ಹಾಸ್ಯ ಧ್ಯಾನ
This text was machine-transcribed from the printed book and may contain errors. Select the words and choose “Report a mistake”.
ತಂತ್ರದ ವಿಚಾರ
ಎಷ್ಟು ಸಾರಿ ನೀವು ನಗುತ್ತೀರಿ? ನಾವು ನಗುವಾಗ, ನಾವು ಒಂದು ಮಹತ್ತರವಾದ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದೇವೆನ್ನುವ ಪರಿಜ್ಞಾನವೇ ನಮಗಿರುವುದಿಲ್ಲ! ನಗು ಎನ್ನುವುದು ನಿಮ್ಮ ಮೂಲ ಅಸ್ತಿತ್ವದೊಡನೆ ಸೇರಿಸುವ ಬಹಳ ನಿಕಟವಾದ ದಾರಿ. ಅಷ್ಟು ಸುಲಭವಾದದ್ದು, ಮತ್ತು ಅಷ್ಟು ಪ್ರಭಾವಪೂರಿತ ಶಕ್ತಿಯುಳ್ಳದ್ದು. ಈ ಒಂದು ಧ್ಯಾನವನ್ನು ತಮ್ಮ ಜೀವನದಲ್ಲಿ ಎಂದಾದರೂ ಒಮ್ಮೆ ಪ್ರತಿಯೊಬ್ಬರೂ, ಅಭ್ಯಾಸ ಮಾಡಿಯೇ ಇರುತ್ತಾರೆ. ನಗುವುದು ಚೈತನ್ಯಕ್ಕೆ ಮಹಾದ್ಭುತವಾದ ಮೂಲ ಕಾರಣ. ಸುಮ್ಮನೆ ನಕ್ಕುಬಿಡಿ. ಆಗ ಆ ಚೈತನ್ಯವು ಹೇಗೆ ಮೂಲ ಸ್ಥಾನದಿಂದ ಉಕ್ಕಿ ಬಂದು ನಿಮ್ಮನ್ನು ಅದರಲ್ಲಿ ಮುಳುಗಿಸಿ ಬಿಡುತ್ತೆ ಎಂಬುದನ್ನು ಅನುಭವಿಸುತ್ತೀರಿ.
ನೀವು ನಕ್ಕಾಗ ನಿಮ್ಮ ಎಲ್ಲೆಯನ್ನು ಮೀರಿ ಬಿಡುತ್ತೀರಿ, ನೀವು ನಿಮ್ಮತನದ ಭಾವನೆಯನ್ನೂ ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ನಗುವಿನ ಸ್ವಾಧೀನಕ್ಕೇ ಸೇರಿಬಿಡುತ್ತೀರಿ.
ಒಂದೇ ಸಮಯದಲ್ಲಿ ಆಲೋಚಿಸುವುದು ಮತ್ತು ನಗುವುದು ಎರಡೂ ಸಾಧ್ಯವಾಗುವುದಿಲ್ಲವೆಂಬುದನ್ನು ಗಮನಿಸಿದ್ದೀರಾ? ನೀವು ನಗುತ್ತಿರುವಾಗ, ಇದ್ದಕ್ಕಿದ್ದಂತೆ ನಗುವಾಗ, ಆಲೋಚನೆ ಮಾಡುವುದು ಸಾಧ್ಯವೇ ಇಲ್ಲ ಎಂಬ ಅನುಭವವನ್ನು ಪಡೆಯುತ್ತೀರಿ. ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಅನುಭವಿಸುತ್ತೀರಿ.
ನಗುವುದು ಎಂದರೆ, ಕಿಸಿ ಕಿಸಿ ನಗುವುದಲ್ಲ, ಮಾರ್ಮಿಕವಾದ ಮುಗುಳ್ನಗೆಯೂ ಅಲ್ಲ, ಅರ್ಧ ನಗುವೂ ಅಲ್ಲ, ಅದೊಂದು ಸುಂದರವಾದ, ವಿಶಾಲತೆಯ ನಗು, ಮಲಗುವುದನ್ನು ಗಮನಿಸಿದ್ದೀರಾ? ಶರೀರವನ್ನು ಹೀಗೆ, ಹಾಗೆ ಬಗ್ಗಿಸಿ, ಚಾಚಿಕೊಳ್ಳಿ (ಮೈಮುರಿಯುವುದು ಎನ್ನುತ್ತೇವಲ್ಲಾ ಹಾಗೆ) ಪ್ರತಿಯೊಂದು ಮಾಂಸ ಖಂಡವೂ ಎಳೆಯಲ್ಪಟ್ಟು ಹಿಗ್ಗಿಸಿದಂತಾಗುವುದನ್ನು ಅನುಭವಿಸಿರಿ! ಆಗ ಕಣ್ಣುಗಳು ತೆರೆಯದೆ ನಗುವುದಕ್ಕೆ ಪ್ರಾರಂಭಿಸಿರಿ.
ಮೊದಲಿಗೆ ಅದು ಸ್ವಲ್ಪ ಪ್ರಯತ್ನ ಪೂರ್ವಕವಾಗಿಯೇ ನಡೆಯುತ್ತದೆ. ಆದರೆ ಬಹು ಬೇಗ ನಿಜವಾದ ನಗುವು ಒಳಗಿಂದೊಳಗೇ ಉಕ್ಕಿ ಬರಲು ಶುರುವಾಗುತ್ತದೆ. ಇನ್ನು ಏನಿಲ್ಲದೇ ಹೋದರೂ, ನಗುವುದಕ್ಕಾಗಿ ನೀವು ಮಾಡುವ ಹಾಸ್ಯದ ಪ್ರಯತ್ನಗಳೇ ಸಾಕು, ನೀವು ನಿಜವಾಗಿಯೂ ನಗುವಂತೆ ಮಾಡಿಬಿಡುತ್ತವೆ!
ಒಮ್ಮೆ ನಿಮ್ಮನ್ನು ನಗುವು ಆವರಿಸಿದರೆ, ನಗಲು ಹಾಗೆಯೇ ಬಿಟ್ಟುಬಿಡಿ. ನಗುವುದಕ್ಕೆ ಸಮಯದ ಕಾಲಾವಧಿ ಇಲ್ಲ. ನೀವು ನಕ್ಕು ನಕ್ಕು ಸುಸ್ತಾಗುವವರೆಗೂ ನಕ್ಕಿಬಿಡಿ. ಹಾಗೆಯೇ ಮುಂದುವರಿದಾಗ, ನೀವು ನಗುವನ್ನು ಬಹಳ ಕಾಲ ಉಳಿಸಿ, ಬೆಳೆಸಲು ಸಾಧ್ಯ ಎಂಬುದನ್ನು ಅರಿಯುತ್ತೀರಿ.
ಬುದ್ಧನು ಹೇಳಿರುವುದೇನೆಂದರೆ, ಸತತವಾಗಿ ಯಾರಿಗಾದರೂ 45 ನಿಮಿಷಗಳ ಕಾಲ ಬಿಡದೆ ನಗಲು ಸಾಧ್ಯವಾದರೆ, ಅಂಥವರಿಗೆ ಜ್ಞಾನೋದಯ ಉಂಟಾಗುತ್ತದೆ! ಕೇವಲ 45 ನಿಮಿಷಗಳು ನಗುವುದರಿಂದ!
ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನಕ್ಕುಬಿಡಿ. ನಿಮ್ಮೊಳಗೇ ಆ ಚೈತನ್ಯವು ನಿಮ್ಮನ್ನು ನಗಿಸುತ್ತಾ ಅದರಲ್ಲೇ ಮುಳುಗುವಂತೆ ಮಾಡಿಬಿಡುತ್ತೆ.
ನೀವು ನಗುವುದನ್ನು ಮುಗಿಸಿದ ನಂತರವೂ ಬಹಳ ಕಾಲ ಆ ನಗುವಿನ ಅಲೆಗಳು ಆಳದಲ್ಲಿ ಇನ್ನೂ ನಿಮ್ಮಲ್ಲಿ ಉಳಿದಿರುವುದನ್ನು ಕಾಣುತ್ತೀರಿ. ಕೇವಲ ಕೆಲವೇ ನಿಮಿಷಗಳ ಬೆಳಗಿನ ನಗುವು ನಿಮ್ಮ ಪೂರ್ತಿ ದಿವಸವನ್ನೇ ಪರಿವರ್ತಿಸಬಹುದು!
summanē kuḷitukoḷḷiri. ale aleyāgi ellā dikkugaḷindalū śabdagaḷu nimma kaḍege baruttiruvudannu gamanisi anubhavisiri. ellā dikkugaḷindalū śabdagaḷu nimma kaḍege hariyuttiruvudannu gamanisi nīvu ā śabdagaḷa birugāḷiya madhyadalliruvudāgi bhāvisikoḷḷiri. nīvu madhyadalliddīri, śabdagaḷellā nimma kaḍege haridu baruttive.
madhyadalli nīvelliddīrō alli śabdagaḷē illa idannu anubhavisi tiḷiyiri! madhyadalli pūrṇa praśāntate ide. ondu vēḷe ā madhyadalli ēnādarū śabdavu iddare, nīvu horagina śabdagaḷāvudannū kēḷalu sādhyavāguvudilla, ā śabdagaḷu nimmannu pravēśisuttive, bhēdisikoṇḍu oḷa hōguttive, ādarū avu madhyadalli nintubiḍuttave. nimmyoḷage (madhyadalli) ondu staḷavide, ā staḷadalli ellā śabdagaḷū nintubiḍuttave. ā staḷadindalē nīvu pratiyondu śabdavannū kēḷisikoḷḷuttiddīri. ā madhyada jāgavannu gurutisalu yatnisiri.
iddakkiddanteyē, nīvu adannu gurutisuttīri.
kūḍalē nimma prajñeyu oḷa mukhavāgi tirugi biḍuttade.
nimma prajñeyu horagina śabda prapañcadinda badalāyisikoṇḍu biḍuttade. nīvu elli śabdavē illavō antaḥ, niśśabda kēndradalli iddu biḍuttīri. ā staḷakke śabdavu pravēśisalāradu, ā binduvē nīvu.
omme ā śāntateyannu ālisidalli nīvu punaḥ śabdagaḷinda vicalitarāguvudilla, śabdagaḷu nimmannu muṭṭalāravu.
nāvu yāvāgalū, namma kivigaḷinda śabdagaḷannu kēḷuttiddēveṃdu bhāvisiddēve. ī dhyāna tantradinda, śabdagaḷu kivigaḷinda kēḷalpḍuvudilla, taleyindalū (manassinindalū) kēḷalāguvudilla
ಪ್ರತ್ಯಾಹಾರ ಧ್ಯಾನ
ಧ್ಯಾನದ ವಿಚಾರ
ಈ ತಂತ್ರವು ಹೊರಪ್ರಪಂಚದಿಂದ ಬರುವ ಸಂಕೇತಗಳನ್ನು ಮುಚ್ಚಿ ಬಿಡುತ್ತದೆ. ನೀವು ಪ್ರಪಂಚದಿಂದ ಗ್ರಹಿಸುವುದೆಲ್ಲವೂ ನಿಮ್ಮ ಪಂಚೇಂದ್ರಿಯ ಗಳ ಮೂಲಕ ಅಂದರೆ ನೋಟದಿಂದ, ಶಬ್ದದಿಂದ, ರುಚಿಯಿಂದ, ವಾಸನೆ ಯಿಂದ ಮತ್ತು ಸ್ಪರ್ಶದಿಂದ ಬರುವ ಸಮಾಚಾರಗಳೇ ಆಗಿರುತ್ತವೆ.
ಈ ಧ್ಯಾನವು ಇಂದ್ರಿಯಗಳಿಂದ ಬರುವ ಎಲ್ಲಾ ಅನುಭವಗಳನ್ನೂ ನಿರಾಕರಿಸುತ್ತದೆ. ನೀವು ಪ್ರಪಂಚಕ್ಕೆ ನಿಮ್ಮನ್ನು ತೆರೆದುಕೊಳ್ಳದೇ ಇದ್ದಾಗ (ಸ್ಪಂದಿಸದಿದ್ದಾಗ) ನೀವು ನಿಮ್ಮ ಶರೀರಕ್ಕೂ ನಿಮ್ಮನ್ನು ಮುಚ್ಚಿಕೊಂಡಂತೆಯೇ. ನಿಮ್ಮ ಚೈತನ್ಯವು ನಿಮ್ಮ ಒಳಗಡೆಗೇ ಹಿಂದಿರುಗುತ್ತದೆ. (ಸೂಚನೆಗಳು)
ಈ ಧ್ಯಾನವನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ ಮಾಡಬಹುದು.
ಈ ಘಳಿಗೆಯಲ್ಲಿ ನೀವು ಎಲ್ಲಿದ್ದೀರೋ ಅಲ್ಲಿಂದಲೇ, ನಿಮ್ಮ ಇಂದ್ರಿಯ ಗಳಿಂದ ಬರುವ ಸಂಕೇತಗಳನ್ನು ಗುರುತಿಸಿಕೊಳ್ಳಿರಿ. ನೀವು ತೋಟದಲ್ಲಿನ ಹೂವುಗಳನ್ನು ನೋಡಬಹುದು. ನೀವು ಹಕ್ಕಿಗಳು ಹಾಡುವುದನ್ನು ಆಲಿಸಬಹುದು, ನಿಮ್ಮ ಕಾಲಿನ ಮೇಲೆ ಒಂದು ಇರುವೆಯ ಹರಿದಾಡುವಿಕೆ ಯನ್ನು ಅನುಭವಿಸಿ ತಿಳಿಯಬಹುದು.
ನೀವು ಏನು ಮಾಡುತ್ತೀರಿ?
ಸುಮ್ಮನೆ ಇಂದ್ರಿಯಗಳನ್ನು ಮುಚ್ಚಿಬಿಡಿ. ಇರುತ್ತದೆ, ಆದರೆ ಮನಸ್ಸು ಓಡುತ್ತಲೇ ಇರುತ್ತೆ. ದೇಹ ಮತ್ತು ಮನಸ್ಸು ಬೇರೆಯಾಗಿ ಬಿಟ್ಟಿರುತ್ತವೆ. ನಿಮ್ಮ ದೇಹ ಕುಳಿತಿರುತ್ತೆ, ಮನಸ್ಸು ಎಲ್ಲೆಲ್ಲೋ ಸುತ್ತಲು ಹೋಗಿರುತ್ತೆ!
ಯಾವಾಗ ನಿಮ್ಮ ಶರೀರವು ಓಡುತ್ತದೆಯೋ ಆಗ, ಅದಕ್ಕೆ ವ್ಯತಿರಿಕ್ತವಾದದ್ದು ಆಗುತ್ತದೆ. ನೀವು ಓಡುವಾಗ, ಮನಸ್ಸು ಸುಮ್ಮನೆ ಇದ್ದುಬಿಡುತ್ತದೆ. ನಿಮ್ಮ ಮನಸ್ಸು ಮಾತನಾಡುವುದನ್ನು ನಿಲ್ಲಿಸಿಬಿಡುತ್ತದೆ. ಮತ್ತೆ ನೀವು ಓಡುವುದನ್ನು ಮುಂದುವರಿಸಿದಾಗ, ಸ್ವಲ್ಪ ಹೊತ್ತಾದ ಮೇಲೆ, ಆ ಓಡುವಿಕೆಯೇ ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಆಗ ಶರೀರವೂ, ಮನಸ್ಸೊ, ನಿಮ್ಮದಾಗಿ ಇರುವುದಿಲ್ಲ. ನೀವು ಓಡುವುದಕ್ಕೇ ಸೇರಿದವರಾಗುತ್ತೀರಿ. ನೀವೇ ಓಟವಾಗಿ ಬಿಡುತ್ತೀರಿ.
ಸೂಚನೆಗಳು:
ನೀವು ಓಡಲು ಒಂದು ಸಮಯವನ್ನು ಗೊತ್ತುಪಡಿಸಿಕೊಳ್ಳಿ. ಬೆಳಗಿನ ಜಾವವು ಅತ್ಯುತ್ತಮ, ಮತ್ತೊಂದು ಅಂದರೆ ಸಾಯಂಕಾಲ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಿಮ್ಮ ಶರೀರವು ಬಹಳವಾಗಿ ತೆರೆದುಕೊಂಡು, ಪ್ರಕೃತಿಯ ಚೈತನ್ಯವನ್ನು ಹೀರಿಕೊಳ್ಳಲು ಸಮರ್ಥ ವಾಗಿರುತ್ತದೆ.
ನೇರವಾಗಿ ಚೆನ್ನಾಗಿ ಓಡಲು ಸುಲಭವಾದ ಸಾಕಷ್ಟು ಶಾಂತವಾಗಿ ಹೆಚ್ಚು ಜನರಿಲ್ಲದ, ನೀವು ಓಡುವುದರಲ್ಲೇ ಮಗ್ನರಾಗುವಂತಹ, ಬೀಳುವ ಸಾಧ್ಯತೆಗಳಿಲ್ಲದ, ಸಂಚಾರಿ ವಾಹನಗಳ ಭಯವಿಲ್ಲದೆ ಇರುವ ಸುರಕ್ಷಿತವಾದ ಒಂದು ದಾರಿಯನ್ನು ಓಡುವ ಸಲುವಾಗಿ ಆರಿಸಿಕೊಳ್ಳಿ.
ನೀವು ಓಡುವ ಅಭ್ಯಾಸವಿಲ್ಲದವರಾದರೆ, ಕಡಿಮೆ ದೂರದ ಓಟವನ್ನು ಪ್ರಾರಂಭಿಸಿರಿ - ಅಂದರೆ ಅರ್ಧ ಮೈಲಿ. ಆನಂತರ ನಿಧಾನವಾಗಿ ಓಡುವ ದೂರವನ್ನು ಹೆಚ್ಚಿಸಿಕೊಳ್ಳಿ. ಓಡುವುದರಿಂದಾಗುವ ಹೆಚ್ಚಿನ ಅನುಕೂಲಗಳ ವಿಷಯವಾಗಿ ತಲೆ ಕೆಡಿಸಿಕೊಳ್ಳಬೇಡಿ. ಇಷ್ಟೇ ಸಮಯವೆಂದು ಸಮಯಕ್ಕೂ ಹೆಚ್ಚು ಪ್ರಾಧಾನ್ಯತೆ ಕೊಡಬೇಡಿ. ನಿಮ್ಮ ಓಟದ ನಿರ್ವಹಣೆಯ ವಿಷಯವಾಗಿಯೂ ಚಿಂತಿಸಬೇಡಿ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಓಡಬೇಡಿ! ತೂಕ ಕಡಿಮೆಯಾದರೆ ಒಳ್ಳೆಯದೇ, ಆದರೆ ಯಾವುದಾದರೂ ಕಾರಣಕ್ಕೆ ಓಡಬೇಡಿ. ಸುಮ್ಮನೆ ಓಡಿರಿ.
ಬಹಳ ದಿವಸಗಳವರೆಗೆ ಓಡಿದರೂ, ಆ ಓಟವು ಬೇಸರವನ್ನು ತರುವುದಾದರೆ, ಅದನ್ನು ಬಿಟ್ಟುಬಿಡಿ ಮತ್ತು ಮತ್ತೊಂದು ಧ್ಯಾನವನ್ನು ಮಾಡಲು ಪ್ರಾರಂಭಿಸಿರಿ. ಈಜಲು ಯತ್ನಿಸಿ, ನರ್ತಿಸಲು ಯತ್ನಿಸಿ. ನಿಮಗೆ ಓಡಬೇಕೆಂದೆನಿಸಿದರೆ ಪುನಃ ಮಾಡತೊಡಗಿರಿ.
ಮೂಲಸೂಚನೆಗಳ ಹೊರತು ಬೇರೆಯ ಸೂಚನೆಗಳೇನೆಂದರೆ: ನಿಮಗೆ ನೀವೇ ನಿಯಮಗಳನ್ನು ಸೃಷ್ಟಿಸಿಕೊಳ್ಳಬೇಡಿ. ಈ ನಿಯಮಗಳು ಧ್ಯಾನದ ನಿಜವಾದ ಆನಂದವನ್ನೇ ಹಾಳು ಮಾಡಿಬಿಡುತ್ತದೆ (ನಾಶ ಮಾಡಿಬಿಡುತ್ತದೆ).
ಐದು ನಿಮಿಷದ ಪುನಶ್ಚೇತನ ಕ್ರಿಯೆಗಳು
ನೀವು ಸಾಮಾನ್ಯವಾಗಿ ಕೆಲಸ ಮಾಡುವ ವೇಳೆಯಲ್ಲಿ ಒತ್ತಡದಿಂದ ಬಳಲಿದಾಗ ಏನು ಮಾಡುವಿರಿ?
ಅಥವಾ ದಿನವೆಲ್ಲಾ ಕೆಲಸ ಮಾಡಿದ ನಂತರ ಆಯಾಸಗೊಂಡರೆ?
ಆಗ, ಸಿಗರೇಟಿಗೆ ಮೊರೆ ಹೋಗುವುದಾಗಲೀ ಅಥವಾ ಟಿ.ವಿ.ಯನ್ನು ಆನ್ ಮಾಡುವುದಾಗಲೀ ದಯವಿಟ್ಟು ಮಾಡಬೇಡಿರಿ!
ಒಂದು ಸಣ್ಣ ಧ್ಯಾನದ ಕ್ರಿಯೆಯು ನಿಮ್ಮನ್ನು ಕೆಲವೇ ನಿಮಿಷಗಳಲ್ಲಿ ಪುನಶ್ಚೇತನಗೊಳಿಸುತ್ತದೆ.
ಇಲ್ಲಿ ಕೆಲವು ಸುಲಭವಾದ ಐದು ನಿಮಿಷದ ಪುನಶ್ಚೇತನ ಕ್ರಿಯೆಗಳನ್ನು ತಿಳಿಸಲಾಗಿದೆ. ಅವನ್ನು ನೀವು ಕೆಲಸದ ಸಮಯದಲ್ಲಿ ಅಥವಾ ಮನೆಯಲ್ಲಿ ಪ್ರಯತ್ನಿಸಬಹುದು.
ವಿಪರೀತವಾಗಿ ಉಸಿರು ಬಿಡುವಿಕೆ (ಉತ್ಕಟ ನಿಶ್ವಾಸ)
ಧ್ಯಾನ ಮತ್ತು ಸೂಚನೆಗಳು
ಈ ಧ್ಯಾನವು ನೀವು ಒತ್ತಡದಲ್ಲಿದ್ದಾಗ ಆಶ್ಚರ್ಯಕರವಾಗಿ ಕೆಲಸ ಮಾಡುತ್ತದೆ. ಆಳವಾಗಿ ಉಸಿರು ಬಿಡುವುದರಿಂದ ಪ್ರಾರಂಭಿಸಿರಿ.
ಯಾವಾಗಲೂ ಉಸಿರು ಬಿಡುವುದರಿಂದ ಪ್ರಾರಂಭಿಸಿರಿ. ನಿಶ್ವಾಸದ ಮೇಲೆಯೇ ಕೇಂದ್ರೀಕರಿಸಿರಿ, ಆಳವಾಗಿ ಹಾಗೂ ಶಕ್ತಿಪೂರ್ವಕವಾಗಿ ನೀವು ಪೂರ್ಣವಾಗಿ ಉಸಿರು ಬಿಟ್ಟಾಗ, ಹೊಟ್ಟೆಯನ್ನು ಒಳಕ್ಕೆ ಸೆಳೆದುಕೊಂಡು, ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವ ಮುಂಚಿತವಾಗಿ 3 ಸೆಕೆಂಡ್ಗಳು ಹಾಗೆಯೇ ಕಾಯಿರಿ. ನಂತರ ಎಷ್ಟು ಸಾಧ್ಯವೋ ಅಷ್ಟು ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿರಿ. 3 ಸೆಕೆಂಡ್ಗಳು ಹಾಗೇ ಕಾಯಿರಿ. ನಂತರ ಉಸಿರನ್ನು ಹೊರಗೆ ಬಿಡಿ. ಮತ್ತೆ ಉಸಿರಾಡಿ, ಹೊರಗೆ ಬಿಡಿ. ಲಯಬದ್ಧವಾಗಿ ಉಸಿರಾಡುವ ಒಂದು ಕ್ರಮವನ್ನು ರಚಿಸಿಕೊಳ್ಳಿರಿ. ನಿಧಾನವಾಗಿ ಮಾಡಿರಿ, ಉಸಿರು ನಿಮ್ಮ ದೇಹದೊಳಕ್ಕೆ ಪೂರ್ಣವಾಗಿ ಹೋಗಿ ಹಾಗೆಯೇ ಪೂರ್ಣವಾಗಿ ಹೊರಬರಲಿ.
ನೀವು ಪೂರ್ಣವಾಗಿ ಉಸಿರನ್ನು ಹೊರಗೆ ಬಿಟ್ಟಾಗ, ನೀವು ನಿಮ್ಮ ದೇಹದೊಳಗಿನ ಟಾಕ್ಸಿನ್ಗಳನ್ನೂ ಹೊರಹಾಕುವಿರಿ. ನೀವು ನಿಮ್ಮ ಒತ್ತಡವನ್ನೂ ಹೊರಗೆ ಹಾಕುವಿರಿ. 10-12 ಆವರ್ತ ಉಸಿರಾಡಿದ ನಂತರ, ನಿಮ್ಮ ಒತ್ತಡವೆಲ್ಲಾ ಹೋಗಿರುವುದನ್ನೂ, ಬಿರುಸುತನವು ಬಿಡುಗಡೆಯಾಗಿರುವುದನ್ನೂ ನೀವು ತಿಳಿಯುತ್ತೀರಿ.
pāmimg
dhyānada vicāra
ī tam̃travu, nimma eraḍu hubbugaḷa madhyadalliruva ājñā cakravannu sakriyatavannāgi māḍuvudu. ī cakrada hesaru ‘ājñā’. akṣaraśaḥ ājñe māḍu (ājñāpisu) (appane māḍu) em̃dē artha.
idē māstar'cakra (pradhāna cakra.) ī cakravu icchāśaktiya niluvina sthāna (āsana). idu cētanagoṃḍāga (kriyāśīlatayannu hoṃdidāga) tiḷuvaḷikeyalli, arthamāḍikoḷḷuvudaralli heccina spaṣṭateyannu anubhavisuttīri. nimma vivēcanāśakti mattu nirṇāyātmak sāmarthya ivugaḷu vardhisuttave.
ivellikkim̃ta heccāgi idu mūrane kaṇṇu em̃dē parigaṇisiddāre. idarim̃dalē nīvu oḷanōṭa harisaballiri. modala bārige nīvu idarim̃da oḷanōḍalu prārambhisuttīri.
sūcanegaḷu
kaṇṇugaḷannu mucchikoṃḍu nimage anukūlavāda āsanadalli kuḷitukoḷḷiri. nimma eraḍū hastagaḷannu kaṇṇugaḷa hattira tam̃du, kaṇṇuguḍḍegaḷa mēle haguravāgi iṭṭukoḷḷiri. nimma sparśavu hakkiya pakṣadōpādiyalli mr̥duvāgirali. yāva tarahada ottadavannū hākabēḍiri. modamodalu, nimage tiḷiyadē kaṇṇugaḷannu otti
ನಿಮ್ಮ ಹೊಟ್ಟೆಯಿಂದ (ನಾಭಿಯಿಂದ) ಆಳವಾದ ಉಸಿರನ್ನು ತೆಗೆದುಕೊಳ್ಳಿರಿ. ಅದನ್ನು ಒಳಗಡೆಯೇ ಹಿಡಿದಿಟ್ಟುಕೊಂಡಿರಬೇಕಾಗುತ್ತದೆ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಆಳವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿರಿ. ಉಸಿರನ್ನು ಒಳಗಡೆಯೇ ಹಿಡಿದಿಟ್ಟು ನಿಮ್ಮ ಕೈಕಾಲು (ಅಂಗಾಂಗ) ಗಳನ್ನು ಒಂದೊಂದಾಗಿ ಒತ್ತಿ ಭದ್ರವಾಗಿ ಗಟ್ಟಿಮಾಡಿಕೊಳ್ಳಿರಿ.
ಕಾಲ್ಬೆರಳುಗಳಿಂದ ಪ್ರಾರಂಭಿಸಿ. ಕಾಲುಬೆರಳುಗಳನ್ನು ಸಾಧ್ಯವಾದಷ್ಟೂ ಗಟ್ಟಿಯಾಗಿ (ಮಾಂಸಖಂಡಗಳನ್ನು ಬಿಗಿ ಮಾಡಿಕೊಳ್ಳಿರಿ). ಅದಕ್ಕೆ ವಿಶ್ರಾಂತಿ ಯನ್ನು ಕೊಡಬೇಡಿ. ಹಾಗೆಯೇ ಹಜ್ಜೆಯವರೆಗೂ ಬನ್ನಿ, ಹೆಜ್ಜೆಯ ಕೀಲುಭಾಗಕ್ಕೆ ಬನ್ನಿ, ಹಾಗೆಯೇ ಮೇಲಕ್ಕೆ ಮೀನಖಂಡಗಳು, ಮಂಡಿ, ಪೃಷ್ಠಭಾಗ, ಹೀಗೇ ಬೇಗಬೇಗ ಮೇಲಕ್ಕೆ ಬನ್ನಿ, ಏಕೆಂದರೆ ನೀವು ಉಸಿರನ್ನು ಕಡೆಯ ಪಕ್ಷ ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.
ಹಾಗೆಯೇ ಸೊಂಟಕ್ಕೆ ಬನ್ನಿ, ಹೊಟ್ಟಿಗೆ ಬನ್ನಿ, ನಿಮ್ಮ ಹೊಟ್ಟೆಯ ಮಾಂಸಖಂಡಗಳನ್ನು ಬಿಗಿಮಾಡಿ, ಸಾಧ್ಯವಾದಷ್ಟೂ ಗಟ್ಟಿಯಾಗಿ ಮಾಡಿ. ತನಗೆ ತಾನೇ ನಿಮ್ಮ ತೊಡೆಯ ಸಂದಿನ ಮಾಂಸಖಂಡಗಳೂ ಸಹ ಬಿಗಿಯಾಗುತ್ತವೆ.
ಹಾಗೆಯೇ ಎದೆಯವರೆಗೂ ಬನ್ನಿ, ಬೆನ್ನಿಗೂ ಬನ್ನಿ, ಬೆನ್ನುಹುರಿಯ ಪ್ರತಿಯೊಂದು ಭಾಗಕ್ಕೂ ಬನ್ನಿ. ನಿಮ್ಮ ತೋಳುಗಳನ್ನು ಬಿಗಿಮಾಡಿ, ಬೆರಳು ಗಳಿಂದ ಹಿಡಿದು ಮೇಲಿನವರೆಗೂ, ಮೋಣಕೈ ಮೇಲ್ಬಾಗದವರೆಗೂ ಬನ್ನಿ, ನಿಮ್ಮ ತೋಳುಗಳ ಮೂಳೆಗಳು, ಕುತ್ತಿಗೆ, ಗಂಟಲು ಇವುಗಳನ್ನೂ ಬಿಗಿ ಮಾಡಿರಿ, ವಿಶೇಷವಾಗಿ ಕುತ್ತಿಗೆಯ ಮಾಂಸಖಂಡಗಳನ್ನು ಬಿಗಿ ಹಿಡಿಯಲು ಯತ್ನಿಸಿರಿ.
ಮುಖಕ್ಕೂ ಬನ್ನಿ.
ನಿಮ್ಮ ಮುಖದಲ್ಲಿ ನೀವು ತಿಳಿದಿರುವುದಕ್ಕಿಂತ ಹೆಚ್ಚ ಮಾಂಸಖಂಡಗಳಿವೆ. ನಿಮ್ಮ ಬಾಯೊಳಗಿನ ಮಾಂಸಖಂಡ, ಮೂಗಿನ ಹೊಳ್ಳೆಗಳು, ಕಣ್ಣುಗಳು, ಹುಬ್ಬುಗಳು, ಹಣೆ ಮತ್ತು ಕೆನ್ನೆಗಳು. ನಿಮ್ಮ ಕಣ್ಣುಗುಡ್ಡೆಗಳನ್ನು ಹಿಂಡಿದಂತೆ ಮಾಡಿ ರೆಪ್ಪೆಗಳನ್ನು ಮುಚ್ಚಿರಿ. ಹಲ್ಲುಗಳನ್ನು ಕಚ್ಚಿ ಬಿಗಿಹಿಡಿಯಿರಿ. ನಿಮ್ಮ ಮುಖವನ್ನು ಒಂದು ಬಿಗಿಯಾದ ಚೆಂಡಿನ ಒಳಕ್ಕೆ ತುರುಕುವಂತೆ ಬಿಗಿ ಮಾಡಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ಯಾವುದೇ ಭಾಗವನ್ನು ವಿಶ್ರಾಂತಿಗೆ ಒಳಪಡಿಸಬೇಡಿ.
ಇದೇ ಬಿಗುವಿನ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಕಾಲ ಹಾಗೆಯೇ ಇರಿ. ಯಾವಾಗ ಇನ್ನು ಮುಂದೆ ಉಸಿರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎನಿಸಿದಾಗ, ಉಸಿರನ್ನು ಒಮ್ಮೆಲೇ ರಭಸದಿಂದ ಹೊರಕ್ಕೆ ಬಿಡಿ, ಅದರ ಜೊತೆಯಲ್ಲಿಯೇ ನಿಮ್ಮ ಎಲ್ಲಾ ಅವಯವಗಳನ್ನೂ, ಮುಖವನ್ನೂ ಸಂಪೂರ್ಣವಾಗಿ ವಿಶ್ರಾಂತಿಯನ್ನು ಹೊಂದಲು ಬಿಡಿ. ಈ ಸ್ಥಿತಿಯಲ್ಲಿ ಅಂದರೆ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯಲ್ಲಿ ಒಂದು ನಿಮಿಷದವರೆಗೂ ಹಾಗೆಯೇ ಇರಿ.
ಈ ತಂತ್ರವು ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತಿಯನ್ನು ದೊರಕಿಸಿ ಕೊಟ್ಟು ಮತ್ತು ಈ ಎರಡೇ ನಿಮಿಷಗಳಲ್ಲಿ ನಿಮ್ಮನ್ನು ಉತ್ಸಾಹಿತರನ್ನಾಗಿಸುವುದು. ನಿಮಗೆ ಸಾಕಷ್ಟು ಸಮಯಾವಕಾಶವಿದ್ದಲ್ಲಿ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ ಪುನಃ ಮಾಡಿರಿ.
ಚಕ್ರಗಳು ಎಂದರೆ ಏನು?
ಚಕ್ರಗಳು ಎಂದರೆ ನಮ್ಮ ಶರೀರದ ಸೂಕ್ಷ್ಮ ಚೈತನ್ಯದ ಚಕ್ರನಾಭಿಯಂತಿರುವ ಕೇಂದ್ರಗಳು. ಏಳು ಪ್ರಮುಖ ಚಕ್ರಗಳು ಯಾವುವೆಂದರೆ: ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ. ಅವುಗಳಿಗೆ ಭೌತಿಕವಾದ ನಿರ್ದಿಷ್ಟ ಸ್ಥಾನಗಳಿಲ್ಲದಿದ್ದರೂ ನಮ್ಮ ಶರೀರದುದ್ದಕ್ಕೂ ಈ ಚೈತನ್ಯ ಕೇಂದ್ರಗಳು ಇವೆ. ಹೆಚ್ಚುಕಡಿಮೆ ನಮ್ಮ ಶರೀರದಲ್ಲಿರುವ ಜೀವಕಣಗಳ ಗ್ರಂಥಿಗಳಿಗೆ (glands) ಅನುಗುಣವಾಗಿ ಮತ್ತು ಆ ಗ್ರಂಥಿಗಳ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಪ್ರಭಾವ ಬೀರುವ ಕೆಲಸವನ್ನು ಈ ಚಕ್ರಗಳು ನಿರ್ವಹಿಸುತ್ತಿವೆ. ಈ ಚಕ್ರಗಳು ನಮ್ಮ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಆಳವಾಗಿ ಪ್ರಭಾವ ಬೀರುತ್ತವೆ ಹಾಗೂ ಆ ಚಕ್ರಗಳು ನಮ್ಮ ಆಲೋಚನೆಗಳು ಮತ್ತು ಭಾವನೆಗಳಿಂದ ತೊಂದರೆಗೊಳಗಾಗುತ್ತವೆ.
ಈ ಚಕ್ರಗಳು ಅಪಾರವಾದ ವಿಶ್ವಶಕ್ತಿಯ ನೇರವಾದ ಕಾಲುವೆಗಳಿದ್ದಂತೆ ನಮ್ಮ ಶರೀರದಲ್ಲಿವೆ. ಆದರೆ ನಮ್ಮ ಅತಿರೇಕದ ಜೀವನಶೈಲಿಗಳೂ, ಒತ್ತಡ ಮತ್ತು ನಕಾರಾತ್ಮಕ ಭಾವನೆಗಳು ಈ ಚಕ್ರಗಳನ್ನು ಬಂಧಿಸಿಬಿಡುತ್ತವೆ ಅಥವಾ ಆ ಚಕ್ರಗಳು ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಕಾರಣವಾಗಿ ಬಿಡುತ್ತದೆ.
ನಮಗೆ ಇದರ ವಿಚಾರವಾಗಿ ತಿಳುವಳಿಕೆ ಇಲ್ಲದಿರುವುದರಿಂದ, ನಾವು ಚೈತನ್ಯಕ್ಕೆ ಪ್ರಮುಖ ಉಗಮಸ್ಥಾನವಾದ ಈ ಚಕ್ರಗಳನ್ನು ಬಂಧಿಸುತ್ತಿದ್ದೇವೆ (ಚಕ್ರಗಳಿಗೆ ಪ್ರತಿಬಂಧಕಗಳನ್ನು ಅಥವಾ ಅಡ್ಡಿಗಳನ್ನು ಉಂಟುಮಾಡುತ್ತಿದ್ದೇವೆ). ಚೈತನ್ಯವೇ ಆರೋಗ್ಯ. ಅದಕ್ಕಾಗಿಯೇ ಹೆಚ್ಚುಕಡಿಮೆ ಎಲ್ಲಾ ದೈಹಿಕ ಹಾಗೂ ಮಾನಸಿಕ ಕುಂದುಕೊರತೆಗಳನ್ನೂ, ಖಾಯಿಲೆಗಳನ್ನೂ ಅಂಶತಃ ಅಥವಾ ಪೂರ್ಣವಾಗಿ ಸಂಬಂಧಪಟ್ಟ ಈ ಚಕ್ರಗಳನ್ನು ಕೇವಲ ಶುದ್ಧಿಗೊಳಿಸಿ, ಶಕ್ತಿಯುತವನ್ನಾಗಿ ಮಾಡುವುದರಿಂದ ಗುಣಪಡಿಸಬಹುದು.
ಆನಂದ ಸ್ಫುರಣ ಪ್ರೋಗ್ರಾಂನಲ್ಲಿ ಏನು ಮಾಡುತ್ತಾರೆ? (ASP)
ಆನಂದ ಸ್ಫುರಣ ಪ್ರೋಗ್ರಾಂ (ASP) ಇದು ಧ್ಯಾನದ ಮೂಲಕ ಚಕ್ರಗಳಿಂದ ಗುಣಪಡಿಸುವ ಎರಡು ದಿವಸದ ಪರಿಶ್ರಮ ಪೂರ್ಣವಾದ ಶಿಬಿರ. ಈ ಶಿಬಿರದಲ್ಲಿ ಪ್ರತಿಯೊಂದು ಚಕ್ರದ ಸ್ವಭಾವ ಮತ್ತು ಅದರ ಪಾತ್ರ ಏನು ಎಂಬುದನ್ನು ನಿಮಗೆ ತಿಳಿಸಿಕೊಡಲಾಗುತ್ತದೆ ಮತ್ತು ಈ ಏಳು ಚಕ್ರಗಳನ್ನೂ ಶುದ್ಧೀಕರಿಸಿ, ಪುನಶ್ಚೇತನಗೊಳಿಸುವ ಶಕ್ತಿಯುತವಾದ ಹಾಗೂ ಸಹಜವಾಗಿ ಮಾಡಬಹುದಾದ ಏಳು ಧ್ಯಾನದ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ.
ಸ್ವಾಧಿಷ್ಠಾನ ಚಕ್ರದ ನಿರ್ಭಯ ಧ್ಯಾನವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಧ್ಯಾನಗಳನ್ನು ಸುಲಭವಾಗಿ ವಾರಕ್ಕೆ ಒಂದಾವರ್ತಿ ಅಭ್ಯಾಸ ಮಾಡಬಹುದು. ಅಥವಾ, ನಿಮಗೆ ಸರಿಕಾಣುವ (ಸೂಕ್ತವಾದ) ಯಾವುದಾದರೂ ಒಂದು ತಂತ್ರವನ್ನು ಆರಿಸಿಕೊಂಡು 21 ದಿವಸಗಳವರೆಗೆ ಬಿಡದೆ ಅಭ್ಯಾಸವನ್ನು ಮುಂದುವರಿಸಿರಿ. (ಮಹಾಮಂತ್ರ, ದುಃಖಹರಣ ಅಥವಾ ಮಣಿಪೂರಕ ಶುದ್ಧಿಕ್ರಿಯ - ಇವುಗಳು ಹೊಸದಾಗಿ ಅಭ್ಯಾಸ ಮಾಡುವವರಿಗೆ ಬಹಳ ಉಪಯುಕ್ತವಾದವುಗಳು). ಆನಂತರ ನೀವು ಹೊಸತಂತ್ರವನ್ನು ಆರಿಸಿಕೊಳ್ಳಬಹುದು. ಪ್ರಾಮಾಣಿಕವಾಗಿ, ಅಭ್ಯಾಸ ಮಾಡಿದರೆ, ಈ ತಂತ್ರಗಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪವಾಡಸದೃಶವಾದ ಪರಿಣಾಮವನ್ನುಂಟುಮಾಡುತ್ತವೆ.
ಏಳು ತಂತ್ರಗಳ - ಧ್ಯಾನ ವಿಧಾನವನ್ನು ಕಲಿಸುವ ಧ್ವನಿ ಸುರುಳಿಗಳು ಲಭ್ಯವಿವೆ.
ಈ ಕ್ರಮವಿಲ್ಲದ ಉಸಿರಾಟದಲ್ಲಿ ನಿಗದಿತ ಲಯಬದ್ಧತೆ ಇಲ್ಲ. ಸುಮ್ಮನೇ ಎಷ್ಟು ಸಾಧ್ಯವೋ ಅಷ್ಟು ಆಳವಾಗಿ ಉಸಿರಾಡುವುದು ಮತ್ತೆಲ್ಲವನ್ನೂ ಮರೆತು ಆಳವಾಗಿ ಉಸಿರಾಡುವುದೊಂದೇ. ನೀವೇ ಉಸಿರಾಟವಾಗಿ ಬಿಡುವುದು.
ಈ ಅವ್ಯವಸ್ಥಿತ ಉಸಿರಾಡುವ ಸಮಯದಲ್ಲಿ, ಶರೀರ ಪ್ರಜ್ಞೆಯು ತನ್ನ ವಶಕ್ಕೆ ಶರೀರವನ್ನು ತೆಗೆದುಕೊಳ್ಳುವುದರಿಂದ, ತನಗೆ ಬೇಕಾದಷ್ಟು ಆಮ್ಲಜನಕವನ್ನು (oxygen) ತಾನೇ ತೆಗೆದುಕೊಳ್ಳುತ್ತದೆ. ನೀವು ಉಸಿರಾಟವನ್ನು ನಿಯಂತ್ರಣದಲ್ಲಿಡಬೇಕಾಗಿಲ್ಲ. ಇದು ಪ್ರಾಣಾಯಾಮವಲ್ಲ.
ನೀವೇನಾದರೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಳ್ಳವರಾದರೆ, ಸಾಧ್ಯವಾದಷ್ಟು ಮಾತ್ರ ನಿಮಗೆ ತೊಂದರೆ ಮಾಡಿಕೊಳ್ಳದೆ ಉಸಿರಾಡಿರಿ. ಯಾವ ಸಮಸ್ಯೆಯೂ ಇಲ್ಲದಿದ್ದರೆ ನಿಮ್ಮ ಪೂರ್ಣಶಕ್ತಿಯನ್ನು ಉಪಯೋಗಿಸಿ ಉಸಿರಾಡಿರಿ.
ಈ 10 ನಿಮಿಷಗಳಲ್ಲಿ ಉತ್ಪತ್ತಿಯಾದ ಶಾಖವು ಎಲ್ಲಾ ಘನೀಭೂತವಾದ ನಕಾರಾತ್ಮಕ ಶಕ್ತಿಗಳನ್ನು ಕರಗಿಸಿಬಿಡುತ್ತದೆ. ನಿಮ್ಮ ಸುಪ್ತಪ್ರಜ್ಞೆಯು ಚೇತನಗೊಳ್ಳಲ್ಪಡುತ್ತದೆ. ನಿಗದಿತವಾದ ಉಸಿರಾಟದ ಯಾವ ಪ್ರಯೋಗವೂ ಇಲ್ಲ. ನಿಮ್ಮ ಶರೀರವು ತನಗೆ ಹೇಗೆ ಬೇಕೋ ಹಾಗೆ ವರ್ತಿಸಲಿ. ನೀವು ನಿಂತಿರಬೇಕು ಅಷ್ಟೆ.
ಮುಂದಿನ 10 ನಿಮಿಷಗಳು ವಿರೇಚನ ಶುದ್ಧೀಕರಣ
ವಿರೇಚನ ಎಂದರೆ: ನಿಮ್ಮ ಶರೀರದೊಳಗೆ ಬೀಜರೂಪವಾಗಿ ಇರುವ ಮತ್ತೊಂದು ಶರೀರವನ್ನು (ಬೀಜ ಶರೀರವನ್ನು) ತೆರೆಯುವ ಕ್ರಿಯೆ. ವಿರೇಚನದ ಸಮಯದಲ್ಲಿ (ನಿಯಂತ್ರಿಸಲ್ಪಟ್ಟ ವಾತಾವರಣದಲ್ಲಿ) ನೀವು ತಡೆಹಿಡಿಯಲ್ಪಟ್ಟ ಭಾವನೆಗಳನ್ನು, ಮತ್ತೊಬ್ಬರಿಗೆ ತೊಂದರೆಯಾಗದಂತೆ, ಮತ್ತು ಅದನ್ನು ಒಂದು ಖಾಯಿಲೆ ಎಂದು ಪರಿಗಣಿಸಿಕೊಳ್ಳದೆ, ಹೊರಕ್ಕೆ ಎಸೆಯುವ (ಹೊರಗೆ ಹಾಕುವ) ವಿಧಾನ ಅಥವಾ ಒಂದು ಪ್ರಕ್ರಿಯೆ. ಎಷ್ಟು ಸಾಧ್ಯವೋ ಘಳಿಗೆಯಲ್ಲಿ ನೀವು ಸಮಾಧಿಯನ್ನು ಬೇಕಾದರೂ ಅನುಭವಿಸಬಹುದು. ಇದು ಗುರುಗಳ ಸನ್ನಿಧಿಯಲ್ಲಿ ವಿಶೇಷವಾಗಿ ಸಾಧ್ಯವಾಗಬಹುದು. ಯಾವ ಘಳಿಗೆಯಲ್ಲಿ ನಿಮ್ಮ ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೋ, ಆಗ ನೀವು ಮಹತ್ತರವಾದ ಚೈತನ್ಯವು ನಿಮ್ಮ ಒಳಕ್ಕೇ ನುಗ್ಗಿದಂತಾದ ಅನುಭವವನ್ನು ಪಡೆಯುತ್ತೀರಿ.
ಕೆಲವು ಘಳಿಗೆಯ ನಂತರ, ಆಲೋಚನೆಗಳು ಪುನಃ ನಿಮ್ಮಲ್ಲಿ ಬರುವುದನ್ನು ಕಾಣುವಿರಿ (ತಿಳಿಯುವಿರಿ). ಆಗ, ಒಳ್ಳೆಯ ಮನೋಭಾವದಿಂದ ಸುಮ್ಮನೆ ಕುಳಿತುಕೊಳ್ಳಿರಿ ಮತ್ತು ನಿಧಾನವಾಗಿ ನಿಮ್ಮ ಆಲೋಚನೆಗಳನ್ನು ಸಾಕ್ಷೀಭಾವದಿಂದ ನೋಡಿ. ಸಹಜವಾಗಿ ಉಸಿರಾಡಿ.
ಯಾವುದರ ಮೇಲೂ ಏಕಾಗ್ರಚಿತ್ತರಾಗಬೇಡಿ. ಧ್ಯಾನವೆಂದರೆ ಏಕಾಗ್ರತೆಯಲ್ಲ, ಧ್ಯಾನವೆಂದರೆ ಅರಿವು (ಪ್ರಜ್ಞೆ).
ಆದ್ದರಿಂದ, ನಿಮ್ಮ ಆಲೋಚನೆಗಳ ಅರಿವನ್ನು ಹೊಂದಿರಿ, ನಿಮ್ಮ ಶರೀರದಲ್ಲಿ ಮತ್ತು ಶರೀರದ ಹೊರಗಡೆ ಏನಾಗುತ್ತದೆ ಎಂಬುದನ್ನು ಸಾಕ್ಷಿಯಾಗಿ ನೋಡಿ.
ನೀವು ಈ ತಂತ್ರದ ಕಾರ್ಯಸಾಮರ್ಥ್ಯತೆಯನ್ನು ಪರೀಕ್ಷಿಸಬೇಕೆನಿಸಿದರೆ, ಹೋಗಿ, ನಿಮ್ಮ ಭಾವಚಿತ್ರವನ್ನು (Photo) ಇದೇ ದಿನ ತೆಗೆಸಿ ನೋಡಿಕೊಳ್ಳಿ.
ಈ ತಂತ್ರವನ್ನು ಅಭ್ಯಾಸ ಮಾಡಿದ 15 ದಿವಸಗಳ ನಂತರ, ಇನ್ನೊಂದು ಫೋಟೋ ತೆಗೆಸಿ ಎರಡನ್ನೂ ಹೊಂದಿಸಿ ನೋಡಿ. ನಾನು ಭರವಸೆ ಕೊಡುತ್ತೇನೆ, ನಿಮ್ಮ ಮುಖವು ಪೂರ್ತಿಯಾಗಿ ಬೇರೆಯಾಗಿಯೇ ಕಾಣುತ್ತದೆ. ನಿಮ್ಮ ಕಣ್ಣುಗಳು ಬಹಳ ಹೊಳಪಿನಿಂದ ಸುಂದರವಾಗಿ ಕಾಣುತ್ತವೆ. ನೀವು (ತೇಜಸ್ಸಿನಿಂದ) ಅರಳುತ್ತೀರಿ. ಕಲ್ಪಿಸಿದ ಬಹಳಷ್ಟು ವಿಚಾರಗಳು ನಡೆಯುವುದೇ ಇಲ್ಲ. ಆದರೆ ಸಾವು ಮಾತ್ರ ನಿಶ್ಚಿತ!
ಸಾವನ್ನು ನೀವು ಸರಿಯಾಗಿ ಕಲ್ಪಿಸಲು ಆಗುತ್ತದೋ ಇಲ್ಲವೋ ಎಂಬುದನ್ನು ಕುರಿತು ಚಿಂತೆ ಮಾಡುವುದು ಬೇಡ. ಯಾರೂ ಸಾವನ್ನು ಸರಿಯಾಗಿ ಕಲ್ಪನೆ ಮಾಡಲು ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮದೇ ಆದ ರೀತಿಯಲ್ಲಿ (ಅರ್ಥದಲ್ಲಿ) ವಿಜುವಲೈಸ್ ಮಾಡಲು ಪ್ರಯತ್ನಿಸಿ.
ನೀವು ಯಾವಾಗ ಕೆಳಗೆ ಮಲಗಿಕೊಳ್ಳುತ್ತೀರೋ, ನಿಮಗೂ ನಿಮ್ಮ ಅಕ್ಕಪಕ್ಕದಲ್ಲಿರುವವರಿಗೂ ಸಾಕಷ್ಟು ಜಾಗ ಇರುವುದನ್ನು ಖಚಿತ ಪಡಿಸಿಕೊಳ್ಳಿರಿ
- ಕಡೆಯ ಪಕ್ಷ ಒಂದು ಅಡಿ ಎರಡೂ ಕಡೆ. ನಿಮ್ಮ ಆಕಾಶತತ್ವದ ಶರೀರವು (ಸೂಕ್ಷ್ಮ ಶರೀರವು) ವಿಸ್ತರಿಸುವುದಿದೆ ಮತ್ತು ನೀವುಗಳು ಒಬ್ಬರಿಗೊಬ್ಬರು ಬಹಳ ಹತ್ತಿರವಿದ್ದರೆ, ನೀವು ಏನೋ ಒಂದು ತರಹ ಮುಜುಗರವನ್ನು ಅನುಭವಿಸುತ್ತೀರಿ. ಆದರೆ ಅದನ್ನು ಸಮಾಧಾನವಾಗಿ ಶಾಂತಿಯಿಂದ ಮಾಡಿ - ಸತ್ತವರು ಜಾಗಕ್ಕೆ ಹೊಡೆದಾಡುವುದಿಲ್ಲ!
ಆದ್ದರಿಂದ, ಈಗ ನೀವು ಸಾಯಲು ಸಿದ್ಧವಿದ್ದೀರಾ?
(ಹೆಚ್ಚಿನ ಸೂಚನೆಗಳು ASP ಧ್ವನಿ ಸುರುಳಿಯಲ್ಲಿದೆ). ಈಗ (ಈ ತಂತ್ರದಲ್ಲಿ) ನೀವು ನಿಮಗೆ ಗೊತ್ತಿಲ್ಲದೇ ಇರುವ ಭಾಷೆಯಲ್ಲಿ ಮಾತನಾಡುತ್ತೀರಿ.
ನಿಮ್ಮ ಚಿಂತೆಗಳು, ನಕಾರಾತ್ಮಕ ಅನಿಸಿಕೆಗಳು, ತಡೆ ಹಿಡಿಯಲ್ಪಟ್ಟ ಭಾವನೆಗಳು ಇವನ್ನೆಲ್ಲಾ ನೀವು ನಿಮ್ಮ ನಾಭಿ ಪ್ರದೇಶದಲ್ಲಿ ಒಂದು ಹೊರೆಯಂತೆ ಹಿಡಿದಿಟ್ಟುಕೊಂಡಿದ್ದೀರಿ. ಇದರಿಂದ, ಆ ಭಾಗವು ಎಷ್ಟೊಂದು ಭಾರವಾಗಿದೆ ಎನ್ನುವುದು ಗೊತ್ತಾ ನಿಮಗೆ?
ಈಗ, ಈ ರೀತಿ ತಡೆಹಿಡಿಯಲ್ಪಟ್ಟ ಎಲ್ಲವನ್ನೂ, ಶಬ್ದಗಳ ಮೂಲಕ, ಗಟ್ಟಿಯಾಗಿ ಕೂಗಾಡುವುದರ ಮೂಲಕ ಮತ್ತು ಕೃತಿಯಲ್ಲಿ ವ್ಯಕ್ತಪಡಿಸುವುದರ ಮೂಲಕ ಹೊರತರುತ್ತೀರಿ. ಯಾವ ಪದಗಳನ್ನೂ ಉಪಯೋಗಿಸಬಾರದು, ಜ್ಞಾಪಕದಲ್ಲಿಡಿ. ನೀವು ಪದಗಳನ್ನು ಅಥವಾ ಶಬ್ದಗಳನ್ನು ಉಪಯೋಗಿಸಿದಿ ರೆಂದರೆ, ನಿಮ್ಮ ಮನದೊಳಗಿನ ಹರಟೆ ಪ್ರಾರಂಭವಾಗಿ ಬಿಡುತ್ತೆ. ಈ ಧ್ಯಾನದ ಸಮಯದಲ್ಲಿ ನಿಮ್ಮ ಆಂತರಿಕ ಹರಟೆಗೆ ಅವಕಾಶ ಕೊಡಬೇಡಿರಿ. ನಿಮ್ಮ ಮನಸ್ಸಿನ ಆಳದಲ್ಲಿ, ಮೂಲದಲ್ಲಿ ತಡೆಹಿಡಿಯಲ್ಪಟ್ಟ (ಅನಿಸಿಕೆ, ಭಾವನೆ, ವೇದನೆ, ಚಿಂತೆ) ಎಲ್ಲವನ್ನೂ ಕಿತ್ತು, ಝಾಡಿಸಿ ನಿಮ್ಮಿಂದ ಹೊರ ದೂಡಿಬಿಡಿ! ಶಬ್ದಗಳ ಮೂಲಕ ವಾಂತಿ ಮಾಡಿಬಿರಿ (ವಮನ ಮಾಡಿಬಿಡಿ).
ಮೊದಲು ಒಂದು ನಿಮಿಷ, ನಿಮ್ಮ ಮಣಿಪೂರಕ ಭಾಗದ ಕಡೆ ಮನಸ್ಸನ್ನು ಕೇಂದ್ರೀಕರಿಸಿರಿ. ನಿಮ್ಮ ಎಲ್ಲಾ ಚಿಂತೆಗಳೂ ಮತ್ತು ತಡೆಹಿಡಿಯಲ್ಪಟ್ಟ ನಕಾರಾತ್ಮಕವಾದ, ಎಲ್ಲವೂ ನಿಮ್ಮ ಮನಸ್ಸಿನಲ್ಲಿ ಏಳಲು (ಹೊರಬರಲು) ಆರಂಭವಾಗಿ ಬಿಡುತ್ತೆ.
ಈಗ, ನೀವು ಒಂದು ಘರ್ಷಣೆಯಲ್ಲಿ ಅಥವಾ ತಿಕ್ಕಾಟದಲ್ಲಿ ಸಿಕ್ಕಿಕೊಂಡಿದ್ದೀರೆಂದು ಕಲ್ಪಿಸಿಕೊಳ್ಳಿರಿ. ನೀವು ಯಾರೊಂದಿಗೋ ತೀವ್ರವಾಗಿ ಹೊಡೆದಾಡುತ್ತಿದ್ದೀರೆಂದು ಅಂದುಕೊಳ್ಳಿ. ಅವರೊಂದಿಗೆ - ಮಕ್ಕಳು ಅಸ್ಪಷ್ಟವಾಗಿ ಮಾತನಾಡುವಂತೆ, ನಿಮಗೆ ಗೊತ್ತಿಲ್ಲದ ಭಾಷೆಯಲ್ಲಿ, ಅರ್ಥರಹಿತ
ದಿನ 4
ಮಹಾಮಂತ್ರ ಧ್ಯಾನ (ಸೃಷ್ಟಿಪೂರ್ವದ ಮೂಲನಾದವನ್ನು ಪಠಿಸುವುದು)
ಗುಣಪಡಿಸುವ ಚಕ್ರ : ಅನಾಹತ ಚಕ್ರವಿರುವ ಸ್ಥಳ : ಹೃದಯ ಪ್ರದೇಶದಲ್ಲಿ ಚಕ್ರವು ಬಂಧಿಸಲ್ಪಡುವುದು : ಅನ್ಯರು ಗಮನಿಸಬೇಕೆಂದು ಕೇಳುವುದು. ಚಕ್ರದ ಬಂಧನ ಬಿಡುಗಡೆ : ನಿಸ್ವಾರ್ಥ ಪ್ರೇಮ ಧ್ಯಾನ ತಂತ್ರ ಬಂದಿರುವುದು : ಟಿಬೇಟಿಯನ್ನರ ತಂತ್ರ ಕಾಲಾವಧಿ : 30 ನಿಮಿಷಗಳು
ಮಹಾಮಂತ್ರ ಧ್ಯಾನವು ಮನಸ್ಸನ್ನು ಕೇಂದ್ರೀಕರಿಸಿ, ಸ್ಥಿರಗೊಳಿಸುವುದಾಗಿದೆ. (ಮನಸ್ಸ ಸ್ಥಿರಃ ಇತಿ - ಮಂತ್ರಃ) (ಮನಸ್ಸನ್ನು ಸ್ಥಿರಗೊಳಿಸುವುದೇ - ಮಂತ್ರ)
ಈ ಧ್ಯಾನವನ್ನು ಮಾಡುವುದರಿಂದ ನಿಮ್ಮ ಸಂಪೂರ್ಣ ಚೈತನ್ಯವು ನಿಮ್ಮಲ್ಲಿಯೇ (ನಿಮ್ಮ ಅಸ್ತಿತ್ವದಲ್ಲಿಯೇ) ಕೇಂದ್ರೀಕರಿಸಲ್ಪಡುತ್ತದೆ. ಈ ತಂತ್ರವು ನಿಮ್ಮ ಪೂರ್ಣ ಶರೀರವನ್ನು ಮಂತ್ರಮಯವನ್ನಾಗಿ ಮಾಡಲು (ಮಂತ್ರದ ಮೂಲಕ ಕಂಪನವನ್ನುಂಟು ಮಾಡಲು) ರಚಿಸಲ್ಪಟ್ಟಿದೆ. ಇದು ನಿಮ್ಮನ್ನು ಉತ್ಸನ್ನವಾದ 'ಅಜಪ'ದ ಸ್ಥಿತಿಗೆ ಕೊಂಡೊಯ್ಯುವುದಾಗಿದೆ. ಅಂದರೆ, ನೀವು ಜಪವನ್ನು ಮಾಡುವ ಅವಶ್ಯಕತೆಯೇ ಇಲ್ಲದ ಹಾಗೂ ಆ ಜಪವು ತಾನೇತಾನಾಗಿ ಉಂಟಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ. ನೀವು ಜಪವೇ ಆಗಿಬಿಡುತ್ತೀರಿ.
ನೀವು ಮಂತ್ರವನ್ನು ಪುನರುಚ್ಚರಿಸಬೇಕಾಗಿಲ್ಲ, ಆ ಮಂತ್ರವೇ ನಿಮ್ಮನ್ನು ಉಚ್ಚರಿಸುತ್ತದೆ ಅಂದರೆ ನೀವೇ ಮಂತ್ರದ ಅಧೀನವಾಗಿಬಿಡುತ್ತೀರಿ.
ಮಹಾಮಂತ್ರ ಧ್ಯಾನಕ್ಕೆ ಸೂಚನೆಗಳು
ವಿಶ್ರಾಂತಿಪೂರ್ವಕವಾಗಿ, ಸುಖಾಸನದಲ್ಲಿ ಕುಳಿತುಕೊಂಡು, ಹಸ್ತಗಳನ್ನು ಮೇಲ್ಮುಖವನ್ನಾಗಿಸಿ ಮಂಡಿಯ ಮೇಲೆ ಕೈಗಳನ್ನು ಇಟ್ಟುಕೊಳ್ಳಿರಿ. ನಿಮ್ಮ ಕೈಗಡಿಯಾರ, ಆಭರಣ ಇವುಗಳು ಚೈತನ್ಯದ ಹರಿವನ್ನು ತಡೆಯುವುದರಿಂದ, ಅವುಗಳನ್ನು ತೆಗೆದಿಟ್ಟುಬಿಡಿ.
ನಿಮ್ಮ ಬೆನ್ನುಹುರಿಯು ನೇರವಾಗಿರಲಿ. ನಿಮ್ಮ ತಲೆ, ಕುತ್ತಿಗೆ ಮತ್ತು ಬೆನ್ನು ಒಂದೇ ಸರಳರೇಖೆಯಲ್ಲಿರಲಿ.
ಕಣ್ಣುಗಳನ್ನು ಮುಚ್ಚಿರಿ. ಸಂಪೂರ್ಣವಾಗಿ ಸರಿಯಾಗಿ ಮುಚ್ಚಿಕೊಳ್ಳಿರಿ. ಸಾಮಾನ್ಯವಾಗಿ, ನೀವು ಕಣ್ಣುಗಳನ್ನು ಮುಚ್ಚಿದಾಗ, ಹೊರಗಿನ ದೃಶ್ಯಜಗತ್ತನ್ನು (T.V. ಯನ್ನು) ಮುಚ್ಚಿ, ಒಳಗಿನ ದೃಶ್ಯಜಗತ್ತನ್ನು (T.V. ಯನ್ನು) ತೆರೆದಂತೆ ಆಗುತ್ತದೆ.
ಆದ್ದರಿಂದ ಕೇವಲ ನಿಮ್ಮ ಕಣ್ಣುರೆಪ್ಪೆಗಳನ್ನು ಮಾತ್ರ ಮುಚ್ಚದೆ - ಸರಿಯಾದ ರೀತಿಯಲ್ಲಿ ಕಣ್ಣುಗಳನ್ನು ಮುಚ್ಚಿರಿ! ಇದಕ್ಕೊಂದು ಒಳ್ಳೆಯ ವಿಧಾನವೆಂದರೆ, ಕ್ಷಣಕಾಲ ನಿಮ್ಮ ಕಣ್ಣುಗುಡ್ಡೆಗಳು ಕಲ್ಲುಗಳಾಗಿವೆ ಎಂದು ಕಲ್ಪಿಸಿಕೊಳ್ಳಿ ಅಷ್ಟೆ. ಆ ಕೂಡಲೇ ನಿಮ್ಮ ಆಲೋಚನೆಗಳೂ ಸಹ ನಿಂತುಬಿಡುತ್ತದೆ ಅಥವಾ ಕಡಮೆಯಾಗಿಬಿಡುತ್ತವೆ. ಈಗ ನಿಮ್ಮ ಬಾಯನ್ನು ಮುಚ್ಚಿಕೊಂಡು ಮ್ ... ಶಬ್ದವನ್ನು ಪ್ರಾರಂಭಿಸಿರಿ. ಮ್ ... ಎನ್ನುವ ಧ್ವನಿತರಂಗವನ್ನು ಮಾತ್ರ (ಬಾಯಿ ಮುಚ್ಚಿಕೊಂಡೇ) ಉಂಟುಮಾಡುತ್ತಿರಿ. ಬೇರೆ ಯಾವ ಮಂತ್ರವನ್ನೂ ಉಚ್ಚರಿಸದಿರಿ, 'ಓಂ' ಎಂದಲೂ ಸಹ ಉಚ್ಚರಿಸಬೇಡಿ.
ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತೂ ಉಚ್ಚರಿಸಿರಿ. ನಿಮ್ಮ ಶರೀರವನ್ನು ತೂಗಾಡಲು ಬಿಡಿ. ನಿಮ್ಮ ನಾಭಿಕಮಲದಿಂದ ಹೊರಹೊಮ್ಮುವಂತೆ ಉಚ್ಚರಿಸಿರಿ, ಅಂದರೆ ಕಟಿಪ್ರದೇಶದಿಂದ.
ಏನೇನು ಆಗುತ್ತದೆಯೋ ಆಗಲು ಬಿಡಿ. ದುಃಖದಿಂದ ಕಣ್ಣೀರು ಬಂದರೆ ಬರಲಿ ಬಿಡಿ, ನಗು, ಕೆಮ್ಮುವಿಕೆ, ಛಳಿ - ಬರಲಿ ಬಿಡಿ. ಏನು ಬೇಕಾದರೂ ಆಗಲಿ, ಆಗಲು ಬಿಡಿ, ಹೋಗಲು ಬಿಡಿ, ಯಾವುದನ್ನೂ ಹಿಡಿದಿಟ್ಟುಕೊಳ್ಳಬೇಡಿ (ತಡೆಯಬೇಡಿ).
ಏನೇನು ಆಲೋಚನೆಗಳು ಬರುತ್ತವೆಯೋ ಅವುಗಳನ್ನು ನಿಮ್ಮ ಹಮ್ಮಿಂಗ್ನಲ್ಲಿ ಸೇರಿಸಿ ಹೊರಹೋಗಲು ಬಿಡಿ. ನಿಧಾನವಾಗಿ, ಅವುಗಳೆಲ್ಲವೂ ಮಾಯವಾಗಿ ಬಿಡುತ್ತವೆ.
30 ನಿಮಿಷಗಳ ನಂತರ ಸಂಗೀತವು ನಿಲ್ಲುತ್ತದೆ ಹಾಗೂ ಜಾಗಟೆಯ ಧ್ವನಿ ಕೇಳಿಬರುತ್ತದೆ.
ಆ ಕೂಡಲೇ ಹಮ್ಮಿಂಗ್ನ್ನು ನಿಲ್ಲಿಸಿಬಿಡಿ.
ಮಹತ್ತರವಾದ ಒಂದು ಮೌನಶಾಂತಿಯು ನಿಮ್ಮನ್ನು ಆವರಿಸಿಬಿಡುತ್ತದೆ.
ಒಂದು ಕ್ಷಣ ಕಾಲವೇ ನಿಂತುಬಿಡುತ್ತದೆ. (ಸ್ತಬ್ಧತೆಯು ಉಂಟಾಗುತ್ತದೆ). ಈ ಮೌನವನ್ನು ಸಾಕ್ಷೀಭಾವದಿಂದ ನೋಡಿ.
ಅತಿಶಯವಾದ ಶಾಂತತೆಯು (ನಿಮ್ಮ ಒಳಗೂ, ಹೊರಗೂ, ಸುತ್ತಲೂ, ಎಲ್ಲೆಲ್ಲೂ) ಇರುವುದನ್ನು ಅನುಭವಿಸಿರಿ.
ಸ್ವಲ್ಪ ಹೊತ್ತಾದ ನಂತರ, ಆಲೋಚನೆಗಳು ನಿಧಾನವಾಗಿ ಈ ಶಾಂತತೆಯಲ್ಲಿ ತಲೆ ಎತ್ತಲು ಪ್ರಾರಂಭಿಸುತ್ತವೆ. ಅವುಗಳನ್ನು ತಡೆಯಬೇಡಿ, ಅವುಗಳಲ್ಲಿ ತೊಡಗಬೇಡಿ. ಸುಮ್ಮನೆ ಆ ಆಲೋಚನೆಗಳನ್ನು ಗಮನಿಸುತ್ತಿರಿ ಅಷ್ಟೆ.
ನೀವು ಕೇಂದ್ರದಲ್ಲಿರುವ ಒಂದು ಅರಿವು ಮಾತ್ರವಾಗಿರಿ. ನಿಮ್ಮ ಅನಾಹತ ಚಕ್ರದಲ್ಲಿಯೇ ಇರಿ. ನೀವು ಸಂಪೂರ್ಣವಾಗಿ ಕೇಂದ್ರೀಕರಿಸಿ, ಶಾಂತತೆ ಯಲ್ಲಿರುವ ಅನುಭವವನ್ನು ಪಡೆಯುತ್ತೀರಿ.
ಈ ಧ್ಯಾನವನ್ನು ಬೆಳಗಿನ ಝಾವ ಅಭ್ಯಾಸ ಮಾಡುವುದು ಅತ್ಯುತ್ತಮ. ಇದು ಅತಿಶಯವಾದ ಚೈತನ್ಯವನ್ನು ನಿಮ್ಮ ಶರೀರದಲ್ಲಿ ಉತ್ಪತ್ತಿ ಮಾಡುತ್ತದೆ. ಇದನ್ನು ರಾತ್ರಿ ವೇಳೆಯಲ್ಲಿ ಅಭ್ಯಾಸ ಮಾಡಿದರೆ, ನಿಮ್ಮ ನಿದ್ದೆಗೆ ತೊಡಕಾಗಬಹುದು. ಆದ್ದರಿಂದ ಜಾಗ್ ಮಾಡುತ್ತಲೇ ಇರಿ. ಚೈತನ್ಯವು ಇನ್ನೂ ವೃದ್ಧಿಸಲಿ!
30 ನಿಮಿಷಗಳ ನಂತರ, ನಿಲ್ಲಿಸಿಬಿಡಿ.
ಮುಂದಿನ 10 ನಿಮಿಷಗಳ ಕಾಲ, ನೀವು ಎಲ್ಲೆಲ್ಲಿ ಇರುವಿರೋ ಅಲ್ಲಿಯೇ ಶಾಂತವಾಗಿ ಸುಮ್ಮನೇ ಕುಳಿತುಕೊಂಡು ಬಿಡಿ. ಕಣ್ಣುಗಳು ಮುಚ್ಚಿಯೇ ಇರಲಿ. ನಿಮ್ಮ ಗಮನವನ್ನೆಲ್ಲಾ ವಿಶುದ್ಧಿ ಚಕ್ರದ ಮೇಲೆಯೇ ಕೇಂದ್ರೀಕರಿಸಿರಿ. ಈ ಪರಿಸ್ಥಿತಿಯಲ್ಲಿ, ನೀವು ಜಾಗ್ ಮಾಡುವಾಗ ಬಿಡುಗಡೆಯಾದ ಚೈತನ್ಯವನ್ನೆಲ್ಲಾ ನೀವೇ ಹೀರಿಕೊಳ್ಳುತ್ತೀರಿ.
ರೇಷ್ಮೆ, ಬಂಗಾರ ಮತ್ತು ವಜ್ರ ಇವುಗಳು ಚೈತನ್ಯವನ್ನು ಸಂಗ್ರಹಿಸುವ ಉತ್ತಮ ಉಗ್ರಾಣಗಳಿದ್ದಂತೆ. ಈ ಧ್ಯಾನವನ್ನು ಮಾಡುವ ಸಮಯದಲ್ಲಿ (ಈ ಪದಾರ್ಥಗಳನ್ನು) ಇವುಗಳನ್ನು ಧರಿಸಿದ್ದರೆ ಅವುಗಳು ನಿಮ್ಮಿಂದ ಬಿಡಲ್ಪಟ್ಟ ಚೈತನ್ಯವನ್ನು ಹೀರಿಕೊಂಡು ಬಹಳ ಕಾಲದ ವರೆಗೆ ಉಳಿಸಿಕೊಂಡಿರಲು ಸಾಧ್ಯವಾಗುತ್ತದೆ.
ದಿನ 6
ದಿವ್ಯನೇತ್ರ ಧ್ಯಾನ
ಗುಣಪಡಿಸುವ ಚಕ್ರ : ಆಜ್ಞಾ
ಚಕ್ರವಿರುವ ಸ್ಥಳ : ಭ್ರೂಮಧ್ಯ
ಚಕ್ರವು ಬಂಧಿಸಲ್ಪಡುವುದು : ಗಂಭೀರತೆ (ತೀವ್ರತೆಯಿಂದ ಪರಿಗಣಿಸುವಿಕೆ Seriousness)
ಚಕ್ರದ ಬಂಧನ ಬಿಡುಗಡೆ : ಮುಗ್ಧತೆ ಮತ್ತು ಸರಳತೆ
ಧ್ಯಾನ ತಂತ್ರ ಬಂದಿರುವುದು : ಕ್ರಿಶ್ಚಿಯಾನಿಟಿ
ಕಾಲಾವಧಿ : 30 ನಿಮಿಷಗಳು
ಆಜ್ಞಾ ಚಕ್ರವನ್ನು ಚಕ್ರಗಳ ರಾಜ ಎಂದು ಪರಿಗಣಿಸಲಾಗಿದೆ - ಮಾಸ್ಟರ್ ಚಕ್ರ (ಶ್ರೇಷ್ಠ ಚಕ್ರ). ಇದು ಎಷ್ಟು ಪ್ರಾಮುಖ್ಯವಾದ ಚಕ್ರವೆಂದರೆ, ಯಾವ ಧರ್ಮದವರೂ ಈ ಚಕ್ರವನ್ನು ಕಾರ್ಯಗತಗೊಳಿಸದೇ ಬಿಟ್ಟಿಲ್ಲ. ಆಜ್ಞಾ ಚಕ್ರವು ಎಚ್ಚರಗೊಂಡಾಗ, (ಕಾರ್ಯಗತಗೊಂಡಾಗ) ಪೂರ್ಣ ಅಸ್ತಿತ್ವವೇ ಬೇರೆಬೇರೆಯ ಕ್ಷೇತ್ರಗಳಲ್ಲಿ ಪ್ರವೇಶಿಸುತ್ತದೆ.
ಸಮಸ್ತ ಸಾಮರ್ಥ್ಯದ ಪದರಗಳು ತೆರೆಯಲ್ಪಡುತ್ತವೆ.
ದಿವ್ಯ ನೇತ್ರ ಧ್ಯಾನವು, ಗುರುವಿನ ಚೈತನ್ಯದೊಡನೆ ನೇರ ಸಂಪರ್ಕವನ್ನು ಪ್ರತಿಷ್ಠಾಪಿಸುವ, ಅತೀವ ಶಕ್ತಿಯುತವಾದ ತಂತ್ರ. ಈ ಧ್ಯಾನವನ್ನು ಗುರುಗಳ
ಕಣ್ಣುಗಳನ್ನು ಮಿಟುಕಿಸದಂತೆ ಇರಲು ಪ್ರಯತ್ನಿಸಿರಿ. ಮೊದಮೊದಲು ಸ್ವಲ್ಪ ತೊಂದರೆಯಾಗಬಹುದು. ಕಣ್ಣುಗಳು ಉರಿಯಬಹುದು, ಕಣ್ಣಿನಲ್ಲಿ ನೀರು ಬರಬಹುದು. ಆಗಲಿ ಬಿಡಿ. ಇದೆಲ್ಲಾ ಶುದ್ದೀಕರಿಸುವ ಕ್ರಿಯೆಯ ಒಂದು ಭಾಗ. ಆ ಸಾಮಾನ್ಯವಾದ ಅನುಭವವನ್ನು ಈ ಧ್ಯಾನದ ವೇಳೆಯಲ್ಲಿ ಪಡೆಯಲು ಸಿದ್ಧವಿರಿ. ಹಿಂದೆ ಇಲ್ಲಿನವರೆಗೂ ನಿಮ್ಮ ಆಜ್ಞಾಚಕ್ರವನ್ನು ಸಕ್ರಿಯ ಗೊಳಿಸುವುದಿಲ್ಲ.ಆಜ್ಞಾಚಕ್ರವನ್ನು ತೆರೆಯುವುದು ಅಂದರೆ ನಿಮಗೆ ಒಂದು ಹೊಸ ಕ್ಷೇತ್ರದ (ಹೊಸ ಸಾಮ್ರಾಜ್ಯದ) ಅನುಭವವೇ ದೊರಕಿದಂತೆ. ನೀವು ನಿಮ್ಮ ಇಷ್ಟದೇವತೆಯನ್ನು, ಗುರುಗಳನ್ನು ಕಾಣಬಹುದು (ದರ್ಶನವಾಗಬಹುದು) ಅಥವಾ ಸ್ವಾಮೀಜಿಯವರ ರೂಪವು ಮಾಯವಾಗಿ ಒಂದು ಬೆಳಕಿನ ಕಿರಣ ವಾಗಿ, ಪ್ರಭೆಯಾಗಿ ಪರಿವರ್ತಿಸಬಹುದು. ಕೆಲವು ವೇಳೆ ಆ ರೂಪ ಅಥವಾ ಚಿತ್ರವಿರುವ ಸ್ಥಳದಲ್ಲಿ ಪೂರ್ಣವಾಗಿ ಏನೂ ಇಲ್ಲದಿರುವಿಕೆಯನ್ನು ನೋಡ ಬಹುದು.
ಈ ಸಂದರ್ಭದಲ್ಲಿ ಭಯಪಡಬೇಡಿ ಅಥವಾ ಸ್ಪಷ್ಟತೆಯನ್ನು ಕಳೆದುಕೊಳ್ಳಬೇಡಿ. ನೀವು ವಶೀಕರಿಸಲ್ಪಡುತ್ತಿಲ್ಲ! ಸರಿಯಾಗಿ ಹೇಳಬೇಕೆಂದರೆ, ಈಗ ನೀವು ವಶೀಕರಣದಿಂದ ವಿಮುಕ್ತರಾಗುತ್ತಿದ್ದೀರಿ. ಈಗ ಮಾತ್ರವೇ ನಿಮ್ಮ ದೈವೀಪ್ರಜ್ಞೆಯು ಎಚ್ಚರಗೊಂಡಿದೆ. ನೀವು ಕೇವಲ ಜ್ಯೋತಿಯನ್ನೋ, ಶೂನ್ಯತ್ವವನ್ನೋ ವೀಕ್ಷಿಸಿದ್ದರೆ, ಅದು, ನೀವು ಧ್ಯಾನವನ್ನು ಅತಿ ಪ್ರಾಮಾಣಿಕವಾಗಿ ಮಾಡಿದ್ದೀರೆಂಬ ಕುರುಹು. ಏಕೆಂದರೆ ಅದೇ ನಮ್ಮ ಸ್ವಾಭಾವಿಕ ಸತ್ಯ. ನಾವೆಲ್ಲರೂ ಚೈತನ್ಯವಲ್ಲದೆ ಮತ್ತೇನೂ ಅಲ್ಲ, ನಮ್ಮದೆಂದು ತಿಳಿದುಕೊಂಡಿರುವ (ಅನುಭವಿಸುತ್ತಿರುವ) ಈ ಭೌತಿಕ ದೇಹ ಮತ್ತು ನಮ್ಮ ಸುತ್ತಲೂ ಇರುವ ಭೌತಿಕ ಅಸ್ತಿತ್ವವೆಲ್ಲವೂ ಕೇವಲ ಮಾಯೆಯೇ ಆಗಿದೆ.
ಅದಕ್ಕಾಗಿಯೇ ಈ ಆಜ್ಞಾಚಕ್ರವು ''ಮಾಯಾಹರಣ'' ಎನಿಸಿಕೊಂಡಿದೆ (ಮಾಯಾ ಲಯಕಾರಕ).
ಸಹಸ್ರಾರ ಚಕ್ರಕ್ಕೆ ಸೂಚನೆಗಳು
ನೀವು ASP ಧ್ವನಿ ಸುರುಳಿಯನ್ನು ಉಪಯೋಗಿಸುತ್ತೀರಾದರೆ ಸಹಸ್ರಾರಕ್ಕಾಗಿಯೇ ರಚಿಸಿರುವ ಸಂಗೀತವನ್ನು ಆಲಿಸಿರಿ. ಇಲ್ಲವಾದರೆ, ಸಂತೈಸುವಂತಹ, ನಿಮಗೆ ಹಿತವಾದ, ಸಂಗೀತವನ್ನು ಹಾಕಿಕೊಳ್ಳಿರಿ. ಆ ಸಂಗೀತವು ನಿಮ್ಮಿಂದಲೇ ಹರಿದು ಬರುತ್ತಾ ನಿಮ್ಮನ್ನು ಪ್ರಫುಲ್ಲಗೊಳಿಸಲು ಬಿಡಿ.
ನಿಮಗೆ ನಿಂತಿರಬೇಕು ಎನಿಸಿದರೆ ಎದ್ದು ನಿಂತು, ಸಂಗೀತಕ್ಕೆ ಅನುಗುಣವಾಗಿ ತೂಗಾಡುತ್ತಾ ನರ್ತಿಸಿರಿ. ಕುಳಿತುಕೊಂಡೇ ಇರಬೇಕೆನಿಸಿದರೆ ಹಾಗೆಯೇ ಮಾಡಿ. ಆದರೆ, ಆ ಸಂಗೀತವು ನಿಮ್ಮ ಒಂದು ಭಾಗವೇ ಆಗಲು ಬಿಡಿ. ಅದು ನಿಮ್ಮ ಅಸ್ತಿತ್ವದಿಂದಲೇ ಹೊರಬರುತ್ತಿದೆ ಎಂಬ ಅನುಭವವನ್ನು ಹೊಂದುವವರಾಗಿರಿ. ನಿಮಗೆ ಪ್ರೀತಿಪಾತ್ರರಾದ ಯಾರನ್ನಾದರೂ ಸ್ಮರಿಸಿಕೊಳ್ಳಿ
- ದೇವರು, ನಿಮ್ಮ ಅಚ್ಚುಮೆಚ್ಚಿನ ಸಾಧುಸಂತರು, ಇಷ್ಟದೇವತೆ. ರೂಪವು ಮುಖ್ಯವಲ್ಲ, ಆದರೆ ಅಸ್ತಿತ್ವಕ್ಕೆ, ನಿಮಗೆ ಜೀವನವೆಂಬ ಈ ಉಡುಗೊರೆಯನ್ನು ದಯಪಾಲಿಸಿದುದಕ್ಕಾಗಿ ನಿಮ್ಮ ಕೃತಜ್ಞತೆಗಳನ್ನು ಅರ್ಪಿಸಿರಿ.
ಈ ಜೀವನವೇ ಅತ್ಯುತ್ತಮವಾದ ಅಸ್ತಿತ್ವದಿಂದ ಕೊಡಲ್ಪಟ್ಟ ಮಹತ್ತರವಾದ ಕೊಡುಗೆ.
ನಾವು ಈ ಜೀವನವನ್ನು ಪಡೆಯಲು ಅರ್ಹವಾದ, ಸಾರ್ಥಕವಾದ ಏನನ್ನಾದರೂ ಮಾಡಿದ್ದೇವೆಯೋ? ಇಲ್ಲ! ಆದ್ದರಿಂದ ಬದುಕಿರುವುದೊಂದೇ ನಾವು ಕೃತಜ್ಞತೆ ಅರ್ಪಿಸಲು ಸಾಕಷ್ಟು ಕಾರಣವಾಗಿದೆ. ನೀವು ಅಸ್ತಿತ್ವಕ್ಕೆ ಕೃತಜ್ಞತೆಗಳನ್ನು ಸಮರ್ಪಿಸುವಾಗ, ನೀವು ನಿಮ್ಮ ಜೀವನದಲ್ಲಿ ಈ ಪರಿಸ್ಥಿತಿಯಲ್ಲಿರಲು ಸಹಾಯ ಮಾಡಿದ, ನೆರವಾದ ಸಕಲ ಜನಗಳನ್ನೂ ಸ್ಮರಿಸಿಕೊಳ್ಳಿರಿ.
ನಿಮ್ಮ ಜನ್ಮದಾತರಾದ ನಿಮ್ಮ ತಾಯಿತಂದೆಯವರಿಂದ ಪ್ರಾರಂಭಿಸಿ. ನಿಮ್ಮ ಹೃದಯಪೂರ್ವಕ ಸಂಪೂರ್ಣ ಕೃತಜ್ಞತೆಯನ್ನು ಅರ್ಪಿಸಿರಿ.
ನೀವು ಕುಡಿಯುತ್ತಿರುವ ನೀರಿಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದೀರಾ? ನಾವು ಕೃತಜ್ಞತೆ ಅರ್ಪಿಸುವುದರಲ್ಲಿ ಎಷ್ಟೋ ಸಂಗತಿಗಳನ್ನು ಮರೆತ್ತಿದ್ದೇವೆ! ಈಗ ಆ ಕೆಲಸ ಮಾಡಬಹುದು.
ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿರಿ.
ನೀವು ಅಸ್ತಿತ್ವದ ಎಲ್ಲಕ್ಕೂ ಧನ್ಯವಾದಗಳನ್ನು ಸಲ್ಲಿಸುವಾಗ, ಈ ಧನ್ಯವಾದದ ಸಂತೋಷದ ಬಗ್ಗೆ ನಮ್ಮನ್ನು ಎಚ್ಚರಿಸಿದ ಜ್ಞಾನಸಂಪನ್ನರಾದ ಗುರುಗಳನ್ನೂ ಜ್ಞಾಪಿಸಿಕೊಳ್ಳಿರಿ.
ತಲತಲಾಂತರದಿಂದ ನಿಮ್ಮನ್ನು ಎಚ್ಚರಿಸಿ ಆನಂದದತ್ತ ಕೊಂಡೊಯ್ದು ಉದ್ಧರಿಸಿ ಆನಂದವನ್ನು ಕರುಣಿಸುವ ಉದ್ದಿಶ್ಯವೆಲ್ಲಾ ಜ್ಞಾನಿಬೋಧಕರುಗಳದ್ದಾಗಿತ್ತು.
ಆದ್ದರಿಂದ ಅವರುಗಳಿಗೆ ಧನ್ಯವಾದಗಳನ್ನು ಅರ್ಪಿಸುವ ಅತ್ಯುತ್ತಮ ದಾರಿಯೆಂದರೆ - ನೀವು ಸಹಜವಾಗಿ ಆನಂದಭರಿತರಾಗಿರಿ.
ನಿಮ್ಮ ಕೃತಜ್ಞತೆಗಳನ್ನು ನಿಮ್ಮ ಸದ್ಗುರುವಿಗೆ, ಬೋಧಕ ಗುರುವಿಗೆ ಅರ್ಪಿಸಿರಿ.
ಸಂಗೀತವು ನಿಂತೊಡನೆಯೇ, ಕೆಲಹೊತ್ತು ಮೌನವಾಗಿ ಹಾಗೆಯೇ ಉಳಿಯಿರಿ.
ಕೃತಜ್ಞತಾಭಾವವನ್ನರ್ಪಿಸುವ ಹಾಗೂ ಆನಂದಭರಿತವಾದ ಆ ಭಾವಪೂರಿತ ಸ್ಥಿತಿಯಲ್ಲಿ ಹಾಗೆಯೇ ಉಳಿಯಿರಿ. ಸಾಧ್ಯವಾದಷ್ಟು ಹೊತ್ತು ಮೌನವಾಗಿರಿ. ನಿಮ್ಮಗಮನವನ್ನು ಒಳಮುಖವಾಗಿಸಿ, ಆಂತರ್ಯದ ಶಾಂತಿ ಮತ್ತು ತೃಪ್ತಿ ಇವುಗಳನ್ನು ಅನುಭವಿಸಿ ಆನಂದಿಸಿರಿ.
ಸಹಸ್ರಾರ ಧ್ಯಾನವನ್ನು 'ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ' ಮಾಡುವ ಧ್ಯಾನವನ್ನಾಗಿ ಬದಲಾವಣೆ ಮಾಡಿಕೊಳ್ಳಬಹುದು. ಶಾಶ್ವತವಾಗಿ ಕೃತಜ್ಞತಾಭಾವದ ಪ್ರವೃತ್ತಿಯನ್ನು ಸಕಾರಾತ್ಮಕ ಭಾವನೆಯನ್ನೂ ರೂಢಿಸಿಕೊಂಡರೆ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವಿಚಾರವಾಗಿ ಅತ್ಯದ್ಭುತ ವಾದದ್ದನ್ನೂ, ಆಶ್ಚರ್ಯಕರವಾದದ್ದನ್ನೂ ಸಾಧಿಸಬಹುದು.
ಒಂದೇ ವಿಶ್ವಮೂಲದಿಂದ ಎಲ್ಲ ಪ್ರಾಣಿಗಳೂ ಉದಯಿಸಿವೆಯೇ?
ಆಳವಾಗಿ ನಾವೆಲ್ಲಾ ಪರಸ್ಪರ ಸಂಪರ್ಕ ಹೊಂದಿದ್ದೇವೆಯೇ?
ಮನಸ್ಸೇ ಇಲ್ಲದಂತಹ ಒಂದು ಸ್ಥಿತಿ ನಿಜವಾಗಿಯೂ ಉಂಟೇ?
ಮಾನವ ಜಾತಿಗೆ ನಿರಂತರವಾಗಿ ಮಹತ್ವವುಳ್ಳ ಈ ವಿವಾದದ ಬಗ್ಗೆ ಶತಶತಮಾನಗಳಿಂದಲೂ ವಿಜ್ಞಾನ ಹಾಗೂ ಆಧ್ಯಾತ್ಮಿಕತೆಗಳು ಸಂಘರ್ಷ ನಡೆಸುತ್ತಲೇ ಇವೆ.
ಮನಸ್ಸೇ ಇಲ್ಲದ ಸ್ಥಿತಿ ಎಂಬುದು “ನಿಜವಾದ” ವಿದ್ಯಮಾನ ಮತ್ತು ನಾವೆಲ್ಲರೂ ಸಾಧಿಸಲೇ ಬೇಕಾದ ಗುರಿ ಅದೇ ಎಂದು ಆಧ್ಯಾತ್ಮಿಕ ಗುರುಗಳು ಹೇಳಿದಾಗ್ಯೂ, ಗಟ್ಟಿ ಪುರಾವೆ ಇಲ್ಲದೆ ಅದನ್ನು ಒಪ್ಪಿಕೊಳ್ಳಲು ವಿಜ್ಞಾನಿಗಳು ಸ್ವಾಭಾವಿಕವಾಗಿ ಸಿದ್ಧರಿಲ್ಲ.
ಆಧ್ಯಾತ್ಮಿಕ ಗುರುಗಳೂ, ನಾವೆಲ್ಲಾ ಹಗಲುಗನಸು ಕಾಣುವಂಥ ಅತೀಂದ್ರಿಯ ಶಕ್ತಿಗಳಿಂದ ಹೇಗೆ ಸಂಪನ್ನರಾಗಿರುತ್ತಾರೆ ಎಂಬುದಕ್ಕೆ ಇದೇ ಮೊದಲ ಬಾರಿಗೆ ನಮ್ಮ ಶತಮಾನದಲ್ಲಿ ವಿಜ್ಞಾನಿಗಳಿಗೆ ಗಟ್ಟಿಯಾದ ಪುರಾವೆ ಸಿಕ್ಕಿದೆ.
ಈ ವರ್ಷದ (2004) ಮಾರ್ಚ್ನಲ್ಲಿ ಈ ಮಹತ್ವದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಓಕ್ಲಹಾಮ (ಅಮೇರಿಕಾ)ದ ಖ್ಯಾತ ನರರೋಗ ಶಾಸ್ತ್ರಜ್ಞರ ತಂಡ, ಸ್ವಾಮೀಜಿಯವರ ನರಮಂಡಲದ ವ್ಯವಸ್ಥೆಯನ್ನೇ ವಿರೋಧಿಸುವ ವಿಜ್ಞಾನದ ಬಗ್ಗೆ ವ್ಯಾಪಕವಾದ ಅಧ್ಯಯನ ನಡೆಸಿತು.
ಆ ತಂಡದ ಪೂರ್ವಭಾವೀ ವರದಿ ಇಲ್ಲಿ ನೀಡಲಾಗಿದ್ದು, ಅದು ಜಾಗತಿಕ ವೈದ್ಯಕೀಯ ಸಮುದಾಯಕ್ಕೆ ತುಂಬಾ ಪ್ರಸ್ತುತವಾಗಿದೆ. ಮೌನವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿರುವ ಪ್ರತಿಯೊಬ್ಬರಿಗೂ ನಂಬಿಯೂ ನಂಬದ, ತಿಳಿದೂ ತಿಳಿಯದ, ದಾರಿಯೇ ಅಲ್ಲದ ಜೀವನ ದಾರಿಯಲ್ಲಿ ಸಾಗುತ್ತಿರುವ ಸಕಲ ಮಾನವ ಕುಲಕ್ಕೂ, ಸಹ ಸಾಹಸಿಗರ ಪ್ರಶ್ನೆಗಳಿಗೂ ಅದು ಉತ್ತರ ನೀಡುತ್ತದೆ.
ಒಬ್ಬ ಆಧ್ಯಾತ್ಮಿಕ ರೂಪಾಂತರನೆ? ಅವರೇ ಪ್ರಸಿದ್ಧರಾಗಿರುವಂತೆ ಈ ಪದ "ಸ್ವಾಮೀಜಿ''ಗೆ ಸೂಕ್ತವಲ್ಲ ಎಂದೇನೂ ಅಲ್ಲ. ಆಧ್ಯಾತ್ಮಿಕ ರೂಪಾಂತರರ ಜನಪ್ರಿಯ ಸಂಸ್ಕೃತಿಗಳು ನಮಗೆ ತಿಳಿಸುವಂತೆ, ಅವರಿಗೆ ದೇವರೊಡನೆ ನೇರ ಸಂಪರ್ಕವಿರುತ್ತದೆ. ಅಳೆಯಲಾಗದ ಅಥವಾ ಅರಿಯಲಾಗದ ಹಾದಿಯಲ್ಲಿ, ಅಂತಿಮ ಸತ್ಯಗಳ ಅಥವಾ ವಾಸ್ತವಿಕತೆಗಳಿಗೆ ಪ್ರವೇಶ ಅವರಿಗೆ ಲಭ್ಯ ಎಂಬುದು ಅಭಿಪ್ರಾಯವಾಗಿದೆ. ಅವರನ್ನು ಚಿತ್ರೀಕರಿಸಿದಲ್ಲಿ, ನೀವು ಬಹುಶಃ ನಮ್ಮಲ್ಲಿ ಯಾರೂ ಹೊಂದಿರದಂತಹ, ಯಾರೋ ಪರಮಾನಂದ ಭರಿತ, ಯಾರೋ ಗಂಭೀರ ಚಿಂತನೆಗಳ ಮತ್ತು ಅಂತರ್ ದೃಷ್ಟಿಯ ಕೊಡುಗೆಗಳುಳ್ಳ ಚಿತ್ರವೊಂದನ್ನು ಚಿತ್ರಿಸುತ್ತೀರಿ. ಅವರ ಬರಿಯ ಉಪಸ್ಥಿತಿ ಒಂದೇ ಸಾಕು, ಬೇರೆಯವರಿಗೆ ಶಾಂತಿ ಮತ್ತು ಉಪಶಮನತೆಯನ್ನು ತರಲು ಎಂದು ಭಾವಿಸಲಾಗಿದೆ.
ದಕ್ಷಿಣ ಭಾರತದಿಂದ ಬಂದಿರುವ, 27 ವರ್ಷದ ಸ್ವಾಮೀಜಿಯವರ ಸಮರ್ಪಕ ಚಿತ್ರಣ ಇದು. ವೈದ್ಯಕೀಯ ವಿಜ್ಞಾನ ಗುಣಪಡಿಸಲಾಗದಂತಹ ಕಾಯಿಲೆಗಳಿರುವ ಸಹಸ್ರಾರು ಜನ ಪರಿಹಾರಕ್ಕಾಗಿ ಪ್ರತಿವರ್ಷ ಅವರ ಬಳಿಗೆ ಬರುತ್ತಾರೆ. ಸ್ವಾಮೀಜಿಯವರ ಹಿನ್ನೆಲೆ ಕೂಡ ಅವರನ್ನು ಅನುಭಾವಿಯಾಗಿ ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿ, ಭಾರತದಾದ್ಯಂತ ಇರುವ ಆಶ್ರಮಗಳಿಗೆ ಭೇಟಿ ಇತ್ತು, ತತ್ವಶಾಸ್ತ್ರದಲ್ಲಿ ಮಿಂದು, ವ್ಯಾಪಕವಾಗಿ ಅಧ್ಯಯನ ಮಾಡಿರುವ ಅವರು ಧ್ಯಾನದ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ.
ಪ್ರಪಂಚ ಪರ್ಯಟನೆಯ ಮಾರ್ಗದಲ್ಲಿ ಅವರು ಇತ್ತೀಚೆಗೆ ಒಕ್ಲಹಾಮಾ ನಗರಕ್ಕೆ ಬಂದಿದ್ದಾಗ, ಧ್ಯಾನ ಮಾಡುತ್ತಿದ್ದಾಗ ಅವರ ಮೆದುಳಿನ ಸ್ಥಿತಿಯನ್ನು ಅಧ್ಯಯನ ಮಾಡಲು ನಾನು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಬಹುದೇ ಎಂದು ಅನುಮತಿ ಕೋರಿದೆ. ಆ ಧ್ಯಾನದ ಸ್ಥಿತಿಯಲ್ಲಿ ಏನಾಗುತ್ತದೆ ಎಂಬುದನ್ನು
ಆಮೇಲೆ ಆಹಾರವನ್ನು ಜೀವಿಯ ದೇಹ ಭಾಗವನ್ನಾಗಿ ಮಾರ್ಪಡಿಸುವ ಮೆದುಳಿನ ಚಟುವಟಿಕೆಯ ಪ್ರದೇಶಗಳನ್ನು, ಪಿ.ಇ.ಟಿ. ಸ್ಕ್ಯಾನರ್ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರತಿಬಿಂಬಿಸುತ್ತದೆ.
ಸ್ವಾಮೀಜಿ ಅವರ ಪ್ರಕರಣದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ ಇರುವ ಧ್ಯಾನದ ಆರಂಭಿಕ ಹಂತ ಹಾಗೂ ಆಳವಾದ ಧ್ಯಾನದ ಹಂತಗಳಲ್ಲಿ ತುಂಬಾ ಸಕ್ರಿಯವಾಗಿರುವ ಮೆದುಳಿನ ಭಾಗಗಳನ್ನು ಗುರುತಿಸುವುದು ಔಷಧಿಯ ಉದ್ದೇಶವಾಗಿತ್ತು.
ಪಿ.ಇ.ಟಿ. ಸ್ಕ್ಯಾನ್ ಪರೀಕ್ಷೆಯ ಫಲಿತಾಂಶ ದಿಗ್ಭ್ರಮೆಗೊಳಿಸುವಂತಿತ್ತು. ಪ್ರಾರಂಭಿಸುತ್ತಿದ್ದಂತೆ ಧ್ಯಾನದ ಆರಂಭಿಕ ಹಂತದಲ್ಲೇ ಸ್ವಾಮೀಜಿ ಅವರ ಮೆದುಳಿನ ಮುಂಭಾಗದ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಿದ್ದವು. ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಮಾನವನ ಮೆದುಳಿನ ಚಟುವಟಿಕೆ ಇರುವುದಕ್ಕಿಂತಲೂ ಹಲವಾರು ಪಟ್ಟು ಅದು ಹೆಚ್ಚಿತ್ತು. ಬುದ್ಧಿವಂತಿಕೆ, ಎಚ್ಚರಿಕೆ, ವಿವೇಕ, ತೀರ್ಮಾನಗಳ ಕಾರ್ಯಗಳೆಲ್ಲವೂ ಮುಂಭಾಗದ ಪ್ರದೇಶದಲ್ಲಿ ಸಂಬಂಧಿಸಿದ್ದು.
ಸ್ವಾಮೀಜಿಯವರನ್ನು ಆಳವಾದ ಧ್ಯಾನದ ಸ್ಥಿತಿಗೆ ಇಳಿಯುವಂತೆ ಕೋರಿದಾಗ ಇನ್ನೂ ಎರಡು ಗಮನಾರ್ಹವಾದ ಅಂಶಗಳು ಬೆಳಕಿಗೆ ಬಂದವು.
ಸ್ವಾಮೀಜಿ ಅವರ ಮೆದುಳಿನ ಪ್ರಮುಖವಾದ ಅರ್ಧ ಗೋಳ, ಶೇ. 90 ರಷ್ಟು ಮುಚ್ಚಿಕೊಂಡುಬಿಟ್ಟಿತ್ತು. ಮೆದುಳು ಗಂಟುಮೂಟೆ ಕಟ್ಟಿಕೊಂಡು ವಿಶ್ರಾಂತಿಗೆ ತೆರಳಿದಂತಿತ್ತು. ಅದು ನೆಮ್ಮದಿಯಾಗಿ, ಅಚಲವಾಗಿ, ಸಂಪೂರ್ಣ ಶಾಂತ ವಾಗಿತ್ತು. ಸ್ವಾಮೀಜಿ ಅವರು ಸಂಕಲ್ಪ ಮಾತ್ರದಿಂದಲೇ ಅದನ್ನು ಸಾಧಿಸಿದ್ದರು. ಸ್ವಾಮೀಜಿಯವರ ಆಳವಾದ ಧ್ಯಾನದ ಸ್ಥಿತಿಯ ಇನ್ನೊಂದು ವಿಸ್ಮಯಕಾರೀ ಅಂಶವೆಂದರೆ, ಮೆದುಳಿನ ಮುಂಭಾಗದ ಕೆಳಗಿನ ಭಾಗ ಗಮನಾರ್ಹವಾಗಿ
ಮುಕ್ತಾಯ
ಮೆದುಳು ಶರೀರದ ಅತ್ಯಂತ ಸಂಕೀರ್ಣವಾದ ಅಂಗ. 100 ಬಿಲಿಯನ್ ನ್ಯೂರಾನ್ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 10,000 ಬೇರೆ ನ್ಯೂರಾನ್ಗಳ ಸಂಗಡ ರಾಸಾಯನಿಕ ಮತ್ತು ವಿದ್ಯುತ್ ಸಂಭಾಷಣೆ ಯಲ್ಲಿರುತ್ತವೆ. ಮಾಹಿತಿಯನ್ನು ಬರಿಯ ಸಾಗಣೆ ಮಾಡುವ ಅದರ ಸಾಮರ್ಥ್ಯ ನಿಜಕ್ಕೂ ವಿಸ್ಮಯಗೊಳಿಸುವಂಥದ್ದು.
ವಿಶೇಷವಾಗಿ, ಈ ಸಂಕೀರ್ಣತೆಯೇ ತಮ್ಮ ಮೆದುಳಿನ ಚಟುವಟಿಕೆಯನ್ನು ನಿಭಾಯಿಸಲು ಸ್ವಾಮೀಜಿ ಅವರಿಗೆ ಸ್ವಲ್ಪ ಕಷ್ಟ ನೀಡುವುದು. ಅವರ ಮನಸ್ಸು - ಆಲೋಚನೆ, ಭಾವನೆ ಹಾಗೂ ಬುದ್ಧಿ ಮತ್ತು ಅವರ ಮೆದುಳಿನ ಕೆಲಸ ಕಾರ್ಯಗಳನ್ನು ತಿದ್ದಿ, ಮೆದುಳಿನ ತರಂಗಗಳನ್ನು ಬದಲಿಸಬಲ್ಲದು.
ಈ ಅನುಭಾವಿಯ ಮೇಲೆ ನಾವು ನಡೆಸಿದ ಅಧ್ಯಯನ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಬದಲು ಅಭ್ಯಾಸಿಸಲು ಹೊಸ ಪ್ರಶ್ನೆಗಳನ್ನು ಮೂಡಿಸಿತು.
ಜನರ ಜೀವನದಲ್ಲಿ ಶಾಂತಿ ಹಾಗೂ ಸಮತೋಲನವನ್ನು ಮೂಡಿಸುವಂತಹ ತಂತ್ರಗಳನ್ನು ನಾವೇನಾದರೂ ಕಲಿತು, ಇತರರಿಗೂ ಕಲಿಸಬಹುದೇ?
ನಿರ್ದಿಷ್ಟ ತರಬೇತಿಯ ಮೂಲಕ ನಾವೇನಾದರೂ ಉಪಶಾಮಕ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದೇ? ಅಥವಾ ಉಪಶಮನವನ್ನು ಚುರುಕುಗೊಳಿಸಬಹುದೇ? ನೋವನ್ನು ನಿಯಂತ್ರಿಸುವ ಅಥವಾ ಕಾಯಿಲೆಯ ದಿಕ್ಕನ್ನು ಬದಲಿಸುವ ತಂತ್ರಗಳನ್ನೇನಾದರೂ ನಾವು ಕಲಿಯಬಹುದೇ?
ಡಿ - ಸ್ಟಾಟ್ ಅನ್ನು ಚುರುಕುಗೊಳಿಸುವ, ತನ್ಮೂಲಕ ಆನಂದದೊಂದಿಗೆ - ದೈವದೊಂದಿಗೆ ಹಠಾತ್ ಸಂಪರ್ಕ ಸಾಧಿಸುವುದನ್ನು ನಾವು ಕಲಿಯಬಹುದೇ? ಸ್ವಾಮೀಜಿ ಅವರ ಮೇಲೆ ನಾವು ಮಾಡಿದ ಅಧ್ಯಯನದ ಫಲಿತಾಂಶ, ವಿಶ್ವದಾದ್ಯಂತ ನಡೆಯುತ್ತಲೇ ಇರುವ ಮೆದುಳಿನ ಕುರಿತಾದ ಸಂಶೋಧನಾ ಹೊತ್ತಿಗೆಯ ಹೊಸ ಪುಟಗಳಿದ್ದಂತೆ. ಶರೀರವನ್ನು ಉಪಶಮನಗೊಳಿಸುವ ಸಾಮರ್ಥ್ಯ ಮಾನವನ ಮನಸ್ಸಿಗಿದೆ ಎಂಬುದಕ್ಕೆ ಅಲ್ಲಿ ಸ್ಪಷ್ಟ ಸೂಚನೆಗಳಿವೆ. ಮಾನವ ಜಾತಿಗೆ ಅತ್ಯಂತ ಉಪಯುಕ್ತವಾದ ಈ ಉಪಶಮನ ಸಾಮರ್ಥ್ಯವನ್ನು ಜನ ಕಲಿತು, ತಮ್ಮದಾಗಿಸಿಕೊಳ್ಳುವ ಸಾಧ್ಯತೆಯನ್ನು ನಾವೀಗ ನೋಡುತ್ತಿದ್ದೇವೆ. ಹೃದ್ರೋಗ, ಕ್ಯಾನ್ಸರ್, ಸಂಧಿವಾತ ರೋಗ, ಕುಡಿತ, ಇನ್ನೂ ಎಷ್ಟೋ ಕಾಯಿಲೆಗಳ ತೀವ್ರತೆಯನ್ನು ಬದಲಿಸುವ ಮತ್ತು ಹತ್ತಿಕ್ಕುವ ಸಾಮರ್ಥ್ಯ ಈಗ ಕಾರ್ಯ ಸಾಧ್ಯ ಎನಿಸುತ್ತದೆ.
ಸ್ವಾಮೀಜಿ - ಅದೃಶ್ಯವಾದ, ನಿಗೂಢವಾದ ಪ್ರಾಚೀನ ಪ್ರಪಂಚ ಹಾಗೂ ಸಾಕ್ಷಾತ್ ನೋಡಬಹುದಾದ ವಿಜ್ಞಾನದ ಆಧುನಿಕ ಪ್ರಪಂಚಗಳ ನಡುವಣ ಒಂದು ಸೇತುವೆಯಂತೆ. ವ್ಯಾಪಕ ನೆಲೆಗಟ್ಟಿನ ಮೇಲೆ ಮೆದುಳನ್ನು ಕುರಿತಾದ ಸಂಶೋಧನೆಗಳು ಮುಂದುವರಿಯುತ್ತಿದ್ದಂತೆ, ಈ ಅತೀಂದ್ರಿಯ ವಿದ್ಯಮಾನಗಳನ್ನೆಲ್ಲ ವಿಜ್ಞಾನದ ತೆಕ್ಕೆಗೆ ಮುಂದಿನ ಅಭ್ಯಾಸಕ್ಕೆ ಉಚಿತ ರೀತಿಯಲ್ಲಿ ತಂದಾಗ, ಆರೋಗ್ಯ ಹಾಗೂ ಭರವಸೆಯ ದಾರಿಯತ್ತ ನಾವು ದಾಪುಗಾಲು ಹಾಕುವುದು ಖಂಡಿತ.