ಅನುವಾದಕನ ನುಡಿ
This text was machine-transcribed from the printed book and may contain errors. Select the words and choose “Report a mistake”.
ಧ್ಯಾನ ಪೀಠದ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವಾಗ ಯಾವಾಗಲೂ ಹರ್ಷೋಲ್ಲಾಸದಿಂದಿರುವ ಪರಮಗುರು ಪರಮಹಂಸ ನಿತ್ಯಾನಂದರಿಂದ ಮತ್ತೊಂದು ಸೂಚನೆ. ಈಗಾಗಲೇ "ತೆರೆ ಬಾಗಿಲು - ತಂಗಾಳಿ ಒಳಗೆ ಬರಲಿ" ಕೃತಿ ಕನ್ನಡಾವತರಣವಾಗಿದ್ದು, ಈ ಹಿನ್ನೆಲೆಯಲ್ಲಿ, ಜನೋದ್ಧಾರಕ್ಕಾಗಿ ನೀಡಿದ ತಮ್ಮ ವಾಣಿ ಮಗದೊಮ್ಮೆ ಹಾಗೂ ಎಲ್ಲ ಕೃತಿಗಳೂ ಬೇರೆ ಬೇರೆ ಭಾಷೆಗಳಲ್ಲಲ್ಲದೆ ಕನ್ನಡ ಭಾಷೆಯಲ್ಲಿಯೂ ಪ್ರಕಟವಾಗಲೆಂದು ಆಶಿಸಿ ಗುರುವಾಜ್ಞೆ ಬಂದಾಗ, "Meditation is for you" ಕನ್ನಡಕ್ಕೆ ತರ್ಜುಮೆ ಮಾಡುವಂತೆ ಆಶೀರ್ವದಿಸಿದರು.
ಪರಮಹಂಸ ನಿತ್ಯಾನಂದರ 29ನೇ ಜಯಂತಿಯಂದು ಈ ಪುಸ್ತಕ ಬಿಡುಗಡೆ ಮಾಡುವುದೆಂದು ತೀರ್ಮಾನಿಸಿ ಹೇಳಿದ ಗುರುವಿನ ಆಜ್ಞೆಯನ್ನು ಶಿರಸಾ ವಹಿಸಿದೆ. ಈ ತರ್ಜುಮೆಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಸಹಕರಿಸಿದ ನಿತ್ಯಾನಂದರ ಪರಮಶಿಷ್ಯ ಈ ಆನಂದ ಪಂಕಜ (ಶ್ರೀನಿವಾಸಯ್ಯ) ರವರ ಕಾರ್ಯ ಅಭಿನಂದನಾರ್ಹ. ಚೊಕ್ಕವಾಗಿ, ಅರ್ಥಪೂರ್ಣವಾಗಿ, ಮೂಲಕ್ಕೆ ಧಕ್ಕೆ ಬರದಂತೆ ಸಾಧ್ಯವಾದಷ್ಟೂ ಪ್ರಾಮಾಣಿಕ ಪ್ರಯತ್ನ ಮಾಡಿರುವ ಅವರಿಗೆ ಗುರುಕೃಪೆ ಸದಾ ಇರಲೆಂದು ಹಾರೈಸುತ್ತೇನೆ.
ಈ ಕಾರ್ಯದಲ್ಲಿ ಸಹಕರಿಸಿ ಬಹಳ ಕಡಿಮೆ ಸಮಯದಲ್ಲಿ ಕೈಬರಹವನ್ನು ಕಂಪ್ಯೂಟರ್ ಬರಹವನ್ನಾಗಿ ಮಾರ್ಪಡಿಸಿ, ಪ್ರಿಂಟ್ ಮಾಡಿಸಿ ಅಚ್ಚುಕಟ್ಟಾಗಿ ಪರಮಹಂಸರ ಚಿತ್ರಗಳೊಂದಿಗೆ ಪುಸ್ತಕರೂಪವನ್ನು ಕೊಟ್ಟ ಜಡ್ಜ್ ಪ್ರೆಸ್ನ ಶ್ರೀಯುತ ಚಂದ್ರಮೌಳಿಯವರಿಗೂ, ಈ ಕಾರ್ಯದಲ್ಲಿ ಎಲ್ಲ ವಿಧದಲ್ಲಿಯೂ ಸಹಕರಿಸಿದ ಸರ್ವರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನರ್ಪಿಸುತ್ತಾ...
ಸದ್ಗುರುವಿನ ಪಾದಾರವಿಂದಗಳಲ್ಲಿ ಈ ಭಾಷಾಂತರ ಕೃತಿಯನ್ನು ಅರ್ಪಿಸುವ
ನಿತ್ಯ ಧೂಪಾನಂದ (ಆಚಾರ್ಯ ಧೂಪಾನಂದ)
