ನಿಮ್ಮ ಕರ್ತವ್ಯವನ್ನು ಮಾಡಬೇಡಿ!
This text was machine-transcribed from the printed book and may contain errors. Select the words and choose “Report a mistake”.
(ಕರ್ತವ್ಯ Vs ಜವಾಬ್ದಾರಿ)

ರಾಜೋದ್ಯಾನವನ್ನು ಲೆಕ್ಕಿಸಲಿಲ್ಲ.
ಮರುದಿನ ಮುಂಜಾನೆ ಎದ್ದ ರಾಜ ಆ ಮನುಷ್ಯನನ್ನು ಉದ್ಯಾನಕ್ಕೆ ಕರೆಸಿದ. ಬಾ, ನನಗಾಗಿ ಒಂದು ಹಾಡು! ಅವನು ಆಜ್ಞಾಪಿಸಿದ.
ವಿಧೇಯತೆಯಿಂದ, ಮನುಷ್ಯ ಕೊಳಲಿನೊಡನೆ ಹೋರಾಡಿದ. ಆದರೆ ಅದರಿಂದ ಯಾವುದೇ ಸಂಗೀತ ಹೊರಹೊಮ್ಮಲಿಲ್ಲ!
ರಾಜನಿಗೆ ಆಶ್ಚರ್ಯವಾಯಿತು.
ಏನು ಸಮಾಚಾರ ? ರಾಜೋದ್ಯಾನದ ಸೌಂದರ್ಯ ಸಾಲುತ್ತಿಲ್ಲವೇ ? ಹಾಡಲು ಸ್ಫೂರ್ತಿ ಸಿಗುತ್ತಿಲ್ಲವೇ ? ರಾಜ ಪ್ರಶ್ನಿಸಿದ.
"ಇಲ್ಲ ಪ್ರಭು, ಉದ್ಯಾನವನ ಬಹಳ ಸುಂದರವಾಗಿದೆ. ಆದರೆ ನನ್ನ ಸಂಗೀತ ಯಾವತ್ತೂ ಅದಕ್ಕೆ ಸಾಟಿಯಾಗಲಾರದು", ಮನುಷ್ಯ ದುಃಖದಿಂದ ಉತ್ತರಿಸಿದ.
ಏಕೆ? ರಾಜ ಕೇಳಿದ.
ಏಕೆಂದರೆ, ನಿನ್ನೆ ಆನಂದವೇ ನನ್ನ ಸಂಗೀತವಾಗಿತ್ತು. ಈ ದಿನ ಅದು ನನ್ನ ಕರ್ತವ್ಯವಾಗಿಬಿಟ್ಟಿದೆ.
--- ★ ---
"ಕರ್ತವ್ಯ" ಎಂಬುದು ಒಂದು ಕುರೂಪವಾದ ಪದ!!
ಬೇರೆ ಯಾವ ಪದಕ್ಕೂ ಸಂತೋಷವನ್ನು ದುಃಖವನ್ನಾಗಿ ಮಾರ್ಪಡಿಸುವ ಅಂತಹ ಪ್ರಚಂಡ ಸಾಮರ್ಥ್ಯ ಇಲ್ಲ.
ಕರ್ತವ್ಯವೆಂಬುದು ನಮ್ಮ ಕಾಲದ ಬಹಳ ದುರುಪಯೋಗಿಸಲ್ಪಟ್ಟ ಪದವಾಗಿರಬೇಕು.
ನಾಗರೀಕತೆಯ ಚರಿತ್ರೆಯಲ್ಲಿ ಒಬ್ಬ ಕರ್ತವ್ಯ ಮಾಡುವುದರ ಪ್ರಾಮುಖ್ಯತೆಯ ಬಗ್ಗೆ ಎಷ್ಟು ಹೇಳಿದೆ ಮತ್ತು ಬರೆದಿದ್ದಾರೆಂದರೆ, "ಕರ್ತವ್ಯ ಎಂದರೆ ನಿಜವಾಗಲೂ ಏನು ?'' ಎಂದು ಕೇಳಲು ಈಗ ಬಂದಿದೆ ಸಮಯ..
ಕರ್ತವ್ಯ ಎಂದರೆ ತಪ್ಪು ಕಾರಣಕ್ಕಾಗಿ ಸರಿಯಾಗಿ ಕೆಲಸ ಮಾಡುವುದಲ್ಲದೆ ಬೇರೇನಲ್ಲ ! ಹೊರಗಡೆಯಿಂದ ನಮ್ಮ ಮೇಲೆ ಮೌಲ್ಯದ ಅರ್ಥವನ್ನು ಹೇರಿದಾಗ ಹುಟ್ಟುವುದೇ ಕರ್ತವ್ಯ. ನೀವು ನಿಮ್ಮನ್ನು "ಸರಿಯಾದ'' ಕೆಲಸ ಮಾಡುತ್ತಿರುವಿರಿ ಎಂದು ಅರಿತಿದ್ದೂ ಆದರೆ ಸಂತೋಷ ಅಥವಾ ತೃಪ್ತಿಯ ಅನುಭವ ಇಲ್ಲದಿದ್ದರೆ, ಅದರರ್ಥ ನೀವು ಒಂದು ಕರ್ತವ್ಯವನ್ನು ಪೂರೈಸುತ್ತಿದ್ದೀರಿ ಎಂದು.
ತನ್ನ ಕರ್ತವ್ಯವನ್ನು ನಿರ್ವಹಿಸುವ ಸಿದ್ಧಾಂತದ ವಿರುದ್ಧ ಪ್ರತಿಯೊಬ್ಬ ವ್ಯಕ್ತಿಯೂ ರಹಸ್ಯವಾಗಿ ಸಿಡಿದೆಳುತ್ತಾನೆ ಎಂಬುವುದಕ್ಕೆ ಯಾರೂ ಅಪವಾದವಲ್ಲ. ಆದರೆ ಕರ್ತವ್ಯ ಎಂಬುದೊಂದು ಎರಡಲುಗಿನ ಕತ್ತಿ !
ಕರ್ತವ್ಯವನ್ನು ಮಾಡಬೇಕಲ್ಲಾ ಎಂದು ನೀವೇನಾದರೂ ಮಾಡಿದರೆ, ಸಾಮಾನ್ಯವಾಗಿ ನಿಷ್ಪಲ ಹಾಗೂ ಸಂತಾಪದ ಅನುಭವದೊಂದಿಗೆ ನೀವದನ್ನು ಮುಗಿಸುತ್ತೀರಿ. ಆದರೆ ಅದನ್ನೇನಾದರೂ ನೀವು ಮಾಡದಿದ್ದಲ್ಲಿ (ಎಸಗದಿದ್ದಲ್ಲಿ), ತಪ್ಪಿತಸ್ಥ ಮನೋಭಾವನೆ ಹೊಂದುತ್ತೀರಿ ! ಎರಡೂ ವಿಧದಲ್ಲೂ ಕರ್ತವ್ಯ ನಿಮಗೆ ಸಂತೋಷದ ಅವಕಾಶವನ್ನು ನೀಡುವುದಿಲ್ಲ.
ಕರ್ತವ್ಯವೆಂಬ ಬಲೆಯಲ್ಲಿ ನಮಗೆ ನಾವೇ ಬಿದ್ದಿರುವುದನ್ನು ನಾವು ಹೇಗೆ ಕಾಣುತ್ತೇವೆ ?
ಶೋಚನೀಯವಾದ ಸತ್ಯ ಏನೆಂದರೆ, ನಮ್ಮಲ್ಲಿ ಸಾಕಷ್ಟು ಜನರಿಗೆ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುವ ಧೈರ್ಯವೇ ಇಲ್ಲ. ಸಾಮಾಜಿಕ, ನೈತಿಕ, ಕಾನೂನು ಒಪ್ಪುವಂತಹ. ಹೀಗೆ ಎಷ್ಟೋ ಸಂಸ್ಥೆಗಳಲ್ಲಿ ನಾವು ಆಶ್ರಯ ಕೋರುತ್ತೇವೆ.
ಜೀವನದಲ್ಲಿ ಏನೂ ಸುಮ್ಮನೆ ಬರುವುದಿಲ್ಲ ಎಂಬುದನ್ನು ನಾವು
ಸೂಚನೆಗಳನ್ನು ನೀಡುತ್ತಾ ಎಷ್ಟು ಜನ ನಿಮ್ಮ ತಲೆಯ ಒಳಗಡೆ ಕುಳಿತಿದ್ದಾರೆ? ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಎಷ್ಟು ಜನ ನಿಮಗೆ ಹೇಳುತ್ತಿದ್ದಾರೆ? ನಿಮ್ಮ ಜೀವನವನ್ನು ನಿಯಂತ್ರಿಸುತ್ತಿರುವ ಜನರ್ಯಾರು ?
ನಿಮ್ಮ ತಂದೆ ತಾಯಿಯರು, ನಿಮ್ಮ ಮಕ್ಕಳು, ನಿಮ್ಮ ಗಂಡ ಅಥವಾ ಹೆಂಡತಿ, ನಿಮ್ಮ ಸ್ನೇಹಿತರು, ಅಪರಿಚಿತರು, ಸಮಾಜ, ಕಾನೂನು, ನೀವು ಓದಿದ ಎಲ್ಲಾ ನೈತಿಕ ಪುಸ್ತಕಗಳ ಎಲ್ಲಾ ಬರಹಗಾರರು, ನೀವು ಕಿವಿಗೊಟ್ಟು ಕೇಳಿದ ಎಲ್ಲಾ ಉಪನ್ಯಾಸಗಳ ಎಲ್ಲಾ ಭಾಷಣಕಾರರು !
ನೀವು ಏನನ್ನು ತ್ಯಾಗ ಮಾಡಬೇಕೆಂದು ನಿಮಗೆ ಹೇಳಲು ಸಾಕಷ್ಟು ಜನರಿದ್ದಾರೆ ಮತ್ತು ಯಾರಿಗಾಗಿ : ನಿಮ್ಮ ಕುಟುಂಬಕ್ಕೋಸ್ಕರ, ನಿಮ್ಮ ಮಕ್ಕಳಿಗೋಸ್ಕರ, ನಿಮ್ಮ ಸಮಾಜಕ್ಕಾಗಿ, ನಿಮ್ಮ ತಾಯ್ನಾಡಿಗಾಗಿ, ಒಂದು ಸಿದ್ಧಾಂತಕ್ಕಾಗಿ, ದೇವರಿಗಾಗಿ...... !
ಪ್ರತಿಯೊಬ್ಬ ದೇಶಭಕ್ತನೂ ಕೊಲ್ಲುವುದು ತನ್ನ ಕರ್ತವ್ಯವೆಂದು ಯೋಚಿಸುತ್ತಾನೆ ! ಹಿಟ್ಲರ್ ಸಹ, ಈ ಗ್ರಹದ ಮೇಲಿರುವ ಎಲ್ಲಾ ಜ್ಯೂಸ್ ಗಳನ್ನು ಕೊಲ್ಲುವುದು ತನ್ನ ಪವಿತ್ರ ಕರ್ತವ್ಯವೆಂದು ಭಾವಿಸಿದ್ದ.
ಯುದ್ಧದಲ್ಲಿ ಜನ ತಮ್ಮ ವೈರಿಗಳನ್ನು ಬರೀ ಕರ್ತವ್ಯಕ್ಕಾಗಿ ಕೊಲ್ಲುತ್ತಾರೆ.
ನೀವು ನಿಮ್ಮನ್ನೇ ಕೊಲ್ಲುತ್ತಿದ್ದೀರಿ !
ಪ್ರಜ್ಞಾಪೂರ್ವಕವಾಗಿ ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿ. ನನ್ನ ಕರ್ತವ್ಯಗಳನ್ನು ಮಾಡಲು ನನಗಿರುವ ನಿಜವಾದ ಕಾರಣಗಳಾದರೂ ಏನು ?
ಬೇರೆಯವರನ್ನು ಸುಪ್ರೀತಗೊಳಿಸಲು ?
ಅಸಮ್ಮತಿಯ ಭಯ ?
ಒಂದು ತಪ್ಪಿತ್ತಸ್ಥ ಭಾವನೆ ? ಒಳಗೊಂಡಿರುತ್ತವೆ'', ಎಂದು ನೀವು ನನ್ನನ್ನು ಕೇಳಬಹುದು ! ಆಗ ನಾನು ಇದು ಅಷ್ಟೊಂದು ಪ್ರಯಾಸ ಪಡುವುದನ್ನೇಕೆ ಕಾಣುತ್ತೇನೆ ?
ಏಕೆಂದರೆ, ನಿತ್ಯ ಜೀವನದ ಏಳು ಬೀಳಿನ ದಾರಿಯಲ್ಲೆಲ್ಲೋ ನಿಮ್ಮ ಪ್ರೀತಿಯ ಕೇಂದ್ರ ಬಿಂದುವನ್ನೇ ಕಳೆದುಕೊಂಡಿದ್ದೀರಿ !
ನಿಮ್ಮ ಸ್ವಾಭಾವಿಕವಾದ ಜವಾಬ್ದಾರಿಯ ತಿಳುವಳಿಕೆಯ ಜಾಗದಲ್ಲಿ, ಹೊರಿಸಲ್ಪಟ್ಟ ಕರ್ತವ್ಯದ ಅರಿವನ್ನು ನೀವು ಬದಲಾಯಿಸಿಟ್ಟಿದ್ದೀರಿ.
ಜವಾಬ್ದಾರಿ ಮತ್ತು ಕರ್ತವ್ಯದ ಮಧ್ಯೆ ಅತೀವವಾದ ವ್ಯತ್ಯಾಸವಿದೆ. ಜವಾಬ್ದಾರಿ ಎಂದರೆ ಅಕ್ಷರಶಃ ಪ್ರತಿಕ್ರಿಯೆ ತೋರುವ ಸಾಮರ್ಥ್ಯ. ಇದು ಇನ್ನೊಬ್ಬರ ಅಗತ್ಯಕ್ಕೆ ತನ್ನಷ್ಟಕ್ಕೆ ತಾನೇ ಹೊರಹೊಮ್ಮುವ ನಿಮ್ಮ ಪ್ರತಿಕ್ರಿಯೆಯ ಸಾಮರ್ಥ್ಯ.
ಅಪರಿಚಿತನೋರ್ವನನ್ನು ಉರಿಯುತ್ತಿರುವ ಮನೆಯಿಂದ ರಕ್ಷಿಸಲು ಒಬ್ಬ ಮನುಷ್ಯನಿಗೆ ಸ್ಪೂರ್ತಿ ನೀಡುವುದೇ ಜವಾಬ್ದಾರಿ. ಕರ್ತವ್ಯದ ಯಾವ ಪ್ರಜ್ಞೆಯೂ ಅದರಲ್ಲಿ ಜೊತೆಗೂಡಿರುವುದಿಲ್ಲ !
ಜವಾಬ್ದಾರಿ ಎಂಬುದು ಪ್ರೀತಿಯ ಸ್ವಾಭಾವಿಕವಾದ ಒಂದು ಶಾಖೆ. ನೀವು ಬೇರೆಯವರಿಂದ ಭಿನ್ನ ಅಲ್ಲ ಎಂದು ನೀವು ಗುರುತಿಸಿದಾಗ ಇದು ಉದ್ಭವವಾಗುತ್ತದೆ.
ಆಳವಾದ ತಿಳುವಳಿಕೆಯಿಂದ ಇದು ಚಿಮ್ಮುತ್ತದೆ.
ಆದುದರಿಂದ ನೀವು ನಾನೇ.
ಒಮ್ಮೆ ಜವಾಬ್ದಾರಿಯ ಪ್ರಜ್ಞೆ ಉದ್ಭವವಾದೊಡನೆ, ಕರ್ತವ್ಯ ಎಂಬ ಪದ ತಂತಾನೇ ಮಾಯವಾಗುತ್ತದೆ..
ಸ್ವಲ್ಪ ಹೊತ್ತಿಗೆ ಮುಂಚೆ ನಾನೊಂದು ಜನಪ್ರಿಯ ಕ್ರೀಡೆಯ ಉಡುಗೆ - ತೊಡುಗೆಯ ವ್ಯಾಪಾರೀ ಮುದ್ರೆಯ ಜಾಹೀರಾತೊಂದು ಕಂಡೆ. ಚಿತ್ರದಲ್ಲಿ ಒಬ್ಬ ಮನುಷ್ಯ ಸ್ಪರ್ಧಾತ್ಮಕ ಘಟನೆಗೋಸ್ಕರ ಕಷ್ಟಪಟ್ಟು ತಯಾರಾಗುತ್ತಿರುವುದನ್ನು ತೋರಿಸಿತ್ತು. ತಲೆ ಬರಹ ಹೇಳಿತ್ತು :
ನಿಮ್ಮ ದೇಹ ನಿಮ್ಮನ್ನು ನಿಲ್ಲಿಸು ಎಂದು ಕೇಳಿದರೆ, ದೇಹಕ್ಕೆ ಮುಚ್ಚಿಕೊಂಡಿರಲು ಹೇಳಿ !
ನನ್ನ ಊಹೆಯೆಂದರೆ - ಬಹುತೇಕ ಸಮಯಗಳಲ್ಲಿ !
ಬೆಳಿಗ್ಗೆ ಎದ್ದ ಕ್ಷಣದಿಂದ, ಅದೊಂದು ನಿಮ್ಮ ದೇಹದ ಶಕ್ತಿ ಪರೀಕ್ಷೆಯೆ.
ನಿಮಗೆ ತಿಳಿದಿದೆಯೇ, ಬೆಳಗಾಯಿತೆಂದು ಎಚ್ಚರಿಸಲು ಘಂಟೆಯ ಅಗತ್ಯ ಇರುವುದು ಮನುಷ್ಯ ಪ್ರಾಣಿಗೆ ಮಾತ್ರ - ಏಕೆಂದರೆ ಪ್ರಕೃತಿಯ ಲಯದಿಂದ ಅವನು ಅಷ್ಟೊಂದು ಸಂಪೂರ್ಣವಾಗಿ ಶ್ರುತಿಗೆಟ್ಟಿದ್ದಾನೆ !
ನೀವು ಎದ್ದಾಗ, ನಿಮ್ಮ ದೇಹ ಹೆಚ್ಚು ನಿದೆಗಾಗಿ ಅರಚುತ್ತಿರುತ್ತದೆ. ನೀವು ವ್ಯಯಿಸಿದ ರಾತ್ರಿಯ ಅವೇಳೆಯ ನಂತರ ಅದಕ್ಕೆ ಸುಧಾರಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಆದರೆ ಈ ದಿನ ಬೆಳಗ್ಗೆ - ಸೋಮವಾರ - ಆದುದರಿಂದ ನೀವು ನಿಮ್ಮ ದೇಹಕ್ಕೆ ಬಾಯ್ಮುಚ್ಚಿ ಕೊಂಡಿರಲು ಹೇಳುತ್ತೀರಿ.
ಗಂಟೆಗಟ್ಟಲೆ ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಪಿಳಿ ಪಿಳಿ ಕಣ್ಣು ಬಿಟ್ಟಾದ ನಂತರ, ನಿಮ್ಮ ಕಣ್ಣುಗಳು ಸುಸ್ತಾಗಿ ಆಯಾಸ ಹೊಂದುತ್ತದೆ. ಆದರೆ ಯೋಜನೆಯೊಂದರ ವರದಿಯೊಂದನ್ನು ನೀವು ಪೂರ್ಣಗೊಳಿಸುವುದಿದೆ. ಹೀಗಾಗಿ ನಿಮ್ಮ ದೇಹಕ್ಕೆ ಏನು ಹೇಳುತ್ತೀರಿ ? ಬಾಯ್ಮುಚ್ಚು ! !
ನೀವು ಯಾವುದಾದರೂ ಸಮಾರಂಭದಲ್ಲಿ ಹೆಚ್ಚು ಹೆಚ್ಚಾಗಿ ತಿಂದಾಗ ಅಥವಾ ಕುಡಿದಾಗ, ದೂರದರ್ಶನವನ್ನು ವೀಕ್ಷಿಸುತ್ತಾ ಹೊತ್ತಾಗಿ ಕುಳಿತಾಗ, ನಿಮಗೆ ಹುಷಾರಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡಿದಾಗ, ನೀವು ನಿರಂತರವಾಗಿ ದೇಹದ ಎಚ್ಚರಿಕೆಯ ಕರೆಗಳನ್ನು ಅಲಕ್ಷಿಸುತ್ತಿದ್ದೀರಿ.
ಈಗಿನ ದಿನಗಳಲ್ಲಿ ದೇಹವನ್ನು ಬಾಯ್ಮುಚ್ಚಿಕೊಂಡಿರು ಎನ್ನುವುದು ನಮಗೆ ಹೆಮ್ಮೆಯೆಂದೇ ಬಗೆಯುತ್ತೇವೆ. ನಮ್ಮ ಶ್ವಾಸಕೋಶಕ್ಕೆ ವಾಯು ಮಾಲಿನ್ಯದ ತೆರಿಗೆ ಹಾಕುತ್ತೇವೆ. ನಮ್ಮ ಹೊಟ್ಟೆಗೆ ಮಸಾಲೆ ಭರಿತ ಹಾಗೂ ಅನಾರೋಗ್ಯಕರ ಆಹಾರದ, ನಮ್ಮ ಯಕೃತ್ತಿಗೆ ಮಧ್ಯಸಾರದ ತೆರಿಗೆ ಹಾಕುತ್ತೇವೆ. ಸ್ವಲ್ಪ ಮಟ್ಟಿಗೆ ನಮ್ಮ ದೇಹವೂ ಹೊಡೆತಕ್ಕೆ ಮೃದು ಮನಸ್ಸಿನಿಂದ ಹೊಂದಿಕೊಳ್ಳುವುದನ್ನು ಕಲಿಯುತ್ತದೆ. ಆದ್ದರಿಂದಲೇ ನಮ್ಮ ತಾಳ್ಮೆಯ ಹೊಸಿಲು ದಿನನಿತ್ಯ ಏರುತ್ತಿದೆ. ಕುಡಿದು ಮತ್ತರಾಗಲು ನಮಗೆ ಹೆಚ್ಚು ಪ್ರಮಾಣದ ಮಧ್ಯಸಾರ ಬೇಕಾಗಿದೆ ಮತ್ತು ನೋವಿನ ಅನುಭವವನ್ನು ತಡೆಯಲು ಹೆಚ್ಚು ಪ್ರಮಾಣದ ನೋವಿನ ಉಪಶಮನಗಳು ಬೇಕಾಗಿದೆ.
ನಮ್ಮ ದೇಹ ಮತ್ತು ಬುದ್ಧಿ ಒಂದಕ್ಕೊಂದು ಎಷ್ಟು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ನಾವು ತಿಳಿದರೆ, ನಾವು ನಮ್ಮ ದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತೇವೆ !
ನಮ್ಮ ದೇಹಕ್ಕೆ ಅದ್ಭುತವಾದ ತೀಕ್ಷ್ಣ ಬುದ್ಧಿಯಿದೆ. ಸುಮಾರು 600 ಮಿಲಿಯನ್ ವರ್ಷಗಳ ವಿಕಾಸದಿಂದ ಕೂಡಿದ್ದು, ಬೋಧವುಳ್ಳ ಕಾರ್ಯವಿಧಾನಗಳು ಎಂದು ಸಾಮಾನ್ಯವಾಗಿ ನಾವು ಕರೆಯುವ ಕಾರ್ಯವಿಧಾನಗಳು ನಮ್ಮ ಕೇಂದ್ರೀಯ ನರ ಸಂಬಂಧವಾದ ರಚನೆಗಳಿಂದ ನಿಯಂತ್ರಿಸಲ್ಪಟ್ಟಿವೆ. ಮೆದುಳು ಮತ್ತು ಬೆನ್ನಿನ ಹುರಿ ತಂತಾನೇ ಆಲೋಚಿಸುವ ಹಾಗೂ ಪ್ರತಿಕ್ರಿಯಿಸುವ, ಇತ್ಯಾದಿಗಳು ಇವುಗಳಲ್ಲಿ ಸೇರಿದೆ. ಜೀವಿಯಲ್ಲಿ ಘನೀಕರಿಸುತ್ತದೆ. ಇದನ್ನೇ ನಾವು ಖಿನ್ನತೆ ಎಂದು ಕರೆಯುವುದು. ಆದುದರಿಂದಲೇ ಖಿನ್ನತೆಗೊಳಗಪಟ್ಟ ಜನ ಪದೇ ಪದೇ ಏಕೆ ಖಿನ್ನರಾಗುತ್ತಾರೆ ಎಂದು ಅವರು ಹೇಳಲಾಗುವುದಿಲ್ಲ. ಸಮಸ್ಯೆ ಪರಿಹಾರವಾದ ಬಹಳ ಕಾಲದ ನಂತರವೂ, ಅದಕ್ಕೆ ಸಂಬಂಧಿಸಿದ ಒತ್ತಡ ಅವರ ನೆನಪಿನಾಳದಲ್ಲಿ ಸಾಮರ್ಥ್ಯದ ಒಂದು ತಡೆಯಾಗಿ ಉಳಿಯುತ್ತದೆ, ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಸಹ.
ಬರಿಯ ಖಿನ್ನತೆಯಷ್ಟೇ ಅಲ್ಲದೆ, ವ್ಯಾವಹಾರಿಕವಾಗಿ ಪ್ರತಿಯೊಂದು ರೋಗವೂ ದೇಹ ಮತ್ತು ಬುದ್ದಿಯಿಂದ ಸಮವಾಗಿ ಪ್ರೇರೇಪಿಸಲ್ಪಡುತ್ತವೆ. ವಾಸ್ತವವಾಗಿ ಪ್ರತಿಶತ 85 ರಷ್ಟು ನಮ್ಮ ರೋಗಗಳು ಸ್ವಭಾವದಲ್ಲಿ ನಮ್ಮ ಮನೋವಿಕಾರಗಳು. ಬರಿಯ ತಲೆನೋವು ಅಥವಾ ಹೃದಯ ರೋಗಗಳಷ್ಟೇ ಅಲ್ಲದೆ, ಉರಿ ವ್ರಣಗಳು, ಚರ್ಮ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂವೇದನೆಗಳು, ಕ್ಷಯ ಸಹ ನಮ್ಮ ಆಲೋಚನೆಗಳಿಂದ ಪ್ರೇರೇಪಿಸಲ್ಪಟ್ಟಿವೆ!
ನಮ್ಮ ಬುದ್ದಿಗೆ, ಊಹೆಗೂ ನಿಲುಕದಷ್ಟು ವ್ಯಾಧಿ ಉಂಟುಮಾಡುವ ಮತ್ತು ಗುಣಪಡಿಸುವ ಸಾಮರ್ಥ್ಯವಿದೆ !
ಕೆಲವು ಸಸ್ಯಗಳಿಗೆ ಸೂಕ್ಷ್ಮ ಸಂವೇದಕರಾಗಿದ್ದ ಜನಗಳ ಒಂದು ಗುಂಪಿನ ಮೇಲೆ ಜಪಾನಿನಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು. ಭಾಗವಹಿಸಿದ್ದವರ ಕಣ್ಣುಗಳನ್ನು ಕಟ್ಟಲಾಯಿತು ಮತ್ತು ಬೇರೆ ಬೇರೆ ಗಿಡಗಳ ಎಲೆಗಳನ್ನು ಅವರ ಚರ್ಮದ ಮೇಲಿಡಲಾಯಿತು. ಪ್ರತಿ ಬಾರಿಯೂ ಭಾಗವಹಿಸಿದ್ದವರಿಗೆ ಅವರ ಮೇಲೆ ಯಾವ ಎಲೆಯನ್ನು ಇಡಲಾಗಿದೆ ಎಂದು ಸಂಶೋಧಕರು ತಿಳಿಸಿದರು.
ಆಶ್ಚರ್ಯಕರವಾಗಿ, ಹೆಚ್ಚಿನವರಲ್ಲಿ ಸೂಕ್ಷ್ಮ ಸಂವೇದನೆ ನಿಜವಾದ ಗಿಡಗಳನ್ನು ಇಟ್ಟಾಗ ಕಾಣಿಸದೆ, ಆ ಗಿಡಗಳ ಹೆಸರನ್ನು ತಿಳಿಸಿದ ಕಾರಣವಾಗಿ ಕಂಡು ಬಂದಿತು. ಸೂಕ್ಷ್ಮ ಸಂವೇದಕ ಎಲೆಗಳನ್ನು ಚರ್ಮದ ಮೇಲಿಟ್ಟು, ಅವುಗಳು ನಿರುಪದ್ರವಿಗಳು ಎಂದು ರೋಗಿಗಳಿಗೆ ತಿಳಿಸಿದಾಗ, ಸೂಕ್ಷ್ಮ ಸಂವೇದನೆ ಪ್ರಕಟಗೊಳ್ಳದಿದ್ದದ್ದು ಕಂಡು ಬಂದಿತು. ಆದರೆ ನಿರುಪದ್ರವಿ ಎಲೆಯನ್ನು ಚರ್ಮದ ಮೇಲಿಟ್ಟು ಅದು ಸೂಕ್ಷ್ಮ ಸಂವೇದನೆಯನ್ನು ತರುವ ಎಲೆ ಎಂದು ತಿಳಿಸಿದಾಗ ಕೂಡಲೆ ಅವರಲ್ಲಿ ಗುಳ್ಳೆಗಳು ಒಡೆಯುವುದು ಕಂಡು ಬಂದಿತು !
ವಿವಿಧ ವ್ಯಕ್ತಿತ್ವವುಳ್ಳ ಹುಡುಗನೊಬ್ಬನ ಮೇಲೆ ನಡೆದ ಪ್ರಯೋಗವೊಂದರಲ್ಲಿ ಇನ್ನೂ ಹೆಚ್ಚು ವಿಸ್ಮಯ ಪಡುವಂತೆ, ಮನಃಶಾಸ್ತ್ರಜ್ಞ ಡೇನಿಯಲ್ ಗೋಲ್ಮ್ಯಾನ್ ಕಂಡಿದ್ದೇನೆಂದರೆ, ಆ ಸಮಯದಲ್ಲಿ ಆ ಹುಡುಗನಲ್ಲಿ ಯಾವ ವ್ಯಕ್ತಿತ್ವ ವಿಜೃಂಭಿಸಿದೆಯೆಂಬುದರ ಮೇಲೆ ಹುಡುಗನಲ್ಲಿ ಸೂಕ್ಷ್ಮ ಸಂವೇದನೆಯನ್ನು ಮೂಡಿಸಬಹುದಾಗಿತ್ತು ಮತ್ತು ಮೂಡಿಸಲಾಗದಂತಾಗುತ್ತಿತ್ತು !
ಆ ವಿಶಿಷ್ಟ ವ್ಯಕ್ತಿತ್ವಕ್ಕೆ ಹಿಡಿಸುವ ಆಧಾರದ ಮೇಲೆ, ಅದೇ ಬುದ್ಧಿಶಕ್ತಿ ದೇಹಕ್ಕೆ ಸೂಕ್ಷ್ಮ ಸಂವೇದಕವಾಗಿ ಅಥವಾ ಸೂಕ್ಷ್ಮ ಸಂವೇದಕವಲ್ಲವಾಗಿ ಪ್ರವರ್ತಿಸಲು ಆದೇಶ ಕೊಡುತ್ತದೆ. ಬೇರೆ ಬೇರೆ ಪರಿಸ್ಥಿತಿಗಳಲ್ಲಿ ನಿಮ್ಮ ಮೆದುಳಿನಲ್ಲಿಗುವ ರಾಸಾಯನಿಕ ಬದಲಾವಣೆಗಳ ಜಾಡನ್ನು ಹಿಡಿಯಲು ಆಧುನಿಕ ವಿಜ್ಞಾನವು ಪಿ. ಇ. ಟಿ. ಸ್ಕ್ಯಾನ್ನಂಥಹ ತಾಂತ್ರಿಕತೆಗಳನ್ನು ಉಪಯೋಗಿಸುತ್ತದೆ. ಸಂಶೋಧಕರು ಕಂಡಂತೆ ಬೇರೆ ಬೇರೆ ನೆನಪುಗಳನ್ನು ನೀವು ಜ್ಞಾಪಿಸಿಕೊಂಡ ಪ್ರತಿ ಬಾರಿಯೂ ಅಥವಾ ಬಲವಾದ ಉದ್ವೇಗದ ಅನುಭವವಾದಾಗ ಬೇರೆ ಬೇರೆ ರಾಸಾಯನಿಕ ನಮೂನೆಗಳನ್ನು ಇದು ನಮ್ಮ ಮೆದುಳಿನಲ್ಲಿ ಹೊಮ್ಮಿಸುತ್ತದೆ.
ಅದಷ್ಟೇ ಅಲ್ಲದೆ, ತಕ್ಷಣ ಸುದ್ದಿ ನಮ್ಮ ದೇಹದಲ್ಲೆಲ್ಲಾ ಹರಡುತ್ತದೆ. ನೀವು ಸಂತೋಷದಲ್ಲಿರಿ, ಕೋಪದಲ್ಲಿರಿ ಅಥವಾ ಖಿನ್ನವಾಗಿರಿ. ಒಂದು ಸಂಜ್ಞೆ ನಿಮ್ಮ
ನಂತರ, ನಾವು ಕುಗ್ಗಿದ ದೇಹ ಮತ್ತು ಅದ್ಭುತ ಶಕ್ತಿಯುಳ್ಳ ದೈತ್ಯ ಮೆದುಳಿನ ಪ್ರಾಣಿಗಳಾಗಿ ರೂಪಾಂತರಗೊಳ್ಳುತ್ತೇವೆ. ಏಕೆಂದರೆ ನಮ್ಮ ದೇಹದ ಭಾಗವಾದ ಮೆದುಳೊಂದನ್ನು ಮಾತ್ರ ನಾವು ಉಪಯೋಗಿಸುತ್ತಿರುವುದರಿಂದ !
ದೇಹವನ್ನು ದುರುಪಯೋಗ ಪಡಿಸುತ್ತಿರುವುದು ಒಂದು ಆಧುನಿಕ ಸಮಸ್ಯೆಯಲ್ಲ. ನಮ್ಮ ದೇಹವನ್ನು ಒಟ್ಟಾರೆಯಾಗಿ ಪರಂಪರೆಗಳಿಂದಲೂ ಕೆಲಸಕ್ಕೆ ಬಾರದ್ದೆಂದು ತೀರ್ಮಾನಿಸಿದ್ದೇವೆ. ನಮ್ಮನ್ನು ವಿಚಲಿತ ಗೊಳಿಸುವುದೆಂದು, ಮಾಯಾ ಪ್ರಪಂಚಕ್ಕೆ ಎಳೆದೊಯ್ಯುವುದೆಂದು, ಸಂಸಾರದಡೆಗೆ ಪ್ರೇರೇಪಿಸುವುದೆಂದು ಯಾವಾಗಲೂ ನಾವು ದೇಹವನ್ನು ನಿಂದಿಸುತ್ತೇವೆ. ಅನಾದಿ ಕಾಲದಿಂದಲೂ ಆಧ್ಯಾತ್ಮಿಕ ಪ್ರಗತಿ ಹೊಂದಲು ದೇಹವನ್ನು ನಿರ್ಲಕ್ಷಿಸುವುದು ಅಗತ್ಯವೆಂದು ಯೋಗಿಗಳು ಭಾವಿಸಿದ್ದರು. ಆದ್ದರಿಂದ ಅವರು ದೇಹವನ್ನು ದಂಡಿಸುತ್ತಿದ್ದರು, ಅಲಕ್ಷಿಸುತ್ತಿದ್ದರು ಮತ್ತು " ಈ ದೇಹ ನಾನಲ್ಲ, ಈ ದೇಹ ನಾನಲ್ಲ" ಎಂದು ತಮಗೆ ತಾವೇ ಬಾಯಿ ಪಾಠ ಒಪ್ಪಿಸುತ್ತಿದ್ದರು. ಇದೊಂದು ಮಾರ್ಗ, ಆದರೆ ಇದು ಕೆಲವರಿಗೇ ಮಾತ್ರ ಸಾಧ್ಯ.
ನಾನು ಹೇಳುತ್ತೇನೆ, " ಆಧ್ಯಾತ್ಮದೆಡೆಗೆ ಮಾರ್ಗ ದೇಹದ ಮುಖಾಂತರ ಮಾತ್ರ !"
ಜೀವನದಲ್ಲಿ ಸಂಸಾರ ಎಂಬ ನದಿಯನ್ನು ದಾಟಲು ದೇಹವೊಂದು ನೌಕೆ (ದೋಣಿ). ನಿಮ್ಮ ನೌಕೆಯೇ ಸೋರುತ್ತಿದ್ದರೆ, ದೋಷಪೂರಿತವಾಗಿದ್ದರೆ, ನೀವು ನದಿಯನ್ನು ದಾಟಲು ಹೇಗೆ ತಾನೇ ಸಾಧ್ಯ ? ದೇಹವನ್ನು ಗೌರವಿಸುವುದನ್ನು ನೀವು ಕಲಿಯುವ ತನಕ, ದೇಹದಿಂದಾಚೆಗೆ ಹೋಗಲು ಹೇಗೆ ಸಾಧ್ಯ?
ನಿಮ್ಮ ದೇಹದೊಂದಿಗೆ ಗಾಢವಾದ ಪ್ರೀತಿಯ ಸಂಬಂಧವನ್ನು ಕೈಗೊಳ್ಳಿ.
ಪ್ರಸಿದ್ಧ ಜೆನ್ ಗುರು ಬೆನ್ಕೈ, ಜಪಾನಿನಲ್ಲಿ ಸಂಚರಿಸುತ್ತಾ ಒಂದು ನಗರವನ್ನು ತಲುಪಿದರು.
(ನನ್ನ ಕತೆಗಳೆಲ್ಲಾ ಯಾವಾಗಲೂ ಜೆನ್ನಿಂದಲೇ ತಂದಂತಹವು, ಕಾರಣ ಬೇರೆ ಯಾವುದೇ ಧರ್ಮ ಜೀವನವನ್ನು ಅಷ್ಟು ಸುಂದರವಾಗಿ ಸ್ವೀಕರಿಸಿಲ್ಲ, ಅಷ್ಟು ಸನ್ಮಾನಪೂರ್ವಕವಾಗಿ, ದಿಟ್ಟತನದಿಂದ ಮತ್ತು ಹಾಸ್ಯ ಮನೋಭಾವನೆಯಿಂದ ಕಂಡಿಲ್ಲ - ಜೆನ್ ಎಂಬುದು ಜೀವನದ ಸಂಗಡ ಒಂದು ಪ್ರಣಯ ಸಲ್ಲಾಪ!)
ಜನಗಳು ಜೆನ್ ಗುರು ತಮ್ಮ ನಗರಕ್ಕೆ ಆಗಮಿಸಿರುವುದನ್ನು ಕೇಳಿ, ಆತನನ್ನು ನೋಡಲು ಬಂದರು, ಜನಗಳು ಕೇಳಿದರು :
ಪ್ರೀತಿಯ ಗುರುಗಳೇ, ನಿಮ್ಮ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ ! ನಿಮ್ಮ ಸನ್ನಿಧಿಯಲ್ಲಿ ಸುಮ್ಮನೆ ಇದ್ದರೆ ಸಾಕು, ಜನ ಅಪರಿಮಿತ ಆನಂದ ಭರಿತರಾಗುತ್ತಾರೆ. ಆಶ್ಚರ್ಯಕರವಾಗಿ ಅವರ ರೋಗಗಳು ಗುಣವಾಗುತ್ತವೆ. ಮನೋರಥಗಳು ನಿಜವಾಗುವ ಅನುಭವಕ್ಕೊಳಗಾಗುತ್ತಾರೆ ! ಈ ಶಕ್ತಿಗಳನ್ನು ಪಡೆಯಲು ನೀವು ಆಚರಿಸುವ ವಿಶೇಷವಾದ ಧ್ಯಾನವಾದರೂ ಏನು ?
ಗುರುಗಳು ಸರಳವಾಗಿ ಉತ್ತರಿಸಿದರು. ನನಗೆ ಹಸಿವಾದಾಗ ನಾನು ಉಣ್ಣುತ್ತೇನೆ. ನಿದ್ರೆ ಬಂದಾಗ ನಿದ್ರಿಸುತ್ತೇನೆ. ಅದೇ ನನ್ನ ಧ್ಯಾನ.
ಜೆನ್ ಗುರುಗಳು ಸಾಮಾನ್ಯವಾಗಿ ಹೀಗೆಯೇ ಮಾತನಾಡುವುದು! ಈ ಕ್ಷಣ ನೀವುಗಳು ಹೇಗೆ ಗಲಿಬಿಲಿಗೊಂಡಿರೋ ಅದೇ ಪ್ರಕಾರ ಆತನ ಮಾತನ್ನು ಕೇಳಿದ
ಜನ ಸಹ ಗೊಂದಲದಲ್ಲಿ ಬಿದ್ದರು. ತಿನ್ನುವುದಕ್ಕಿಂತ ಮತ್ತು ನಿದ್ರಿಸುವುದಕ್ಕಿಂತ ಸುಲಭವಾದದ್ದಿನ್ನೊಂದಿರಬಹುದು! ಇದನ್ನೇ ಒಂದು ಪ್ರಬಲವಾದ ಧ್ಯಾನದ ಕಲಾಕೌಶಲ್ಯ ಎನ್ನುವ ಘನವಾದ ಗುರುಗಳು ಇಲ್ಲೇ ಇದ್ದಾರೆ!
ಹೀಗಾಗಿ ಅವರು ಸ್ಪಷ್ಟೀಕರಣ ಬೇಡಿದರು.
ಗುರುಗಳು ಕೇಳುತ್ತಾರೆ, ನೀವು ನಿಜವಾಗಲೂ ಹಸಿವಾದಾಗ ತಿನ್ನುತ್ತೀ ರೇನು? ನಿಮಗೆ ನಿದ್ರೆ ಬಂದಾಗ ನೀವು ನಿದ್ರಿಸುತ್ತೀ ರೇನು?
ನಾವು ಮಾಡುತ್ತೀವೇನು?
ವಾಡಿಕೆಯಂತೆ ನಾವು ಯಾವಾಗ ತಿನ್ನುತ್ತೇವೆ?
ಮಧ್ಯಾಹ್ನದ ಊಟ ಸಿದ್ಧವಾದಾಗ. ನಮಗೆ ಸಮಯ ಯಾವಾಗ ಇದೆ ? ಯಾವಾಗ ಗಡಿಯಾರ ಹೇಳುತ್ತದೆಯೋ ಆಗ.
ಇದನ್ನು ಸಹ ಅರಿಯದೆ, ಒಂದು ನಡವಳಿಕೆಯ ಮಾದರಿಯ ಒಳಗೇ ನಾವು ಬಾಳನ್ನು ಬಾಳುತ್ತೇವೆ. ವ್ಯಕ್ತಿಗತವಾದಂಥಹ ಕಾರ್ಯಗಳಾದ ತಿನ್ನುವುದಕ್ಕೂ ಮತ್ತು ಮಲಗುವುದಕ್ಕೂ ಸಹ ನಾವು ನಮಗೋಸ್ಕರವೇ ನಿರ್ಮಿಸಿಕೊಂಡ ಆ ವೇಳಾಪಟ್ಟಿಯನ್ನೇ ಆಧಾರಗೊಳ್ಳುತ್ತೇವೆ. ಈ ನಮೂನೆಗಳೇ ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ಇವುಗಳನ್ನೇ ನಾವು "ರೂಢಿ" ಎಂದು ಕರೆಯುತ್ತೇವೆ.
ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಸರಳವಾಗಿ ದಿನಚರಿ ಪ್ರಾರಂಭಿಸಲು ಸಾಧ್ಯವಾಗದ ಸಾಕಷ್ಟು ಜನ ನಮ್ಮಲ್ಲಿದ್ದಾರೆ! ಬೆಳಗಾದ ತಕ್ಷಣ ಅವರಿಗೊಂದು ಲೋಟ ಟೀ ಸಿಗದಿದ್ದಲ್ಲಿ, ಅವರಿಗೆ ತಲೆನೋವು ಶುರುವಾಗುತ್ತದೆ. ಅವರು ದಿನ ಪೂರಾ ಸಂಭಾಳಿಸಲು ಸಾಧ್ಯವೇ ಇಲ್ಲ. ನಾವೆಲ್ಲರೂ ನಮಗಿಷ್ಟವಾದ ರೂಢಿಗಳನ್ನು ಹೊಂದಿದ್ದೇವೆ. ನಾವದನ್ನು "ನಮ್ಮ ವಾಡಿಕೆ" ಎಂದು ಕರೆಯುತ್ತೇವೆ. ಆದರೆ ವಾಸ್ತವವಾಗಿ ಅವುಗಳೇ ನಮ್ಮ ನಿಯಂತ್ರಣ ಹೊಂದಿರುವುದು !
ಒಂದು ಸಣ್ಣ ಕಥೆ:
ಒಬ್ಬ ಜೇಬುಗಳ್ಳ ಮರಣಿಸಿದ ಮತ್ತು ಸ್ವರ್ಗಕ್ಕೆ ಹೋದ. ಮುತ್ತಿನ ಬಾಗಿಲನ್ನು ಪಹರೆಗೆಯ್ಯುತ್ತಿದ್ದ ಸೈಂಟ್ ಪೀಟರನು ಅವನನ್ನು ತಡೆದ. ಆ ಮನುಷ್ಯ ತನ್ನ ಜೀವನದುದ್ದಕ್ಕೂ ಜನರನ್ನು ಮೋಸಗೊಳಿಸುತ್ತಿದ್ದುದ್ದನ್ನು ಅವನು ಅವನಿಗೆ ಜ್ಞಾಪಿಸಿ ಹೇಳಿದ, ನೀನು ನರಕಕ್ಕೆ ಹೋಗಲಷ್ಟೇ ಅರ್ಹ.
ಆದರೆ ಜೇಬುಗಳ್ಳ ತಾನು ಹೊಸ ಮನುಷ್ಯನಾಗಿ ಪರಿವರ್ತಿತನಾಗುವುದಾಗಿ ವಾಗ್ದಾನ ಮಾಡಿ, ಕ್ಷಮಿಸುವಂತೆ ಬೇಡಿಕೊಂಡ.
ಕೊನೆಗೆ ಸೈಂಟ್ ಪೀಟರ್ಗೆ ಆತನ ಮೇಲೆ ದಯೆ ಬಂತು.
"ಆಗಲಿ" ಆ ಮನುಷ್ಯನಿಗೆ ಆಯಾಸದಿಂದ ಹೇಳಿದ. ಒಳಗಡೆ ಹೋಗು, ಆದರೆ ಮೊದಲು, ನನ್ನ ಹಣದ ಚೀಲವನ್ನು ಹಿಂತಿರುಗಿಸುವ ಯೋಚನೆ ಮಾಡಬಹುದೆ ?
--- ★ ---
ನಮ್ಮ ನಾಗರೀಕ ಸಮಾಜದಲ್ಲಿ ಸ್ಥಿರತೆಗೆ (ಏಕರೂಪತೆಗೆ) ನಾವು ಹಾಸ್ಯಾಸ್ಪದವಾದ ಸ್ಥಾನ ಬೆಲೆಯನ್ನು ನೀಡಿದ್ದೇವೆ.
ಸಾಮಾನ್ಯವಾಗಿ, ಜನರಿಗೆ ಏಕರೂಪವಾಗಿರುವುದೆಂದರೆ ಹೆಮ್ಮೆ !
ಅವರು ಕಳೆದ 30 ವರುಷಗಳಿಂದ ಒಂದೇ ವೇಳೆಗೆ ಏಳುತ್ತಿರುವುದರ ಬಗ್ಗೆ, ಹೇಗೆ ಅವರು ಸಮತಾವಾದಿಗಳೆಂಬುದರ ಬಗ್ಗೆ ಅಥವಾ ನಾಸ್ತಿಕರೆಂದು ಅಥವಾ ಅವರ ಶಾಲೆಯ ದಿನಗಳಿಂದಲೂ ಯಾವುದಾದರ ಬಗ್ಗೆ ಜಂಬದಿಂದ ಮತನಾಡುತ್ತಾರೆ.
ಏಕರೂಪವಾದ ಜನರೇ ಎಲ್ಲಕ್ಕಿಂತ ಹೆಚ್ಚಿನ ಬೇಸರಗೊಳಿಸುವ ಜನರು ! ಯಾವಾಗ ಯಾರಾದರೂ ಏಕರೂಪವಾಗೇ ಇರುತ್ತಾರೋ, ಅದರರ್ಥ ಎರಡರಲ್ಲೊಂದೇ :
ನಾವು ವಯಸ್ಸಾಗಿ ಬೆಳೆದಂತೆಲ್ಲಾ, ಬದಲಾವಣೆಯನ್ನು ಹೆಚ್ಚು ಹೆಚ್ಚಾಗಿ ವಿರೋಧಿಸುತ್ತೇವೆ. ಬದಲಾವಣೆ ಎಂದರೆ ನಮಗೆ ಭಯವೆನಿಸುತ್ತದೆ. ಏಕೆಂದರೆ ಇದು ನಮಗೆ ಯಾವುದು ಕೆಲಸಕ್ಕೆ ಬರುತ್ತದೆ ಮತ್ತು ಬರುವುದಿಲ್ಲ ಅಥವಾ ಯಾವುದು ತಪ್ಪು, ಯಾವುದು ಸರಿ ಎಂಬ ನಮ್ಮ ಘನೀಕೃತ ಯೋಜನೆಗಳಿಗೆ ವಿರುದ್ಧ. ಜೀವನ ಅವಶ್ಯಕವಾಗಿ ಅಸತ್ಯವಾದದ್ದಲ್ಲ ಎಂಬುದನ್ನು ನಾವು ಮರೆಯುತ್ತೇವೆ. ನಮಗಿದು ಅಸತ್ಯವೆಂದು ಕಾಣುವುದು. ನಾವು ಇವತ್ತನ್ನು, ನಿನ್ನೆ ನಾವು ಏನು ಕಲಿತೆವು ಎಂದು ಹೋಲಿಸಿದಾಗಲೇ ಅಥವಾ ನಾಳೆಯ ನಮ್ಮ ಯೋಜನೆಗೆ ಹೋಲಿಸಿದಾಗಲೇ. ಇದು ನಾವು ಒಂದು ಪರಿಸ್ಥಿತಿಯನ್ನು ನಮ್ಮದೇ ನಿರೀಕ್ಷೆಗಳ ಮಿತಿಯಲ್ಲಿಟ್ಟಾಗ ನಾವು ವಿಪರ್ಯಾಸಗಳನ್ನು ಕಾಣುತ್ತೇವೆ.
ಒಂದು ಕಥೆ:
ಒಂದು ಹಳ್ಳಿಯಲ್ಲಿ ಇಬ್ಬರು ಸಾಧುಗಳು ವಾಸಿಸುತ್ತಿದ್ದರು. ಅವರಲ್ಲೊಬ್ಬ ಧರ್ಮಗ್ರಂಥ ಮತ್ತು ತರ್ಕಶಾಸ್ತ್ರದಲ್ಲಿ ಅವನಿಗಿರುವ ಜ್ಞಾನದ ಬಗ್ಗೆ ಹೆಮ್ಮೆಯಿಂದ ಬೀಗುತ್ತಿದ್ದ. ಅವನು ಯಾವಾಗಲೂ ತತ್ವಶಾಸ್ತ್ರವನ್ನೇ ಮಣಮಣಿಸುತ್ತಿದ್ದ. ಇನ್ನೊಬ್ಬ ಸರಳ ಹಾಗೂ ಆನಂದದ ಮನುಷ್ಯ. ಅವನು ಹಳ್ಳಿಯವರ ಸಂಗಡ ಮಿಳಿತು, ಶಾಂತಿಯುತ ಜೀವನವನ್ನು ನಡೆಸುತ್ತಿದ್ದ.
ಒಂದು ದಿವಸ ಸಂತೆಪೇಟೆಗೆ ಹೋಗುವ ದಾರಿಯಲ್ಲಿ ಇಬ್ಬರೂ ಭೇಟಿಯಾದರು. ಎಲ್ಲಿಗೆ ಹೋಗುತ್ತಿದ್ದೀರಿ? ಮೊದಲನೆ ಸಾಧು, ತತ್ವಶಾಸ್ತ್ರದ ಚರ್ಚೆಯನ್ನು ನಡೆಸುವ ಉದ್ದೇಶದಿಂದ ಕೇಳಿದ.
ಎಲ್ಲಿಗೆ ನನ್ನ ಕಾಲುಗಳು ನನ್ನನ್ನು ಕೊಂಡೊಯ್ಯುತ್ತವೆಯೋ! ಇನ್ನೊಬ್ಬ ಆನಂದದಿಂದ ಉತ್ತರಿಸಿದ. ಮೊದಲನೆ ಸಾಧು ಅವಕ್ಕಾದ. ಆತ ಹಾಗೆ ಹೇಳುವುದರ ಅರ್ಥವಾದರೂ ಏನು? ಆತ ತತ್ವಶಾಸ್ತ್ರದ ಒಗಟೊಂದನ್ನು ತನಗೆ ಬಹುಮಾನವಾಗಿ ನೀಡುತ್ತಿರುವನೇನು? ಆತನಿಗೆ ಹೇಗೆ ಉತ್ತರಿಸುವುದು?
ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಇನ್ ಮತ್ತು ಯಾಂಗ್ ಜೀವನದ ವಿರುದ್ಧಾತ್ಮಕ ತತ್ವಗಳನ್ನು ಪ್ರತಿನಿಧಿಸುತ್ತವೆ - ನಕಾರಾತ್ಮಕ ಮತ್ತು ಸಕಾರಾತ್ಮಕ, ಕತ್ತಲು ಮತ್ತು ಬೆಳಕು, ಸಂಕುಚನೆ ಮತ್ತು ವಿಕಾಸ. ಆದರೆ ಇನ್ - ಯಾಂಗ್ ಬಗ್ಗೆ ಮನೋಹರವಾದ ವಿಷಯವೆಂದರೆ ಎರಡೂ ನಿರಂತರವಾಗಿ ಒಂದರಲ್ಲೊಂದು ಹರಿಯುವ ಸ್ವರೂಪದವು. ಪ್ರತಿಕ್ಷಣ ಬದಲಾಗುತ್ತಿರುತ್ತವೆ. ಯಾಂಗ್ನಲ್ಲಿ ಯಾವಾಗಲೂ ಒಬ್ಬ ಸಣ್ಣ ಇನ್ ಇದ್ದೇ ಇರುತ್ತಾನೆ ಮತ್ತು ಅದೇ ರೀತಿ ಇನ್ನಲ್ಲಿ ಯಾವಾಗಲೂ ಒಬ್ಬ ಯಾಂಗ್ ಇರುತ್ತಾನೆ. ಯಾವಾಗಲೂ ಹರಿಯುತ್ತಿರುವ, ಯಾವಾಗಲೂ ಬದಲಾಗುತ್ತಿರುವ ಜೀವದಂತೆ (ಚೇತನದಂತೆ).
ಮನಃಶಾಸ್ತ್ರಜ್ಞ ನಡವಳಿಕೆಯವನಿಂದ ಮಾಡಿದ ಪ್ರಯೋಗವೊಂದರಲ್ಲಿ, ಎರಡು ಗುಂಪಿನ ಜನಗಳನ್ನು ಒಂದೇ ರೀತಿಯ ಸಂಗೀತವನ್ನು ಕುಳಿತು ಆಲಿಸುವಂತೆ ಹೇಳಿ ಮತ್ತು ಅದಕ್ಕೆ ಅವರ ಅನಿಸಿಕೆಗಳನ್ನು, ಯಾವ ರೀತಿ ಕುಣಿಯುತ್ತಾ, ಜೊತೆಗೆ ಹಾಡುತ್ತಾ, ನಗುತ್ತಾ, ಅವರ ತೋಳುಗಳನ್ನೂ ಆಡಿಸುತ್ತಾ ಅಥವಾ ಸುಮ್ಮನೆ ಕುಳಿತುಕೊಂಡೆ ಪ್ರತಿಕ್ರಿಯಿಸಲು ಕೇಳಲಾಯಿತು. ಒಂದೇ ವ್ಯತ್ಯಾಸವೆಂದರೆ, ಎರಡನೇ ಗುಂಪಿನ ಜನರೆಲ್ಲರ ಕಣ್ಣುಗಳನ್ನು ಕಟ್ಟಲಾಯಿತು.
ಹೇಳುವುದರ ಅವಶ್ಯಕತೆಯೇ ಇಲ್ಲ. ಮೊದಲನೇ ಗುಂಪಿನಲ್ಲಿ ಭಾಗವಹಿಸಿದ ಐದಕ್ಕಿಂತ ಕಡಿಮೆ ಜನ ಸಂಗೀತಕ್ಕೆ ನೈಜ ಸಹಜತೆಯಿಂದ ಪ್ರತಿಕ್ರಿಯಿಸಿದರು. ಆದರೆ ಎರಡನೇ ಗುಂಪಿನಲ್ಲಿ ಸುಮಾರಾಗಿ ಎಲ್ಲರೂ ತಮ್ಮನ್ನು ಸಂಗೀತಕ್ಕೆ ಒಡ್ಡಿಕೊಂಡರು. ಮೂರ್ಖರಂತೆ ಕಾಣಲು ಅಥವಾ ಸ್ಥಾನಕ್ಕೆ ಹೊರತಾಗಿ, ಪ್ರವಾಹದ ವಿರುದ್ಧ ಹೋಗಲು ಎಷ್ಟು ಹೆದರಿಕೆಯನ್ನು ನಾವು ಬೆಳೆಸಿ ಕೊಂಡಿದ್ದೇವೆಂದರೆ, ಆ ಕ್ಷಣಕ್ಕೆ ಹೆದರಿಕೆಯಿಲ್ಲದೇ ಅಥವಾ ಪೂರ್ವಗ್ರಹ