವಾದುದನ್ನು ಮಾಡಿ, ನರಕಕ್ಕೆ ಹೋಗಬೇಕಾಗಿಲ್ಲ. ನೀವು ನಕಾರಾತ್ಮಕವಾದುದನ್ನು ಮಾಡುವುದೇ ನೀವು ನರಕದಲ್ಲಿರುವುದರಿಂದ ಎಂದು ತಿಳಿದುಕೊಳ್ಳಿರಿ!
ಸತತವಾಗಿ ಟೀಕಿಸುವವರಿಗೆ ಒಂದು ದೊಡ್ಡ ಸಮಸ್ಯೆ ಇರುತ್ತದೆ. ಅವರು ಶತ್ರುತ್ವವನ್ನು ಸೃಷ್ಟಿಸುತ್ತಾರೆ. ಅವರು ಸೃಜನಾತ್ಮಕರಾಗಿರುವುದಿಲ್ಲ. ನಾನು ಇಂತಹ ಅನೇಕರನ್ನು ನೋಡಿದ್ದೇನೆ. ಅವರು ಎಷ್ಟು ಸೋಮಾರಿಗಳಾಗಿರುತ್ತಾರೆಂದರೆ, ಟೀಕಿಸುವುದನ್ನು ಬಿಟ್ಟು ಅವರು ಬೇರೇನನ್ನೂ ಮಾಡುವುದಿಲ್ಲ. ಅವರು ಕಲಿಯುಗದಲ್ಲಿರುತ್ತಾರೆ. ಇರಲು ಅತ್ಯಂತ ಕೆಟ್ಟ ಸ್ಥಿತಿಯೇ ಅದು.
ಧರ್ಮವು ಇನ್ನೂ ಜೀವಂತವಾಗಿದೆಯೆಂದು, ವಿಶ್ವವು ಧರ್ಮದ ಪ್ರಕಾರ ನಡೆಯುತ್ತದೆಂದು ತಿಳಿದರೆ, ನೀವು ಸತ್ಯಯುಗದಲ್ಲಿದ್ದೀರಿ ಎಂದರ್ಥ. ಕಾಲ ಕಳೆದಿದೆ ಎಂಬುದಾಗಿ, ವಿಶ್ವವು ತನ್ನ ರೀತಿಯನ್ನು ಬದಲಾಯಿಸಿ ಕೊಂಡಿಲ್ಲ. ಇಲ್ಲ! ನೀವದನ್ನು ಅರ್ಥಮಾಡಿಕೊಂಡರೆ, ಇದ್ದಕ್ಕಿದ್ದಂತೆ ನಿಮ್ಮ ಅಂತರಂಗವು
ಸತ್ಯಯುಗದಲ್ಲಿರುವುದನ್ನು ಕಾಣುತ್ತೀರಿ. ನಿಮ್ಮ ಸುತ್ತಮುತ್ತ ಸತ್ಯಯುಗದ ಅದೇ ಶಕ್ತಿಯನ್ನು, ಅದೇ ಪ್ರಜ್ಞೆಯನ್ನು, ಸ್ನೇಹಿತರನ್ನು, ವಿಚಾರಗಳನ್ನು, ಆಕರ್ಷಿಸಲಾರಂಭಿಸುತ್ತೀರಿ.
ತಿಳಿಯಿರಿ, ಮೊದಲ ತಂತ್ರವೆಂದರೆ, ನಿಮ್ಮಿಂದ ಬದಲಾಯಿಸ ಬೇಕಾಗಿರುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸುವುದು.
ಎರಡನೆಯದು, ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವ ಬುದ್ಧಿಯನ್ನು ವ್ಯಕ್ತಪಡಿಸುವುದು.
ಮೂರನೆಯದು ಒಂದು ಮುಖ್ಯವಾದ ವಿಷಯ : ಯುಕ್ತಿ.
ಯುಕ್ತಿ-ಸ್ಪಷ್ಟತೆ
ಯುಕ್ತಿಯೆಂದರೆ ಸ್ಪಷ್ಟತೆ; ನೀವು ಎಷ್ಟೇ ಬದಲಾಯಿಸಿದರೂ, ಒಪ್ಪಿಕೊಂಡರೂ, ಸಕಲವೂ ಮತ್ತೊಂದು ಕನಸೆಂಬ ಸ್ಪಷ್ಟತೆ ! ತಿಳಿಯಿರಿ. ನಾನು ವೇದಾಂತದ ಪರಮೋನ್ನತ ಬೋಧನೆಯನ್ನು ನೀಡುತ್ತಿದ್ದೇನೆ. ಪರಮಶ್ರೇಷ್ಠ ಸತ್ಯವನ್ನು ಸರಳವಾದ ಮಾತುಗಳಲ್ಲಿ ಹೇಳುವುದಾದರೆ: ಯಾವುದೇ ವಿಷಯವನ್ನು ಬದಲಾಯಿಸಿದರೂ, ಒಪ್ಪಿದರೂ, ಎಷ್ಟೇ ಬದಲಾಯಿಸಿದರೂ ಎಷ್ಟೇ ಒಪ್ಪಿದರೂ, ಈ ಇಡೀ ಬ್ರಹ್ಮಾಂಡವೇ ಒಂದು ನಿರಂತರವಾಗಿ ಬದಲಾಗುತ್ತಿರುವ ಕನಸು ! ಅದನ್ನು ಅಳೆಯಲಾಗುವುದಿಲ್ಲ. ಸಕಲವೂ ಒಂದು ಬದಲಾಗುತ್ತಿರುವ
ಕನಸಷ್ಟೇ.
ನಾನೀಗ, ಎಲ್ಲವನ್ನೂ ಒಂದೇ ವಾಕ್ಯದಲ್ಲಿ ಮುಂದಿಡುತ್ತಿದ್ದೇನೆ: ನೀವು ಕಷ್ಟಪಡಬೇಕಾಗಿಯೇ ಇಲ್ಲ. ಝೆನ್ ಅಥವಾ ಅದ್ವೈತ ಸಿದ್ಧಾಂತದಲ್ಲಿ ಪರಮಶ್ರೇಷ್ಠ ಸತ್ಯವೆಂದು ಹೇಳುವುದು ಇದನ್ನೇ ಎಂದು ನಾನು ಹೇಳಬಲ್ಲೆ.
ನೀವು ಏನನ್ನು ಬದಲಾಯಿಸಿದರೂ, ಸಕಲವೂ ಸತತವಾಗಿ ಬದಲಾಗುತ್ತಿರುವ ಒಂದು ಕನಸು.
ಎಷ್ಟೇ ಬದಲಾಯಿಸಿದರೂ, ಈ ಎಲ್ಲವೂ ಸತತವಾಗಿ ಬದಲಾಗುತ್ತಿರುವ ಕನಸೆಂಬ ಸತ್ಯವನ್ನು ಅರಿತರೆ, ಇದ್ದಕ್ಕಿದ್ದಂತೆ ನೀವು 'ಅನ್ಕ್ಲಚ್' ಆಗಿರುವುದನ್ನು ಕಾಣುವಿರಿ. ಜೀವನದ ಬಗ್ಗೆ ನಿಮ್ಮ ಮಾನಸ್ಸಿನ ಬೇಡದ ಆಲೋಚನಾ ಗೊಂದಲದಿಂದ ಬೇರ್ಪಡುತ್ತೀರಿ. ಆಂತರಿಕವಾಗಿ ಒಂದು ಅಸಾಧಾರಣವಾದ ನೆಮ್ಮದಿಯನ್ನು ಪಡೆಯುತ್ತೀರಿ.
‘ಎಲ್ಲವೂ ಬದಲಾಗುತ್ತಿರುವ ಕನಸಾದರೆ, ನಾವು ಏನನ್ನು ಮಾಡಬಯಸುವೆವೋ, ಅದನ್ನು ಮಾಡಬಹುದೆ?’ ಎಂದು ಜನರು ನನ್ನನ್ನು ಕೇಳುತ್ತಾರೆ.
ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂಬ ಈ ಮಹಾಸತ್ಯವನ್ನು ಮನಗಂಡರೆ, ನೀವು ಮಾಡಬಯಸುವುದನ್ನು ಮಾಡಲಾಗುವುದಿಲ್ಲ! ವಿಶ್ವವು ಬಯಸುವುದನ್ನು ಮಾತ್ರ ಮಾಡುತ್ತೀರಿ. ನೀವು ಬಯಸುವುದನ್ನು
ಜೀವನ್ಮುಕ್ತಿ - ಒಂದು ಪರಿಚಯ
ಮಾಡಲಾಗುವುದಿಲ್ಲವೇಕೆಂದರೆ ಈ ಸತ್ಯವನ್ನು ತಿಳಿದಾಕ್ಷಣವೇ ನಿಮ್ಮಲ್ಲಿ ಅಸಾಧಾರಣ ಆಂತರಿಕ ಉಪಶಮನವಾಗಲು ಆರಂಭವಾಗುತ್ತದೆ. ನಿಮ್ಮ ಕಷ್ಟ ಅಥವಾ ವೇದನೆಯು ಕೊನೆಗೊಳ್ಳುತ್ತದೆ. ಒಂದು ಮಿಂಚು ನೋಟ: ನಡೆಯುತ್ತಿರುವುದೆಲ್ಲವೂ ಒಂದು ಕನಸು, ಅದು ಸತತವಾಗಿ ಬದಲಾಗುತ್ತಿದೆ, ನಿಮ್ಮ ಕಲ್ಪನೆಗಳು ಬದಲಾಗುತ್ತಿವೆ, ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವು ಬದಲಾಗುತ್ತಿದೆ. ಪರಿವರ್ತನೆಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯಗಳು ಬದಲಾಗುತ್ತಿವೆ. ಸಮಸ್ಯೆಗಳ ಬಗ್ಗೆ ನಿಮ್ಮ ಅನಿಸಿಕೆಗಳು ಬದಲಾಗುತ್ತಿವೆ...... ಹೀಗೆ ಎಲ್ಲವೂ ಬದಲಾಗುತ್ತದೆ !
ಕೆಲವೊಮ್ಮೆ ಜನರು, 'ಹನ್ನೆರಡು ವರ್ಷಗಳ ಹಿಂದೆ, ನಾನು ಆಧ್ಯಾತ್ಮಿಕ ಅಭ್ಯಾಸಗಳನ್ನು ಆರಂಭಿಸಿದೆ. ನನ್ನ ಕಷ್ಟಗಳೆಲ್ಲವೂ ಪರಿಹಾರವಾಗುವುದೆಂದು ತಿಳಿದಿದ್ದೆ. ಆದರೆ ಈಗ, ಹನ್ನೆರಡು ವರ್ಷಗಳ ನಂತರವೂ ನನಗೆ ಕಷ್ಟಗಳಿವೆಯಲ್ಲಾ ?' ಎಂದು ಕೇಳುತ್ತಾರೆ.
ನಿಮಗೆ ಕಷ್ಟಗಳಿರಬಹುದು, ಆದರೆ ಅವು ಅದೇ ಕಷ್ಟಗಳಲ್ಲ. ಅವು ಬೇರೆಯವು, ಹೆಚ್ಚು ಸೂಕ್ಷ್ಮವಾದ ಕಷ್ಟಗಳು ! ನಿಮ್ಮ ಕಷ್ಟಗಳ ಪರಿವರ್ತನೆಯು ನಿಮ್ಮಲ್ಲಿ ಸ್ವಲ್ಪ ಪರಿವರ್ತನೆಯಾಗಿರುವುದನ್ನು ತೋರಿಸುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನೀವು ಯಾವುದಾದರೊಂದು ವಿಷಯದೊಂದಿಗೆ ಹೋರಾಡಿದ್ದಿರಬಹುದು; ಈಗ ಹನ್ನೆರಡು ವರ್ಷಗಳಾದ ಮೇಲೆ, ಬೇರೆ ಯಾವುದೋ ವಿಷಯದೊಂದಿಗೆ ಹೋರಾಡುತ್ತಿರುತ್ತೀರಿ.
ನಿಮ್ಮ ಎದುರಾಳಿಯು ಬದಲಾಗಿದ್ದರೆ, ನೀವೇ ಬದಲಾಗಿದ್ದೀರೆಂದು ಸ್ಪಷ್ಟವಾಗಿ ತಿಳಿಯಿರಿ. ನೀವು ಬದಲಾಗದೆ, ನಿಮ್ಮ ಎದುರಾಳಿಯು ಬದಲಾಗಲು ಸಾಧ್ಯವಿಲ್ಲ. ನಿಮ್ಮ ಎದುರಾಳಿಯು ಬದಲಾದಾಗ, ನಿಮ್ಮಲ್ಲಿ ಪರಿವರ್ತನೆಯಾಗಿದೆ ಎಂದರ್ಥ.
ಈಗ ನಿಮ್ಮ ಹೋರಾಟವು ಒಂದು ಬೇರೆಯ ಮಟ್ಟದಲ್ಲಿ, ಒಂದು ಬೇರೆಯ ಸ್ತರದಲ್ಲಿರುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನಿಮ್ಮ ಆಸೆ ಏನಾಗಿತ್ತೋ, ನಿಮ್ಮ ಭಯವು ಯಾವುದಾಗಿತ್ತೋ, ನೀವು ಪರಿವರ್ತನೆಯೆಂದರೆ ಏನೆಂದು ತಿಳಿದಿದ್ದಿರೋ, ಮುಕ್ತಿಯ ಬಗ್ಗೆ ನಿಮಗಿದ್ದ ತಿಳಿವಳಿಕೆ ಏನಾಗಿತ್ತೋ, ಅವೆಲ್ಲವೂ ಬದಲಾಗುತ್ತವೆ. ಮುಕ್ತಿಯ ಬಗ್ಗೆ ನಿಮ್ಮ ಕಲ್ಪನೆಯೂ ಸ ಹ ಸತತವಾಗಿ ಬದಲಾಗುತ್ತಿರುತ್ತದೆ. ನೀವು ವಿಕಸಿಸಿದಷ್ಟೂ, ನಿಮ್ಮ ಅಭಿಪ್ರಾಯವೂ ಬದಲಾಗುತ್ತದೆ.
ಒಂದು ಅಮಿತ ಅಖಂಡಧಾರೆ
ಜೀವನ್ಮುಕ್ತಿ - ಒಂದು ಪರಿಚಯ
ಜೀವನ್ಮುಕ್ತಿಯ ಅನುಭವವು ಅಂತಿಮವಾದದ್ದಾದರೂ, ಕೊನೆಯದಲ್ಲವೆಂದು ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ. ಇವೆರಡಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಜೀವನ್ಮುಕ್ತಿಯು ಅಂತಿಮವಾದದ್ದು, ಏಕೆಂದರೆ, ಜೀವನ್ಮುಕ್ತಿಯ ಬಗ್ಗೆ ಮತ್ತು ದೇಹ, ಮನಸ್ಸುಗಳ ಬಗ್ಗೆ ನಿಮ್ಮೆಲ್ಲಾ ಕಲ್ಪನೆಗಳೂ ಮಾಯವಾಗುತ್ತವೆ. ಆದರೆ ಎಲ್ಲವೂ ಮುಗಿಯಿತೆಂದು ಇದರರ್ಥವಲ್ಲ. ಅಲ್ಲವೇ ಅಲ್ಲ.
ನೀವು ಬೇರೆಯದೊಂದೂ ಅಂತಹ ಸ್ಥಳಕ್ಕೆ ಸತತವಾಗಿ ಸ್ಫೋಟಿಸುತ್ತಿರುತ್ತೀರಿ. ನೀವು ಅಂದುಕೊಳ್ಳಬಹುದು, ‘ಓ ದೇವರೇ ! ನಾನು ತಡೆದುಕೊಳ್ಳಲಾಗುವ ಅಂತಿಮ ಅನುಭವ ಇದು. ಇದಕ್ಕಿಂತಲೂ ಹೆಚ್ಚಿನದನ್ನು ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ’ ಎಂದು. ಆದರೆ ತಿಳಿಯಿರಿ, ಅದು ಅಲ್ಲಿಗೆ ನಿಲ್ಲುವುದಿಲ್ಲ. ಪ್ರತಿಕ್ಷಣವೂ, ಈ ಕ್ಷಣವನ್ನು ತಡೆದುಕೊಳ್ಳಲಾರೆ ಎಂಬಂತಹ ಅದೇ ಭಾವನೆಯನ್ನು ಅನುಭವಿಸುತ್ತೀರಿ. ಅದನ್ನೇ ನಾನು ಜೀವನ್ಮುಕ್ತಿ ಎನ್ನುವುದು.
ಅದೊಂದು ಮಿತಿಯಿಲ್ಲದ ಅಖಂಡಧಾರೆ. ಅದು ಸತತವಾಗಿ ಹಾಗೂ ನಿರಂತರವಾಗಿ ಸ್ಫೋಟಿಸುತ್ತಿರುತ್ತದೆ. ನೀವು ಅಂತಿಮವೆಂದು ತಿಳಿಯುವುದು ಈಗ ನಿಮ್ಮಲ್ಲಿ ಆಗುತ್ತಲೇ ಇರುತ್ತದೆ. ಕೆಲವು ಕ್ಷಣಗಳ ನಂತರ, ಆ ಕ್ಷಣದಲ್ಲಿ ಯಾವುದನ್ನು ಅಂತಿಮವೆಂದು ತಿಳಿಯುತ್ತೀರೋ ಅದೇ ನಿಮ್ಮಲ್ಲಿ ಆಗುತ್ತಿರುತ್ತದೆ. ನೀವು
ಜೀವನ್ಮುಕ್ತಿ - ಒಂದು ಪರಿಚಯ
ಅಂತಿಮವೆಂದು ತಿಳಿಯುವುದೇ ಪ್ರತಿಕ್ಷಣವೂ ನಡೆಯುತ್ತದೆ ! ಅದೊಂದು ಮಿತಿಯಿಲ್ಲದ ಅಖಂಡಧಾರೆ. ಸಕಲವೂ ಸತತವಾಗಿ ಬದಲಾಗುತ್ತಿರುತ್ತದೆ. ಅಂದರೆ, ಜ್ಞಾನೋದಯದ ಬಗ್ಗೆ, ನಿಮ್ಮ ಆಸೆಯ ಬಗ್ಗೆ, ನಿಮ್ಮ ದುರಾಸೆಯ ಬಗ್ಗೆ, ನಿಮ್ಮ ಬಗ್ಗೆ, ನಿಮ್ಮ ಅಭಿಪ್ರಾಯಗಳು ಸತತವಾಗಿ ಬದಲಾಗುತ್ತಿರುತ್ತವೆ. ಜೀವ (ಆತ್ಮ), ಈಶ್ವರ (ದೇವರು), ಜಗತ್ (ಪ್ರಪಂಚ) ಎಂಬೀ ಮೂರರ ಬಗ್ಗೆ ನಿಮ್ಮ ಅಭಿಪ್ರಾಯವು ಸತತವಾಗಿ ಬದಲಾಗುತ್ತಿರುತ್ತದೆ. ಅದನ್ನೇ ನಾನು 'ಜೀವನ್ಮುಕ್ತಿ' ಎನ್ನುವುದು.
ಜೀವನ್ಮುಕ್ತಿಯು ನಿವೃತ್ತಿಯಂತೆ ಎಂದು ಕೆಲವರು ತಿಳಿದಿರುತ್ತಾರೆ. ಅ ವ ರ ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಜೀವನ್ಮುಕ್ತಿಯ ನಂತರ ಯಾವ ಯೋಜನೆಯನ್ನು ಹಾಕಿಕೊಳ್ಳಬೇಕು ?' ಎಂದು. ನಾನವರಿಗೆ, 'ಅದನ್ನು ವಿಶ್ವಶಕ್ತಿಯು ಯೋಜಿಸುತ್ತದೆ. ನೀವು ಮಾಡಲಾಗುವುದಿಲ್ಲ !' ಎಂದು ಹೇಳುತ್ತೇನೆ.
ನೀವು ಈ ರೀತಿ ಯೋಚಿಸುವವರೆಗೂ, ಜೀವನ್ಮುಕ್ತರಾಗಲಾಗುವುದಿಲ್ಲ. ಜೀವನ್ಮುಕ್ತಿಯು ನೀವು ಮಾಡಬಹುದಾದ ಕಡೆಯ ನಿರ್ಧಾರ. ನ ಂ ತ ರ ನಿಮ್ಮಿಂದ ಯಾವ ನಿರ್ಧಾರಗಳನ್ನೂ ಮಾಡಲಾಗುವುದಿಲ್ಲ. ಎಲ್ಲಾ ನಿರ್ಧಾರಗಳನ್ನೂ ಬೇರೆ ಯಾರೋ ಮಾಡುತ್ತಾರೆ. ಜನರು
ಜೀವನ್ಮುಕ್ತಿ - ಒಂದು ಪರಿಚಯ
ಜೀವನ್ಮುಕ್ತಿಯನ್ನು ಒಂದು ನಿವೃತ್ತಿ ಯೋಜನೆಯೆಂದು ತಿಳಿಯುತ್ತಾರೆ. ಇಲ್ಲ, ಅದೊಂದು ಸತತವಾಗಿ ನಡೆಯುವ ಸಂಗತಿ. ನೀವು ಬದಲಾದರೂ, ಒಪ್ಪಿದರೂ, ಎಲ್ಲವೂ ನಿರಂತರವಾಗಿ ಬದಲಾಗುತ್ತಿದೆಯೆಂದು ತಿಳಿಯುತ್ತೀರಿ.
ನೀವು ಏನನ್ನು ನಿಜವೆಂದು ಕರೆಯುತ್ತೀರೋ ಅದು ಒಂದು ಬದಲಾಗುತ್ತಿರುವ ಕನಸೆಂದು ತಿಳಿಯುವ ಸ್ಪಷ್ಟತೆಯನ್ನೇ ನಾನು 'ಮುಕ್ತಿ' ಎನ್ನುವುದು. ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂದು ತಿಳಿದಾಗ, ನಿಮ್ಮೊಳಗೆ ಅದ್ಭುತವಾದ ಅನೇಕ ಸತ್ಯಗಳು ಗೋಚರಿಸುತ್ತವೆ. ನಿಮ್ಮ ಇಡೀ ಪ್ರಪಂಚವೂ ನಿಮ್ಮ ಮನಃ ಶರೀರದ ಅನುಭವವಲ್ಲದೆ ಬೇರೇನೂ ಅಲ್ಲ. ಉದಾಹರಣೆಗೆ, ಈಗ ನಿಮ್ಮ ಪ್ರಪಂಚ ಯಾವುದು ? ಏನನ್ನು ನೋಡುತ್ತೀರೋ, ಹಾಗೂ ನೋಡುವುದರಿಂದ, ಕೇಳುವುದರಿಂದ ಯಾವುದೇ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗುತ್ತವೋ ಅದೇ ಈಗಿನ ನಿಮ್ಮ ಪ್ರಪಂಚ.
ಈಗ ನಾನು ಮಾತನಾಡುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ನೀವು ನೋಡುತ್ತಿರುವುದಕ್ಕೆ ಹಾಗೂ ಕೇಳುತ್ತಿರುವುದಕ್ಕೆ ಪ್ರತಿಯೊಬ್ಬರೂ ನಿಮ್ಮ ಅಂತರಂಗದಲ್ಲಿ ಬೇರೆಯ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದೀರಿ. ಇದೇ ಪ್ರತಿಯೊಬ್ಬರ ಪ್ರಪಂಚ.
ನನ್ನ ಮಾತಿಗೆ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಿರುವುದನ್ನು ನಾನು ನೋಡಬಲ್ಲೆ. ಉದಾಹರಣೆಗೆ,
'ಎಲ್ಲವೂ ಬದಲಾಗುತ್ತಿದ್ದರೆ, ನಾನೇಕೆ ಕೆಲಸವನ್ನು ಮಾಡಬೇಕು ? ನಾನೇಕೆ ಮಲಗಬಾರದು ?' ಎಂದು ಒಬ್ಬರು ಯೋಚಿಸುತ್ತಾರೆ.
ಸೋಮಾರಿತನವನ್ನು ಬಿಡಲು ಸ್ಪಷ್ಟತೆಯು ಅನುವಾಗುತ್ತದೆ
ತಿಳಿಯಿರಿ, ಈ ಸತ್ಯದ ಸ್ಮರಣೆಯಿಂದ ನೀವು ಸುಮ್ಮನೆ ಮಲಗಿಬಿಡಬಹುದೆಂದು ಯೋಚಿಸುವುದಾದರೆ, ಅದನ್ನು ಮಾಡಿ ನೋಡಿ. ನಿಮ್ಮಿಂದ ಕೆಲವೇ ದಿನಗಳಿಗಿಂತ ಹೆಚ್ಚಿಗೆ ಮಲಗಲು ಸಾಧ್ಯವಾಗುವುದಿಲ್ಲ. ಮಲಗಿ ನೋಡಿ ! ಎಷ್ಟು ದಿನಗಳ ಕಾಲ ನಿಮಗೆ ಮಲಗಲು ಸಾಧ್ಯ ?
ನಮಗೆ ಯಾವಾಗಲೂ ಒಂದು ಭಯವಿರುತ್ತದೆ, 'ಈ ಮಹಾ ಸತ್ಯಗಳನ್ನು ಅರ್ಥಮಾಡಿಕೊಂಡರೆ, ನಾನು ಸಮಾಜದಿಂದ ತೊರೆಯಲ್ಪಡಬಹುದು. ನಾನು ಆಫೀಸ್ಗೆ ಹೋಗದಿರಬಹುದು. ನಾನು ನನ್ನ ಕುಟುಂಬವನ್ನು ಗಮನಿಸದೇ ಇರಬಹುದು. ನನ್ನ ಬಿಲ್ಗಳನ್ನು ಯಾರು ಕಟ್ಟುತ್ತಾರೆ ? ನನ್ನ ಕಾರು ಹಾಗೂ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ ?' ಎಂದು.
ಜನರಿಗೆ ಈ ಒಂದು ದೊಡ್ಡ ಸಮಸ್ಯೆ, ದೊಡ್ಡ ಭಯವಿರುತ್ತದೆ. ತಿಳಿಯಿರಿ, ಇದು ನಿಮ್ಮನ್ನು ಸೋಮಾರಿಗಳನ್ನಾಗಿಸುತ್ತದೆ ಎನಿಸಿದರೆ ಸುಮ್ಮನೆ ಮಲಗಿ, ಈ ಅಭಿಪ್ರಾಯಗಳೊಂದಿಗೆ ವಿರಮಿಸಿರಿ. ಎಷ್ಟು ದಿನಗಳ ಕಾಲ ಮಲಗಬಲ್ಲಿರಿ ? ಎಷ್ಟು ದಿನಗಳ ಕಾಲ ನಿದ್ರಿಸುತ್ತೀರೆಂದು ಕೊಂಡಿದ್ದೀರಿ ? ಕೆಲವೇ ದಿನಗಳಿಗಿಂತಲೂ ಹೆಚ್ಚಲ್ಲ ! ನಿಮ್ಮ ಸಹಜ ಶಕ್ತಿಯು ನಿಮ್ಮನ್ನು ಸೋಮಾರಿಯಾಗಿ ಮಲಗಲು ಬಿಡುವುದಿಲ್ಲ.
ಈ ಸತ್ಯಗಳು ನಿಮ್ಮಿಂದ ಅನಾವಶ್ಯಕ ಚಾಂಚಲ್ಯವನ್ನು ಮಾತ್ರ ತೆಗೆಯಬಲ್ಲವು. ಅವು ನಿಮ್ಮನ್ನು ಸೋಮಾರಿಯಾಗಲು ಬಿಡುವುದೇ ಇಲ್ಲ. ಈ ಘನಸತ್ಯಗಳನ್ನು ಮನನ ಮಾಡಿಕೊಂಡಾಗ, ಈಗ ಸದ್ಯದಲ್ಲಿ ನಿಮ್ಮ ಭಾಗವಾಗಿರುವ ಅನವಶ್ಯಕವಾದ ಚಾಂಚಲ್ಯವು ಮಾತ್ರ ಹೋಗುತ್ತದೆ. ಅವಶ್ಯಕವಾದ ಶಕ್ತಿ ಅಥವಾ ಕ್ರಿಯಾಶೀಲತೆಯು ಹೋಗುವುದೇ ಇಲ್ಲ. ನೀವು ಕ್ರಿಯಾಶೀಲರಾಗಿಯೂ, ಚುರುಕಾಗಿಯೂ ಇರುತ್ತೀರಿ. ನಿಮ್ಮ ಕಾರು, ನಿಮ್ಮ ಮನೆ, ನಿಮ್ಮ ಕುಟುಂಬ, ನಿಮ್ಮ ಸಂಬಂಧಗಳು, ನಿಮ್ಮ ಬ್ಯಾಂಕ್ ಉಳಿತಾಯ, ಎಲ್ಲವನ್ನೂ ನೋಡಿಕೊಳ್ಳಲು ಮುಂದುವರೆಸುತ್ತೀರಿ. ಆದರೆ ಒಂದು ವಿಷಯ, ನಿಮ್ಮ ನಿರುತ್ಸಾಹ ಹಾಗೂ ನಿಮ್ಮೊಳಗಿನ ಘರ್ಷಣೆಗಳು ಮಾತ್ರ ಇರುವುದಿಲ್ಲ !
ಆದರೆ, ಕೆಲವು ಬಾರಿ ನೀವು ನಿರುತ್ಸಾಹವನ್ನು ಕಳೆದುಕೊಳ್ಳುತ್ತೀರಿ ! ಏಕೆಂದರೆ, ಅದು ನಿಮ್ಮೊಂದಿಗೆ ಬಹಳ ದಿನಗಳಿಂದಲೂ ಇದ್ದದ್ದು. ಆದ್ದರಿಂದ ಅದಿಲ್ಲದ ಒಂಟಿತನದಿಂದ ಕೊರಗುವಿರಿ ! ವಾಸ್ತವವಾಗಿ, ಸ್ವಲ್ಪಕಾಲದ ನಂತರ, ನಿರುತ್ಸಾಹ, ಕೊರಗುವಿಕೆಗಳು ಬಹಳವಾಗಿ ನಿಮ್ಮಲ್ಲಿ ಸೇರಿಕೊಂಡು ನೆಲೆಸಿ ಬಿಟ್ಟಿರುತ್ತವೆ ! ಒಂದು ವೇಳೆ, ಅಪ್ಪಿತಪ್ಪಿ, ಒಂದು ಸತ್ಸಂಗಕ್ಕೋ, ಧ್ಯಾನ ಕಾರ್ಯಕ್ರಮಕ್ಕೋ ಹೋದರೆ, ಆ ಕೆಲವು ದಿನಗಳಲ್ಲಿ
ನಿರುತ್ಸಾಹ, ಕೊರಗುಗಳಿಲ್ಲದಿದ್ದರೆ, ಜೀವನದಲ್ಲೇನೋ ಕೊರತೆಯಾದಂತೆ ಎನಿಸುತ್ತದೆ!
‘ಏನಾಯಿತು ? ಬೆಳಗಿನಿಂದಲೂ ಎಲ್ಲವೂ ಶಾಂತವಾಗಿ, ಸುಗಮವಾಗಿದೆ. ಇದು ಹೇಗೆ ಸಾಧ್ಯ ? ಓಹ್ ! ನೆನ್ನೆ ಸತ್ಸಂಗಕ್ಕೆ ಹೋಗಿದ್ದೆ ! ಆದ್ದರಿಂದಲೇ ಎಲ್ಲವೂ ಇಷ್ಟು ಶಾಂತವಾಗಿದೆ. ಸರಿ, ಇದರ ಪ್ರಭಾವ ಎರಡು-ಮೂರು ದಿನಗಳಿರುತ್ತದೆ. ಅದಾದ ನಂತರ ಯಥಾ ಪ್ರಕಾರ ಇರುತ್ತೇನೆ. ಸರಿ ಹೋಗುತ್ತೇನೆ’ ಎಂದು ಕೊಳ್ಳುತ್ತೀರಿ. ನಂತರ ನೀವು ನಿರುತ್ಸಾಹ, ಕೊರಗುಗಳು ಮರಳಿ ಬರುವುದನ್ನು ಕಾಯುತ್ತೀರಿ. ಇನ್ನು ಕೆಲವು ದಿನಗಳಲ್ಲಿ ಅದು ಪುನಃ ತಲೆದೋರುವುದೆಂಬುದಾಗಿ ಲೆಕ್ಕ ಹಾಕಿ, ನಿರ್ಧರಿಸಿಬಿಡುವಿರಿ. ಈ ಪರಿಣಾಮವು ದೀರ್ಘಕಾಲದ ಅಥವಾ ನಿಮ್ಮ ಅಸ್ತಿತ್ವದ ಒಂದು ಅಂಶವೇ ಆಗುತ್ತದೆಂದು ನೀವು ನಂಬುವುದಿಲ್ಲ.
ಏನೇನು ಇದೆಯೋ, ಅದೆಲ್ಲಾ ಬದಲಾಗುತ್ತದೆ, ಯಾವುದನ್ನೆಲ್ಲಾ ನಿಜವೆಂದುಕೊಳ್ಳುವಿರೋ ಅದೆಲ್ಲವೂ ಸುಮ್ಮನೆ ಬದಲಾಗುತ್ತಾ ಇದೆ ಎಂಬ ಒಂದು ಸತ್ಯವನ್ನರಿತುಕೊಳ್ಳಿರಿ; ಈ ಸ್ಪಷ್ಟತೆಯು ಎಷ್ಟೋ ಕಷ್ಟಗಳಿಂದ ನಿಮ್ಮನ್ನು ಪಾರುಮಾಡುತ್ತದೆ. ಈ ಕ್ಷಣದಲ್ಲಿ ನಿಮ್ಮಲ್ಲಿ ಅಗಾಧವಾದ ಆಂತರಿಕ ಉಪಶಮನವಾಗುತ್ತದೆ. ಉದಾಹರಣೆಗೆ, ನಿಮ್ಮ ಕನಸಿನಲ್ಲಿ ಒಂದು ಹುಲಿ ಅಥವಾ ಹಾವು ನಿಮ್ಮನ್ನಟ್ಟಿಸಿಕೊಂಡು
ಬರುತ್ತಿದೆ ಎಂದಿಟ್ಟುಕೊಳ್ಳಿರಿ
ಜೀವನ್ಮುಕ್ತಿ - ಒಂದು ಪರಿಚಯ
ಅಥವಾ ನಿಮ್ಮನ್ನು ಕಾರಾಗೃಹದಲ್ಲಿಟ್ಟಿದ್ದಾರೆಂದೋ, ಅಥವಾ ಹತ್ತಿರದ ಪ್ರೀತಿಪಾತ್ರರು ಅಗಲಿದ್ದಾರೆಂದೋ ಊಹಿಸಿಕೊಳ್ಳಿರಿ. ಇದ್ದಕ್ಕಿದ್ದಂತೆ ನಿದ್ರೆಯಿಂದೆಚ್ಚರಗೊಳ್ಳುವಿರಿ. ಆಗ ಎಂತಹ ನೆಮ್ಮದಿಯನ್ನನುಭವಿಸುವಿರೆಂದು ಊಹಿಸಿಕೊಳ್ಳಿರಿ ! ‘ಓ, ದೇವರೇ ! ಇದೆಲ್ಲವೂ ಕನಸೇ ತಾನೆ !’ ಎಂದುಕೊಳ್ಳುತ್ತೀರಿ. ಎಂತಹ ಸಮಾಧಾನವನ್ನನುಭವಿಸುತ್ತೀರಿ ! ಅಂತಹ ತೀವ್ರವಾದ ನೆಮ್ಮದಿ ಅಥವಾ ವಿಶ್ರಾಂತಿ ಅಥವಾ ಆಂತರಿಕ ಉಪಶಮನವು ಈ ಕ್ಷಣದಲ್ಲಿಯೇ ನಿಮ್ಮಲ್ಲಿ ಆಗಬಹುದು. ತಿಳಿಯಿರಿ, ನೀವೀಗ ನಿಮ್ಮ ಜೀವನದಲ್ಲಿ ಏನನ್ನೇ ಅನುಭವಿಸುತ್ತಿದ್ದರೂ, ಅದು ಕೇವಲ ಒಂದು ಕನಸೆಂದು ಯಾರಾದರೂ ತಕ್ಷಣವೇ ಹೇಳಿದರೂ, ಅಥವಾ ನಿಮಗೇ ಅದು ಕೇವಲ ಕನಸೆಂದೆನಿಸಿದರೂ, ಏನಾಗುತ್ತದೆ ? ‘ಓ ದೇವರೇ ! ಎಂತಹ ಸಮಾಧಾನ ! ಒಳಗೆಂpthಹ ಶಮನ !’ ಎಂದುಕೊಳ್ಳುವಿರಿ.
ತಿಳಿಯಿರಿ, ಅದೊಂದು ಕನಸೆಂದು ಹೇಳಲು ಬೇರೊಬ್ಬರ ಅಗತ್ಯವೂ ಇಲ್ಲ. ನೀವೇ ಜ್ಞಾಪಿಸಿಕೊಳ್ಳಬಹುದು; ನೀವಾಗಿಯೇ ಸುತ್ತಲೂ ನಡೆಯುತ್ತಿರುವುದೆಲ್ಲವೂ ಕೇವಲ ಮತ್ತೊಂದು ಕನಸೆಂಬ ಅರಿವಿನ ಸ್ಪಷ್ಟತೆಯಿಂದ ನಿಮ್ಮನ್ನೇ ನೀವು ಉದ್ಧರಿಸಿಕೊಳ್ಳಬಹುದು. ಏನೇನನ್ನು ನಿಜವೆಂದು ಕೊಳ್ಳುವಿರೋ ಅವೆಲ್ಲವೂ ಕೇವಲ ಮತ್ತೊಂದು ಕನಸೇ.
ಮೂರನೆಯ ತಂತ್ರ ಯುಕ್ತಿ - ಎಂದರೆ, ಸ್ಪಷ್ಟತೆ ಅಥವಾ ತಿಳಿವಳಿಕೆ. ಸಕಲವೂ ಒಂದು ಕನಸೆಂದು ಸತತವಾಗಿ
ನೆನಪಿಸಿಕೊಳ್ಳುತ್ತಿರಬಹುದು. ಉದಾಹರಣೆಗೆ, ನೀವು ಕನಸಿನಲ್ಲಿ ಹಣವಂತರಾಗಿ, ದೊಡ್ಡ ಬಂಗಲೆಯನ್ನು ಕೊಳ್ಳುತ್ತಿದ್ದೀರೆಂದಿಟ್ಟುಕೊಳ್ಳೋಣ. ಕೊಂಡ ನಂತರ, ಅದನ್ನು ಒಂದೇ ಸಮನೆ ಸಾರಿಸಿ, ಚೊಕ್ಕಟ ಮಾಡುತ್ತಿರುವಿರಿ. ಅದಾಗಲೇ ಚೊಕ್ಕಟವಾಗಿರುತ್ತದೆ, ಆದಾಗ್ಯೂ ಉತ್ಸಾಹದಿಂದ ನೀವು ಅದನ್ನು ಗುಡಿಸಿ, ಸಾರಿಸುತ್ತೀರಿರುತ್ತೀರಿ. ಅಷ್ಟು ಹೊತ್ತಿಗೆ ಇದ್ದಕ್ಕಿದ್ದಂತೆ ಕನಸಿನಿಂದ ಎಚ್ಚೆತ್ತುಕೊಳ್ಳುವಿರಿ ಆಗೇನಾಗುತ್ತದೆ ?
ನೀವೀಗ ಮಾಡುತ್ತಿರುವುದೂ ಅದನ್ನೇ, ಎದ್ದ ತಕ್ಷಣ ಏನೂ ಉಳಿದಿರುವುದಿಲ್ಲ ! ಈ ಸತ್ಯವನ್ನು ಪುನಃ ಪುನಃ ನೆನಪಿಸಿಕೊಳ್ಳುವುದನ್ನು ನಾನು ಮೂರನೆಯ ತಂತ್ರ, ಯುಕ್ತಿ
- ಎಂದರೆ, ತಿಳಿವಳಿಕೆ ಎನ್ನುವುದು.
ಭಕ್ತಿ
ಇದು ನಾಲ್ಕನೆಯ, ಮುಖ್ಯವಾದ ಹಾಗೂ ಸರ್ವಶ್ರೇಷ್ಠವಾದ ತಂತ್ರ. ಇದು ಶಾಶ್ವತವಾದ ಹಾಗೂ ಬದಲಾಗದ ಪರಮಚೈತನ್ಯಕ್ಕೆ ತೋರುವ ಭಕ್ತಿ. ಅದನ್ನು ದೇವರೆಂದೋ, ಗುರುವಂದೋ, ಪರಮಾತ್ಮನೆಂದೋ, ಯಾವ ಹೆಸರಿನಲ್ಲಿ ಬೇಕಾದರೂ ಕರೆಯಬಹುದು. ಆ ಬದಲಾಗದ ಚೈತನ್ಯದೊಂದಿಗೆ ತೀವ್ರವಾದ ವಿತರ್ಕದ (feeling con-nected) ಭಾವನೆಯನ್ನು ಅನುಭವಿಸುವುದೇ ಭಕ್ತಿ.
ತಿಳಿಯಿರಿ, ಜೀವನ್ಮುಕ್ತರಾಗಿ ಬಾಳಲು ನಾಲ್ಕು ತಂತ್ರಗಳಿವೆ.
ಮೊದಲನೆಯದು ಶಕ್ತಿ - ನಿಮಗೆ ಬದಲಾಯಿಸಲು
ಸಾಧ್ಯವಾದುದ್ದನ್ನು ಬದಲಾಯಿಸಲು ಚೈತನ್ಯವನ್ನು
ವ್ಯಕ್ತಪಡಿಸುವುದು.
ಎರಡನೆಯದು ಬುದ್ಧಿ - ನೀವು ಬದಲಾಯಿಸಬೇಕಾಗಿಲ್ಲದುದನ್ನು ಒಪ್ಪಿಕೊಳ್ಳುವ ಬುದ್ಧಿವಂತಿಕೆಯನ್ನು ವ್ಯಕ್ತಪಡಿಸುವುದು.
ಮೂರನೆಯದು ಯುಕ್ತಿ - ಯಾವುದನ್ನು ನಿಜವೆಂದು ಕರೆಯುವಿರೋ, ಅದನ್ನು ನೀವು ಎಷ್ಟೇ ಬದಲಾಯಿಸಿದರೂ, ಅದು ಮತ್ತೊಂದು ಕನಸೆಂಬ, ಬದಲಾಗುತ್ತಿರುವ ಕನಸೆಂಬ ತಿಳಿವಳಿಕೆಯನ್ನು ಹೊಂದುವುದು.
ನಾಲ್ಕನೆಯದು ಭಕ್ತಿ - ಆ ಪರಮಾತ್ಮನ, ಬದಲಾಗದ ನಿಜಸ್ಥಿತಿಯೊಡನೆ, ಅಥವಾ ಶಾಶ್ವತ ಸತ್ಯದೊಂದಿಗೆ ಗಾಢವಾದ 'ವಿತರ್ಕದ ಭಾವನೆ'. ಪರಮ ಶಾಶ್ವತ ಸತ್ಯದೊಂದಿಗೆ ಗಾಢವಾದ ವಿತರ್ಕದ ಭಾವವನ್ನನುಭವಿಸಿದಾಗ, ನಿಮಗೆ ಒಂದು ಗಾಢವಾದ ಸುರಕ್ಷತೆಯ ಅನುಭವವಾಗುತ್ತದೆ. ಅದು ನಿಮ್ಮಲ್ಲಿ ಒಂದು ಅಗಾಧವಾದ ಸುರಕ್ಷತಾಭಾವವನ್ನುಂಟು ಮಾಡಬಲ್ಲುದು. ನಿಮ್ಮಲ್ಲಿ ಆ ಭಾವವನ್ನು ಅದು ಹೇಗೆ ತರಬಹುದೆಂಬುದನ್ನು ವಿವರಿಸುತ್ತೇನೆ.
ನಿಮ್ಮ ಬಳಿ ಏನೇನಿದೆಯೋ ಮತ್ತು ಏನೇನು ಸುಖಪಡುತ್ತಿರುವಿರೋ ಅದಕ್ಕೆಲ್ಲವೂ ನೀವು ಅರ್ಹರು ಎನ್ನಿಸಿದರೆ, ಅದು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯವು ನಿಮಗಿರುವುದಿಲ್ಲ. ನೀವು ನೆಮ್ಮದಿಯಾಗಿರುತ್ತೀರಿ. ಈ ಕ್ಷಣದಲ್ಲೇ ಪ್ರಾಣ ಹೋದರೂ, ಇಂತಹದೇ ಪರಿಸರದಲ್ಲಿ ಪುನಃ ಜನ್ಮ ತಾಳುವಿರೆಂಬ ಭರವಸೆ ನಿಮಗಿರುತ್ತದೆ. ನಿಮಗೆ ಬೇಕಾಗುವ ಎಲ್ಲಾ ಸೌಲಭ್ಯಗಳೂ ಇರುವಂತಹ ಸ್ಥಳದಲ್ಲಿಯೇ ಹುಟ್ಟುವಿರಿ. ನಿಮಗಿದು ಸ್ಪಷ್ಟವಾಗಿದ್ದರೆ, ಈಗ ನಿಮಗಿರುವ ಸಂಪತ್ತು, ಬುದ್ಧಿ ಮುಂತಾದವು ನಿಮ್ಮಿಂದ ಅಪಹರಿಸಲ್ಪಡುವುದೇ ಇಲ್ಲ.
ಆದರೆ ನಿಮ್ಮ ಸಂಪತ್ತು, ನಿಮ್ಮ ಬುದ್ಧಿ ಇಂತಹ ನಿಮ್ಮಲ್ಲಿರುವುದೆಲ್ಲವೂ ಕೇವಲ ಒದಗಿಬಂದಿವೆ ಎಂದುಕೊಂಡರೆ, ಅವನ್ನು ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ ಎಂಬ ಭಯ ನಿಮಗೆ ಸತತವಾಗಿರುತ್ತದೆ.
ನಿಮ್ಮ ಬಳಿ ಇರುವುದರೊಂದಿಗೆ ನೀವು ಸಂತೋಷಪಡುವುದಿಲ್ಲ. ಉದಾಹರಣೆಗೆ ಕಾರಿನಲ್ಲಿ ಕುಳಿತಾಗ, 'ಒಂದು ಆಕಸ್ಮಿಕ ಅಪಘಾತ ಯಾವಾಗ ಸಂಭವಿಸುತ್ತದೆಯೋ ಯಾರಿಗೆ ಗೊತ್ತು? ಕಾರೇ ಏಕೆ, ನನ್ನ ಜೀವವೇ ಯಾವಾಗ ಹೋಗುತ್ತದೆಯೋ ಯಾರಿಗೆ ಗೊತ್ತು?' ಎಂದು ಯೋಚಿಸುವಿರಿ. ಹೀಗೆ ಯೋಚಿಸಿದಾಗ, ನಿಮ್ಮ ಬಳಿ ಎಲ್ಲವೂ ಇದ್ದಾಗ್ಯೂ ಸುಖಪಡಲಾಗುವುದಿಲ್ಲ. ಅದಕ್ಕೆ ಬದಲಾಗಿ, ವಿರಮಿಸಿ. ಪರಮಾತ್ಮನ
ಜೀವನ್ಮುಕ್ತಿ - ಒಂದು ಪರಿಚಯ
ಜೊತೆಗೂಡಿ ಆಳವಾದ ವಿತರ್ಕದ ಭಾವನೆಯೊಂದಿಗೆ ನಿಶ್ಚಿಂತರಾಗಿರಿ. ಈ ವಿತರ್ಕದ ಭಾವನೆಯು ವಿವಿಧ ಆಯಾಮಗಳಲ್ಲಿ ಸಂಭವಿಸಬಹುದು. ಅದು ಪರಮಾತ್ಮನೊಂದಿಗೆ ನಿಮ್ಮ ಸಂಬಂಧದ ಬೇರೆ ಬೇರೆ ಅಂಶಗಳಲ್ಲಿ ಸಂಭವಿಸಬಹುದು. ನೀವು ಸಾಕಾರಕ್ಕೆ (ಎಂದರೆ ದೇವರ ವಿಗ್ರಹ ಅಥವಾ ಗುರುಗಳು) ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನನುಭವಿಸುತ್ತೀರಿ. ನೀವು ನಿರಾಕಾರ ಚೈತನ್ಯದೊಂದಿಗೆ ವಿತರ್ಕದ ಭಾವನೆಯೊಂದಿಗಿದ್ದರೆ, ಆ ಸಂಬಂಧದ ಒಂದು ಅಂಶವನ್ನನುಭವಿಸುತ್ತೀರಿ. ಬೇರೆ ಬೇರೆ ಜನರು ಬೇರೆ ಬೇರೆ ರೀತಿಗಳಲ್ಲಿ ಸಂಬಂಧವನ್ನು ಅನುಭವಿಸುತ್ತಾರೆ.
ನಿರಾಕಾರವೋ, ಸಾಕಾರವೋ ?
ಜನರು, 'ಸ್ವಾಮೀಜಿ, ಯಾವುದು ಅತ್ಯುತ್ತಮವಾದ ಮಾರ್ಗ ? ನಿರಾಕಾರಕ್ಕೆ ವಿತರ್ಕದ ಭಾವನೆಯಿಂದಿರುವುದೋ (feel connected) ಅಥವಾ ಸಾಕಾರಕ್ಕೆ ವಿತರ್ಕದ ಭಾವನೆಯಿಂದಿರುವುದೋ ?' ಎಂದು ನನ್ನನ್ನು ಕೇಳುತ್ತಾರೆ.
ಅತ್ಯುತ್ತಮ ಎನ್ನುವಂತಹುದೇನೂ ಇಲ್ಲ, ನಿಮ್ಮ ಜೀವನದಲ್ಲಿ ಹೇಗೆ ನಡೆಯುತ್ತದೆಯೋ ಅದೇ ನಿಮಗೆ ಅತ್ಯುತ್ತಮ. ಯಾರಿಗೆ
ಜೀವನ್ಮುಕ್ತಿ - ಒಂದು ಪರಿಚಯ
ಜೀವಂತ ರೂಪಕ್ಕೆ ವಿತರ್ಕದ ಭಾವನೆ ಹೊಂದಲು ಸಾಧ್ಯವಿಲ್ಲವೋ ಅವರು ನಿರಾಕಾರ ಶಕ್ತಿಗೆ ವಿತರ್ಕದಭಾವನೆ ಹೊಂದಿಸಿಕೊಳ್ಳಬಹುದು. ಅಹಂಕಾರಿಯಾದವನಿಗೆ ಸಾಕಾರದೊಂದಿಗೆ ಸಂಬಂಧ ಉಂಟಾಗುವುದಿಲ್ಲ; ಅದು ಆತನಿಗೆ ತೊಂದರೆ ಯಾಗುತ್ತದೆ. ಖಾಲಿಯಾದ ಆಕಾಶಕ್ಕೆ ವಿತರ್ಕದ ಭಾವನೆ ಹೊಂದಿಸಿಕೊಳ್ಳುವುದು ಬಹಳ ಸುಲಭ. ನಿಮಗೆ ಬೇಕಾದುದನ್ನೆಲ್ಲವನ್ನೂ ಮಾಡಿ, ಅದರ ಹೊಣೆಯನ್ನು ಬರಿದಾದ ಆಕಾಶದ ಮೇಲೆ ಹೊರಿಸಬಹುದು ! ನಿಮ್ಮನ್ನು ಕೇಳುವವರಾರೂ ಇರುವುದಿಲ್ಲ. ಆದರೆ, ಸಜೀವ ಸಾಕಾರನಾದ ನನ್ನೊಡನೆ ನೀವು ಆ ಆಟವನ್ನಾಡಲು ಆಗುವುದಿಲ್ಲ. ನಾನು ತಕ್ಷಣವೇ ಪ್ರಶ್ನಿಸುತ್ತೇನೆ. 'ಏ, ನೀನು ನಿನ್ನಾಟವನ್ನಾಡಿ, ನನ್ನನ್ನು ದೂಷಿಸುತ್ತಿದ್ದೀಯೆ !' ಎಂದು ನಿಮಗೆ ಹೇಳುತ್ತೇನೆ. ಸಾಕಾರಕ್ಕೆ ವಿತರ್ಕದ ಭಾವನೆಯನ್ನು ಹೊಂದಿದಾಗ, ಆ ಕ್ಷಣವೇ ಪರಿವರ್ತನೆಗೊಳ್ಳಬಹುದು. ಈ ಸಾಮರ್ಥ್ಯವಿದ್ದವರು ಸಾಕಾರಕ್ಕೆ ಸಂಬಂಧವನ್ನು ಹೊಂದುವಂತಾಗಲಿ.
ಯಾರ ಅಹಂಕಾರಕ್ಕೆ ಈ ಪರಿವರ್ತನಾ ಸಾಮರ್ಥ್ಯವಿಲ್ಲವೋ, ಅಂತಹ ಮನೋಭಾವವಿಲ್ಲವೋ, ಅಂತಹವರು ನಿರಾಕಾರಕ್ಕಾದರೂ ವಿತರ್ಕದ ಭಾವನೆ ಹೊಂದಲಿ.
ಅದೆಲ್ಲವೂ ಆ ವ್ಯಕ್ತಿಯ ಮನೋವ್ಯವಸ್ಥೆಯ ಮೇಲೆಯೂ, ವ್ಯಕ್ತಿಯ ಜೀವನ ಶೈಲಿಯ ಮೇಲೆಯೂ ಆಧಾರವಾಗುತ್ತದೆ. ಹೇಗೋ, ಶಾಶ್ವತವಾದ ಪರಮ ಸತ್ಯಕ್ಕೆ ವಿತರ್ಕದ ಭಾವನೆಯುಂಟಾಗಿ ಆ
ಜೀವನ್ಮುಕ್ತಿ - ಒಂದು ಪರಿಚಯ
ಭಕ್ತಿಯುಂಟಾಗಲಾರಂಭಿಸಿದರೆ, ಆ ಕೂಡಲೇ ನಿಮ್ಮ ಸುತ್ತಲೂ ಅಗಾಧವಾದ ಸುರಕ್ಷಿತ ಭಾವನೆಯುಂಟಾಗುವುದನ್ನು ಕಾಣುತ್ತೀರಿ.
ತಿಳಿದುಕೊಳ್ಳಿರಿ, ನಾನೀಗ ಹೇಳುತ್ತಿರುವುದು ಒಂದು ತಂತ್ರವನ್ನು; ಅದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿರಿ. ಅದು ಸಾಧ್ಯ! ಈ ತಂತ್ರವೇನೆಂದರೆ, ಪರಮಾತ್ಮನಲ್ಲಿ ಗಾಢವಾದ ಭಕ್ತಿಯನ್ನು ಅನುಭವಿಸುವುದು. ಅದರಿಂದ ಅಗಾಧವಾದ ಸುರಕ್ಷಿತ ಭಾವನೆಯು ನಿಮ್ಮಲ್ಲಿ ಉಂಟಾಗಲಾರಂಭಿಸುತ್ತದೆ.
ಒಮ್ಮೆ ಇದಾಯಿತೆಂದರೆ, ನಿಮ್ಮ ಜೀವನದಲ್ಲಿ ಏನೇ ನಡೆದರೂ ಅದಕ್ಕೆ ನೀವು ಅರ್ಹರೆಂದು ನಿಮಗೆ ತಿಳಿಯುತ್ತದೆ. ಈ ಕ್ಷಣವೇ ಪ್ರಾಣ ಹೋದರೂ, ಈಗ ನಿಮಗಿರುವ ಎಲ್ಲಾ ಸೌಲಭ್ಯಗಳೂ ದೊರೆಯುವಂತಹ, ನಿಮ್ಮ ಸುತ್ತಲೂ ಈ ವಸ್ತುಗಳೆಲ್ಲವೂ ಪುನಃ ಇರುವಂತಹ, ಈ ವಸ್ತುಗಳು ಖಚಿತವಾಗಿರುವಂತಹ, ಸ್ಥಳದಲ್ಲಿ ಪುನರ್ಜನ್ಮವಾಗುತ್ತದೆ. ಈ ಭಕ್ತಿಯಿಂದ ಮಾತ್ರವೇ ಮರಣಭಯವನ್ನು ಜಯಿಸಬಹುದು. ಅದುವರೆವಿಗೂ ಮರಣಭಯವನ್ನು ಜಯಿಸಲಾಗುವುದೇ ಇಲ್ಲ.
ಸಾವಿನ ಭಯವನ್ನು ಜಯಿಸಲು ಭಕ್ತಿಯು ನೇರವಾದ ಮಾರ್ಗ. ಹಾಗಲ್ಲದಿದ್ದರೆ, ನಿಮಗೆ ಯಾವಾಗಲೂ ಮರಣ ಭಯವಿರುತ್ತದೆ. 'ನಾನು ಸತ್ತಾಗ ಏನಾಗುತ್ತದೆ ? ನನ್ನ ಮನೆಯು ಇಲ್ಲವಾಗುತ್ತದೆ. ನಾನೆಲ್ಲಿ ಹುಟ್ಟುತ್ತೇನೆಯೋ ಯಾರು ಬಲ್ಲರು ? ಎಲ್ಲೋ ಕೊಳಚೆ ಪ್ರದೇಶದಲ್ಲಿ ಹುಟ್ಟಬಹುದು ! ಆಗ ಒಂದು ಮನೆ ಕಟ್ಟಲು ಅದೆಷ್ಟು ಕಾಲ ಬೇಕಾಗುತ್ತದೆಯೋ ಏನೋ....' ಎಂದೆಲ್ಲಾ ಯೋಚಿಸುವಿರಿ.
ಜೀವನ್ಮುಕ್ತಿಯ ಸಾರ
ನಾನು ಪ್ರಸ್ತಾಪಿಸುತ್ತಿರುವುದರ ಸಾರವನ್ನೀಗ ಹೇಳುತ್ತೇನೆ.
ಮೊದಲನೆಯದಾಗಿ, ಜೀವನ್ಮುಕ್ತರಾಗಿ ಬಾಳುವುದೆಂದರೆ 'ಘರ್ಷಣಾರಹಿತ' ಜೀವನವನ್ನು ನಡೆಸುವುದು. ತನು, ಮನ ಹಾಗೂ ನೀವು ಅನುಭವಿಸುವ ಪ್ರಪಂಚದಲ್ಲಿ ಘರ್ಷಣಾರಹಿತ ಬಾಳ್ವೆಯನ್ನು ನಡೆಸುವುದನ್ನೇ ನಾನು ಜೀವನ್ಮುಕ್ತಿ ಎನ್ನುವುದು. ಜೀವನ್ಮುಕ್ತಿ ಎಂಬುದಕ್ಕೆ ಇದೇ ಅರ್ಥ ನಿರೂಪಣೆ.
ಎರಡನೆಯದಾಗಿ, ಜೀವನ್ಮುಕ್ತಿಯನ್ನು ಬಾಳುವ ನಾಲ್ಕು ತಂತ್ರಗಳು
ಮೊದಲನೆಯದು : ನಿಮಗೆ ಸಾಧ್ಯವಾದದ್ದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸಿರಿ.
ಎರಡನೆಯದಾಗಿ : ನೀವು ಬದಲಾಯಿಸಬೇಕಾಗಿಲ್ಲದುದನ್ನು ಒಪ್ಪಿಕೊಳ್ಳಲು ಬುದ್ಧಿಯನ್ನುಪಯೋಗಿಸಿರಿ.
ಮೂರನೆಯದಾಗಿ : ನೀವೆಷ್ಟೇ ಬದಲಾಯಿಸಿದರೂ, ಪ್ರಪಂಚವೆಲ್ಲವೂ ಸತತವಾಗಿ ಬದಲಾಗುತ್ತಿರುವ ಮತ್ತೊಂದು ಕನಸೆಂದು ತಿಳಿಯುವ ಯುಕ್ತಿಯನ್ನು ಬೆಳೆಸಿಕೊಳ್ಳಿರಿ. ನೀವು
ಜೀವನ್ಮುಕ್ತಿ – ಒಂದು ಪರಿಚಯ
ನಿಜವೆಂದು ತಿಳಿಯುವುದಲ್ಲವೂ ಮತ್ತೊಂದು ಬದಲಾಗುತ್ತಿರುವ ಕನಸು.
ನಾಲ್ಕನೆಯ ಮತ್ತು ಪರಮ ಶ್ರೇಷ್ಠವಾದ ತಂತ್ರ : ಶಾಶ್ವತ ಸತ್ಯದೊಂದಿಗೆ ಗಾಢವಾದ ವಿತರ್ಕದ ಭಾವನೆಯಾದ ಭಕ್ತಿಯನ್ನು ವೃದ್ಧಿಸಿಕೊಳ್ಳಿರಿ. ವಾಸ್ತವವಾಗಿ, ನೀವು ಅನುಭವಿಸುವುದೆಲ್ಲವೂ ಬದಲಾಗುತ್ತಿರುವ ಒಂದು ಕನಸೆಂಬುದನ್ನು ಅರಿತರೆ, ನಿಮ್ಮ ಸಂಪೂರ್ಣ ಪ್ರಜ್ಞೆಯು ತಕ್ಷಣ ಹಾಗೂ ತಾನಾಗಿಯೇ ಆ ಶಾಶ್ವತ ಸತ್ಯದೆಡೆಗೆ ಹರಿಯುತ್ತದೆ. ಅದನ್ನೇ ನಾನು ಭಕ್ತಿ ಎನ್ನುವುದು.
ಭಕ್ತಿಯನ್ನು ನೀವು ಸೃಷ್ಟಿಸಬೇಕಾದ ಅಗತ್ಯವಿಲ್ಲ, ಕೇವಲ ಇವೆಲ್ಲವೂ ಒಂದು ಕನಸೆಂಬುದನ್ನು ನೆನಪಿಸಿಕೊಳ್ಳಿರಿ. ನಿಮ್ಮ ಪ್ರಜ್ಞೆಯೆಲ್ಲವೂ ಬದಲಾಗದ ಆ ಪರಮ ಸತ್ಯದೆಡೆಗೆ ಪ್ರವಹಿಸಲಾರಂಭಿಸುತ್ತದೆ. ಅದನ್ನೇ ನಾನು ಭಕ್ತಿ ಎನ್ನುವುದು.
ಈ ನಾಲ್ಕನ್ನೂ ಅಳವಡಿಸಿಕೊಂಡು ಬಾಳಿದಾಗ, ನೀವು ಜೀವನ್ಮುಕ್ತರಾಗಿ ಬಾಳುವಿರಿ. ತಿಳಿಯಿರಿ, ಇದೇ ಜೀವನ್ಮುಕ್ತಿಯ ಸಾರ. ಈ ನಾಲ್ಕು ತಂತ್ರಗಳನ್ನೂ ಅಭ್ಯಾಸಮಾಡಿರಿ. ಸರಳವಾದ ಪ್ರಾರಂಭವಾದರೂ ತಪ್ಪೇನಿಲ್ಲ. ಸುಮ್ಮನೆ ಪ್ರಾರಂಭಿಸಿರಿ ! ಎಲ್ಲಾ ಮಹತ್ಸಾಧನೆಗಳೂ ಸರಳವಾಗಿಯೇ ಪ್ರಾರಂಭವಾದದ್ದು. 5000 ಮೈಲುಗಳ ಪ್ರಯಾಣವಾದರೂ, 10,000 ಮೈಲುಗಳ ಪ್ರಯಾಣವಾದರೂ, ಅದು ಪ್ರಾರಂಭವಾಗುವುದು ಒಂದು ಹೆಜ್ಜೆಯಿಂದಲೇ.
ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು !
ನೀವೆಲ್ಲರೂ ಜೀವನ್ಮುಕ್ತಿಯನ್ನು ಸಾಧಿಸಿ, ಬಾಳಿ, ಪಸರಿಸುವಂತಾಗಲಿ !
ನೀವೆಲ್ಲರೂ ಜೀವನ್ಮುಕ್ತರಾಗಿ ಬಾಳುವಂತಾಗಲಿ !