KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಮೂಲ ಪ್ರಶ್ನೆಗಳುSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಮೂಲ ಪ್ರಶ್ನೆಗಳು

This text was machine-transcribed from the printed book and may contain errors. Select the words and choose “Report a mistake”.

ನಾನೇಕೆ ಧ್ಯಾನ ಮಾಡಬೇಕು?

ಯಾವಾಗಲೂ ನಾನು ಆನಂದವನ್ನು ಹುಡುಕುತ್ತಿರುವುದೇ ಆದರೆ, ಅದು ನನಗಿನ್ನೂ ಸಿಕ್ಕಿಲ್ಲವೇಕೆ?

ಆನಂದದ ಸ್ಥಿತಿ ಎಂದರೇನು? ಅದರ ಅನುಭವ ಧ್ಯಾನದಿಂದ ಮಾತ್ರ ಸಾಧ್ಯವೇನು?

ಧ್ಯಾನ ಎಂದರೆ ನಿಜವಾಗಿ ಏನು?

ಎಲ್ಲರೂ ಧ್ಯಾನವನ್ನು ಕಲಿಯಲು ಸಾಧ್ಯವೇ?

ಧ್ಯಾನ ತಂತ್ರಗಳ ಅಗತ್ಯವಾದರೂ ಏಕೆ ನನಗೆ?

ಪ್ರತಿದಿನ ಎಷ್ಟು ಗಂಟೆಗಳ ಕಾಲ ನಾನು ಧ್ಯಾನ ಮಾಡಬೇಕು?

ಧ್ಯಾನದಿಂದ ನಮಗಾಗುವ ಲಾಭಗಳೇನು?

ಧ್ಯಾನದ ಮೇಲಷ್ಟೆ ನಾನು ಕೇಂದ್ರೀಕರಿಸಿದರೆ, ಬೇರೆ ಕೆಲಸಗಳನ್ನು ನಾನು ಮಾಡುವುದಾದರೂ ಹೇಗೆ?

ಧ್ಯಾನವನ್ನು ತಲುಪಲು ಸರಿಯಾದ ಮಾರ್ಗವಾದರೂ ಏನು?

ನನಗೆ ಸೂಕ್ತವಾದ ಧ್ಯಾನ ತಂತ್ರ ಯಾವುದು?

37 | ಧ್ಯಾನದೊಳಗೆ ಪ್ರವೇಶಿಸುವುದು |

portrait

---|---|---

ದೇಹದ ಮೇಲೆ ಕೆಲಸ

ಆಲೋಚನೆಗಳ ಮೇಲೆ ಕೆಲಸ

ಉದ್ರೇಕಗಳ ಮೇಲೆ ಕೆಲಸ

| ಧ್ಯಾನ ಜೀವನದೆಡೆಗೆ | 59

portrait

---|---|---

ಧ್ಯಾನದಲ್ಲಿ ತಪಸ್ಸು ಅವಶ್ಯವೆ?

ಅರಿವೇ ಕೀಲಿಕೈ

"ಜೀವನದಲ್ಲಿ ಧ್ಯಾನ" ದಿಂದ "ಧ್ಯಾನದಲ್ಲಿ ಜೀವನ"ದೆಡೆಗೆ

ಕುಳಿತುಕೊಳ್ಳುವ ತಂತ್ರಗಳು ಮತ್ತು "ಯಾವುದೇ ವೇಳೆಯಲ್ಲಿ - ಎಲ್ಲಿಯಾದರೂ" ತಂತ್ರಗಳು

ನೀವು ನೋಡುವ ರೂಪಾಂತರಗಳು

ನೀವು ಎದುರಿಸಬಹುದಾದ ಸಮಸ್ಯೆಗಳು

ಧ್ಯಾನವನ್ನು ಸಂತೋಷವಾಗಿ ಅನುಭವಿಸುವುದಾದರೂ ಹೇಗೆ?

87 | ಧ್ಯಾನದ ತಂತ್ರಗಳು |

portrait

---|---|---

ತಂತ್ರಗಳ ಬಗ್ಗೆ:

ತಂತ್ರಗಳು

ಆನಂದ ನಟನಯಂತ್ರಧ್ಯಾನ
ಅಹಂ ಬ್ರಹ್ಮಾಸ್ಮಿಅಚಲ ಧ್ಯಾನ
ಅಂತರ ಧ್ಯಾನಅಸಂಗ ಧ್ಯಾನ
ಆತ್ಮ ಸ್ಪುರಣಅಸೀಮ ಧ್ಯಾನ
ಚಿದಾಕಾಶ ಧ್ಯಾನಆಜ್ಞಾ ಧ್ಯಾನ
ಹೃದಯ ಕಮಲಮನೆ ಬಿಂದು
ಜ್ಯೋತಿ ಸ್ತಂಭಪ್ರತ್ಯಾಹಾರ ಧ್ಯಾನ
ಆ ಕ್ರಿಯೆ ನಿಲ್ಲಿಸಿ!ಶೂನ್ಯತೆ ಬಾನ
ಆ ಆವೇಗವನ್ನು ನಿಲ್ಲಿಸಿಉತ್ಕಟ ವಿಶ್ರಾಂತಿ
ಕಾಮ ಹರಣರಾಯಾಂಗ
ಕೃಷ್ಣ ವೇಣುಅವಯವಗಳ ವಿಶ್ರಾಂತಿ
ಪ್ರಾಣ ಸ್ತಂಭನ
ಪ್ರಾಣ ಶುದ್ಧಿ
ಶಕ್ತಿ ಸ್ತಂಭ
ಸೂಕ್ಷ್ಮ ಶರೀರ ಧ್ಯಾನ
ಸೂರ್ಯ ಧ್ಯಾನ
ಪ್ರತಿಬಿಂಬ ಧ್ಯಾನ
ಶಕ್ತಿಧಾರಣ
ಚಿತ್ರ

ಮೆಡಿಟೇಶನ್ ಏಕೆ? (ಧ್ಯಾನ ಏಕೆ?)

ಪ್ರಾರಂಭಿಸುವುದಕ್ಕೆ ಇದು ಸರಿಯಾದ ಪ್ರಶ್ನೆ.

ನಮ್ಮ ಜೀವನದಲ್ಲಿ ನಮಗೆ ನಿಜವಾಗಿಯೂ ಧ್ಯಾನದ ಅವಶ್ಯಕತೆ ಇದೆಯೇ?

ನಾನು ಕೇಳ್ತೀನಿ, - ನೀವು ಈ ಪುಸ್ತಕವನ್ನು ಏಕೆ ಓದುತ್ತಿದ್ದೀರಿ?

ಓದಬಹುದಾದ ಎಷ್ಟೆಲ್ಲಾ ಪುಸ್ತಕಗಳು ಇದ್ದರೂ ಈ ಕ್ಷಣದಲ್ಲಿ ಈ ಪುಸ್ತಕವನ್ನು ಓದಲು ಆರಿಸಿಕೊಂಡಿದ್ದೀರಿ.

ನಿಮ್ಮೊಳಗೆ ಈ ಧ್ಯಾನದ ಬಗ್ಗೆ ಆಳವಾದ ಆಸಕ್ತಿ ಇದೆ ಎಂಬುದನ್ನು ನಿಮ್ಮ ಚರ್ಯೆಯೇ ತಿಳಿಸುತ್ತಾ ಇದೆ - ಹಾಗೂ ನಮ್ಮೆಲ್ಲರಲ್ಲಿಯೂ ಸಹ.

ಜೀವನದಲ್ಲಿ ನಿಮ್ಮ ಅಂತಿಮ ಗುರಿ ಏನು?

ಹೆಚ್ಚು ಸಂಪಾದಿಸಲೆಂದೇ?

ಯಾವಾಗ್ಯೂ ಯುವಕರಾಗಿ, ಆರೋಗ್ಯವಾಗಿ, ಸುಂದರವಾಗಿ (ಚೆನ್ನಾಗಿ) ಇರಬೇಕು ಎಂತಲೇ?

ಶಾಶ್ವತವಾದ, ಒಳ್ಳೆಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕೆಂದೇ?

ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಬೇಕೆಂದೇ?

ಈ ಪಟ್ಟಿಗೆ ಕೊನೆಯೇ ಇಲ್ಲ - ಪ್ರತಿ ವ್ಯಕ್ತಿಗೂ ತನ್ನದೇ ಆ ನಿರ್ದಿಷ್ಟವಾದ ಗುರಿ ಇರುತ್ತೆ.

ಪ್ರತಿಯೊಂದು ಗುರಿಯೂ ಅಪವಾದವೇ ಇಲ್ಲದೆ, ಒಂದನ್ನೇ ಸೂಚಿಸುತ್ತೆ - ನಾವು ಆನಂದದ ಸ್ಥಿತಿಯಲ್ಲಿಯೇ ಇರಬೇಕು ಅನ್ನುವ ತೀವ್ರ ಆಸಕ್ತಿಯನ್ನು ಹೊಂದಿರುತ್ತದೆ.

ಇದನ್ನು ಒಪ್ಪದೇ ಇರುವವರು ಯಾರಾದರೂ ಇದ್ದೀರಾ?

ನನಗೆ ಆನಂದದಲ್ಲಿ ಆಸಕ್ತಿಯೇ ಇಲ್ಲ, ಸಂತೋಷವಾಗಿ, ಆನಂದವಾಗಿ ಇದ್ದು ನನಗೇನಾಗಬೇಕಾಗಿದೆ ಎಂದು ಹೇಳುವವರು ಯಾರಾದರೂ ಇದ್ದೀರಾ?

ನಾವು ಪ್ರತಿಯೊಬ್ಬರೂ ಹುಡುಕುತ್ತಿರುವುದು ಆನಂದವನ್ನಲ್ಲದೆ ಬೇರೇನನ್ನೂ ಅಲ್ಲ. ಎಷ್ಟೇ ಬುದ್ಧಿವಂತಿಕೆಯಿಂದ, ಪರ್ಯಾಯವಾಗಿ ಬೇರೆ ಯಾವ ರೀತಿ ವ್ಯಕ್ತಪಡಿಸಿದರೂ ಸಹ ನಾವೆಲ್ಲರೂ ಹುಡುಕುತ್ತಿರುವುದು ಆನಂದವನ್ನೇ.

ಆದರೆ ಹುಡುಕುತ್ತಿರುವ ದಾರಿ ಮಾತ್ರ ಬೇರೆ ಬೇರೆ.

ಹಣದ ಮೂಲಕ, ಅಧಿಕಾರದ ಮೂಲಕ, ಸಂಬಂಧಗಳ ಮೂಲಕ - ಸಂತೋಷದ, ಕಷ್ಟದ ನಮ್ಮ ದಿನನಿತ್ಯದ ಜೀವನ ನಾಟಕದ ಮೂಲಕ - ನಾವು ಹುಡುಕುತ್ತಿರುವುದು ಆನಂದವನ್ನೇ. ಇದೇ ಜೀವನದಲ್ಲಿ ತೊಡಗಿಸಿಕೊಳ್ಳುವ ಏಕೈಕ ಪ್ರೇರಣಾ ಶಕ್ತಿ.

ಈ ಆನಂದವನ್ನೇ ನಾವು ಜೀವನಪೂರ್ತಿ ಹುಡುಕುತ್ತಿದ್ದರೂ ಸಹ, ಇನ್ನೂ ಏಕೆ ನಮಗೆ ಅದು ಸಿಕ್ಕಿಲ್ಲ?

ಏಕೆಂದರೆ ಅದನ್ನು ನಾವು ಅರಿವಿಲ್ಲದೆ ಹುಡುಕುತ್ತಿದ್ದೇವೆ. ನಮ್ಮಲ್ಲಿ 99% ಜನಕ್ಕೆ ಆನಂದವೇ ನಮ್ಮ ನಿಜವಾದ ಗುರಿ ಎಂಬುದೇ ಗೊತ್ತಿಲ್ಲ.

ನಮ್ಮಲ್ಲಿ ಹೆಚ್ಚು ಜನಕ್ಕೆ ನಮ್ಮ ಜೀವನದಲ್ಲಿ ಏನೋ ಕಡಿಮೆ ಅಥವಾ ಕೊರತೆ ಇದೆ ಎಂಬುವುದು ಮಾತ್ರ ಗೊತ್ತು, ಆ ಖಾಲಿಯಾಗಿರುವುದನ್ನು ನಾವು ಹಣದಿಂದ, ಸಂಬಂಧಗಳಿಂದ ಅಥವಾ ಏನನ್ನೋ ಪಡೆಯುವುದರಿಂದ ತುಂಬಲು ಆಗೊಲ್ಲ.

ಇದನ್ನೇ ನಮ್ಮ ಜೀವನದಲ್ಲಿ ನಾವು ಮಾಡುತ್ತಾ ಇರುವುದು! ನಾವೆಲ್ಲಾ ಇಲ್ಲದೇ ಇರುವ ಜಾಗಗಳಲ್ಲೇ ಹುಡುಕುತ್ತಿರುವ ನಿಪುಣರು. ನಮ್ಮನ್ನೇ ನಾವು ಎಲ್ಲಾ ಕಡೆಯಲ್ಲೂ ಹುಡುಕುತ್ತಿದ್ದೇವೆ - ಹಣದಲ್ಲಿ, ಅಧಿಕಾರದಲ್ಲಿ, ಸಂಬಂಧಗಳಲ್ಲಿ, ಸಿದ್ಧಾಂತಗಳ ಮೂಲಕ ಹೀಗೆ. ಆದರೆ, ನಮ್ಮ ಒಳಗೇ ಇರುವ ಸ್ಪಷ್ಟವಾದ ಒಂದು ದಿಶೆಯಲ್ಲಿ ಹುಡುಕುತ್ತಿಲ್ಲ.

ನೀವು ಕಳೆದುಕೊಂಡ ಆ ನಾಣ್ಯ ನಿಮ್ಮ ಮನೆಯ ಒಳಗಡೆಯೇ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಅರಿವಿನ (ಜ್ಞಾನದ) ದಾರಿಯಲ್ಲಿ ಮೊದಲನೇ ಹೆಜ್ಜೆ. ಆಗ ನೀವು ಹೊರಗೆ ಬೀದಿಯಲ್ಲಿ ಹುಡುಕುವುದನ್ನು ತಾವಾಗಿಯೇ ನಿಲ್ಲಿಸಿ ಬಿಡುತ್ತೀರಿ.

ಧ್ಯಾನ ಅಂದರೆ, ನಿಮ್ಮೊಳಗೇ ಇರುವ ಆನಂದವನ್ನು ಮತ್ತೆ ಹುಡುಕಿ ಪಡೆಯುವ ತಯಾರಿ.

ಆನಂದವನ್ನು ಹೊರಗಡೆ ಹುಡುಕುವುದು ವ್ಯರ್ಥ ಎನ್ನುವುದನ್ನು ನೀವು ಅರ್ಥ ಮಾಡಿಕೊಂಡ ಕ್ಷಣದಲ್ಲೇ ಧ್ಯಾನಕ್ಕೆ ನೀವು ಸಹಜವಾಗಿ ಪಕ್ವವಾಗಿದ್ದೀರಿ ಎಂದರ್ಥ.

ಆನಂದ ಎಂಬ ಅವಸ್ಥೆ ನಿಜವಾಗಿಯೂ ಯಾವುದು? ಅದನ್ನು ಧ್ಯಾನದ ಮೂಲಕ ಮಾತ್ರವೇ ನಾವು ಅನುಭವಿಸಬಹುದೇ?

ನೂರಾರು ವಿಧದಲ್ಲಿ ಆನಂದವನ್ನು ನಾನು ವಿವರಿಸಬಲ್ಲೆ. ಆದರೆ, ಅದನ್ನು ನೀವು ಅನುಭವಿಸುವುದರ ಒಂದೇ ಮಾರ್ಗದಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ.

ಹೇಗಾದರೂ ಆಗಲಿ, ನಾನು ಯತ್ನಿಸಿ ನಿಮಗೆ ವಿವರಣೆ ನೀಡುತ್ತೇನೆ.

ಜೀವನದಲ್ಲಿ ಹೆಚ್ಚು ಸಂತೋಷವನ್ನು ನಾವೆಲ್ಲರೂ ಕೆಲವು ಘಳಿಗೆಗಳಲ್ಲಿ ಅನುಭವಿಸಿರುತ್ತೇವೆ. ಆದರೆ ಅವೆಲ್ಲಾ ಯಾವುದೋ ಒಂದು ಕಾರಣಕ್ಕಾಗಿ ಆಗಿರುತ್ತೆ.

ಖಚಿತವಾದ ಮಾರ್ಗ. ಧ್ಯಾನವು ನಿಮ್ಮನ್ನು ದಿನನಿತ್ಯದ ಜೀವನದ ಆಗುಹೋಗುಗಳ (ಹಿಗ್ಗುಕುಗ್ಗುಗಳ) ಸೆಳೆತದಿಂದ ದಾಟಿಸಿ ಆಚೆಗೆ ಕರೆದೊಯ್ಯುತ್ತದೆ. ನೀವು ಧ್ಯಾನ ಮಾಡಿದಾಗ, ದೇಹ ಮನಗಳ ಹಾಗೂ ಅಹಂಕಾರದ ಸಂಕುಚಿತ ಎಲ್ಲೆಗಳನ್ನು ಮೀರಿ ಬೆಳೆಯುತ್ತೀರಿ.

ಯಾವಾಗ ಎಲ್ಲರೂ ಒಂದೇ ಎನ್ನುವ ಭಾವನೆ ನಿಮ್ಮ ಅನುಭವದಲ್ಲಿ ಬರುತ್ತದೆಯೋ ಆಗ ನಾವು ಪ್ರತಿನಿತ್ಯದ ಈ ಸುಖ ದುಃಖಗಳೊಂದಿಗಿನ ಬಂಧನದಿಂದ ಸಹಜವಾಗಿ ಬಿಡುಗಡೆ ಹೊಂದುತ್ತೀರಿ. ಈ ವಿಚಾರವನ್ನು ಬುದ್ಧಿಯ ಮೂಲಕ ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ, ಪ್ರಾಮಾಣಿಕ ವಾಗಿ ಧ್ಯಾನ ಮಾಡಿದಾಗ, ಅದರ ಅನುಭವ ನಿಮಗಾಗುತ್ತೆ. ಆನಂದದ ಸುಳುಹು (ಕ್ಷಣಿಕ ದರ್ಶನ) ನಿಮಗೆ ಉಂಟಾಗುತ್ತೆ. ಆಗ ನಿಮಗೇ ಅರ್ಥವಾಗುತ್ತೆ.

ನಮ್ಮ ಸಾಮಾನ್ಯ ಜೀವನದಲ್ಲಿ ನಾವು ಆನಂದವನ್ನು ಅನುಭವಿಸಿಯೇ ಇಲ್ಲ. ಕಾರಣರಹಿತವಾದ ಆನಂದವು ಸಿಕ್ಕುವ ಸಾಧ್ಯತೆ ಇದೆ ಎಂಬುದೂ ನಮಗೆ ಗೊತ್ತಿಲ್ಲ! ಹೀಗಿರುವಾಗ, ಈ ಆನಂದವನ್ನು ಪಡೆಯಬೇಕೆಂಬ ಹೆಬ್ಬಯಕೆಯನ್ನು ಹೊಂದಿ ಹೇಗೆ ಬಂದು ಸೇರಿದ್ದೇವೆ?

ನಿಮಗೆ ಈ ಬಯಕೆ ಬಂದಿರುವುದು ಏತಕ್ಕೆಂದರೆ, ಅದು ನಿಮ್ಮ ನಿಜವಾದ ಸ್ವಭಾವವೇ ಆಗಿದೆ!

ಅದನ್ನು ವಿವರಿಸುತ್ತೇನೆ - ತೈತ್ತಿರೀಯ ಉಪನಿಷತ್ತಿನಲ್ಲಿ ಈ ಸುಂದರವಾದ ಮಂತ್ರ

ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಸ್ಸಂಭೂತಃ।
ಆಕಾಶಾದ್ವಾಯುಃ । ವಾಯೋರಗ್ನಿಃ ।

ನಮ್ಮನ್ನು ಆನಂದದ ಪರಿಧಿಯೊಳಕ್ಕೆ ಸೇರಿಸಿ ಬಿಡುತ್ತದೆ (ಕರೆದುಕೊಂಡು ಹೋಗುತ್ತದೆ).

ಆದ್ದರಿಂದ ಆನಂದವನ್ನು ಬಯಸುವುದು ಎಂದರೆ ನಮ್ಮ ಸಹಜ ಸ್ಥಿತಿಗೆ ವಾಪಸಾಗಲು ಹಂಬಲಿಸುವುದು ಎಂದೇ ಅರ್ಥ. ಅದಕ್ಕೆ ನಾವು ತಿಳಿದಿರಲಿ, ತಿಳಿಯದೇ ಇರಲಿ, ನಾವು ಪ್ರತಿಯೊಬ್ಬರೂ ಒಳಗೊಳಗೇ ಧ್ಯಾನಕ್ಕಾಗಿ ಹಂಬಲಿಸುತ್ತಿರುತ್ತೇವೆ.

ಧ್ಯಾನವೆಂದರೆ ನಿಜವಾಗಿಯೂ ಏನು?

'ಧ್ಯಾನ' ಎನ್ನುವುದಕ್ಕೆ ಬೇಕಾದಷ್ಟು ವಿವರಣೆಗಳಿವೆ.

ಬೇರೆಬೇರೆ ಗುರುಗಳು ಅವರವರ ಅನುಭವಕ್ಕೆ ತಕ್ಕಂತೆ, ಅಥವಾ ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತೆ ಪ್ರತಿಪಾದಿಸಿದ್ದಾರೆ.

ಧ್ಯಾನವೆಂದರೆ ಪ್ರಾರ್ಥನೆ.

ಧ್ಯಾನವೆಂದರೆ ನಮ್ಮೊಳಗೇ ಹುದುಗಿಸಲ್ಪಟ್ಟ ಅಮೂಲ್ಯನಿಧಿಯನ್ನು ಹೊರ ತೆಗೆಯಲು ಸಾಧ್ಯವಾಗುವಂತೆ ಮಾಡುವ ವಿಧಾನ.

ಧ್ಯಾನ ಅಂದರೆ ನಿಮ್ಮನ್ನು ಪರಾಶಕ್ತಿಯೊಡನೆ ಸೇರಿಸಲು ಸಹಾಯ ಮಾಡುವ ತಂತ್ರ.

ಇವೆಲ್ಲವೂ ಸರಿಯಾದವುಗಳೇ.

ನಾನು ಹೇಳುತ್ತೇನೆ - ಧ್ಯಾನ ಅಂದ್ರೆ, "ಆನಂದದಲ್ಲೇ ಇರುವ ಕ್ಷಣ"! ಅಷ್ಟೆ. (ಆನಂದಭರಿತರಾಗಿರುವುದಷ್ಟೆ)- ಯಾವಾಗ ನೀವು ವರ್ತಮಾನದ ಕ್ಷಣದಲ್ಲಿ ಪ್ರಶಾಂತರಾಗಿರುತ್ತೀರೋ, ಆಗಲೇ ಧ್ಯಾನ ಸ್ಥಿತಿಯಲ್ಲಿ ಇದ್ದುಬಿಟ್ಟಿದ್ದೀರಿ. ನೀವು ಮತ್ತೇನನ್ನೂ ಮಾಡಬೇಕಾದದ್ದೇ ಇಲ್ಲ.

ಧ್ಯಾನವೆಂದರೆ, ಶಾಂತವಾದ, ಆನಂದವಾದ ಸ್ಥಿತಿಯಲ್ಲೇ ಉಳಿದು ಬಿಡುವುದು (ಮುಳುಗಿ ಬಿಟ್ಟಿದ್ದೀರಿ) ಎಂದು.

ಈ ಸ್ಥಿತಿಯನ್ನು ಕಲಿತುಕೊಳ್ಳಲು ಆಗುವುದಿಲ್ಲ. ನೀವು ಅದನ್ನು ಅನುಭವಿಸ ಬಹುದು ಅಷ್ಟೆ.

ಧ್ಯಾನವೆಂದರೆ ಏನನ್ನೋ ನೀವು ಮಾಡುವುದಲ್ಲ. ಇದನ್ನು ಸ್ಪಷ್ಟವಾಗಿ ತಿಳಿಯಿರಿ.

ಧ್ಯಾನವನ್ನು ನೀವು ಮಾಡಲು ಆಗುವುದೇ ಇಲ್ಲ.

ನೀವು ಮಾಡುವುದನ್ನೆಲ್ಲಾ ಸಂಪೂರ್ಣವಾಗಿ ಬಿಟ್ಟಾಗ, ತಾನಾಗಿಯೇ ಹೊರಹೊಮ್ಮಿ ಸ್ಫುರಿಸುವ ಸ್ಥಿತಿಯೇ ಧ್ಯಾನ.

(ಅದು) ದೈಹಿಕ ಕ್ರಿಯೆ ಮಾತ್ರವಲ್ಲ, ಆಲೋಚಿಸುವುದೂ ಸಹ ಒಂದು ಕ್ರಿಯೆಯೇ. ಏಕಾಗ್ರತೆಯಿಂದ ಏನನ್ನಾದರೂ ಚಿಂತಿಸುವುದೂ ಒಂದು ಕ್ರಿಯೆಯೇ. ಯಾವಾಗ ಮಾಡುವುದನ್ನೆಲ್ಲಾ, ಆಲೋಚಿಸುವುದನ್ನೆಲ್ಲಾ (ಭಾವನೆಗಳ ಮೂಲಕ) ಅನುಭವಿಸುವುದನ್ನೆಲ್ಲಾ ನೀವು ಬಿಟ್ಟಿರುತ್ತೀರೋ, ಆಗ ಉಳಿಯುವುದೇ ಧ್ಯಾನ.

ತನ್ನಲ್ಲಿ ತಾನು ಇರುವುದೇ ಧ್ಯಾನ.

ಜೆನ್ ಮಾಸ್ಟರ್ ಹೇಳುವ ತರಹ - ವರ್ತಮಾನ ಕಾಲವನ್ನು ಯಾವ ವಿರೋಧವೂ (ತಡೆಯೂ) ಇಲ್ಲದೆ ಅನುಭವಿಸುವುದೇ ಧ್ಯಾನ.

ಅದೇ ರೀತಿ, ಆನಂದ ಎಂಬುದು ನಿಮ್ಮ ಕಠಿಣ ಪರಿಶ್ರಮದಿಂದ ಬಂದ ಫಲವಲ್ಲ. ನೀವು ಆನಂದವನ್ನು ಪಡೆಯಲಾರಿರಿ! ನೀವು ಆನಂದದಲ್ಲಿ ವಿಶ್ರಮಿಸಬಲ್ಲಿರಿ ಅಷ್ಟೆ.

ಪ್ರತಿ ದಿವಸ ಎಷ್ಟು ಗಂಟೆಗಳ ಕಾಲ ನಾನು ಧ್ಯಾನ ಮಾಡಬೇಕು?

ಎಷ್ಟು ಗಂಟೆಗಳು ಅನ್ನುವ ಪ್ರಶ್ನೆಯೇ ಇಲ್ಲ!

ನಾನು ತಿಳಿಸಿದಂತೆ ಧ್ಯಾನ ಅನ್ನುವುದನ್ನು ನಿಮ್ಮ ಜೀವನದಲ್ಲಿ (ಹೊಸದಾಗಿ) ಸೇರಿಸಿಕೊಳ್ಳುವುದು ಎಂದಲ್ಲ. ಇದು ಪ್ರತಿನಿತ್ಯ ನಾನು ಎಷ್ಟು ಸಾರಿ ಉಸಿರಾಡಬೇಕು? ಎಂದು ಕೇಳಿದ ಹಾಗಾಗುತ್ತದೆ.

ನಾನು ಪ್ರತಿನಿತ್ಯ ಇಷ್ಟು ಗಂಟೆಗಳ ಕಾಲ ಧ್ಯಾನ ಮಾಡುತ್ತೇನೆ, ಮಿಕ್ಕ ಸಮಯದಲ್ಲಿ ಈಗ ಏನೇನು ಮಾಡುತ್ತಿದ್ದೀನೋ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ನೀವು ಹೇಳಲಾಗುವುದಿಲ್ಲ.

ಧ್ಯಾನಕ್ಕೆ ಬೇಕಾಗಿರುವುದು ನಿಮ್ಮ ಒಳಗೇ ಮಹತ್ತರವಾದ ಬದಲಾವಣೆ.

ಧ್ಯಾನವೆನ್ನುವುದು ನಿಮ್ಮ ಜೀವನಪಥದ ಸಂಪೂರ್ಣ ಪರಿವರ್ತನೆ.

ನಿಮ್ಮೊಳಗೆ ಮೊದಲೇ ಬೀಜವು ಇದ್ದು ಬಿಟ್ಟಿದೆ, ಆದರೆ, ಅದು ಮೊಳೆತು, ಮರವಾಗಿ ಬೆಳೆದು ಫಲ ಕೊಡಲು ಮೊದಲು ಆ ಬೀಜವು ಒಡೆಯಬೇಕು.

ನೀವು ನಿಮ್ಮನ್ನು ಬಿರಿದುಕೊಂಡು ಅವಕಾಶ ಮಾಡಿಕೊಳ್ಳಬೇಕು! ಯಾವಾಗ ನೀವು ಧ್ಯಾನವನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡುತ್ತೀರೋ, ಆಗ ಇದು ತನಗೆ ತಾನೇ ಆಗುತ್ತದೆ. ಆದರೆ, ಅದು ಮೊಳೆತು, ಬೆಳೆದು, ಪೂರ್ಣವಾಗಿ ಬದಲಾವಣೆಯನ್ನು ಹೊಂದಬೇಕೆಂಬ ಒಲವು ಒಪ್ಪಿಗೆ ನಿಮ್ಮೊಳಗೆ ಇರಬೇಕು.

ಧ್ಯಾನವು ಪುನರ್ಜನ್ಮಕ್ಕಿಂತ ಕಡಿಮೆಯೇನಲ್ಲ! ನಿಮಗೆ ಸಾವನ್ನು ಎದುರಿಸುವ, ನಿಮ್ಮ ಸ್ವಂತ ಸಾವನ್ನೇ ಎದುರಿಸುವ. ಸಾಹಸ, ಧೈರ್ಯ ನಿಮ್ಮಲ್ಲಿರಬೇಕು - ಹಾಗೂ ಪುನಃ ಹೊಸಬರಾಗಿ ಹುಟ್ಟಲು ಸಿದ್ಧರಿರಬೇಕು. ಹುದುಗಿರುವ ದಿವ್ಯತ್ವವನ್ನು ಕಂಡುಕೊಳ್ಳಲು ನಿಮ್ಮನ್ನೇ ತೆರೆದುಕೊಳ್ಳುವಂತೆ ಮಾಡುತ್ತದೆ. ಧ್ಯಾನವು ನಿಜವಾಗಿಯೂ ಶಬ್ದಾತೀತವಾದದ್ದು. ಅದರ ಪ್ರಯೋಜನಗಳನ್ನು ಅನುಭವಿಸಿ ತಿಳಿಯಬೇಕೇ ಹೊರತು ವಿವರಿಸಲು ಆಗದು.

ಧ್ಯಾನವು 24 ಗಂಟೆಗಳ ಕಾಲವೂ ಮಾಡುವ ಪ್ರಕ್ರಿಯೆಯಾದರೆ, ನಮ್ಮ ಜೀವನ ನಡೆಯುವುದಾದರೂ ಹೇಗೆ? ಸದಾಕಾಲದಲ್ಲಿಯೂ ನಮ್ಮ ಅಸ್ತಿತ್ವದಲ್ಲಿಯೇ (ಇರುವಿಕೆಯಲ್ಲಿಯೇ) ಮನಸ್ಸನ್ನು ಕೇಂದ್ರೀಕರಿಸಿದರೆ, ಜೀವನದ ಮಿಕ್ಕ ಕೆಲಸಕಾರ್ಯಗಳನ್ನು ಹೇಗೆ ನಿಭಾಯಿಸುವುದು?

ಧ್ಯಾನವು ಕೆಲಸಕಾರ್ಯಗಳಿಗೆ ವಿರೋಧವಾದದ್ದಲ್ಲ!

ಒಮ್ಮೆ ನಿಮ್ಮ ಅಸ್ತಿತ್ವದಲ್ಲಿಯೇ ನೀವು ವಿಚಲಿತರಾಗದೆ ಉಳಿಯುವ ಕುಶಲತೆಯನ್ನು (ಕಲೆಯನ್ನು) ಕಲಿತರೆ, ನೀವು ಎಷ್ಟೇ ಕೆಲಸಕಾರ್ಯಗಳಿದ್ದರೂ ಸಹ, ಅದೇ ಸ್ಥಿತಿಯಲ್ಲಿದ್ದು ಎಲ್ಲವನ್ನೂ ಸಮರ್ಪಕವಾಗಿ ನಡೆಸಬಹುದು. ಹೊರಗಡೆ ನೀವು ಮಾಡುವ ಅಥವಾ ಮಾಡದೇ ಇರುವ ಕಾರ್ಯಗಳು ಅಪ್ರಸ್ತುತವಾದದ್ದು. (ಇದಕ್ಕೆ ಸಂಬಂಧಿಸಿದವುಗಳೇ ಅಲ್ಲ).

ಇದು ಎರಡು ಸ್ತರಗಳ ಪ್ರಕ್ರಿಯೆ

ಮೊದಲನೆಯದಾಗಿ ಅಂತರಾತ್ಮದ ಜೊತೆ ನೀವು ಸಂಪರ್ಕವನ್ನು ಪಡೆಯಬೇಕು. ಅಂತಹದೊಂದು ಇದೆ ಎಂಬುದನ್ನು ನೀವು ಅರಿತುಕೊಳ್ಳಬೇಕು! ಆ ಇರುವಿಕೆಯ ಸ್ಥಿತಿಯಲ್ಲಿಯೇ ಆನಂದಿಸುವುದನ್ನು ಕಲಿಯಬೇಕು. ಧ್ಯಾನಕ್ಕೆ ಕುಳಿತಾಗ ಮೊದಮೊದಲು ನೀವು ಇದನ್ನು ಅರ್ಧ ಅಥವಾ ಒಂದು ಗಂಟೆಯವರೆಗೆ ಮಾತ್ರ ಮಾಡುವಿರಿ. ಒಮ್ಮೆ ನಿಮಗೆ ಈ ಸ್ಥಿತಿಯು ಹಿತವೆನಿಸಿದರೆ, ಅದನ್ನೇ ಪ್ರಯತ್ನ ಮಾಡುತ್ತಾ ನಿಮ್ಮ ಧ್ಯಾನದ ಅವಧಿಯನ್ನು ಹೆಚ್ಚಿಸುತ್ತಾ ಹೋಗಬೇಕು.

ಪ್ರಾರಂಭದಲ್ಲಿ ಸ್ವಲ್ಪಸ್ವಲ್ಪವಾಗಿಯೇ ತೊಡಗಿಕೊಳ್ಳಿ. ಹಾಗೆಯೇ ಊಟ ಮಾಡುವಾಗಲೂ, ನಡೆಯುತ್ತಿರುವಾಗಲೂ, ಪಾತ್ರೆಗಳನ್ನು ತೊಳೆಯು

ಒಮ್ಮೆ ಈ ಕೆಲಸ ಮಾಡುವವ, ಕೋಪಿಸಿಕೊಳ್ಳುವವ, ತೊಂದರೆಗೆ ಒಳಗಾಗಿರುವವ ಅಥವಾ ಖಿನ್ನತೆಯನ್ನು ಹೊಂದಿರುವವ ನೀವಲ್ಲವೆಂದು ತಿಳಿದೊಡನೆಯೇ ಮಹತ್ತರವಾದ ಸ್ವಾತಂತ್ರ್ಯ ಭಾವನೆಯನ್ನು ನೀವು ಅನುಭವಿಸುತ್ತೀರಿ.

ಇದು ಧ್ಯಾನದ ಮೂಲಕ ಉಂಟಾಗುತ್ತದೆ.

ಧ್ಯಾನವು ನಿಮಗೆ ಅಂತಿಮ ಸ್ವಾತಂತ್ರ್ಯವನ್ನು ದಯಪಾಲಿಸುತ್ತದೆ - ನಿಮ್ಮಿಂದಲೇ ನಿಮಗೆ ಸ್ವಾತಂತ್ರ್ಯ, ನೀವೇ ರಚಿಸಿಕೊಂಡಿರುವ ನಿಮ್ಮ ವ್ಯಕ್ತಿತ್ವದ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುತ್ತೀರಿ.

ಧ್ಯಾನವನ್ನು ಸಮೀಪಿಸಲು ಸರಿಯಾದ ಮಾರ್ಗ ಯಾವುದು?

ಒಳ್ಳೆಯ ಪ್ರಶ್ನೆ.

ಪ್ರಪ್ರಥಮವಾಗಿ ಪ್ರಾಮಾಣಿಕತೆಯಿಂದ ಸಮೀಪಿಸಿರಿ.

ಧ್ಯಾನವನ್ನು ನಂಬಿ ಅಥವಾ ನಂಬಬೇಡಿ ಎಂದು ನಾನು ನಿಮಗೆ ಹೇಳುತ್ತಿಲ್ಲ.

ನಂಬಿಕೆಯನ್ನು ಇಡಿ ಎಂದು ನಾನು ನಿಮಗೆ ಹೇಳುತ್ತಿಲ್ಲ.

ನಾನು ಹೇಳುವುದು ಅದರಲ್ಲಿ ಶ್ರದ್ಧೆಯನ್ನಿಡಿ ಎಂದು. ನಂಬಿಕೆ ಎಂಬುವುದು ಮೊದಲೇ ನಿರ್ಧರಿಸಿ ಒಪ್ಪಿಕೊಂಡಂಥದ್ದು. ಶ್ರದ್ಧೆ ಎಂದರೆ ಪ್ರಯೋಗಕ್ಕೆ ತೆರೆದಿಟ್ಟಿರುವುದು.

ಆದುದರಿಂದ ಧ್ಯಾನಕ್ಕೆ ಒಂದು ಅವಕಾಶವನ್ನು ಕೊಡಿ. ತೆರೆದ ಮನಸ್ಸಿನಿಂದಿರಿ.

ಸ್ಫೂರ್ತಿಯುತರಾಗಿರಿ, ಮನಸ್ಸಿನಲ್ಲಿರುವ ಯಾವುದೋ ಭಾವನೆಗಳಿಗೆ ಹೊಡೆತ ಬಿದ್ದಂತಾದರೂ ಆ ಹೊಡೆತಗಳನ್ನು ಸ್ವೀಕರಿಸಲು ಮತ್ತು ಹೊಸತನ್ನ ಸ್ವೀಕರಿಸಲು ಸಿದ್ಧವಾಗಿರಿ. ವಿಚಾರವಾಗಿ ಗಂಭೀರ ಮನೋಪ್ರವೃತ್ತಿಯನ್ನು ಹೊಂದಿದರೆ, ನೀವು ಪೂರ್ಣವಾಗಿ ಬಹು ಮುಖ್ಯವಾದದ್ದನ್ನೇ ಕಳೆದುಕೊಂಡು ಬಿಡುತ್ತೀರಿ. ಆಧ್ಯಾತ್ಮಿಕತೆಯು ಗಂಭೀರವಾಗಿ ಪರಿಗಣಿಸುವ ವ್ಯವಹಾರವಲ್ಲ. ಧ್ಯಾನವೆನ್ನುವುದು, ಈ ಜೀವನವೆಲ್ಲಾ ಕೇವಲ ಒಂದು ಲೀಲೆ ಎಂಬುದನ್ನು ಅರ್ಥಮಾಡಿಕೊಳ್ಳುವಂಥದ್ದು, ದೈವಲೀಲೆ. ಆದ್ದರಿಂದ ಅದರಲ್ಲಿ ಗಂಭೀರವಾಗಿ ಪರಿಗಣಿಸುವುದೇನಿದೆ?

ಧ್ಯಾನವನ್ನು ಒಂದು ಹಬ್ಬದಂತೆ (ಉತ್ಸವದಂತೆ) ಆಚರಿಸಿರಿ. ಸುಮ್ಮನೆ ಆನಂದದಿಂದ ನಲಿಯಿರಿ!

ನಾಲ್ಕನೆಯದಾಗಿ, ಸಹನಶೀಲರಾಗಿರಿ.

ಮೊದಲನೇ ಧ್ಯಾನದಲ್ಲಿ ಕುಳಿತಾಗಲೇ ಆ ದಿವ್ಯತ್ವವು (ಧುಮುಕಿ ಬಂದುಬಿಡುವುದಿಲ್ಲ) ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ.

ಧ್ಯಾನವನ್ನು ಪ್ರಾರಂಭಿಸುತ್ತಿದ್ದಂತೆಯೇ ಫಲದ ಬಗ್ಗೆ ಚಿಂತಿಸಲು ತೊಡಗಬೇಡಿ. ಒಂದು ಸಣ್ಣ ಕತೆ:

ಮೂರು ಕೋತಿಗಳು ಒಮ್ಮೆ ಕಳಿತ ರಸಭರಿತವಾದ ಮಾವಿನ ಹಣ್ಣನ್ನು ಕಂಡವಂತೆ. ಎಲ್ಲಾ ಕೋತಿಗಳಂತೆ ಅವೂ ಸಹ ಸ್ವಲ್ಪ ಹೊತ್ತು ಆ ಹಣ್ಣಿಗಾಗಿ ಹೊಡೆದಾಡಿದವು. ನಂತರ ಏನೋ ಕಾರಣಕ್ಕಾಗಿ ಅವುಗಳೇ ಒಂದು ಸ್ಪಷ್ಟವಾದ ಒಳ್ಳೆಯ ತೀರ್ಮಾನಕ್ಕೆ ಬಂದುವು.

ಬುದ್ದಿಪೂರ್ವಕವಾಗಿ ಏನನ್ನೋ ನಿಶ್ಚಯಿಸಿಕೊಂಡವು. ಆ ಹಣ್ಣನ್ನು ಆಗಲೇ ತಿಂದು ಮುಗಿಸುವ ಬದಲು ಆ ಹಣ್ಣನ್ನು ಹುಟ್ಟಿಹಾಕೋಣ. ಆ ಹಣ್ಣಿನ ಬೀಜವು ಮೊಳಿತು, ಬೆಳೆದು ಮರವಾದ ಮೇಲೆ ಆ ಮೂರು ಕೋತಿಗಳಿಗೂ ಸಾಕಾಗುವಷ್ಟು ಮತ್ತು ಇನ್ನೂ ಹೆಚ್ಚು ಹಣ್ಣುಗಳು ಸಿಕ್ಕುತ್ತವೆ ಎಂದುಕೊಂಡವು.

ಒಂದೊಂದು ಕೋತಿಯೂ ಒಂದೊಂದು ಕೆಲಸದಲ್ಲಿ ಆಸಕ್ತಿ ವಹಿಸಿ ಆ ಗಿಡವನ್ನು ಗಮನವಿಟ್ಟು ಕಾಪಾಡಿ ಬೆಳೆಸಲು ನಿರ್ಧರಿಸಿದವು. ನಿರೀಕ್ಷಿಸಿದರೆ, ಆ ಧ್ಯಾನದ ಪ್ರಕ್ರಿಯೆಯು ಸ್ಥಿರವಾಗಿ ನಿಮ್ಮಲ್ಲಿಯೇ ಉಳಿಯುವುದನ್ನು ನೀವಾಗಿಯೇ ತಡೆದು ತಪ್ಪಿಸಿದಂತಾಗುತ್ತದೆ. ಆದ್ದರಿಂದ ಸಮಾಧಾನವಾಗಿರಿ!

ಐದನೆಯದಾಗಿ, ಏಕಾಂತತೆಯ ಆನಂದವನ್ನು ಅನುಭವಿಸಿ.

ಸಾಧ್ಯವಾದಷ್ಟೂ ಮನಸ್ಸನ್ನು ಒಳಮುಖವಾಗಿ ಹರಿಯುವ ಸ್ಥಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳಿ. ಒಬ್ಬರೇ ಇರಿ, ಪ್ರತಿದಿನ ಕೆಲವು ಕಾಲ ಮೌನವಾಗಿ ಉಳಿಯಿರಿ. ನಿಮ್ಮ ಒಳಗಿನ ಪರಿಸರ (ಅಥವಾ ವಾತಾವರಣ) ದಲ್ಲಿಯೇ ಅನುಭವವನ್ನು ಪಡೆಯಲು ನಿಮಗೆ ನೀವೇ ಅವಕಾಶವನ್ನು ಕಲ್ಪಿಸಿಕೊಳ್ಳಿರಿ. ಯಾವಾಗ ಧ್ಯಾನವು ನಿಮ್ಮ ಒಂದು ಭಾಗವೇ ಆದಾಗ, ಸಹಜವಾಗಿ ಆ ಸ್ಥಿತಿಯು ನಿಮ್ಮಲ್ಲಿಯೇ ವಿಕಸಿತವಾಗುತ್ತದೆ. ಆದರೆ ಈ ಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ, ಹೊಸದಾಗಿ (ಧ್ಯಾನವನ್ನು) ಪ್ರಾರಂಭಿಸುವವರು, ಉಳಿಸಿಕೊಳ್ಳಬೇಕಾಗುತ್ತದೆ.

ಧ್ಯಾನದ ತಂತ್ರಗಳಲ್ಲಿ ಬೇಕಾದಷ್ಟು ತರಹ ಇವೆ. ಅವುಗಳಲ್ಲಿ ಯಾವುದು ನನಗೆ ಸರಿಯಾದದ್ದು ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳುವುದು.

ಫಲಿತಾಂಶವನ್ನು ತಿಳಿದು ಅನುಸರಿಸಿ!

ನಿಮಗೆ ಯಾವ ತಂತ್ರವು ಸರಿ ಎನ್ನಿಸುವುದೋ, ಅದನ್ನು ಪ್ರಯತ್ನಿಸಿ. ಆ ಪ್ರಯತ್ನದಲ್ಲಿ ನಿಮ್ಮ ಶಕ್ತಿಯನ್ನು ಪೂರ್ಣವಾಗಿ ವಿನಿಯೋಗಿಸಿಕೊಳ್ಳಿ. ಪ್ರಾಮಾಣಿಕತೆಯಿಂದ, ನಿಮಗೆ ಸರಿಹೋಗುತ್ತದೆ ಎಂಬ ಪೂರ್ಣ ನಂಬಿಕೆಯಿಂದ, ಭರವಸೆಯಿಂದ ಪ್ರಯತ್ನಿಸಿ. ಕೆಲವು ದಿವಸಗಳ ಸಮಯದಲ್ಲಿಯೇ ಆ ತಂತ್ರವು ನಿಮಗೆ ಸರಿಹೋಗುವುದೋ ಹೇಗೆ ಎಂಬುವುದು ತಿಳಿದು ಬರುತ್ತದೆ.

ನನ್ನ ಸಲಹೆ ಏನೆಂದರೆ, ಪ್ರಾರಂಭದಲ್ಲಿ ಕುಳಿತಲ್ಲೇ ಮಾಡುವ ತಂತ್ರಗಳಿಗಿಂತ, ಕ್ರಿಯಾತ್ಮಕವಾದ ತಂತ್ರಗಳನ್ನು ಮೊದಲು ಅಭ್ಯಾಸ ಮಾಡಿ. ಏಕೆಂದರೆ,

Portrait of a smiling young person

ಧ್ಯಾನವು ನಿಮ್ಮನ್ನು ಒಳಗಡೆಗೆ ಕರೆದೊಯ್ಯುವ ಮಾರ್ಗ. ಆದರೆ ಒಳಕ್ಕೆ ಪ್ರವೇಶಿಸಲು ನೀವು ಹೊರಗಿನಿಂದಲೇ ಪ್ರಾರಂಭಿಸಬೇಕು. ಈಗ ನೀವು ಹೊರಸುತ್ತಿನ ಪರಿಧಿಯಲ್ಲಿದ್ದೀರಿ. ಸಮುದ್ರದ ನೀರಿನಲ್ಲಿ ಒಂದು ಬೆರಳನ್ನು ಮಾತ್ರ ಇಟ್ಟು, ನೀರು ಇನ್ನೂ ತಣ್ಣಗಿದೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದೀರಿ!

ಬಹಳ ಜನ ನನ್ನಲ್ಲಿಗೆ ಬಂದು ಕೇಳುತ್ತಾರೆ ನನಗೆ ಅಧ್ಯಾತ್ಮದ ಬಗ್ಗೆ ಅಷ್ಟೇನೂ ಗೊತ್ತಿಲ್ಲ, ಹಿಂದೆಂದು ಧ್ಯಾನವನ್ನು ನಾನು ಪ್ರಯತ್ನಿಸಿಯೇ ಇಲ್ಲ, ನಾನು ಸಿದ್ಧವಿದ್ದೇನೆಯೇ? ಎಲ್ಲಿಂದ ಪ್ರಾರಂಭಿಸಲಿ?

ನಾನು ನಿಮಗೆ ಹೇಳೇನಿ: ಎಲ್ಲಿಂದ ಪ್ರಾರಂಭಿಸಬೇಕು ಅಂದ್ರೆ, ಈಗ ನೀವು ಎಲ್ಲಿದ್ದೀರೋ ಅಲ್ಲಿಂದಲೇ ಪ್ರಾರಂಭಿಸಿ! ಇಲ್ಲಿಯವರೆಗೂ ನೀವು ನಿಮ್ಮನ್ನು ಕುರಿತು ಅರ್ಥಮಾಡಿ ಕೊಂಡಿರುವುದೆಂದರೆ ನಿಮ್ಮ ಶರೀರ, ನಿಮ್ಮ ಭಾವನೆಗಳು ಮತ್ತು ಆಲೋಚನೆಗಳು. ನೀವು ಏನೇನು ಎಂದು ನೀವು ಯೋಚಿಸುತ್ತೀರೋ ಅದೆಲ್ಲಾ ಕೇವಲ ನಿಮ್ಮ ಶರೀರ, ನಿಮ್ಮ ಭಾವನೆಗಳು, ನಿಮ್ಮ ಆಲೋಚನೆಗಳು.

ಆದುದರಿಂದ, ಅಲ್ಲಿಂದಲೇ ಪ್ರಾರಂಭಿಸಿರಿ! (ಅದು ಅಷ್ಟು ಸರಳ.

Step-1 ಶರೀರದ ಮೇಲೆ ಕೆಲಸ ಮಾಡುವುದು (ಶರೀರವನ್ನು ಸುಧಾರಿಸುವುದು)

ನಿಮ್ಮ ಶರೀರದ ಬಗ್ಗೆ ನಿಮಗೆ ಏನನಿಸುತ್ತದೆ?

ನಾವೆಲ್ಲಾ ನಮ್ಮ ನಮ್ಮ ಶರೀರವನ್ನು ಕುರಿತು ಏನೇನೋ ಅಭಿಪ್ರಾಯಗಳನ್ನು, ಭಾವನೆಗಳನ್ನು ಹೊಂದಿದ್ದೇವೆ. ಈ ಅಭಿಪ್ರಾಯಗಳೆಲ್ಲಾ ನಮ್ಮವೇ ಆಗಿಲ್ಲ. ಹೆಚ್ಚು

ಕಡಿಮೆ ಯಾವಾಗಲೂ ಬೇರೆಯವರು ನಮ್ಮನ್ನು ಕುರಿತು ಏನು ಅಂದುಕೊಂಡಿರುತ್ತಾರೋ ಆ ಅಭಿಮತಗಳನ್ನೇ ನಾವು ತೆಗೆದುಕೊಂಡು ಬಿಟ್ಟಿರುತ್ತೇವೆ. ನಾವೆಲ್ಲಾ ನಮ್ಮ ಶರೀರದ ವಿಷಯದಲ್ಲಿ ಬಹಳವಾಗಿ ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದೇವೆ. ನಿಮ್ಮ ಸುಪ್ತ ಮನಸ್ಸಿನಲ್ಲಿ ನಿಮಗೇ ಗೊತ್ತಿಲ್ಲದೆ ನಿಮ್ಮ ಶರೀರದ ಬಗ್ಗೆ ನಕಾರಾತ್ಮಕ ಭಾವನೆಗಳು ತುಂಬಿಕೊಂಡಿವೆ. ಬಹಳ ಅಪರೂಪಕ್ಕೆ ಒಬ್ಬೊಬ್ಬರು ತಮ್ಮ ಶರೀರದ ಬಗ್ಗೆ ಸಮಾಧಾನವಾಗಿದ್ದಾರೆ (ತೃಪ್ತರಾಗಿದ್ದಾರೆ). ಆ ರೀತಿ ತೃಪ್ತರಾಗಿದ್ದಾರೆ ಅಂದರೆ ಎಲ್ಲವೂ ಸರಿಯಾಗಿದೆ ಎಂದು ಕಲ್ಪಿಸಿಕೊಳ್ಳುವುದಲ್ಲ, ನಿಮ್ಮ ಶರೀರವನ್ನು ಹೇಗಿದೆಯೋ ಹಾಗೆಯೇ ಒಪ್ಪಿಕೊಂಡು ಸುಮ್ಮನೆ ಆರಾಮವಾಗಿರುವುದು.

ನಿಮ್ಮ ಜೀವನದಲ್ಲಿಲ್ಲೂ ನೀವು ಕೇಳಿರುವುದೇನು? ನಿಮ್ಮ ದೇಹ ನಿಮ್ಮ ಶತ್ರು ! ನಿಮ್ಮ ಶರೀರ ಕೆಟ್ಟದ್ದು ಮತ್ತು ಪಾಪಪೂರಿತವಾದದ್ದು! ಶರೀರವನ್ನು ದಂಡಿಸಬೇಕು, ತಿರಸ್ಕರಿಸಬೇಕು ಎಂದು. ಅದರಲ್ಲೂ ವಿಶೇಷವಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಸಾಧನೆ ಮಾಡುವುದಕ್ಕೆ ಶರೀರವೇ ಒಂದು ದೊಡ್ಡ ಅಡ್ಡಿ ಎಂದು ಹೇಳುವುದುಂಟು.

ಹೀಗಾಗಿ ನಿಮ್ಮ ಶರೀರವನ್ನು ಕುರಿತು ಅಸಹಜವಾದ ದ್ವೇಷವೇ ಬಂದುಬಿಟ್ಟಿರುತ್ತೆ. ಈ ಭಾವನೆಯು ನಿಮ್ಮ ಸುಪ್ತ ಮನಸ್ಸಿನೊಳಗೆ ಬೇರೂರಿಬಿಟ್ಟಿರುತ್ತೆ. ಆಗ ನಿಮ್ಮ ಶರೀರ ನಿಮಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಯೋಚಿಸಲು ತೊಡಗುತ್ತೀರಿ. ಆದರೆ, ಸತ್ಯವೇನೆಂದರೆ, ಈ ಶರೀರವು ಈ ಸಂಸಾರ ಸಾಗರವನ್ನು ದಾಟಿಸುವ ದೋಣಿಯೇ ಆಗಿದೆ! ಈ ಪ್ರಪಂಚದಲ್ಲಿ ನೀವು ಶರೀರವಿಲ್ಲದೆ ಓಡಾಡಲು ಸಾಧ್ಯವೆ? ನಿಮ್ಮ ಶರೀರ ಒಳ್ಳೆಯ ಸ್ಥಿತಿಯಲ್ಲಿ ಇರದೇ ಹೋದರೆ ನೀವು ಧ್ಯಾನ ಅಥವಾ ಆಧ್ಯಾತ್ಮ ಮಾರ್ಗದಲ್ಲಿ ಸಾಧನೆ ಮಾಡಲು ಸಾಧ್ಯವೆ? ನಿಮ್ಮ ಕಣ್ಣಿನ ಮತ್ತು ಮೆದುಳಿನ ಸಹಾಯ ಇಲ್ಲದೆ ಈ ಪುಸ್ತಕವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಆಗುತ್ತದೆಯೆ?

ಅಂತಿಮವಾಗಿ ಮನುಷ್ಯನು ತನ್ನ ಶರೀರವನ್ನು ದಾಟಿ ಮುಂದೆ ಹೋಗಬೇಕು ನಿಜ. ಆದರೆ, ಅದನ್ನು ಶರೀರದ ಜೊತೆ ಹೋರಾಡಿ ಸಾಧಿಸುವುದಲ್ಲ, ನೀವು ನಮ್ಮ ಶರೀರದಲ್ಲಿ ಹೇಗೆ ಉಂಟಾಗುತ್ತವೆ? ಚಿಕ್ಕ ಮಕ್ಕಳಾಗಿದ್ದಾಗಿನಿಂದಲೂ ನಮ್ಮ ಸ್ವಾಭಾವಿಕವಾದ ಭಾವನೆಗಳನ್ನು ಮುಚ್ಚಿಡುವುದನ್ನು ಕಲಿತಿದ್ದೇವೆ. ಏಕೆಂದರೆ, ಈ ಸಮಾಜದಲ್ಲಿ ನಾವು ಯಾವಾಗಲೂ ನಮಗೆ ಬೇಕಾದ್ದನ್ನು ವ್ಯಕ್ತಪಡಿಸಲು ಆಗುವುದೇ ಇಲ್ಲ.

ಉದಾಹರಣೆಗೆ, ನಮಗೆ ಸಿಟ್ಟು ಬಂದಾಗ, ನಮ್ಮ ಶರೀರದಲ್ಲಿ ಹೋರಾಡಲು ಬೇಕಾದ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಮನುಷ್ಯನನ್ನು ಆಕ್ರಮಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಶರೀರವು ತಯಾರು ಮಾಡುತ್ತದೆ! ಏಕೆಂದರೆ ಬದುಕಲು ಕೋಪವು ಅತ್ಯವಶ್ಯಕವಾಗಿ ಎಲ್ಲ ಪ್ರಾಣಿಗಳಿಗೂ ಬೇಕಾದ ಆಯುಧವಾದ್ದರಿಂದ, ಶರೀರವು ನಿಮ್ಮನ್ನು ಬೇರೆಯವರೊಂದಿಗೆ ಹೋರಾಡಲು ತಯಾರು ಮಾಡುತ್ತೆ. ಆದರೆ ನಮ್ಮ ಈ ನಾಗರಿಕ ಸಮಾಜದಲ್ಲಿ ಯಾವಾಗಲೂ ನಮ್ಮ ಕೋಪವನ್ನು ವ್ಯಕ್ತಪಡಿಸಲು ಆಗುವುದಿಲ್ಲ. ಕಾರಣ ಮತ್ತೊಬ್ಬರನ್ನು ಕಂಡರೆ ನಾವೇ ಹೆದರಿಕೊಳ್ಳಬೇಕಾಗಿರಬಹುದು ಉದಾಹರಣೆಗೆ: ನಿಮ್ಮ ಬಾಸ್ ಅಥವಾ ನಿಮ್ಮ ಹೆಂಡತಿ!! ಹೀಗೆ ಶರೀರದಲ್ಲಿ ಯಾವ ಯಾವ ಶಕ್ತಿ ಉತ್ಪತ್ತಿ ಯಾಗಿರುತ್ತದೆಯೋ ಅವುಗಳು ಉಪಯೋಗಿಸಲ್ಪಡದೇ ಹಾಗೆಯೇ ಉಳಿದುಬಿಟ್ಟಿರುತ್ತೆ. ಈ ಹೆಚ್ಚಿನ ಶಕ್ತಿಯು ನಿಮ್ಮ ಶರೀರದಲ್ಲಿ ಕಟ್ಟಿಕೊಂಡು, ನಿಮ್ಮ ಶಕ್ತಿಯು ಪ್ರವಹಿಸುವಲ್ಲಿ ಅಡ್ಡಿಯನ್ನು ಉಂಟು ಮಾಡುತ್ತದೆ.

ಇದೇ ತರಹ ಎಲ್ಲಾ ಭಾವನೆಗಳ ವಿಷಯದಲ್ಲಿಯೂ ಉಂಟಾಗುತ್ತೆ ಅಂದರೆ, ಆಸೆ, ಹೆದರಿಕೆ, ದುಃಖ...

ಅನೇಕ ವೇಳೆ, ನಿಮ್ಮ ಶರೀರವು ತನಗೆ ಬೇಕಾದ ಹಾಗೆ ವರ್ತಿಸಲು ನೀವು ಬಿಡುವುದಿಲ್ಲ. ಕಾರಣ ಹೆದರುತ್ತೀರಿ. ಶರೀರದ ವಿಚಾರವಾಗಿ ನಿಮಗೆ ನಂಬಿಕೆಯೂ ಇಲ್ಲದೆ ತುಂಬ ಭಯದಿಂದ ಜೀವಿಸುತ್ತಿರುತ್ತೀರಿ. ನಿಮ್ಮ ಶರೀರವು ನಾಗರೀಕತೆಯ ಭಾಷೆಯನ್ನು ತಿಳಿದುಕೊಂಡೇ ಇಲ್ಲ ಎನ್ನುವಂತೆ ಯೋಚಿಸುತ್ತೀರಿ. ಅದು ಸಮಾಜದ ನಿಯಮಗಳನ್ನು ಪರಿಗಣಿಸುವುದಿಲ್ಲ. ನಿಮ್ಮ ಶರೀರವನ್ನು ಸ್ವತಂತ್ರವಾಗಿ ಬಿಟ್ಟರೆ ನಿಮ್ಮ ಶರೀರ ಏನೇನು ಮಾಡಿಬಿಡುತ್ತೋ ತೂಕಡಿಸುತ್ತೀರೋ? ನಮ್ಮಲ್ಲಿ ಸಾಕಷ್ಟು ಜನರಿಗೆ ತೂಕಡಿಕೆಯ ಅನುಭವ! ಏಕೆಂದರೆ, ನಾವು ಆರಿಸುವ ಆಹಾರ ನಿಸ್ಸಾರ, ಮತ್ತು ನಾವು ಹೊಟ್ಟೆ ತುಂಬಿದ್ದರೂ ಇನ್ನೂ ತಿನ್ನುತ್ತಲೇ ಇರುತ್ತೇವೆ. ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿರುತ್ತೇವೆ. ಗಾರ್ಬೇಜ್ ಬಿನ್‌ಗೆ (ಕಸದ ಡಬ್ಬಕ್ಕೆ) ತುಂಬಿದ ಹಾಗೆ ತುಂಬುತ್ತಿರುತ್ತೇವೆ! ನಮ್ಮ ಹೊಟ್ಟೆಗಳನ್ನು ಕಸದ ಡಬ್ಬಗಳ ತರಹ ನೋಡಿಕೊಳ್ಳುತ್ತಿದ್ದೇವೆ. ನಾವು ನಮ್ಮ ಜೀರ್ಣಾಂಗಗಳಿಗೆ ಹೆಚ್ಚು ತೊಂದರೆ ಉಂಟು ಮಾಡುತ್ತಿದ್ದೇವೆ. ಹೀಗಾಗಿ ನಾವು ಊಟದ ನಂತರ ಚುರುಕಾಗಿ ಇರುವುದಿಲ್ಲ ಅನ್ನುವುದರಲ್ಲಿ ಆಶ್ಚರ್ಯವೇನಿಲ್ಲ!

ಯಾವಾಗ ನೀವು ಹೆಚ್ಚು ತಿಂದು ಸಾಕಷ್ಟು ವ್ಯಾಯಾಮವನ್ನು ಮಾಡುವುದಿಲ್ಲವೋ ಆಗ ಸೋಮಾರಿತನ ಇದ್ದದ್ದೇ. ಇಂತಹ ಸೋಮಾರಿತನಕ್ಕೆ ಒಳಗಾದ ಶರೀರ ಧ್ಯಾನಕ್ಕೆ ಯೋಗ್ಯವಾದದ್ದಲ್ಲ. ಅಷ್ಟೇ ಅಲ್ಲ, ಶಕ್ತಿ ಹೀನವಾದಾಗ ಖಾಯಿಲೆಗಳು ನಮ್ಮ ಶರೀರವನ್ನು ಸುಲಭವಾಗಿ ಆಕ್ರಮಿಸಿಬಿಡುತ್ತವೆ.

ವ್ಯಾಯಾಮವು ನಿಮ್ಮ ಶರೀರವನ್ನು ಬೆಳೆಯಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡಿದಾಗ ಶರೀರದ ಪ್ರತಿಯೊಂದು ಜೀವ ಕಣಗಳೂ ಅರಳುತ್ತವೆ. ನಿಮ್ಮ ಶ್ವಾಸಕೋಶವು (oxygen) ಆಮ್ಲಜನಕದಿಂದ ತುಂಬಿದಾಗ, ಹೊರ ಬರುವ (carbon-dioxide) ಇಂಗಾಲಾಮ್ಲದ ಜೊತೆ ಕಲ್ಮಶಗಳೂ ಸಹ ಹೊರ ಹಾಕಲ್ಪಡುತ್ತೆ.

ನಮ್ಮ ಜೀವನ ಶೈಲಿಯಲ್ಲಿ ವ್ಯಾಯಾಮಕ್ಕಾಗಲೀ, ವಿಶ್ರಾಂತಿಗಾಗಲೀ ಸಮಯವೇ ಇಲ್ಲ. ನಾವು ಯಾವುದನ್ನು ವಿಶ್ರಾಂತಿ ಎನ್ನುತ್ತೇವೆಯೋ ಅದು ವಿಶ್ರಾಂತಿಯೇ ಅಲ್ಲ. ನಾವು ನಿದ್ರೆಯಿಂದ ಎದ್ದಾಗ ಎಷ್ಟು ಜನ ಸ್ಪೂರ್ತಿಯುತರಾಗಿ, ಸಂತೋಷವಾಗಿದ್ದೀವಿ? ನೀವು ಸರಿಯಾಗಿ ನಿದ್ರೆ ಮಾಡಿ ವಿಶ್ರಾಂತಿ ಪಡೆದಿದ್ದರೆ, (ಎದ್ದ ತಕ್ಷಣ) ಪ್ರತಿದಿನ ಬೆಳಿಗ್ಗೆ, ಬಚ್ಚಲಮನೆಗೆ ಸಂತೋಷವಾಗಿ ಕುಣಿದಾಡುತ್ತಾ ಹೋಗ್ತೀರಿ! (you should dance your way to the bathroom) ಅದರ ಬದಲು, ಅಲಾರಂ ಗಂಟೆ ಬಾರಿಸಿದರೂ, ನೀವು ಮಾಡುವುದೇನು? ಅದನ್ನು ನಿಲ್ಲಿಸಿ, ಪುನಃ ನಿದ್ರೆ ಹೋಗ್ತೀರಿ!

ನಿಜವಾದ ನಿದ್ರೆ ಅಂದರೆ, ನಿಮ್ಮ ಶರೀರ ಪೂರಾ ವಿಶ್ರಾಂತಿ ಪಡೆದು, ಒತ್ತಡ ಪೂರ್ತಿ ಹೋಗಿ, ನಿಮ್ಮ ಶರೀರ ಪ್ರಕೃತಿಯು ನಿಮ್ಮ ಶರೀರದಲ್ಲಿನ ಏರುಪೇರುಗಳನ್ನು ಸರಿಪಡಿಸಿ ಸುಸ್ಥಿತಿಯಲ್ಲಿಟ್ಟಿರುವ ಸಮಯ. ಎಷ್ಟು ಸಾರಿ ನೀವು ಕನಸೂ ಇಲ್ಲದ ಸುಖ ನಿದ್ರೆಯನ್ನು ಯಾವ ಅಡಚಣೆಯೂ ಇಲ್ಲದೆ ಮಾಡಿದ್ದೀರಿ? ಬಹಳ ಅಪರೂಪ! ಆದರೆ, ಆ ದಿವಸಗಳು ಮಾತ್ರ ನೀವು ನಿಜವಾಗಿಯೂ ನಿದ್ರಿಸಿದ್ದೀರಿ!

ನಿಮಗೆ ಆಶ್ಚರ್ಯವಾಗಬಹುದು, ಇವೆಲ್ಲಾ ಧ್ಯಾನಕ್ಕೆ ಹೇಗೆ ಸಂಬಂಧಪಟ್ಟಿದೆ? ಅಂತ. ಈ ವಿಚಾರದಲ್ಲಿ ಚರ್ಚೆ ಮಾಡುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಧ್ಯಾನವನ್ನು ಸರಿಯಾಗಿ ಮಾಡುವುದಕ್ಕೆ ಭೌತಿಕವಾದ ಈ ಶರೀರ ಸಮರ್ಥವಾಗಿದ್ದಲ್ಲಿ ಸಹಾಯ ಮಾಡುತ್ತದೆ. ಆದರೆ ಬಹು ಮುಖ್ಯವಾಗಿ ಧ್ಯಾನದ ಅಭ್ಯಾಸದಿಂದಲೇ ನಿಮ್ಮ ಶರೀರಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ನಿಮಗೆ ಒಳ್ಳೆಯ ನಿದ್ರೆ ಬರಲು ಸಹಾಯವಾಗುವ ತಂತ್ರಗಳನ್ನು ತಿಳಿದುಕೊಳ್ಳೋಣ. ಯಾವಾಗ ನಿಮ್ಮ ನಿದ್ರೆಯ ಗುಣ ಉತ್ತಮವಾಗುತ್ತದೆಯೋ, ಜಾಗ್ರತಾವಸ್ಥೆಯಲ್ಲಿನ ನಿಮ್ಮ ಕಾರ್ಯ ನಿರ್ವಹಣೆಯ ಗುಣಮಟ್ಟ ಹಾಗೂ ಉತ್ಪಾದನೆಯೂ ಸಹಜವಾಗಿ ಹೆಚ್ಚಾಗುತ್ತದೆ. (ನೀವು ನಿದ್ರೆಯನ್ನು ಚೆನ್ನಾಗಿ ಮಾಡಿದಷ್ಟೂ, ನಿಮ್ಮ ಎಚ್ಚರದ ಕಾರ್ಯ ನಿರ್ವಹಣಾ ಶಕ್ತಿ ಸಹಜವಾಗಿ ಹೆಚ್ಚುತ್ತದೆ)

Step-2 ಆಲೋಚನೆಗಳ ಮೇಲೆ ಕೆಲಸ ಮಾಡಿ

ಆಲೋಚನೆಗಳು ನಮ್ಮ ಜೀವನದಲ್ಲಿ ಹೆಚ್ಚು ಭ್ರಾಂತಿಪೂರ್ವಕ ವಾದವುಗಳು. ಬಹಳ ಸಾರಿ ನಮಗೆ ನಮ್ಮ ಆಲೋಚನೆಗಳ ಮೇಲೆ ಹಿಡಿತವಿರುವುದಿಲ್ಲ. ನಮ್ಮ ಆಲೋಚನೆಗಳು ನಮ್ಮನ್ನು ಎಲ್ಲಿಂದರಲ್ಲಿಗೆ ಕರೆದುಕೊಂಡು ಹೋಗಿಬಿಡುತ್ತೆ. ನಿಮಗೆ ಬರುವ ಆಲೋಚನೆಗಳನ್ನೆಲ್ಲಾ ಜೋರಾಗಿ ಮಾತಿನಲ್ಲಿ ಹೇಳಲು ಹೊರಟರೆ, ನೀವೇ ನಿಮ್ಮ ಮಾತುಗಳಿಗೆ ನಾಚಿಕೆ ಪಟ್ಟುಕೊಳ್ಳುತ್ತೀರಿ! ಏಕೆಂದರೆ,

ನೀವು ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದೀರಿ ಅಂದರೆ ಅಂತಿಮವಾಗಿ ಅದು ಹಣಕ್ಕಾಗಿ ಅಥವಾ ಅಧಿಕಾರಕ್ಕಾಗಿ ಆಗಿರುತ್ತದೆ. ನೀವು ರಜ ತೆಗೆದು ಕೊಳ್ಳುತ್ತಿದ್ದೀರಿ ಅಂದರೆ ನಿಮ್ಮ ಮನಸ್ಸು ಯಾವುದೋ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಿರುತ್ತೆ.

ನೀವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೀರಿ, ಸ್ವಲ್ಪ ವಿಚಾರ ಮಾಡಿ ಖಚಿತವಾಗಿ ಈ ಮೂರರಲ್ಲಿ ಒಂದಾಗಿರುತ್ತೆ!

ಎಷ್ಟು ಸಾರಿ ನೀವು ಸತ್ಯ, ಸೌಂದರ್ಯ, ಒಳ್ಳೆಯತನ ಇವುಗಳ ವಿಚಾರವಾಗಿ ಆಲೋಚಿಸುತ್ತೀರಿ? ಅದರ ಅವಶ್ಯಕತೆಯಾದರೂ ಏನು? ಏನು ನಮ್ಮ ಜೀವನ ಈ ಸತ್ಯ, ಸೌಂದರ್ಯಗಳ ಆಧಾರದ ಮೇಲೆ ನಡೆಯುತ್ತಿದೆಯೇ? ಅಂತ ಆಲೋಚಿಸಬಹುದು ನೀವು. ನಮ್ಮ ಜೀವನ ಎಷ್ಟು ಹಣವನ್ನು ನಾವು ಗಳಿಸುತ್ತೇವೆ ಹಾಗೂ ಎಂತಹ ಅಧಿಕಾರವನ್ನು ಸಂಪಾದಿಸಬಹುದು! ಎಂಬುದರ ಮೇಲೆಯೇ ಆಧಾರಗೊಂಡಿರುತ್ತದೆ.

ಆದರೆ ಆಲೋಚನೆಗಳು ನಿಮ್ಮ ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಯಾವಾಗ ನೀವು ಪದೇ ಪದೇ ಒಂದೇ ವಿಚಾರವನ್ನು ಕುರಿತು ಆಲೋಚಿಸತೊಡಗಿದಾಗ ಅದು ನಿಮ್ಮ ಮನಸ್ಸಿನ ಸ್ಥಿತಿಯನ್ನೇ ಮಾತ್ರವಲ್ಲ, ನಿಮ್ಮ ಜೀವನದ ಸ್ಥಿತಿಯನ್ನೇ ಬದಲಿಸಬಹುದು.

ನೀವು ಸದಾ ಸೌಂದರ್ಯದ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಜೀವನ ಸುಂದರವಾಗುತ್ತೆ.

ಎಲ್ಲಕ್ಕಿಂತ ಹೆಚ್ಚಾಗಿ ಯಾವ ಆಲೋಚನೆಗಳು ನಿಮ್ಮ ಮನಸ್ಸನ್ನು ಪ್ರವೇಶಿಸುತ್ತಾ ಇವೆ ಹಾಗೂ ಬಿಟ್ಟು ಹೋಗುತ್ತಾ ಇವೆ ಎಂಬುದನ್ನು ಜಾಗರೂಕತೆಯಿಂದ ಗಮನಿಸಿ ತಿಳಿದುಕೊಳ್ಳಿ. ಈಗ ನಿಮ್ಮ ಮನಸ್ಸು ಎಲ್ಲಾ ತರಹದ ಆಲೋಚನೆಗಳನ್ನೂ ಸ್ವೀಕರಿಸಲು ಸ್ವತಂತ್ರವಾಗಿದೆ. ಯಾವ ಯೋಚನೆ ಬೇಕಾದರೂ ನಿಮ್ಮ ಮನಸ್ಸಿನೊಳಕ್ಕೆ ನುಗ್ಗಬಹುದು, ಬೇರೆ ಆಲೋಚನೆಗಳ

ನೀವು ಪದೇ ಪದೇ ಈತರಹ ಕೊಡುತ್ತಿರುವ ಸಲಹೆಗಳಿಂದ ನಿಮ್ಮ ಜೀವನ ಅದರಂತೆಯೇ ಬದಲಾಯಿಸುತ್ತಿರುವುದನ್ನು ಕಂಡು ಆಶ್ಚರ್ಯ ಚಕಿತರಾಗುತ್ತೀರಿ!

Step - 3 ಭಾವನೆಗಳ ಮೇಲೆ ಕೆಲಸ ಮಾಡಿ.

ನಿಮ್ಮ ಭಾವನೆಗಳೇ ನಿಮ್ಮ ಪ್ರಪಂಚವನ್ನು ಸೃಷ್ಟಿಸುತ್ತವೆ.

ನೀವು ನಂಬಿ ಅಥವಾ ಬಿಡಿ, ನೀವು ಒಪ್ಪಬಹುದು ಅಥವಾ ಬಿಡಬಹುದು ಆದರೆ ನೀವೆಲ್ಲರೂ ದೇವರೇ ಆಗಿದ್ದೀರಿ.

ನಿಮ್ಮದೇ ಭಾವನೆಗಳಿಂದ ಮತ್ತು ಅನುಭವಗಳಿಂದ ನೀವು ಜಗತ್ತನ್ನು ಸೃಷ್ಟಿಸುತ್ತೀರಿ.

ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ಅರಿವು ಯಾವ ಸ್ಥಿತಿಯಲ್ಲಿರುವುದೋ ಅದೇ ಸ್ಥಿತಿಯಲ್ಲಿ ನಿಮ್ಮ ಜೀವನವೂ ಇರುತ್ತದೆ.

ನಿಮ್ಮ ಭಾವನೆಗಳು ಸ್ಪಷ್ಟ ಮತ್ತು ಸಕಾರಾತ್ಮಕವಾಗಿದ್ದಲ್ಲಿ, ಈ ಪ್ರಪಂಚವೇ ಒಂದು ಸುಂದರವಾದ ಸ್ಥಳವಾಗಿರುತ್ತದೆ.

ಅಸ್ತಿತ್ವವೇ ನಿಮ್ಮ ಮೇಲೆ ಅನುಗ್ರಹದ ಮಳೆಗರೆಯುತ್ತದೆ. ನೀವು ಪ್ರೇಮಮಯರಾಗಿದ್ದಾಗ ಎಲ್ಲೆಲ್ಲೂ ಪ್ರೀತಿಯನ್ನೇ ಕಾಣುತ್ತೀರಿ. ನೀವು ದ್ವೇಷದಿಂದ ಕೂಡಿದ್ದಾಗ, ದ್ವೇಷವನ್ನೇ ಪಡೆಯುತ್ತೀರಿ. ಇದು ನೀತಿಯ ಕಥೆಯಲ್ಲ, ಇದೇ ಸತ್ಯ. ನಮ್ಮ ಸಂಕುಚಿತ ಗ್ರಹಿಸುವಿಕೆಯಿಂದ ನಾವು ಇದನ್ನು ತಿಳಿದುಕೊಳ್ಳಲು ಅಸಮರ್ಥರಾಗಿದ್ದೇವೆ. ಇದಕ್ಕೆ ಕಾರಣವನ್ನು ಎಲ್ಲಾ ಕಡೆಯಲ್ಲೂ ಹುಡುಕುತ್ತಿದ್ದೇವೆ. ಸತ್ಯವು ಏನೆಂದರೆ, ನಾವು ಪ್ರತಿಯೊಬ್ಬರೂ ನಮ್ಮ ಜೀವನದ ಪರಿಸ್ಥಿತಿಗೆ 100% ನಾವೇ ಜವಾಬ್ದಾರರು.

ನಿಮ್ಮ ಭಾವನೆಗಳ ಮೇಲೆ ಕೆಲಸ ಮಾಡಲು ನೀವು ಪ್ರಾರಂಭಿಸಿದರೆ ಇದರ ಸತ್ಯತೆ ನಿಮಗೇ ತಿಳಿದು ಬರುತೆ!

ಸಮಾಜದಲ್ಲಿ ಅಪರಾಧ ಮತ್ತು ಆತ್ಮಹತ್ಯೆಯ ಪ್ರಕರಣಗಳು ಯುದ್ಧ ಸಮಯದಲ್ಲಿ ಬಹಳ ಪರಿಣಾಮಕಾರಿಯಾಗಿ ಕಡಿಮೆಯಾಗಿರುವುದನ್ನು ಸಂಶೋಧನೆಯಿಂದ ದೃಢಪಡಿಸಿದ್ದಾರೆ. ಏಕೆಂದರೆ, ಯುದ್ಧಸಮಯದಲ್ಲಿ ಅವರ ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಲು ತೆರೆದ ಅವಕಾಶ ಸಿಕ್ಕಿರುವುದರಿಂದ ಗೌಪ್ಯವಾಗಿ ಅಪರಾಧಗಳನ್ನು ಮಾಡಬೇಕಾಗಿಲ್ಲ!

ಹಿಟ್ಲರನೂ ಹೇಳಿರುವುದೇನೆಂದರೆ, ಒಂದು ದೇಶವನ್ನು ಶಕ್ತಿಯುತವಾಗಿ ಮಾಡಬೇಕೆಂದರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳಿ ಎಂದು. ಶತ್ರುಗಳು ನಿಜವಾಗಿಯೂ ಇರಬೇಕಿಲ್ಲ, ನೀವು ಶತ್ರುಗಳನ್ನು ಊಹಿಸಿಕೊಂಡರೂ ಸಾಕು. ಎಲ್ಲಿಯವರೆಗೆ ಜನರು ಹಗೆತನದ ವಾತಾವರಣದಲ್ಲಿರುತ್ತಾರೋ, ಅಲ್ಲಿಯವರೆಗೂ ಅವರು ಬಲಶಾಲಿಗಳೆಂದು ಭಾವಿಸಿಕೊಳ್ಳುತ್ತಾರೆ. ಅವರು ತಿರುಗಿ ಬೀಳುವಾಗ, ಬಲಶಾಲಿಗಳೆಂದೇ ತಿಳಿದುಕೊಂಡಿರುತ್ತಾರೆ. ನಮ್ಮ ಶಕ್ತಿಯೆಲ್ಲಾ ನಕಾರಾತ್ಮಕತೆಯಲ್ಲೇ ಪ್ರವಹಿಸುತ್ತದೆ.

ತಮ್ಮ ಮೇಲೆಯೇ ಸಿಟ್ಟು ತಿರುಗುವುದು ಖಿನ್ನತೆಯ ಲಕ್ಷಣ. ನೀವು ಯಾವಾಗ ಉದ್ರೇಕ ವ್ಯಕ್ತಪಡಿಸುತ್ತೀರೋ, ಅದೇ ಕೋಪವಾಗಿ ಕಾಣುತ್ತೆ. ಅದನ್ನು ತಡೆದಾಗ ಅದೇ ಖಿನ್ನತೆಯಾಗುತ್ತದೆ. ಇವೆರಡೂ ಸಹ ನಕಾರಾತ್ಮಕವಾದ ಒಂದೇ ಶಕ್ತಿ.

ಯಾವಾಗ ನಾವು ನಮ್ಮ ನಕಾರಾತ್ಮಕ ಭಾವನೆಗಳ ಮೇಲೆ ಕೇಂದ್ರೀಕರಿಸು ತ್ತೇವೆಯೋ, ಯಾವಾಗ ನಮ್ಮ ಪ್ರತ್ಯೇಕತೆಯ ಭಾವನೆಯನ್ನು ಪೋಷಿಸುತ್ತೇವೆಯೋ, ಯಾವಾಗ 'ನಾನು ಮತ್ತೊಬ್ಬರನ್ನು ಎದುರಿಸುವೆ' (me versus them) ಎಂಬ ಅನುಭವವನ್ನು ಸೃಷ್ಟಿಸಿಕೊಳ್ಳುತ್ತೇವೆಯೋ, ಆಗ ಅಹಂಕಾರವು ತಾನು ಹೆಚ್ಚು ಬಲಿಷ್ಠನೆಂದು ತಿಳಿದುಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚು ಜನ, ನಾವು ಹೊಡೆದಾಡುವ ಪರಿಸ್ಥಿತಿಯಲ್ಲಿದ್ದಾಗ, ಆ ಸನ್ನಿವೇಶವನ್ನು ಹಿತಕರವಾಗಿ ಅನುಭವಿಸುತ್ತಿರುತ್ತೇವೆ.

ಸಕಾರಾತ್ಮಕ, ಮೃದುವಾದ ಭಾವನೆಗಳು ನಮ್ಮನ್ನು ಖಂಡನೆಗಳಿಗೆ ಒಳಗಾಗುವಂತೆ ಮಾಡಿಬಿಡುತ್ತದೆ. ಪ್ರೀತಿ, ಸಂತೋಷ, ದಯೆ ಇವು ಮನದ ಬಹಳ ಇರಲ್ಲ ಪುನಃ ನೀವು ಒತ್ತಡವನ್ನು ಅನುಭವಿಸುತ್ತೀರಿ. ಹೀಗೇ ಒಂದಾದ ಮೇಲೆ ಮತ್ತೊಂದು. ಪ್ರತಿ ನಿಮಿಷವೂ ಸಹ ನೀವು ಭಾವನೆಗಳಿಂದ ಒದ್ದಾಡುತ್ತಿರುತ್ತೀರಿ. ನಿಮ್ಮ ಜೀವನದಲ್ಲಿ ಆಗ ನಿಮ್ಮ ಮನಸ್ಸಿನ ಸ್ಥಿತಿ ಕಾದ ಬಾಂಡಲೆಯಲ್ಲಿ ಹುರಿದ ಹಾಗೆ ಅನ್ನುತ್ತಾರಲ್ಲಾ ಹಾಗಾಗಿರುತ್ತೆ. ಎಷ್ಟು ಕಾಲದ ವರೆಗೆ ಅದನ್ನು ಸಹಿಸಿಕೊಳ್ಳುತ್ತೀರಿ ನೀವು?

ಅದೃಷ್ಟವಶಾತ್ ಭಾವನೆಗಳ ಎಲ್ಲಾ ಅನುಭವಗಳೂ ಕೆಟ್ಟವುಗಳೇನಲ್ಲ. ನಮ್ಮಲ್ಲಿ ಹೆಚ್ಚು ಜನಗಳಿಗೆ, ದಿವಸದಲ್ಲಿ ಕೆಲವು ಘಳಿಗೆಗಳು, ಶಾಂತವಾಗಿ, ಸಂತೋಷವಾಗಿ, ನಿಶ್ಚಲ ಮನಸ್ಸಿನಿಂದ ಧ್ಯಾನದಲ್ಲಿದ್ದಂತೆ ಇರುತ್ತದೆ.

ಪ್ರತಿನಿತ್ಯದ ಸರಳವಾದ (ಸಮಾಧಾನದ) ಸ್ಥಿತಿ ಇದಾಗಬಹುದು.

ನಿಮ್ಮ ಹೂದೋಟದಲ್ಲಿ ಚಹಾ ಸೇವನೆಯಲ್ಲಿರಬಹುದು.

ಸ್ನಾನ ಮಾಡುತ್ತಿರಬಹುದು, (ತುಂತುರು ನೀರಿನ ಸ್ನಾನ ಮಾಡುತ್ತಿರಬಹುದು)

ಸಂಗೀತವನ್ನು ಆಲಿಸುತ್ತಿರಬಹುದು.

ನಿಮ್ಮ ಮಕ್ಕಳೊಂದಿಗೆ ಆಟವಾಡುತ್ತಿರಬಹುದು. ಇಂತಹ ಸನ್ನಿವೇಶಗಳು ಪ್ರತಿದಿನ, ಪ್ರತಿಯೊಬ್ಬರಿಗೂ ಒದಗುತ್ತಿರಬಹುದು. ಆದರೆ ನಮ್ಮಲ್ಲಿ ಎಷ್ಟು ಜನ ಅದರಲ್ಲೇ ತಲ್ಲೀನರಾಗಿ ಆನಂದಿಸುತ್ತೇವೆ?

ಹೇಗಿದೆಯಪ್ಪಾ ಈ ದಿನ ಎಂದು ಯಾರಾದರೂ ಕೇಳಿದಾಗ, ನಾವು ಜ್ಞಾಪಿಸಿಕೊಳ್ಳುವುದು (ಏನು?) - ಕಾಫಿ ಚೆಲ್ಲಿದ್ದು, ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದು, ಪ್ರಾಜೆಕ್ಟ್ ಮುಗಿಯದೇ ಇದ್ದದ್ದು, ಇಂತಹವುಗಳನ್ನೇ.

ಅಪ್ಪಿತಪ್ಪಿಯಾದರೂ ನಾವೇಕೆ ಆ ನಮ್ಮ ಒಳ್ಳೆಯ ಅನುಭವಗಳನ್ನು, ಸಕಾರಾತ್ಮಕ ಭಾವನೆಗಳನ್ನು ನೆನಪಿಸಿಕೊಳ್ಳಬಾರದು?

ಇದನ್ನು ಪ್ರಯೋಗಿಸಲು ಪ್ರಯತ್ನಿಸಿ. ಪೇಯಿಂಟಿಂಗ್ ಕಲಿಯಿರಿ.

ಕ್ರೀಡೆಯನ್ನು ತೆಗೆದುಕೊಳ್ಳಿ.

ಒಂದು ಹವ್ಯಾಸವನ್ನು ರೂಢಿಸಿಕೊಳ್ಳಿರಿ.

ನರ್ತಿಸಲು ಕಲಿಯಿರಿ

ಇವುಗಳೆಲ್ಲಾ ಶಕ್ತಿಯ ಬೇರೆ ಬೇರೆ ದಾರಿಗಳು, ಯಾವ ರೀತಿ ಕೋಪವೂ ಒಂದು ಶಕ್ತಿಯೋ ಹಾಗೆ.

ಒಂದು ವ್ಯತ್ಯಾಸವೆಂದರೆ ಇವು ಸೃಜನಾತ್ಮಕ ದಾರಿಗಳು. ನಿಮ್ಮ ಜೀವನದ ಪಥವನ್ನು ಬದಲಿಸಿರಿ, ನಿಮ್ಮ ಸಾಧಾರಣ ಜೀವನಕ್ಕೆ ಸೃಜನಾತ್ಮಕ ಆಯಾಮವನ್ನು ಕೊಡಿ. ಈ ರೀತಿ ನಿಮ್ಮ ವಿನಾಶಾತ್ಮಕ ಶಕ್ತಿಯು ಸಕಾರಾತ್ಮಕ ಪ್ರತಿಫಲದೊಂದಿಗೆ ಸೃಜನಾತ್ಮಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

ಯಾವಾಗ ನೀವು ನಿಮ್ಮ ಸಕಾರಾತ್ಮಕ ಭಾವನೆಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸುತ್ತೀರೋ, ಆಗ ನಿಮ್ಮ ಜೀವನವು ತನಗೆ ತಾನೇ ಒಳ್ಳೆಯದಾಗಿ ಬದಲಾಯಿಸಲ್ಪಡುತ್ತದೆ. ನೀವು ಪ್ರೀತಿಯನ್ನು ಅನುಭವಿಸಿದಾಗ, ಪ್ರೀತಿಯನ್ನೇ ಕೊಡುತ್ತೀರಿ, ಪ್ರೀತಿಯನ್ನೇ ಪಡೆಯುತ್ತೀರಿ. ಇದೊಂದು ಸುಂದರವಾದ ಆವೃತ್ತಿ. ನೀವು ಇದನ್ನು ಅನುಭವಿಸಿದ ಹೊರತೂ, ಅದನ್ನು ನಂಬುವುದು ಅಸಾಧ್ಯ. ಆದರೆ ಇದು ನಿಜವಾಗಿಯೂ ಉಂಟಾಗುವಂಥದ್ದು.

ಮತ್ತೂ ತಿಳಿಯಿರಿ, ಈ ತರದ ಪ್ರವೃತ್ತಿಯೊಂದಿಗೇ ನೀವು ಹುಟ್ಟಬೇಕೆಂದಿಲ್ಲ. 'ಓಹ್! ಆ ಮನುಷ್ಯ ಬಹಳ ಅದೃಷ್ಟವಂತ, ಅವನು ಸದಾಕಾಲದಲ್ಲೂ ನಗು ಮುಖವನ್ನೇ ಹೊಂದಿ ಸುತ್ತಾಡುತ್ತಿರುತ್ತಾನೆ. ನಾನೊಬ್ಬನೇ ಇಷ್ಟೊಂದು ಒತ್ತಡಕ್ಕೆ ಸಿಕ್ಕಿರುವವನು', ಹೀಗೆಲ್ಲಾ ಹೇಳಬೇಡಿ.

ಸಕಾರಾತ್ಮಕವಾದ ಒಳ್ಳೆಯ ಪ್ರವೃತ್ತಿಯನ್ನು ನೀವು ಅಭಿವೃದ್ಧಿಪಡಿಸಿ ಕೊಳ್ಳಬಹುದು. ಯಾವಾಗ ನೀವು ಸಂತೋಷದಿಂದ ತುಂಬಿರುತ್ತೀರೋ ಅವಾಗ

ಕಷ್ಟ ಕಾರ್ಪಣ್ಯಗಳು ನಿಮ್ಮನ್ನು ನೋಡಿ ಭಯಪಡುತ್ತವೆ! ಕೋಪವು ನಿಮ್ಮನ್ನು ಮುಟ್ಟಲೂ ಆಗದು. ಯಾವಾಗ ನೀವು ಒಳಗೆ ಆನಂದದಲ್ಲಿರುವುದನ್ನು ರೂಢಿಸಿಕೊಳ್ಳುವಿರೋ ಆಗ ನೀವು ಧ್ಯಾನದಲ್ಲಿ ಯಾವ ಅಭಿವೃದ್ಧಿಯನ್ನು ಬೇಕಾದರೂ ಪಡೆಯಬಹುದು.

ನಿಮ್ಮ ಜೀವನವನ್ನು ಪ್ರೀತಿಯಿಂದ, ನಗುವಿನಿಂದ, ಕೃತಜ್ಞತೆಯಿಂದ ಪರಿವರ್ತಿಸಿಕೊಳ್ಳಬಹುದು.

ಜೀವನವನ್ನು ಉತ್ಸವವನ್ನಾಗಿಸಿಕೊಳ್ಳಿ.

ಆಗಮಾತ್ರ ಜೀವನವು ಧ್ಯಾನಮಯವಾಗುವುದು.

ಜನರು ನನ್ನನ್ನು ಕೇಳುವುದೇನೆಂದರೆ: ತಪಸ್ಸು ಎಂದರೇನು? ಧ್ಯಾನ ಮಾಡುವುದಕ್ಕೆ ತಪಸ್ಸು ಅವಶ್ಯಕವೇ?

ನಾನು ಹೇಳುತ್ತಿರುವುದು ತಪಸ್ಸೇ ಹೊರತು ಬೇರೆ ಏನೂ ಅಲ್ಲ! ನಿಮ್ಮ ಶರೀರವನ್ನೂ, ಆಲೋಚನೆಗಳನ್ನೂ ಹಾಗೂ ಭಾವನೆಗಳನ್ನು ಸಜ್ಜುಗೊಳಿಸುವುದು ತಪಸ್ಸಲ್ಲದೆ ಬೇರೆ ಏನು?

ತಪಸ್ಸು ಎಂದರೆ ಬೆಟ್ಟಗುಡ್ಡಗಳಲ್ಲಿದ್ದು ಎಲ್ಲಾ ತರಹದ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದೂ ಅಲ್ಲ ಹಾಗೂ ಎಲ್ಲಾ ತರಹದ ಧಾರ್ಮಿಕ ಕರ್ಮಗಳನ್ನು ನೆರವೇರಿಸುವುದೂ ಅಲ್ಲ!

ತಪಸ್ಸು ಎಂದರೆ ಆಹಾರವನ್ನು ಸೇವಿಸದೇ ಇರುವುದು, ಬಟ್ಟೆಗಳನ್ನು ಧರಿಸದಿರುವುದೂ ಅಥವಾ ಕತ್ತಲೆಯ ಗುಹೆಯಲ್ಲಿ ವಾಸಿಸುವುದು ಅಥವಾ ಶರೀರವನ್ನು ಯಾವ ತರಹದಲ್ಲಾದರೂ ಹಿಂಸಿಸುವುದೂ ಅಲ್ಲ. ಯಾವಾಗ ನೀವು ನಮ್ಮ ಶರೀರಕ್ಕೆ [~~(ಅಗತ್ಯವಾದದ್ದನ್ನು)~~] ಅದಕ್ಕೆ ಒದಗಿಸದೇ ತಪ್ಪಿಸಿದಲ್ಲಿ [~~(ಕಿತ್ತುಕೊಂಡಲ್ಲಿ)~~] ಧ್ಯಾನ ಮಾಡುವುದಕ್ಕಿಂತ ತಪ್ಪಿಸುವುದರಲ್ಲಿಯೇ ಹೆಚ್ಚು ಕೇಂದ್ರೀಕರಿಸುವಿಕೆಯ ಅಪಾಯವಿದೆ. ನಾನು ನಿಮಗೆ 24 ಗಂಟೆಗಳವರೆಗೆ ಆಹಾರವನ್ನು ಒದಗಿಸದಿದ್ದರೆ, ನೀವು ಆಹಾರವನ್ನು ತಿನ್ನುವುದನ್ನು ನಿಲ್ಲಿಸಬಹುದು. ಆದರೆ, ಆಹಾರವನ್ನೇ ಧ್ಯಾನ ಮಾಡಲು ಪ್ರಾರಂಭಿಸುತ್ತೀರಿ! ನೀವು ಆಹಾರದ ವಿಚಾರವಾಗಿ ಯೋಚಿಸಬಲ್ಲಿರೇ ಹೊರತು ಬೇರಾವುದನ್ನೂ ಅಲ್ಲ. ನಿಜವಾದ ಉಪವಾಸವೆಂದರೆ ಆಹಾರವನ್ನು ಸಂಪೂರ್ಣವಾಗಿ ಮರೆಯುವುದೇ ಆಗಿದೆಯೇ ಹೊರತು ನೀನು ತಿನ್ನದೇ ಇರುವ ಆಹಾರವನ್ನು ಕುರಿತು ಧ್ಯಾನ ಮಾಡುವುದಲ್ಲ. ಆದರೆ ಹೆಚ್ಚು ಜನರಿಗೆ ಇದರ ವ್ಯತ್ಯಾಸವೇ ಕೆಲವೇ ಶಬ್ದಗಳಿಂದ ತನ್ನಲ್ಲಿ ಈ ಕೆಟ್ಟ ಕೋಪವು ತಲೆ ಎತ್ತಿದ್ದನ್ನು ತಿಳಿದು ಏನೂ ಮಾತನಾಡದೆ (ಉತ್ತರಿಸದೆ) ಆ ಯೋಗಿಯು ಆ ಜಾಗದಿಂದ ಮೌನವಾಗಿ ಹೊರಟು ಹೋದನು. ಆಗ ಯಾರೋ ಒಬ್ಬರು ಯೋಗಿ ಇದ್ದಲ್ಲಿಗೆ ಓಡಿಹೋಗಿ ಕ್ಷಮೆಯಾಚಿಸಿ, ಹಿಂದಿರುಗಲು ಬೇಡಿಕೊಂಡರು ಆಗ, ಆ ಯೋಗಿಯು ಹೇಳಿದ್ದೇನೆಂದರೆ, "ನನ್ನ ತಪಸ್ಸು ಉತ್ತಮವಾಗಿ ಇನ್ನೂ ಪೂರ್ಣವಾಗಿಲ್ಲ! ನಾನಿನ್ನೂ (ಹೊಸದಾಗಿ) ಪ್ರಾರಂಭಿಸುವವನು, ನನ್ನ ಕೆಲಸವನ್ನು (ಕಲಿಕೆಯನ್ನು) ಪ್ರಾರಂಭಿಸಲು ನಾನು ಹೊರಡಲೇಬೇಕು ನಾನು ನಿಜವಾಗಿಯೂ ಪರಿಪೂರ್ಣನಾದಾಗ ಹಿಂದಿರುಗಿ ಬರುತ್ತೇನೆ.''

ಅತಿ ಕಠಿಣವಾದ ತಪಸ್ಸು ಎಂದರೆ ತನ್ನನ್ನು ತಾನು ಸರಿಯಾಗಿ ಅರ್ಥ ಮಾಡಿಕೊಂಡು ತನ್ನನ್ನೇ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುವುದು.

ನಿಮ್ಮ ಶರೀರವನ್ನು ಆಲೋಚನೆಗಳನ್ನೂ ಭಾವನೆಗಳನ್ನೂ ಶುದ್ಧಿಗೊಳಿಸುವುದಕ್ಕಿಂತ ಹೆಚ್ಚಿನ ತಪಸ್ಸು ಮತ್ತೊಂದಿಲ್ಲ. ಈ ತಪಸ್ಸನ್ನು ಈಗಲೇ ಎಲ್ಲಿದ್ದರಲ್ಲೇ ಮಾಡಬಹುದು. ಇದೆಲ್ಲವೂ ಧ್ಯಾನಕ್ಕೆ ಸರಿಯಾದ ತಳಹದಿಯನ್ನು ಹಾಕಲು, ಭೂಮಿಯನ್ನು ತಯಾರು ಮಾಡುವ ಕೆಲಸದ ಬಗ್ಗೆಯೇ.

ಅರಿವೇ ಬೀಗದ ಕೈ

ನಿಮ್ಮ ಶರೀರವನ್ನು ಗಮನಿಸಿ, ಆಲೋಚನೆಗಳನ್ನು ಗಮನಿಸಿ, ಭಾವನೆಗಳನ್ನು ಗಮನಿಸಿ ಎಂದು ನಿಮಗೆ ನಾನು ತಿಳಿಸಿದೆ.

ಬೇರೆಯ ರೀತಿಯಲ್ಲಿ ಹೇಳುವುದಾದರೆ - ಅರಿವುಳ್ಳವರಾಗಿರಿ.

ಧ್ಯಾನಕ್ಕೆ ಅರಿವೇ ತಳಹದಿ, ಕೇಂದ್ರ ಮತ್ತು ಗುರಿ. ಅರಿವು ಎನ್ನುವುದು ನಿಮ್ಮ (Key-word) ಕೀವರ್ಡ್. ಯಾವ ತಂತ್ರವೇ ಆಗಲಿ, ಯಾವ ಮತವೇ ಆಗಲಿ, ಯಾವ ಧರ್ಮವೇ ಆಗಿರಲಿ ಪರವಾಗಿಲ್ಲ - ಬೇಕಾಗಿರುವುದು ಅರಿವಿನ ಬಗ್ಗೆ ಕೇಂದ್ರೀಕರಿಸುವುದು. ಈ ಪುಸ್ತಕದಲ್ಲಿರುವ ಪ್ರತಿಯೊಂದು ತಂತ್ರದಲ್ಲೂ ಅಂತರ್ಗತವಾಗಿ ಸಾಮಾನ್ಯವಾಗಿ ಇದು ಅಡಕವಾಗಿದೆ.

ಯಾವಾಗ ನೀವು ಏನನ್ನಾದರೂ ಗಮನಿಸಲು ಪ್ರಾರಂಭಿಸಿದಾಗ, ನೀವು ಸಾಕ್ಷಿಯಾಗುತ್ತೀರಿ, ನೀವು ಒಬ್ಬ ಹೊರಗಿನವರಾಗುತ್ತೀರಿ. ನೀವು ಲಕ್ಷಿಸು ತ್ತಿರುವುದರೊಂದಿಗೆ ಏಕೀಭವಿಸುವುದನ್ನು ಬಿಟ್ಟುಬಿಡುತ್ತೀರಿ. ಹೀಗೆ ನಂತರ, ಅದು ನಿಮ್ಮಿಂದ ಹೊರಗಿರುವ ವಸ್ತುವೆಂದು ತಿಳಿಯತೊಡಗುತ್ತೀರಿ.

ನಿಮ್ಮ ಶರೀರ, ಮನಸ್ಸು, ಭಾವನೆಗಳನ್ನು ಅರಿತ ಕೂಡಲೇ ನೀವು ಅವುಗಳಿಂದ ಸ್ವತಂತ್ರರಾಗುತ್ತೀರಿ.

ನಿಮ್ಮ ಜ್ಞಾನವನ್ನೂ, ನಿಮ್ಮ ಪ್ರಜ್ಞೆಯನ್ನೂ ಜಾಗೃತಗೊಳಿಸಿ.

ನಿಮ್ಮ ಶರೀರದ ಕೃತ್ಯಗಳನ್ನು ನೀವು ಯಾರೋ ಹೊರಗಿನವರು ಎನ್ನುವಂತೆ ಅವಲೋಕಿಸಿರಿ, ಆಗ ನೀವು ನಿಮ್ಮ ಶರೀರ ಭಾವನೆಯನ್ನು ಬಿಟ್ಟುಬಿಡುತ್ತೀರಿ.

ನಿಮ್ಮಲ್ಲಿ ಓಡುತ್ತಿರುವ ಹುಚ್ಚು ಆಲೋಚನೆಗಳನ್ನು ಗಮನಿಸಿರಿ - ಆಗ ನೀವು ನಿಮ್ಮ ಮನಸ್ಸಿನ ಜೊತೆಗಿನ ತಾದಾತ್ಮ್ಯತೆಯನ್ನು ಬಿಟ್ಟು ಬಿಡುತ್ತೀರಿ.

ನಿಮ್ಮ ಚಂಚಲವಾದ, ಬದಲಾಯಿಸುತ್ತಿರುವ ಭಾವನೆಗಳನ್ನು ಲಕ್ಷಿಸಿರಿ - ಆಗ ನೀವು ನಿಮ್ಮ ಭಾವನೆಗಳು ಅಲ್ಲವೆಂದು ಅರ್ಥ ಮಾಡಿಕೊಳ್ಳುತ್ತೀರಿ. ಸುಮ್ಮನೆ ಆಳವಾಗಿ ಅರಿಯುವುದರಿಂದಲೇ ನೀವು ಸ್ವತಂತ್ರರಾಗಿ ಬಿಡುತ್ತೀರಿ.

'ಜೀವನದಲ್ಲಿ ಧ್ಯಾನ' ದಿಂದ 'ಧ್ಯಾನದಲ್ಲಿ ಜೀವನ'ದೆಡೆಗೆ

ನೀವು ಈಗಿನ್ನೂ ಪ್ರಾರಂಭದ ಸ್ಥಿತಿಯಲ್ಲಿಯೇ ಇದ್ದೀರಿ. ಇನ್ನೂ ಒಳಹೊಕ್ಕು ಪರೀಕ್ಷಿಸುವುದರಲ್ಲಿಯೇ ಇದ್ದೀರಿ.

ಅದಕ್ಕಾಗಿಯೇ, ನೀವು ಧ್ಯಾನವನ್ನು ನನ್ನ ಜೀವನ ಶೈಲಿಯಲ್ಲಿ ಹೇಗೆ

ಕ್ರಮೇಣವಾಗಿ ನೀವು ಹೊಸ ಹೊಸ ತಂತ್ರಗಳನ್ನು ಬೆನ್ನಟ್ಟಿಕೊಂಡು ಹೋಗುವುದನ್ನು ನಿಲ್ಲಿಸಿಬಿಡುತ್ತೀರಿ. ಒಂದು ಅಥವಾ ಕೆಲವು ತಂತ್ರಗಳು ನಿಮಗೆ ಸರಿಹೊಂದುವುದಾಗಿ ಅನ್ನಿಸಬಹುದು, ಅವುಗಳನ್ನೇ ಅಭ್ಯಾಸಿಸಲು ನಿರ್ಧರಿಸಿ ಕೊಳ್ಳಿರಿ. ಈಗಲಾದರೂ ಈ ತಂತ್ರಗಳು ಇನ್ನೂ ಹೊಸದು ಮತ್ತು ನಿಮ್ಮನ್ನು ಉತ್ತೇಜಿಸುವಂಥವುಗಳು. ನಿಮ್ಮ ಮನಸ್ಸಿಗೆ ಇದನ್ನೂ ಪ್ರಯತ್ನಿಸೋಣ, ಅದನ್ನೂ ಪ್ರಯತ್ನಿಸೋಣ ಅನಿಸುತ್ತಿರುತ್ತದೆ. ಅದೊಂದು ತರಹ ಕರಿದ ತಿಂಡಿಗಳ ಅಂಗಡಿಗೆ ಹೋದರೆ, ಅಲ್ಲಿನ ನಾನಾ ತರಹದ ತಿಂಡಿಗಳಲ್ಲಿ ಯಾವುದನ್ನು ನಿಜವಾಗಿಯೂ ತಿನ್ನಬೇಕು ಎಂಬುದನ್ನು ನಿರ್ಧರಿಸಲು ಆಗದಿದ್ದಂತೆ!

ಆದ್ದರಿಂದ ಯಾವ ನಿರ್ಬಂಧನೆಗೂ ಒಳಗಾಗಬೇಡಿ! ನಿಮ್ಮ ಮನಸ್ಸು ಯಾವುದನ್ನು ಪ್ರಯತ್ನಿಸೋಣವೆಂದು ಹೇಳುತ್ತದೆಯೋ ಅದನ್ನೇ ಮಾಡಿ. ಮತ್ತು ನೀವು ಯಾವುದನ್ನು ಪ್ರಯತ್ನಿಸುತ್ತೀರೋ ಅದನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿರಿ. ನಿಮ್ಮ ಪೂರ್ಣ ಶಕ್ತಿಯನ್ನೂ, ಸಾಮರ್ಥ್ಯವನ್ನೂ ಉಪಯೋಗಿಸಿ ಪ್ರಯತ್ನಿಸಿರಿ. ಒಂದೊಂದು ತಂತ್ರವನ್ನೂ, ಅದೊಂದೇ ನಿಮಗೆ ದಕ್ಕಿರುವುದು ಎಂಬಂತೆ ಪ್ರಯತ್ನಿಸಿರಿ. ದುರಾಸೆಯನ್ನು ಹೊಂದಬೇಡಿ, ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಹಾಗೆ ಮಾಡದಿದ್ದರೆ ನೀವು ಸುಮ್ಮನೆ ಧ್ಯಾನದ ವಿಷಯವಾಗಿ ಚಪಲವನ್ನು ಹೊಂದಿದವರಾಗುವಿರಿ, ಧ್ಯಾನದ ಸಾರಭೂತವಾದ ನಿಜವಾದ ಅನುಭವವನ್ನು ಹೊಂದಲಾರಿರಿ.

ಕೇವಲ ಒಂದೇ ಒಂದು ಅನುಭವ ಸಾಕು!

ಆನಂದದ ಕೇವಲ ಒಂದು ಕ್ಷಣಿಕ ದರ್ಶನ ನಿಮಗಾದರೆ ಸಾಕು, ನೀವು ಧ್ಯಾನವನ್ನು ಸಂಪೂರ್ಣವಾಗಿ ಪ್ರೀತಿಸತೊಡಗುತ್ತೀರಿ. ಆಗ ನೀವು ಎಷ್ಟು ಗಂಟೆಗಳ ಕಾಲ ಧ್ಯಾನ ಮಾಡಬೇಕೆಂಬುದಾಗಿ ಪ್ರಶ್ನಿಸುವುದೇ ಇಲ್ಲ! ನೀವು ಬೆಳಗಾಗಿ ಏಳುತ್ತಿದ್ದಂತೆಯೇ ನಿಮ್ಮ ಮೊದಲನೆಯ ಆಲೋಚನೆ ಧ್ಯಾನದ್ದೇ ಆಗಿರುತ್ತೆ, ನೀವು ಸ್ನಾನ ಮಾಡುವಾಗ, ಉಡುಪು ಹಾಕಿಕೊಳ್ಳುವಾಗ, ಊಟ ಮಾಡುವಾಗ ಪ್ರತಿಯೊಂದನ್ನೂ ಮನಃಪೂರ್ವಕವಾಗಿ ತೃಪ್ತಿಯಿಂದ ಮಾಡುತ್ತಾ

ಒಂದು ಎಚ್ಚರಿಕೆಯ ಮಾತು:

ನೀವು ಮೊದಲು ಧ್ಯಾನವನ್ನು ಮಾಡಲು ಪ್ರಾರಂಭಿಸಿದಾಗ, ನಿಮ್ಮ ಶರೀರದಲ್ಲಿ ಮತ್ತು ಮಾನಸಿಕ ಸ್ಥಿತಿಯಲ್ಲಿ ಅಸಹಜವಾದ ಬದಲಾವಣೆಗಳನ್ನು ಕಾಣುವಿರಿ. ಅನಿರೀಕ್ಷಿತವಾದುದಕ್ಕೆ ಸಿದ್ಧವಾಗಿರಿ. ಧ್ಯಾನವೆಂಬುದು ಶುದ್ಧೀಕರಿಸುವ ಒಂದು ಪ್ರಕ್ರಿಯೆ. ಜೀವನ ಪರ್ಯಂತ ಶೇಖರಿಸಲ್ಪಟ್ಟ ಅಡೆತಡೆಗಳನ್ನು ಹೊರ ಹಾಕುವಿರಿ, ಆಗ ನಿಮಗೆ ಮೊದಲು ಗೊತ್ತಿಲ್ಲದ ಚೈತನ್ಯವನ್ನು ನಿಮ್ಮ ಶರೀರದಲ್ಲಿ ಪ್ರವಹಿಸುತ್ತೀರಿ. ನೀವು ಕುಣಿದಾಡುತ್ತೀರಿ, ಗರಗರನೆ ತಿರುಗುತ್ತೀರಿ, ಕಿರಿಚುತ್ತೀರಿ, ಬಹಳ ದಿವಸಗಳಿಂದ ನೀವು ಮಾಡದಿರುವ ಇಂಥವುಗಳನ್ನು ಮಾಡುತ್ತೀರಿ! ಇವನ್ನೆಲ್ಲಾ ಅರಗಿಸಿಕೊಳ್ಳಲು ಕಾಲಾವಕಾಶ ಬೇಕು.

ಪ್ರಾರಂಭದಲ್ಲಿ ನಿಮ್ಮ ಶರೀರದಲ್ಲಿ ಶಾಖ ಉತ್ಪತ್ತಿಯಾಗುವುದನ್ನು, ತಲೆನೋವು ಬರುವುದನ್ನು, ಕೈ ಮತ್ತು ಕಾಲು ಬೆರಳುಗಳಲ್ಲಿ ಜೋಮು ಬಂದ ತರಹ ಆಗುವುದನ್ನು ಅನುಭವಿಸುತ್ತೀರಿ. ಇವೆಲ್ಲಾ ಆಗುವುದು ಇದ್ದಕ್ಕಿದ್ದಂತೆ ಚೈತನ್ಯವು ತುಂಬಿ ಹರಿಯುವುದರಿಂದ. ನಿಮ್ಮಲ್ಲಿ ಕೆಲವರು ಯಾತನೆಯನ್ನೂ, ನಿದ್ರಾರಹಿತ ಸ್ಥಿತಿಯನ್ನೂ, ಖಿನ್ನತೆಯನ್ನೂ ಸಹ ಅನುಭವಿಸುತ್ತೀರಿ. ಇವು ತಾತ್ಕಾಲಿಕ ಮಾತ್ರ. ಧ್ಯಾನವನ್ನು ಮುಂದುವರಿಸಿದರೆ ಅವುಗಳೆಲ್ಲಾ ಮಾಯವಾಗುತ್ತವೆ.

ನೀವು ತೀವ್ರವಾದ ಯಾವುದಾದರೂ ದೇಹದ ತೊಂದರೆಯನ್ನು ಅನುಭವಿಸು ತ್ತಿದ್ದರೆ ಅಥವಾ ಯಾವುದಾದರೂ ತಂತ್ರವು ನಿಮಗೆ ಏನಾದರೂ ತೊಂದರೆಯನ್ನುಂಟು ಮಾಡಿದರೆ, ನಿಮ್ಮ ವೈದ್ಯರ ಸಲಹೆ ಪಡೆಯಿರಿ ಅಥವಾ ಆ ತಂತ್ರವನ್ನು ಬಿಟ್ಟುಬಿಡಿ.

ಇವುಗಳನ್ನೆಲ್ಲಾ ಕೇಳಿ ಆತಂಕಗೊಂಡು ತಂತ್ರಗಳನ್ನು ಅಭ್ಯಾಸ ಮಾಡದೇ ಇರಬೇಡಿ!

ಸುಮ್ಮನೆ ಮುಂದುವರಿಯಿರಿ ಮತ್ತು ನಿಮಗೆ ನೀವೇ ಧ್ಯಾನದಲ್ಲಿ ಮುಳುಗಿಬಿಡಿ.

ನಿಮ್ಮ ಕಣ್ಣೆದುರಿಗೇ ನಿಮ್ಮ ಜೀವನದ ಪರಿವರ್ತನೆಯನ್ನು ಕಾಣುವಿರಿ.

ಏತಕ್ಕಾಗಿ ಸ್ವಾತಂತ್ರ್ಯ: ನಮಗೆ ಸರಿ ಎನಿಸಿದ ರೀತಿ ಏನನ್ನಾದರೂ ಮಾಡುವುದಕ್ಕೆ, ಹೊಂದುವುದಕ್ಕೆ ಮತ್ತು ನಮಗೆ ಬೇಕಾದ ಹಾಗೆ ಬದುಕುವುದಕ್ಕೆ ನಾವು ಸ್ವಾತಂತ್ರ್ಯವನ್ನು ಆಶಿಸುತ್ತೇವೆ.

ಯಾವುದರಿಂದ ಸ್ವಾತಂತ್ರ್ಯ: ನಾವು ಭಯಪಡುವಂತಹ ಮತ್ತು ದ್ವೇಷಿಸುವಂತಹ ಎಲ್ಲವುಗಳಿಂದಲೂ ಅಂದರೆ ಖಾಯಿಲೆ, ಚಿಂತೆ, ಕೋಪ, ಒತ್ತಡ, ಕೀಳರಿಮೆ, ಯಾತನೆ ಇವುಗಳಿಂದ ಸ್ವಾತಂತ್ರ್ಯವನ್ನು ಬಯಸುತ್ತೇವೆ.

ನಾವು ಮಾಡುವ ಪ್ರತಿಯೊಂದು ಕೆಲಸವೂ ಸಹ ಈ ಎರಡು ಉದ್ದೇಶಗಳನ್ನು ಹೊಂದಿಯೇ ನಡೆಯುತ್ತಿರುತ್ತವೆ ಅಂದರೆ “ಏತಕ್ಕಾಗಿ ಮತ್ತು ಯಾವುದರಿಂದ ಸ್ವಾತಂತ್ರ್ಯ.” ಒಳ್ಳೆಯದು ಎಂದು ತಿಳಿಯಬೇಕು ಎನಿಸುವುದು. ಕೆಟ್ಟದ್ದು ಎಂಬ ಭಯದಿಂದ ಬೇಡವೆನಿಸುವುದು.

ನಮ್ಮ ಜೀವನವೆಲ್ಲಾ ಆಸೆ ಮತ್ತು ಭಯ ಎಂಬ ಈ ಎರಡು ಲಗಾಮುಗಳಿಂದ ನಿಯಂತ್ರಿಸಲ್ಪಟ್ಟಿದೆ. ನೀವು ಈ ಎರಡು ಹಗ್ಗಗಳಿಂದ ನಿಯಂತ್ರಿಸಲ್ಪಟ್ಟಾಗ ನೀವು ಉತ್ಕಟವಾಗಿ ಆಶಿಸುತ್ತಿರುವ ಸ್ವಾತಂತ್ರ್ಯ ಹೇಗೆ ಸಿಕ್ಕ ಹಾಗಾಯ್ತು?

ಕೆಲವು ದಿವಸಗಳ ಹಿಂದೆ ಭಕ್ತರಲ್ಲಿ ಯಾರೋ ಒಬ್ಬ ಕಲಾವಿದ ತಾನು ಧ್ಯಾನವನ್ನು ಏಕೆ ದ್ವೇಷಿಸುತ್ತಿದ್ದೆ ಅನ್ನುವುದನ್ನು ಹೇಳಿದ.

ಸ್ವಾಮೀಜಿ ಈ ಶಿಸ್ತು ನಿಯಮಗಳನ್ನು ನಾನು ದ್ವೇಷಿಸುತ್ತೇನೆ. ನಾನು ನನ್ನ ಜೀವನವನ್ನು ನನಗೆ ಹೇಗೆ ಬೇಕೋ ಹಾಗೆ ಸ್ವತಂತ್ರವಾಗಿ ನಡೆಸಬೇಕು. ನೋಡಿ, ನಾನು ಬೆಳಿಗ್ಗೆ 10 ಗಂಟೆಗೆ ಏಳ್ತೇನೆ, ಮೊದಲು ಕಾಫಿ ಕುಡಿಯುತ್ತೇನೆ, ಆನಂತರ ನನಗೆ ಬೇಕಾದಾಗ ನಾನು ಈಜಲು ಹೋಗುತ್ತೇನೆ....

ತನ್ನ ದಿನಚರಿಯನ್ನು ಪೂರ್ತಿ ಹೇಳಿದ.

ಆಗ ನಾನು ಅವನನ್ನು ಕೇಳಿದೆ - ಯಾರಾದರೂ ನಿನ್ನನ್ನು ಬೆಳಿಗ್ಗೆ 6 ಗಂಟೆಗೇ ಎಬ್ಬಿಸಿದರೆ ಏನಾಗುತ್ತೆ? ಅಥವಾ ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಕಾಫಿ ಹಾಸಿಗೆಗೇ ಬರದಿದ್ದರೆ ಏನು?

ಜನರು ಎಲ್ಲಾ ತರಹದ ಚಮತ್ಕಾರ ಅಥವಾ ಪವಾಡಗಳಿಗೆ ಸಿದ್ಧರಾಗಿದ್ದಾರೆ, ಅಂದರೆ ತಮ್ಮ ಪ್ರೀತಿ ಪಾತ್ರರಾದ ದೇವತೆಗಳ ದರ್ಶನ ಹೊಂದಲು, ಮತ್ತು ಇನ್ನೂ ಯಾವ ಯಾವುದೋ ತರಹದ್ದಕ್ಕೆ. ಆದರೆ ಅವರು ಈ ಪ್ರೀತಿಯಿಂದ ಆಗುವ ಪವಾಡವನ್ನು ತಿಳಿಯಲು ತಯಾರಿಲ್ಲ.

ಧ್ಯಾನದಲ್ಲಿ ಮುಳುಗಿದಾಗ ನಿಮ್ಮಲ್ಲಿ ಆ ಪ್ರೀತಿ ಎಂಬುವುದು ಎಷ್ಟು ಉತ್ಪತ್ತಿಯಾಗಿ, ಹೇಗೆ ತುಂಬಿ, ತುಳುಕುತ್ತದೆ ಎಂಬುದನ್ನು ತಿಳಿದು ಆಶ್ಚರ್ಯಚಕಿತರಾಗುತ್ತೀರಿ. ಧ್ಯಾನದ ಮೂಲಕ ನೀವು ಒಂದು ತರಹ ಜಾಗ್ರತಾವಸ್ಥೆಯನ್ನು ಅನುಭವಿಸುತ್ತೀರಿ ಮತ್ತು ಹಿಂದেন্দೂ ಅನುಭವಿಸದೇ ಇರುವಂತಹದ್ದನ್ನು ನಿಮ್ಮ ಅಸ್ತಿತ್ವದ ಯಾವುದೋ ಒಂದು ಮಟ್ಟದಲ್ಲಿ ಅನುಭವಿಸಲು ತೊಡಗುತ್ತೀರಿ. ನೀವು ಆ ಆನಂದದ ಅನುಭವವನ್ನು ಸಂಧಿಸಿದ ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳಲು ಇಚ್ಛೆಪಡುತ್ತೀರಿ! ಇದೇ ಸಂತೋಷವು ನಿಮ್ಮಿಂದ ಪ್ರೀತಿಯಾಗಿ ತುಂಬಿ ಹರಿಯತೊಡಗುತ್ತದೆ.

ಸ್ವಾತಂತ್ರ್ಯದಂತೆಯೇ, ಈ ಪ್ರೀತಿಯೂ ಸಹ, ನೀವು ಅನುಭವಿಸಿರುವ ಬೇರೆ ಪ್ರೀತಿಗಳಿಗಿಂತ ಭಿನ್ನವಾದುದು.

ನಮ್ಮ ಜೀವನದಲ್ಲಿ ತುಂಬಿರುವುದು ಸ್ವಾರ್ಥದಿಂದ ಕೂಡಿದ, ಕೊಟ್ಟು, ತೆಗೆದುಕೊಳ್ಳುವಂತಹ ಸಣ್ಣತನದ ಪ್ರೀತಿಗಳೇ ಆಗಿವೆ. ಹಾಗೂ ನಮ್ಮ ಜೀವನದಲ್ಲಿ ಯಾವುದೋ ಕಾರಣಕ್ಕಾಗಿ ಮಾತ್ರ ಪ್ರೀತಿಸಿ ಮತ್ತು ಪ್ರೀತಿಸಲ್ಪಡುತ್ತಿದ್ದೇವೆ. ನಿಮಗೆ ತಿಳಿದೋ ಅಥವಾ ತಿಳಿಯದೆಯೋ, ನೀವು ಪ್ರೀತಿಸುವುದು ಯಾವುದೋ ಕಾರಣಕ್ಕಾಗಿ. ನಿಮಗೆ ಬಹಳ ಆಪ್ತರಾದ ಸಂಬಂಧಿಗಳೊಡನೆಯೂ ಸಹ, ಗಂಡ, ಹೆಂಡಿರ ಸಂಬಂಧದಲ್ಲಿಯೂ ಸಹ, ತಂದೆ ತಾಯಿಗಳು, ಮಕ್ಕಳು ಇವರೊಂದಿಗೂ ಸಹ ಗುಪ್ತವಾದ ಯಾವುದೋ ಕಾರಣಗಳಿಂದಲೇ ಪ್ರೀತಿಸುತ್ತೀರಿ. ನಮ್ಮ ಪ್ರೀತಿ ಎಲ್ಲವೂ ಅಸೂಯೆ ಮತ್ತು ವಶಪಡಿಸಿಕೊಳ್ಳಲು ಅಥವಾ ಸೌಮ್ಯತ್ವವನ್ನು ಹೊಂದುವ ಕಾರಣದಿಂದಾಗಿ, ಕಳಂಕಪೂರಿತವಾಗಿ ಹಾಳಾಗಿ ಹೋಗಿದೆ.

ಖಾಯಿಲೆಯಿಂದಿರಬಹುದು. ಆದರೆ ಸುಖವು ಒಂದೇ ತರಹ ಇರುವುದು. ಚಳಿ, ಸೆಕೆ, ಮಳೆ ಬೀಳುವಿಕೆ, ಮಂಜು ಬೀಳುವಿಕೆ ಏನಿದ್ದರೂ ಸಂತೋಷವು ಒಂದೇ ತರಹ ಇರುತ್ತದೆ. ನಿಮ್ಮದೇ ಆಗಿರಲಿ ಅಥವಾ ಹೊರಗಿನ ಪರಿಸ್ಥಿತಿಗಳೇ ಆಗಿರಲಿ, ಸಂತೋಷದಲ್ಲಿ ವ್ಯತ್ಯಾಸವಿರುವುದಿಲ್ಲ. ಯಾವಾಗ ನೀವು ನಿರಂತರ (ಎಂದೂ ಮುಗಿಯದ) ಸಂತೋಷವನ್ನು ಅನುಭವಿಸುತ್ತಿದ್ದಾಗ ಹೊರಗಿನ ಪರಿಸ್ಥಿತಿಗಳು ನಿಮ್ಮ ಸಂತೋಷವನ್ನು ಬದಲಿಸಲು ಆಗದೇ ಇದ್ದಾಗ, ಅದರ ಅರ್ಥ ನೀವು ಆಳವಾಗಿ ನಿಮ್ಮೊಳಗೇ ಹೋಗುತ್ತಿದ್ದೀರಿ ಎಂದು.

ಪ್ರಜ್ಞೆಯ ಜಾಗೃತಗೊಳ್ಳುವಿಕೆ

ಜೀವನವು ಸತತವಾಗಿ ಬದಲಾಯಿಸುತ್ತಲೇ ಇದೆ. ಪ್ರತಿ ಕ್ಷಣದಲ್ಲೂ ಪ್ರತಿಸ್ಪಂದಿಸುವ ಸಾಮರ್ಥ್ಯ ಉಳ್ಳದ್ದಾಗಿಯೂ ಮತ್ತು ಜೀವನದಲ್ಲಿನ ಪ್ರತಿಭಟನೆಗಳಿಗೆ ಎಚ್ಚೆತ್ತಿರುವುದಾಗಿಯೂ ಯಾವುದಿದೆಯೋ ಅದೇ ಪ್ರಜ್ಞೆ. ಪ್ರಜ್ಞೆ ಎಂದರೆ, ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದಿರಬೇಕು. ನಿಮ್ಮ ಉತ್ತರಗಳು ಸಮಯಕ್ಕೆ ತಕ್ಕಂತೆ ಬದಲಾಯಿಸಿ ನಿರೂಪಿಸುವಂತಿರಬೇಕು, ನಿಮ್ಮಲ್ಲಿ ನಿಮಗೆ ವಿಶ್ವಾಸ ಇಲ್ಲದಿದ್ದರೆ, ಸಮಾಜದ ಕಾನೂನಿನ, ಧರ್ಮಗಳ ನೀತಿ ನಿಯಮಗಳ ಆಧಾರದ ಮೇಲೆ ಇರಬೇಕು. ಪ್ರಜ್ಞಾವಂತನಾದವನು ಯಾವುದೇ ಗ್ರಂಥಗಳ ಆಧಾರದಲ್ಲಿ ಜೀವಿಸುವುದಿಲ್ಲ, ಅವನಿಗೆ ಅಂತಹದು ಯಾವುದೂ ಬೇಕಿಲ್ಲ. ಅವನು ತನ್ನನ್ನೇ ತಾನು ಅವಲಂಬಿಸುವವನು, ತನ್ನ ಅಂತರ್ವಾಣಿಯೇ ಅವನಿಗೆ ಮಾರ್ಗದರ್ಶಿ. ನಿನ್ನ ಜವಾಬ್ದಾರಿಯನ್ನು ನೀನೇ ತೆಗೆದುಕೊಳ್ಳುವುದೇ ಪ್ರಜ್ಞೆ. ನಾವೆಲ್ಲರೂ ಪ್ರಜ್ಞಾವಂತರಾಗಿಯೇ ಜನಿಸಿದ್ದೇವೆ - ಆದರೆ ಸಮಾಜವು ನಮಗಿಂತ ಜಾಣತನ ಉಳ್ಳದ್ದು! ನಾವು ಚಿಕ್ಕವರಾಗಿದ್ದಂದಿನಿಂದಲೂ, ತಯಾರಾಗಿಲ್ಲದಿರುವಾಗಲೇ, ಸಮಾಜವು ನೀತಿ ನಿಯಮಗಳನ್ನು ಸಿದ್ಧಪಡಿಸಿಬಿಡುತ್ತೆ. ನಮ್ಮ ಪ್ರಜ್ಞೆಯ ಸುತ್ತಲೂ ಗೋಡೆಗಳನ್ನು ಕಟ್ಟಲು ಯತ್ನಿಸುತ್ತದೆ. ಅದು ನಾವು ಸಹಜವಾಗಿ ನಡೆದುಕೊಳ್ಳದಂತೆ ತಡೆದುಬಿಡುತ್ತದೆ.

ಧ್ಯಾನದಿಂದ, ನಾವು ಒಳಹೋಗುತ್ತೇವೆ. ನಾವು ನಮ್ಮ ಅಸ್ತಿತ್ವದಂತೆ ಜೀವಿಸಲು ಪ್ರಾರಂಭಿಸುತ್ತೇವೆ. ಸಮಗ್ರತೆಯನ್ನು ಅನುಭವಿಸುವವರಾಗುತ್ತೇವೆ. ನಾವು ವ್ಯಕ್ತಿ ವೈಶಿಷ್ಟ್ಯದತ್ತ ಸಾಗುತ್ತೇವೆ.

ನಿಮ್ಮ ವ್ಯಕ್ತಿತ್ವವು ಬದಲಾಯಿಸಬಹುದು, ಆದರೆ ವ್ಯಕ್ತಿ ವೈಶಿಷ್ಟ್ಯತೆಯು ಬದಲಾಗುವುದಿಲ್ಲ. ಪ್ರತಿ ವ್ಯಕ್ತಿಯೂ ಸರಿಸಾಟಿ ಇಲ್ಲದವನು (ಅನುಪಮನು). ಧ್ಯಾನದಿಂದ ನಿಮ್ಮ ವೈಶಿಷ್ಟ್ಯತೆಯನ್ನು ತಲುಪುವಿರಿ. ನೀವು ನಿಮ್ಮ ಅಂತರ್ವಾಣಿಯ ಸ್ಪಷ್ಟೋಕ್ತಿಯಂತೆ ಸಹಜವಾಗಿ ಆ ದಿಶೆಯಲ್ಲೇ ನಡೆಯುವಿರಿ, ಅದು ಅಂತಿಮವಾಗಿ ಪೂರ್ಣತೆಯನ್ನುಂಟುಮಾಡುತ್ತದೆ. ಇದೇ ಅಂತರ್ಜ್ಞಾನ ವು ಕೆಲಸ ಮಾಡುವಿಕೆ.

ನಿಮ್ಮ ದಾರಿಯಲ್ಲಿನ ಮುಳ್ಳುಗಳು

ಧ್ಯಾನದ ದಾರಿಯಲ್ಲಿ ಇರುವುದು ಒಂದೇ ಒಂದು ಪ್ರತಿಬಂಧಕ (ಅಡಚಣೆ)- ಅದೇ ಅಹಂಕಾರ. ಬೇರೆ ಯಾವ ತೊಡಕಿನ ವಿಚಾರಗಳು ಬಂದರೂ, ಯಾವ ಸಮಸ್ಯೆಗಳು ನಿಮಗೆ ಎದುರಾದರೂ, ಅವುಗಳೆಲ್ಲಾ ಅಹಂಕಾರದ ಬೇರೆಯ ರೂಪಗಳೇ.

ಅಹಂಕಾರವೆಂದರೇನು?

ಅಹಂಕಾರವೆಂದರೆ ನಿಮ್ಮ ಬಗ್ಗೆ ನೀವು ಹೊಂದಿರುವ ಭಾವನೆ, ನಿಮ್ಮ ಕಲ್ಪನೆಗಳ ಮತ್ತು ಅಭಿಪ್ರಾಯಗಳ ಮೊತ್ತ. ನಿಮ್ಮ ಕುರಿತು ನೀವು ಸಂಗ್ರಹಿಸಿರುವ ಅನಿಸಿಕೆಗಳು! ಇದು ಕಾಲ್ಪನಿಕವಾದದ್ದು. ಅಹಂಕಾರವು ನಿಜವಾಗಿಯೂ ಯಾವ ಅಸ್ತಿತ್ವವನ್ನೂ ಹೊಂದಿರುವುದಿಲ್ಲ. ಆದರೂ, ಇದೇ ನಿಮ್ಮ ಜೀವನವನ್ನೆಲ್ಲಾ ನಿಯಂತ್ರಿಸುತ್ತಿರುವುದು! ನಿಮ್ಮಲ್ಲಿ ಪ್ರತ್ಯೇಕತೆಯ ಭಾವವನ್ನು ಸೃಷ್ಟಿಸಿರುವುದು ಇದೇ ಅಹಂಕಾರ. ನೀವು ಹುಟ್ಟುವಾಗಲೇ ಇದು ನಿಮ್ಮನ್ನು ನಿಮ್ಮ ತಾಯಿಂದ ಬೇರ್ಪಡಿಸಿಬಿಡುತ್ತದೆ. ನೀವು ಹುಟ್ಟುವವರೆಗೂ, ಅಹಂಕಾರವಿರುವುದಿಲ್ಲ,

ಅಹಂಕಾರವು ನಿಮ್ಮ ಕಲ್ಪನೆಯ ಒಂದು ವಸ್ತು, ಆದರೆ ಅದು ಒಂದು ಕಪಟ ಪ್ರಾಣಿ!

ತಾನು ಬದುಕಲು ಅಹಂಕಾರವು ಸತ್ಯವನ್ನು ವಿಕಾರಗೊಳಿಸಿ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತದೆ. ಅದರಲ್ಲಿ ಇರುವುದೆಲ್ಲವೂ ಸಾಮರಸ್ಯ ವಿಲ್ಲದವುಗಳೇ ಆಗಿರುತ್ತವೆ.

ನಿಮ್ಮ ಸ್ವಂತ ಜೀವನವನ್ನೇ ನೋಡಿಕೊಳ್ಳಿರಿ.

ಯಾವಾಗ ನೀವು ನೋವು, ಕೋಪ, ಅಸೂಯೆ ಇವನ್ನು ಅನುಭವಿಸುತ್ತೀರೋ, ಅದಕ್ಕೆ ಪ್ರತ್ಯೇಕತೆಯ ಭಾವನೆ, ಒಂಟಿತನದ ಭಾವನೆ, ನಿಮ್ಮನ್ನು ಮೋಸಗೊಳಿಸಿದ್ದಾರೆಂಬ ಭಾವನೆ ಇವುಗಳೇ ಕಾರಣ. ಕಷ್ಟದ ಸಮಯದಲ್ಲಿ ನೀವೊಬ್ಬರೇ ಯಾವಾಗಲೂ ಇದ್ದೀರೆಂಬ ಅನುಭವವಾಗುತ್ತೆ. ಸಂತೋಷ ವಾಗಿರುವ ಸಮಯದಲ್ಲಿ ಸಹಜವಾಗಿ ನೀವು ಎಲ್ಲರೊಡನೆಯೂ ಮತ್ತು ಸುತುಮುತ್ತಲಿನ ಎಲ್ಲವುಗಳೊಂದಿಗೂ ಸಂಬಂಧಿಸಿದ್ದೇನೆಂಬ ಅನುಭವವು ಆಗುತ್ತದೆ. ಯಾವಾಗ ನೀವು ಸಂತೋಷದಿಂದ, ಹರ್ಷದಿಂದ, ನಗು ನಗುತ್ತಿರುತ್ತೀರೋ ಆ ಸಮಯದಲ್ಲಿ ನಿಮ್ಮ ಅಹಂಕಾರವು ಬಹಳ ದುರ್ಬಲವಾಗಿರುತ್ತದೆ.

ನಿಮ್ಮ ಈಗಿನ ಜೀವನದಲ್ಲಿ ಇಂತಹ ಸಂದರ್ಭಗಳನ್ನು ತಾತ್ಕಾಲಿಕವಾಗಿ ಅನುಭವಿಸಬಹುದು. ಆದರೆ ಧ್ಯಾನವು ನಿಮ್ಮನ್ನು ಶಾಶ್ವತವಾದ ಆನಂದದ ಸ್ಥಿತಿಗೇ ಕೊಂಡೊಯ್ಯುತ್ತದೆ. ಧ್ಯಾನವು ಪೂರ್ಣ ಅಸ್ತಿತ್ವದೊಡನೆ ಶ್ರುತಿಗೂಡಿದಂತೆ ಏಕೀಭವಿಸಲು (ತಾದಾತ್ಮ್ಯತೆಯನ್ನು ಹೊಂದಲು) ಮಾಡುವ ಒಂದು ಪ್ರಕ್ರಿಯೆ (ವಿಧಾನ). ಧ್ಯಾನದಲ್ಲಿ ಪ್ರತ್ಯೇಕತೆಗಾಗಲಿ, ಅಹಂಕಾರ ಕ್ಕಾಗಲೀ ಸ್ಥಳವೇ ಇಲ್ಲ.

ಒಮ್ಮೆ ನೀವು ಶಾಶ್ವತವಾದ ಎಲ್ಲದರೊಂದಿಗಿನ ಸಾಮ್ಯತ್ವವನ್ನು ಅನುಭವಿಸುತ್ತೀರೋ, ಅಸ್ತಿತ್ವದೊಡನೆ ಆಳವಾದ ಪರಸ್ಪರ ಸಂಬಂಧ ಪ್ರಾರಂಭದಲ್ಲಿ ನಿಮ್ಮನ್ನು ಚಿಂತೆಗೆ ಒಳಗಾಗಿಸುತ್ತೆ.

ನಾನು ನಿಜವಾಗಿಯೂ ಧ್ಯಾನ ಮಾಡಬಲ್ಲೆನೇ?

ನನಗೆ ಗಂಟೆಗಳ ಕಾಲ ಬೆನ್ನು ನೋವಿನಿಂದ ಕುಳಿತು ಕೊಳ್ಳಲು ಸಾಧ್ಯ ವಾಗುವುದೇ?

ಈ ದಾರಿಯು ನನಗೆ ಸರಿಯಾದುದೇ? ಇದರಲ್ಲಿ ಆಳವಾಗಿ ಸೆಳೆಯಲ್ಪಟ್ಟರೆ ನನ್ನ ಗತಿ?

ನನ್ನ ಸಂಸಾರಕ್ಕೆ ಏನಾಗುವುದೋ? ಏನೋ? ನನ್ನ ಸ್ನೇಹಿತರು ನನ್ನನ್ನು ಹುಚ್ಚನೆಂದು ಕರೆಯುತ್ತಾರೆಯೋ ಏನೋ? ನಾನು ನಿಜವಾಗಿಯೂ ಹುಚ್ಚನೇ? ನೀವು ಗುರುವಿನಿಂದ ಕಲಿತು ಅಭ್ಯಾಸ ಮಾಡುತ್ತಿದ್ದರೆ, ಗುರುವಿನ ವಿಚಾರವಾಗಿಯೇ ಸಂಶಯಗಳು ತಲೆ ಎತ್ತುತ್ತವೆ!

ನಿಜವಾಗಿಯೂ ಗುರುವು ಅಧಿಕೃತನೇ? ಸಮರ್ಥನೇ ?

ನನಗೆ ಸರಿಹೊಂದುವ ತಂತ್ರವು ಯಾವುದೆಂಬುದು ಗುರುವಿಗೆ ಗೊತ್ತಿದೆಯೇ?

ಅವರು ನನಗೆ ಈ ಧ್ಯಾನವನ್ನು ಕಲಿಸುತ್ತಿರುವ ಉದ್ದೇಶವೇನು?

ಇದೇನು ಒಂದು ತರಹದ ವಶೀಕರಣವೇ?

ಆದ್ದರಿಂದ ಈ ತರಹದ ಪ್ರಶ್ನೆಗಳು ನಿಮ್ಮಲ್ಲಿ ಬರುತ್ತಿದ್ದರೆ, ಚಿಂತಿಸಬೇಡಿ. ಸುಮ್ಮನೇ ಪ್ರಶ್ನೆಗಳನ್ನು ಹಾಗೆಯೇ ಬಿಟ್ಟುಬಿಡಿ ಮತ್ತು ಧ್ಯಾನವನ್ನು ಮುಂದುವರಿಸಿ. ಈ ಪ್ರಶ್ನೆಗಳು ಮನಸ್ಸಿನಲ್ಲಿ ಬರುತ್ತಿರುವುದಕ್ಕಾಗಿ ತಪ್ಪಿತಸ್ಥ ಮನೋಭಾವನೆಯನ್ನು (ಅಪರಾಧಿ ಮನೋಭಾವನೆಯನ್ನು) ಹೊಂದಬೇಡಿರಿ! ಈ ಪ್ರಶ್ನೆಗಳೆಲ್ಲಾ ಸಹಜವಾಗಿ ಎಲ್ಲರ ಮನಸ್ಸಿನಲ್ಲಿಯೂ ಬರುವಂತಹವುಗಳೇ.

ಮತ್ತು ಈ ಪ್ರಶ್ನೆಗಳೊಂದಿಗೆ ಹೋರಾಡಬೇಡಿರಿ. ಅಹಂಕಾರದ ಜೊತೆ ಸೆಣಸಾಡುವ ತಪ್ಪನ್ನು ಮಾಡಲೇಬೇಡಿ! ಏಕೆಂದರೆ ಅಹಂಕಾರವು ಒಂದು ತರಹ ಕಲ್ಪನೆ ಮಾತ್ರ, ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. ಅಹಂಕಾರವೆಂದರೆ ಕೇವಲ ತಿಳುವಳಿಕೆ ಇಲ್ಲದಿರುವುದೇ ಹೊರತು ಮತ್ತೇನೂ ಅಲ್ಲ.

ಒಂದು ಹೂವನ್ನು ನೋಡಿದರೆ, ನೀವು ನಿಮಗೇ ಹೇಳಿಕೊಳ್ಳುತ್ತೀರಿ, ಇದೊಂದು ಹೂ. ನಾವು ಜೀವನದ ಎಲ್ಲವನ್ನೂ ಪದಗಳ ಮೂಲಕ (ಮಾತಿನ ಮೂಲಕ) ಹೀರಿಕೊಳ್ಳುತ್ತೇವೆ (ಗ್ರಹಿಸುತ್ತೇವೆ), ಕಣ್ಣಿಗೆ ಗೋಚರವಾಗದ ಅಭಿಪ್ರಾಯಗಳ ಆಧಾರದಿಂದ. ಆದರೆ ಶಬ್ದಗಳು ಅನುಭವವಲ್ಲ! 'ಹೂ' ಎನ್ನುವ ಶಬ್ದ ಹೂ ಅಲ್ಲ, ಪ್ರೀತಿ ಎನ್ನುವ ಪದ ಪ್ರೀತಿಯಲ್ಲ, ಜ್ಞಾನೋದಯ ಎಂಬ ಪದ ಜ್ಞಾನೋದಯವಲ್ಲ. ಪದಗಳು, ನಿಮಗೂ ಸತ್ಯಕ್ಕೂ ಮಧ್ಯೆ ಇರುವ ಬೇಲಿ (ತಡೆ).

ಧ್ಯಾನಕ್ಕೆ ಪದಗಳ ಅವಶ್ಯಕತೆ ಇಲ್ಲ, ಧ್ಯಾನವು ಸತ್ಯ ವಸ್ತುವಿನ ನೇರವಾದ ಅನುಭವ.

ಆದರೆ ಮನಸ್ಸು ತನ್ನ ಜೊತೆ ಸದಾ ಪದ (ಶಬ್ದ)ಗಳ ಹರಟೆಯನ್ನು ತೆಗೆದುಕೊಂಡೇ ಹೋಗುತ್ತಿರುತ್ತದೆ. ಮನಸ್ಸು ನಿಮ್ಮನ್ನು ಒಂದು ಕ್ಷಣ ಕಾಲವೂ ಸಹ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ. ಮನಸ್ಸು ಬಿಡುವಿಲ್ಲದೆ ನಿಮಗಾಗಿ ಭಾವನೆಗಳನ್ನೂ, ಅಭಿಪ್ರಾಯಗಳನ್ನೂ, ಕಲ್ಪನೆಗಳನ್ನೂ ಸೃಷ್ಟಿಸುತ್ತಿರುತ್ತದೆ. ಅದು ಸತ್ಯವನ್ನು ವಿರೂಪಗೊಳಿಸಲು ಶಬ್ದಗಳನ್ನು ಉಪಯೋಗಿಸುತ್ತದೆ.

ಮನಸ್ಸನ್ನು ಹೇಗೆ ವ್ಯವಸ್ಥೆಗೊಳಿಸುತ್ತೀರಿ?

ನಾನು ಅಹಂಕಾರದ ವಿಷಯವಾಗಿ ಹೇಳಿದಂತೆ - ಮನಸ್ಸಿನ ಜೊತೆ ಹೋರಾಡಬೇಡಿ. ನೀವು ಮನಸ್ಸಿನ ಜೊತೆ ಹೊಡೆದಾಡಿ ಏನನ್ನೂ ಪಡೆಯಲಾಗುವುದಿಲ್ಲ. ನೀವು ಅದರ ಜೊತೆ ಹೋರಾಡಲೂ ಸಹ ಆಗುವುದಿಲ್ಲ

  • ಏಕೆಂದರೆ ಹೋರಾಡುವುದೂ ಸಹ ಮನಸ್ಸಿನ ಕೆಲಸವೇ! ಆದ್ದರಿಂದ ಅದೂ ಮನಸ್ಸಿನ ಒಂದು ಭಾಗವೇ ಮತ್ತೊಂದು ಭಾಗದ ಜೊತೆ ಹೊಡೆದಾಡಿದಂತೆ. ಅದರ ಬದಲು ಸುಮ್ಮನೆ ಮನಸ್ಸಿನ ಕೆಲಸಗಳಿಗೆಲ್ಲಾ ಸಾಕ್ಷಿಯಾಗಿ.

ಇದೇನು ಸುಲಭವಾಗಿ ಆಗುವುದಲ್ಲ, ಅದರಲ್ಲೂ ಈ ಹಾದಿಯಲ್ಲಿ ಮನಸ್ಸು ಬಹಳ ಅಪಾಯಕಾರಿಯಾದ ಸಂಗತಿಗ! ಮೊದಲನೆಯದಾಗಿ ಅದು ಎಲ್ಲಾ ತರಹದ ಭಯವನ್ನೂ ಸಂಶಯಗಳನ್ನೂ ಸೃಷ್ಟಿಸುತ್ತದೆ. ಯಾವಾಗ ನೀವು ಅದನ್ನು ಕೊಠಡಿ ಎಂದೇ ಮಾಡಿಕೊಳ್ಳಿ. ದೇವರ ಮನೆ ಈಗಾಗಲೇ ಇದ್ದರೆ ಅದು ಆದರ್ಶ ಜಾಗವೇ ಹೌದು. ಯಾವ ಜಾಗದಲ್ಲಿ ಪೂಜೆ ಮತ್ತು ಧ್ಯಾನ ಇವುಗಳು ನಡೆಯುತ್ತವೆಯೋ ಅಲ್ಲಿ ಹೆಚ್ಚಿನ ಚೈತನ್ಯವು ಇರುವುದರಿಂದ ನಿಮ್ಮ ಧ್ಯಾನಕ್ಕೆ ಹೆಚ್ಚು ಉಪಯೋಗಕಾರಿಯಾಗಿರುತ್ತೆ. ಒಂದೇ ಸ್ಥಳದಲ್ಲಿ ಪ್ರತಿನಿತ್ಯ ಧ್ಯಾನ ಮಾಡುವುದು ಒಳ್ಳೆಯದು. ಆ ಜಾಗವು ಮನೆಯೊಳಗಡೆಯಾದರೆ ಸಾಕಷ್ಟು ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ. ನೀವು ಮನೆಯ ಹೊರಗಡೆ ಅಂದರೆ ಗಾರ್ಡನ್ ತರಹದ ಸ್ಥಳವಾದರೆ, ಯಾರಿಂದಲೂ ಅಡಚಣೆಯಾಗದ, ಗಲಾಟೆಯಾಗದ ಪ್ರತ್ಯೇಕ ಸ್ಥಳದಲ್ಲಿ ಅಭ್ಯಾಸ ಮಾಡಿ.

ನೆಮ್ಮದಿಯಿಂದಿರಿ:

ನೀವು ದೈಹಿಕವಾಗಿ ಅಡಚಣೆ ಇಲ್ಲದೆ ನೆಮ್ಮದಿಯಿಂದಿರದಿದ್ದರೆ ನೀವು ಧ್ಯಾನವನ್ನು ಮಾಡಲಾರಿರಿ! ಧ್ಯಾನಕ್ಕೆ ನೀವು ಶರೀರವನ್ನು ಮರೆಯಲೇಬೇಕು, ಶರೀರವು ತೊಂದರೆ ಕೊಡುತ್ತಿದ್ದರೆ ನೀವು ಶರೀರವನ್ನು ಮರೆತು ಅದರಿಂದಾಚೆಗೆ ಹೋಗುವುದೆಂತು?

ಎಷ್ಟೋ ತಂತ್ರಗಳು ನೀವು ನೆಲದ ಮೇಲೆ ಕುಳಿತು ಮಾಡುವಂತಹು ಇವೆ. ನೀವು ಅದಕ್ಕೆ ಒಗ್ಗಿಕೊಂಡಿರದೇ ಇದ್ದರೆ, ಕುರ್ಚಿಯನ್ನು ಉಪಯೋಗಿಸಿರಿ. ಆದರೂ ಪ್ರಯತ್ನ ಪಡುತ್ತಿರಿ. ನಿಮಗೆ ಬೇಕಾದರೆ ಒಂದು ಮೆತ್ತೆಯನ್ನು ಆಸನದ ರೀತಿ ಹಾಕಿಕೊಳ್ಳಿರಿ. ಮಲಗಿ ಮಾಡುವಂತಹ ತಂತ್ರಗಳಿಗೆ ಖಾಲಿ ನೆಲದ ಮೇಲೆ ಮಲಗಬೇಡಿ. ಜನಖಾನ ಅಥವಾ ಹುಲ್ಲಿನ ಚಾಪೆಯನ್ನು ಉಪಯೋಗಿಸಿರಿ.

ನೀವು ಊಟ ಮಾಡಿ ಎರಡು ಗಂಟೆಗಳು ಕಳೆದ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿರಿ.

ಮೊದ ಮೊದಲು ಧ್ಯಾನಕ್ಕೆ ಕುಳಿತಾಗ ನಿದ್ರೆ ಬರುವಂತಾಗಬಹುದು. ಇದು ತಾಮಸ ಅದು ನಿಮ್ಮ ಪ್ರಕೃತಿಗೆ ಭಾರವೆನಿಸಬಹುದು. ನಿಮ್ಮ ನಿದ್ರೆಯ ಜೊತೆ ಹೋರಾಡದಿರಿ - ಕಡೆಗೆ ನೀವು ನಿದ್ರೆಯನ್ನೂ ಮಾಡಲಾರಿರಿ, ಧ್ಯಾನವನ್ನೂ ಮಾಡಲಾರಿರಿ! ನಿದ್ರೆ ಬರುವುದರ ವಿಷಯವಾಗಿ ತಪ್ಪಿತ್ತಸ್ಥ ಭಾವನೆಯನ್ನು ಹೊಂದಬೇಡಿರಿ. ನಿಮಗೆ ನಿದ್ರೆ ಬರುತ್ತಿದ್ದರೆ ಹೋಗಿ ನಿದ್ರೆ ಮಾಡಿರಿ. ನೀವು ನಿದ್ರೆಯನ್ನು ಮಾಡಿದ ನಂತರ ಧ್ಯಾನ ಮಾಡಬಹುದು ಅಷ್ಟೆ.

ಧ್ಯಾನವೂ ಸಹ ಮಾಡುವಂತಹ ಒಂದು ಕೆಲಸವಲ್ಲವೇ? ಪ್ರಾರಂಭದಲ್ಲಿ ಹೌದು. ಸುಮ್ಮನೆ ಕುಳಿತುಕೊಳ್ಳುವುದೂ ಸಹ ಒಂದು ಕೆಲಸವೇ. ನಿಮ್ಮ ಉಸಿರನ್ನು ಗಮನಿಸುವುದೂ ಒಂದು ಕೆಲಸವೇ. ಸರಿಯಾಗಿ ಹೇಳುವುದಾದರೆ, ಧ್ಯಾನವೂ ಸಹ ಮೊದ ಮೊದಲು ಹೆಚ್ಚು ಕಡಿಮೆ ಮಾಡುವ ಕೆಲಸದಂತೆಯೇ ಅನ್ನಿಸಿಬಿಡುತ್ತದೆ - ಏಕೆಂದರೆ ನೀವು ನಿಮಗೆ ಸಹಜವಾದದ್ದನ್ನು ಮಾಡುತ್ತಿಲ್ಲವಾದ್ದರಿಂದ ಹಾಗೆ ಅನ್ನಿಸುತ್ತದೆ. ನೀವು ಸಹಜವಾಗಿ ಚೆನ್ನಾಗಿ (ಸರಿಯಾಗಿ) ಏನನ್ನಾದರೂ ಮಾಡುತ್ತಿದ್ದರೂ ಸಹ ಅಂದರೆ ಸುಮ್ಮನೆ ಕುಳಿತುಕೊಳ್ಳುವುದು, ಅದನ್ನು ಮಾಡಬೇಕೆಂದು ವಿಧಿಸಿದಾಗ ಅದು ಒಂದು ಪ್ರಯತ್ನದ ಕೆಲಸವೆಂದೇ ಕಾಣುತ್ತದೆ.

ನಿಮಗೆ ಗೊತ್ತಾ? ಝೆನ್ ಧ್ಯಾನದ ತಂತ್ರದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೇ ಒಂದಿದೆ. ಆದರೆ ಅಲ್ಲಿಯೂ ಸಹ, ಅದರಲ್ಲಿ ಭಾಗವಹಿಸುವವರು, ಅದನ್ನು ಸಾಧಿಸಲು ಕಷ್ಟಪಡುತ್ತಾರೆ! ಹೌದು, ಪ್ರಾರಂಭದಲ್ಲಿ ಅದು ಒಂದು ಪ್ರಯತ್ನವೇ ಆಗಿರುತ್ತದೆ. ಆದರೆ ಆಳವಾದ ಅರ್ಥದಲ್ಲಿ ಧ್ಯಾನವು ಒಂದು ಮಾಡುವ ಕೆಲಸವಲ್ಲ - ಏಕೆಂದರೆ ನೀವು ಸರಿಯಾದ ರೀತಿಯಲ್ಲಿ ಮಾಡಿದಾಗ ಮತ್ತು ಅದರಲ್ಲಿ ಜಯಗಳಿಸಿದಾಗ, ಎಲ್ಲಾ ಪ್ರಯತ್ನಗಳೂ ಮಾಯವಾಗಿಬಿಡುತ್ತವೆ. ನೀವು ಪೂರ್ಣವಾಗಿ ವಿಶ್ರಾಂತಿ ಪಡೆದಾಗ, ನೀವು ಫಲವನ್ನು ಪಡೆಯುವ ಪ್ರಯತ್ನವನ್ನು ನಿಲ್ಲಿಸಿದಾಗ, ನೀವು ಸುಮ್ಮನೇ ಧ್ಯಾನವನ್ನು ಸಂತೋಷದಿಂದ ಅನುಭವಿಸಿದಾಗ, ನೀವು ನಿಧಾನವಾಗಿ, ನೀವು ಧ್ಯಾನ ಮಾಡುತ್ತಿದ್ದೇವೆನ್ನು ವುದನ್ನೇ ಮರೆತುಬಿಟ್ಟಿರುತ್ತೀರಿ. ಆಗ ಅದು ಮಾಡುವುದು ಎಂದು ಅನಿಸಿಕೊಳ್ಳುವುದಿಲ್ಲ.

ಈ ಮುಂದಿನ ಪುಟಗಳಲ್ಲಿ ತಿಳಿಸಲಾಗಿರುವ ಧ್ಯಾನದ ತಂತ್ರಗಳೆಲ್ಲವೂ ನನ್ನಿಂದಲೇ ಸೃಷ್ಟಿಸಲ್ಪಟ್ಟವುಗಳಲ್ಲ, ಅವೆಲ್ಲವನ್ನೂ ಪುರಾತನ ಗ್ರಂಥಗಳಿಂದ, ಹಾಗೂ ಆಧ್ಯಾತ್ಮಿಕ ಸಂಪ್ರದಾಯವನ್ನು ಪ್ರಪಂಚದಾದ್ಯಂತ ಸಾರಿರುವ ಆಧ್ಯಾತ್ಮಿಕ ಗುರುಗಳು ಮತ್ತು ಬೋಧಕರುಗಳು ಉತ್ತೇಜಿಸುವ ಸಲುವಾಗಿ ಪ್ರತಿಪಾದಿಸಿರುವ ಬೋಧನೆಗಳಿಂದ ತೆಗೆದುಕೊಳ್ಳಲಾಗಿದೆ.

ಹೆಚ್ಚು ತಂತ್ರಗಳನ್ನು ನಾನು ನನ್ನ ಸ್ವಂತ ಅನುಭವದ ತಳಹದಿಯ ಮೇಲೆ ಮಾರ್ಪಾಟು ಮಾಡಿದ್ದೇನೆ. ಕೆಲವು ನನ್ನಿಂದ ಸೃಷ್ಟಿಸಲ್ಪಟ್ಟಿವೆ, ಮತ್ತೆ ಕೆಲವನ್ನು ಬೇರೆಯವರು ಪ್ರತಿಪಾದಿಸಿದಂತೆಯೇ ಅದನ್ನು ತಿಳಿಯಪಡಿಸಿದ್ದೇನೆ.

ಹೆಚ್ಚು ತಂತ್ರಗಳ ಮೂಲ ಸ್ವರೂಪವು ಪ್ರಸಿದ್ಧಿ ಪಡೆಯದೆ, ಅಸ್ಪಷ್ಟತೆಯಿಂದ ಕಳೆದು ಹೋಗಿವೆ. ಅವುಗಳು ಯಾರ ಸ್ವತ್ತೂ ಅಲ್ಲ, ಅವು ತನ್ನವೇ ಎಂದು ಯಾರೂ ಸ್ವಾಮ್ಯತ್ವವನ್ನು ಪ್ರತಿಪಾದಿಸಲಾಗುವುದಿಲ್ಲ.

ಸತ್ಯವೇನೆಂದರೆ, ಈ ತಂತ್ರಗಳ ಹೆಸರುಗಳ ಬಗ್ಗೆ ನಿಜವಾದ ಯಾವ ಗುರುಗಳಿಗೂ ಸಂಬಂಧಿಸಿಲ್ಲ, ಅವರಿಗೆ ಬೇಕಾದದ್ದು - ಇದು ನಿಮಗೆ ಸಹಾಯವಾಗುತ್ತೋ ಅಥವಾ ಇಲ್ಲವೋ ಎಂಬುದಷ್ಟೇ. ಆದ್ದರಿಂದ ಸುಮ್ಮನೆ ತಂತ್ರಗಳನ್ನು ಉಪಯೋಗಿಸಿ ಆನಂದಿಸಿರಿ, ಮತ್ತು ಅದನ್ನು ಬೇರೆ ಯಾರಾದರೂ ಉಪಯೋಗಿಸಿ ಆನಂದ ಪಡುವುದಾದರೆ ಅವರಿಗೂ ಇದನ್ನು ತಲುಪಿಸಿರಿ.

ಧ್ಯಾನದ ಮಹತ್ವದ ಸುವಾಸನೆಯನ್ನು ಹರಡಿರಿ!

ಆನಂದ ನರ್ತನ

ತಂತ್ರದ ಬಗ್ಗೆ

ನರ್ತಿಸುವುದು ಒಂದು ಪ್ರಭಾವಪೂರಿತ-(ಶಕ್ತಿಯುತ) ವಾದ ಧ್ಯಾನ! ಕ್ರಮಬದ್ಧ ಸಾಂಪ್ರದಾಯಿಕ ನರ್ತನ ಮತ್ತು ಸ್ವತಂತ್ರವಾದ ಸರಳ ನರ್ತನ ಇವೆರಡೂ ಸಹ ಧ್ಯಾನದ ತಂತ್ರಗಳಾಗಬಹುದು. ಸರಳ ನರ್ತನವೂ ಸಹ ಹೆಚ್ಚಿನ ವಿರೇಚಕವಾದ ತಂತ್ರ. ಇದರ ಉದ್ದೇಶವೇನೆಂದರೆ, ನೀವು ನಿಮ್ಮನ್ನೇ ಮರೆತುಬಿಡುವುದು. ನರ್ತನದಲ್ಲಿ ಚೆನ್ನಾಗಿ ಪಳಗಿದ ನರ್ತನಕಾರನು ಇದನ್ನು ತನ್ನ ಕ್ರಮಬದ್ಧ ನರ್ತನದಲ್ಲಿಯೂ ಸಹ ಮಾಡಬಲ್ಲನು, ಏಕೆಂದರೆ ನಿಯಮಗಳ ಪರಿವೆಯೇ ಅವನಿಗಿರುವುದಿಲ್ಲ. ನಾವು ಹೇಗೆ ವ್ಯಾಕರಣದ ಬಗ್ಗೆ ಚಿಂತೆ ಮಾಡದೆ ಸರಿಯಾಗಿ ಮಾತನಾಡಬಲ್ಲವೋ ಹಾಗೆ, ಪಳಗಿದ ನರ್ತನಕಾರನು ಕ್ರಮಬದ್ಧ ನರ್ತನ ವನ್ನೂ ಸಹ ಸಹಜವಾಗಿ ನರ್ತಿಸುತ್ತಾನೆ. ಆದರೆ ನೀವು ಪಳಗಿದವರಲ್ಲವಾದರೆ (ಹವ್ಯಾಸಿ ನರ್ತನಕಾರನಾದರೆ) ಆಗ ಸರಳ ನರ್ತನವನ್ನು ನೀವು ಬಹಳವಾಗಿ ಸಂತೋಷಪೂರಿತವಾಗಿ ಮಾಡಬಲ್ಲಿರಿ, ಇಲ್ಲವಾದರೆ (ಸರಳ ನರ್ತನವನ್ನು ಮಾಡದೆ ಕ್ರಮಬದ್ಧ ನರ್ತನವನ್ನು ಮಾಡ ಹೊರಟರೆ) ನೀವು ನಿಯಮಗಳಿಂದ ನಿರ್ಬಂಧಕ್ಕೊಳಗಾಗಿರುವಂತೆ ಅನಿಸುತ್ತದೆ.

ಸೂಚನೆಗಳು:

ಸರಳ ನರ್ತನ (ಫ್ರೀ ಡಾನ್ಸ್) ಎಂದರೆ ಅದರಲ್ಲಿ ಹೆಜ್ಜೆ ಹಾಕುವ, ವಿಧಿ ನಿಯಮಗಳು ಏನೂ ಇಲ್ಲ. ನಿಮ್ಮ ಶರೀರ ಹೇಗೆ ಬೇಕಾದರೂ ಚಲಿಸಲಿ. ನರ್ತನವು ಸುಲಭವಾಗಿ ಸರಳವಾಗಿ ಸಾಗಲಿ. ಕ್ರೀಡೆಯ ಭಾವದಿಂದಿರಿ. ನಿಮಗೆ ನೀವೇ ಆನಂದಿಸಿರಿ. ನರ್ತನದ ಪ್ರಚಂಡ ಶಕ್ತಿಯ ಒಂದು ಭಾಗವಾಗಿರಿ.

ಕಣ್ಣುಗಳನ್ನು ಮುಚ್ಚಿದಾಗ, ಶರೀರವು ಸೂಕ್ಷ್ಮವಾಗಿ, ಆಕಾರದಲ್ಲಿ, ರೂಪದಲ್ಲಿ, ಬದಲಾಗುತ್ತಿರುವುದನ್ನು, ಭಾರವಾಗುವುದನ್ನು, ಹಗುರವಾಗುವುದನ್ನು ಹಿಗ್ಗುವುದನ್ನು, ಕುಗ್ಗುವುದನ್ನು ಗಮನಿಸುತ್ತೀರಿ. ಅದರ ವಿಷಯವಾಗಿ ನಮ್ಮ ಭಾವನೆ ಮಾತ್ರ ಒಂದೇ ಸಮ ಇರುತ್ತದೆ. ಅದಕ್ಕಾಗಿಯೇ ನಾವು ಈ ಬದಲಾವಣೆಗಳನ್ನು ತಿಳಿಯುವುದೇ ಇಲ್ಲ. ಆಗಾಗ್ಗೆ ಇದು ಒಂದು ನಮಗೇ ತಿಳಿಯದಂತೆ ಆಗುವಂಥದ್ದು. ನಿಮಗೆ ವಿರೋಧವಾದ ವಾತಾವರಣದಲ್ಲಿದ್ದಾಗ, ನೀವು ಭಯದಿಂದ ಕೂಡಿದಾಗ, ಒಂಟಿತನ ಮತ್ತು ಪ್ರತ್ಯೇಕತೆಯನ್ನು ಅನುಭವಿಸಿದಾಗ ನಿಮಗೆ ಒಂದು ತರಹ ಕುಗ್ಗಿದ ಅನುಭವವಾಗುತ್ತೆ. ನೀವು ಸಂತೋಷವಾಗಿದ್ದಾಗ, ಪ್ರೀತಿಯಿಂದ ಕೂಡಿದಾಗ, ಶಾಂತತೆಯಿಂದಿದ್ದಾಗ ನೀವು ವಿಕಸಿಸುತ್ತಿರುವ, ವಿಶಾಲತೆಯಿಂದ ತುಂಬಿಕೊಳ್ಳುವ ಅನುಭವವು ನಿಮಗಾಗುತ್ತದೆ. ನೀವು ಎಲ್ಲವನ್ನೂ ಒಳಗೊಂಡಾಗ, ನೀವು ಅರಳುತ್ತಿರುವ ಅನುಭವವನ್ನು ಪಡೆಯುತ್ತೀರಿ.

ಸರ್ವಸ್ವವನ್ನೂ ನಿಮ್ಮ ಇರುವಿಕೆಯಲ್ಲಿ ತುಂಬಿಕೊಳ್ಳಿ. ನಾನಲ್ಲ ಅನ್ನಬೇಡಿ. ಅದರ ಬದಲು 'ನಾನೇ' ಎನ್ನಿ. ನಿಧಾನವಾಗಿ ನಿಮ್ಮಲ್ಲಿ ಕೇಂದ್ರವೆಂಬುದೇ ಇಲ್ಲವೆನಿಸುವುದು ಪ್ರಾರಂಭವಾಗುತ್ತದೆ. ಕೇಂದ್ರವೇ ಇಲ್ಲದೆ, ಅಹಂಕಾರವು ಸ್ಥಗಿತವಾಗಿ ನಿಲ್ಲಲು ಸ್ಥಳವೆಲ್ಲಿ? ಅಹಂಕಾರಕ್ಕೆ ಪ್ರತ್ಯೇಕತೆಯ ಮನೋಭಾವ ಬೇಕೇ ಬೇಕು. ಎಲ್ಲವನ್ನು ಒಳಗೊಂಡು ಒಂದಾಗಿರುವಾಗ ಅಹಂಕಾರಕ್ಕೆ ಬೇರೆ ಸ್ಥಳವೆಲ್ಲಿ?

ಅಹಂಕಾರವು ಹೊರಟು ಹೋದಾಗ ಅಲ್ಲಿ ಪ್ರಜ್ಞೆಯು ಮಾತ್ರ ಉಳಿದಿರುತ್ತದೆ. ಪ್ರಜ್ಞೆಯು ಆಕಾಶವನ್ನೂ ಸೇರಿಸಿಕೊಳ್ಳುವಷ್ಟು ವಿಸ್ತೀರ್ಣವಾದಾಗ ಅದು ನಿಮ್ಮ ಒಂದು ಭಾಗವೇ ಆಗಿಬಿಡುತ್ತದೆ. ಅದು ಸೂರ್ಯೋದಯವನ್ನೂ ಸೇರಿಸಿಕೊಳ್ಳುತ್ತದೆ, ಅದೇ ನಿಮ್ಮೊಳಗೆ ಆಗುತ್ತಿರುವುದು. ಬೆಳಗಿನ ಸುಗಂಧಿತ ಕಂಪೂ ಸಹ ನೀವೇ. ತಂಗಾಳಿಯು ನಿಮ್ಮೊಳಗೇ ಬೀಸುತ್ತಿದೆ ಎನ್ನಿಸುತ್ತದೆ. ಮರಗಳು, ಬಂಡೆಗಳು, ನೀವು ನೋಡಲು ಆಗದ ನಕ್ಷತ್ರಗಳೂ ಸಹ ನಿಮ್ಮೊಳಗೇ ಇವೆ!

ಇದೊಂದು ಅದ್ಭುತವಾದ ಅನುಭವ. ನೀವು ಅದನ್ನು ಅನುಭವಿಸದ ಹೊರತು ಎಲ್ಲವೂ ಒಂದನ್ನೊಂದು ಸಂಬಂಧಿಸಿರುವುದೆಂಬುದು ನಿಮಗೆ ಹೇಗೆ ತಿಳಿದೀತು? ನಿಮ್ಮ ಎಲ್ಲೆಯು ಯಾವಾಗಲೂ ಕಿರಿದಾಗಿಯೇ ಇತ್ತು - ಈಗ ಅದು ಅಸ್ತಿತ್ವವನ್ನೆಲ್ಲಾ ಸೇರಿಸಿಕೊಳ್ಳುವಷ್ಟು ಬೆಳೆಯುತ್ತದೆ.