KAILASA Library/ಕರ್ಮ/ಪ್ರಜ್ಞಾವಂತರಾಗಿ ಬಾಳಿರಿ, ಕರ್ಮದಿಂದ ಪಾರಾಗಿSign in
ಕರ್ಮ

ಪ್ರಜ್ಞಾವಂತರಾಗಿ ಬಾಳಿರಿ, ಕರ್ಮದಿಂದ ಪಾರಾಗಿ

This text was machine-transcribed from the printed book and may contain errors. Select the words and choose “Report a mistake”.

ಒಬ್ಬ ಹುಡುಗಿ ಮರದ ಬಳಿ ನಿಂತಿರುವುದು

ಪ್ರತಿ ಕ್ಷಣದ ನಮ್ಮ ತೀರ್ಮಾನಗಳನ್ನೂ ಬಹುಶಃ ಪ್ರಜ್ಞೆ ಇಲ್ಲದೆಯೇ ತೆಗೆದುಕೊಳ್ಳುತ್ತಿರುವುದೇ ಸಮಸ್ಯೆ. ಒಂದು ದಿನದಲ್ಲಿ ಸಾವಿರಗಟ್ಟಲೆ ತೀರ್ಮಾನಗಳನ್ನು ಮೈಮರೆತುಕೊಂಡೇ ತೆಗೆದುಕೊಳ್ಳುತ್ತೇವೆ. ಯೋಚಿಸುವುದಾಗಲೀ, ಮಾತನಾಡುವುದಾಗಲೀ, ಏನನ್ನೇ ಮಾಡು ವುದೇ ಆಗಲಿ, ಅರಿವಿಲ್ಲದೆಯೇ ಅಪ್ರಯತ್ನ ವಾಗಿ ಮಾಡುತ್ತೇವೆ.

ನಮ್ಮ ಜೀವನದ ಅನೇಕ ಆಗುಹೋಗುಗಳ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಕಲ್ಪಿಸಲಾಗದಿರುವುದೇ ಇದಕ್ಕೆ ಕಾರಣ. ಯಾವಾಗಲೂ ನಮಗೇನೋ ಆಗಬಾರದ್ದು ಆಗಿದೆ ಎಂದುಕೊಳ್ಳುತ್ತೇವೆ. ಈ ಪರಿಣಾಮಗಳಿಗೆ ನಾವೇ ಕಾರಣವೆಂಬುದನ್ನು ಹಾಯಾಗಿ ಮರೆತಿದ್ದೇವೆ. ಪ್ರಜ್ಞಾಹೀನ ಜೀವನದಿಂದ ನಾವೇ ಹಾಗಾಗುವಂತೆ ಮಾಡಿಕೊಂಡು, ಇನ್ನೂ ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳುವುದರಲ್ಲಿ ಪರ್ಯವಸಾನಗೊಳ್ಳುತ್ತೇವೆ.

ನಿಮ್ಮ ಆಲೋಚನಾಪರತೆಗೆ ಹೆಚ್ಚು ಅರಿವನ್ನೂ ಬುದ್ಧಿಯನ್ನೂ ಪ್ರವಹಿಸಿರಿ. ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಹೆಚ್ಚಾಗಿ ಚೈತನ್ಯವನ್ನು ಪ್ರವಹಿಸಿರಿ. ನೀವದನ್ನು ನಂಬುತ್ತೀರೋ ಇಲ್ಲವೋ ನೇರವಾಗಿಯಾದರೂ, ಸುತ್ತುಬಳಸಿ ಯಾದರೂ, ನಿಮ್ಮ ಜೀವನದ ಎಲ್ಲವನ್ನೂ ನೀವೇ ಆಯ್ದುಕೊಳ್ಳುತ್ತಿದ್ದೀರಿ. ನಿಮ್ಮ ಜೀವನದಲ್ಲಿ ಬೇರೆ ಯಾರೂ ನಿಮಗಾಗಿ ಆಯ್ಕೆಮಾಡುವುದಿಲ್ಲ, ನೀವೇ ಆಯ್ಕೆ ಮಾಡುವುದು. ಸತತವಾಗಿ ಅದು ನಿಮ್ಮದೇ ಆಯ್ಕೆ ಮತ್ತು ನಿಮ್ಮದೇ ನಿರ್ಧಾರ. ನಿಮ್ಮ ಜೀವನವನ್ನು ಬೇರೆಯಾರೋ ನಿರ್ಧರಿಸುವರೆಂದು ನಿಮಗನಿಸಬಹುದು. ಇಲ್ಲ! ಅದನ್ನು ಯಾವಾಗಲೂ ನೀವೇ ನಿರ್ಧರಿಸುವುದು.

ಒಂದು ಚಿಕ್ಕ ಉದಾಹರಣೆಯು ಈ ಮೂಲಭೂತ ಸತ್ಯವನ್ನು ಅರಿಯುವಂತೆ ಮಾಡುತ್ತದೆ.

ಯಾರಾದರೂ ನಿಮ್ಮನ್ನು ಆಕ್ಷೇಪಿಸಿದರೆ ನೊಂದುಕೊಳ್ಳುವಿರಿ. ಯಾರಾದರೂ ಹೊಗಳಿದರೆ ಉಬ್ಬಿಹೋಗುವಿರಿ. ನಿಮ್ಮ ಅಭ್ಯಾಸಬಲದಿಂದ ನೀವು ಈ ರೀತಿ ಅಪ್ರಯತ್ನವಾಗಿ ಸ್ಪಂದಿಸುತ್ತೀರಿ. ನಿಮಗಿದನ್ನು ಬೇರೆ ಯಾರಾದರೂ ಹೇಳಿ ಕೊಟ್ಟರೆ? ಇಲ್ಲ! ಅದು ನೀವಾಗಿಯೇ ಆರಿಸಿಕೊಂಡದ್ದು, ಅದು ಅಭ್ಯಾಸವಾಗಿ ಹೋಗಿರುವುದರಿಂದ ನೀವೇ ಆರಿಸಿಕೊಂಡದ್ದೆಂಬುದನ್ನು ಮರೆತಿದ್ದೀರಿ. ಯಾರಿಂದಲಾದರೂ ಆಕ್ಷೇಪಣೆಗೊಳಗಾದಾಗಲೆಲ್ಲವೂ ಕುಗ್ಗಿಹೋಗುವುದನ್ನು ನೀವೇ ಆರಿಸಿಕೊಳ್ಳುವಿರಿ. ಯಾರಾದರೂ ನಿಮ್ಮನ್ನು ಹೊಗಳಿದಾಗಲೆಲ್ಲವೂ ಉಬ್ಬಿಹೋಗುವುದನ್ನೂ ನೀವೇ ಆರಿಸಿಕೊಳ್ಳುವುದು. ನೀವು ಬೇರೆ ರೀತಿಯಲ್ಲಿ ಸ್ಪಂದಿಸಬಹುದೆಂಬುದನ್ನು ತಿಳಿದುಕೊಳ್ಳಿರಿ. ಉದಾಹರಣೆಗೆ, ಯಾರಾದರೂ ಆಕ್ಷೇಪಿಸಿದಾಗ, ಕುಗ್ಗಿಹೋಗದೇ ಇರುವುದನ್ನು ಆಯ್ದುಕೊಳ್ಳಲು ಸಾಧ್ಯ. ಶಾಂತ ವಾಗಿಯೂ, ಆರಾಮವಾಗಿಯೂ ಹಾಗೂ ಸ್ಥಿಮಿತವಾಗಿಯೂ ಇರುವುದನ್ನು ಆಯ್ದುಕೊಳ್ಳಲು ಸಾಧ್ಯ. ನೊಂದುಕೊಳ್ಳುವುದು ನಿಮ್ಮದೇ ಆಯ್ಕೆ. ನಿಮ್ಮನ್ನೇ ನೀವು ನಿಯಂತ್ರಿಸಿಕೊಳ್ಳುವ ಪ್ರಯತ್ನದಲ್ಲಿ ಮುಜುಗರ ಮಾಡಿಕೊಳ್ಳುವಿರಿ.

ನಿಮ್ಮ ಜನ್ಮವು ನಿಮ್ಮ ಆಯ್ಕೆಯೆಂದು ತಿಳಿಯುವವರೆವಿಗೂ ನಿಮ್ಮ ಜೀವನವು ಒಂದು ರೀತಿಯ ಪಾಶ್ವ್ರವಾಯುವಿನಂತೆ-ಸರಾಗವಾದ ಪರಿಚಲನೆ ಇರುವುದಿಲ್ಲ. ಜೀವನದ ಎಲ್ಲವೂ ನಿಮ್ಮದೇ ಆಯ್ಕೆ ಎಂದು ತಿಳಿದಾಗ ಮಾತ್ರವೇ ಸರಾಗವಾದ ಸಂಚಲನೆಯಾಗುವುದು.

ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ನಮ್ಮ ಜನ್ಮವು ಹೇಗಾಗುತ್ತದೆ? ನಮ್ಮ ಹುಟ್ಟು ಮತ್ತು ಬಾಳನ್ನು ನಿರ್ಧರಿಸುವವರಾರು?' ಎಂದು. ನಿಮ್ಮ ಹುಟ್ಟು, ಬಾಳು ಮತ್ತು ಮುಂದಿನ ಜನ್ಮವನ್ನೂ ಸಹ ನೀವೇ ನಿರ್ಧರಿಸುವುದೆಂದು ನಾನು ಹೇಳುತ್ತೇನೆ. ಮುಂದಿನ ಜನ್ಮದ ದೇಹವನ್ನೂ ಸಹ ನೀವೇ ನಿರ್ಧರಿಸುವವರು.

ಈ ಮನೋಭಾವಗಳನ್ನಿಟ್ಟುಕೊಂಡು, ಸಂಪೂರ್ಣ ಅರಿವಿನಿಂದ ಆಲೋಚಿಸಿ, ನುಡಿದು ಮತ್ತು ವರ್ತಿಸಿದರೆ, ಆಗ ಈ ಜನ್ಮದಲ್ಲಿ ಈಗಾಗಲೇ ಇರುವ ಏನೇ ಕರ್ಮವನ್ನು ತೀರಿಸಿಕೊಳ್ಳಲು ಏನು ಮಾಡಬೇಕೋ ಅಷ್ಟನ್ನು ಮಾತ್ರ ಮಾಡುವಿರಿ. ಹೊಸ ಕರ್ಮವನ್ನು ಸೃಷ್ಟಿಸಿಕೊಳ್ಳುವುದಿಲ್ಲ. ಕರ್ಮದ ಬಗ್ಗೆ ಮಾತನಾಡುವಾಗ, ಹೊಸ ಕರ್ಮವನ್ನು ಹೊಸಿದುಕೊಳ್ಳದೇ ಇರಲು ಸೋಮಾರಿಗಳಾಗಬೇಕೆಂದುಕೊಳ್ಳುತ್ತಾರೆ. ಆಧ್ಯಾತ್ಮಿಕತೆಯು ಕರ್ಮಫಲತ್ಯಾಗ ವನ್ನು ಕುರಿತದ್ದು. ಕಾರ್ಯ ಮಾಡಿದುದರ ಫಲವನ್ನು ತ್ಯಜಿಸುವುದು- ಕರ್ಮದ ತ್ಯಾಗವನ್ನಲ್ಲ- ಕಾರ್ಯವನ್ನೇ ಮಾಡದಿರುವುದನ್ನಲ್ಲ.

ಕಾರ್ಯಗಳ ಫಲಗಳನ್ನು ತ್ಯಜಿಸಬೇಕು, ಕಾರ್ಯವನ್ನೇ ಅಲ್ಲ; ಇದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಕಾರ್ಯದಲ್ಲಿ ಮುಳುಗಿಹೋಗಲು ಸಿದ್ಧರಾಗಿರಬೇಕೇ ವಿನಃ ಹೊಸ ಕರ್ಮವನ್ನು ಗಂಟುಹಾಕಿಕೊಳ್ಳಬಾರದು. ಅದನ್ನೇ ಆಧ್ಯಾತ್ಮಿಕತೆ ಎಂದು ಕರೆಯುವುದು. ಭೌತಿಕ ಪ್ರಪಂಚದಲ್ಲಿ ಪೂರ್ತಿಯಾಗಿ ತೊಡಗಿಕೊಂಡಿದ್ದರೂ ಅದರ ಲೇಪವಿಲ್ಲದೆ ಪ್ರತಿ ನಿಮಿಷವೂ ಆಂತರ್ಯದ ಸಂತೃಪ್ತಿಯಿಂದಿರುವುದಕ್ಕೆ ಸಿದ್ಧರಾಗಿರಬೇಕು.