ಮೂರು ಬಗೆಯ ಕರ್ಮಗಳು ಮತ್ತು
This text was machine-transcribed from the printed book and may contain errors. Select the words and choose “Report a mistake”.
ಅವುಗಳನ್ನು ದಹಿಸುವ 'ದೀಕ್ಷೆ'
ಮೂಲತಃ ನಾವು ಮೂರು ಪದರಗಳ ಕರ್ಮಗಳನ್ನು ಹೊಂದಿದ್ದೇವೆ, ಸಂಚಿತ, ಪ್ರಾರಬ್ಧ ಮತ್ತು ಆಗಾಮ್ಯ.
ಸಂಚಿತಕರ್ಮವು ಒಂದು ರಿಸರ್ವ್ ಬ್ಯಾಂಕಿನಂತೆ. ನೀವು ದೇಹವನ್ನು ಧರಿಸಿ ಭೂಗ್ರಹಕ್ಕೆ ಬಂದಿರುವುದು ಇದೇ ಮೊದಲ ಬಾರಿ ಅಲ್ಲದಿರಬಹುದೆಂದು ತಿಳಿಯಿರಿ. ಇದಕ್ಕೆ ಮುಂಚಿತವಾಗಿ ಲಕ್ಷಾಂತರ ದೇಹಗಳನ್ನು ಧರಿಸಿರಬಹುದು. ಆ ಲಕ್ಷಾಂತರ ದೇಹಗಳಲ್ಲಿ ನಿಮಗೆ ಪೂರೈಸಲಾಗರದ ಏನೇನು ಆಲೋಚನೆ ಗಳಿದ್ದವೋ ಏನೇನು ನುಡಿದಿದ್ದಿರೋ, ಏನೇನು ಮಾಡಿದ್ದಿರೋ ಆ ಎಲ್ಲಾ ಅನುಭವಗಳೂ ನಿಮ್ಮ ಸ್ಮೃತಿಯಲ್ಲಿ ನೆನಪಿನ ಗುರುತಾಗಿ ಉಳಿದಿರುತ್ತದೆ. ಅವೆಲ್ಲವನ್ನೂ ಸೇರಿಸಿ ಸಂಚಿತ ಕರ್ಮವೆನ್ನುತ್ತಾರೆ. ಇದಕ್ಕೆ ಸಂಸ್ಕೃತದಲ್ಲಿ ಸಮೂಚಿತವೆಂಬ ಇನ್ನೊಂದು ಪದವೂ ಇದೆ. ನಾನು 'ಬ್ಯಾಂಕ್' ಎನ್ನುವಾಗ ಅದು ಕೂಡಿಹಾಕಿದ ಅಥವಾ ಉಳಿತಾಯದ ಕುರಿತಲ್ಲ, ಅದು ಸಾಲ! ಆ ಸಾಲವನ್ನೆಲ್ಲವನ್ನೂ ತೀರಿಸಬೇಕು!
ಮುಂದಿನದು ಪ್ರಾರಬ್ಧಕರ್ಮ. ಪ್ರಾರಬ್ಧ ಎಂದರೆ, ಸಂಚಿತಕರ್ಮದ ಬ್ಯಾಂಕಿನಿಂದ ಸ್ವಲ್ಪ ಕರ್ಮವನ್ನು ತೆಗೆದುಕೊಂಡು ಅದರಿಂದ ನಿಮ್ಮ ದೇಹವನ್ನು ಸೃಷ್ಟಿಸಿಕೊಂಡು, ಹುಟ್ಟುವಾಗ ಆ ಕರ್ಮಗಳನ್ನು ಆ ದೇಹದಮೂಲಕ ಭೋಗಿ ಸಲು ಮತ್ತು ನೀಗಿಸಲು ನಿರ್ಧರಿಸುವಿರಿ. ಆದುದರಿಂದ, ಪ್ರಾರಬ್ಧವೆಂದರೆ, ಈ ಜೀವನದಲ್ಲಿ ನಿಮ್ಮ ಈ ದೇಹದ ಮೂಲಕ ಭೋಗಿಸಲು ಅಥವಾ ನೀಗಿಸಲು ಸಂಚಿತದಿಂದ ತಂದಿರುವ ಒಂದು ತುಣುಕು ಮಾತ್ರ.
ಮೂರನೆಯ ರೀತಿಯ ಕರ್ಮವು ಅತ್ಯಂತ ಕೆಟ್ಟದ್ದು. ಅದು ಆಗಾಮ್ಯ ಕರ್ಮ. ಈ ಲೋಕಕ್ಕೆ ಬಂದಮೇಲೆ ಮಾಡುವ ಹೊಸ ಆಲೋಚನೆಗಳು, ಆಡುವ ಮಾತುಗಳು ಮತ್ತು ಮಾಡುವ ಕೆಲಸಗಳಿಂದ ಸೇರಿಸಿಕೊಳ್ಳುವ ಕರ್ಮ.
ಭೂಲೋಕಕ್ಕೆ ಬಂದ ಯಾರೇ ಆಗಲೀ, ಅವರು ಮರಣ ಹೊಂದುವ ಮುನ್ನ ಪ್ರಾರಬ್ಧಕರ್ಮವನ್ನು ತೀರಿಸಲೇಬೇಕು. ಉದಾಹರಣೆಗೆ ನಿಮ್ಮ ಸಂಚಿತ ಬ್ಯಾಂಕಿನಲ್ಲಿ 1000 ಕರ್ಮಗಳಿವೆ ಎಂದಿಟ್ಟುಕೊಳ್ಳೋಣ. ನೀವು ದೇಹವನ್ನು ಧರಿಸಿ ಬರುವಾಗ ಈ 1000 ಕರ್ಮಗಳಲ್ಲಿ ಕೇವಲ 10 ಕರ್ಮಗಳನ್ನು ತೆಗೆದುಕೊಂಡು, 'ಈ ಬಾರಿಗೆ ಈ ಹತ್ತು ಕರ್ಮಗಳನ್ನು ತೀರಿಸೋಣ' ಎಂದುಕೊಂಡು ಬರುತ್ತೀರಿ, ಎಂದಿಟ್ಟುಕೊಳ್ಳೋಣ. ಏನೇ ಆಗಲಿ, ಬಂದನಂತರ ನಿಮ್ಮ ಕರ್ಮವನ್ನು ತೀರಿಸುವ ಬದಲು, ಬೇರೆಯವರನ್ನು ಗಮನಿಸಲು ಪ್ರಾರಂಭಿಸುತ್ತೀರಿ ಹಾಗೂ ಅವರ ಆಸೆಗಳ ಮೇಲೆ ಆಧಾರಿತವಾಗಿ ಕರ್ಮವನ್ನು ಕಟ್ಟಿಕೊಳ್ಳುತ್ತೀರಿ. ಇದಕ್ಕೆ ಎರವಲು ತೆಗೆದುಕೊಂಡ ಆಸೆಗಳೆಂದು ಹೆಸರು. ಈ ಎರವಲು ಪಡೆದ ಆಸೆಗಳ ಕಾರಣದಿಂದ ನೀವು ಕೆಲವು ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕಾರ್ಯಗಳನ್ನು ಸೃಷ್ಟಿಸುತ್ತೀರಿ.
ಉದಾಹರಣೆಗೆ, ನೀವು ನಿಮಗಿಂತಲೂ ಸುಂದರವಾಗಿರುವವರನ್ನು ನೋಡಿದರೆ, ಮಾಡಿಕೊಳ್ಳುವ ಹೋಲಿಕೆಯಿಂದಲೂ, ಅಸೂಯೆಯಿಂದಲೂ, ನಿಮ್ಮ ಯೋಚನೆಗಳು ಹೆಚ್ಚಾಗುತ್ತವೆ. ಯೋಚನೆಗಳ ಆಧಾರಿತವಾಗಿ ಕರ್ಮವನ್ನು ಸೃಷ್ಟಿಸಿಕೊಳ್ಳುತ್ತೀರಿ. ಕೆಲವು ವೇಳೆ ನಿಜಸ್ಥಿತಿಯನ್ನರಿಯದೆಯೇ ಯಾರನ್ನಾದರೂ ದೂಷಿಸುತ್ತೀರಿ. ಹೀಗೆ ಮಾಡಿದಾಗ ನುಡಿಗಳ ಆಧಾರಿತವಾಗಿ ಕರ್ಮವನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಎಲ್ಲ ಕಾರ್ಯಗಳೂ ಚಾಲನೆಗೊಂಡಿರುವುದರಿಂದ ದುರಾಸೆ ಅಥವಾ ಭಯದಿಂದ ಅವು ತೋರಿಕೆಯ ಕ್ರಿಯೆಗಳಾಗಿ ಕೊನೆಗೊಂಡು ನಿಮ್ಮ ಕರ್ಮಕ್ಕೆ ಸೇರುತ್ತವೆ. ಈ ರೀತಿ, 200 ಕರ್ಮಗಳು ಸೇರಿದವು ಎಂದಿಟ್ಟು ಕೊಳ್ಳೋಣ. ನೀವು ಹಿಂದಿರುಗುವಷ್ಟರಲ್ಲಿ ಏನಾಗುತ್ತದೆ? ನಿಮ್ಮ ಬ್ಯಾಂಕಿನ ಸಾಲವು 200 ರಷ್ಟು ಹೆಚ್ಚಾಗಿರುತ್ತದೆ! ನೀವು ಬಂದಾಗ ತಂದಿದ್ದ 10 ಕರ್ಮಗಳನ್ನು ಬಗೆಹರಿಸಿಕೊಳ್ಳುವ ಬದಲು ಜೊತೆಗೆ 200ನ್ನು ಕಟ್ಟಿಕೊಂಡಿರಿ.
ಮುಂದಿನ ಸಲ ಜನ್ಮಧಾರಣೆ ಮಾಡಿದಾಗ ಏನಾಗುತ್ತದೆ? ನಿಮ್ಮ ಸಂಚಿತವು 990+210 ಈಗಿನದು. ಒಟ್ಟಿನಲ್ಲಿ ಹಿಂದಿನ ಜನ್ಮಕ್ಕಿಂತಲೂ 200 ಕರ್ಮಗಳು ಹೆಚ್ಚಾದುವು, ಪುನಃ ಅದರಲ್ಲಿ 10ನ್ನು ತೆಗೆದುಕೊಂಡು ಇನ್ನೊಂದು ದೇಹವನ್ನು ಧರಿಸಿ ಬರುವಿರಿ. ಆದರೆ ಇನ್ನೂ ಹೆಚ್ಚಾಗಿ ಸೇರಿಸಿಕೊಂಡು ಹಿಂದಿರುಗುವಿರಿ. ಇದೊಂದು ವಿಷಮ ಚಕ್ರವಾಗುತ್ತದೆ. ಎಡೆಬಿಡದೆ ದೇಹಧರಿಸುವುದು, ಪುನಃ ಪುನಃ ಮರಣ ಹೊಂದುವುದು. ಇದನ್ನೇ ನಾವು ಜನನ ಮರಣ ಚಕ್ರ ಎನ್ನುವುದು.
ಅದರ ಬದಲು, ನೀವು ಜೀವಿಸಿರುವಾಗ, ಯಾರಾದರೂ ನೀವು ದೇಹವಲ್ಲ, ಮನಸ್ಸಲ್ಲ ಎಂದಲೂ ಇದು ಕರ್ಮದ ಪರಿಣಾಮ ಎಂದಲೂ ತಿಳಿಯಪಡಿಸಿದರೆ, ಆಗ ನಿಮ್ಮ ಮೇಲಿನ ಕರ್ಮದ ಪ್ರಭಾವವು ಕಡಿಮೆಯಾಗುತ್ತಾ ಬರುತ್ತದೆ. ಹಾಗೂ, ನೀವು ಹೊತ್ತು ತಂದ ಪ್ರಾರಬ್ದ ಕರ್ಮವು ನಶಿಸಲಾರಂಭಿಸುತ್ತದೆ.
ನೀವು ದೇಹಧರಿಸಿ ಬಂದಾಗ 10 ಕರ್ಮಗಳನ್ನು ಹೊತ್ತು ಬಂದಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಕರ್ಮಗಳಲ್ಲಿ 3 ಕರ್ಮಗಳು ನಿಮ್ಮನ್ನು ನಿರುತ್ಸಾಹ ಗೊಳಿಸುವಂತಹ ಕರ್ಮಗಳು ಎಂದರೆ, ನಿಮ್ಮನ್ನು ನಿರುತ್ಸಾಹಗೊಳಿಸುವ ಶಕ್ತಿಯನ್ನು ಪಡೆದಿರುವ 3 ಸಂಸ್ಕಾರಗಳು ಎನ್ನೋಣ. ಈ ಸಂಸ್ಕಾರಗಳಿಗೆ ಶರಣಾಗಿ ನೀವು ನಿರುತ್ಸಾಹಿಗಳಾದರೆ, ಅವು ಕೇವಲ ಮೂರಾಗಿ ಉಳಿಯುವು ದಿಲ್ಲ, ಬಹುಶಃ 10 ಆಗುತ್ತದೆ. ಹಾಗೆ ಸೇರಿದ 7 ಕರ್ಮಗಳೇ ಆಗಾಮ್ಯ ಕರ್ಮಗಳು. ಪ್ರಾರಬ್ಧವನ್ನು ತೊರೆದುಕೊಳ್ಳುವುದನ್ನು ಬಿಟ್ಟು ಅದರೊಂದಿಗೆ ಇರಲು ನಿಶ್ಚಯಿಸಿದರೆ ಆಗಾಮ್ಯವನ್ನು ಸೇರಿಸಿಕೊಳ್ಳುವಿರಿ. ಇದಕ್ಕೆ ಬದಲಾಗಿ, ಈ ಸಂಸ್ಕಾರಗಳು ನಿಮ್ಮನ್ನು ನಿರುತ್ಸಾಹಗೊಳಿಸಿದಾಗ, ದೀಕ್ಷೆಯ ಸಹಾಯದಿಂದ ಖಿನ್ನತೆಯಿಂದ ಹೊರಬರುವುದನ್ನು ಕಲಿತಿದ್ದರೆ, ಆಗ ಈ ಕರ್ಮಗಳು ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲಾರವು. ಆದುದರಿಂದ, ಕಾಲಕಳೆದಂತೆ 10 ಕರ್ಮಗಳಲ್ಲಿ ನಿಮ್ಮನ್ನು ಬಿಟ್ಟುಹೋಗುತ್ತವೆ. ಪ್ರಾರಬ್ಧ ಕರ್ಮದ ಪ್ರಭಾವವನ್ನು ನೀವು ಕಡಿಮೆ ಮಾಡಿಕೊಂಡಂತೆಲ್ಲಾ ಪ್ರಾರಬ್ಧಗಳು ದಹಿಸಿಹೋಗುವುದೇ ಅಲ್ಲದೆ ಹೊಸ ಕರ್ಮಗಳು ಎಂದರೆ ಆಗಾಮ್ಯ ಕರ್ಮಗಳು ಬಂದು ಸೇರುವುದೂ ಕಡಿಮೆಯಾಗುತ್ತದೆ.
ಹೇಗೆಂದು ನೋಡೋಣ?
ಪ್ರಾರಬ್ಧ ಕರ್ಮವು ನಿಮ್ಮ ಮೇಲೆ ಪ್ರಭಾವವನ್ನು ಬೀರದಿದ್ದಾಗ ಆಗಾಮ್ಯದ ಸೇರ್ಪಡೆ ನಿಂತುಹೋಗುತ್ತದೆ. ಆದುದರಿಂದ ಯಾವಾಗ ಈ 10 ಸಂಸ್ಕಾರಗಳ ಪ್ರಭಾವವು ನಿಮ್ಮ ಮೇಲೆ ಬೀರುವುದು ನಿಲ್ಲುತ್ತದೆಯೋ, ಆಗ, ಆಗಾಮ್ಯದ ಸೇರುವಿಕೆಯೂ ನಿಲ್ಲುತ್ತದೆ, ಏಕೆಂದರೆ, ಈ 10 ಸಂಸ್ಕಾರಗಳೇ ಮುಂದಿನ ಸಂಸ್ಕಾರಗಳ ಸೇರುವಿಕೆಗೆ ಕಾರಣ.
ಕೇವಲ ದೀಕ್ಷೆಗಳ ಸಹಾಯದಿಂದಲೇ ನೀವು ಪ್ರಾರಬ್ಧದ ಪ್ರಭಾವವನ್ನು ತಗ್ಗಿಸಿಕೊಳ್ಳಬಹುದು ಹಾಗೂ ಪಾರಂಪರ್ಯವಾದ ಆನಂದದ ಸ್ಥಿತಿಯೆಡೆಗೆ ಹೋಗಬಹುದು. ಶುದ್ಧವಾದ ಮತ್ತು ಜಂಜಾಟವಿಲ್ಲದ ಆಂತರ್ಯವನ್ನು ಪುನಃ ಪಡೆಯಬಹುದು. ಆಗಾಮ್ಯಕರ್ಮದ ಸೇರುವಿಕೆಯನ್ನು ಸಹ ತಡೆಯಬಹುದು.
ದೀಕ್ಷೆ ಎಂದರೆ ನಿಮ್ಮ ಪ್ರಾರಬ್ಧದಿಂದುಂಟಾದ ನಿರುತ್ಸಾಹದಿಂದ ಹೊರತು ಪಡಿಸುವ ಮನೋಭಾವ, ಜ್ಞಾನ ಅಥವಾ ಕ್ಲಿಕ್ಗಳು.



ಜಾಗರಣ ಸಮಯದಲ್ಲಿ ಮನಸ್ಸು
ಸುಷುಪ್ತಿಯಲ್ಲಿ ಮನಸ್ಸು
ಸ್ವಪ್ನಾವಸ್ಥೆಯಲ್ಲಿ ಮನಸ್ಸು
ಅಜ್ಞಾನ
ಪ್ರತಿಜನ್ಮದಲ್ಲಿ ಕರ್ಮಾನುಸಾರವಾಗಿ ಪಡೆದ ಉಪಾಧಿಗಳ ಸಂಸ್ಕಾರಗಳ ಸಂಗ್ರಹಾಗಾರ

ಅಪೇಕ್ಷೆಯಿಲ್ಲದ ಶುದ್ಧಜ್ಞಾನಿಯಾದ ಆತ್ಮನು ಬದ್ಧನಾಗಿರುವುದಿಲ್ಲ.
ಉತ್ಪತ್ತಿಯಾದ ನೂತನ ಕರ್ಮಗಳನ್ನು ಗುಣಗಳಿಗೆ ದೃಢೀಕರಿಸಿ ಮೊದಲಿನ ದೇಹ, ಮನಸ್ಸಿಗೆ ಹಿಂತಿರುಗಿಸಲ್ಪಡುತ್ತದೆ.
ಪ್ರಾಪ್ತವಾದ ಭಾಗ್ಯ
ಜ್ಞಾನದ ದೃಷ್ಟಿ
ಜ್ಞಾನಕ್ಕೆ ತಕ್ಕಂತೆ ಕರ್ಮಗಳು ಕಡಿಮೆ ಆಗುತ್ತವೆ, ಹಾಗೂ ಕರ್ಮದ ಪರಿಣಾಮಗಳೂ ನಿಲ್ಲುತ್ತವೆ.
ಜ್ಞಾನವಿಲ್ಲ, ಕರ್ಮಗಳೊಂದಿಗೆ ಬಂಧನ