KAILASA Library/ಲಿವಿಂಗ್ ಎನ್‌ಲೈಟೆನ್‌ಮೆಂಟ್ - ಒಂದು ಪರಿಚಯ (Living Enlightenment - an Introduction)/ಪರಮಹಂಸ ನಿತ್ಯಾನಂದರ ವಿಷಯವಾಗಿSign in
ಲಿವಿಂಗ್ ಎನ್‌ಲೈಟೆನ್‌ಮೆಂಟ್ - ಒಂದು ಪರಿಚಯ (Living Enlightenment - an Introduction)

ಪರಮಹಂಸ ನಿತ್ಯಾನಂದರ ವಿಷಯವಾಗಿ

This text was machine-transcribed from the printed book and may contain errors. Select the words and choose “Report a mistake”.

ಪರಮಹಂಸ ನಿತ್ಯಾನಂದ

ಪರಮಹಂಸ ನಿತ್ಯಾನಂದರು ಇಂದೂ ನಮ್ಮೊಂದಿಗಿರುವ ಒಬ್ಬ ಜ್ಞಾನಸದ್ಗುರುಗಳು. ದೈನಂದಿನ ಒತ್ತಡದಿಂದ ಹಿಡಿದು ಜೀವನ್ಮುಕ್ತಿಯಷ್ಟು ಗಹನವಾದ ಅನ್ವೇಷಣೆಯವರೆಗೆ ಎಲ್ಲದಕ್ಕೂ ಅವರು ಪರಿಹಾರಗಳನ್ನು ನೀಡುತ್ತಾರೆ. ಅವರ ವಿಶ್ವಾಸಾರ್ಹತೆ, ವಿಶಾಲವಾದ ಆಕರ್ಷಿಸುವ ಗುಣ, ಹಾಸ್ಯಪ್ರವೃತ್ತಿ, ಹಾಗೂ ವೈದಿಕ ಜ್ಞಾನವನ್ನು ವ್ಯವಹಾರ್ಯವಾಗುವಂತೆಯೂ, ಸಂತೋಷಪಡುವಂತೆಯೂ ಮಾಡುವ ಸಾಮರ್ಥ್ಯಗಳೇ ಅವರ ಬೋಧನೆಗಳನ್ನು ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಭಾಷೆ, ವಯಸ್ಸು ಹಾಗೂ ಲಿಂಗಗಳ ಎಲ್ಲೆಗಳನ್ನು ದಾಟಿ ವಿಶ್ವದಾದ್ಯಂತ ತಲುಪುವಂತೆ ಮಾಡಿದೆ.

ನಿತ್ಯಾನಂದರ 600 ಕ್ಕೂ ಹೆಚ್ಚು ಉಪನ್ಯಾಸಗಳು http:// www.youtube.com/lifeblissfoundation ನಲ್ಲಿ ಲಭ್ಯವಿದೆ. ಇದರಲ್ಲಿ ಒಂದು ದಶಲಕ್ಷಕ್ಕೂ ಮಿಗಿಲಾದ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟ ಗುರುಗಳು.

ನಿತ್ಯಾನಂದ ಧ್ಯಾನಪೀಠದ ಬಗ್ಗೆ

ನಿತ್ಯಾನಂದರ ಧ್ಯಾನಪೀಠವು, ಜಗತ್ತಿನಾದ್ಯಂತ ಧ್ಯಾನ ಹಾಗೂ ಆಂತರಿಕ ಆನಂದವನ್ನು ಹರಡಲು ಸ್ಥಾಪಿಸಲಾಗಿರುವ ಒಂದು ಆಂದೋಳನ. ಈ ಸಂಸ್ಥೆಯು ವಿಶ್ವದಾದ್ಯಂತ ಸಾವಿರಾರು ಕೇಂದ್ರಗಳನ್ನು ಹೊಂದಿದೆ. ಈ ಸಂಸ್ಥೆಯು ನೀಡುತ್ತಿರುವ ಸೇವೆಗಳಲ್ಲಿ; ಧ್ಯಾನ, ಯೋಗ, ಸಂಸ್ಥೆಗಳ ಮುಖಂಡತ್ವದ ಕಾರ್ಯಕ್ರಮಗಳು, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಪದ್ಧತಿಯ ಮೂಲಕ ಉಚಿತ ಚಿಕಿತ್ಸೆ, ಯುವಕರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗಳಿಗೆ ಪ್ರೋತ್ಸಾಹ, ಸತ್ಸಂಗಗಳು, ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ನೇತ್ರ ಶಸ್ತ್ರ ಚಿಕಿತ್ಸೆಗಳು, ಜಗತ್ತಿನಾದ್ಯಂತ ಎಲ್ಲಾ ಆಶ್ರಮಗಳಲ್ಲಿಯೂ ಉಚಿತ ಭೋಜನ, ಆಶ್ರಮದ ಗುರುಕುಲದಲ್ಲಿ ಮಕ್ಕಳಿಗೆ ಸಮಗ್ರ ಶಿಕ್ಷಣ ಹಾಗೂ ವಿಶೇಷವಾಗಿ ನಿರೂಪಿಸಲ್ಪಟ್ಟ ಧ್ಯಾನ ಕಾರ್ಯಕ್ರಮಗಳು ಸೇರಿವೆ.

ಈ ಸಂಸ್ಥೆಯು ವೈಯಕ್ತಿಕ ಪ್ರಜ್ಞೆಯನ್ನು ವರ್ಧಿಸುವ ಮೂಲಕ ಮನುಕುಲದ ಪ್ರಜ್ಞೆಯನ್ನು ವರ್ಧಿಸುವ ಧ್ವೀಯವನ್ನು ಹೊಂದಿದೆ. ಇದಕ್ಕಾಗಿ, ನಿತ್ಯಾನಂದ ಧ್ಯಾನಪೀಠವು ಸುಮಾರು ೧೦೦ ಮಿಲಿಯನ್ ಜನರನ್ನು ನಿತ್ಯ ಧ್ಯಾನ ಎಂಬ ಧ್ಯಾನಕ್ಕೆ ದೀಕ್ಷೆಯನ್ನೂ, ೧೦೦,೦೦೦ ಜನರನ್ನು ಜೀವನ್ಮುಕ್ತಿಗೆ ದೀಕ್ಷೆಯನ್ನು ನೀಡುವ ಧ್ವೀಯವನ್ನು ಹೊಂದಿದೆ.

ನಿತ್ಯಾನಂದ ಧ್ಯಾನಪೀಠವು ನೀಡುತ್ತಿರುವ ಕಾರ್ಯಕ್ರಮಗಳು

ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 1 - ಆನಂದ ಸ್ಫುರಣ ಧ್ಯಾನ ಕಾರ್ಯಕ್ರಮ

(LBP Level 1 - ASP)

  • ಚೈತನ್ಯಪೂರಿತರಾಗಿರಿ

ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಧಾನ ಚಕ್ರಗಳು ಅಥವಾ ಸೂಕ್ಷ್ಮಶಕ್ತಿಕೇಂದ್ರಗಳನ್ನು ಚೈತನ್ಯಗೊಳಿಸುವ ಚಕ್ರಾಧಾರಿತ ಧ್ಯಾನ ಕಾರ್ಯಕ್ರಮ. ದುರಾಸೆ, ಚಿಂತೆ, ಗಮನದ ಅವಶ್ಯಕತೆ, ಒತ್ತಡ, ಅಸೂಯೆ, ಅಹಂಕಾರ ಹಾಗೂ ಅತೃಪ್ತಿಗಳಂತಹ ಭಾವನೆಗಳಿಗೆ ಸೂಕ್ತವಾದ ಬೌದ್ಧಿಕ ಹಾಗೂ ಅನುಭವಾತ್ಮಕವಾದ ತಿಳುವಳಿಕೆಯನ್ನು ಇದು ನೀಡುತ್ತದೆ. ಭೌತಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪ್ರಭಾವವನ್ನುಂಟುಮಾಡುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಸಹಜ ಆನಂದವನ್ನು ಅನುಭವಿಸಲು ಖಚಿತವಾದ ಜೀವನಪರಿಹಾರ. ಯಾವುದೇ ಒಂದು ನಿರ್ದಿಷ್ಟವಾದ ಭಾವನೆಯಿಂದ ಮುಕ್ತರಾದಾಗ ಒಂದು ಹೊಸ ಪ್ರಪಂಚದ, ಒಂದು ಹೊಸ ಶಕ್ತಿಯ ಅನುಭವವಾಗುತ್ತದೆ. ಇದು ಪ್ರಪಂಚದ ಎಲ್ಲೆಡೆಯಲ್ಲಿಯೂ ಲಕ್ಷಾಂತರ ಜನರಲ್ಲಿ ಅನುಭವವಾದ ಬಹಳ ಪರಿಣಾಮಕಾರಿಯಾದ ಕಾರ್ಯಾಗಾರ.

ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 2 - ನಿತ್ಯಾನಂದ ಸ್ಫುರಣ

ಜೀವನ್ಮುಕ್ತಿ - ಒಂದು ಪರಿಚಯ

ಧ್ಯಾನ ಕಾರ್ಯಕ್ರಮ

(LBP Level 2 - NSP)

  • ಮರಣದ ಬಗ್ಗೆ ಸಂಪೂರ್ಣ ಸ್ಪಷ್ಟತೆ

ಮರಣದ ಕ್ರಿಯೆಯ ಬಗ್ಗೆ ಸಂಪೂರ್ಣ ಸ್ಪಷ್ಟತೆಯನ್ನು ನೀಡುವುದರ ಮೂಲಕ ಜೀವಿಸುವ ಕಲೆಯನ್ನು ತೋರಿಸುವಂತಹ ಒಂದು ಧ್ಯಾನ ಕಾರ್ಯಕ್ರಮ. ಈ ಕಾರ್ಯಕ್ರಮದಿಂದ, ಅಂತಿಮ ಭಯವಾದ ಮರಣಭಯದಿಂದಲೇ ಹುಟ್ಟಿಕೊಂಡು ನಿಮ್ಮಲ್ಲಿ ಪ್ರಜ್ಞಾರಹಿತವಾಗಿ, ಆಳವಾಗಿ ಬೇರೂರಿರುವ ತಪ್ಪಿತಸ್ಥ ಭಾವನೆ, ನೋವು-ನಲಿವುಗಳಂತಹ ಭಾವನೆಗಳಿಂದ ಬಿಡುಗಡೆ ಹೊಂದಬಹುದು. ಸ್ವಾಭಾವಿಕ ಬುದ್ಧಿವಂತಿಕೆ ಮತ್ತು ಸ್ವಯಂಪ್ರೇರಿತ ಉಲ್ಲಾಸದಿಂದ ನಡೆಸಬಹುದಾದ ಒಂದು ಹೊಸ ಜೀವನಕ್ಕೆ ಇದು ದಾರಿದೀಪವಾಗಿದೆ.

ಇನ್ನರ್ ಅವೇಕನಿಂಗ್

ಇನ್ನರ್ ಅವೇಕನಿಂಗ್ (ಅರ್ಥಾತ್ ಆಂತರಿಕ ಜಾಗೃತಿ) ತೀವ್ರವಾಗಿ ಪರಿವರ್ತಿಸಬಲ್ಲ ೨೧ ದಿನಗಳ ಒಂದು ಬೃಹತ್ ಕಾರ್ಯಕ್ರಮ. 'ಇನ್ನರ್ ಅವೇಕನಿಂಗ್' ಕಾರ್ಯಕ್ರಮವನ್ನು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜೀವನ್ಮುಕ್ತಿಯ ಎಲ್ಲಾ ಅಂಶಗಳೂ ಪುನರುತ್ಪಾದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಐಹಿಕದಿಂದ ದೈವತ್ವದೆಡೆಗೆ ನಿಮ್ಮನ್ನು ಕೊಂಡೊಯ್ದು ಮತ್ತೆ ಪೂರ್ವಸ್ಥಿತಿಗೆ ಬರಲು ಸಾಧ್ಯವಿಲ್ಲದಂತಹ ಒಂದು ರಸವಿದ್ಯೆಯನ್ನು ಇದು ಉಂಟುಮಾಡುತ್ತದೆ.

ಲೈಫ್ ಬ್ಲಿಸ್‌ ಇಂಜಿನಿಯರಿಂಗ್‌ (LBE)

ಒಬ್ಬ ಜ್ಞಾನಿಯ ಸನ್ನಿಧಿಯಲ್ಲಿದ್ದು ತೀವ್ರವಾದ ಹಾಗೂ ಪರಿವರ್ತನ ಪ್ರಭಾವವನ್ನು ಅನುಭವಿಸಲು, ಬೆಂಗಳೂರಿನ ಆಶ್ರಮದಲ್ಲಿ ನಡೆಯುವ 90 ದಿನಗಳ ಒಂದು ವಸತಿಯುತ ಕಾರ್ಯಕ್ರಮ. ಇದು ಯೋಗ ಹಾಗೂ ಧ್ಯಾನಗಳ ಮೂಲಕ ನಿಮ್ಮನ್ನು ನಿಮ್ಮ ಅಸ್ತಿತ್ವದ ಅಂತರಾಳಕ್ಕೆ ಕೊಂಡೊಯ್ಯುತ್ತದೆ ಮತ್ತು ನಿಮ್ಮ ನೈಜ ಸಂಪೂರ್ಣ ಸಾಮರ್ಥ್ಯತೆಯು ಜಾಗೃತವಾಗಲು ಸಹಕರಿಸುತ್ತದೆ. ನಿಮ್ಮ ದೇಹ ಮನಸ್ಸುಗಳು ಜೀವನ್ಮುಕ್ತಿಯಿಂದ ಬಾಳಲು, ಜೀವಂತ ಜ್ಞಾನಿಗಳಿಂದ ನೇರವಾಗಿ ಕಲಿಯಲು ಜೀವಮಾನದಲ್ಲೇ ಇದೊಂದು ಅದ್ಭುತ ಅವಕಾಶ.

ಕಲ್ಪತರು

ಒಂದು ದಿನದ ಈ ಧ್ಯಾನ ಕಾರ್ಯಕ್ರಮವು ಜೀವನ್ಮುಕ್ತಿಯ ಬೀಜವನ್ನು ನಿಮ್ಮಲ್ಲಿ ಬಿತ್ತುತ್ತದೆ. ಈ ಕಾರ್ಯಕ್ರಮವು ನಿಮ್ಮ ಕಾರ್ಯಗಳನ್ನು ನಿಮ್ಮ ಉದ್ದೇಶಗಳೊಂದಿಗೆ ಸರಿಹೊಂದಿಸಿ ನಡೆಸುವ ಚೈತನ್ಯವನ್ನು ನೀಡಿ, ಹೊರಜಗತ್ತಿನ ಯಶಸ್ಸು ಹಾಗೂ ಆಂತರಿಕ ಆನಂದವನ್ನು ಪಡೆಯಲು ನಿಮಗೆ ಅನುವು ಮಾಡಿ ಕೊಡುತ್ತದೆ. ನಿಮ್ಮಲ್ಲಿ ಜೀವನ್ಮುಕ್ತಿಯ ಅಂಶಗಳಾದ ಶಕ್ತಿ, ಬುದ್ಧಿ, ಯುಕ್ತಿ, ಭಕ್ತಿಗಳ ಬೀಜಗಳನ್ನು ಬಿತ್ತುತ್ತದೆ.

ನಮ್ಮನ್ನು ಸಂಪರ್ಕಿಸಲು:

INDIA:

Bengaluru, Karnataka

(Spiritual headquarters and Nithyananda Vedic Temple) Nithyananda Dhyanapeetam, Nithyanandapuri, Off Mysore Road, Bidadi, Bengaluru - 562 109 Karnataka, INDIA Ph.: +91 98801 92492 / +91 97422 03311 / 94810 28155 Email: [email protected] URL:www.nithyananda.org

USA: Los Angeles Life Bliss Foundation 9720 Central Avenue, Montclair, CA 91763. USA Ph.: +1 909 625 1400 Email: [email protected], [email protected] URL: www.lifeblissfoundation.org

MALAYSIA: Kuala Lumpur 14, Jalan Desa Gombak 5, Taman Desa Gombak

53000 KL, MALAYSIA
Ph.: +601 78861644 / +601 22350567
Email: [email protected],
[email protected]
URL: www.mynithyananda.com

ಇನ್ನೂ ಹೆಚ್ಚಿನ ವಿಷಯಗಳಿಗಾಗಿ. www.nithyanandagalleria.com ಗೆ ಭೇಟಿ ನೀಡಿ. E-mail: [email protected]

ನಿತ್ಯಾನಂದರ 600 ಕ್ಕೂ ಹೆಚ್ಚು ಉಪನ್ಯಾಸಗಳು http:// www.youtube.com/lifeblissfoundation ನಲ್ಲಿ ಲಭ್ಯವಿದೆ.

ಜೀವನ್ಮುಕ್ತಿ

ಒಂದು ಪರಿಚಯ

'ಪ್ರತಿಯೊಬ್ಬ ಮಾನವನಲ್ಲಿಯೂ ಅಸಾಧಾರಣ ಶಕ್ತಿಯು ಅಡಗಿದೆ. ಅದನ್ನು ಜಾಗೃತಗೊಳಿಸಿದರೆ, ಅದು ದೇಹ-ಮನಸ್ಸುಗಳನ್ನು ಮೀರಿದ ಬಹಳ ಉನ್ನತವಾದ ಪ್ರಜ್ಞಾಸ್ತರಕ್ಕೆ ನಿಮ್ಮನ್ನು ಒಯ್ಯುತ್ತದೆ. ಈ ಉನ್ನತ ಪ್ರಜ್ಞೆಯ ಅನುಭವವು ನಿಮ್ಮ ನಿಜ ಸಾಮರ್ಥ್ಯವನ್ನು ವಾಸ್ತವೀಕರಿಸುತ್ತದೆ. ಇದೇ ಮಾನವ ಜೀವನದ ಪರಮೋದ್ದೇಶ - ಜೀವನ್ಮುಕ್ತಿಯ ಪರಮಸುಖವನ್ನು ಸವಿಯುವುದು.'

– ಪರಮಹಂಸ ನಿತ್ಯಾನಂದ 21ನೇ ಶತಮಾನದಲ್ಲಿ ನಮ್ಮೊಂದಿಗಿರುವ ಜ್ಞಾನಿಗಳು

ಗ್ರಂಥಕರ್ತರ ಬಗ್ಗೆ

ಪರಮಹಂಸ ನಿತ್ಯಾನಂದರು 21ನೇ ಶತಮಾನದಲ್ಲಿ ನಮ್ಮೊಂದಿಗಿರುವ ಜ್ಞಾನಸದ್ಗುರುಗಳು. ಅವರ ಬೋಧನೆಗಳು ಮಾನವನು ತನ್ನ ನಿಜ ಸಾಮರ್ಥ್ಯವನ್ನು ಅರಿತುಕೊಳ್ಳಲು - ಅಂದರೆ ಮಾನವನಿಂದ ದೇವನಾಗಲು, ಸಾಧನಗಳಾದ ಧ್ಯಾನ, ಯೋಗ ಮತ್ತು ಸೇವೆಗಳನ್ನು ಒಳಗೊಂಡಿವೆ. ನಿತ್ಯಾನಂದ ಸಂಸ್ಥೆಯು ಪ್ರಪಂಚದಾದ್ಯಂತವೂ ನಿತ್ಯ ಆನಂದ - 'ನಿತ್ಯಾನಂದ'ದ ಸಂದೇಶವನ್ನು ಸಾರುವ ಮೂಲಕ ಪ್ರಜ್ಞಾವಂತ ಮನುಕುಲವನ್ನು ನಿರ್ಮಿಸುವ ಧ್ವೇಯವನ್ನು ಹೊಂದಿದೆ.

Ebook ISBN: 979-8-88572-718-1 Nithyananda Publishers

Barcode

MRP in India only: Rs 10