ಧ್ಯಾನ
This text was machine-transcribed from the printed book and may contain errors. Select the words and choose “Report a mistake”.
ಇರುವುದು ನಿಮಗಾಗಿ
ಧ್ಯಾನದ ವಿಜ್ಞಾನ ಮತ್ತು ಕಲೆ ಕುರಿತು ಒಂದು ಪರಿಚಯ
ಧ್ಯಾನವನ್ನು ಪ್ರತಿಯೊಬ್ಬರೂ ಕಲಿಯಬಹುದೇ?
ನೀವು ಧ್ಯಾನವನ್ನು ನಿಜಕ್ಕೂ ಕಲಿಯಬೇಕಾಗಿಲ್ಲ. ನೀವು ಈಗಾಗಲೇ ಓರ್ವ ಧ್ಯಾನಿಯಾಗಿದ್ದೀರಿ!
ಪರಮ ಸೌಂದರ್ಯವನ್ನು ನೀವು ನಿಮ್ಮ ಜೀವನದಲ್ಲಿ ಅನುಭವಿಸಿದ ಯಾವುದೇ ಕ್ಷಣವನ್ನು ನೆನೆಸಿಕೊಳ್ಳಿರಿ. ಪರ್ವತವೊಂದರ ಹಿಂದಿನಿಂದ ತಕ್ಷಣದಲ್ಲಿ ಸೂರ್ಯ ಉದಯಿಸುವುದು.
ಅಥವಾ ಸಂಗೀತವೊಂದನ್ನು ಆಲಿಸಿ ಅನಿರ್ವಚನೀಯ ಆನಂದವನ್ನು ನೀವು ಮೊದಲ ಬಾರಿಗೆ ಅನುಭವಿಸಿದಾಗ.
ಈ ಬಗೆಯ ಕ್ಷಣಗಳಲ್ಲಿ ನೀವು ತಕ್ಷಣದಲ್ಲಿ ನಿಶ್ಚಲಗೊಳ್ಳುತ್ತೀರಿ, ಮಾತಿಲ್ಲದವರಾಗುತ್ತೀರಿ, ಸಂಪೂರ್ಣ ಅರಿವಿದ್ದುಕೊಂಡೇ.
ನಾವೆಲ್ಲ ಈ ಬಗೆಯ ಕ್ಷಣಗಳನ್ನು ಅನುಭವಿಸಿಲ್ಲವೇ?
ಈ ಕ್ಷಣವೇ ಧ್ಯಾನ.

ಪರಮಹಂಸ ಶ್ರೀ ನಿತ್ಯಾನಂದ (ಸ್ವಾಮೀಜಿ) ಅವರು ಈ ಸಹಸ್ರಮಾನದ ಕ್ರಾಂತಿಕಾರಿ ಆಧ್ಯಾತ್ಮಿಕ ಗುರುಗಳಾಗಿ ದ್ದಾರೆ. ಧ್ಯಾನದ ಶಕ್ತಿಯ ಮೂಲಕ ವಿಶ್ವವನ್ನೇ ಗುಣಪಡಿ ಸುವ ಧೈಯೋದ್ದೇಶದಿಂದ ಅವರು ಮುನ್ನಡೆದಿದ್ದಾರೆ.
ಧ್ಯಾನಪೀಠಂ, ಬೆಂಗಳೂರಿನ ಬಿದದಿಯಲ್ಲಿದ್ದು ಸ್ವಾಮೀಜಿಯವರ ಧ್ಯಾನಕ್ಕಾಗಿ ವಿಶ್ವಾದ್ಯಂತ ಅಭಿಯಾನವಾಗಿದೆ. ಹಾಗಿದ್ದರೂ ಸ್ವಾಮೀಜಿಯವರು ಯಾವಾಗಲೂ ಪ್ರವಾಸದಲ್ಲಿದ್ದು ವಿಶ್ವಾದ್ಯಂತ ಜನರಿಗೆ ಆಧ್ಯಾತ್ಮಿಕತೆ ಮತ್ತು ನಿತ್ಯಾನಂದ ಸಂದೇಶವನ್ನು ಸ್ವತಃ ತಲುಪಿಸುತ್ತಿದ್ದಾರೆ.
www.dhyanapeetam.org
ಧ್ಯಾನ
ಇರುವುದೇ
ನಿಮಗಾಗಿ
ಧ್ಯಾನ ಎಂಬ ಕಲೆ ಮತ್ತು ವಿಜ್ಞಾನಕ್ಕೆ ಒಂದು ಪೀಠಿಕೆ
ಪರಮಹಂಸ ನಿತ್ಯಾನಂದ
ನಿತ್ಯಾನಂದ ಫೌಂಡೇಷನ್
Ebook ISBN: 979-8-88572-092-2
Copyright 2005 ನಿತ್ಯಾನಂದ ಪಬ್ಲಿಷರ್ಸ್
ಎಲ್ಲ ಹಕ್ಕುಗಳೂ ಕಾದಿರಿಸಲ್ಪಟ್ಟಿವೆ. ನಿತ್ಯಾನಂದ ಪಬ್ಲಿಷರ್ಸ್ ಅವರ ಲಿಖಿತ ಅನುಮತಿಯಿಲ್ಲದೆ ಯಾವುದೇ ಯಾಂತ್ರಿಕ, ಫೋಟೋಗ್ರಾಫಿಕ್ ಅಥವಾ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅಥವಾ ಫೋನೋಗ್ರಾಫಿಕ್ ರೆಕಾರ್ಡಿಂಗ್ ರೂಪದಲ್ಲಿ ಈ ಪುಸ್ತಕದ ಯಾವುದೇ ಭಾಗವನ್ನು ಪುನರ್ಮುದ್ರಿಸಲಾಗದು; ಪುನಸ್ಸಂಪಾದನಾ ವ್ಯವಸ್ಥೆಯ ಮೂಲಕ ಸಂಗ್ರಹಿಸಿ ಇಡಲಾಗದು, ರವಾನೆ ಮಾಡಲಾಗದು ಅಥವಾ ಸಾರ್ವಜನಿಕ ಅಥವಾ ಖಾಸಗಿ ಬಳಕೆಗಾಗಿ ಯಾವುದೇ ರೀತಿಯಲ್ಲಿ ನಕಲು ಮಾಡಲಾಗದು. ಸ್ವತಃ ಈ ಪುಸ್ತಕದಲ್ಲಿನ ಯಾವುದೇ ಮಾಹಿತಿ ಬಳಸಿದಾಗ ಏನೇ ಆದಲ್ಲ ನಿಮ್ಮ ಕ್ರಿಯೆಗಳಿಗೆ ಗ್ರಂಥಕರ್ತರು ಮತ್ತು ಪ್ರಕಾಶಕರು ಯಾವುದೇ ಹೊಣೆ ಹೊರುವುದಿಲ್ಲ.
ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯಗಳೂ ನಿತ್ಯಾನಂದ ಫೌಂಡೇಶನ್ ಧಾರ್ಮಿಕ ಕಾರ್ಯಕ್ರಮಗಳ ಬೆಂಬಲಕ್ಕೆ ಬಳಸ ಲಾಗುವುದು.
ಜಡ್ಜ್ಪ್ರೆಸ್, ಬೆಂಗಳೂರು ಇವರಿಂದ ಭಾರತದಲ್ಲಿ ಮುದ್ರಿತ.
ನಿತೋಪನಿಷದ್
ನಿತ್ಯಾನಂದ
ಗುರು ಶಿಷ್ಯ ಬಾಂಧವ್ಯದ ಬಗ್ಗೆ ಉಪನ್ಯಾಸ

1ನೇ ಜನವರಿ 1978 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಜನಿಸಿದ ನಿತ್ಯಾನಂದ ಅವರು ಸ್ವಂತ ಸಾಕ್ಷಾತ್ಕಾರದಿಂದ ಗುರುವಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಆರಂಭಿಸಿ, ತೀವ್ರ ಪರಿಶ್ರಮದ ಸಾಧನೆಯ ವರ್ಷಗಳ ಮೂಲಕ, ಅಂತಿಮ ಸತ್ಯದ ಸಾಕ್ಷಾತ್ಕಾರದ ಏಕಮೇವ ದೃಷ್ಟಿಯಿಂದ ದೈವಿಕ ಸಾಧನೆ ಗಳಿಸಿದ್ದಾರೆ. ಭಾರತ ಮತ್ತು ನೇಪಾಳಗಳಲ್ಲಿ ಮಹಾನ್ ಗುರುಗಳಲ್ಲಿ ಅಧ್ಯಯನ ಮಾಡುತ್ತ ಅವರು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿದ್ದಾರೆ. 22ರ ವಯಸ್ಸಿನಲ್ಲಿಯೇ ಶ್ರೀಯುತರು ನಿತ್ಯಾನಂದದ ಸ್ಥಿತಿಯನ್ನು ಪ್ರವೇಶಿಸಿದಾಗ, ಪ್ರಜ್ಞೆಯ ಅಂತಿಮ ಸಾಕ್ಷಾತ್ಕಾರದ ಅನುಭವ ಪಡೆದರು.
ಪ್ರತಿಯೋರ್ವ ವ್ಯಕ್ತಿಯೂ ತನ್ನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯ ವನ್ನು ವಾಸ್ತವೀಕರಣಗೊಳಿಸುವಲ್ಲಿ ಸಹಕರಿಸಬೇಕೆಂಬುದೇ ಸ್ವಾಮೀಜಿ ಯವರ ಧೈಯೋದ್ದೇಶವಾಗಿದೆ. ವಾಸ್ತವದ ಹಾಗೂ ಸಹಾನುಭೂತಿಪರ ದೃಷ್ಟಿಕೋನದೊಂದಿಗೆ ಹಾಗೂ ಮಾನವ ಸ್ವಭಾವದ ಆಳದೊಳಗೆ ಸಾಕ್ಷಾತ್ಕಾರಗೊಂಡ ಅಂತರ್ದೃಷ್ಟಿಯೊಂದಿಗೆ ಸ್ವಾಮೀಜಿಯವರು ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸೃಷ್ಟಿಸಿ, ಪರಿವರ್ತಿಸಿದ್ದಾರೆ.
ಸ್ವಾಮೀಜಿಯವರ ದೈವಿಕ ಪುನರುದ್ಧಾರದ ಸ್ಪರ್ಶವು, ಆಧ್ಯಾತ್ಮಿಕವಾಗಿ ಗುಣಪಡಿಸುವ ವೈಜ್ಞಾನಿಕ ವ್ಯವಸ್ಥೆಯಾದ ಆನಂದ ಹೀಲಿಂಗ್ನ ರೂಪವಾಗಿ ಮಾರ್ಪಟ್ಟಿದೆ. ತಮ್ಮ ನೇರ ಸ್ಪರ್ಶ ಹಾಗೂ ಅವರ ಆಶೀರ್ವಾದ ಪಡೆದ ಆನಂದ ಹೀಲರ್ಗಳ ಮೂಲಕ, ಮೈಗ್ರೇನ್ನಿಂದ ಕ್ಯಾನ್ಸರ್ವರೆಗಿನ ವಿಭಿನ್ನ ಖಾಯಿಲೆಗಳನ್ನು ಗುಣಪಡಿಸುವ ಮೂಲಕ ಅವರು ವಿಶ್ವಾದ್ಯಂತ ಜನರನ್ನು ಗುಣಪಡಿಸುತ್ತಾರೆ.
ಜ್ಞಾನಿಯಾದ ವೃದ್ಧ ಜೆನ್ ಗುರುವೊಬ್ಬ, ಕಾಡಿನ ಒಂದು ಗುಡಿಸಿಲಿನಲ್ಲಿ ತನ್ನಷ್ಟಕ್ಕೆ ವಾಸಿಸುತ್ತಿದ್ದ.
ಒಂದು ಉರಿ ಬೇಸಿಗೆಯ ದಿನ, ದಾರಿಹೋಕನೊಬ್ಬ, ಗುರುವು ತನ್ನ ಗುಡಿಸಿಲಿನ ಹೊರಗೆ ಹುಲ ಕಿತ್ತುತ್ತಿರುವುದರಲ್ಲಿ ಮಗ್ನನಾಗಿರುವುದನ್ನು ಕಂಡ. ಬಿಸಿಲಿನ ಧಗೆಯಲ್ಲಿ ಬೆವತು ಹೋಗಿದ್ದ.
'ಗುರುವೇ, ಈ ಉರಿ ಬಿಸಿಲಿನಲ್ಲಿ ಏಕೆ ಹೊರಗೆ ಇದ್ದೀರಿ?' ಆ ಮನುಷ್ಯ ಕೇಳಿದ. 'ಏಕೆಂದರೆ ಸೂರ್ಯ ಇಲ್ಲಿದ್ದಾನೆ' ಸರಳವಾಗಿ ಉತ್ತರಿಸಿದ ಗುರು.
'ಸರಿ ಗುರುವೇ, ಸೂರ್ಯ ಇಲ್ಲಿದ್ದಾನೆ. ಆದರೆ ಈ ಬಿಸಿಯಲ್ಲೇಕೆ ನೀವು ಕೆಲಸ ಮಾಡುತ್ತೀರಿ?'
'ಏಕೆಂದರೆ ನಾನಿಲ್ಲಿದ್ದೇನೆ', ಉತ್ತರಿಸಿದ ಗುರು.
