ಸುಮ್ಮನಿರಿ ಮತ್ತು ಕಿವಿಗೊಟ್ಟು ಆಲಿಸಿ
This text was machine-transcribed from the printed book and may contain errors. Select the words and choose “Report a mistake”.
( ಉತ್ತಮವಾಗಿ ಆಲಿಸಲು ಕಲಿಯುವುದು)

ನಿಮ್ಮ ಜೀವನದೆಡೆ ಒಂದು ಒಳ್ಳೆಯ ನೋಟವನ್ನು ಹರಿಸಿ.
ದಿನಕ್ಕೆ ಎಷ್ಟು ಗಂಟೆಗಳನ್ನು ನೀವು ಮಾತನಾಡಲು ಖರ್ಚು ಮಾಡುತ್ತೀರಿ? ಮತ್ತು ಎಷ್ಟು ಗಂಟೆಗಳನ್ನು ನೀವು ಕೇಳಲು (ಆಲಿಸಲು) ಖರ್ಚು ಮಾಡುತ್ತೀರಿ? ಎಷ್ಟೋ ದಿನ ನಾವು ಮಾತನ್ನೂ ಆಡುವುದಿಲ್ಲ - ಮಾತನಾಡಲು ಪ್ರಯತ್ನಿಸುವುದೂ ಇಲ್ಲ!
ಗಮನಿಸಿದ್ದೀರೇನು, ಜನಗುಂಪಿನಲ್ಲಿದ್ದಾಗ, ಪ್ರತಿಯೊಬ್ಬ ವ್ಯಕ್ತಿಯೂ ಚರ್ಚೆಯನ್ನು ಏಕಸ್ವಾಮ್ಯಗೊಳಿಸಲು ತುಂಬಾ ಅಗತ್ಯ ಇದೆ ಎಂದು ಭಾವಿಸುತ್ತಾನೆ.
ಮಾತನಾಡುವುದು ನಮ್ಮ ಸುತ್ತಲಿನ ಪರಿಸರವನ್ನು ನಿಯಂತ್ರಿಸುವ ಒಂದು ಮಾರ್ಗ. ತುಂಬಾ ಜನರು ತಮ್ಮ ಶಕ್ತಿಯನ್ನು ತೋರಿಸಿಕೊಳ್ಳುವ ಸಲುವಾಗಿ ಮಾತನ್ನು ಒಂದು ವಾಗ್ರ್ಚವನ್ನಾಗಿ ಬಳಸಿಕೊಳ್ಳುತ್ತಾರೆ. ಅವರು ಬರೀ ಹೇಳುವುದರಿಂದಷ್ಟೇ ಅಲ್ಲ. ಆದರೆ ಅದನ್ನು ಹೇಗೆ ಹೇಳುತ್ತಾರೆ, ಎಷ್ಟು ಹೊತ್ತು ಮಾತನಾಡುತ್ತಾರೆ - ಮತ್ತು ಬೇರೆಯವರು ಮಾತನಾಡುವುದನ್ನು ಅವರು ಎಷ್ಟು ನಿಯಂತ್ರಿಸುತ್ತಾರೆ, ಹೀಗೆ! ಆಶ್ಚರ್ಯವೇನಿಲ್ಲ, ಮುಚ್ಚು! ಎನ್ನುವುದು ನಿಂದನೆಯ ಅತ್ಯಂತ ತೇಜೋಭಂಗದ ಪದ! ನಿಮಗೆ ಮಾತನಾಡಲು ಅವಕಾಶವೀಯದಿದ್ದಲ್ಲಿ, ಏನೋ ಮುಖ್ಯವಾದದ್ದ ರಿಂದ ನಿಮ್ಮನ್ನು ವಂಚಿತರನ್ನಾಗಿಸಿದ ಅನಿಸಿಕೆ ನಿಮಗೆ.
ಏಕೆಂದರೆ ಪ್ರತಿಯೊಬ್ಬರೂ ತಮ್ಮ ಯೋಚನೆಗಳನ್ನು ಮತ್ತು ಅಭಿಪ್ರಾಯಗಳನ್ನು ಬೇರೆಯವರ ಮೇಲೆ ವಾಂತಿ ಮಾಡಲು ಸಮರ್ಥರು! ಹರಟೆಯಿಂದ ತಪ್ಪಿಸಿಕೊಳ್ಳುವ ಒಂದು ಮಾರ್ಗವಷ್ಟೆ. ಆದ ಕಾರಣ ಪ್ರಪಂಚದಲ್ಲಿ ಅಷ್ಟೊಂದು ಮಾತುಕತೆ ನಡೆಯುತ್ತಿದೆ !
ಈ ದಿನ ಪ್ರಪಂಚದಲ್ಲಿ ಆಲಿಸುವವರ ಕೊರತೆ ತೀವ್ರವಾಗಿದೆ !
ಶತಮಾನಗಳ ಹಿಂದೆಯೇ, ಬರ್ಟ್ರಾಂಡ್ ರಸೆಲ್, ಆಲಿಸುವುದು ನಮ್ಮ ಕಾಲದ ಹೆಚ್ಚು ಹಣಗಳಿಸುವ ವೃತ್ತಿಯಾಗುವುದೆಂದು ಭವಿಷ್ಯ ನುಡಿದಿದ್ದ ಮತ್ತು ಅದು ಸಂಭವಿಸಿದೆ ! ಈ ದಿನಗಳಲ್ಲಿ ವಾಸ್ತವವಾಗಿ, ವಿಶೇಷವಾಗಿ ಪಶ್ಚಿಮ ದೇಶಗಳಲ್ಲಿ, ಪ್ರತಿವ್ಯಕ್ತಿಯೂ ಒಬ್ಬ ಖಾಸಗಿ ಕೇಳುಗನನ್ನು ಹೊಂದಿದ್ದಾನೆ. ಜನ ಸಲಹೆಗಾರರಿಗೆ ಹೆಚ್ಚು ಹಣ ಪಾವತಿಸುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲಿಕ್ಕಲ್ಲ, ಸುಮ್ಮನೆ ಅವರು ಹೇಳುವುದನ್ನು ಆಲಿಸಲು. ಏಕೆಂದರೆ ಆಲಿಸಲು ಬೇರೆ ಯಾರಿದ್ದಾರೆ ? ಈ ದಿನಗಳಲ್ಲಿ, ಯಾರಿಗೂ ಇನ್ನೊಬ್ಬರನ್ನು ಆಲಿಸಲು, ಇನ್ನೊಬ್ಬರಲ್ಲಿ ಗಮನಕೊಡಲು ಪುರುಸೊತ್ತೇ ಇಲ್ಲ.
ನಿಮ್ಮ ಲಕ್ಷ್ಯವೇ ನಿಮ್ಮ ಶಕ್ತಿ !
ನಿಮಗೇ ಶಕ್ತಿ ಸಾಕಷ್ಟಿಲ್ಲದೆ ಕಡಿಮೆಯಾದಾಗ - ಬೇರೆಯವರಿಗೆ ಶಕ್ತಿಯನ್ನೆಲ್ಲಿ ಕೊಡಬಲ್ಲಿರಿ? ಸಾಕಷ್ಟು ಸಮಯದಲ್ಲಿ, ಬೇರೆಯವರು ನಿಮಗೆ ಮಾತನಾಡುವಾಗ ನಿಮಗೆ ಕೇಳಿಸುವುದೇ ಇಲ್ಲ ! ನೀವು ಆಲಿಸುವುದೇ ಉಂಟೆಂದರೆ, ಎಲ್ಲಾ ಸಮಯದಲ್ಲೂ ನಿಮ್ಮ ಸುತ್ತ ಮುತ್ತ ಲೂ ಮಾತನಾಡುವುದಕ್ಕೆ ತುಂಬಾ ಜೀವಿಗಳಿರುತ್ತವೆ !
ಮಾತನಾಡುವುದೆಂದರೆ ಯಾವಾಗಲೂ ಪದಗಳ ಮುಖಾಂತರವೇ ಅಲ್ಲ.
ವಾಸ್ತವವಾಗಿ ನಮ್ಮ ಪರಸ್ಪರ ಸಂಪರ್ಕದ ಹೆಚ್ಚು ಪ್ರಮುಖವಾದ ಭಾಗ ಬಾಯಿಮಾತೇ ಇಲ್ಲದೆ.
ಬೆಳಿಗ್ಗೆ ನಿಮ್ಮ ಪತ್ನಿ ನಿಮಗೆ ಕಾಫಿ ತಂದಾಗ, ಆಕೆ ಹೇಳುವುದನ್ನು ಆಲಿಸಿರಿ. ಆಕೆ ಹೇಳುವ ಪದಗಳನ್ನಷ್ಟೇ ಅಲ್ಲ, ಆಕೆಯ ಕೆಲಸಗಳನ್ನೂ ಸಹ. ಲೋಟವನ್ನು
ನಿಮ್ಮ ದೇಹ ನಿಮ್ಮಲ್ಲಿ ಕಿರುಚುವುದನ್ನು ನೀವು ಕೇಳಬಹುದು. ನೀವು ರಾತ್ರಿ ತುಂಬಾ ಹೊತ್ತು ಟಿ.ವಿ. ನೋಡಲು ಕುಳಿತಾಗ, ನಿಮ್ಮ ದೇಹ ಕಿರುಚುತ್ತದೆ, ಸಾಕು, ನನಗೆ ವಿಶ್ರಾಂತಿ ಬೇಕು! ವಾಸ್ತವವಾಗಿ, ಎಲ್ಲಾ ರೋಗಗಳೂ ಬೇರೇನೂ ಅಲ್ಲದೆ, ನಿಮ್ಮ ಗಮನವನ್ನು ಸೆಳೆಯುವ, ನಿಮಗಾಗಿ ನಿಮ್ಮ ದೇಹ ಹಂಬಲಿಸುವ ಪರಿಯೇ ಆಗಿದೆ.
ಆದರೆ ನೀವು ಕಿವಿಗೊಟ್ಟು ಕೇಳುವಿರೇನು ?
ನೀವು ಕೆಲಸದಿಂದ ಮನೆಗೆ ಬಂದಾಗ, ನೀವೇ ಬಾಗಿಲನ್ನು ಗಟ್ಟಿಯಾಗಿ ಬಡಿಯುವುದನ್ನು ನೀವು ಕೇಳಿ. ಒಂದು ಸಿನಿಮಾ ನೋಡಿ ಮನೆಗೆ ಬಂದಾಗ ನೀವು ಅದೇ ರೀತಿ ಮಾಡುವಿರೇನು ? ಬಡಿಯುವ ಶಬ್ದ, ನಿಮ್ಮ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದರ ಬಗ್ಗೆ ವಿಸ್ತಾರವಾಗಿ ನುಡಿಯುತ್ತದೆ. ಅದನ್ನು ಹೇಗೆ ಬದಲಾಯಿಸ ಬಲ್ಲಿರಿ ? ಮತ್ತು ನೀವು ಆಲಿಸುವುದೇ ಇಲ್ಲವಾದರೆ, ಏನೋ ತಪ್ಪಾಗಿದೆ ಎಂದು ನಿಮಗೆ ತಿಳಿಯುವುದಾದರೂ ಹೇಗೆ ?
ಆಲಿಸುವ ಸೌಮ್ಯವಾದ ಕಲೆಯನ್ನು ನಾವು ಮರೆತು ಬಿಟ್ಟಿದ್ದೇವೆ.
ಬೇರೆಯವರು ಹೇಳುವುದನ್ನು ಕೇಳುವುದು ಅಥವಾ ನೀವೇ ಮಾತನಾಡುವುದನ್ನು ಆಲಿಸುವುದು ಅಷ್ಟೇ ಅಲ್ಲ.
ಆಲಿಸುವುದೆಂದರೆ, ನಮ್ಮೊಳಗೆ ಇರುವ ಮೌನದ ಬಗ್ಗೆ, ನಮ್ಮ ಸುತ್ತಮುತ್ತಲೂ ಇರುವ ಮೌನವನ್ನು ಆಲಿಸುವುದು. ನಮ್ಮ ಮಾತುಗಳೆಲ್ಲಾ ಮೌನವೆಂಬ ರಮ್ಯವಾದ ಸಾಗರದ ಪ್ರಾಮಾಣಿಕ ಅಲೆಗಳು. ನೀವು ಯಾವಾಗಲಾದರೂ ಆ ಮೌನವನ್ನು ಕೇಳಿದ್ದೀರೇನು ?
ಮೌನವನ್ನು ಆಲಿಸಲು ನಿಮ್ಮ ಜೀವನದಲ್ಲಿ ಸ್ಥಳ ಮತ್ತು ವೇಳೆಯನ್ನು ಸೃಷ್ಟಿಸಿ. ಹೀಗೆ ಮಾಡುತ್ತಾ ಪ್ರತಿದಿನ ಸ್ವಲ್ಪ ಸಮಯ ವಿನಿಯೋಗಿಸುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿ.
ಕೊಡುವುದಕ್ಕಿಂತ ಹೆಚ್ಚಿನದನ್ನು ಗುರುವು ತನ್ನ ಮೌನದಲ್ಲಿ ಕೊಡಬಲ್ಲ.
ನೀವು ಗುರುವನ್ನು ಆಲಿಸುವಾಗ, ಗಾಳಿಯನ್ನು ಅಥವಾ ಪಕ್ಷಿಯನ್ನು ಆಲಿಸುತ್ತಿರುವಂತೆ ಆಲಿಸಿ. ನೀವು ಪಕ್ಷಿಗಳನ್ನು ಆಲಿಸಿದಾಗ, ನಂಬುತ್ತೀರೋ ಅಥವಾ ಅಪನಂಬಿಕೆಯೋ ?
ನೀವು ಒಪ್ಪುತ್ತೀರೋ ಅಥವಾ ಒಪ್ಪುವುದಿಲ್ಲವೋ ?
ಎರಡೂ ಅಲ್ಲ ! ನೀವು ಸರಳವಾಗಿ ಸ್ವೀಕರಿಸುತ್ತೀರಿ. ಇದೊಂದು ಬುದ್ಧಿವಂತ ಕಾರ್ಯ ವಿಧಾನವೇನಲ್ಲ. ಸರಳವಾಗಿ ಬಿಚ್ಚು ಮನಸ್ಸಿನಿಂದ ಆಲಿಸಿ, ಅಂಗೀಕಾರದೊಂದಿಗೆ - ಆಗ ನೀವು ತಾನಾಗಿಯೇ ಗುರುವಿನೊಂದಿಗೆ ಅನ್ಯೋನ್ಯವಾದ ಸಂಪರ್ಕದೊಳಗೆ ಇಳಿಯುತ್ತೀರಿ.
ಒಬ್ಬ ಹರೆಯದ ಗುರು ಮತ್ತು ಅವನ ಅನುಯಾಯಿಗಳ ನಡುವಿನ ಸಂಪರ್ಕದ ಬಗ್ಗೆ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕವಿದೆ;
ಚಿತ್ರಂ ವಟತರೋರ್ ಮೂಲೇ
ವೃದ್ಧಃ ಶಿಷ್ಯಾ ಗುರುರ್ ಯುವಃ
ಗುರೋಸ್ತು ಮೌನಂ ವ್ಯಾಖ್ಯಾನಾಮ್
ಶಿಷ್ಯಾಸ್ತು ಛಿನ್ನಃ ಸಂಶಯಃ
( ಆಲದ ಮರದಡಿಯಲ್ಲಿ ಅವರು ಕುಳಿತುಕೊಳ್ಳುತ್ತಾರೆ,
ಶಿಷ್ಯರು ವಯಸ್ಸಾದವರು, ಗುರು ಒಬ್ಬ ಬರಿಯ ಯುವಕ !
ಗುರು ಮೌನದ ಮುಖೇನ ಮಾತ್ರ ಮಾತನಾಡುತ್ತಾರೆ
ಆದರೆ ಅಗೋ ! ಶಿಷ್ಯರ ಪ್ರಶ್ನೆಗಳು ತನ್ನಷ್ಟಕ್ಕೆ ತಾನೇ ಕರಗಿ ಅವನು ಪಡೆದ ಜ್ಞಾನಕ್ಕಾಗಿ, ಅಗಾಧವಾದ ಕೃತಜ್ಞತೆಯಿಂದ, ಗುರುವಿನ ಮುಂದೆ ನಿಷ್ಕಪಟವಾಗಿ ತಲೆಬಾಗಿಸಿ ಮತ್ತು ಗುರುವಿನೊಂದಿಗೆ ಐಕ್ಯವಾಗಿ ನಿಂತ.
ಸ್ವಲ್ಪ ಹೊತ್ತಿನ ನಂತರ ಗುರು ಮಾತನಾಡಿದ.
ನೀನು ನನ್ನ ಮಜ್ಜೆ (ಸತ್ವ) ಯನ್ನು ಹೊಂದುವಂಥವನಾಗು, ಗುರು ಶಿಷ್ಯನಿಗೆ ಹೇಳಿದ.
ಧ್ಯಾನದೊಳಗೆ ಪ್ರವೇಶಿಸಲು ಮೌನ ಒಂದು ಚಂದದ ಮಾರ್ಗ. ವಾಸ್ತವವಾಗಿ ಮೌನವೇ ಒಂದು ಧ್ಯಾನದ ಅದ್ಭುತ ತಂತ್ರಕತೆ. ಇದೊಂದು ಅದ್ಭುತವಾದ ಗುಣಪಡಿಸುವ ಮತ್ತು ಪುನಃ ಯೌವನ ಕೊಡುವ ಶಕ್ತಿ. ತಿಳುವಳಿಕೆಯನ್ನು ಮೀರಿದ ಆ ಶಾಂತಿ ಎಂದು ಜೇಸಸ್ ಏನನ್ನು ಕರೆದನೋ ಅದನ್ನು ನೀವು ಮೌನದಲ್ಲಿ ಸಂಪಾದಿಸುತ್ತೀರಿ.
ಅವರು ಹೇಳಿದಂತೆ “ಸಿಹಿ ಮಾತುಗಳು ಬೆಳ್ಳಿ, ಆದರೆ ಮೌನ ಬಂಗಾರ”.
ಆದ್ದರಿಂದ, ಇನ್ನೊಮ್ಮೆ ನೀವು ಮಾತನಾಡಲು ನಿಮ್ಮ ಬಾಯಿ ತೆರೆಯುವ ಮೊದಲು, ಇದು ಮೌನವನ್ನು ಅಭಿವೃದ್ಧಿ ಪಡಿಸುತ್ತದೆಯೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ!