ಕರ್ಮದ ಬಗ್ಗೆ ತಪ್ಪು ಕಲ್ಪನೆಗಳು
This text was machine-transcribed from the printed book and may contain errors. Select the words and choose “Report a mistake”.
ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕರ್ಮವನ್ನು ತೀರಿಸಿಕೊಳ್ಳ ಬಹುದೆಂದು ಕೆಲವರೆಂದುಕೊಳ್ಳುತ್ತಾರೆ.
ಇಲ್ಲ ಸಾಧ್ಯವಿಲ್ಲ. ಕರ್ಮವನ್ನು ಆಳವಾದ ತಿಳುವಳಿಕೆಯಿಂದ, ಅರಿವಿನಿಂದ ಹಾಗೂ ಏನಿಲ್ಲವೆಂದರೂ ಪ್ರಜ್ಞೆಯ ಒಂದೇ ಒಂದು ಇಣುಕುನೋಟದಿಂದ ಮಾತ್ರವೇ ತೀರಿಸಿಕೊಳ್ಳಲು ಸಾಧ್ಯ. ಮನುಕುಲವೆಲ್ಲವೂ ಪ್ರತಿಫಲಾಪೇಕ್ಷೆಯ ಸುಳಿಯಲ್ಲಿ ಸಿಲುಕಿದೆ. ಇದು ಸೇವೆಗೂ ವ್ಯಾಪಿಸಿದೆ! ಸೇವೆಯಲ್ಲಾದರೂ ಡಾಲರುಗಳನ್ನೋ ಪ್ರಖ್ಯಾತಿಯನ್ನೋ ಇಚ್ಛಿಸಬೇಡಿರಿ. ಪ್ರಭಾವ ಬೀರೋಣವೆಂಬ ಯೋಜನೆಯನ್ನು ಹಾಕಬೇಡಿರಿ. ನಿಮ್ಮ ಇರುವಿಕೆಯನ್ನು ಗೊತ್ತಾಗುವಂತೆ ಮಾಡುವ ಯೋಜನೆಯೂ ಬೇಡ. ಕೆಲಸವನ್ನು ಕೆಲಸಕ್ಕಾಗಿಯೇ ಮಾಡಿರಿ. ಯಾವುದಕ್ಕೂ ಯೋಜನೆಯೇ ಬೇಡ. ಎಲ್ಲೆಂದರಲ್ಲಿ ಯಾವುದೆಂದರೆ ಆ ಸೇವೆಯನ್ನು ಮಾಡಿಬಿಡಿ. ಇಂತಹ ಸೇವೆಯು ನಿಮ್ಮ ವ್ಯಕ್ತಿತ್ವಕ್ಕೆ ಅಪರಿಮಿತ ಶಕ್ತಿಯನ್ನು ನೀಡುತ್ತದೆ. ದಿನಕ್ಕೆ ಒಂದರ್ಧಗಂಟೆಯಾದರೂ ಯಾವ ಪ್ರತಿಫಲಾಪೇಕ್ಷೆಯ ಕಡೆಗೂ ಗಮನವನ್ನು ಹಾಯಿಸದೆಯೇ ನಿಸ್ವಾರ್ಥಸೇವೆಯನ್ನು ಮಾಡಿರಿ. ಈ ಸೇವೆಯೇ ನಿಮ್ಮ ಧ್ಯಾನವಾಗುವುದು. ಇದು ನಿಮ್ಮಲ್ಲಿ ಸಂಪ್ರಜ್ಞೆಯ ಚೈತನ್ಯವನ್ನುಂಟುಮಾಡಿ, ಸೇವೆಯಲ್ಲಡಗಿರುವ ದೈವತ್ವವನ್ನರಿಯುವ ಮಾರ್ಗವಾಗುತ್ತದೆ.
ನಿಸ್ವಾರ್ಥಸೇವೆಯನ್ನು ಮಾಡುತ್ತಿರುವಾಗಲೂ ಸಹ ನಮ್ಮ ಕಾರ್ಯಗಳ ಪರಿಣಾಮಗಳಿಗೆ ಬಂಧಿತರಾಗದಂತೆ ಎಚ್ಚರವಹಿಸಬೇಕು. ಧಾರ್ಮಿಕ ಸೇವೆಯನ್ನು ಮಾಡುವ ಬಹುಶಃ ಎಲ್ಲರೂ ಸುಮ್ಮನಿರಲಾಗದೆಯೋ ಅಥವಾ ಜೀವನ್ಮರಣ ಚಕ್ರದಲ್ಲಿ ಸೇವೆಯು ಲಾಭಾಂಶವನ್ನು ಹೆಚ್ಚಿಸುವುದೆಂದು ಚಿಕ್ಕಂದಿ ನಿಂದಲೂ ಕಲಿತಿರುವುದರಿಂದಲೋ, ಮಾಡುತ್ತಾರೆ. ಪುನರ್ಜನ್ಮವನ್ನು ನಂಬು ತ್ತೇವೆಯೋ ಇಲ್ಲವೋ, ಮರಣಾನಂತರದಲ್ಲಿ ಒಳ್ಳೆಯದಾಗುತ್ತದೆ ಎಂಬ ಆಧಾರದ ಮೇಲೆ ಧಾರ್ಮಿಕ ಕಾರ್ಯಗಳನ್ನು ಮಾಡುತ್ತೇವೆ. ಪತ್ರಿಕೆಯಲ್ಲಿ ನಮ್ಮ ಚಿತ್ರವನ್ನು ಛಾಪಿಸಿದಾಗಲೋ, ಟಿ.ವಿ.ಯಲ್ಲಿ ನಮ್ಮ ಚಿತ್ರವನ್ನು ತೋರಿಸಿದಾಗಲೋ ಸಂತೋಷಪಡಲಿಚ್ಛಿಸುತ್ತೇವೆ. ಅದು ಈ ಜಗತ್ತಿನಲ್ಲಿ ಅಥವಾ ಮರಣಾನಂತರದ ಇನ್ನೊಂದು ಜಗತ್ತಿನಲ್ಲಿ ಗಮನ ಸೆಳೆಸಿಕೊಳ್ಳುವ ಅವಶ್ಯಕತೆಯ ಪೂರೈಕೆ ಯಾಗಿರುತ್ತದೆ.
ಜನರು ಕೆಲವು ಸಲ ಕೇಳುತ್ತಾರೆ, ‘ನಿಮ್ಮನ್ನುಳಿದು, ಪ್ರಪಂಚವೆಲ್ಲವೂ ಕಷ್ಟದಲ್ಲಿರುವಾಗ ಧ್ಯಾನ ಮಾಡುವುದರಲ್ಲೇನಿದೆ? ಧ್ಯಾನಮಾಡುವ ಬದಲು ಏನಾದರೂ ಸೇವೆಯನ್ನು ಮಾಡಬಹುದಲ್ಲಾ?’ ಎಂದು. ಉಳಿದ ಮಾನವತೆಯ ಕಷ್ಟಗಳನ್ನು ಪ್ರಾಮಾಣಿಕವಾಗಿ ಅರಿತು, ಅವರ ಮೇಲಿನ ಅನುಕಂಪದಿಂದ ಅವರ ಕಷ್ಟ ನಿವಾರಣೆಗಾಗಿ ದುಡಿದರೆ, ಬಹಳ ಒಳ್ಳೆಯದು. ಆದರೆ ಇಂತಹ ಅನುಕಂಪವನ್ನನುಭವಿಸಲು ವ್ಯಾಪಕವಾದ ಪ್ರಜ್ಞೆ ಇರಬೇಕು. ಅಷ್ಟೇ ಅಲ್ಲ, ಮನುಕುಲಕ್ಕೆ ನೀವು ಮಾಡಬಹುದಾದ ಮಹತ್ತಾದ ಸೇವೆ ಎಂದರೆ ನೀವೇ ದೇವ-ಮಾನವರಾಗುವುದು. ಅದಕ್ಕೆ ಧ್ಯಾನವೇ ಮೊದಲ ಹೆಜ್ಜೆ.
ಪಾಪ ಮಾಡಿದರೆ ನರಕಕ್ಕೂ, ಪುಣ್ಯಮಾಡಿದರೆ ಸ್ವರ್ಗಕ್ಕೂ ಹೋಗುವಿರೆಂದು ನಿಮಗೆ ಹೇಳಲಾಗಿರುವುದೇ ಸಮಸ್ಯೆ. ನಿಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಲು
ಸಮಾಜವು ಈ ಕಲ್ಪನೆಗಳನ್ನುಪಯೋಗಿಸುತ್ತದೆ. ಈ ಚಿಂತನಾರೂಪಗಳ ಸಹಾಯ ದಿಂದಲೇ ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ಅದು ಪ್ರಯತ್ನಿಸುವುದು. ಅದು ನಿಮ್ಮನ್ನು ನರಕದ ಭಯ ಮತ್ತು ಸ್ವರ್ಗದ ದುರಾಸೆಗಳ ಮೂಲಕ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತದೆ.
ನೀವು ಮಾಡಿದ ಒಳ್ಳೆಯ ಕಾರ್ಯಗಳಾಗಲಿ, ಕೆಟ್ಟ ಕಾರ್ಯಗಳಾಗಲಿ ನಿಮ್ಮ ಮರಣದ ಸಮಯದಲ್ಲಿ ನಿಮಗೆ ಆಸರೆಯಾಗುವುದಿಲ್ಲವೆಂಬುದನ್ನು ತಿಳಿಯಿರಿ. ಸ್ವರ್ಗವೆಂಬುದಾಗಲೀ ನರಕವೆಂಬುದಾಗಲೀ ಇಲ್ಲ, ಸ್ವರ್ಗ, ನರಕಗಳೆರಡೂ ನಿಮ್ಮ ಮನಃಸ್ಥಿತಿಗಳೇ ವಿನಃ ಭಗವಂತನ ತಾಣದಲ್ಲೆಲ್ಲೋ ಇರುವ ಸ್ಥಳಗಳಲ್ಲ.
ನೀವು ಒಳ್ಳೆಯ ಆಲೋಚನೆಗಳನ್ನು ಮಾಡಿದಾಗಲೂ, ಒಳ್ಳೆಯ ಕಾರ್ಯ ಗಳನ್ನೂ ಮಾಡಿದಾಗಲೂ ನಿಮಗೆ ಹಿತವೆನಿಸುತ್ತದೆ, ಆಗ ನೀವು ಸ್ವರ್ಗದಲ್ಲಿ ರುತ್ತೀರಿ. ನೀವು ದುರಾಲೋಚನೆಗಳನ್ನು ಮಾಡಿದಾಗಲೂ, ದುಷ್ಕರ್ಮಗಳನ್ನು ಮಾಡಿದಾಗಲೂ ನಿಮಗೆ ಕೆಡುಕೆನಿಸುತ್ತದೆ, ಆಗ ನೀವು ನರಕದಲ್ಲಿರುತ್ತೀರಿ, ಅಷ್ಟೇ. ಕರ್ಮಕ್ಕೆ ಇರುವುದೆಲ್ಲಾ ಅದೇ. ಇದು ವಿಶ್ವದ ಕಾರ್ಯ ಮತ್ತು ಕಾರಣ ಸಿದ್ಧಾಂತ. ನಿಮ್ಮ ಉದ್ದೇಶವೇನೋ ಅದೇ ನೀವಾಗಿರುವುದು. ನಿಮ್ಮ ಉದ್ದೇಶವೇ ನೀವಾಗುತ್ತೀರಿ. ಆಳವಾದ ಅರಿವಿನಿಂದಲ್ಲದೆ, ತೋರಿಕೆಯ ಸ್ತರದಿಂದ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕಾರ್ಯಗಳನ್ನು ಮಾಡಿದರೆ, ಆ ತೋರಿಕೆಯ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕಾರ್ಯಗಳನ್ನು ನೆರವೇರಿಸಿಕೊಳ್ಳಲು ಕರ್ಮಗಳನ್ನು ಸೃಷ್ಟಿಸಿಕೊಳ್ಳುವಿರಿ.
ದೇವರುಗಳು ಮತ್ತು ಆತ್ಮ ಸಾಕ್ಷಾತ್ಕಾರ ಹೊಂದಿದ ಗುರುಗಳು-ಕರ್ಮ ನಿವಾರಣೆಗೆ ನಿಮ್ಮ ಮಾರ್ಗ

ಕರ್ಮಗಳನ್ನು ಕೂಡಿಟ್ಟುಕೊಳ್ಳದೆಯೇ, ಹಿಂದೆ ಮಾಡಿದ ಕರ್ಮಗಳ ಪ್ರಭಾವ ವಿಲ್ಲದಂತೆ ಜೀವಿಸುವುದನ್ನು ಮತ್ತೆಮತ್ತೆ ಮನಸ್ಸಿಗೆ ತಂದುಕೊಳ್ಳಲು ಒಂದು ಮಾರ್ಗವಿದೆ. ಉನ್ನತವಾದ ಪ್ರಜ್ಞೆಯ ಸಾನಿಧ್ಯದಲ್ಲಿ ಕರ್ಮವು ಶಕ್ತಿಹೀನ ವಾಗುತ್ತದೆ. ಒಮ್ಮೆ ಇದು ಅರ್ಥವಾಯಿ ತೆಂದರೆ, ನಾವು ಮಾಡುವ ಕೇವಲ ದೈನಂದಿನ ದೇವತಾಕಾರ್ಯಗಳೇ ಕರ್ಮವನ್ನು ತೊಡೆದು ಹಾಕಲು ಸಾಧ್ಯ. ಹೇಗೆಂದು ನೋಡೋಣ.
ಜನಸಾಮಾನ್ಯರಿಗೂ ಜ್ಞಾನಿಗಳಾದ ಗುರುಗಳಿಗೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಸಾಮಾನ್ಯ ಮನುಷ್ಯನು ತನ್ನಿಚ್ಛೆಯಿಂದ ತನ್ನ ದೇಹವನ್ನು ಸಜೀವವಾಗಿಟ್ಟುಕೊಳ್ಳಲಾರನು. ಆತನ ದೇಹವು ಸಜೀವವಾಗಿಯೋ ಅಥವಾ ನಿರ್ಜೀವವಾಗಿಯೋ ಇರುತ್ತದೆ. ಅಷ್ಟೆ, ಅದು ಆತನ ಕೈಯಲ್ಲಿರುವುದಿಲ್ಲ. ಆದರೆ ಒಬ್ಬ ಜ್ಞಾನಿಗೆ ಅದು ಆತನ ಕೈಯಲ್ಲಿರುತ್ತದೆ. ಆತನು ತನ್ನ ದೇಹವನ್ನು ಸಜೀವಗೊಳಿಸಬಲ್ಲ, ಅಥವಾ ಸಡಿಲಬಿಡಬಲ್ಲ. ಈ ಸಾಮರ್ಥ್ಯದಿಂದಾಗಿ, ಆತನು ಬೇರೊಂದು ದೇಹವನ್ನು ಸಹ ಸಜೀವವಾಗಿಸಬಲ್ಲನು! ಆತನು ಒಂದು ಶಿಲೆಯನ್ನಾಗಲೀ, ಲೋಹವನ್ನಾಗಲೀ, ಸಜೀವಗೊಳಿಸಬೇಕೆಂದುಕೊಂಡಾಗ, ಆ ಶಿಲೆಯಾಗಲೀ, ಲೋಹವಾಗಲೀ ಆತನ ಪ್ರತಿರೂಪವೇ ಆಗಿಬಿಡುತ್ತದೆ.
ನಮ್ಮ ಸುಪ್ರಸಿದ್ಧವಾದ ಸಾಂಪ್ರದಾಯಿಕ ದೇವಾಲಯಗಳೆಲ್ಲವೂ ಆತ್ಮಜ್ಞಾನಿಗಳಾದ ಗುರುಗಳಿಂದ ಚೈತನಪೂರ್ಣವಾದುವುಗಳು. ತಿರುವಣ್ಣಾಮಲೆಯ ಅರುಣಗಿರಿ ಯೋಗೀಶ್ವರರು, ಚಿದಂಬರಂನ ಪತಂಜಲಿಯವರು, ತಂಜಾವೂರಿನ ಕರೂರರು, ತಿರುಪತಿಯ ಕೊಂಗನವರು ಮತ್ತು ಮಧುರೆಯ ಮೀನಾಕ್ಷಿ ಇವರುಗಳು ಈ ಕೆಲವು ದೇವಾಲಯಗಳ ಮೂರ್ತಿಗಳಿಗೆ ಚೈತನ್ಯವನ್ನು ತುಂಬಿದ್ದಾರೆ. ಆದುದರಿಂದಲೇ ದೇವತಾಮೂರ್ತಿಗಳನ್ನು ಆತ್ಮಜ್ಞಾನಿಗಳಾದ ಗುರುಗಳ ದೇಹವೆಂದೇ ಪರಿಗಣಿಸುತ್ತಾರೆ. ಗುರುಗಳು ತಮ್ಮ ಶರೀರವನ್ನು ತ್ಯಾಗಮಾಡಿದ ನಂತರವೂ ಶಿಷ್ಯರು ಮೂರ್ತಿಗಳಿಗೆ ಸೇವೆ ಸಲ್ಲಿಸುತ್ತಾ ಇರುತ್ತಾರೆ. ದೇವತಾ ಮೂರ್ತಿಗಳೇ ಆತ್ಮಜ್ಞಾನ ಹೊಂದಿದ ಗುರುಗಳೆಂದು ಪರಿಗಣಿಸುತ್ತಾರೆ. ಗುರುಗಳು ದೇಹತ್ಯಾಗ ಮಾಡಿದ ನಂತರ ಶಿಷ್ಯರು ವಿಗ್ರಹಾರಾಧನೆಯನ್ನು ಮುಂದುವರೆಸುತ್ತಾರೆ. ದೇವತಾಮೂರ್ತಿಯ ದೇಹವನ್ನು ಗುರುಗಳ ದೇಹವೆಂದೇ ಪರಿಗಣಿಸುತ್ತಾರೆ. ಸಾಕ್ಷಾತ್ಕಾರ ಹೊಂದಿದ ಗುರುಗಳಿಗೆ ಅರ್ಪಿಸುವ ಗೌರವವನ್ನೇ ದೇವತಾಮೂರ್ತಿಗಳಿಗೂ ಅರ್ಪಿಸುವ ಕಾರಣವೂ ಸಹ ಇದೇ ಆಗಿದೆ.
ಉದಾಹರಣೆಗೆ, ಅರುಣಗಿರಿ ಯೋಗೀಶ್ವರರಿಂದ ದೀಕ್ಷೆಪಡೆದ ಶಿಷ್ಯರೆಲ್ಲರೂ ಅರುಣಾಚಲೇಶ್ವರನ್ನು ತಲೆಮಾರುಗಳಿಂದಲೂ ಆರಾಧಿಸುತ್ತಾರೆ. ಗುರುಗಳಿಗೆ ಅರ್ಪಿಸುವುದೆಲ್ಲವನ್ನೂ ಆರಾಧ್ಯದೇವತೆಗೂ ಅರ್ಪಿಸುವುದನ್ನು ನೋಡ ಬಹುದು.
ಗುರುಗಳು ದೇಹತ್ಯಾಗಮಾಡಿದ ನಂತರವೂ ತಾವು ಚೈತನ್ಯಗೊಳಿಸಿದ ಮೂರ್ತಿಗಳ ಮೂಲಕ ತಮ್ಮ ಶಿಷ್ಯರುಗಳಿಗೆ ದೊರಕುತ್ತಾರೆ. ಉದಾಹರಣೆಗೆ ನಾನು ಜೀವಿಸಿರುವಾಗಲೇ ಏಕಕಾಲದಲ್ಲಿ ನನ್ನ ದೈಹಿಕ ಸಾನ್ನಿಧ್ಯವು ಎಲ್ಲೆಲ್ಲಿಯೂ ದೊರಕುವುದು ಅಸಾಧ್ಯ. ಆದುದರಿಂದ, ನಾನು ದೈಹಿಕವಾಗಿ ಎಲ್ಲಿರು ವುದಿಲ್ಲವೋ ಅಲ್ಲಿ ನನ್ನ ಕಾರ್ಯಭಾರವನ್ನು ನಡೆಸಲು ಈ ದೇವತಾ ಮೂರ್ತಿಗಳನ್ನು ನಿಯೋಜಿಸಲಾಗಿದೆ. ಅವು ನನ್ನ ಪ್ರತಿನಿಧಿಗಳು !
ದೇವತಾಮೂರ್ತಿಗಳು ಪ್ರತ್ಯೇಕವಾದ ಬುದ್ಧಿಶಕ್ತಿಯನ್ನು ಹೊಂದಿರುತ್ತವೆ. ದೇವತಾಮೂರ್ತಿಗಳಿಗೆ ಚೈತನ್ಯವನ್ನು ತುಂಬುವುದು ಒಂದು ಮಹತ್ಕಾರ್ಯ. ಅದು ಒಂದು ಶಿಶುವಿಗೆ ಜನ್ಮಕೊಟ್ಟಂತೆ. ಈ ಚೈತನ್ಯಪೂರಿತ ಆರಾಧ್ಯದೈವಗಳು ನಿಮ್ಮ ಪ್ರಾರ್ಥನೆಗೆ ನೇರವಾಗಿ ಓಗೊಡುತ್ತವೆ. ನೀವು ಮುಕ್ತವಾಗಿ ಅವುಗಳೊಡನೆ ವರ್ತಿಸಿದರೆ ಅವೂ ನಿಮ್ಮೊಡನೆ ನೇರವಾಗಿ ವರ್ತಿಸುತ್ತವೆ.
ನೀವು ನಮ್ಮ ಪೂಜೆಯನ್ನೂ ಆಶ್ರಮದ ದಿನಚರಿಯನ್ನೂ ಗಮನಿಸಿದರೆ, ಪ್ರಾತಃಕಾಲದಲ್ಲಿ ಆರಾಧ್ಯದೈವವನ್ನು ಎಬ್ಬಿಸಲು ಸೂಕ್ತವಾದ ಸುಪ್ರಭಾತದ ಹಾಡನ್ನು ಕೇಳುವಿರಿ. ನಂತರ ಕೂದಲಿಗೆ ಲೇಪಿಸಲು ಒಂದು ಬಟ್ಟಲು ಎಣ್ಣೆಯನ್ನೂ ಹಲ್ಲುಜ್ಜಲು ಹಲ್ಲುಪುಡಿಯನ್ನೂ ನೀಡುತ್ತಾರೆ! ಅದಾದಮೇಲೆ ಮಂಗಳಸ್ನಾನವನ್ನು ಮಾಡಿಸಿ, ಹೊಸದಾಗಿ ಇಸ್ತ್ರಿಮಾಡಿದ ಉಡುಪನ್ನು ಗುರುಗಳಿಗೆ ಕೊಡುವಂತೆಯೇ ಕೊಡುತ್ತಾರೆ. ಆಹಾರವನ್ನು ನಿವೇದಿಸಿ ಮಂಗಳಾರತಿಯನ್ನು ಮಾಡುತ್ತಾರೆ. ದಿನಕ್ಕೆ ಐದು ಸಲ ಪೂಜೆಯನ್ನು ಮಾಡುತ್ತಾರೆ. ರಾತ್ರಿ ಆರಾಧ್ಯದೈವಕ್ಕೆ ವಿಧಿಬದ್ಧವಾಗಿ ಶಯನೋತ್ಸವವನ್ನು ಮಾಡುತ್ತಾರೆ.
ಇದೆಲ್ಲದರಿಂದ ಆರಾಧ್ಯದೈವಕ್ಕಾಗಲೀ ಗುರುಗಳಿಗಾಗಲೀ ಯಾವ ಲಾಭವೂ ಇಲ್ಲವೆಂಬುದನ್ನು ತಿಳಿಯಿರಿ. ಅದು ನಿಮಗೇ ಲಾಭ! ದೇವರೊಂದಿಗೆ ಜೀವಿಸುವುದೆಂದರೆ ಇದೇ. ದೇವರ ಸಾನ್ನಿಧ್ಯವನ್ನು ಅಭ್ಯಾಸಮಾಡುವುದೆಂದರೆ ಇದೇ. ಗುರುಗಳ ಸಾನ್ನಿಧ್ಯದ ಅಭ್ಯಾಸವೇ ಪೂಜೆ. ದೇವರ ಇರುವಿಕೆಯನ್ನು ಪ್ರತಿದಿನವೂ ಸ್ಮರಿಸುವುದಕ್ಕಾಗಿಯೇ ಪೂಜೆಯನ್ನು ಪ್ರತಿದಿನವೂ ಮಾಡುವುದು.
ನಿಮಗೆ ಒದಗಿದ ಎಲ್ಲ ಅದೃಷ್ಟಗಳನ್ನೂ ಅಥವಾ ದೀಕ್ಷೆಗಳನ್ನೂ ಎಲ್ಲ ವಾಸ್ತವಾಂಶಗಳನ್ನೂ ಕಲ್ಪನೆಗಳನ್ನೂ ಉಚ್ಚರಿಸಿದಾಗ ನಿಮ್ಮಲ್ಲಿ ಉಂಟಾದ ಬಾಂಧವ್ಯವನ್ನು ನೀವಾಗಿಯೇ ಸ್ಮರಿಸಿಕೊಳ್ಳುವುದೇ ನಿಮ್ಮ ಸಂಸ್ಕಾರ. ಅದು ಸಂಸ್ಕಾರವೆಂಬುದಾಗಿ ಹೇಗಾಗುತ್ತದೆಂದರೆ ನೀವು ಅದರಲ್ಲಿ ತೊಡಗಿದ್ದಾಗ ನೀವಾಗಿಯೇ ಉನ್ನತವಾದ ಪ್ರಜ್ಞಾಸ್ಥಿತಿಗೆ ಏರುವಿರಿ. ಕೆಲವು ನಿರ್ದಿಷ್ಟವಾದ ಪದಗಳನ್ನು ಕೇಳಿದಾಗ ಅಥವಾ ಸ್ಮರಿಸಿಕೊಂಡಾಗ ಆಗುವ ತಕ್ಷಣದ ಅರಿವನ್ನು ಕ್ಲಿಕ್ ಅಥವಾ ಕೈಗೂಡುವಿಕೆ ಎನ್ನುವುದು. ಕ್ಲಿಕ್ಗಳು ನಿಮಗೆ ದೀಕ್ಷೆಯಂತೆ. ಕ್ಲಿಕ್ಗಳನ್ನು ಸ್ಮರಿಸಿಕೊಂಡಾಗಲೆಲ್ಲವೂ ಅವು ನಿಮ್ಮನ್ನು ನಿರುತ್ಸಾಹ, ಕೀಳಿನಿಸುವ ಅಥವಾ ನಕಾರಾತ್ಮಕ ಭಾವನೆಗಳಿಂದ ಹೊರತಾಗಿಸುತ್ತವೆ.
ಯಾವಾಗಲೇ ಆಗಲಿ, ನೀವು ಕುಗ್ಗಿದಾಗ ಅಥವಾ ನಿರುತ್ಸಾಹಗೊಂಡಾಗ ಅದಕ್ಕೆ ಸರಿಯಾದ ದೀಕ್ಷೆಯನ್ನು ಸ್ಮರಿಸಿಕೊಳ್ಳುವುದೇ ನಿಮಗೆ ನೀವೇ ಮಾಡಿಕೊಳ್ಳುವ ಮಹತ್ತರವಾದ ಉಪಚಾರ. ನಿಮಗೆ ಕೊಟ್ಟ ದೀಕ್ಷೆಯನ್ನು ಸ್ಮರಿಸಿದಾಕ್ಷಣವೇ ಸಹಜವಾಗಿ ಹೀನಭಾವದಿಂದ ಹೊರಬರುವಿರಿ.