KAILASA Library/ತೆರೆ ಬಾಗಿಲು/ಬೇಡ, ನಿಮಗೆ ಧನ್ಯವಾದಗಳು !Sign in
ತೆರೆ ಬಾಗಿಲು

ಬೇಡ, ನಿಮಗೆ ಧನ್ಯವಾದಗಳು !

This text was machine-transcribed from the printed book and may contain errors. Select the words and choose “Report a mistake”.

(ಥ್ಯಾಂಕ್ಯೂ ಬೇಡ !)

(ಇದನ್ನು ಹೇಳಬೇಡಿ - ಅನುಭವಿಸಿ)

Swamiji smiling

ನಿಮ್ಮ ಆಸೆಗಳು ಹೆಚ್ಚಾಗುತ್ತಿದ್ದ ಹಾಗೆಲ್ಲಾ ನೀವು ಬಾಹ್ಯ ಘಟನೆಗಳ ನಿಯಂತ್ರಣಕ್ಕೆ ಒಳಪಡುತ್ತೀರಿ. ನೀವು ಕೃತಜ್ಞತೆಯಿಂದ ಬದುಕಿದಾಗ ಯಾರೂ, ಯಾವುದೂ ನಿಮ್ಮ ಸಂತೋಷಕ್ಕೆ ಚ್ಯುತಿ ಉಂಟುಮಾಡಲಾಗದು.

ನೀವು ನಿರೀಕ್ಷೆಯಲ್ಲಿದ್ದಾಗ, ನಿರೀಕ್ಷೆಗೂ, ಅದರ ಈಡೇರಿಕೆಗೂ ನಡುವೆ ಅಂತರವಿದ್ದೇ ಇರುತ್ತದೆ. ಒಂದು ಆಸೆ ಈಡೇರಿದರೆ, ಇತರ ಹತ್ತು ಆಸೆಗಳು ತಲೆ ಎತ್ತುತ್ತವೆ.

ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಂದು ಏರುಪೇರುಗಳು ಇದ್ದೇ ಇರುತ್ತವೆ. ಈಡೇರದ ಕೆಲವು ಆಸೆಗಳು ಯಾವಾಗಲೂ ಇದ್ದೇ ಇರುತ್ತವೆ. ಅದು ಸ್ವಾಭಾವಿಕ. ಅದು ಲೋಟ ಅರ್ಧ ತುಂಬಿದೆಯೇ ಅಥವಾ ಅರ್ಧ ಖಾಲಿಯಾಗಿದೆಯೇ ಎಂಬ ಮಾತಿನಷ್ಟೇ ಸರಳ ಪ್ರಶ್ನೆ ಇದು!

ಎಲ್ಲಿಯವರೆಗೆ ನೀವು ನಿಮ್ಮಲ್ಲಿ ಇಲ್ಲದಿರುವುದರ ಬಗ್ಗೆ ಗಮನ ಕೇಂದ್ರೀಕರಿಸುತ್ತೀರೋ ಅಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಏನೋ ಒಂದು ರೀತಿಯ ಶೂನ್ಯವಿರುತ್ತದೆ. ‘‘ನನಗೆ ಬೇಕು....'' ಎಂಬ ಪದಗಳು ಕಪ್ಪು ರಂಧ್ರದಂತೆ. ಈಗಾಗಲೇ ನಿಮ್ಮ ಜೀವನದಲ್ಲಿ ಇರುವುದನ್ನೆಲ್ಲಾ ಅದು ನುಂಗಿ, ಒಂದು ರೀತಿಯ ಖಾಲಿ ಖಾಲಿ ಎಂಬಂಥ ಭಾವವನ್ನು ನಿಮ್ಮಲ್ಲಿ ಮಾಡುತ್ತದೆ.

ಒಮ್ಮೆ ಒಬ್ಬಾತ ರಮಣ ಮಹರ್ಷಿಗಳ ಬಳಿಗೆ ಬಂದು

‘‘ಭಗವಾನ್, ನನಗೆ ಶಾಂತಿ ಬೇಕು'' ಎಂದು ಕೇಳಿದ.

ನಿನ್ನದೇ ಹೇಳಿಕೆಯಲ್ಲಿರುವ ‘‘ನನಗೆ'', ‘‘ಬೇಕು'' ಎಂಬ ಪದಗಳನ್ನು ತೆಗೆದು ಹಾಕು. ಆಗ ಉಳಿಯುವುದೇ ಶಾಂತಿ! ಎಂದು ರಮಣರು ಉತ್ತರಿಸಿದರು.

ಅಹಂಕಾರವನ್ನು ತೊರೆಯಿರಿ. ನಿರೀಕ್ಷೆಯನ್ನೂ ತೊರೆಯಿರಿ. ಶಾಂತಿ ನಿಮ್ಮಲ್ಲಿಯೇ ಇದೆ.

ಇದೇ ಸೂಫಿ ಪಂಥದ, ಹಸೀದಿ ಪಂಥದ ಹಿಂದೆ ಇರುವ ಸಿದ್ಧಾಂತ. ಕೃತಜ್ಞತೆಯಲ್ಲಿ ಬದುಕುವುದು ಒಂದು ಕಲೆ. ಈ ರೀತಿಯಾಗಿ ಬದುಕುವುದರಿಂದ ಪ್ರತಿಯೊಂದೂ ಪವಿತ್ರವಾಗುತ್ತದೆ. ದೇವರಿಗೆ ಕೃತಜ್ಞತೆ ಸೂಚಿಸಲು ಸೂಫಿಗಳು ಮತ್ತು ಭಾವುಕರು ಹಾಡಿ ಕುಣಿಯುತ್ತಾರೆ. ಹಾಡುವುದು, ಕುಣಿಯುವುದು ಅವರ ಪ್ರಾರ್ಥನೆಯ ವಿಧಾನ.

ಕೃತಜ್ಞತೆ ಸೂಚಿಸುವುದೆಂದರೆ ಗಂಟೆ ಗಟ್ಟಲೆ “ಪೂಜೆ” ಮಾಡುವುದು ಎಂದರ್ಥವಲ್ಲ. ಸಂತೋಷವಾಗಿದ್ದು, ಜೀವನದ ಕೊಡುಗೆಯ ಬಗ್ಗೆ ಅರಿತಿದ್ದರೆ ಅಷ್ಟೇ ಸಾಕು.

ಕೃತಜ್ಞತೆ ಸೂಚಿಸುವುದು ನಮಗೆ ಎಷ್ಟರ ಮಟ್ಟಿಗೆ ಕಂದಾಚಾರವಾಗಿ ಬಿಟ್ಟಿದೆ, ಕರ್ತವ್ಯವಾಗಿ ಬಿಟ್ಟಿದೆ ಎಂದರೆ ನಾವು ನಿಜವಾದ ಕೃತಜ್ಞತೆಯ ಭಾವ ಹೇಗಿರುತ್ತದೆ ಎಂಬುದನ್ನು ಮರೆತು ಬಿಟ್ಟಿದ್ದೇವೆ.

ನಿಮ್ಮ ಜೀವನದುದ್ದಕ್ಕೂ ನಿಮಗೆ ತಂದೆ-ತಾಯಿಗಳಿಗೆ, ಉಪಾಧ್ಯಾಯರಿಗೆ, ಸ್ನೇಹಿತರಿಗೆ ಹಾಗೂ ಅಪರಿಚಿತರಿಗೂ ಕೂಡ ಕೃತಜ್ಞರಾಗಿರಲು ಕಲಿಸಲಾಗುತ್ತದೆ. ಇದೊಂದು ವ್ಯವಸ್ಥೆ ಅಷ್ಟೇ! ನಿಜವಾದ ಕೃತಜ್ಞತೆ ಮೂಡಿದಾಗ, ಅದೆಂಥಹ ಅದ್ಭುತ ವ್ಯತ್ಯಾಸವಿರುತ್ತದೆ ಎಂಬುದು ನಿಮಗೇ ಗೊತ್ತಾಗುತ್ತದೆ! ಕೃತಜ್ಞತೆ ಎಂದರೆ ಸಂತೋಷ, ಅನುಕಂಪದ ಉತ್ಕರ್ಷ. ನಿಮಗೆ ಗೊತ್ತಿಲ್ಲದೆಯೆ ನಿಮ್ಮಿಂದ ಅದು ಪ್ರವಹಿಸುತ್ತದೆ!

ಕೃತಜ್ಞತೆಯ ಮಾಧುರ್ಯವನ್ನು ನಾವು ಅನುಭವಿಸಿಯೇ ಇಲ್ಲ. ನೀವು ಅಸ್ತಿತ್ವಕ್ಕೆ ಕೃತಜ್ಞತೆಯನ್ನು ಸೂಚಿಸಿದಾಗ ನಿಮಗೆ ಎಂಥಹ ಅದ್ಭುತ ತೃಪ್ತಿ ದೊರೆಯುತ್ತದೆ ಗೊತ್ತಾ?

ಒಂದು ಚಿಕ್ಕ ಕಥೆ:

ಸೂಫಿ ಸಂತ ಜುನ್ನೈದ್ ಪ್ರತಿದಿನ ಐದು ಸಲ ದೇವರಿಗೆ ಕೃತಜ್ಞತೆ ಸೂಚಿಸುತ್ತಿದ್ದರು. ಒಮ್ಮೆ ಅವರು ಸೂಫಿ ಪಂಥವನ್ನು ಒಪ್ಪದ ಕೆಲ ಹಳ್ಳಿಗಳಲ್ಲಿ ತಮ್ಮ ಅನುಯಾಯಿಗಳೊಂದಿಗೆ ತಿರುಗಾಡುತ್ತಿದ್ದರು. ಮೊದಲ ಹಳ್ಳಿಯಲ್ಲಿನ ಜನ ಅವರಿಗೆ ಭಿಕ್ಷೆ ನೀಡದದ್ದರಿಂದ ಅಂದು ಅವರೆಲ್ಲ ಉಪವಾಸ ಇರಬೇಕಾಯಿತು. ಮರುದಿನವೂ ಅದೇ ಕಥೆಯಾಯಿತು. ಮೂರನೇ ದಿನ ಅವರು ಹೋದ ಹಳ್ಳಿಯ ಜನ ಅದೆಷ್ಟು ಪ್ರತಿಕಾರದ ಭಾವದವರಾಗಿದ್ದರೆಂದರೆ ಇವರನ್ನೆಲ್ಲಾ ದೊಣ್ಣೆ, ಕಲ್ಲುಗಳಿಂದ ಹೊಡೆದು ಓಡಿಸಿದರು.

ರಾತ್ರಿ ಜುನ್ನೈದ್, ಮಾಮೂಲಿನಂತೆ ಮಂಡಿಯೂರಿ ದೇವರಿಗೆ ಕೃತಜ್ಞತೆ ಅರ್ಪಿಸಿದರು. ಇದನ್ನು ನೋಡಿದ ಅವರ ಕೆಲವು ಶಿಷ್ಯರಿಗೆ ಕೋಪ ಬಂತು.

“ಇದೇನು ಗುರುಗಳೇ! ಮೂರು ದಿನಗಳಿಂದ ನಾವು ಉಪವಾಸ ಬಿದ್ದಿದ್ದೇವೆ. ಇವತ್ತಂತು ನಮ್ಮನ್ನು ಆ ಹಳ್ಳಿಯಿಂದ ನಾಯಿಗಳಂತೆ ಹೊಡೆದೋಡಿಸಲಾಯಿತು, ಇದಕ್ಕಾಗಿ ನೀವು ಕೃತಜ್ಞತೆಯನ್ನು ಸೂಚಿಸುತ್ತಿದ್ದೀರಾ?'' ಎಂದು ಅವರು ಪ್ರಶ್ನಿಸಿದರು.

“ಯಾವುದೇ ಒಂದು ನಿರ್ದಿಷ್ಟ ಕಾರಣಕ್ಕಾಗಿ ನಾನೆಂದೂ ಅಸ್ತಿತ್ವಕ್ಕೆ ಕೃತಜ್ಞತೆ ಸೂಚಿಸುತ್ತಿರಲಿಲ್ಲ! ಯಾವೊಂದು ಕಾರಣಕ್ಕೂ ನನಗೆ ಕೃತಜ್ಞತಾ ಭಾವ ಮೂಡುತ್ತಿರಲಿಲ್ಲ, ಹಾಗಿರುವಾಗ ಯಾವುದೋ ಒಂದು ಕಾರಣಕ್ಕಾಗಿ ನಾನು ಕೃತಜ್ಞತೆ ಸೂಚಿಸುವುದನ್ನು ನಿಲ್ಲಿಸಿ ಬಿಡುವುದು ಹೇಗೆ? ನನ್ನ ಕೃತಜ್ಞತೆಗೆ ಕಾರಣಗಳು ಬೇಕಿಲ್ಲ. ಅದು ಸುಮ್ಮನೆ ಪ್ರವಹಿಸುತ್ತಾ ಹೋಗುತ್ತದೆ'' ಎಂದು ಜುನ್ನೈದ್ ಉತ್ತರಿಸಿದರು.

ಜೀವನವೇ ಅಸ್ತಿತ್ವದಿಂದ ಬಂದ ಮಹಾನ್ ಕೊಡುಗೆ. ಕೃತಜ್ಞರಾಗಿರಲು ಜೀವಿಸಿರುವ ಒಂದೇ ಕಾರಣ ಸಾಕು. ಸೂರ್ಯನ ಪ್ರಕಾಶ, ಹೂವುಗಳು, ನಿಮ್ಮ ದೇಹ, ಜೀವನ - ಇತ್ಯಾದಿಗಳನ್ನೆಲ್ಲ ಅಸ್ತಿತ್ವ ನಿಮಗೆ ಕೊಟ್ಟಿದೆ. ನೀವು ಅವಕಾಶ ನೀಡಿದ, ತಾವು ಕೊಟ್ಟಿದ್ದನ್ನು ಸ್ವೀಕರಿಸಿದ ಎಂಬ ಕಾರಣಕ್ಕಾಗಿ ಆತ ಕೃತಜ್ಞತೆ ಸೂಚಿಸುತ್ತಾನೆ. ಭಾರತದಲ್ಲಿ ತೆಗೆದುಕೊಳ್ಳುವುದು ಪಾಪ, ನೀಡುವುದು ಶ್ರೇಷ್ಠ ಎಂದು ಭಾವಿಸಲಾಗಿದೆ. ಆದ್ದರಿಂದ ನೀಡುವವ, ತಾನು ನೀಡಿದ್ದನ್ನು ತೆಗೆದುಕೊಂಡು ಉಪಕರಿಸಿದ್ದಕ್ಕಾಗಿ ತೆಗೆದುಕೊಳ್ಳುವವನಿಗೆ ವಂದಿಸುತ್ತಾನೆ. ಆದರೆ ನೀವು ನೀಡಿ - ನಿರೀಕ್ಷೆ ಇಲ್ಲದೆ ಸ್ವೀಕರಿಸಿದರೆ - ಎರಡೂ ಪವಿತ್ರ ಕಾರ್ಯಗಳೆಂದು ನಾನನ್ನುತ್ತೇನೆ. ಅನುಕಂಪದ ಬಗ್ಗೆ ಶೇಕ್ಸ್‌ಪಿಯರ್ ಸುಂದರವಾಗಿ ಹೇಳುತ್ತಾನೆ, ಕೊಡುವವನು, ಸ್ವೀಕರಿಸುವವನು - ಇಬ್ಬರೂ ಅನುಗೃಹೀತರು.

ಅಸ್ತಿತ್ವದೊಂದಿಗೆ, ವಾಸ್ತವಿಕತೆಯೊಂದಿಗೆ ಜೀವಂತ ಸಂಪರ್ಕ ಹೊಂದುವ ಏಕೈಕ ಮಾರ್ಗವೆಂದರೆ ಕೃತಜ್ಞತೆಯೊಂದೇ.

ನೀವು ಪ್ರೀತಿಸುತ್ತಿರುವಾಗ, ಕೃತಜ್ಞತೆಯಿಂದ ತುಂಬಿ ತುಳುಕುತ್ತಿರುವಾಗ, ನಿಮ್ಮ ಮೂಲಕ ಅಸ್ತಿತ್ವದ ಅದ್ಭುತ ಶಕ್ತಿ ಹರಿಯುವ ಅನುಭವ ಯಾವಾಗಲೂ ನಿಮಗಾಗುತ್ತದೆ.

‘‘ಥ್ಯಾಂಕ್ ಯೂ’’ ಎಂದು ಹೇಳಬೇಡಿ... ನೀವೇ ಥ್ಯಾಂಕ್ಯೂ ಆಗಿ!

ಕೃತಜ್ಞತೆ ಸೂಚಿಸಬೇಡಿ, ‘‘ಕೃತಜ್ಞರಾಗಿರಿ!’’

ಜೀವನ ನಿಮಗೆ ನೀಡಿದ್ದನ್ನೆಲ್ಲಾ ಗೌರವ - ಕೃತಜ್ಞತೆಯಿಂದ ಸ್ವೀಕರಿಸುವುದೇ ತತ್ತ್ವ.

ಜೀವನ ಪೂರ್ತಿ ಸಂತೋಷ ಪಡೆಯಲು ಇರುವ ಅತ್ಯಂತ ನಿರಾಯಾಸಕರವಾದ ದಾರಿ ಎಂದರೆ ಕೃತಜ್ಞತೆ ಒಂದೇ.

ಥ್ಯಾಂಕ್ಯೂ ! !

ಒಂದೇ ವ್ಯತ್ಯಾಸವೆಂದರೆ, ‘ಕರ್ಮ’ ಒಂದು ವಿಧವಾದ ವಿಳಂಬಿತ ಪರಿಣಾಮ..

“ಕರ್ಮ” ಜನ್ಮಾಂತರಗಳಲ್ಲೂ ಕೆಲಸ ಮಾಡುತ್ತದೆ. ಅದರ ಅರ್ಥ, ಒಂದು ಜನ್ಮದಲ್ಲಿ ಕಾರಣವಿದ್ದರೆ ಮುಂದಿನ ಜನ್ಮದಲ್ಲಿ ಪರಿಣಾಮದ ಅನುಭವವಾಗಬಹುದು. (“ಪುನರ್ಜನ್ಮ ನಿಜವಾಗಿಯೂ ಇದೆಯೇ ? ಎಂಬ ಪ್ರಶ್ನೆ ಇದರಿಂದ ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ಆ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ”).

ಮನುಷ್ಯರಾಗಿರುವ ನಮಗೆ ಸ್ವಾಭಾವಿಕವಾಗಿ ಹಿಂದಿನ ಜನ್ಮದಲ್ಲಾಗಿರುವ ಕಾರಣದ ಜ್ಞಾಪಕ ಇರುವುದಿಲ್ಲ. ನಮ್ಮ ಸೀಮಿತ ಜ್ಞಾನಕ್ಕೆ ಪರಿಣಾಮವಷ್ಟೇ ಕಾಣುತ್ತದೆ, ಕಾರಣದ ಅರಿವಾಗುವುದಿಲ್ಲ.

ಮೊದಲಿನಿಂದಲೂ ಅಷ್ಟೇ. ಯಾವಾಗಲಾದರೂ ನಮಗೆ ಅರ್ಥವಾಗದ್ದು ಏನೇ ಆಗಲೀ ಅದೆಲ್ಲಾ ಪರಮಾತ್ಮನ ಶಿಕ್ಷೆ ಎಂದು ನಾವಂದುಕೊಳ್ಳುತ್ತೇವೆ. ಇಂದಿಗೂ ಸಹ ಅನೇಕ ನಾಗರೀಕತೆಗಳಲ್ಲಿ, ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳನ್ನು, ಕುಪಿತರಾದ ದೇವರುಗಳು ನಮಗೆ ನೀಡಿದ ಶಿಕ್ಷೆ ಎಂದು ಭಾವಿಸಲಾಗುತ್ತದೆ.

ಹಾಗಾಗಿಯೇ “ಕರ್ಮಕ್ಕೆ” ಒಂದು ರೀತಿಯ ನೈತಿಕ ಕೋನವನ್ನು ನೀಡಲಾಗಿದೆ. ಪೂರ್ವಜನ್ಮದ “ಪಾಪ”ಗಳಿಗೆ ಸಿಕ್ಕ ಶಿಕ್ಷೆ ಎಂದು ಕರ್ಮವನ್ನು ವಿವರಿಸುತ್ತಿರುವುದಕ್ಕೆ ಸಮಾಜವೇ ಸಂಪೂರ್ಣವಾಗಿ ಹೊಣೆಯಾಗಿದೆ.

ಅದೊಂದು ರೀತಿಯಲ್ಲಿ ಸಾಂತ್ವನಗೊಳಿಸುವ ತಂತ್ರ. ಪೂರ್ವಜನ್ಮದ ದುಷ್ಕೃತ್ಯದ ಫಲ ಎಂದುಕೊಂಡಾಗ ನಿಮ್ಮ ಜೀವನದಲ್ಲಿನ ಒಂದಿಷ್ಟು ದುರದೃಷ್ಟವನ್ನು ತಾಳಿಕೊಳ್ಳುವುದು ಸುಲಭವಾಗುತ್ತದೆ.

‘‘ಪಾಪ ಮತ್ತು ಶಿಕ್ಷೆ’’ ಎಂಬುದು ಸಮಾಜದ ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಾಜವೇ ಆಂತಿಕವಾಗಿ ಸೃಷ್ಟಿಸಿದ ಕಲ್ಪನೆ. ಜನರಿಗೆ ಶಿಕ್ಷೆಯ ಭಯ ಇಲ್ಲದಿದ್ದರೆ ಸಮಾಜದಲ್ಲಿ ಕಾನೂನೇ ಇಲ್ಲದಂತಾಗಿ ಒಂದು ರೀತಿಯ ಅವನತಿ ಉಂಟಾಗುತ್ತದೆ.

ವಸ್ತುಸ್ಥಿತಿ ಏನೆಂದರೆ, ‘‘ನಮ್ಮ ಪಾಪಗಳಿಗಾಗಿ’’ ನಮ್ಮನ್ನು ಶಿಕ್ಷಿಸುವುದಿಲ್ಲ. ‘‘ನಮ್ಮ ಪಾಪಗಳಿಂದಲೇ’’ ನಾವು ಶಿಕ್ಷೆಗೊಳಗಾಗುತ್ತೇವೆ! ಪ್ರತಿಯೊಂದು ಪಾಪವೂ ತನ್ನೊಂದಿಗೆ ತನ್ನದೇ ಆದ ಶಿಕ್ಷೆಯನ್ನೂ ತರುತ್ತದೆ. ಅದೊಂದು ರೀತಿಯಲ್ಲಿ ಪ್ಯಾಕೇಜ್ ವ್ಯವಹಾರ!

ಪ್ರತಿಯೊಂದು ಸಲ ನಿಮಗೆ ಕೋಪ ಬಂದಾಗಲೂ ನಿಮ್ಮ ಶರೀರವನ್ನು ಗಮನಿಸಿ. ನಿಮ್ಮ ನಾಡಿ ಬಡಿತ, ರಕ್ತದೊತ್ತಡ ಹೆಚ್ಚಿ, ಇಡೀ ಶರೀರ ಒಂದು ರೀತಿಯ ಒತ್ತಡಕ್ಕೆ ಒಳಗಾಗಿರುತ್ತದೆ. ಅದರಿಂದ ಚೇತರಿಸಿಕೊಳ್ಳಲು ಗಂಟೆಗಳೇ ಬೇಕಾಗುತ್ತವೆ. ಅಷ್ಟೇ ಅಲ್ಲ, ಆ ನಂತರ, ಅದರ ಬಗ್ಗೆ ನಿಮಗೆ ಸಾಧಾರಣವಾಗಿ ಕೊನೆಗೆ ಪಶ್ಚಾತ್ತಾಪವಾಗುತ್ತದೆ. ಕೋಪಗೊಂಡಿದ್ದಕ್ಕಾಗಿ ನಿಮ್ಮನ್ನು ಬೇರೆ ಯಾರೋ ಶಿಕ್ಷಿಸಬೇಕಾಗಿಲ್ಲ. ನಿಮ್ಮ ಕೋಪವೇ ನಿಮ್ಮನ್ನು ಬೇಕಾದಷ್ಟು ಶಿಕ್ಷಿಸುತ್ತದೆ!

ನೀವು ಅತಿಯಾಗಿ ಕುಡಿಯುತ್ತಿದ್ದರೆ ನಿಮಗೆ ಯಕೃತ್ತಿನ ಕಾಯಿಲೆ ಬರುತ್ತದೆ. ಕುಡಿತಕ್ಕಾಗಿ ನೀವು ಯಾವುದೋ ಬಾಹ್ಯಶಕ್ತಿಯಿಂದ ಶಿಕ್ಷಿತರಾಗುವುದಿಲ್ಲ, ನೀವದನ್ನು ಶಿಕ್ಷೆ ಎಂದು ಭಾವಿಸುವವಿರಾದರೆ, ನಿಮ್ಮದೇ ಆದ ಕುಡಿತದ ಚಟದಿಂದಲೇ ಶಿಕ್ಷಿತರಾಗುತ್ತೀರಿ. ವೈದ್ಯರ ದೃಷ್ಟಿಯಲ್ಲಿ ಅದು ಕುಡಿತದ ಸ್ವಾಭಾವಿಕ ಪರಿಣಾಮ ಅಷ್ಟೇ.

‘‘ಕರ್ಮ’’ ಕೆಲಸ ಮಾಡುವುದೂ ಹೀಗೆಯೇ. ಇಟ್ಟಿಗೆ ಬೀಳುವಂತೆ ಭೌತಿಕ ಸ್ಥಿತಿಯಲ್ಲಷ್ಟೇ ಅಲ್ಲ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಸ್ಥಿತಿಗಳಲ್ಲೂ ನಿಜಸ್ವರೂಪವನ್ನು ಅದು ಕೆಲಸ ಮಾಡುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅದರಿಂದ ಪಾರಾಗುವ ಬಗೆಯನ್ನೂ ನಾವು ಅರಿಯಬಹುದು.

ಶ್ರೀ ರಾಮಕೃಷ್ಣರು ಹೇಳಿದ ಸೊಗಸಾದ ಒಂದು ಕಥೆ, ಈ ಬಗ್ಗೆ ನಿಮಗೆ ಜ್ಞಾನದ ಸ್ಪಷ್ಟ ತಿಳಿವಳಿಕೆ ನೀಡುತ್ತದೆ. “ಕರ್ಮ”ದ ನೈಜತೆಯ ಬಗ್ಗೆ ಅನುಭವಜನ್ಯವಾದ ತಿಳಿವಳಿಕೆಯನ್ನು ಅಸ್ತಿತ್ವದ ಸ್ಪಷ್ಟತೆಯನ್ನು ಯಾರೂ ನೀಡಲಾಗದು. ಅದು ಜ್ಞಾನೋದಯವಾದಾಗಷ್ಟೇ ನಿಮಗೆ ಬರುವುದು. ನಿಮಗೆ ಜ್ಞಾನೋದಯವಾದಾಗ, ಅದನ್ನು ಅಭಿವ್ಯಕ್ತಿಸುವುದು ಸಾಧ್ಯವಾಗುವುದಿಲ್ಲ!

ಈಗ 'ಕರ್ಮ'ದ ಕಥೆಗೆ ಬರೋಣ :

ಉದ್ದವಾದ ಹಗ್ಗದಿಂದ ಗೂಟಕ್ಕೆ ಕಟ್ಟಿದ ಹಸುವಿನಂತೆ ನಮ್ಮ ಸ್ಥಿತಿ. ಆ ವರ್ತುಲದಲ್ಲಿ ಅದು ಕೂರಬಹುದು, ನಿಲ್ಲಬಹುದು, ಕರುವಿಗೆ ಹಾಲುಣಿಸಬಹುದು, ಏನು ಬೇಕಾದರೂ ಮಾಡಬಹುದು. ನಮ್ಮ ಸ್ಥಿತಿಯೂ ಅದೇ ! ಕರ್ಮ ಒಂದು ರೀತಿಯ ಬಂಧನವನ್ನು ಉಂಟು ಮಾಡುತ್ತದೆ ಎಂಬುದು ನಿಜ. ನಮ್ಮ ಜೀವನಕ್ಕೊಂದು ದಿಕ್ಕನ್ನು ತೋರಿಸುತ್ತದೆ, ನಾವೊಂದು ರೀತಿಯಲ್ಲಿ ಕೆಲಸ ಮಾಡುವಂತೆ ಮಾಡುತ್ತದೆ. ನಮಗೆ ಸೀಮಿತವಾದ ಸ್ವಾತಂತ್ರ್ಯವಿರುತ್ತದೆ. ಉಳಿದದ್ದೆಲ್ಲ ಅಸ್ತಿತ್ವದ ಕೈಯಲ್ಲಿರುತ್ತದೆ. “ನಾವು ನಮ್ಮ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಅಸ್ತಿತ್ವ ನಮ್ಮ ಹಗ್ಗವನ್ನು ಮತ್ತಷ್ಟು ಉದ್ದ ಮಾಡಬಹುದು ಅಥವಾ ನಮ್ಮನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲೂಬಹುದು” ಎನ್ನುತ್ತಾರೆ, ಶ್ರೀ ರಾಮಕೃಷ್ಣ ಪರಮಹಂಸರು. ಬಂಧನದಲ್ಲೇ ಇರಬೇಕೋ, ಇಲ್ಲ ಮುಕ್ತರಾಗಬೇಕೋ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟ ವಿಷಯ.

‘ಕರ್ಮ’ಕ್ಕೂ - ‘ಧರ್ಮ’ಕ್ಕೂ ನಿಕಟ ಸಂಬಂಧವಿದೆ.

‘ಧರ್ಮ’ ಎನ್ನುವುದು ತುಂಬಾ ಅಪಾರ್ಥ ಮಾಡಿಕೊಂಡಿರುವ ಇನ್ನೊಂದು

ಆಸೆಗಳನ್ನು ಈಡೇರಿಸಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ಅವೆಲ್ಲ ನಿಮಗೆ ಸ್ವಾಭಾವಿಕವಾದ ಆಸೆಗಳಾಗಿರುವುದಿಲ್ಲ - ಅವೆಲ್ಲಾ ಆರ್ಜಿಸಿದ ಆಸೆಗಳು. ಸ್ವಾಭಾವಿಕವಾಗಿಯೇ ಅವು 'ಕರ್ಮ'ವನ್ನು ಸೆಳೆಯುತ್ತವೆ.

ಎಲ್ಲ 'ಕರ್ಮ'ಗಳೂ ಅಜ್ಞಾನದಿಂದ - ನಿಮ್ಮ ನಿಜಸ್ವರೂಪದ ಅಜ್ಞಾನದಿಂದ - ಉಂಟಾಗುತ್ತವೆ.

ಆಧ್ಯಾತ್ಮಿಕವಾಗಿ ಹೇಳುವುದಾದರೆ, 'ಕರ್ಮ' ನಿಮ್ಮ ಜೀವನದ ಪ್ರಧಾನ ಗುಣಧರ್ಮದಿಂದ ನಿರ್ಧರಿತವಾಗುತ್ತದೆ.

ನಿಮ್ಮ ಅಂತಃಸಾಕ್ಷಿಯನ್ನು ಜಾಗೃತಗೊಳಿಸುವ, ನಿಮ್ಮ ನಿಜ ಸ್ವರೂಪವನ್ನು ಮನದಟ್ಟು ಮಾಡುವ ವಿಜ್ಞಾನವೇ ಆಧ್ಯಾತ್ಮಿಕತೆ. ನಿಮ್ಮ ಅಂತಃಸಾಕ್ಷಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ನಿಮ್ಮ ಜೀವನ ಪಥವಿದ್ದರೆ, ನೀವು ಸ್ವಾಭಾವಿಕವಾಗಿ ಅಜ್ಞಾನದ ಕೂಪಕ್ಕೆ ಬೀಳುವುದಿಲ್ಲ. ಜಾಗೃತಿ ಮತ್ತು ಸುಸ್ಪಷ್ಟತೆಯೊಂದಿಗೆ ನೀವು ನಿಮ್ಮ ನಿಜವಾದ ಆಸೆಗಳು ಯಾವುವು, ನಿಜವಾದ ಸ್ವರೂಪ ಯಾವುದು ಎಂಬುದನ್ನು ಗುರುತಿಸಬಹುದು.

ವಿಶೇಷತಃ ಸಾವಿನ ಕ್ಷಣದಲ್ಲಿ ಇದು ಗಮನಾರ್ಹವಾಗುತ್ತದೆ.

ಯೋಗ, ಧ್ಯಾನ, ಜೆನ್‌ - ಎಲ್ಲವೂ ಸಾವಿನ ಕ್ಷಣಕ್ಕೆ ಸಿದ್ಧಗೊಳಿಸುವುದಲ್ಲದೆ, ಬೇರೇನೂ ಅಲ್ಲ. ನೀವು ಸಾವಿನ ಸಮಯದಲ್ಲಿ ಜಾಗೃತರಾಗಿದ್ದರೆ, ನಿಮ್ಮ ಮುಂದಿನ ಜನ್ಮಕ್ಕೂ ಅರಿವಿನಿಂದ ಪ್ರವೇಶಿಸುತ್ತೀರಿ, ಅಜ್ಞಾನದಿಂದಲ್ಲ. ತಿಳಿವಳಿಕೆಯೊಂದಿಗೆ ನೀವು ಜೀವನದೊಳಗೆ ಪ್ರವೇಶಿಸಿದರೆ ತಿಳಿವಳಿಕೆಯಲ್ಲೇ ಬದುಕುತ್ತೀರಿ. ಸಾಧ್ಯವಾದಷ್ಟು ಕಡಿಮೆ 'ಕರ್ಮ' ಮಾಡುತ್ತೀರಿ.

ಇದು ಸತ್ಯ.

ನಾನು ನನ್ನ ಸ್ವಂತ ಅನುಭವದ ಆಧಾರದ ಮೇಲೆ ನಿಮಗೆ ಹೇಳುತ್ತಿದ್ದೇನೆ.

ಪ್ರಶ್ನೆ : ಸ್ವಾಮೀಜೀ, ಮಂತ್ರಗಳಿಗೆ ನಿಜವಾಗಿಯೂ ಶಕ್ತಿ ಇದೆಯೇ ?

ಹೌದು, ಮಂತ್ರಗಳಿಗೆ (ಪರಿಶುದ್ಧವಾದ ಪರಣಗಳಿಗೆ) ಅದ್ಭುತವಾದ ಶಕ್ತಿ ಇದೆ, ಆದರೆ ಜನ ಅಂದುಕೊಳ್ಳುವಂತೆ ಅಲ್ಲ !

ಮಂತ್ರಗಳನ್ನು ಶಕ್ತಿ ಶಾಲಿ ಎನ್ನುವುದು, ಜ್ಞಾನದ ಅಧಿದೇವತೆ, ಸಂಪತ್ತಿನ ಅಧಿದೇವತೆಗಳನ್ನು ಸಂಪ್ರೀತಗೊಳಿಸಿ, ನಿಮಗೆ ವರ ಕೊಡಿಸುತ್ತವೆ ಎಂಬ ಕಾರಣಕ್ಕಾಗಿ ಅಲ್ಲ.

ಮಂತ್ರಗಳು, ಎಚ್ಚರಿಕೆಯಿಂದ ಅನುಕ್ರಮವಾಗಿ ಮಾಡಿದ ಶಬ್ದಗಳ ಸಂಯೋಜನೆ ಆಗಿರುವುದರಿಂದ ಪರಿಣಾಮಕಾರಿ. ಶಬ್ದ, ಶಕ್ತಿಯ ಒಂದು ಪ್ರಭಾವಶಾಲೀ ರೂಪ.

ನಾವು ಬೇರೆ ಬೇರೆ ಶಬ್ದಗಳೆಂದು ಗ್ರಹಿಸುವುದು ವಾಸ್ತವವಾಗಿ ಬೇರೆ ಬೇರೆ ಆವರ್ತದ ಕಂಪನಗಳನ್ನು. ಕಿವಿ ಈ ಕಂಪನಗಳನ್ನು ಆಲಿಸಿದರೆ, ಮೆದುಳು ಅದನ್ನು ಶಬ್ದವಾಗಿ ಪರಿವರ್ತಿಸುತ್ತದೆ.

ನಿಯಮಿತವಾದ ಅನುಕ್ರಮದಲ್ಲಿ ಶಬ್ದತರಂಗಗಳು ಒಂದನ್ನೊಂದು ಹಿಂಬಾಲಿಸಿ ಬಂದಾಗ, ಅದು ಒಂದು ರೀತಿಯ ಸ್ವರ ಮೇಳವನ್ನು ಮೂಡಿಸುತ್ತದೆ

  • ಅದನ್ನೇ ಸಂಗೀತ ಎನ್ನುವುದು. ಅದು ಅನಿಯಮಿತ ಸ್ವರೂಪದಲ್ಲಿದ್ದರೆ "ಗದ್ದಲ" ಎನಿಸಿಕೊಳ್ಳುತ್ತದೆ.

ಪದಗಳು, ಶಬ್ದಗಳಲ್ಲದೆ ಬೇರೆ ಏನೂ ಅಲ್ಲ. ಅವಕ್ಕೆ ನಾವು ಕೆಲವೊಂದು ಅರ್ಥ ಕೊಟ್ಟಿದ್ದೇವೆ. ಶಕ್ತಿಯ ಹಂತದಲ್ಲಿ ಅವು ಕೇವಲ ತರಂಗಗಳಂತೆ, ಕಂಪನಗಳಂತೆ ಕೆಲಸ ಮಾಡುತ್ತವೆ. ಬಣ್ಣಗಳಂತೆಯೇ, ಬೇರೆ ಬೇರೆ ಕಂಪನಗಳು ನಿಮ್ಮಲ್ಲಿ ಬೇರೆ ಬೇರೆ ರೀತಿಯ ಭೌತಿಕ ಹಾಗೂ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರೇರೇಪಿಸುತ್ತವೆ. ಇದಕ್ಕೆ ಪ್ರತಿಧ್ವನಿಸುವ ಲಕ್ಷಣವೇ ಕಾರಣ. ಒಂದು ನಿರ್ದಿಷ್ಟ ಆವರ್ತದ ಶಬ್ದ ತರಂಗಗಳು ನಿಮ್ಮ ಮೆದುಳಿನ ತರಂಗಗಳೊಂದಿಗೆ ಸಂಧಿಸಿದಾಗ ಒಂದೋ ಸಾಮರಸ್ಯ ಉಂಟಾಗುತ್ತದೆ, ಇಲ್ಲಾ, ಅಸಾಮರಸ್ಯದ ಪರಿಣಾಮ ಉಂಟಾಗುತ್ತದೆ. ಅದು ಮೆದುಳಿನ ಬೇರೆ ಬೇರೆ ಭಾಗಗಳನ್ನು ಚುರುಕುಗೊಳಿಸಲೂ ಬಹುದು ಅಥವಾ ನಿದ್ರಿಸುವಂತೆ ಮಾಡಲೂ ಬಹುದು. ನಿಮಗೆ ಇದರ ಪರಿಣಾಮ ಭೌತಿಕವಾಗಿಯೂ ಆಗಬಹುದು , ಭಾವನಾತ್ಮಕವಾಗಿಯೂ ಆಗಬಹುದು.

ಜಪಾನಿನ ಸಮುರಾಯ್‌ ಯೋಧರು ಇಂತಹದೇ ಪರಿಣಾಮ ಬೀರಲು ‘‘ಯುದ್ಧದ ಕೂಗು'' ಹಾಕುತ್ತಿದ್ದರೆಂಬುದು ನಿಮಗೆ ಗೊತ್ತೇ ?

ಇಂಥ ಕೂಗು ಸಣ್ಣ ಪ್ರಮಾಣದಲ್ಲಿದ್ದಾಗ ಇದು ಎದುರಾಳಿಯ ರಕ್ತದೊತ್ತಡವನ್ನು ಕಡಿಮೆ ಮಾಡಿ, ಹಠಾತ್ತಾಗಿ ಭಾಗಶಃ ಪಾರ್ಶ್ವವಾಯು ಉಂಟು ಮಾಡುವ ಶಕ್ತಿ ಹೊಂದಿರುತ್ತದೆ ! ಏಕಕಾಲದಲ್ಲೇ ಅದು ಮೆದುಳಿನಲ್ಲಿರುವ ‘‘ಭೀತಿ''ಯ ಪ್ರದೇಶವನ್ನು ಚುರುಕುಗೊಳಿಸಿ, ಎದುರಾಳಿಯ ಮನಸ್ಸಿನಲ್ಲಿ ಅಂಜಿಕೆಯ ಭಾವ ಮೂಡಿಸುತ್ತದೆ.

ಪದಗಳು ಕೇವಲ ಪದಗಳಲ್ಲ ! ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ. ಅವು ಶಬ್ದಶಕ್ತಿಯ ಸಾಕಾರಗಳು.

ಮಂತ್ರಗಳು ಹಾಗೆಯೇ ಇದೇ ರೀತಿ ಕೆಲಸ ಮಾಡುವುದು.

ಸರಸ್ವತಿ ಸ್ತೋತ್ರವನ್ನು ನಿಯಮಿತವಾಗಿ ಹೇಳಿದರೆ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಒಳ್ಳೆಯದಾಗುತ್ತದೆ ಎನ್ನುತ್ತೇವೆ, ಏಕೆ ? ಸರಸ್ವತಿ ಪ್ರತ್ಯಕ್ಷಳಾಗಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಅವರಿಗೆ ವರ ಕೊಡುತ್ತಾಳೆ ಎಂದಲ್ಲ ! ಜ್ಞಾನಶಕ್ತಿ. ಇಚ್ಛಾಶಕ್ತಿ ಎನ್ನುವುದು ಮೂಲದ್ರವ್ಯ. ಪರಿಶುದ್ಧಗೊಳಿಸುವ ಪ್ರಕ್ರಿಯೆಯ ಮೂಲಕ ಅದರಿಂದಲೇ ಉಳಿದೆರಡು ಶಕ್ತಿಗಳನ್ನು ಸೃಷ್ಟಿಸಬಹುದು.

ಪುನಃ ಪುನಃ ಮಂತ್ರಗಳನ್ನು ಪಠಿಸುವುದರಿಂದ ಉಂಟಾಗುವ ಕಂಪನಕ್ಕೆ ಇಚ್ಛಾಶಕ್ತಿಯನ್ನು ಪರಿಶುದ್ಧಗೊಳಿಸಿ ಜ್ಞಾನಶಕ್ತಿಯಾಗಿ ಪರಿವರ್ತಿಸುವ ಶಕ್ತಿ ಇರುತ್ತದೆ.

ಮನ್ - ತ್ರ : ಮ್ಯನ್ ಎಂದರೆ ಮನುಷ್ಯರು. ತ್ರ - ಎಂದರೆ ದಾರಿ ತೋರಿಸುವುದು. ಆದ್ದರಿಂದ ಮಂತ್ರ ಎಂದರೆ ಮನುಕುಲಕ್ಕೆ ದಾರಿ ತೋರಿಸುವುದು ಎಂದರ್ಥ.

ಮನ್ - ತ್ರ : ಮನ್ ಎಂದರೆ ಮನಸ್ಸ ಸಹ. ತ್ರ - ಎಂದರೆ ದಾರಿ ತೋರಿಸುವುದು. ಆದ್ದರಿಂದ ಮಂತ್ರ ಎಂದರೆ ಮನಸ್ಸಿನಿಂದ ಹೊರಗಿನ ದಾರಿ ತೋರಿಸುವುದು, ನಿಮ್ಮನ್ನು ಮನಸ್ಸಿನಿಂದಾಚೆಗೆ ಕರೆದೊಯ್ಯುವುದು ಎಂದೂ ಅರ್ಥವಾಗುತ್ತದೆ.

ಕಚ್ಚಾ ಸಾಮಗ್ರಿಯನ್ನು ಪರಿಶುದ್ಧಗೊಳಿಸಲು ಆಮ್ಲವನ್ನು ಸೇರಿಸುವಂತೆ, ನಿಮ್ಮಲ್ಲಿಗೆ ಮಂತ್ರವನ್ನು ನಿರಂತರವಾಗಿ ಸೇರಿಸಿದರೆ ನೀವು 22 ಕ್ಯಾರೆಟ್‌ನಷ್ಟು ಪರಿಶುದ್ಧ ಚಿನ್ನವಾಗುತ್ತೀರಿ. ಪ್ರಕ್ರಿಯೆಯನ್ನು ಮುಂದುವರಿಸಿದಾಗ ನೀವು 24 ಕ್ಯಾರೆಟ್ ಚಿನ್ನವಾಗುತ್ತೀರಿ. ಆದ್ದರಿಂದ ಮಂತ್ರ ಎನ್ನುವುದು ಆಧ್ಯಾತ್ಮಿಕ ವಲಯ ಪ್ರವೇಶಕ್ಕೆ ಇರುವ ಪ್ರಭಾವಶಾಲೀ ತಂತ್ರ. ಅದನ್ನು ನಾವು ನಿಜವಾದ ಜೀವನ

  • ಎನ್ನುತ್ತೇವೆ.

ಆದರೆ ಆಧ್ಯಾತ್ಮಿಕ ಜೀವನದಲ್ಲಿ ನಾವು ಮಂತ್ರಗಳನ್ನು ಬಳಸುವುದೇ ಇಲ್ಲ. ನಾವು ಧರ್ಮಿಷ್ಠರಾಗಿರಲೀ, ಇಲ್ಲದಿರಲಿ, ಆಧ್ಯಾತ್ಮಿಕರಾಗಿರಲಿ, ಇಲ್ಲ ಭೌತಿಕ

ಸಂಸ್ಕೃತಿಯವರಾಗಿರಲಿ, ಮಂತ್ರಗಳನ್ನಂತೂ ನಾವೆಲ್ಲರೂ ನಿರಂತರವಾಗಿ ಪಠಿಸುತ್ತಲೇ ಇರುತ್ತೇವೆ. ಪ್ರತಿದಿನವೂ ನಮ್ಮ ನಿತ್ಯ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆಯೇ ನಾವು ಮಂತ್ರಗಳನ್ನು ಬಳಸುತ್ತೇವೆ. ಮಂತ್ರಗಳು ಸಂಸ್ಕೃತದಲ್ಲಿಯೇ ಇರಬೇಕೆಂಬುದೇನೂ ಇಲ್ಲ. ''ಓಂ ನಮಃ ಶಿವಾಯ'', ''ಹರಿ ಓಂ ನಮೋ ನಾರಾಯಣಾಯ'' ಎನ್ನುವುದಷ್ಟೇ ಮಂತ್ರವಲ್ಲ. ನೀವೆಲ್ಲ ಇಂಗ್ಲಿಷ್ ಮಂತ್ರಗಳನ್ನು ಬಳಸುತ್ತೀರಿ. 'ನಾನು ಗೆಲ್ಲಲೇ ಬೇಕು !', 'ನಾನು ಆತನಿಗೆ ಮನವರಿಕೆ ಮಾಡಿಕೊಡಲೇ ಬೇಕು!', 'ಆಕೆ ನನ್ನನ್ನು ಪ್ರೀತಿಸುವಂತೆ ಮಾಡಲೇಬೇಕು !', ಈ ಮಂತ್ರಗಳಿಗೆ ಅವುಗಳ ಶಬ್ದದಿಂದಲ್ಲ ಶಕ್ತಿ ಬರುವುದು. ನೀವು ಅದರಲ್ಲಿ ತೊಡಗಿಸುವ ಶಕ್ತಿಯಿಂದ ಅವು ಪ್ರಭಾವಶಾಲಿಯಾಗುತ್ತವೆ. ಆದರೆ ಆ ಮಂತ್ರಗಳ ಪ್ರಭಾವ ನಿಮಗೆ ಗೊತ್ತಾಗುವುದಿಲ್ಲ, ಅಷ್ಟೇ !

ಒಂದು ಚಿಕ್ಕ ಕಥೆ :

ಪಾಶ್ಚಿಮಾತ್ಯ ದೇಶದಲ್ಲಿ ಒಮ್ಮೆ ಒಬ್ಬ ಪ್ರಖ್ಯಾತ ಭಾಷಣಕಾರ ಮಂತ್ರಗಳ ಮಹತ್ವದ ಬಗ್ಗೆ ಮಾತನಾಡುತ್ತಿದ್ದ. ಒಬ್ಬ ಮನುಷ್ಯ ಎದ್ದು ಆತನಿಗೆ ಸವಾಲು ಹಾಕಿದ.

''ಇಂಥ ಗೊಡ್ಡು ವಿಷಯಗಳನ್ನೆಲ್ಲ ನಾನು ನಂಬುವುದಿಲ್ಲ. ಕೆಲವು ಶಬ್ದಗಳ ಮಾಲೆಯನ್ನು ಪುನಃ ಪುನಃ ಉಚ್ಚರಿಸುವುದರಿಂದ ನಮ್ಮ ಮನಸ್ಸಿನ ಮೇಲೆ ಹೇಗೆ ತಾನೇ ಪರಿಣಾಮವಾದೀತು ? ಅದನ್ನೆಲ್ಲ ನಂಬಲು ನಾವೇನು ಹುಚ್ಚರೇ ?'' ಎಂದು ಪ್ರಶ್ನಿಸಿದ.

ಭಾಷಣಕಾರ ಆತನನ್ನೊಮ್ಮೆ ದುರುಗುಟ್ಟಿಕೊಂಡು ನೋಡಿ, ''ಬಾಯಿ ಮುಚ್ಚು ಮೂರ್ಖ ! ನನಗೇ ಸವಾಲು ಹಾಕಲು ನಿನಗೆಷ್ಟು ಧೈರ್ಯ!'' ಎಂದು ಅಬ್ಬರಿಸಿದ.

ತಿಳಿವಳಿಕೆಯಿಂದ ಪಲಿಸಿದರೆ, ನಿಮ್ಮ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ದೇಶಿಸಿದರೆ, ನೀವು ಇಷ್ಟಪಟ್ಟಂತಹ ಫಲಿತಾಂಶವನ್ನು ಪಡೆಯಬಹುದು.

ಒಂದು ಮಂತ್ರ ಪ್ರಜ್ಞಾಪೂರ್ವಕವೋ ಅಥವಾ ಅಪ್ರಜ್ಞಾಪೂರ್ವಕವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ನಿಮ್ಮ ದೈನಂದಿನ ಜೀವನವನ್ನು ನಡೆಸುವ ಶಕ್ತಿಯನ್ನು ಹತ್ತಿರದಿಂದ ಪರೀಕ್ಷಿಸಿ. ಅವು ಯಾವುವು? ನಿಮ್ಮ ಕೆಲಸಗಳ ಮೇಲೆ ಅವು ಹೇಗೆ ಪ್ರಭಾವ ಬೀರುತ್ತಿವೆ ಎಂಬುದು ನಿಮಗೆ ಗೊತ್ತೇ? ನೀವು ಪ್ರಜ್ಞಾಪೂರ್ವಕವಾಗಿ ಒಂದು ದಾರಿಯನ್ನು ಆರಿಸಿಕೊಂಡಿದ್ದೀರಾ! ಅದೇ ಏಕೆ ಎಂದು ನಿಮಗೆ ಸ್ಪಷ್ಟವಾಗಿದೆಯೇ?

ನಿಮ್ಮ ಮಂತ್ರ ಅಪ್ರಜ್ಞಾಪೂರ್ವಕವಾಗಿದ್ದರೆ, ಅರ್ಥ ಮಾಡಿಕೊಳ್ಳದೆ, ಅಭ್ಯಾಸ ಬಲದಿಂದ ನೀವು ಕಾರ್ಯಗಳನ್ನು ಮಾಡುತ್ತಿದ್ದರೆ, ಫಲಿತಾಂಶದ ಮೇಲೆ ನಿಮಗೆ ಹತೋಟಿ ಇರುವುದಿಲ್ಲ. ಆ ಅಪ್ರಜ್ಞಾಪೂರ್ವಕ ಪ್ರವೃತ್ತಿ ಎಳೆದುಕೊಂಡು ಹೋದ ಕಡೆಗೆ ನಿಮ್ಮ ಜೀವನ ಸಾಗುತ್ತದೆ.

ಪ್ರಜ್ಞಾಪೂರ್ವಕವಾಗಿ ನೀವು ಮಂತ್ರೋಚ್ಚಾರ ಮಾಡಲು ನಿರ್ಧರಿಸಿದರೆ, 'ನೀವೇ' ಕಾರನ್ನು ಓಡಿಸಿದಂತೆ. ನೀವು, ಮಂತ್ರವೇ ನಿಮ್ಮನ್ನು ಪಾಲಿಸುವಂತೆ ಮಾಡಿದರೆ, ಅಪ್ರಜ್ಞಾಪೂರ್ವಕ ಪ್ರಕ್ರಿಯೆ ಮುಂದುವರಿದು, ನಿಮ್ಮ ಕಾರ್ಯಗಳನ್ನು ನಿಯಂತ್ರಿಸಲು ಅವಕಾಶ ನೀಡಿದಂತೆ 'ಕಾರೇ' ನಿಮ್ಮನ್ನು ಓಡಿಸಿದಂತೆ!

ನೀವು ಕಾರನ್ನು ಓಡಿಸಿದರೆ, ಎಲ್ಲಿಗೆ ಹೋಗುತ್ತಿದ್ದೀರೆಂಬುದು ನಿಮಗೆ ಗೊತ್ತಿರುತ್ತದೆ. ಆದರೆ ಕಾರೇ ನಿಮ್ಮನ್ನು ಓಡಿಸಿದರೆ ಎಲ್ಲಿಗೆ ತಲುಪುತ್ತೇವೆಂಬುದರ ಬಗ್ಗೆ ನಿಮಗೆ ಕಲ್ಪನೆ ಇರುವುದಿಲ್ಲ!

ಒಂದು ದಿನ ನಾನು ಪತ್ರಿಕೆಯೊಂದರಲ್ಲಿ ಜಾಹೀರಾತೊಂದನ್ನು ನೋಡಿದೆ. ನೋವು ನಿವಾರಕ - ತಲೆನೋವಿನ ಮಾತ್ರೆಯೋ - ಎಂಥದೋ.. ಜಾಹೀರಾತಿನಲ್ಲಿ ಆಧುನಿಕ ತರುಣಿಯೊಬ್ಬಳು ನನ್ನೆಡೆಗೆ ಆತ್ಮವಿಶ್ವಾಸದ ನಗೆ ಬೀರುತ್ತಿದ್ದಳು.

ಜಾಹೀರಾತು ಹೀಗಿತ್ತು :

6 ಗಂಟೆಗೆ - ಏಳುವುದು 8 ಗಂಟೆಗೆ - ಮಕ್ಕಳ ಲಾಲನೆ-ಪಾಲನೆ 9 ಗಂಟೆಗೆ - ಕಛೇರಿಗೆ 11 ಗಂಟೆಗೆ - ಸಭೆ 1 ಗಂಟೆಗೆ - ವ್ಯಾಪಾರ ಸಂಬಂಧದ ಊಟ 6 ಗಂಟೆಗೆ - ವಾಪಸ್ 7 ಗಂಟೆಗೆ - ಸಾಮಾನು ಸರಂಜಾಮು ಖರೀದಿ 8 ಗಂಟೆಗೆ - ಅತಿಥಿ - ಅಭ್ಯಾಗತರ ಸೇವೆ 10 ಗಂಟೆಗೆ - ಮಾತ್ರೆ (ಇಲ್ಲಿ ಯಾವುದೋ ಒಂದು ಮಾತ್ರೆಯ ಹೆಸರಿತ್ತು)

ಮಲಗುವುದಕ್ಕೆ ಮುಂಚೆ ಪ್ರತಿದಿನ ತಲೆನೋವಿನ ಮಾತ್ರೆ ನುಂಗುವುದು ಸಂಪರ್ಕಜಾಲಗಳು ಭೂಮಿಯಿಂದ ತುಂಬಾ ದೂರದಲ್ಲಿರುವ ಉಪಗ್ರಹಗಳ ಮೂಲಕ ಒಂದು ಖಂಡದಿಂದ ಮತ್ತೊಂದಕ್ಕೆ ಮಾಹಿತಿಯನ್ನು ಅದ್ಭುತ ವೇಗದಲ್ಲಿ ರವಾನಿಸುತ್ತವೆ.

ಅವರೇ ಹೇಳುವಂತೆ, ಆಲೋಚನೆಗಿಂತಲೂ ವೇಗವಾದ ಸಂಪರ್ಕ ನಮ್ಮಲ್ಲಿದೆ.

ಆದರೆ ಇಂಥ ಧಾವಂತದಲ್ಲಿ ನಾವೆಲ್ಲಿಗೆ ಹೋಗುತ್ತಿದ್ದೇವೆ ?

"ನಾವೆಲ್ಲಾ ಎಲ್ಲಿಗೆ ಓಡುತ್ತಿದ್ದೇವೆ ?"

" ಇಲ್ವಾ ಯಾವುದರಿಂದ ಓಡುತ್ತಿದ್ದೇವೆ ?"

ಸತ್ಯ ಏನೆಂದರೆ ನಾವೆಲ್ಲ ಯಾವುದೋ " ಒಂದೆಡೆಗೆ ಓಡುತ್ತಿರುವುದಷ್ಟೇ ಅಲ್ಲ", ಅದರಿಂದ "ದೂರಕ್ಕೆ ಪಲಾಯನ ಮಾಡುತ್ತಿದ್ದೇವೆ".

ನಮ್ಮನ್ನು ಎರಡು ಸಮಾನ ಒತ್ತಡಗಳು ಓಡಿಸುತ್ತಿವೆ. ಒಂದು "ದುರಾಸೆ", ಮತ್ತೊಂದು "ಅಂಜಿಕೆ".

ಸಮಯವೇ ಇಲ್ಲ. ಇರುವ ಅರವತ್ತೋ, ಎಪ್ಪತ್ತೋ ವರ್ಷಗಳಲ್ಲಿ ಎಷ್ಟೆಲ್ಲಾ ಆಸೆಗಳನ್ನು ಪೂರೈಸಿಕೊಳ್ಳಬೇಕು ! ಗರಿಷ್ಠ ಪ್ರಮಾಣದಲ್ಲಿ ಭೋಗ ವಸ್ತುಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಪಾರವಾದ ಅನುಭವಗಳ ರುಚಿ ನೋಡಬೇಕು, ಎಂದು ದುರಾಸೆ ಹೇಳುತ್ತದೆ.

ಮುಯ್ದಿ ತೀರಿಸಿಕೊಳ್ಳುವಂತೆ ನೀವು ಬದುಕಬೇಕು !

ಸಾವು ನಿಶ್ಚಿತವಾಗಿರುವ ರೋಗಿ ತನ್ನ ಕೊನೆಯ ಕೆಲದಿನಗಳನ್ನು ಅನುಭವಿಸುವಂತೆ, ನಾವು ನಿರಂತರವಾಗಿ ಒಂದಾದ ಮೇಲೊಂದು ಸುಖ ಅನುಭವಿಸಲು ಹಾತೊರೆಯುತ್ತಿರುತ್ತೇವೆ. ಹಾಗಾಗಿ ನಾವು ಆಂಶಿಕವಾಗಿ, ಮಾನಸಿಕವಾಗಿ ಬದುಕಲು ಆರಂಭಿಸುತ್ತೇವೆ. ಇದು ಇತ್ತೀಚಿಗಿನ ನಮ್ಮ ಬದುಕುವ ಶೈಲಿ.

ಮಾನಸಿಕ ಸಂತೋಷವೆಂದರೆ "ವಾಸ್ತವವಾಗಿ ಅನುಭವಿಸದೆ, ಸಂತೋಷ ಪಡುತ್ತಿರುವುದು" ಎಂದರ್ಥ.

ಬೆಳಗಿನ ಜಾವ 3, 4 ಗಂಟೆಯವರೆಗೆ ದುಡಿಯುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಕಂಪ್ಯೂಟರ್‌ನಲ್ಲಿ ಸುಂದರವಾದ ಪರ್ವತಗಳು, ಬಂದರುಗಳ ಚಿತ್ರವನ್ನು ಖಂಡಿತವಾಗಿ ಹಾಕಿಕೊಂಡಿರುತ್ತಾನೆ!

ಕಛೇರಿಯಲ್ಲೇ ಕುಳಿತು ಅವನ್ನೆಲ್ಲಾ ನೋಡುತ್ತಾ, ಪರ್ವತಗಳ ಸೌಂದರ್ಯವನ್ನು ಅವನು ಆಸ್ವಾದಿಸುತ್ತಾನೆ. ಸಮುದ್ರದ ಅಲೆಗಳ ಧ್ವನಿಯನ್ನು ಆಲಿಸಲು ಪ್ರಯತ್ನಿಸುತ್ತಾನೆ.

ಇದನ್ನೆಲ್ಲಾ ಏನನ್ನುತ್ತಾರೆ ?.... ಅದಕ್ಕೊಂದು ಪದವಿದೆ... ಬಹುಮುಖಿ ದುಡಿಮೆ ? ಎಂಜಿನೀಯರ್‌ನ ಪ್ರಕಾರ ಅವನದು ಬಹುಮುಖಿ ದುಡಿಮೆ ! ಆತ ಕಛೇರಿ ಕೆಲಸ ಮಾಡುತ್ತಲೇ ಬಂದರಿನ ಸೌಂದರ್ಯವನ್ನೂ ಆಸ್ವಾದಿಸುತ್ತಾನೆ. ಎಂಥಹ ಒಳ್ಳೆಯ ಆಯ್ಕೆ !

ಆದರೆ ದುಃಖದ ಸಂಗತಿಯೆಂದರೆ, ಕಂಪ್ಯೂಟರ್‌ನಲ್ಲಿರುವ ಚಿತ್ರ, ಅವನಿಗೆ ಎಂದೂ ದೊರೆಯದ ರಜೆಯನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಯುಕ್ತ ಸಮಯಕ್ಕೂ ಮೊದಲೇ ಆತ ಆ ಸಂಸ್ಥೆಯ ಅತ್ಯಂತ ಕಿರಿಯ ಯೋಜನಾ ನಿರ್ವಾಹಕನಾಗಿ ಬಡ್ತಿ ಪಡೆಯಲು ಅಹರ್ನಿಶಿ ದುಡಿಯುತ್ತಿರುತ್ತಾನೆ.

ಸಮಯಕ್ಕೂ ಮೊದಲೇ ಕೆಲಸಗಳನ್ನು ಮುಗಿಸಿಬಿಡುವ ಗೀಳು ನಮಗೆಲ್ಲಾ ಇರುತ್ತದೆ.

ಈಚಿನ ದಿನಗಳಲ್ಲಂತೂ ನಾವು 6 ತಿಂಗಳ ಮಗುವಿಗೇ ಶೌಚ ತರಬೇತಿ ನೀಡಲು ಯತ್ನಿಸುತ್ತೇವೆ! ಮಕ್ಕಳು, ಅವುಗಳ ಸಮಯಕ್ಕಿಂತ ಎಷ್ಟೋ ವರ್ಷ ಮುಂಚೆಯೇ ಬೆಳೆದು ಬಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ.

ಇದು ಎಂಥಹ ತಿಳಿಗೇಡಿತನವೆಂದರೆ, ಮಾವು, ಮೊದಲ ವರ್ಷವೇ ಫಲ ಬಿಡಬೇಕೆಂದು ನಿರೀಕ್ಷಿಸುವ ಹಾಗೆ! ಇದು ಸರಳವಾಗಿ ಮರದ ಪ್ರಕೃತಿ ನಿಯಮಕ್ಕೆ ವಿರುದ್ಧ.

"ನಾವೇಕೆ ಹಾಗೆ ಮಾಡುತ್ತೇವೆ?"

ಹಿಂದೆ ನಾವು ಅಪೇಕ್ಷಿಸಿದ್ದನ್ನೆಲ್ಲಾ ಮಾಡಲು ಒಂದು ಜೀವಮಾನ ಸಾಕಬೇಕಾದಷ್ಟಾಗುತ್ತಿತ್ತು.

ಹೆಚ್ಚೆಂದರೆ, ಮನುಷ್ಯನಿಗೆ ಏನು ಬೇಕಾಗಿತ್ತು ? ಒಂದಿಷ್ಟು ಶಿಕ್ಷಣ. ಆತ ತನ್ನ ತಂದೆಯ ವ್ಯವಹಾರವನ್ನೋ, ಹೊಲಗದ್ದೆಯನ್ನೋ ನೋಡಿಕೊಳ್ಳುತ್ತಿದ್ದ. ಆತ ಮದುವೆಯಾಗಿ, ಮಕ್ಕಳನ್ನು ಪಡೆದು, ಅದೇ ಪಟ್ಟಣದಲ್ಲಿ, ಅದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ. ಧಾವಂತ ಎಲ್ಲಿತ್ತು?

ಈಗ, ನಮಗೆ ಜೀವನ ಹೇಗೆ ಬರುತ್ತದೋ ಹಾಗೆ ಸಾಗಿಸುವ ತಾಳ್ಮೆಯೇ ಇಲ್ಲ!

ಕೆಲ ವಾರಗಳ ಹಿಂದೆ ಒಬ್ಬ ತರುಣ ನನ್ನನ್ನು ನೋಡಲು ಬಂದ. ಮೂವತ್ತರ ಆಸುಪಾಸಿನಲ್ಲಿದ್ದ ಆತ ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಆತ ನನಗೆ ಹೇಳಿದ: "ಸ್ವಾಮೀಜೀ, ನನ್ನದೆಲ್ಲ ಇತ್ಯರ್ಥವಾಗಿದೆ. 25 ವರ್ಷಗಳ ಅವಧಿಗೆ ಸಾಲ ಪಡೆದು ನಾನೊಂದು ಮನೆಯನ್ನು ಕಟ್ಟಿಸುತ್ತಿದ್ದೇನೆ. ಸಾಲ ತೀರಿಸುವ ಹೊತ್ತಿಗೆ ನನ್ನ ಮಗಳ ಮದುವೆಯಾಗಿ ಹೋಗಿರುತ್ತದೆ. (ಒಂದು ಚಿಕ್ಕ ಹುಡುಗಿ ಆತನ ಕೈ ಹಿಡಿದು ನಿಂತಿದ್ದಾಳೆ) ನನ್ನ ಮಗನಿಗೊಂದು

ಆದರೆ ಇಂದು ನಾವು ನೋಡುವ ಹುಚ್ಚು ಧಾವಂತ ವಿಜ್ಞಾನದ ತೀರಾ ದೂರಗಾಮಿ ಪರಿಣಾಮಗಳ ಫಲ.

ಈ ನಿರಂತರ ಓಟ, ನಮ್ಮೊಳಗಿನ ಅವಿಶ್ರಾಂತಿಯನ್ನು ಪ್ರತಿಬಿಂಬಿಸುತ್ತದೆ.

ವಾಸ್ತವವಾಗಿ, ನಮ್ಮೊಳಗಿನ ಅವಿಶ್ರಾಂತಿಯಿಂದಲೇ ನಾವು ಓಡಲೇ ಬೇಕಾಗುತ್ತದೆ. ನಾವು ಯಾವುದೋ ಒಂದು ಮುಖ್ಯವಾದದ್ದನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಮಗನಿಸುತ್ತದೆ. ಆದರೆ ಅದೇನು ಎಂಬುದು ಮಾತ್ರ ನಮಗೆ ಗೊತ್ತಾಗುವುದಿಲ್ಲ. ನಾವು ಅದನ್ನು ಕಂಡು ಹಿಡಿಯಲು ಧಾವಂತ ಪಡಬೇಕಾಗುತ್ತದೆ !

ಒಂದಲ್ಲಾ ಒಂದು ಸಮಯದಲ್ಲಿ ಮುಖ್ಯವಾದ ರೈಲೋ, ಬಸ್ಸೋ ಕೈ ತಪ್ಪಿ ಹೋಗಬಹುದೆಂದು ನಮ್ಮಲ್ಲಿ ಎಷ್ಟು ಜನ ಊಹಿಸಿರಲು ಸಾಧ್ಯ ?

ಇದು ತುಂಬಾ ಸಾಮಾನ್ಯವಾದ ಊಹೆ ಮತ್ತು ತುಂಬಾ ಗಮನಾರ್ಹವಾದದ್ದು. ನಮ್ಮಲ್ಲಿ ಬಹುತೇಕ ಜನ ಜೀವನದಲ್ಲಿ ಏನೋ ಕಳೆದುಕೊಳ್ಳುವ ಅಂಜಿಕೆಯಲ್ಲೇ ಬದುಕುತ್ತಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ.

ಒಳಗೊಳಗೆ ನಮಗೆ ನಾವು ಜೀವನದ ರೈಲನ್ನು ಹೇಗೋ ತಪ್ಪಿಸಿಕೊಂಡು ಬಿಟ್ಟಿದ್ದೇವೆ ಎಂಬ ಭಾವನೆ ಇರುತ್ತದೆ.

ಅದು ಹೇಗಾಯಿತು ಎಂಬುದು ನಮಗೆ ಅರ್ಥವಾಗುವುದಿಲ್ಲ !

ಕನಸಿನುದ್ದಕ್ಕೂ ನಾವು ಧಾವಂತ ಪಡುತ್ತಲೇ ಇರುತ್ತೇವೆ. ವೇಳಾಪಟ್ಟಿಯನ್ನು ಪರಿಶೀಲಿಸುತ್ತ ಲೇ ಇರುತ್ತೇವೆ. ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇರುತ್ತೇವೆ. ಕೂಗಾಡುತ್ತಾ ಒಬ್ಬರನ್ನೊಬ್ಬರು ಅವಸರ ಪಡಿಸುತ್ತಲೇ ಇರುತ್ತೇವೆ. ಆದರೆ ಕೊನೆಗೊಮ್ಮೆ ನಿಲ್ದಾಣಕ್ಕೆ ಬಂದಾಗ ರೈಲು ಹೊರಟು ಬಿಟ್ಟಿರುತ್ತದೆ. ಅದಾಗಲೇ ತುಂಬಾ ತಡವಾಗಿರುತ್ತದೆ.

ಈಚಿನ ದಿನಗಳಲ್ಲಿ ಏಕ ಕಾಲಕ್ಕೆ 5 ಬೇರೆ ಬೇರೆ ರೈಲುಗಳಲ್ಲಿ ಸ್ಥಳ ಕಾದಿರಿಸುವ ವ್ಯವಸ್ಥೆ ಇದೆ. ಅಷ್ಟಾದರೂ ನಮಗೆ ಎಲ್ಲಾ ರೈಲುಗಳೂ ಹೇಗೋ ತಪ್ಪಿ ಹೋಗಿರುವುದು ಗೊತ್ತಾಗುತ್ತದೆ.

ನಮ್ಮ ಜೀವನದಲ್ಲಿ ಆಗುವುದೂ ಹೀಗೇ!

ಮಗುವಿಗೆ ಬೇರೆ ಬೇರೆ ಸ್ವಾದದ 10 ಲಾಲಿಪಾಪ್‌ಗಳನ್ನು ಕೊಟ್ಟು, ಇದೇ ನಿಮಿಷದಲ್ಲಿ ತಿಂದು ಮುಗಿಸುವಂತೆ ಹೇಳಿದಂತಿದೆ ನಮ್ಮ ಸ್ಥಿತಿ! ದುರಾಸೆಯಿಂದ ಅವನ್ನೆಲ್ಲಾ ನೆಕ್ಕುವ ನಮಗೆ, ಅದರ ನಿಜವಾದ ಸ್ವಾದವನ್ನು ಆಸ್ವಾದಿಸಲು ಸಮಯವೇ ಇಲ್ಲ.

ಕಳೆದ 5 ವರ್ಷಗಳಲ್ಲಿ ನೀವು ಹೇಗೆ ಬದುಕಿದ್ದೀರಿ ಎಂಬುದನ್ನು ಒಂದು ಕ್ಷಣ ಹಿಂತಿರುಗಿ ನೋಡಿ. ಸಮಯವೇ ಇಲ್ಲ ಎಂಬ ಕಾರಣಕ್ಕಾಗಿ ಎಷ್ಟು ಸಲ ನೀವು ಮಾಡಲೇಬೇಕಾದ ಕೆಲಸವನ್ನು ಕೈ ಬಿಟ್ಟಿದ್ದೀರಿ?

ಇಷ್ಟೆಲ್ಲಾ ಓಟದ ಅಗತ್ಯವಾದರೂ ಇತ್ತೇ?

ಅಂದಮಾತ್ರಕ್ಕೆ, ಪೌರಾತ್ಯ ಪದ್ಧತಿಯಂತೆ! ತತ್ವಶಾಸ್ತ್ರದ ಗಾಢ ನಿದ್ರೆಯಲ್ಲಿ ನಮ್ಮ ಜೀವನವನ್ನು ಕಳೆಯುವುದು ಸರಿ ಎಂದರ್ಥವಲ್ಲ.

ಜೀವನವನ್ನು ಮುಂದುೂಡುವುದು ಎಂದೂ ಅರ್ಥವಲ್ಲ.

ಭವಿಷ್ಯವನ್ನು ಸಂಪೂರ್ಣವಾಗಿ ಅಲಕ್ಷಿಸಿ, ವರ್ತಮಾನದಲ್ಲಷ್ಟೇ ಬದುಕುವುದು ಸಾಧ್ಯವಿಲ್ಲ.

ಪ್ರತಿದಿನ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿರ್ಧಾರಗಳನ್ನು ಕೈಗೊಳ್ಳ ಬೇಕಾಗಿರುತ್ತದೆ. ಗಡುವು ಹಾಕಿಕೊಂಡು ನಾವು ಬದುಕ ಬೇಕಾಗುತ್ತದೆ. ನಾವು ಮುಂದಾಲೋಚಿಸಿ, ಕನಸುಗಳನ್ನು ನನಸು ಮಾಡಿಕೊಳ್ಳಬೇಕು.

ಆಗ ನೀವೇ ಬಯಸಿದರೂ ಎರಡೇ ಎರಡು ಗಂಟೆ ಕಾಲ ಮುಂದಕ್ಕೆ ಹೋಗಲಾರಿರಿ. ಮಾನಸಿಕವಾಗಿ ನೀವು ಮುಂದಕ್ಕೆ ಹೋಗಿ ಗಾಢನಿದ್ರೆಯಲ್ಲಿರುವಂತೆ ಅಂದುಕೊಳ್ಳಬಹುದು. ಆದರೆ ಭೌತಿಕವಾಗಿ ನೀವು ಇಲ್ಲೇ ಇರುತ್ತೀರಿ!

ಲಾವೋತ್ಸ "ವೀ - ವು - ವೀ'' ಎಂಬ ಸುಂದರ ಉಕ್ತಿಯನ್ನು ಬಳಸುತ್ತಾರೆ.

"ವೀ - ವು - ವೀ'' ಎಂದರೆ ಕೆಲಸ ಇಲ್ಲದ ಕೆಲಸ ಎಂದರ್ಥ.

ಇದು ಅತ್ಯಂತ ಹರ್ಷದಾಯಕವಾಗಿ ಜೀವಿಸುವ ವಿಧಾನವೇ ಇರಬೇಕು !

ವೀ - ವು - ವೀ ಎಂದರೆ ಪ್ರತಿಯೊಂದು ಕೆಲಸದಲ್ಲೂ ಸಮಯಸ್ಫೂರ್ತಿಯಿಂದ, ಕ್ರೀಡಾ ಮನೋಭಾವದಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಎಂದರ್ಥ. ಕೆಲಸವನ್ನು ಆಟವಾಗಿ ಪರಿವರ್ತಿಸುವ ಸುಂದರ ವಿಧಾನ ಇದು.

ಇನ್ನೊಮ್ಮೆ ಪಾತ್ರೆ ತೊಳೆಯಲು ನಿಮಗೆ ಬೇಸರವಾದಾಗ, ನಿಮ್ಮ ಮಗುವನ್ನು ಕರೆದು ಆ ಕೆಲಸ ಮಾಡುವಂತೆ ಅದಕ್ಕೊಂದು ಅವಕಾಶ ಕೊಡಿ !

ಅವಳು ಹೇಗೆ ಆ ಕೆಲಸ ಮಾಡುತ್ತಾಳೆಂದು ಗಮನಿಸಿ. ಆಕೆಯ ಪುಟ್ಟ ಶರೀರದ ಕಣಕಣವೂ ಆ ಕೆಲಸದಲ್ಲಿ ತೊಡಗಿಕೊಳ್ಳುತ್ತದೆ ! ಪಾತ್ರೆಯ ಮೇಲೆ, ಪ್ರತಿ ಸೋಪಿನ ಗುಳ್ಳೆ ಮೂಡುವ ಪರಿಯನ್ನು ನೋಡಿ ಆಕೆ ಖುಷಿ ಪಡುತ್ತಾಳೆ. ಅದನ್ನು ಬೇಗ ಮುಗಿಸಿ, ಇನ್ನಾವುದೋ ಮುಖ್ಯ ಕೆಲಸದಲ್ಲಿ ತೊಡಗಿಸಿಕೊಳ್ಳುವ ತರಾತುರಿ ಆಕೆಗೆ ಇರುವುದಿಲ್ಲ.

''ವಾಸ್ತವವಾಗಿ ಪ್ರತಿಯೊಂದು ಮಗುವಿಗೂ ಆ ಕ್ಷಣದಲ್ಲಿ ಅದು ಮಾಡುತ್ತಿರುವುದೇ ಅದರ ಜೀವನದ ಅತ್ಯಂತ ಪ್ರಮುಖವಾದ ಕೆಲಸ !''

ಅದೇ ವೀ - ವು - ವೀ. ಆರಂಭಿಸಿದೆವೋ ಅದರಲ್ಲಿ ಎಷ್ಟೋ ಕಾರಣಗಳು ಈಗ ಅಪ್ರಸ್ತುತ ಎಂದಾದರೂ ಸರಿ, ಅದನ್ನು ಅರಿತುಕೊಳ್ಳುವುದು ಎಂದರ್ಥ).

ಬೇರೆ ದಾರಿಯೇ ಇಲ್ಲ!

ಅತ್ಯುತ್ತಮ ಟ್ರಾನ್ಸ್‌ ಅಟ್ಲಾಂಟಿಕ್ ವಿಮಾನಗಳೂ ಕೂಡ ಮತ್ತೆ ಮತ್ತೆ ಇಂಧನ ತುಂಬಿಸದಿದ್ದರೆ ನಿರಂತರವಾಗಿ ಹಾರಲಾರವು ಎಂಬುದನ್ನು ನೆನಪಿಡಿ.

ನಿರಂತರವಾದ ಧಾವಂತವೆಂದರೆ ನರರೋಗಕ್ಕೆ ಆಹ್ವಾನ ನೀಡಿದಂತೆಯೇ ಸರಿ.

ತಡೆ - ತಂತಾನೇ ಒಂದು ಗುಣಪಡಿಸುವ ವಿಧಾನ.

ಧಾವಂತ ನಿಲ್ಲಿಸಿದರೆ, ನಮ್ಮೆಲ್ಲಾ ತರಾತುರಿಗೂ ಅರ್ಥ ದೊರೆಯುತ್ತದೆ.

ನಿಮ್ಮ ಕುಟುಂಬ ಅಥವಾ ಮಿತ್ರರೊಂದಿಗೆ ಈ ತಮಾಷೆಯ ಪ್ರಯೋಗವನ್ನು ಮಾಡಿನೋಡಿ: "ಯಾವಾಗ ನಿಲ್ಲಿಸಬೇಕು!" ಎಂಬುದನ್ನು ಪರಸ್ಪರರಿಗೆ ಹೇಳಿಕೊಳ್ಳಿ.

ಇದು ಒಂದು ಅತ್ಯುತ್ತಮ ತಂತ್ರ.

ನೀವು ಯಾವುದೋ ಕೆಲಸದ ಮಧ್ಯದಲ್ಲಿದ್ದಾಗ ಮತ್ತಾರೋ "ನಿಲ್ಲು!" ಎಂದು ಕೂಗಿದರೆ ನೀವು ಹಠಾತ್ತಾಗಿ ವಾಸ್ತವಕ್ಕೆ ಬರುತ್ತೀರಿ.

ನಿಮ್ಮ ಧಾವಂತಕ್ಕೆ ಹಠಾತ್ ವಿರಾಮ ಬೀಳುತ್ತದೆ.

ನೀವು ಅರಿವಿನತ್ತ ಹಾರುತ್ತೀರಿ.

ನೀವು ವರ್ತಮಾನಕ್ಕೆ ಪುನಃ ಪ್ರವೇಶ ಮಾಡುತ್ತೀರಿ!

ಪ್ರಶ್ನೆ : ಸ್ವಾಮೀಜೀ ವೇದನೆ ಎಂದರೇನು ? ನಮ್ಮ ಜೀವನದಲ್ಲಿ ಅದು ಅಗತ್ಯವೇ ?

ಬುದ್ಧನದೊಂದು ಸುಂದರವಾದ ಸೂತ್ರ ಇದೆ.

"ದುಃಖವೂ ಇಲ್ಲ, ಕಾರಣವೂ ಇಲ್ಲ, ಅಂತ್ಯವೂ ಇಲ್ಲ".

"ದುಃಖ - ವೇದನೆ - ಸಂತಾಪ" ಎಂದರೆ ನಿಖರವಾಗಿ ಏನು ?

ನಮ್ಮ ಜೀವನದ , ಒಂದಲ್ಲಾ ಒಂದು ಸಮಯದಲ್ಲಿ ನಾವೆಲ್ಲಾ ವೇದನೆಯನ್ನು ಅನುಭವಿಸಿಯೇ ಇರುತ್ತೇವೆ.

"ನೀವೇಕೆ ವೇದನೆಯನ್ನು ಆರಿಸಿಕೊಂಡಿರಿ? ಅದರ ಅಗತ್ಯವಿತ್ತೇ? ಎಂದು ನಾನೇನಾದರೂ ಕೇಳಿದರೆ,

ನಿಮಗೆ ಅದೊಂದು ಮೂರ್ಖತನದ ಪ್ರಶ್ನೆಯಾಗಿ ಕಂಡೀತು !

ಯಾರಾದರೂ ವೇದನೆಯನ್ನು ಆರಿಸಿಕೊಳ್ಳುತ್ತಾರಾ ಸ್ವಾಮೀಜೀ ? ನೀವು ಕೇಳುತ್ತೀರಿ. "ವೇದನೆಯಾಗುತ್ತದೆ ಅಷ್ಟೇ, ಅದಕ್ಕೆ ಏನೂ ಮಾಡಲಾಗದು..."

ಆದರೆ ನಿಜವೇನೆಂದರೆ "ವೇದನೆ ಒಂದು ಆಯ್ಕೆ!". ವೇದನೆ, ಜೀವನದ ಒಂದು ಸ್ಥಿತಿಯಲ್ಲ - ಅದೊಂದು ಮನಸ್ಸಿನ ಸ್ಥಿತಿ. ಅದೊಂದು ಆಂತರಿಕ ವಿದ್ಯಮಾನವೇ ಹೊರತು ಬಾಹ್ಯವಾದದ್ದಲ್ಲ!

ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನೀವು ವೇದನೆಯನ್ನು ಅನುಭವಿಸುತ್ತೀರೋ - ಇಲ್ಲವೋ ಎಂಬುದು ಆ ಸನ್ನಿವೇಶವನ್ನು ನೀವು ಹೇಗೆ ಪ್ರಾಣಾಪಾಯದಿಂದ ಪಾರಾಗಿದ್ದವನೊಬ್ಬನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮಿತ್ರನೊಬ್ಬ, “ಬಿದ್ದಾಗ ತುಂಬಾ ನೋವಾಯಿತೇ?'' ಎಂದು ಯೋಗಕ್ಷೇಮ ವಿಚಾರಿಸಿದ. “ಓಹ್, ಇಲ್ಲಾ.. ಬಿದ್ದಾಗ ಒಂದಿಷ್ಟೂ ನೋವಾಗಲಿಲ್ಲ. ನೆಲ ಮುಟ್ಟಿದಾಗಲಷ್ಟೇ ನೋವಾಗಿದ್ದು!'' ಎಂದು ರೋಗಿ ಉತ್ತರಿಸಿದ.

ಪ್ರವಾಹದೊಂದಿಗೆ ಹೋಗುತ್ತಿರುವಷ್ಟು ಹೊತ್ತೂ ಒಂದಿಷ್ಟೂ ನೋವು ಇರುವುದಿಲ್ಲ. ವೇದನೆಯೂ ಆಗುವುದಿಲ್ಲ. ಜೀವನದ ದಾರಿಯಲ್ಲಿ “ನಿಮ್ಮ'' ಕಲ್ಪನೆಗಳು, ನಿರೀಕ್ಷೆಗಳನ್ನಿಟ್ಟಾಗ ಆ ಪ್ರವಾಹಕ್ಕೆ ಅಡಚಣೆ ಉಂಟುಮಾಡುತ್ತೀರಿ. ಎಷ್ಟೋ ವೇಳೆ ವೇದನೆಯನ್ನು ತಪ್ಪಿಸಿಕೊಳ್ಳಲು ನೀವು ಮಾಡುವ ಪ್ರಯತ್ನಗಳಿಂದಲೇ ಇನ್ನೂ ಹೆಚ್ಚಿನ ವೇದನೆಯಾಗುತ್ತದೆ!

ಸಾವಿನ ವಿಷಯವನ್ನೇ ತೆಗೆದುಕೊಳ್ಳಿ! ಒಂದು ಘಟನೆಯಾಗಿ ಅದು ನಿಮಗೆ ಒಮ್ಮೆ ಮಾತ್ರ ನೋವನ್ನುಂಟು ಮಾಡಬಹುದು. ಆದರೆ ಸಾವಿನ ಭಯ ಜೀವನದುದ್ದಕ್ಕೂ ನಿಮ್ಮನ್ನು ಕಾಡುತ್ತಲೇ ಇರುತ್ತದೆ! ಸಾವಿನಿಂದ ದೂರವಾಗುವ ನಿಮ್ಮ ನಿರಂತರ ಪ್ರಯತ್ನವೇ ಸಾವಿಗಿಂತಲೂ ಹೆಚ್ಚು ನಿಮಗೆ ವೇದನೆಯನ್ನು ಉಂಟುಮಾಡುತ್ತದೆ!

ಅಪಘಾತ, ಅಥವಾ ಒಂದು ಮಾರಕ ರೋಗದಂತಹ ಪ್ರಮುಖ ಘಟನೆಯಿಂದ ವೇದನೆಯುಂಟಾಗುವುದು ಅಪರೂಪ. ದಿನ - ದಿನಕ್ಕೂ ಬಾಂಧವ್ಯದಲ್ಲಿನ ತಿಕ್ಕಾಟ, ದೈನಂದಿನ ಜೀವನದ ಏರುಪೇರುಗಳಿಂದಲೇ ನಮ್ಮ ಹೆಚ್ಚಿನ ವೇದನೆಗಳು ಉದ್ಭವಿಸುತ್ತವೆ.

ಎಷ್ಟೋ ಮನೆಗಳಲ್ಲಿ, ಮದುವೆಯಾದ 30 ವರ್ಷಗಳ ನಂತರವೂ ಅದೇ ವಿಷಯಗಳಿಗಾಗಿ ಗಂಡ - ಹೆಂಡಿರು ದಿನವೂ ಕಚ್ಚಾಡುವುದನ್ನು ನೀವು ಕಾಣುತ್ತೀರಿ! ಅವರಿಗೆ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಲೂ ಆಗುವುದಿಲ್ಲ.

ಬೇರೆಯವರನ್ನು ಒಪ್ಪಿಕೊಳ್ಳಲೂ ಆಗುವುದಿಲ್ಲ. ಇದೇ ನಿಜವಾದ ಸಂಸಾರ - ನೀವು ಗುರುತಿಸಲೂ ಆಗದ, ನಿಯಂತ್ರಿಸಲೂ ಆಗದ ನಿಮ್ಮ ಪುನರಾವರ್ತಿತ ಜೀವನಶೈಲಿಯೇ ಕೊನೆಯಿಲ್ಲದ ವೇದನೆಗೆ ಕಾರಣವಾಗುತ್ತದೆ.

ಬಾಹ್ಯ ವಿಷಯಗಳ ಮೇಲೆ ಅಥವಾ ಬೇರೆಯವರ ಮೇಲೆ ಭಾವನಾತ್ಮಕವಾಗಿ ನೀವು ಅತಿಯಾದ ವಿಶ್ವಾಸವಿರಿಸಿದಾಗ ವೇದನೆ ಉಂಟಾಗುತ್ತದೆ. ಅವುಗಳ ಮೇಲೆ ನಿಮಗೆ ಎಷ್ಟು ತಾನೇ ನಿಯಂತ್ರಣ ಇದ್ದೀತು ?

ಸ್ಪೂರ್ತಿಗೆ ನೀವೇ ಮೂಲವಾಗಿ ನಿಮ್ಮ ಸುಖಸಂತೋಷವನ್ನು ಬೇರೆಯವರಿಗೆ ಒತ್ತೆ ಇಡಬೇಡಿ! ನಿಮ್ಮ ಸಂತೋಷಕ್ಕೆ ಶೇಕಡಾ ನೂರರಷ್ಟು ನೀವೇ ಜವಾಬ್ದಾರಿ ಎಂಬುದನ್ನು ನೆನಪಿಡಿ. "ನಿಮ್ಮ ಮೌನ ಸಮ್ಮತಿ ಇಲ್ಲದಿದ್ದರೆ ಬೇರೆ ಯಾರೂ ಅಥವಾ ಯಾವುದೂ ನಿಮಗೆ ವೇದನೆ ಉಂಟು ಮಾಡಲಾಗದು!" ಇವು ಕೇವಲ ನಿಮ್ಮನ್ನು ಪ್ರಚೋದಿಸುವ ಮಾತುಗಳಲ್ಲ. ಇದೇ ಸರಳವಾದ ಸತ್ಯ.

ನಿಮ್ಮದೇ ಅನುಭವಗಳಿಗೆ ಸಾಕ್ಷಿಯಾಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಯಾವುದು ನಿಮಗೆ ವೇದನೆಯನ್ನು ಉಂಟುಮಾಡುತ್ತಿದೆ ? ಅದಕ್ಕೆ ನೀವೇನಾದರೂ ಮಾಡಬಹುದೇ ಎಂದು ಯೋಚಿಸಿ.

ಏನಾದರೂ ಮಾಡಬಹುದಾಗಿದ್ದರೆ ಮಾಡಿ.

ಸನ್ನಿವೇಶ ನಿಮ್ಮ ಹತೋಟಿಗೆ ಮೀರಿದ್ದರೆ, ಈ ಎರಡು ದಾರಿಗಳಲ್ಲಿ ಒಂದನ್ನು ಆರಿಸಿಕೊಳ್ಳಿ. (ಅ) ನೀವೇ ವೇದನೆಯನ್ನು ಅನುಭವಿಸಿ, ಅಥವಾ (ಬ) ಸನ್ನಿವೇಶವನ್ನು ಒಪ್ಪಿಕೊಳ್ಳಿ, ಜೀವನ ಸಾಗಿಸಿ.

ಆಯ್ಕೆ ನಿಮ್ಮದೇ !

ಒಂದು ಚಿಕ್ಕ ಕಥೆ : ದೊರೆಯುವುದರಿಂದ, ಕಾಯಿಲೆ ಬೀಳುವುದು ಕೂಡ ನಿಮ್ಮ ಸಂತೋಷಕ್ಕೆ ಕಾರಣವಾಗಬಹುದು, 'ಅನಾರೋಗ್ಯ - ಭಾಗ್ಯ'.

ಒಂದು ಚಿಕ್ಕ ಕಥೆ :

ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಪ್ರತಿದಿನ ಊಟಕ್ಕೆ ಒಂದೇ ತಿಂಡಿ ತರುತ್ತಿದ್ದ. ಪ್ರತಿದಿನವೂ ಅದನ್ನು ಕಂಡರೆ ತನಗೆ ವಾಕರಿಕೆ ಬರುತ್ತದೆ ಎಂದು ದೂರುತ್ತಿದ್ದ. ಆತನ ಸ್ನೇಹಿತರು ಸಹಾನುಭೂತಿಯಿಂದ ತಮ್ಮ ಊಟವನ್ನು ಅವನಿಗೆ ಹಂಚಿ ಕೊಡುತ್ತಿದ್ದರು. ಕೊನೆಗೊಮ್ಮೆ ಅವರೆಲ್ಲಾ ಆತನ ಪರಿಸ್ಥಿತಿಗೆ ಅನುಕಂಪ ತೋರಿಸುತ್ತಾ, ''ನಿನಗೆ ಇದು ಇಷ್ಟವಾಗುವುದಿಲ್ಲವೆಂದು ನಿನ್ನ ಹೆಂಡತಿಗೆ ಗೊತ್ತಿಲ್ಲವೇ ? ಬೇರೆ ನಿನಗಿಷ್ಟವಾದದ್ದನ್ನೇನಾದರೂ ಮಾಡಿ ಕೊಡಬೇಕೆಂದು ನಿನ್ನ ಹೆಂಡತಿಯನ್ನು ನೀನೇಕೆ ಕೇಳಬಾರದು ?'' ಎಂದು ಸಲಹೆ ಮಾಡಿದರು.

''ಹೆಂಡತಿಯೇ ? ನಾನೊಬ್ಬ ಬ್ರಹ್ಮಚಾರಿ. ನನ್ನ ಊಟ - ತಿಂಡಿಗಳನ್ನು ನಾನೇ ಬೇಯಿಸಿಕೊಳ್ಳುತ್ತೇನೆ'' ಎಂದಾತ ಉತ್ತರಿಸಿದ.

ಧೂರ್ತ ಬುದ್ಧಿಯಿಂದ ಎಷ್ಟು ಸಲ ನಿಮಗೆ ನೀವೇ ಹೀಗೆ ಮಾಡಿಕೊಳ್ಳುವುದಿಲ್ಲ ? ಬೇರೆಯವರ ಸಹಾನುಭೂತಿ ಗಿಟ್ಟಿಸಿಕೊಳ್ಳಲು, ಉದ್ದೇಶಪೂರ್ವಕವಾಗಿ ವೇದನೆಯನ್ನು ಸೃಷ್ಟಿಸಿಕೊಳ್ಳುವುದು. ಉದಾಹರಣೆಗೆ: ಯಾರೊಂದಿಗೋ ಜಗಳವಾಡಿ ಅವನನ್ನು ಉಗಿಯುವುದಕ್ಕೋಸ್ಕರ, ಊಟ ಮಾಡದೆ ಹೋಗುವುದು ?

ನಿಮಗೆ ನೀವೇ ಅಥವಾ ಬೇರೆಯವರಿಗೆ ವೇದನೆಯನ್ನು ಉಂಟು ಮಾಡಿ ಅದು ನಿಮಗೇಕೆ ಸಂತೋಷ ಕೊಡುತ್ತದೆ ಎಂದು ಯೋಚಿಸಿ. ವೇದನೆ ಇಲ್ಲದೆ ಅದೇ ಸುಖ - ಸಂತೋಷ ಅನುಭವಿಸಲು ಬೇರೆ ಉತ್ತಮವಾದ ದಾರಿ ಇದೆಯೇ ?

ನಿಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಒಂದು ಸಕಾರಾತ್ಮಕ ದಾರಿ ಇದೆಯೇ?

" ಈ ಬಗ್ಗೆ ಅರಿತುಕೊಳ್ಳಿ'' ಇದೇ ಮೊದಲ ಹೆಜ್ಜೆ.

" ಇಲ್ಲೇ, ಈಗಲೇ, ಎಲ್ಲವನ್ನೂ ಸಮಗ್ರವಾಗಿ ಒಪ್ಪಿಕೊಳ್ಳುವುದು'' ಎರಡನೇ ಹೆಜ್ಜೆ.

ಅರಿವಿನಿಂದ ಸ್ವೀಕರಿಸುವುದು - ಇದೊಂದೇ ವೇದನೆಯಿಂದ ಪಾರಾಗಲು ಇರುವ ಮಾರ್ಗ.

ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎನ್ನುವುದು ನಾನು ಹೇಳುವುದರ ಅರ್ಥವಲ್ಲ.

ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಿ. ಆದರೆ ಪರಿಸ್ಥಿತಿ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ನೀಡಬೇಡಿ.

"ಪ್ರತಿಕ್ರಿಯಿಸ ಬೇಡಿ - ಕೇವಲ ಕೆಲಸ ಮಾಡಿ''.

Smiling person profile