ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation
This text was machine-transcribed from the printed book and may contain errors. Select the words and choose “Report a mistake”.

ಪರಮಹಂಸ ಶ್ರೀ ನಿತ್ಯಾನಂದ
ಧ್ಯಾನವು ನಿಮ್ಮನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ - ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾ
ತ್ಮಿಕವಾಗಿಯೂ ಕೂಡ! ಇದರ ಬೀಜವು ಈಗಾಗಲೇ ನಿಮ್ಮೊಳಗಿದ್ದು, ಅದು ಮರವಾಗಿ ಅರಳಿ ಬೆಳೆಯಲು,
ಮೊದಲು ಒಡೆಯಬೇಕು.
ಧ್ಯಾನವು ಪುನರ್ಜನ್ಮಕ್ಕಿಂತಲೂ ಕಡಿಮೆಯಾದುದೇನಲ್ಲ, ಸಾವನ್ನು ಎದುರಿಸಲು - ನಿಮ್ಮ ಸ್ವಂತದ ಸಾವನ್ನು -
ಹಾಗೂ ಸಂಪೂರ್ಣ ಹೊಸದಾಗಿ ಪುನರ್ಜನ್ಮ ತಳೆಯಲು ನೀವು ಧೈರ್ಯವನ್ನು ಗಳಿಸಬೇಕಾಗುತ್ತದೆ!
- ಸ್ವಾಮೀಜಿ
ಧ್ಯಾನವನ್ನು ಪ್ರತಿಯೊಬ್ಬರೂ ಕಲಿಯಬಹುದೇ?
ನೀವು ಧ್ಯಾನವನ್ನು ನಿಜಕ್ಕೂ ಕಲಿಯಬೇಕಾಗಿಲ್ಲ.
ನೀವು ಈಗಾಗಲೇ ಓರ್ವ ಧ್ಯಾನಿಯಾಗಿದ್ದೀರಿ!
ಪರಮ ಸೌಂದರ್ಯವನ್ನು ನೀವು ನಿಮ್ಮ ಜೀವನದಲ್ಲಿ ಅನುಭವಿಸಿದ ಯಾವುದೇ ಕ್ಷಣವನ್ನು ನೆನೆಸಿಕೊಳ್ಳಿರಿ, ಪರ್ವತವೊಂದರ ಹಿಂದಿನಿಂದ ತಕ್ಷಣದಲ್ಲಿ
ಸೂರ್ಯ ಉದಯಿಸುವುದು, ಅಥವಾ ಸಂಗೀತವೊಂದನ್ನು ಆಲಿಸಿ ಅನಿರ್ವಚನೀಯ ಆನಂದವನ್ನು ನೀವು ಮೊದಲ ಬಾರಿಗೆ ಅನುಭವಿಸಿದಾಗ.
ಈ ಬಗೆಯ ಕ್ಷಣಗಳಲ್ಲಿ ನೀವು ತಕ್ಷಣದಲ್ಲಿ ನಿಶ್ಚಲಗೊಳ್ಳುತ್ತೀರಿ.
ಮಾತಲ್ಲದವರಾಗುತ್ತೀರಿ. ಸಂಪೂರ್ಣ ಅರಿವಿದ್ದುಕೊಂಡೇ.
ನಾವೆಲ್ಲ ಈ ಬಗೆಯ ಕ್ಷಣಗಳನ್ನು ಅನುಭವಿಸಿಲ್ಲವೇ?
ಈ ಕ್ಷಣವೇ ಧ್ಯಾನ.
ಕೆಲವು ಕ್ಷಣಗಳ ಬಳಿಕ ನಿಮ್ಮ ಅಂತಃಶ್ಚೇತನವು ಪುನಃ ಆರಂಭವಾಗುತ್ತದೆ.
ನಿಮ್ಮ ಮನಸ್ಸು ಮಾತನಾಡುತ್ತದೆ, ಅದೊಂದು ಸುಂದರ ಸೂರ್ಯೋದಯ,
ನಿಮ್ಮ ಮನಸ್ಸು ಆ ಸಂಗೀತವನ್ನು ನೀವು ಆಲಿಸಿದ ಉಳಿದ ಸಂಗೀತಗಳೊಂದಿಗೆ ಹೋಲಿಸಲು ಆರಂಭಿಸುತ್ತದೆ.
ಅಂದರೆ, ನೀವು ಧ್ಯಾನದಿಂದ ಹೊರಬಿದ್ದಿರುತ್ತೀರಿ.
ಧ್ಯಾನವೆಂದರೆ ಪುನಃ ಗಳಿಸಿ, ಆ ಶಾಂತ ಮತ್ತು ಆನಂದದ ಸ್ಥಿತಿಯಲ್ಲಿ ಉಳಿಯುವುದಲ್ಲದೆ ಬೇರೇನೂ ಅಲ್ಲ.
Ebook ISBN: 979-8-88572-092-2
ನಿತ್ಯಾನಂದ ಫೌಂಡೇಶನ್
928, ಹಂಟಿಂಗ್ಟನ್ ಡ್ರೈವ್, ಡ್ಯೂಯಾರ್ಟ್, ಸಿವಿ 91010, ಅಮೆರಿಕ, ಟೆಲಿಫೋನ್ ನಂಬರ್: 1-626-205-3286 ಅಥವಾ 1-206-225-4146.
ಇಂಡಿಯಾ ಆಶ್ರಮ: ಧ್ಯಾನಪೀಠಂ, ನಿತ್ಯಾನಂದಪುರಿ, ಕಲ್ಲೊಗೋಪಹಳ್ಳಿ,
ಮೈಸೂರು ರಸ್ತೆಯ ಆಚೆ, ಬಿಡದಿ - 562 109, ಬೆಂಗಳೂರು ಜಿಲ್ಲೆ, ಕರ್ನಾಟಕ, ಇಂಡಿಯಾ.
ಆಶ್ರಮ 91-80-56691 844, ಫ್ಯಾಕ್ಸ್: 91-80-7288207.
ಇಮೇಲ್: [email protected]. ಯುಆರ್‌ಎಲ್: www.nithyananda.org
ಧ್ಯಾನ ಇರುವುದು ನಿಮಗಾಗಿ
ಪರಮಹಂಸ ಶ್ರೀ ನಿತ್ಯಾನಂದ
NITHYANANDA
FOUNDATION
