ಪೂಜಾನಿಯಮಗಳು, ಸಂಸ್ಕಾರಗಳು ಮತ್ತು ಕರ್ಮ-ಸುಂದರವಾದ ಸಂಬಂಧ
This text was machine-transcribed from the printed book and may contain errors. Select the words and choose “Report a mistake”.
ಕರ್ಮ ಮತ್ತು ಸಂಸ್ಕಾರಗಳು ಯಾವ ರೀತಿ ನೇರವಾಗಿ ಸಂಬಂಧಿಸಿವೆ ಎಂಬುದನ್ನು ನಾನೀಗ ವಿವರಿಸುತ್ತೇನೆ.
ಕರ್ಮದಲ್ಲಿ ಮೂರು ಬಗೆ. ಈ ಮೂರು ಕರ್ಮಗಳ ಬಗ್ಗೆಯೂ, ಈ ಕರ್ಮಗಳ ನಕಾರಾತ್ಮಕ ಪ್ರಭಾವವನ್ನು ಸಂಸ್ಕಾರಗಳನ್ನು ಮಾಡುವ ಮೂಲಕ ಹೇಗೆ ನಿವಾರಿಸಿಕೊಳ್ಳಬಹುದೆಂಬುದನ್ನೂ ಹೇಳುತ್ತೇನೆ. ನಾನೀಗ ಹೇಳಲಿರುವುದನ್ನು ಅರ್ಥಮಾಡಿಕೊಂಡಮಾತ್ರದಲ್ಲಿ ನೀವು ಅವುಗಳಿಂದ ಪಾರಾಗಬಹುದು.
ವೈದಿಕ ನಿಯಮಾಚರಣೆಗಳು ಬಹಳ ಪ್ರಭಾವಶಾಲೀ ಸಾಧನಗಳು. ಅವು ಪ್ರಭಾವಪೂರ್ಣವಾದ ತಂತ್ರಗಳು. ಅನೇಕರು ನನ್ನನ್ನು ಕೇಳುತ್ತಾರೆ. 'ನೀವು ಆತ್ಮಜ್ಞಾನಿಗಳು. ನೀವೇಕೆ ವೈದಿಕವಿಧಿಗಳನ್ನು ಆಚರಿಸಬೇಕು?' ಎಂದು ನಾನವರಿಗೆ ಹೇಳುತ್ತೇನೆ. 'ನಾನು ಆತ್ಮಜ್ಞಾನವನ್ನು ಪಡೆದಿರುವುದರಿಂದಲೇ ಜನರಿಗೆ ಏಕೆ ಮತ್ತು ಹೇಗೆ ವೈದಿಕವಿಧಿಗಳನ್ನು ಆಚರಿಸಬೇಕೆಂಬುದನ್ನು ಸರಿಯಾಗಿ ಹೇಳುತ್ತೇನೆ!' ಆತ್ಮಜ್ಞಾನಿಗಳಿಗೆ ತಮಗಾಗಿ ಯಾವ ಸಂಸ್ಕಾರಗಳನ್ನೂ ಮಾಡಬೇಕಾದ ಅವಶ್ಯಕತೆ ಇಲ್ಲ. ನಿಮಗೊಂದು ಸಣ್ಣ ಕಥೆಯನ್ನು ಹೇಳುತ್ತೇನೆ:
ಒಬ್ಬನು ಒಂದು ಹೋಟೆಲಿಗೆ ಹೋಗಿ ಇಡ್ಲಿಗಳನ್ನು ತಿನ್ನಲು ಮೊದಲು ಮಾಡಿದನು. ಆತನು ಎಂಟು ಇಡ್ಲಿಗಳನ್ನು ತಿಂದು, ಒಂಬತ್ತನೆಯದನ್ನು ತಿಂದ ನಂತರ ಆತನ ಹಸಿವು ನೀಗಿತು. ಮಾಣಿಯು ಬಂದು ಒಂಬತ್ತು ಇಡ್ಲಿಗಳ ಬಿಲ್ ಕೊಟ್ಟನು. ಆತನು 'ಇದೇನು? ನಾನು ನನ್ನ ಹಸಿವನ್ನು ಹಿಂಗಿಸಿದ ಆ ಒಂಬತ್ತನೇ ಇಡ್ಲಿಗೆ ಮಾತ್ರವೇ ಹಣಕೊಡುವುದು. ಮೊದಲ ಎಂಟು ಇಡ್ಲಿಗಳಿಂದೇನೂ ಆಗಲಿಲ್ಲ. ಒಂಬತ್ತನೆಯ ಇಡ್ಲಿಯಿಂದ ಮಾತ್ರವೇ. ನನ್ನ ಹಸಿವು ಹಿಂಗಿದುದು. ಆದುದರಿಂದ ನಾನು ಆ ಇಡ್ಲಿಗೆ ಮಾತ್ರವೇ ಹಣಕೊಡುವುದು!
ಈ ಮನುಷ್ಯನ ಸಂಭಾಷಣೆ ವಿಚಿತ್ರವೆನಿಸುವುದಿಲ್ಲವೆ? ನಾವೂ ಸಹ ಜೀವನದಲ್ಲಿ ಇದನ್ನೇ ಮಾಡುವುದು. ಶಾಸ್ತ್ರವಿಧಿಗಳನ್ನು ತಿರಸ್ಕರಿಸುವವರೇ ಮೊದಲ ಎಂಟು ಇಡ್ಲಿಗಳನ್ನು ತಿರಸ್ಕರಿಸುವವರು. ವೈದಿಕ ನಿಯಮಾಚರಣೆ ಅಪ್ರಯೋಜಕ, ನಾವು ನೇರವಾಗಿ ಧ್ಯಾನಕ್ಕೂ, ಆಧ್ಯಾತ್ಮಿಕ ಅನುಭವಗಳನ್ನು ಪಡೆಯಲೂ ಹೋಗುತ್ತೇವೆ ಎನ್ನುವವರು ಮೊದಲನೆ ಎಂಟು ಇಡ್ಲಿಗಳನ್ನು ತಿರಸ್ಕರಿಸುವುದಲ್ಲದೆ ಬೇರೇನನ್ನೂ ಮಾಡುತ್ತಿಲ್ಲ.
ಮೊದಲನೆ ಎಂಟು ಇಡ್ಲಿಗಳಿಂದಲೇ ಒಂಬತ್ತನೆಯ ಇಡ್ಲಿಯು ಕೆಲಸಮಾಡಿದುದು ಎಂಬುದನ್ನು ತಿಳಿಯಿರಿ. ಆತನು ಮೊದಲನೆ ಎಂಟು ಇಡ್ಲಿಗಳನ್ನು ತಿಂದಿರದಿದ್ದರೆ, ಒಂಬತ್ತನೆಯ ಇಡ್ಲಿಯು ಆತನ ಹಸಿವನ್ನು ಶಮನಗೊಳಿಸುತ್ತಿರಲಿಲ್ಲ. ಹಾಗೆಯೇ, ನೀವು ವಿಧಿನಿಯಮಗಳಿಂದ ಪೂಜೆಯನ್ನು ನಿಷ್ಠೆಯಿಂದ ಮಾಡಿದ್ದರೆ, ಧ್ಯಾನವು ಸಿದ್ಧಿಸುವುದು. ಪೂರ್ವಭಾವಿಯಾದ ಇವುಗಳನ್ನೆಲ್ಲವನ್ನೂ ಬಿಟ್ಟು ನೇರವಾಗಿ ಒಂಬತ್ತನೆಯ ಇಡ್ಲಿಯನ್ನು ತಿನ್ನುತ್ತೇನೆಂದರೆ ಎಂದಿಗಾದರೂ ಸಾಧ್ಯವೆ? ನಿಮ್ಮ ಹಸಿವು ಎಂದಿಗಾದರೂ ಶಮನವಾದೀತೆ?
ಒಂಬತ್ತನೆಯ ಇಡ್ಲಿಯನ್ನು ನೇರವಾಗಿ ತಿನ್ನಲು ಸಾಧ್ಯವೆನ್ನುವ ಯಾರೇ ಆಗಲಿ, ಅವರು ಸಂಪೂರ್ಣ ಅನುಭವವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಾರೆ. ಅವರು ಬರೀ ಒಂಬತ್ತನೇ ಇಡ್ಲಿಯನ್ನು ಮಾತ್ರವೇ ತಿಂದು, ಹಸಿವಿನಿಂದ ಕುಳಿತಿರುತ್ತಾರೆ. ಅಷ್ಟೇ ಅಲ್ಲ, ಅವರು ಸರಿಯಾದ ರೀತಿಯಲ್ಲಿ ಸಾಧನೆ ಮಾಡದೇ ಇರುವುದರಿಂದ ಏನನ್ನು ಅನುಭವಿಸಬಹುದಾಗಿತ್ತೋ ಅದನ್ನು ಅನುಭವಿಸುವುದಿಲ್ಲ ಅಲ್ಲದೆ, ‘ಅನುಭವವೆಂದರೆ ಇಷ್ಟೇ ತಾನೇ?’ ಎಂದುಕೊಳ್ಳುತ್ತಾರೆ. ಧ್ಯಾನ-ಮಾಡುವ ವರೆನ್ನಿಸಿಕೊಳ್ಳುವ ಇಂತಹವರನ್ನು ವೇದಾಂತಿಗಳು ಎನ್ನುತ್ತಾರೆ. ಅವರನ್ನು ಅವಲೋಕಿಸಿದ್ದೇ ಆದರೆ, ಅವರ ಮುಖಗಳಲ್ಲಿ ಸಂತೋಷದ ಛಾಯೆಯoverflow ಇರುವುದಿಲ್ಲ, ಏನನ್ನೋ ಕಳೆದುಕೊಂಡಿರುವಂತೆ ಆಜೀವ ನಿರುತ್ಸಾಹಿಗಳಂತೆ ಕಾಣುತ್ತಾರೆ.
ರಾಮಕೃಷ್ಣಪರಮಹಂಸರು ಸುಂದರವಾಗಿ ಹೇಳುತ್ತಾರೆ, ‘ನಿಮಗೆ ದೇಹಪ್ರಜ್ಞೆ ಇರುವವರೆವಿಗೂ ವಿಶ್ವಶಕ್ತಿಯನ್ನು ಸಂಪರ್ಕಿಸುವುದು ಮತ್ತೊಂದು ದೇಹದ ಮೂಲಕವೇ ಸಾಧ್ಯ’ ಎಂದು. ದೇಹಪ್ರಜ್ಞೆಯನ್ನು ಕಳೆದುಕೊಂಡಾಗ ಮಾತ್ರವೇ ದೈವವನ್ನು ನಿರಾಕಾರವಾಗಿ ಕಾಣಬಲ್ಲಿರಿ. ಅದಾಗುವವರೆವಿಗೂ, ಒಂದು ರೂಪ, ಸ್ಮರಣೆಗೆ ತರುವಂತಹ ಸಂಸ್ಕಾರಗಳು ಹಾಗೂ ಪೂಜಿಸಲು ಕೆಲವು ಆರಾಧ್ಯದೈವಗಳ ಆವಶ್ಯಕತೆ ನಿಮಗಿರುತ್ತದೆ.
ನೋಡಿರಿ: ನಮ್ಮ ಸಂಸ್ಥೆಯ ಮೊದಲ 3 ವರ್ಷಗಳಲ್ಲಿ ಎಂದರೆ 2003 ರಿಂದ 2006 ರವರೆವಿಗೆ, ನಾನು ಧ್ಯಾನದೊಂದಿಗೆ ಯಾವ ವೈದಿಕ ನಿಯಮವನ್ನೂ ಹಾಕಿರಲೇ ಇಲ್ಲ. 2006 ರಲ್ಲಿ ಮಾತ್ರವೇ ಪ್ರತಿದಿನದ ‘ನಿತ್ಯಧ್ಯಾನ’ ಧ್ಯಾನದೊಂದಿಗೆ ಗುರುಪೂಜೆಯನ್ನು ಸೇರಿಸಿದೆ.
2003 ರಿಂದ 2005ರ ವರೆವಿಗೂ ಧ್ಯಾನದೀಕ್ಷೆಯನ್ನು ಪಡೆದ ಶೇಕಡಾ 20 ರಿಂದ 30 ರಷ್ಟು ಜನರು ಮಾತ್ರವೇ ಮೂರು ತಿಂಗಳಾದರೂ ಧ್ಯಾನವನ್ನು ಮುಂದುವರೆಸಿದರು. ಮೂರು ತಿಂಗಳಾದಮೇಲೆ ಅವರೂ ಧ್ಯಾನವನ್ನು ನಿಲ್ಲಿಸಿ ಬಿಟ್ಟರು!
ಹೇಗಾದರೂ, ಈಗ, ನಾನು 'ನಿತ್ಯಧ್ಯಾನ'ದೊಂದಿಗೆ ಗುರುಪೂಜೆಯನ್ನು ಸೇರಿಸಿದ ಮೇಲೆ, ಅದೂ ಒಂದು ವಿಧಿ ನಿಯಮದಂತಾದ ಮೇಲೆ, ದೀಕ್ಷೆಯನ್ನು ಪಡೆದ ಶೇಕಡ ೮೦ ರಷ್ಟು ಜನರು ಅನುಸರಿಸುತ್ತಿದ್ದಾರೆ! ನಾನು ಅಂಕಿ ಅಂಶಗಳ ಅಧ್ಯಯನವನ್ನು ಮಾಡಿ ಇದನ್ನು ಕಂಡು ಹಿಡಿದೆ. ಆದುದರಿಂದ ಧ್ಯಾನದ ಜೊತೆಗೆ ವಿಧಿನಿಯಮವನ್ನೂ ನಿಯತವಾಗಿ ಕುಳಿತುಕೊಳ್ಳುವ ಹವ್ಯಾಸವನ್ನು ಮತ್ತು ಏನಾದರೂ ಸಾಧನೆಯನ್ನೂ ಬೆಳೆಸಿಕೊಳ್ಳುವುದು ಒಳ್ಳೆಯದು.
ಹಾಗಿಲ್ಲದಿದ್ದರೆ ನೀವು ಯಾವ ಸಾಧನೆಯನ್ನೂ ಕ್ರಮವಾಗಿ ಮಾಡುವುದಿಲ್ಲ. ಮೊದಲನೆಯ ದಿನ 'ಇವತ್ತು ನಮ್ಮ ಅತ್ತೆಯವರು ಇದ್ದಾರೆ,' ಎಂದೋ, 'ನನಗೆ ತುಂಬಾ ಕೆಲಸವಿದೆ ' ಎಂದೋ ಬಿಟ್ಟುಬಿಡುತ್ತೀರಿ. ಎರಡು ದಿನ ಕಳೆದು ನಿಮ್ಮ ಅತ್ತೆಯವರು ಹೋದನಂತರ ಅಥವಾ ನಿಮ್ಮ ಕೆಲಸ ಮುಗಿದನಂತರ 'ಅತ್ತೆಯವರನ್ನು ಕಳಿಸಿದ ಬಿಡುವಿನಲ್ಲಿ ಸ್ವಲ್ಪ ಆರಾಮವಾಗಿರೋಣ, ಈ ದಿನ ಮಾಡುವುದು ಬೇಡ' ಎಂದುಕೊಳ್ಳುತ್ತೀರಿ ಅಥವಾ ನೀವು ಸಂತೋಷವಾಗಿದ್ದರೆ, 'ಈ ದಿನ ಸಂತೋಷವಾಗಿದ್ದೀನಲ್ಲಾ, ಇನ್ನು ಧ್ಯಾನವೇಕೆಮಾಡಬೇಕು?' ಎಂದುಕೊಳ್ಳುತ್ತೀರಿ ಅಥವಾ ನೀವು ನಿರುತ್ಸಾಹಿಯಾಗಿದ್ದರೆ, 'ಈ ದಿನ ಯಾಕೋ ಉತ್ಸಾಹವಿಲ್ಲ, ಧ್ಯಾನಕ್ಕೆ ಹೇಗೆ ತಾನೇ ತೊಡಗಲಿ?' ಎಂದುಕೊಳ್ಳುತ್ತೀರಿ. ಧ್ಯಾನವನ್ನು ತಪ್ಪಿಸಿಕೊಳ್ಳಲು ನಿಮ್ಮ ಮನಸ್ಸು ಏನಾದರೊಂದು ತರ್ಕವನ್ನು ಹುಡುಕುತ್ತದೆ. ಆದರೆ ಅದನ್ನು ಒಂದು ಸಂಸ್ಕಾರದಂತೆ ಮಾಡಿದರೆ ತಪ್ಪಿಸಿಕೊಳ್ಳಲು ಯಾವ ತರ್ಕವೂ ಸಿಗುವುದಿಲ್ಲ. ಸುಮ್ಮನೆ ಮಾಡುತ್ತೀರಿ.
ಈಗ, ಜನನ ಮರಣಗಳ ಚಕ್ರದ ಮೂಲಕ ಹೇಗೆ ಹೋಗುವೆವು ಮತ್ತು ಈ ದೀಕ್ಷೆಗಳು ಮತ್ತು ಸಂಸ್ಕಾರಗಳು ಯಾವ ರೀತಿಯಲ್ಲಿ ಅದರಿಂದ ಮುಕ್ತಗೊಳಿಸುವುವು ಎಂಬುದನ್ನೂ ಮತ್ತು ಈ ಚಕ್ರದಿಂದ ಅವು ನಮ್ಮನ್ನು ಯಾವ ರೀತಿ ಪಾರುಮಾಡುತ್ತವೆ ಎಂಬುದನ್ನೂ ನೋಡೋಣ.