ಗುರು ಪೂಜೆ
This text was machine-transcribed from the printed book and may contain errors. Select the words and choose “Report a mistake”.

ಗುರುಪೂಜೆಯಲ್ಲಿ ಅಂತರ್ಯದಲ್ಲಿ ಗುರುಗಳಿಗೆ ಗೌರವವನ್ನರ್ಪಿಸುವ ಕಲ್ಪನೆಯನ್ನು ಮಾಡಿಕೊಳ್ಳ ಲಾಗುತ್ತದೆ. ಗುರುಪೂಜೆಯಲ್ಲಿ ಮಾನಸ ಪೂಜಾ ಮಂತ್ರದಿಂದ ನಿಮ್ಮಲ್ಲಾಗಿರುವ ಎಲ್ಲ ಕ್ಲಿಕ್ಗಳೂ ನೆನಪಿಗೆ ಬರುವುವು.
ಮಾನಸ ಪೂಜಾಮಂತ್ರದ ಮೊದಲನೆಯ ಪಂಕ್ತಿಯು 'ಹೃತ್ ಪದ್ಮಾಸನಂ ದದ್ಯಾತ್' ಎಂದರೆ, ನನ್ನ ಹೃದಯವು ನಿನ್ನ ಆಸನವಾಗಲಿ' ಎನ್ನುತ್ತದೆ. ನಮ್ಮ ಹೃದಯವು ಶುದ್ಧವಾಗಿರಬೇಕೆಂಬುದನ್ನು ಈ ಪಂಕ್ತಿಯೇ ಸೂಚಿಸುತ್ತದೆ. ಅದು ಒಳಗೇ ಆಗುವ ನೆನಪು - ಒಂದು ಕ್ಲಿಕ್. ಈ ಕ್ಲಿಕ್ ಆದಾಗ, ನಮ್ಮ ಎಲ್ಲ ಆಲೋಚನೆಗಳು, ನುಡಿಗಳು ಮತ್ತು ಕ್ರಿಯೆಗಳು ತಾವಾಗಿಯೇ ಶುದ್ಧವಾಗುತ್ತವೆ ಮತ್ತು ಇನ್ನೂ ಹೆಚ್ಚು ಕರ್ಮಗಳನ್ನು ಕಟ್ಟಿ ಕೊಳ್ಳದಂತೆಯೂ ಆಗುತ್ತದೆ. ನಮ್ಮ ನಡೆ, ನುಡಿ ಮತ್ತು ಆಚರಣೆಗಳು ಅತಿಶಯವಾದ ಅರಿವಿನಿಂದ ಕೂಡಿ ಇನ್ನೂ ಹೆಚ್ಚು ಕರ್ಮಗಳನ್ನು ಕಟ್ಟಿಕೊಳ್ಳದಂತಾಗುತ್ತದೆ.
ನಂತರ, ‘ಸಹಸ್ರಾರ್ ಅಚ್ಯುತಾಮೃತೈಃ ಪಾದ್ಯಂ ಚರಣಯೋರ್ ದದ್ಯಾತ್’ ಎಂಬ ಪಂಕ್ತಿ ಇದೆ. ಸಹಸ್ರಾರ ಅಮೃತ ಎಂದರೆ ನೀವು ಕೃತಜ್ಞತೆಯಿಂದ ತುಂಬಿಹೋದಾಗ ನಿಮ್ಮ ನಾಲಿಗೆ ಮತ್ತು ಗಂಟಲಿನಲ್ಲಿ ಆಗುವ ತೀಕ್ಷ್ಣವಾದ ಸಿಹಿಯ ರುಚಿ. ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸಿರಬಹುದು. ಅದರಲ್ಲೂ ಆನಂದ ದರ್ಶನದ ಸಮಯದಲ್ಲಿ ಅನುಭವಿಸಬಹುದು. ನಿಮ್ಮಲ್ಲೆಷ್ಟು ಜನರಿಗೆ ಹೀಗಾಗಿದೆ? ಆನಂದ ದರ್ಶನ ನಡೆಯುತ್ತಿರುವಾಗ ನಿಮಗೆ ಇದ್ದಕ್ಕಿದ್ದಂತೆ ಗಂಟಲಿನಲ್ಲೆಲ್ಲಾ ಸಿಹಿಯಾಗುತ್ತದೆ. ಇದೇ ಆಳವಾದ ಕೃತಜ್ಞತೆಯಿಂದ ಉಂಟಾಗುವ ‘ಸಹಸ್ರಾರಾಮೃತೈಃ!’
ನಿಮಗೆ ಸಂತೃಪ್ತಿಯಾದಾಗ ಸಹಸ್ರಾರದಿಂದ-ಎಂದರೆ ನಿಮ್ಮ ನೆತ್ತಿಯ ಮಧ್ಯಭಾಗದಿಂದ-ಅಮೃತ ವರ್ಷವಾಗುತ್ತದೆ. ಹಾಗೂ ನಿಮ್ಮ ಗಂಟಲೆಲ್ಲಾ ಅದರಿಂದ ತುಂಬಿಕೊಳ್ಳುತ್ತದೆ. ಆ ಅಮೃತವನ್ನೇ ‘ಪಾದ್ಯಂ’ ಅಥವಾ ದೇವರ ಪಾದಗಳನ್ನು ತೊಳೆಯುವ ನೀರಾಗಿ ಉಪಯೋಗಿಸಬೇಕಾದುದು. ಅದರರ್ಥವೇನೆಂದರೆ, ಪ್ರತಿದಿನವೂ ಪೂಜೆಗೆ ಕುಳಿತಾಗ ಆ ಅಮೃತವನ್ನು ಅನುಭವಿಸಲು, ಅಮೃತವರ್ಷವಾಗಲು ಕಾರಣವಾದ ಸನ್ನಿವೇಶಗಳನ್ನು ಅಥವಾ ಒಳ್ಳೆಯ ಅನುಭವಗಳನ್ನು ಸ್ಮರಿಸಿಕೊಳ್ಳುವುದು ಅವಶ್ಯಕ! ನಮ್ಮ ಉದಾಹರಣೆಯಲ್ಲಿ ಅದು ಆನಂದ ದರ್ಶನದ ಅನುಭವ. ಆಗ, ನೀವು ನೀವಾಗಿಯೇ ಆನಂದ ಪರವಶರಾಗುವಿರಿ. ಪೂಜೆಯ ಆ ಕ್ಷಣದಲ್ಲಿ ನಿಮ್ಮ ಗಂಟಲಿನಲ್ಲಿ ಆ ಸಿಹಿಯನ್ನು ಅನುಭವಿಸದಿದ್ದರೆ, ನೀವು ಪೂಜೆಯನ್ನು ಮಾಡಲಾಗುವುದಿಲ್ಲ; ಏಕೆಂದರೆ, ನೀವು ಸುಳ್ಳು ಹೇಳಿದಂತಾಗುತ್ತದೆ! ನಿಮಗೆ ನಿಜವಾಗಿಯೂ ಆ ಭಾವನೆಯುಂಟಾದರೆ ಮಾತ್ರ ಪೂಜೆಯಲ್ಲಿ ‘ಸಹಸ್ರಾರಚ್ಯುತಾಮೃತೈಃ ಪಾದ್ಯಂ ಚರಣಯೋರ್ ದದ್ಯಾತ್’ ಎಂಬ ಪದಗಳನುಚ್ಚರಿಸಲು ಅಧಿಕಾರವಿರುತ್ತದೆ.
'ಮನಸ್ತು ಅರ್ಘ್ಯಂ ನಿವೇದಯಾತ್' ಎಂದರೆ, ನಿಮ್ಮ ಮನಸ್ಸನ್ನೇ ಭಗವಂತನಿಗೆ ಆಹಾರವಾಗಿ ಅರ್ಪಿಸುತ್ತಿದ್ದೀರಿ ಎಂದರ್ಥ. ನಿತ್ಯಾನಂದ ಸ್ಫುರಣ ಪ್ರೋಗ್ರಾಂನ (ಲೈಫ್ ಬ್ಲಿಸ್ ಪ್ರೋಗ್ರಾಂ-ಹಂತ-2) ಕೊನೆಯಲ್ಲಿ ನಿಮ್ಮ ಎಲ್ಲಾ ಸಂಸ್ಕಾರಗಳನ್ನೂ ಬೇರೂರಿರುವ ಸ್ಮರಣೆಗಳನ್ನೂ ಅಥವಾ ಕರ್ಮವನ್ನು ಅಗ್ನಿಗೆ ಅರ್ಪಿಸುತ್ತೀರಿ. ಇವೆಲ್ಲವೂ ಸೇರಿ ಆಗಿರುವುದೇ ನಿಮ್ಮ ಮನಸ್ಸು. ಹಾಗಾಗಿ, ನೀವು ಈ ಪಂಕ್ತಿಯನ್ನುಚ್ಚಿ ರಿಸಿದಾಗ ನೀವಾಗಿಯೇ ಆ ಕ್ರಿಯೆಯನ್ನು ಸ್ಮರಿಸಿಕೊಂಡು 'ಹಾಂ, N.S.P. ಯಲ್ಲಿ ಹೇಗೆ ಸಮಸ್ತವನ್ನೂ ಅರ್ಪಿಸಿದ್ದೆನೋ ಹಾಗೆಯೇ ಈಗಲೂ ಅಲ್ಲಿಂದೀಚೆಗೆ ಕೂಡಿಹಾಕಿಕೊಂಡಿರುವುದನ್ನು ನಿನ್ನ ಪಾದಗಳಿಗೆ ಸಮರ್ಪಿಸುತ್ತೇನೆ' ಎಂದುಕೊಳ್ಳುತ್ತೀರಿ. ಇದು ಇಲ್ಲಿ ಆಗಬೇಕಾದ ಕ್ಲಿಕ್ಗೆ ಮತ್ತೊಂದು ಉದಾಹರಣೆ.
'ತೇನ ಅಮೃತೇನ ಆಚಮನೀಯಂ' ಎಂದರೆ 'ಅದೇ ಭಾವೋದ್ರೇಕದ ಅಮೃತವನ್ನು ನಿನಗೆ ಕುಡಿಯಲು ಕೊಡುತ್ತೇನೆ' ಎಂದರ್ಥ.
ಆ ಅಮೃತವನ್ನು ಪುನಃ ಅನುಭವಿಸಲು ಈ ಪಂಕ್ತಿಯು, ಆ ಸಂತೋಷ, ಆ ಆನಂದಗಳ 'ಆನಂದದರ್ಶನ'ದ ಅನುಭವಕ್ಕೆ ನಿಮ್ಮನ್ನು ಮರಳಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಈ ಮಂತ್ರದ ಪ್ರತಿಯೊಂದು ಹಂತವೂ ನಿಮಗಾದ ಕ್ಲಿಕ್ಕುಗಳಿಗೂ ದೀಕ್ಷೆಯ ಅನುಭವಗಳಿಗೂ ನಿಮ್ಮನ್ನು ಮರಳಿಸುತ್ತದೆ. ನಾನು ಗುರುಮಂತ್ರದ ಕೆಲವು ಪದಗಳನ್ನು ಮಾತ್ರ ವಿವರಿಸಿದ್ದೇನೆ. ನೀವು ಅದೆಲ್ಲವನ್ನೂ ಆಮೂಲಾಗ್ರವಾಗಿ ಪರಿಶೀಲಿಸಿದರೆ, ಸಂಪ್ರದಾಯವನ್ನು ಶ್ಲಾಘಿಸುವುದು ಮಾತ್ರವಲ್ಲ, ಸಂಪ್ರದಾಯದ ಸಮಗ್ರ ವಿಜ್ಞಾನವು ಹೇಗೆ ಬಂದಿತೆಂಬುದನ್ನು ಶ್ಲಾಘಿಸಲು ಮೊದಲುಮಾಡುವಿರಿ.
ಅದು ಎಂತಹ ಸುಂದರವಾದ ಕಲ್ಪನೆ! ನೀವಿದನ್ನು ಅರ್ಥ ಮಾಡಿಕೊಂಡರೆ ಸಾಕು. ಬೇಡವಾದ ಎಲ್ಲ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳು ತಾವಾಗಿಯೇ ನಿಮ್ಮನ್ನು ಬಿಟ್ಟುಹೋಗುತ್ತವೆ ಹಾಗೂ ಅನತಿ ಕಾಲದಲ್ಲಿಯೇ ಗುರುಕೃಪೆಯು ನಿಮ್ಮ ಮೇಲಾಗುವುದು. ಒಮ್ಮೆ ಅದಾಯಿತೆಂದರೆ, ನಿಮಗೆ ಮೋಕ್ಷ ದೊರೆತಂತೆಯೇ.
(ಸಮಗ್ರವಾದ ಗುರುಪೂಜೆಯ ಕ್ರಮ ಮತ್ತು ಅದರ ಉಪಯೋಗಗಳಿಗಾಗಿ ಚಿತ್ರಗಳ ಮೂಲಕ ವಿವರಿಸಲಾಗಿರುವ ಪರಮಹಂಸ ಶ್ರೀ ನಿತ್ಯಾನಂದರ 'ಡು ಗುರುಪೂಜಾ ಯುವರ್ ಸೆಲ್ಫ್' ಎಂಬ ಪುಸ್ತಕವನ್ನು ನೋಡಿರಿ.)