KAILASA Library/ತೆರೆ ಬಾಗಿಲು/ನಗೆ ದೇವರೆಡೆಗೆ ನಿಮ್ಮ ದಾರಿ !Sign in
ತೆರೆ ಬಾಗಿಲು

ನಗೆ ದೇವರೆಡೆಗೆ ನಿಮ್ಮ ದಾರಿ !

This text was machine-transcribed from the printed book and may contain errors. Select the words and choose “Report a mistake”.

(ನಗೆಯ ಅದಮ್ಯ ಶಕ್ತಿ)

Portrait

ಕೊನೆಯ ಭಾರಿ ನೀವು ನಿಜವಾಗಿಯೂ ಒಳ್ಳೆಯ ನಗೆಯನ್ನು ಹೊಂದಿದ್ದು ಯಾವಾಗ?

ಒಂದು ದೊಡ್ಡ ಗಹಗಹಿಸುವ ನಗೆ, ನೇರವಾಗಿ ನಿಮ್ಮ ಉದರದಿಂದ ಹೊರಟು, ಅನಿಯಂತ್ರಣವಾದ ಉಲ್ಲಾಸದಿಂದ ನಿಮ್ಮನ್ನು ನಡುಗಿಸಿ ಬಿಟ್ಟಿದ್ದು?

ಈ ದಿನಗಳಲ್ಲಿ, ಹೇಗೆ ನಗುವುದೆಂಬುದನ್ನು ನಾವು ಮರೆತು ಬಿಟ್ಟಿದ್ದೇವೆ.

ನಮ್ಮ ನಗೆ ಮುಗುಳ್ನಗೆಯ ಒಂದು ವಿಸ್ತರಣೆ ಅಷ್ಟೆ - ಒಂದು ಸಾಮಾಜಿಕ ಅವಶ್ಯಕತೆ. ನಾವು ನಕ್ಕಾಗ ಸಹ, ಸಾಧಾರಣವಾಗಿ ಯಾರನ್ನಾದರೂ ನೋಡಿ ನಗುತ್ತೇವೆ ಅಥವಾ ಸುಮ್ಮನೆ ಒಂದು ಕರ್ತವ್ಯವನ್ನು ಪೂರೈಸಿದಂತೆ. ಕಿಸಿ ಕಿಸಿಯುವಿಕೆ, ಅರೆನಗೆಗಳು ನಗೆಗೆ ಬದಲಾಗಿ ಬಂದಿವೆ.

ಕಛೇರಿಯೊಂದರಲ್ಲಿ ಬಾಸ್ ಒಂದು ಹಾಸ್ಯ ಚಟಾಕಿ ಬಾರಿಸಿದ. ಇಡೀ ತಂಡ ಕೊಕ್ ಕೊಕ್ ಎಂದು ನಗಲು ಶುರುವಮಾಡಿತು. ಬೇಸರದಿಂದ ಕುಳಿತು ನೋಡುತ್ತಿದ್ದ ಒಬ್ಬ ಯುವತಿಯನ್ನು ಬಿಟ್ಟು.

ಏನು ಸಮಾಚಾರ? ನೀನೇಕೆ ನಗುತ್ತಿಲ್ಲ? ಬಾಸ್ ಆಶ್ಚರ್ಯದಿಂದ ಕೇಳಿದ. ನಾನೇನು ನಗಬೇಕಾಗಿಲ್ಲ. ಯುವತಿ ಮಾಮೂಲಾಗಿ ಉತ್ತರಿಸಿದಳು. ನಾನು ಮುಂದಿನ ವಾರ ಕೆಲಸ ಬಿಡುವವಳಿದ್ದೇನೆ!

ಹಾಸ್ಯ ಚಟಾಕಿಯಲ್ಲಲ್ಲದೆ, ಪ್ರಚಂಡ ಸಾಮರ್ಥ್ಯವುಳ್ಳ ನಗೆಯನ್ನು ಹೇಗೆ ಉಪಯೋಗಿಸ ಬೇಕೆಂಬುದನ್ನೇ ನಾವು ಮರೆತು ಬಿಟ್ಟಿದ್ದೇವೆ.

ಜನರ ಜೊತೆ ಸಂಬಂಧ ಹೊಂದಲು ಇದೊಂದು ಉತ್ಕೃಷ್ಟವಾದ ಮಾರ್ಗ! ಕರುಣೆಯ ಹಾಸ್ಯದೊಂದಿಗೆ ಪ್ರಸ್ತುತ ಪಡಿಸುವ ಕಲಾ ನಿಪುಣರಾಗಿದ್ದರು.

ಪ್ರತಿಯೊಬ್ಬರಿಗೂ ನಗುವ ಮತ್ತು ತಮ್ಮ ಸುತ್ತ ಲೂ ನಗೆಯನ್ನು ಸೃಷ್ಟಿಸುವ ಅದ್ಭುತವಾದ ಸಾಮರ್ಥ್ಯವಿರುವುದಿಲ್ಲ. ನಮ್ಮಲ್ಲಿ ಬಹಳಷ್ಟು ಮಂದಿ ನಗಲು ಹೆದರುತ್ತಾರೆ. ವಿಶೇಷವಾಗಿ, ನಾವು ಹೊಸಬರೊಡನೆ ಇದ್ದಾಗ. ಕಾರಣ ನಗೆ ನಮ್ಮ ಬಣ್ಣ ಬಯಲು ಮಾಡುತ್ತದೆ.

ನಗೆ ನಮ್ಮೊಳಗೆ ಅಡಗಿರುವ ಸಾತ್ವಿಕತೆಯನ್ನು, ಅಭೇದ್ಯತೆಯನ್ನು ಹೊರಗೆಡಹುತ್ತದೆ. ನಗುವುದು ಕಷ್ಟ ಎಂದು ತಿಳಿದಿರುವವರಿಗೆ, ತಾವು ಎಂಥಹ ಕೊಡುಗೆಯನ್ನು ಕಳೆದುಕೊಂಡಿದ್ದಾರೆ ಎಂಬುದರ ಕಲ್ಪನೆಯೇ ಇಲ್ಲ. ನನ್ನನ್ನು ನಂಬಿ, ನಗುವ ವ್ಯವಹಾರದಷ್ಟು ಗಂಭೀರವಾದ ಹೆಚ್ಚಿನ ವ್ಯವಹಾರ ಯಾವುದೂ ಇಲ್ಲ - ನಗುವ ಸಮರ್ಥತೆ ಹೊಂದುವುದು ಗಂಭೀರವಾದ ಮಹತ್ವವುಳ್ಳದ್ದು!

ಹಾಸ್ಯವೇ ಹೇಳುವಂತೆ - ನಿಮ್ಮ ಸಮಸ್ಯೆಗಳತ್ತ ನಗುವುದನ್ನು ಕಲಿಯಿರಿ. ಯಾವಾಗಲೂ ನಿಮಗೆ ನಗಲು ಏನಾದರೂ ಇದ್ದೇ ಇರುತ್ತದೆ! ತಮ್ಮನ್ನು ತಾವೇ ನೋಡಿ ನಗಲು ಹಿಂಜರಿಯದ ಜನ ನಿಜವಾಗಲೂ ಹರಸಿದವರು. ಏಕೆಂದರೆ ಅಹಂಕಾರದಿಂದಾಚೆಗೆ ಹೋಗುವ ದಾರಿಯೊಂದನ್ನು ಅವರು ಕಂಡುಕೊಂಡಿದ್ದಾರೆ. ನಗೆಯೆಂಬುದು ಸ್ವಸ್ಥತೆ, ವಿಪುಲ ಶಕ್ತಿಯ ಉಕ್ಕಿ ಹರಿಯುವಿಕೆಯಲ್ಲದೇ ಹೆಚ್ಚಿನದೇನೂ ಅಲ್ಲ. ನಿಮ್ಮೊಂದಿಗೆ ಮತ್ತು ನಿಮ್ಮ ಸುತ್ತ ಇರುವುದರ ಬಗ್ಗೆ ಸ್ವಾಸ್ಥ್ಯದಿಂದಿರುವಿಕೆಯ ಸ್ವಾಭಾವಿಕ ಪರಿಣಾಮವಾಗಿ ನಗೆ ಅರಳುತ್ತದೆ. ಆದುದರಿಂದಲೇ, ಸುಖೀ, ಪ್ರಸನ್ನವದನ ಉಳ್ಳ ಜನರು ಸಾಧಾರಣವಾಗಿ ಹೆಚ್ಚು ರಚನಾತ್ಮಕ ಹಾಗೂ ಪ್ರವರ್ತಿತರಾಗಿರುತ್ತಾರೆ.

ನನ್ನ ಬಾಲ್ಯದಲ್ಲಿ ನಾನೊಮ್ಮೆ ನೋಡಿದ ಬೀದಿ ನಾಟಕವೊಂದರ ನೆನಪಾಗುತ್ತದೆ.

ನಮ್ಮ ಭಾರತದ ಹಳ್ಳಿಗಳಲ್ಲಿ ಬೀದಿ ನಾಟಕಗಳು ಸಾಮಾನ್ಯವಾಗಿ ಯುವಕರು ಮತ್ತು ಹೆಂಗಸರು ತಮ್ಮನ್ನು ತಾವೇ ಕೊಂದುಕೊಳ್ಳುವಷ್ಟು ಜೀವನದಲ್ಲಿ ಬೇಸರ ಹೊಂದಿರುವುದನ್ನು ನೀವು ಕಾಣಲಾರಿರಿ. ಯಾವುದಾದರೂ ಸರಿ ಎಂದು ಆ ಹುಡುಗನ ತಂದೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆಗಳನ್ನೂ ಪ್ರಯತ್ನಿಸಿದ್ದ. ಹುಡುಗನನ್ನು ಗುಣ ಪಡಿಸುವಂತೆ ನನ್ನನ್ನು ಆತ ಬೇಡಿಕೊಂಡ.

ಕೆಲವು ದಿನ ಆ ಹುಡುಗನನ್ನು ನನ್ನ ಆಶ್ರಮದಲ್ಲಿ ಬಿಡುವಂತೆ ನಾನು ಆ ತಂದೆಗೆ ಹೇಳಿದೆ. ಆ ಅವಧಿಯಲ್ಲಿ ಹಾಸ್ಯ ಚಟಾಕಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ನಾನು ಪ್ರತಿದಿನ ಆ ಹುಡುಗನ ಸಂಗಡ ಕಳೆದೆ ! ಹಾಸ್ಯ ಪುಸ್ತಕಗಳನ್ನು ಓದಲು ಆ ಹುಡುಗನಿಗೆ ನಾನು ನೀಡಿದೆ. ಆಶ್ರಮದೆಲ್ಲೆಡೆ ಅಡ್ಡಾಡಲು ಹಾಗೂ ಆಶ್ರಮವಾಸಿಗಳ ಸಂಗಡ ಸೇರಿ ಕೆಲಸ ಮಾಡಲು ನಾನು ಆ ಹುಡುಗನಿಗೆ ಹೇಳಿದೆ. ಪ್ರತಿದಿನ ಯಾವಾಗಲೆಂದರೆ ಆಗ ನಾವು ಭೇಟಿಯಾಗುತ್ತಿದ್ದೆವು ಮತ್ತು ಹಾಸ್ಯ ಸಭೆ ನಡೆಸುತ್ತಿದ್ದೆವು. ಹತ್ತು ದಿನಗಳಲ್ಲಿ ಹುಡುಗ ಖಿನ್ನತೆಯಿಂದ ಸಂಪೂರ್ಣವಾಗಿ ಗುಣಮುಖನಾದ. ಇದು ನಿಜವಾಗಲೂ ನಡೆದಿದ್ದು !

ನಗೆ ಮಹಾ ವೈದ್ಯಕೀಯ ಮಹತ್ವವನ್ನು ಹೊಂದಿದೆ. ಈ ದಿನ, ನಗೆಯ ಗುಣಪಡಿಸುವ ಪರಿಣಾಮವನ್ನು ವಿಶ್ವದಾದ್ಯಂತ ವೈದ್ಯರು ಮತ್ತು ಮನಃಶಾಸ್ತ್ರಜ್ಞರು ಅಂಗೀಕರಿಸಿದ್ದಾರೆ. ನಾಯಿಕೊಡೆಗಳಂತೆ ವಿಶ್ವದಾದ್ಯಂತ ಹುಟ್ಟಿರುವ 'ಹಾಸ್ಯ ಮಂಡಳಿ'ಗಳು ಇದನ್ನು ಪುಷ್ಟಿಕರಿಸುತ್ತವೆ.

ನಗೆಯು ಪ್ರೇರೇಪಿಸುವ ಹಾರ್ದಿಕವಾದ, ಕ್ರಮಬದ್ಧವಲ್ಲದ ಉಸಿರಾಟ, ಸಕಾರಾತ್ಮಕ ಕಂಪನವನ್ನು ನಮ್ಮ ದೇಹದಲ್ಲಿ ಉತ್ಪಾದಿಸುತ್ತದೆ, ಉದರವನ್ನು ಸಡಿಲಿಸುತ್ತದೆ ಮತ್ತು ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಗೆ ನಮ್ಮ ನಾಭಿಯ ಪ್ರದೇಶದಲ್ಲಿರುವ ಚತುರ ಸಾಮರ್ಥ್ಯ ಕೇಂದ್ರ, ಚಿಂತೆ ಮತ್ತು ಭಿಕ್ಷುಗಳು ಪ್ರಚಂಡವಾದ ಝೆನ್ ಸ್ಥತ್ವದ ಸ್ಥಿತಿಯನ್ನು ತಲುಪಿದರು. ಆ ನಗೆಯ ಪ್ರವಾಹದಲ್ಲಿ ಅವರು ಪ್ರಜ್ಞೆಯೇ ಇಲ್ಲದ ಒಂದು ಕ್ಷಣವನ್ನು ಅನುಭವಿಸಿದರು.

ಇದು ನಿಜವಾದ ಆಧ್ಯಾತ್ಮಿಕತೆ, ಝೆನ್ ಸನ್ಯಾಸಿ ಘೋಷಿಸಿದ.

ನಗೆ ಆಧ್ಯಾತ್ಮಿಕತೆಯ ಶ್ರೇಷ್ಠವಾದ ಲಕ್ಷಣ. ಇದು ನಿಮ್ಮನ್ನು ಜ್ಞಾನೋದಯದೆಡೆಗೆ ನಡೆಸಲು ಸಾಧ್ಯ! ವಾಸ್ತವದಲ್ಲಿ ನಗೆಯನ್ನು ಜ್ಞಾನೋದಯದೆಡೆಗೆ ರಾಜಮಾರ್ಗ ಎಂದು ಕರೆಯುತ್ತಾರೆ. ಏಕೆಂದರೆ, ಎಲ್ಲಾ ಉಗಮದ (ಅಸ್ತಿತ್ವದ) ಮೇರೆಯಿಲ್ಲದ ಚೈತನ್ಯ - ಪ್ರಪಂಚ ಶಕ್ತಿಯ ಸಂಗಡ ಸಂಪರ್ಕ ಹೊಂದಲು ಸುಲಭವಾದ ಮತ್ತು ಅತ್ಯಂತ ಪ್ರಭಾವವುಳ್ಳ ಮಾರ್ಗವಾದ ನಗೆಯನ್ನು ನಾವು ಹೊಂದಿದ್ದೇವೆ.

ಆದುದರಿಂದ ಯಾವಾಗಲೂ ನಗುತ್ತಾ ಇರಿ!

ಪ್ರಶ್ನೆ : ಸ್ವಾಮೀಜೀ, ನಾನು ನನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು, ದುಃಖಪಟ್ಟು ಕೊಳ್ಳುವುದನ್ನು ನಿಲ್ಲಿಸುವುದು ಹೇಗೆ ?

ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು ಬರಿಯ ದುಃಖ ತರುತ್ತದೆ ಎಂಬುದು ನಿಮಗೆ ಗೊತ್ತಾಗಿದೆ. ಅದೊಂದು ಒಳ್ಳೆಯ ಆರಂಭ.

ನಿಮಗೊಂದು ದೃಷ್ಟಾಂತದ ಮೂಲಕ ಉತ್ತರಿಸುತ್ತೇನೆ. ಇಂತಹದೇ ಪ್ರಶ್ನೆಯೊಂದಿಗೆ ಒಬ್ಬಾತ ಒಬ್ಬ ಆಧ್ಯಾತ್ಮ ಗುರುವಿನ ಬಳಿಗೆ ಬಂದ.

ಜ್ಞಾನಿಯಾದ ಗುರು ಆತನನ್ನು ಒಂದು ಉದ್ಯಾನಕ್ಕೆ ಕರೆದೊಯ್ದ. ಅಲ್ಲಿ ಮುಳ್ಳು ಕಂಟಿಗಳು ಹಾಗೂ ಗುಲಾಬಿ ಗಿಡಗಳು ಒಂದರ ಪಕ್ಕದಲ್ಲಿ ಒಂದು ಬೆಳೆದಿದ್ದವು.

"ಇವೇ ನಿಮ್ಮ ಗುರುಗಳು. ನೀವು ಕಲಿಯಬೇಕಾದ್ದನ್ನು ಅವೇ ಕಲಿಸುತ್ತವೆ", ಎಂದು ಗುರು ಹೇಳಿದ.

ಆ ವ್ಯಕ್ತಿಗೆ ಆಶ್ಚರ್ಯವಾಯಿತು.

"ಹಾಗೆಂದರೇನು ಗುರೂಜೀ ?" ಎಂದಾತ ಕೇಳಿದ.

ಗುರು ಹೇಳಿದ : ಕಳೆದ 5 ವರ್ಷಗಳಿಂದ ಇವು ಒಂದರ ಪಕ್ಕದಲ್ಲೊಂದು ಇವೆ. ಆದರೆ ಒಮ್ಮೆ ಕೂಡ ಗುಲಾಬಿ ಗಿಡ, ಮುಳ್ಳು ಕಂಟಿ ಆಗಬೇಕೆಂದಾಗಲೀ ಮುಳ್ಳು ಕಂಟಿ ಗುಲಾಬಿ ಗಿಡ ಆಗಬೇಕೆಂದಾಗಲಿ ಬಯಸಿದ್ದನ್ನು ನಾನು ಒಮ್ಮೆ ಕೂಡ ಕೇಳಲಿಲ್ಲ. ಯಾವುದೇ ಹೋಲಿಕೆ, ದೂರಿಲ್ಲದೆ ಅವು ತಮ್ಮ ವಾಸ್ತವತೆಯನ್ನು ಒಪ್ಪಿಕೊಂಡಿವೆ.

“ಇದ್ದಂತೆಯೇ ನಿಮ್ಮನ್ನು ನೀವು ಒಪ್ಪಿಕೊಳ್ಳಿ. ಆಗ ಮಾತ್ರ, ನೀವು ಪರಿಪೂರ್ಣರಾಗುತ್ತೀರಿ”.

“ನಿಮ್ಮನ್ನು ನೀವು ವಿಶಿಷ್ಟ, ಪರಿಪೂರ್ಣ ಎಂದುಕೊಂಡಾಗ, ಇತರರೊಂದಿಗೆ ಹೋಲಿಸಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ”.

ಬುದ್ಧ, ಒಂದು ಗಮನಾರ್ಹವಾದ ಹೇಳಿಕೆ ಇತ್ತಿದ್ದಾನೆ - “ಸಂಬಂಧವಿಲ್ಲದೆ ಯಾವುದೂ ಇರುವುದಿಲ್ಲ”. ಪ್ರತಿಯೊಂದು ಪರಸ್ಪರ ಸಂಬಂಧ ಹೊಂದಿರುತ್ತವೆ ಮತ್ತು ಇನ್ನೊಂದರ ಸಂಬಂಧದಿಂದಲೇ ಅರ್ಥ ಪಡೆಯುತ್ತವೆ.

ನಿಮ್ಮನ್ನು ನೀವು ಬೇರೆಯವರಿಗೆ ಹೋಲಿಸಿಕೊಳ್ಳಲು ಬಳಸುವ ಪದ ಯಾವುದು ? “ಸುಂದರ, ಬಡವ, ಬುದ್ಧಿವಂತ, ದುರದೃಷ್ಟವಂತ, ತರುಣ, ದುರ್ಬಲ”, ಇತ್ಯಾದಿ, ಇತ್ಯಾದಿ.

ನಿಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲದ ಹೊಸ ಗ್ರಹದಲ್ಲಿ ಇದ್ದೀರಿ ಎಂದುಕೊಳ್ಳಿ. ಆಗ ನೀವು ಸುಂದರವಾಗಿರುತ್ತೀರೋ ಅಥವಾ ಕುರೂಪಿಗಳಾಗಿರುತ್ತೀರೋ? ಉದ್ದವಾಗಿರುತ್ತೀರೋ ಅಥವಾ ಕುಳ್ಳಗಿರುತ್ತೀರೋ? ಬಡವರಾಗಿರುತ್ತೀರೋ ಅಥವಾ ಶ್ರೀಮಂತರಾಗಿರುತ್ತೀರೋ ? ಹೋಲಿಕೆ ಇಲ್ಲದಿದ್ದಾಗ ಈ ಪದಗಳು ಸ್ವಾಭಾವಿಕವಾಗಿಯೇ ಅರ್ಥ ಕಳೆದುಕೊಳ್ಳುತ್ತವೆ?

ಏಕೆಂದರೆ ಅವು ಮನಸ್ಸಿನಿಂದ ರೂಪಿತವಾದ ಕಲ್ಪನೆಗಳು ಅಷ್ಟೇ, ವಾಸ್ತವವಾಗಿ ಅವಕ್ಕೆ ಅಸ್ತಿತ್ವವೇ ಇರುವುದಿಲ್ಲ.

ಹೀಗೆ ಮಾಡಿ ನೋಡಿ : ಕ್ಷಣ ಕಾಲ ಕಣ್ಣು ಮುಚ್ಚಿಕೊಂಡು, ಇಡೀ ಪ್ರಪಂಚದಲ್ಲಿ ನೀವೊಬ್ಬರೇ ಇದ್ದೀರೆಂದುಕೊಳ್ಳಿ. ಅಂತರಂಗದಲ್ಲಿ ನೀವು ಕುರೂಪಿಯೋ, ಸುಂದರನೋ, ಮೂರ್ಖನೋ, ಬುದ್ಧಿವಂತನೋ

ಒಂದು ಚಿಕ್ಕ ಕಥೆ :

ಒಬ್ಬ ಜೆನ್ ಗುರುವಿಗೆ, ಬುದ್ಧಿವಂತ, ಶ್ರದ್ಧಾವಂತ, ಪ್ರಾಮಾಣಿಕ ಶಿಷ್ಯ ಇದ್ದ. ಅವನ ಒಂದೇ ಸಮಸ್ಯೆ ಎಂದರೆ ಜ್ಞಾನೋದಯ ಹೊಂದಲು ಇರುವ ದೀರ್ಘವಾದ ಮತ್ತು ಜಟಿಲವಾದ ತಂತ್ರಗಳ ಬಗ್ಗೆ ಆತನಿಗೆ ತಾಳ್ಮೆಯೇ ಇರಲಿಲ್ಲ.

ಪ್ರತಿದಿನ ಆತ 'ಗುರೂಜೀ, ನಾನು ಯಾವಾಗ ಬುದ್ಧನಾಗುತ್ತೇನೆ' ಎಂದು ಪ್ರಶ್ನಿಸುತ್ತಲೇ ಇದ್ದ.

ಸರಳ ಮುಗುಳ್ನಗೆಯಲ್ಲದೇ ಗುರುವಿನ ಉತ್ತರವೇನೂ ಇರಲಿಲ್ಲ.

ಹಗಲು ರಾತ್ರಿ ಗುರುವಿನ ಸೂಚನೆಯಂತೆ, ಕಠಿಣ ಪರಿಶ್ರಮಪಟ್ಟು ತಪಸ್ಸನ್ನಾಚರಿಸಿದರೂ ಯಾವುದೇ ಉತ್ತರ ದೊರೆಯದಿದ್ದಾಗ ಆತನ ಜ್ಞಾನದಾಹ ವಿಪರೀತವಾಯಿತು.

ಕೊನೆಗೊಮ್ಮೆ ಆತ, ಇದೆಲ್ಲಾ ಉಪಯೋಗವಿಲ್ಲ ಎಂದುಕೊಂಡು ಸೀದಾ ಗುರುವಿನ ಬಳಿಗೆ ಹೋಗಿ 'ನಾನು ಇಲ್ಲಿಂದ ಹೊರಗೆ ಹೋಗುವುದಕ್ಕೆ ಮುನ್ನ, ನಾನು ಎಂದಾದರೂ ಬುದ್ಧನಂತಾಗುತ್ತೇನೆಯೋ - ಇಲ್ಲವೋ ತಿಳಿಸಿಬಿಡಿ' ಎಂದು ಆಗ್ರಹಿಸಿದ.

ಪ್ರತ್ಯುತ್ತರವಾಗಿ ಗುರು, ಆತನ ಮುಖಕ್ಕೆ ಬಲವಾಗಿ ಒಂದು ಏಟು ಹಾಕಿದ.

ಆ ಕ್ಷಣವೇ ಶಿಷ್ಯನ ನಿಜವಾದ ಸ್ವರೂಪ ಜಾಗೃತವಾಯಿತು.

"ಗುರುವಿನ ಆ ಹೊಡೆತದ ಅರ್ಥವೇನು?"

ಶಿಷ್ಯನ ಅತಿಯಾದ ನಿರೀಕ್ಷೆಯ ಬಗ್ಗೆ ಆತನಿಗೆ ಕೋಪಬಂದಿತ್ತೇ?

ಇಲ್ಲ. ಶಿಷ್ಯ ಆದಾಗಲೇ ಬುದ್ಧನಾಗಿದ್ದಾನೆಂಬ ಅರಿವು ಮೂಡಿಸುವುದು ಆತನ ಉದ್ದೇಶವಾಗಿತ್ತು ! ನೀವು ಅದಾಗಲೇ ಆಗಿರುವುದನ್ನು ಮತ್ತೆ ಆಗುವುದಾದರೂ ಹೇಗೆ ?

ನಿಮ್ಮ ಅಂತಹ ಸತ್ವದ ಬಗ್ಗೆ ನಿಮಗೆ ಅರಿವೇ ಇಲ್ಲದಿರುವುದರಿಂದ ನೀವೆಷ್ಟು ವಿಶಿಷ್ಟರೆಂಬುದನ್ನು ನೀವು ಮರೆತೇ ಬಿಟ್ಟಿರುತ್ತೀರಿ .

ಒಮ್ಮೆ ಇದನ್ನು ಅರಿತಾಗ, ಹೋಲಿಸುವ ಅಗತ್ಯ ಸ್ವಾಭಾವಿಕವಾಗಿಯೇ ಸತ್ತು ಹೋಗುತ್ತದೆ. ನೀವು ಹೋಲಿಸಲೇ ಬೇಕೆಂದುಕೊಂಡರೂ ಪ್ರತಿಯೊಬ್ಬರೂ ವಿಭಿನ್ನರಾಗಿರುವುದರಿಂದ ಸಾಮಾನ್ಯ ಅಂಶ ಎಲ್ಲಿರುತ್ತದೆ ?

ಆದ್ದರಿಂದ ಹೋಲಿಸುವ ಪ್ರವೃತ್ತಿಯನ್ನು ಬಿಡಿ. ಬೇರೆಯವರಂತೆ ನೀವೂ, ನಿಜವಾಗಿಯೂ ವಿಶಿಷ್ಟರಾಗಿದ್ದೀರಿ ಎಂಬುದನ್ನು ನೆನಪಿಡಿ !

ಪ್ರಶ್ನೆ: ಸ್ವಾಮೀಜೀ ಮೂರ್ತಿ ಪೂಜೆಯನ್ನು ನೀವು ಒಪ್ಪುತ್ತೀರಾ?

ಸ್ಪಷ್ಟವಾಗಿ ತಿಳಿಯಿರಿ : ಮೊಟ್ಟ ಮೊದಲಿಗೆ ನಾವು ಯಾವುದನ್ನು ಮೂರ್ತಿ ಪೂಜೆ ಎನ್ನುತ್ತೇವೋ ಅದು ನಿಜವಾಗಲೂ ಮೂರ್ತಿಪೂಜೆಯಲ್ಲ.

ಅದು ಮೂರ್ತಿ ಮೂಲಕ ಮಾಡುವ ಪೂಜೆ.

ಮೂರ್ತಿ ಪೂಜೆ ಮಾಡುವವರಾರೂ ವಾಸ್ತವವಾಗಿ ಮೂರ್ತಿಯನ್ನು ಪೂಜಿಸುವುದಿಲ್ಲ. ಅವರು ವಿಗ್ರಹರೂಪದಲ್ಲಿರುವ ದೇವರನ್ನು ಪೂಜಿಸುತ್ತಾರೆ.

ಅದು ಮೂರ್ಖತನವೇ ?

ನಾವು ವಿಶದವಾಗಿ ವಿಚಾರ ಮಾಡೋಣ.

ನಮಗೆ ತಿಳಿದಿರುವ ಹಾಗೆ ಎಲ್ಲಾ ಜೀವ ರಾಶಿಗಳೂ ಒಂದೇ ಮೂಲದಿಂದ ಉದ್ಭವಿಸುತ್ತವೆ. ವಿಶ್ವದಲ್ಲಿರುವ ಪ್ರತಿಯೊಂದೂ, ಒಂದೇ ಕಚ್ಚಾವಸ್ತುವಿನಿಂದ ಸೃಷ್ಟಿಯಾಗಿದೆ, ಮತ್ತು ಒಂದೇ ರೀತಿಯ ರಚನೆಯಿಂದ ಕೂಡಿದೆ. ಮೇಲೆ ಕಾಣುವ ವೈವಿಧ್ಯಗಳನ್ನಷ್ಟೇ ನೋಡುವುದರಿಂದ ನಮಗೆ ಅದು ಗೊತ್ತಾಗುವುದಿಲ್ಲ ಅಷ್ಟೇ. ವಿಶ್ವದ ಅಂಗವಾಗಿರುವ ನಾವು ಚಿಕ್ಕ ಚಿಕ್ಕ ಕನ್ನಡಿಗಳಂತೆ ಅದರ ನಿಖರವಾದ ಕೃತಿ ಮತ್ತು ರಚನೆಯನ್ನು ಪ್ರತಿಬಿಂಬಿಸುತ್ತೇವೆ. ಈ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.

ಅಸ್ತಿತ್ವದಲ್ಲಿರುವ ಪ್ರತಿಯೊಂದೂ ಪರಸ್ಪರ ಸಂಬಂಧ ಹೊಂದಿದೆ.

ಈ ವಿಶ್ವ ಐದು ಅಂಶಗಳಿಂದ ಆಗಿದೆ. ಪೃಥ್ವಿ, ಆಪಿ, ತೇಜ, ವಾಯು ಮತ್ತು

ನೂರಾರು ಸಂಖ್ಯೆಯಲ್ಲಿರುವ ಹಿಂದೂ ದೇವತೆಗಳೂ ದೈವಶಕ್ತಿಯ ಅಭಿವ್ಯಕ್ತಿಯಲ್ಲದೆ ಬೇರೆ ಏನೂ ಅಲ್ಲ. ಯಾರು ಬೇಕಾದರೂ ಆ ದೈವಶಕ್ತಿಯೊಂದಿಗೆ ಮಾತನಾಡಬಹುದು, ಪ್ರಾರ್ಥಿಸಬಹುದು ಅಥವಾ ಆಟವಾಡಬಹುದು ಅದರಿಂದ ಸಮಾಧಾನ ಪಡೆಯಬಹುದು, ಅದಕ್ಕೆ ಕೃತಜ್ಞತೆ ಅರ್ಪಿಸಬಹುದು. ಪರಿಪೂರ್ಣವಾದ, ಗಂಭೀರವಾದ ಅವರ್ಣನೀಯವಾದ ದೈವ ಸ್ವರೂಪವನ್ನು ನಮ್ಮ ಅನುಕೂಲಕ್ಕಾಗಿಯೇ ಪ್ರತಿಮೆಯ ರೂಪಕ್ಕೆ ಇಳಿಸಲಾಗಿದೆ. ಸಾಮಾನ್ಯವಾದ ಮನಸ್ಸಿಗೆ ನಿರಾಕಾರವಾದ ದೇವರ ಕಲ್ಪನೆ ಅತಿ ಭಯಂಕರವಾದ್ದರಿಂದ ಅದಕ್ಕೊಂದು ಆಕಾರ ನೀಡುವುದೇ ಒಳ್ಳೆಯದು.

ಇಲ್ಲೊಂದು ಆಳವಾದ, ಸೂಕ್ಷ್ಮವಾದ ಸಂದೇಶವೂ ಇದೆ. ನಿಮ್ಮ ಮುಂದಿರುವ ಮೂರ್ತಿ ನಿಮ್ಮಂತೆಯೇ ಇದ್ದರೂ ದೈವೀಕವಾಗಿದೆ.

ಅದು ನಿಮ್ಮ ಬಗ್ಗೆ ಏನು ಹೇಳುತ್ತದೆ ? ಅದರ ಬಗ್ಗೆ ಯೋಚಿಸಿ !

ಆಧ್ಯಾತ್ಮಿಕತೆಯತ್ತ ಸಾಗುವ ಮೊದಲ ಹೆಜ್ಜೆಯಾಗಿ ನಿಶ್ಚಯವಾಗಿ ಮೂರ್ತಿ ಪೂಜೆ ಅತ್ಯಗತ್ಯ ಮತ್ತು ಸಹಾಯಕ. ಆಧ್ಯಾತ್ಮಿಕತೆಗೆ ಏರುಮಣೆಯಾಗಿ ಅದು ನೆರವಾಗುತ್ತದೆ.

ಆಧ್ಯಾತ್ಮಿಕವಾಗಿ ನೀವು ಬೆಳೆದಂತೆಲ್ಲಾ, ನಿಮ್ಮ ಮುಂದೆ ಯಾವುದೇ ಭೌತಿಕ ಆಕಾರವಿಲ್ಲದಿದ್ದರೂ ಧ್ಯಾನದ ಮೂಲಕ ನೀವು ದೈವಶಕ್ತಿಯೊಂದಿಗೆ ಸುಮಧುರವಾಗಿ ಸಂಭಾಷಿಸಬಹುದು. ಮಕ್ಕಳು ಬೆಳೆದಂತೆ ಗೊಂಬೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸುವಂತೆ, ಕಾಲ ಬಂದಾಗ ನೀವೇ ವಿಗ್ರಹಗಳನ್ನು ಬಿಟ್ಟು ಬಿಡುತ್ತೀರಿ. ಧರ್ಮದ ಅಂತಿಮ ಗುರಿ ಇದೇ !

---★---

ಭಾರತದಲ್ಲಿ ಆಹಾರದಿಂದ ಹಿಡಿದು ಮಾನವನ ಸ್ವಭಾವದವರೆಗೆ ಪ್ರತಿಯೊಂದನ್ನೂ ಮೂರು ವಿಧವಾಗಿ ವಿಂಗಡಿಸಲಾಗಿದೆ. ಸಾತ್ವಿಕ (ಸಮಾಧಾನ ಚಿತ್ತ) ರಾಜಸಿಕ (ಕ್ರಿಯಾತ್ಮಕ) ಹಾಗೂ ತಾಮಸಿಕ (ಅವ್ಯವಸ್ಥೆ). ವರ್ಣಗಳನ್ನು ಇದೇ ರೀತಿಯಾಗಿ ವಿಂಗಡಿಸಬಹುದು. ಉದಾಹರಣೆಗೆ: ಕೆಂಪು ರಾಜಸಿಕ ಬಣ್ಣ. ಅದು ಮೆದುಳಿನಲ್ಲಿ ಸಂಚಲನೆಯನ್ನು ಉಂಟುಮಾಡುತ್ತದೆ. ಆದ್ದರಿಂದಲೇ ಅದನ್ನು ಅಪಾಯ ಹಾಗೂ ಪ್ರೀತಿಯ ಬಣ್ಣ ಎನ್ನುವುದು!

ಬಿಳಿ ಸಾತ್ವಿಕ ಬಣ್ಣ. ನೀವು ಬಿಳಿ ಬಟ್ಟೆಯನ್ನು ಧರಿಸಿದಾಗ ಶಕ್ತಿಯ ಪ್ರವಾಹ ಚೆನ್ನಾಗಿರುತ್ತದೆ. ಬಿಳಿಯ ಬಣ್ಣ ನೀವು ಮತ್ತಷ್ಟು ಸ್ಪಂದನಶೀಲರಾಗಿಯೂ, ಪ್ರಶಾಂತರಾಗಿಯೂ ಇರುವಂತೆ ಮಾಡುತ್ತದೆ. ಅದು ವಿಷಯಗಳನ್ನು ಪರಿಣಾಮಕಾರಿಯಾಗಿ ಗ್ರಹಿಸುವಂತೆ ಮಾಡುತ್ತದೆ. ಆದ್ದರಿಂದಲೇ ಪ್ರಪಂಚದಾದ್ಯಂತ ಶಾಲಾ ಸಮವಸ್ತ್ರಗಳಿಗೆ ಬಿಳಿಯನ್ನೇ ಹೆಚ್ಚಾಗಿ ಆರಿಸುವುದು!

ಅಂತೆಯೇ, ಕಾವಿ ಬಣ್ಣ (ಮಸಾಲ ಕಂದು ಬಣ್ಣ) ಮನಸ್ಸಿನಲ್ಲಿ ನಿಶ್ಯಬ್ದವನ್ನು ಸೃಷ್ಟಿಸುವ ಶಕ್ತಿ ಪಡೆದಿದೆ. ಅದು ಚೈತನ್ಯವನ್ನು ಪ್ರಚೋದಿಸಿ, ಧರಿಸಿದವರು ಹಾಗೂ ನೋಡುಗರಿಬ್ಬರಲ್ಲೂ ಧ್ಯಾನದ ಸ್ಥಿತಿಯನ್ನು ಉಂಟು ಮಾಡುತ್ತದೆ. ಆದ್ದರಿಂದಲೇ ಭಾರತದಲ್ಲಿ ಆಧ್ಯಾತ್ಮ ಗುರುಗಳು ಕಾವಿಯನ್ನು ಧರಿಸುವುದು. ಕಾವಿಗೂ, ಹಿಂದುತ್ವಕ್ಕೂ ಯಾವುದೇ ಸಂಬಂಧವೂ ಇಲ್ಲ!

ಒಂದು ಮಾತಂತೂ ಸ್ಪಷ್ಟ. ಈ ಎಲ್ಲಾ ಪೂರ್ವಾಚಾರಗಳಿಗೂ ಒಂದು ವೈಜ್ಞಾನಿಕ ತಳಹದಿ ಇದೆ. ಈ ಆಚರಣೆಗಳು, ಶತಶತಮಾನಗಳ ಅಸಂಖ್ಯಾತ ಋಷಿಮುನಿಗಳ ತಪಸ್ಸು, ಸಾಧನೆಗಳ ಸಾರಸಂಗ್ರಹ. ಕಾಲಕ್ರಮದಲ್ಲಿ ಜನ ಅದರ ನಿಜವಾದ ಅರ್ಥವನ್ನು ಮರೆತಿರುವುದೇ, ನಮ್ಮ ಪೂರ್ವಾಚಾರಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ. ಪೂರ್ವಾಚಾರಗಳ ಕರಟವಷ್ಟೇ ಉಳಿದಿದೆ; ಸತ್ವ ಕಳೆದುಹೋಗಿದೆ. ಇಂದು ಕೆಲವೊಂದು ಬಣ್ಣ, ಶಬ್ದ, ಕ್ರಿಯೆಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ ಮೆದುಳಿನ ಅಪೇಕ್ಷಿತ ಭಾಗವನ್ನು ಚುರುಕುಗೊಳಿಸಿ, ಅರಿವನ್ನು ವಿಸ್ತರಿಸುತ್ತದೆ ಎಂದು ವಿಜ್ಞಾನವೇ ಒಪ್ಪಿಕೊಂಡಿದೆ. ಅದರ ಹಿಂದಿರುವ ವಿಜ್ಞಾನದ ಅರಿವು ನಿಮಗಿಲ್ಲವೆಂಬ ಕಾರಣಕ್ಕೆ ಪೂರ್ವಾಚಾರಗಳ ವಿಶೇಷತ್ವಗಳನ್ನು ತಿರಸ್ಕರಿಸುವುದೆಂದರೆ, ಬ್ಯಾಕ್ಟೀರಿಯಾಗಳು ಕಾಣುವುದಿಲ್ಲವೆಂದು ಅವುಗಳು ಇಲ್ಲವೇ ಇಲ್ಲ ಎನ್ನುವಂತೆಯೇ ಆಗುತ್ತದೆ.

ಆದ್ದರಿಂದ ನಿಮಗಿಂದು ಅವು ಅಪ್ರಸ್ತುತವೆನಿಸಿದರೂ, ಪೂರ್ವಾಚಾರಗಳ ನಿಜವಾದ ಸಾಮರ್ಥ್ಯವನ್ನು ಕಡೆಗಣಿಸಬೇಡಿ. ಸರಿಯಾದ ರೀತಿಯಲ್ಲಿ ಆಚರಿಸಿದರೆ, ಅನೂಹ್ಯವಾದ ಮಟ್ಟದಲ್ಲಿ ಅರಿವು ಹಾಗೂ ಬದಲಾವಣೆಗಳನ್ನು ತರುವ ಅದ್ಭುತ ಸಾಮರ್ಥ್ಯವನ್ನು ಅವುಹೊಂದಿವೆ.

ಪ್ರಶ್ನೆ : ಸ್ವಾಮೀಜೀ ಆಧ್ಯಾತ್ಮಿಕ ಜೀವನಕ್ಕೆ ಸಸ್ಯಾಹಾರ ಅಗತ್ಯವೇ ?

ಹೌದು !

ಏಕೆ ? ಎಂದು ನೀವೀಗ ಯೋಚಿಸುತ್ತಿರಬಹುದು.

ನನ್ನದೇ ಅನುಭವದ ಆಧಾರದ ಮೇಲೆ ಮಾತನಾಡುವೆ ಎಂದು ಹೇಳಿದರೆ ನಿಮಗೆ ನಂಬುವುದಕ್ಕೆ ಕಷ್ಟವಾಗಬಹುದು.

ಏಕೆಂದರೆ ಪ್ರತಿಯೊಂದಕ್ಕೂ ವೈಜ್ಞಾನಿಕ ಪುರಾವೆಯನ್ನು ಬಯಸುವುದು ನಮ್ಮ ಮನಃಸ್ಥಿತಿಯಾಗಿ ಬಿಟ್ಟಿದೆ. ಐನ್‌ಸ್ಟಿನ್ ‘ಬಾಹ್ಯಾಕಾಶ ವೇಳೆ’ ಅಥವಾ ಪರಿಮಾಣ ಭೌತಶಾಸ್ತ್ರದ ಸಿದ್ಧಾಂತಗಳನ್ನು ಎಂದೂ ನಾವದನ್ನು ಎದುರುಗೊಂಡು ನೋಡದಿದ್ದರೂ (ಎಂದೂ ಎದುರುಗೊಳ್ಳುವುದೂ ಇಲ್ಲ ಬಿಡಿ) ಈ ಚಮತ್ಕಾರವನ್ನು ದೈನಂದಿನ ಜೀವನದಲ್ಲಿ ಸ್ವೀಕರಿಸುವ ವ್ಯವಸ್ಥೆ ನಾವು ಮಾಡಿದ್ದೇವೆ. ಆದರೂ, ಎಲ್ಲೋ ಪ್ರಯೋಗಾಲಯದಲ್ಲಿ ಪರೀಕ್ಷೆಗಳನ್ನು ಮಾಡಿ ಅವುಗಳನ್ನು ಸಮರ್ಥಿಸುವಂತಹ ಕೆಲವು ಅಂಕಿ ಅಂಶಗಳು (ನಿಮಗೆ ಅರ್ಥವಾಗದಂಥವು) ಹೊರಬಂದಿವೆಯೆಂದು, ನೀವದನ್ನು ಬಲವಂತವಾಗಿ ಒಪ್ಪಲೇಬೇಕೆಂದು ಭಾವಿಸುತ್ತೀರಿ.

ವಾಸ್ತವವಾಗಿ ಈ ವಿಶ್ವದ ಮಹಾನ್ ಸತ್ಯವನ್ನು ವಿಜ್ಞಾನದಿಂದ ಸಾಬೀತು ಮಾಡಲಾಗದು. ಏಕೆಂದರೆ ಅದು ವಿಜ್ಞಾನಕ್ಕೂ ಅತೀತವಾದದ್ದು. ಐನ್‌ಸ್ಟಿನ್ ಮತ್ತು ಅತ್ಯಾಧುನಿಕ ಭೌತಶಾಸ್ತ್ರಜ್ಞರೂ ಅದನ್ನು ಒಪ್ಪಿಕೊಳ್ಳುತ್ತಾರೆ !

“ಇದು ಆಲ್ಫಾ ತರಂಗಗಳನ್ನು ಉತ್ಪಾದಿಸಲು ಮೆದುಳಿಗೆ ಸಮರ್ಪಕವಾದ ಸ್ಥಿತಿಯನ್ನು ಉಂಟುಮಾಡುತ್ತದೆ. ತನ್ಮೂಲಕ ಧ್ಯಾನಕ್ಕೆ ನೆರವಾಗುತ್ತದೆ''.

ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ತಪಸ್ಸಿಗೆ ಅತ್ಯಂತ ಎತ್ತರವಾದ ಆಮ್ಲಜನಕದ ಪ್ರಮಾಣ ಕಡಿಮೆ ಇರುವ (ಹಿಮಾಲಯದಂತಹ) ಗಿರಿಶಿಖರಗಳನ್ನು ಆರಿಸಿಕೊಳ್ಳುತ್ತಿದ್ದುದು ಇದೇ ಕಾರಣಕ್ಕೆ.

ಸಸ್ಯಾಹಾರದ ಹಿಂದಿರುವ ವಿಜ್ಞಾನದ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ನೀವು ಅದನ್ನು ತಿಳಿಯಬೇಕಾಗಿಲ್ಲ. ಒಮ್ಮೆ ಸಸ್ಯಾಹಾರ ಆರಂಭಿಸಿದರೆ ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ.

ನೀವು ನಿಯಮಿತವಾಗಿ ಧ್ಯಾನ ಮಾಡಲಾರಂಭಿಸಿದರೆ, ಕ್ರಮೇಣವಾಗಿ ನಿಮ್ಮ ಶರೀರ ಶುದ್ಧವಾಗಿ, ಧ್ಯಾನಕ್ಕೆ ಯೋಗ್ಯವಾಗುತ್ತದೆ. ಹೊಟ್ಟೆನೋವಾದಾಗ ಯಾವೆಲ್ಲ ಆಹಾರವನ್ನು ತ್ಯಜಿಸಬೇಕೆಂದು ನಿಮಗೇ ಗೊತ್ತಾಗುವಂತೆ, ಆಗ, ಸರಿಯಾಗಿ ಧ್ಯಾನ ಮಾಡಲು ಅನಾನುಕೂಲವಾದ ಆಹಾರಗಳನ್ನೆಲ್ಲ ನೀವಾಗಿಯೇ ಬಿಟ್ಟುಬಿಡುತ್ತೀರಿ.

ನೀವು ಧ್ಯಾನ ಮಾಡುವುದಾದರೂ ಸರಿಯೆ. ಆದರೆ ಸಸ್ಯಾಹಾರವನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಕೊಳ್ಳಬೇಡಿ.

ಹಾಗೆ ಮಾಡಿದರೆ ಹತ್ತಿಕ್ಕಿದ ಆಸೆಗಳು ಪ್ರಬಲವಾಗಿ, ಅದರ ಪ್ರಭಾವದಿಂದ ಪಾರಾಗುವುದು ನಿಮಗೆ ಕಷ್ಟವಾಗುತ್ತದೆ.

ಹೆಚ್ಚಿನ ಪ್ರಯಾಸವಿಲ್ಲದೆ ಮಾಂಸವನ್ನು ಬಿಡುವುದಕ್ಕಾದರೆ ಬಿಡಿ.

ಇಲ್ಲದಿದ್ದರೆ ಯಾವುದೇ ರೀತಿಯ ಅಪರಾಧಿ ಪ್ರಜ್ಞೆ ಇಲ್ಲದೆ ಅದನ್ನೇ ಮುಂದುವರಿಸಿ.

"ಆ ಬಗ್ಗೆ ತಪ್ಪಿತಸ್ಥ ಮನೋಭಾವ ಖಂಡಿತಾ ಬೇಡ"!

ಅಂತಿಮವಾಗಿ ಅಪರಾಧ ಪ್ರಜ್ಞೆ, ನಿಮ್ಮಲ್ಲಿನ ಶಕ್ತಿಗೆ ಹೆಚ್ಚು ತಡೆಗಳನ್ನು ಉಂಟುಮಾಡಬಹುದು. ಇದು ಮಾಂಸಕ್ಕಿಂತಲೂ ಹೆಚ್ಚಿನ ಹಾನಿಯನ್ನುಂಟು ಮಾಡಬಹುದು!

ನಿಮ್ಮ ಶರೀರ ಸಜ್ಜಾದಾಗ ತಾನಾಗಿಯೇ ಅದು ಮಾಂಸಾಹಾರದ ಅಭ್ಯಾಸವನ್ನು ತೊರೆಯುತ್ತದೆ.

ಪ್ರಶ್ನೆ: ಉಪವಾಸ ನಿಜಕ್ಕೂ ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಹೌದು. ಸರಿಯಾದ ರೀತಿಯಲ್ಲಿ ಮಾಡಿದರೆ ಉಪವಾಸ ನಿಜಕ್ಕೂ ಪ್ರಯೋಜನಕಾರಿ.

ನಮ್ಮ ತಿನ್ನುವ ಅಭ್ಯಾಸ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರಿಂದ ಇಂದಿನ ದಿನಗಳಲ್ಲಿ ಉಪವಾಸ ಮಾಡುವುದು ಹೆಚ್ಚು ಹೆಚ್ಚು ಮುಖ್ಯವಾಗುತ್ತಿದೆ.

ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರವೇ ಉಪವಾಸ ಮಾಡುವುದು ಎಂದುಕೊಳ್ಳಬೇಡಿ. ಇಂಥಹ ಎಲ್ಲಾ ಸಂಪ್ರದಾಯಗಳ ಹಿಂದೆಯೂ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ.

ಸಂಸ್ಕೃತದಲ್ಲಿ ನಾವು "ಅನ್ನ ಬ್ರಹ್ಮ", ಅನ್ನವೇ ದೇವರು ಎನ್ನುತ್ತೇವೆ.

ಆಹಾರ, ನಮ್ಮ ಪ್ರಾಣಗಳನ್ನು ಉಳಿಸುವ ಶಕ್ತಿ. ಊಟ ಮಾಡುವುದೂ ಒಂದು ಪೂಜೆಯಂತಿರಬೇಕು.

ಆದರೆ ಸಾಮಾನ್ಯವಾಗಿ ನಾವು ನಮ್ಮ ಹೊಟ್ಟೆಯನ್ನು ಹೇಗೆ ನೋಡಿಕೊಳ್ಳುತ್ತೇವೆ? ನಾವು ಸಿಕ್ಕಿದ್ದನ್ನೆಲ್ಲಾ ಅದಕ್ಕೆ ತುಂಬುತ್ತಿರುತ್ತೇವೆ! ಬೇರೆ ಅಡಚಣೆ ಮಾಡುವಂತೆ, “ಶಕ್ತಿಯ ತಡೆ” ಶರೀರದ್ದಾದ್ಯಂತ ಶಕ್ತಿಯ ಸರಾಗ ಹರಿಯುವಿಕೆಗೆ ಅಡಚಣೆ ಉಂಟುಮಾಡುತ್ತದೆ.

ಹೊಟ್ಟೆಗೆ ವಿಶ್ರಾಂತಿ ನೀಡಿದ ದಿನಗಳಲ್ಲಿ, ಈ ಶಕ್ತಿಯ ತಡೆಗಳನ್ನು ನಿವಾರಿಸಿ, ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸಲು ನಮಗೆ ಜಠರಾಗ್ನಿ ದೊರೆಯುತ್ತದೆ.

ಆದ್ದರಿಂದಲೇ ನೀವು ಉಪವಾಸ ಮಾಡಿದ ದಿನ ಆಯಾಸಗೊಳ್ಳದೆ, ಹೆಚ್ಚು ಹಗುರವಾಗಿಯೂ, ಶಕ್ತಿವಂತರಾಗಿಯೂ ಇರುತ್ತೀರಿ. ನೀವೇ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಉಪವಾಸದ ದಿನದಂದು ಉಪಶಮನ ಹಾಗೂ ಧ್ಯಾನ ಮಾಡುವುದು ಇನ್ನೂ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತದೆ. ನಿಮಗೇನಾದರೂ ಮಧುಮೇಹ, ಆಮ್ಲತೆ ಇದ್ದಲ್ಲಿ, ಉಪವಾಸ ಮಾಡುವ ಮುನ್ನ ಒಮ್ಮೆ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ನೀವು ಎಂದು ಬೇಕಾದರೂ ಉಪವಾಸ ಮಾಡಬಹುದು. ಕೆಲವು ದಿನಗಳಂದು ಉಪವಾಸ ಮಾಡುವುದು ಒಂದು ಸಾಮಾಜಿಕ ಸಂಪ್ರದಾಯ. ಒಂದು ನಿರ್ದಿಷ್ಟ ದಿನವನ್ನು ಉಪವಾಸಕ್ಕೆ ಇಟ್ಟುಕೊಂಡರೆ (ಪ್ರತಿ ಶುಕ್ರವಾರ / ಪ್ರತಿ ಹುಣ್ಣಿಮೆ ದಿನದಂದು) ನಿಯಮಿತವಾಗಿ ಮಾಡಲು ಅನುಕೂಲವಾಗುತ್ತದೆ.

ಕೊನೆಯ ಪಕ್ಷ 15 ದಿನಕ್ಕೆ ಒಮ್ಮೆ ಯಾದರೂ ಉಪವಾಸ ಮಾಡುವುದು ಶರೀರ ಶುದ್ಧಿಗೆ ಅತ್ಯುತ್ತಮ ಮಾರ್ಗ. ಸಂಪೂರ್ಣ ಉಪವಾಸ (ನೀರನ್ನು ಮಾತ್ರ ಕುಡಿಯಬಹುದು) ಅತ್ಯುತ್ತಮ. ನಿಮಗೆ ಆಗದಿದ್ದಲ್ಲಿ ಹಣ್ಣಿನ ರಸ ಅಥವಾ ಫಲಾಹಾರ ತೆಗೆದುಕೊಳ್ಳಬಹುದು.

ಅದು ಹೇಳುವಷ್ಟೇನು ಕಷ್ಟವಲ್ಲ! ತೀವ್ರ ಹಸಿವಾದ ಮೊದಲು ಕೆಲವು ಗಂಟೆಗಳ ನಂತರ ಹಸಿವು ತಾನೇ ತಾನಾಗಿ ನಾಶವಾಗಿ ಹೋಗುತ್ತದೆ.

ಚಿಂತಿಸಬೇಡಿ, ನಿಮಗೇನೂ ಆಗುವುದಿಲ್ಲ - ನೀವು ಖಂಡಿತಾ ಸಾಯುವುದಿಲ್ಲ !

ಒಬ್ಬ ಆರೋಗ್ಯವಂತ ಮನುಷ್ಯ 90 ದಿನಗಳ ಕಾಲ ಬರೀ ನೀರಿನಿಂದಲೇ ಇರಬಲ್ಲ ಎಂಬುದು ನಿಮಗೆ ಗೊತ್ತೇ ? ನಮ್ಮ ಶರೀರದಲ್ಲಿ 90 ದಿನಗಳಿಗೆ ಸಾಕಾಗುವಷ್ಟು ಶಕ್ತಿಯ ನಿಕ್ಷೇಪವಿರುತ್ತದೆ. ನಿಮ್ಮ ಹೊಟ್ಟೆಗೆ 24 ತಾಸುಗಳ ವಿರಾಮ ನೀಡಿ ಎಂದಷ್ಟೇ ನಾನು ನಿಮ್ಮನ್ನು ಕೇಳುತ್ತಿರುವುದು.