ಧ್ಯಾನ ಮತ್ತು ಪ್ರಜ್ಞೆ - ಕರ್ಮಕ್ಕೆ ಪ್ರತಿರೋಧಕಗಳು
This text was machine-transcribed from the printed book and may contain errors. Select the words and choose “Report a mistake”.
ನಿಮ್ಮ ಮೇಲೆ ನನ್ನ ಕೆಲಸ.

ನಿಮಗೆ ಒಂದೇ ಒಂದು ಸಲವಾದರೂ ಶುದ್ಧ ಪ್ರಜ್ಞೆಯ ಇಣುಕು ನೋಟವಾಗಿದ್ದರೂ ಸಾಕು, ಯಾವ ಕರ್ಮವೂ ಏನನ್ನೂ ಮಾಡಲಾರದು. ಕರ್ಮದ ಕಂಪನಕ್ಕಿಂತಲೂ ನಿಮ್ಮ ಕಂಪನವು ಹೆಚ್ಚಾಗುತ್ತದೆ. ನಿಮ್ಮಲ್ಲಿ ಆಲೋಚನೆಗಳಿರು ವವರೆವಿಗೂ ಕರ್ಮವು ನಿಮ್ಮ ಮೇಲೆ ಪ್ರಭಾವಬೀರಬಲ್ಲದು. ಪ್ರಜ್ಞಾಪೂರಿತ ಅರಿವಿನ ಸ್ಥಿತಿಯಲ್ಲಿ ನೀವು ಆಲೋಚನೆಗಳನ್ನು ಮೀರಿ ಹೋಗುವಿರಿ. ಹಾಗಾಗಿ, ಸ್ವಾಭಾವಿಕವಾಗಿಯೇ ಕರ್ಮದ ಮೇಲೆ ಅಧಿಕಾರ ಮಾಡಲಾರಂಭಿಸುವಿರಿ. ಯಾವ ಧ್ಯಾನವನ್ನೇ ಆಗಲಿ, ತೀವ್ರವಾಗಿ ಮಾಡಿದಲ್ಲಿ, ಸತ್ಯದ, ಎಂದರೆ ಶುದ್ಧಪ್ರಜ್ಞೆಯ ಒಂದು ಇಣುಕುನೋಟವು ಲಭಿಸುತ್ತದೆ.
ಆ ಕಾರಣದಿಂದಲೇ, ಧ್ಯಾನವೆಂದರೆ ನಿಮ್ಮ ಕ್ಯಾಮರಾದ ಫಿಲ್ಮನ್ನು ನೇರವಾಗಿ ಸೂರ್ಯನಿಗೆ ತೆರೆದುಕೊಂಡಂತೆ ಎನ್ನುತ್ತಾರೆ. ಕ್ಯಾಮರಾದ ಮುಚ್ಚಳವು ಒಂದು ಸೆಕೆಂಡು ತೆರೆದುಕೊಂಡರೆ, ಅದರ ಮುಂದಿರುವುದೆಲ್ಲವೂ ಸೆರೆಹಿಡಿಯಲ್ಪಡುತ್ತದೆ. (ರೆಕಾರ್ಡ್ ಆಗುತ್ತದೆ). ಅದೇ, ಮುಚ್ಚಳವನ್ನು ಪೂರ್ತಿಯಾಗಿ ತೆರೆದೇ ಬಿಟ್ಟರೆ, ಏನಾಗುತ್ತದೆ? ಸೆರೆಹಿಡಿದ್ದೆಲ್ಲವೂ ಅಳಿಸಿಹೋಗುತ್ತದೆ.
ನೀವು ಹುಟ್ಟಿದಾಗ, ಕ್ಯಾಮರಾದ ಮುಚ್ಚಳವು ಒಂದು ಕ್ಷಣ ತೆರೆದುಕೊಂಡಿತು ಮತ್ತು ಜೀವವು ನಿಮ್ಮ ದೇಹವನ್ನು ಹೊಕ್ಕಿತು. ಆ ಕ್ಷಣದಲ್ಲಿ ಹೊರಗಡೆಯ ದೃಶ್ಯದಲ್ಲಿ ಇದ್ದುದೆಲ್ಲವೂ ಸೆರೆಯಾಯಿತು. ದೃಶ್ಯವೆಂಬ ಪದಕ್ಕೆ ನಾನು ಹೇಳುವುದು ಆ ಕ್ಷಣದಲ್ಲಿದ್ದ ಗ್ರಹಗತಿಗಳು. ಆ ಕಾರಣದಿಂದಲೇ ಹುಟ್ಟಿದ ಕಾಲ ಬಹಳ ಮುಖ್ಯ. ಅದನ್ನಾದರಿಸಿ ನಿಮ್ಮ ಚೈತನ್ಯವು ಕಾರ್ಯಶೀಲ ವಾಗುವುದು. ಹೇಗಾದರೂ, ಧ್ಯಾನ ಮಾಡುತ್ತಿರುವಾಗ, ನಾನು ಮುಚ್ಚಳವನ್ನು ಸಾಕಷ್ಟು ಬೇಕೆಂದೇ ತೆರೆದಿರುತ್ತೇನೆ! ಆದುದರಿಂದ ಸ್ವಾಭಾವಿಕವಾಗಿಯೇ ಸೆರೆಹಿಡಿದದ್ದೆಲ್ಲವೂ ಅಳಿಸಿಹೋಗುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ನೀವು ಹುಟ್ಟಿದಾಗ ಮೊದಲನೆಯ ಬಾರಿಗೆ ಮುಚ್ಚಳವು ತೆರೆಯಲ್ಪಟ್ಟಿತ್ತು. ನಿಮಗೆ ದೀಕ್ಷೆ ಲಭಿಸಿದಾಗ ಎರಡನೆಯ ಬಾರಿಗೆ ತೆರೆಯಲ್ಪಟ್ಟಿತ್ತು. (ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜ ವಾಗಿಯೂ ಸೂರ್ಯನ ಕಿರಣಗಳು ನಿಮ್ಮ ಕರ್ಮಗಳನ್ನೆಲ್ಲ ಅಳಿಸಿ ಹಾಕ ಲೆಂದು ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜವಾಗಿಯೂ ತೆರೆದಿಡ ಲಾಗಿದೆ). ಗುರುಗಳಿಂದ ದೀಕ್ಷೆ ಪಡೆದಾಗ ನಿಮ್ಮನ್ನು 'ದ್ವಿಜ' ಎಂದು ಕರೆಯುವುದು ಈ ಕಾರಣಕ್ಕಾಗಿಯೇ. ನಿಮ್ಮ ಕ್ಯಾಮರಾದ ಚಾಲಕನನ್ನೂ ಅಷ್ಟು ಕಾಲ ಮುಚ್ಚಳವನ್ನು ತೆರೆದಿದ್ದವನನ್ನೂ ಗುರು ಎಂದು ಕರೆಯುತ್ತಾರೆ-ಆತನೇ ಗುರು.
ಕರ್ಮ ಎಂಬ ವಿಷಯದ ಮುಂದುವರಿಕೆ
ತಿಳಿಯಿರಿ, ಸರಳವಾಗಿ ಹೇಳಬೇಕೆಂದರೆ ಅಜ್ಞಾನ ಜನ್ಯವಾದ ಆಲೋಚನೆಗಳ, ನುಡಿಗಳ ಮತ್ತು ಕ್ರಿಯೆಗಳ ಪ್ರತಿಫಲವಾಗಿ ತಿಳಿದೂ ತಿಳಿದೂ ಅದೇ ದುಃಖ ದುರ್ಮಾನಗಳನ್ನು ಮತ್ತೆ ಮತ್ತೆ ಅನುಭವಿಸಬೇಕಾದುದಕ್ಕೆ ಕಾರಣವಾಗಿರುವುದೇ ಕರ್ಮ. ಈ ಚಕ್ರವನ್ನು ತಪ್ಪಿಸಿಕೊಳ್ಳಬೇಕಾದರೆ ಅನುಗ್ರಹಿಸಲ್ಪಟ್ಟ ಕ್ಲಿಕ್ಗಳಿಗೆ ಈಡು ಮಾಡಿಕೊಂಡು ಉತ್ತಮವಾದ ಪ್ರಜ್ಞೆಯ ಸ್ತರದಲ್ಲಿ ಜೀವಿಸುವುದೇ ಮಾರ್ಗ. ಈ ಮೂಲ ವಿಜ್ಞಾನವನ್ನು ಅರಿತು ಕೊಳ್ಳದೇ ಹೋದಾಗ, ಸಕಲವನ್ನೂ ತಪ್ಪಾಗಿ ವ್ಯಾಖ್ಯಾನ ಮಾಡುವಿರಿ.
ಯಾರಿಗಾದರೂ ಸಲಹೆಕೊಟ್ಟಾಗಲಾಗಲೀ, ಯಾರನ್ನಾದರೂ ಸ್ಪರ್ಶಿಸಿ ದಾಗಲಾಗಲೀ ಅವರ ಕರ್ಮವು ತಮಗೆ ಅಂಟಿಕೊಳ್ಳುವುದೇ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಬೇರೆಯವರ ಕರ್ಮವನ್ನು ಕಟ್ಟಿಕೊಳ್ಳಲು ತಾವು ಬಹಳ ದುರ್ಬಲರು ಎಂದು ಕೊಳ್ಳುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ಹೇಗೆಂದು ತಿಳಿಯಲು ಅಪೇಕ್ಷಿಸುತ್ತಾರೆ. ಬೇರೆಯವರ ಕರ್ಮವನ್ನು ನೀವು ಕಟ್ಟಿಕೊಳ್ಳಲು ಆಗುವುದೇ ಇಲ್ಲವೆಂಬುದನ್ನು ತಿಳಿಯಿರಿ; ನಿಮಗೆ ನಿಮ್ಮದೇ ಸಾಕಷ್ಟಿದೆಯಲ್ಲ! ಆದುದರಿಂದ, ಇನ್ನೊಬ್ಬರಿಂದ ಕರ್ಮವನ್ನು ತೆಗೆದುಕೊಳ್ಳುವ ವಿಷಯದಲ್ಲಿ ಬಗ್ಗೆ ಚಿಂತಿಸಬೇಡಿರಿ.
ಯಾರನ್ನಾದರೂ ಸ್ಪರ್ಶಿಸುವುದರಿಂದಾಗಲೀ, ಸಲಹೆ ಕೊಡುವುದರಿಂದಾಗಲೀ ದೈಹಿಕ ಸಂಬಂಧದಿಂದಾಗಲೀ ಅಥವಾ ದೈಹಿಕ ಸನಿಹದಿಂದಾಗಲೀ ಕರ್ಮವನ್ನು ಕಟ್ಟಿಕೊಳ್ಳಲಾಗುವುದೇ ಇಲ್ಲ. ಯಾರದಾರರೂ ಸುತ್ತಮುತ್ತ ಎಡೆಬಿಡದೇ ಇದ್ದು, ಸನಿಹದಲ್ಲಿಯೇ ಇದ್ದರೆ, ಅವರ ಮನೋಧರ್ಮವನ್ನು ಪಡೆಯಬಹುದು; ಆದರೆ ಆತನ ಆಕೆಯ ಕರ್ಮವನ್ನಲ್ಲವೇ ಅಲ್ಲ. ಅಂದ ಹಾಗೆ, ನೀವು ಅವರ ಮನೋಧರ್ಮವನ್ನು ಹೊಂದದೇ ಇರಲು ನಿಮಗೆ ಮನೋ ಢಾರ್ಡ್ಯ ಇರಬೇಕು. ಅದು ಅಪಾಯಕರ. ಆದರೆ ನಿಮಗಾದ ಕ್ಲಿಕ್ಗಳಿಂದಾಗಿ ನೀವು ದೃಢವಾಗಿದ್ದರೆ ಇದು ನಿಮ್ಮನ್ನು ಯಾವ ರೀತಿಯೂ ಬಾಧಿಸುವುದಿಲ್ಲ.
ಮತ್ತೊಂದು ವಿಷಯ- ನಾನು ನಿಮ್ಮ ಕರ್ಮದ ತಂಟೆಗೆ ಬರುವುದಿಲ್ಲ. ಸೂರ್ಯೋದಯವಾದಾಗ ಕತ್ತಲೆಯು ಹೇಗೆ ನಿವಾರಣೆಯಾಗುತ್ತದೆಯೋ ಹಾಗೆ ಗುರುವಿನ ಸಾನಿಧ್ಯದಲ್ಲಿ ಕರ್ಮವು ದಹಿಸಿಬಿಡುತ್ತದೆ. ಕರ್ಮವು ಕತ್ತಲಿನಂತೆ ನಕಾರಾತ್ಮಕವಾದುದು. ಅದಕ್ಕೆ ಸಕಾರಾತ್ಮಕ ಉಳಿಗಾಲವಿಲ್ಲ; ನಾನು ಹೇಳುವುದೇನೆಂದರೆ, ಇಲ್ಲಿರುವ ವಸ್ತುವನ್ನು ತೆಗೆದುಕೊಂಡು ಎಸೆದುಬಿಡುವಂತೆ ಅದನ್ನು ಹೊರಗೆ ಎಸೆದು ಬಿಡಲಾಗುವುದಿಲ್ಲ.
ಬೆಳಕಿಲ್ಲದಿರುವಿಕೆಯನ್ನು ಕತ್ತಲು ಎನ್ನುವಂತೆಯೇ ನಮ್ಮ ಅಂತರಂಗದಲ್ಲಿ ಬೆಳಕಿಲ್ಲದಿರುವುದೇ ಕರ್ಮ ಅಥವಾ ಬೇರೆ ರೀತಿಯಲ್ಲಿ ಹೇಳಬೇಕೆಂದರೆ ಅಜ್ಞಾನ. ಅದು ಚೈತನ್ಯವಿಲ್ಲದಿರುವಿಕೆ. ಕ್ಲೇಶಗಳ ನೆನಪಿನ ಮೂಲಕ ಅರ್ಥಮಾಡಿಕೊಂಡ ರೀತಿಯಲ್ಲಿ ಜೀವಿಸುವ ಮೂಲಕ ಯಾವ ಕರ್ಮವನ್ನಾದರೂ ದಹಿಸಬಹುದು.
ಕರ್ಮವೆಂಬುದು ಅದರಲ್ಲಿರುವ ನಿಮ್ಮ ಭಯವೇ ಹೊರತು ಬೇರೆಯಲ್ಲ. ಕೊನೆಯ ಪಕ್ಷ ಭಯದ ಅಂಶವಂತೂ ಭದ್ರವಾಗಿದೆ. ಕರ್ಮವು ನಿಮ್ಮ ಭಯದಷ್ಟು ಆಳವಾಗಿಯೂ ಇಲ್ಲ. ಭಯವು ನಿಮ್ಮ ಕಾರಣ ಶರೀರದ ಆಳಕ್ಕೆ ಹೋಗುತ್ತದೆ. ನೀವು ಆಳವಾಗಿ ನಿದ್ರೆಹೋಗುವಾಗ ಶಕ್ತಿ ಪದರಕ್ಕೆ ಹೋಗುವಂತೆ. ನಿಮ್ಮ ತಲೆಯ ಮೇಲೆ ಒಂದು ಕತ್ತಿ ಇದ್ದು, ನೀವು ನಿದ್ರಿಸಿದರೆ, ವಿಪರೀತವಾದ ಭಯದಿಂದ ನೀವು ಕಾರಣ ಶರೀರವನ್ನು ತಲುಪುವಿರಿ. ಕರ್ಮ ವೆಂಬುದಕ್ಕೆ ಅಷ್ಟು ಆಳವೂ ಇಲ್ಲ. ಅದು ನೀವೇ ಮಾಡಿಕೊಂಡದ್ದು ಮತ್ತು ಅದನ್ನು ನೀವು ನಿವಾರಿಸಿಕೊಳ್ಳಬಹುದು ಮತ್ತು ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ, ಆಲೋಚನೆಗಳಿಂದಲೂ, ನುಡಿ ಗಳಿಂದಲೂ, ಕಾರ್ಯಗಳಿಂದಲೂ, ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳುವು ದಿಲ್ಲವೆಂಬ ಪ್ರಜ್ಞಾಪೂರಿತ ನಿರ್ಧಾರದಿಂದಲೂ ಅದನ್ನು ಇಲ್ಲವಾಗಿಸ ಬಹುದು.
ಕೇವಲ ಕರ್ಮವನ್ನು ತೀರಿಸಿಕೊಳ್ಳುತ್ತಲೂ ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ ಇರುವಂತಹ ಜೀವನವನ್ನು ನಡೆಸುವುದು ಬಹಳ ಮುಖ್ಯ. ವೈದಿಕ ಧರ್ಮದ ವಿವಾಹಗಳಲ್ಲಿ ಈ ವಿಚಾರವನ್ನೇ ಉತ್ತೇಜಿಸಿರುವುದು. ವೈದಿಕ ವಿವಾಹಗಳಲ್ಲಿ ಪತಿ - ಪತ್ನಿಯರು
ತಮ್ಮ ದಾಂಪತ್ಯ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಮುಂದಾಗಿಸಿಕೊಳ್ಳುವ ಸಂಕಲ್ಪವನ್ನು ಕೈಗೊಂಡು ಸಹಜೀವನವನ್ನು ನಡೆಸುತ್ತಾರೆ. ಇದನ್ನು ವಾನಪ್ರಸ್ಥಾಶ್ರಮ ಎನ್ನುತ್ತಾರೆ. ಹಾಗೆಂದರೆ, ಅದು ಕರ್ಮವನ್ನು ತೊರೆಯಲೂ, ಹೊಸದಾದ ಕರ್ಮವನ್ನು ಕಟ್ಟಿ ಕೊಳ್ಳದೆಯೂ ಇರಲು ಪರಸ್ಪರವಾಗಿ ಅವರು ತೆಗೆದುಕೊಳ್ಳುವ ನಿರ್ಧಾರ. ಸಾಮಾನ್ಯವಾಗಿ ವಿವಾಹದಲ್ಲಿ ಗಂಡು ವಿಷಯಾಭಿಲಾಷೆಯಿಂದಲೂ, ಹೆಣ್ಣು ಭಯದಿಂದಲೂ ವರ್ತಿಸುತ್ತಾರೆ. ಗಂಡು, ಹೆಣ್ಣಿನ ಭಯದ ದೃಷ್ಟಿಕೋನವನ್ನೂ, ಹೆಣ್ಣು ಗಂಡಿನ ಆಸೆಯ ದೃಷ್ಟಿಕೋನವನ್ನೂ ದುರುಪಯೋಗಿಸುತ್ತಾರೆ. ಆದರೆ ಈ ಸಂಕಲ್ಪವು ಪರಸ್ಪರರ ಕರ್ಮವನ್ನು ನಿವಾರಿಸಲೂ, ಒಬ್ಬರಿಗೊಬ್ಬರು ದುರುಪಯೋಗ ಮಾಡದಂತೆಯೂ ಹಾಗೂ ಹೆಚ್ಚಿಸದಂತೆಯೂ ಇರುವುದನ್ನು ದೃಢೀಕರಿಸುತ್ತದೆ.
'ಸ್ವಾಮೀಜಿ, ಕರ್ಮವನ್ನು ಮೀರಿ ಹೋಗುವುದು ಹೇಗೆ?' ಎಂದು ಯಾರೋ ನನ್ನನ್ನು ಕೇಳಿದರು.
ಕರ್ಮವನ್ನು ಕಟ್ಟಿಕೊಳ್ಳುವುದನ್ನು ತಡೆಯುವುದು ಹೇಗೆಂದು ಇದುವರೆವಿಗೂ ನಾವು ಚರ್ಚಿಸಿದ್ದೇವೆ. ಕರ್ಮದ ನಿವಾರಣೆಗೆ ಪರಿಹಾರಾರ್ಥವಾಗಿ ನಾನೊಂದು ಸುಲಭೋಪಾಯವನ್ನು ಹೇಳಿಕೊಡುತ್ತೇನೆ. ಈ ಕ್ಷಣದಿಂದಲೇ ನಿಮ್ಮ ಜೀವನದಲ್ಲಿ ಆದ ಆಗು ಹೋಗುಗಳನ್ನು ಸ್ಮರಿಸಿಕೊಳ್ಳಲು ಪ್ರಯತ್ನಿಸಿರಿ. ಈ ಕ್ಷಣದಿಂದ ನಿಮ್ಮ ಬಾಲ್ಯದ ದಿನಗಳಿಗೆ ಹಿಂದಿರುಗಿ ಹೋಗಿರಿ. ಎಷ್ಟು ಸಾಧ್ಯವೋ ಅಷ್ಟನ್ನು ಸ್ಮರಿಸಿರಿ. ಏನು ಸಾಧ್ಯವಿಲ್ಲವೋ ಅದಕ್ಕೆ ಚಿಂತಿಸಬೇಡಿರಿ. ನಿಮಗೆ ಏನನ್ನು ಸ್ಮರಿಸಲು ಸಾಧ್ಯವಿಲ್ಲವೋ ಅದು ಕೇವಲ ಉಳಿಕೆ ಎಂಬುದನ್ನು ತಿಳಿಯಲೇಬೇಕು. ಅದು ನಿಮ್ಮನ್ನು ಆಳವಾಗಿ ಹೊಕ್ಕಿಲ್ಲ. ಆದ ಕಾರಣವೇ ಅದು ನಿಮ್ಮ ಸ್ಮೃತಿಯಲ್ಲಿಲ್ಲ. ಈ ತಂತ್ರವನ್ನು ಒಂದು ವರ್ಷಕಾಲ ಅಭ್ಯಾಸ ಮಾಡಿರಿ. ಪುನರ್ಜೀವಿಸುವುದು ಆಶ್ಚರ್ಯಕರ ವಾದ ಬಿಡುಗಡೆ.
ನಮ್ಮ ಎರಡನೆಯ ಹಂತದ ನಿತ್ಯಾನಂದ ಸ್ಪುರಣ ಕಾರ್ಯಕ್ರಮ (NSP) ಎಂಬುದು ಕೇವಲ ಈ ಮಾದರಿಯಾಗಿ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಕೇಂದ್ರೀಕೃತವಾಗಿದೆ.
ಅದು ಒಬ್ಬ ಆತ್ಮಜ್ಞಾನಿಯಾದ ಗುರುಗಳ ಸಮ್ಮುಖದಲ್ಲಿ ಆಗುವ ಆಧ್ಯಾತ್ಮಿಕಾಭಿಷೇಕದಂತೆ.
ಒಂದು ವಿಷಯವನ್ನು ತಿಳಿದುಕೊಳ್ಳಿರಿ. ಗುರುಗಳಾದವರಿಗೆ ಕರ್ಮ ವೆಂಬುದಿಲ್ಲ. ಅವರಿಗೆ ಆಗಬೇಕಾದದ್ದೇನೂ ಇಲ್ಲ, ಪಡೆಯಬೇಕಾದದ್ದೂ ಏನಿಲ್ಲ. ಹಾಗಾದರೆ, ಅವರು ದೇಹದಿಂದೇಕೆ ಇರಬೇಕು? ಅದು ಕೇವಲ ಮಾನವ ಪ್ರೇಮಕ್ಕಾಗಿ, ಅವರು ಮಾನವ ದೇಹವನ್ನು ಪಡೆಯುವುದು ಕೇವಲ ಇನ್ನೂ ಹೆಚ್ಚು ಜನರಿಗೆ ಜನನ ಮರಣಗಳ ಚಕ್ರದಿಂದಲೂ, ಕರ್ಮದ ಹಿಡಿತದಿಂದಲೂ ಮುಕ್ತಿಯನ್ನು ದಯ ಪಾಲಿಸಲು ಮಾತ್ರ.