ನೀನೇ ಬರಿದಾಗು
This text was machine-transcribed from the printed book and may contain errors. Select the words and choose “Report a mistake”.
(ಜೀವನವನ್ನು ಅಂಗೀಕರಿಸಲು ಸಜ್ಜಾಗುವುದು)

ಜನಪ್ರಿಯವಾದ ಒಂದು ಜೆನ್ ಕಥೆ ಹೀಗೆ ಹೇಳುತ್ತದೆ....
ಒಂದು ದಿನ ಒಬ್ಬ ಪ್ರಸಿದ್ಧ ಅಧ್ಯಾಪಕ (ಆಚಾರ್ಯ) ತತ್ತ್ವಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಲು ಜೆನ್ ಗುರು ನಾನ್ಸೆನ್ನನ್ನು ಭೇಟಿಯಾದ. ಆ ಗುರು ಕಾಡಿನ ಒಂದು ಗುಡಿಸಿಲಿನಲ್ಲಿ ವಾಸವಾಗಿದ್ದ. ಅವನನ್ನು ಭೇಟಿಮಾಡಲು ಬಹಳ ದೂರ ನಡೆದು ಬರಬೇಕಾಯಿತು.
ಆತ ಗುಡಿಸಲಿನ ಬಳಿ ಬಂದಾಗ, ಗುರು ಟೀ ಮಾಡಲು ನೀರನ್ನು ಕುದಿಸುತ್ತಿದ್ದ. ಅಧ್ಯಾಪಕನ ತಲೆ ತುಂಬಾ ನಾನ್ಸೆನ್ನನ್ನು ಕೇಳಲು ಪ್ರಶ್ನೆಗಳೇ ತುಂಬಿದ್ದವು ಮತ್ತು ತಕ್ಷಣವೇ ಆತ ಪ್ರಶ್ನಿಸಲು ಪ್ರಾರಂಭಿಸಿದ.
'ತಡೆ' ಗುರು ಹೇಳಿದ. ಮೊದಲು ನಾವು ಟೀ ಕುಡಿಯೋಣ.
ಆದರೆ ಅಧ್ಯಾಪಕನಿಗೆ ತಾಳ್ಮೆ ಇರಲಿಲ್ಲ. ಅವನ ಪ್ರಶ್ನೆಗಳಿಗೆ ಉತ್ತರಗಳನ್ನಷ್ಟೇ ಅಲ್ಲ, ಅವನು ನಾನ್ಸೆನ್ಗೆ ತನ್ನ ಜ್ಞಾನ ಪ್ರದರ್ಶನ ಮಾಡಲು ಬಯಸಿದ್ದ. ಹೀಗಾಗಿ ನಾನ್ಸೆನ್ ಟೀ ಮಾಡುತ್ತಿರುವಾಗಲೇ ಆತ ತನ್ನ ಸಿದ್ಧಾಂತ ಹಾಗೂ ತತ್ತ್ವಶಾಸ್ತ್ರದ ಬಗ್ಗೆ ಮಾತಾಡಲು ತೊಡಗಿದ. ನಾನ್ಸೆನ್ ಅಭಿಪ್ರಾಯ ಕೇಳುವುದು ಹಾಗೂ ತನ್ನ ಅಭಿಪ್ರಾಯ ಹೇಳುವುದು ಮಾಡಲು ಶುರು ಮಾಡಿದ.
ಕೊನೆಗೆ ನಾನ್ಸೆನ್ ಟೀ ಮಾಡುವುದನ್ನು ಮುಗಿಸಿ, ಟೀ ಪಾತ್ರೆ ಹಾಗೂ ಎರಡು ಖಾಲಿ ಕಪ್ಗಳನ್ನು ತಂದು ಒಂದು ಕಪ್ಪನ್ನು ಅಧ್ಯಾಪಕನ ಮುಂದಿಟ್ಟ. ಓದುತ್ತಿರುವಿರೆಂದಾದರೆ, ನೀವೇನನ್ನು ತಿಳಿಯುವ ಅಗತ್ಯವಿದೆಯೋ ಅದನ್ನೆಲ್ಲಾ ತಿಳಿದಿರುವಿರಿ ಎಂದು ಖಚಿತವಾಗಿದ್ದರೆ, ಆ ದಿಕ್ಕಿನಲ್ಲಿ ನೀವು ಸರಿಯೇ. ನೀವು ಹೇಗಿರುವಿರೋ ಹಾಗೇ ಮುಂದುವರೆಯಬಹುದು ಮತ್ತು ಓದಿ....
ಆದರೆ ನನ್ನ ಸಂಗಡ ಕಳೆಯುತ್ತಿರುವ ಸಮಯದಲ್ಲಿ ಏನನ್ನಾದರೂ ಪಡೆಯಬೇಕು, ಕಲಿಯಬೇಕು ಎಂದು ಎದುರು ನೋಡುವುದಾದರೆ, ನಿಮಗೆ ನನ್ನ ಸಲಹೆ :
ನಿಮ್ಮ ಲೋಟವನ್ನು ಬರಿದು ಮಾಡಿ...
ಇನ್ನೊಂದು ಸಣ್ಣ ಕಥೆ : ನಿಜವಾಗಿ ಕಲಿಯ ಬೇಕೆನ್ನುವವನ ಮನೋವೃತ್ತಿಯ ಬಗ್ಗೆ ಇದು ಹೇಳುತ್ತದೆ.
ಒಬ್ಬ ತೀಕ್ಷ್ಣ ಬುದ್ಧಿಯ ಗಣಿತಜ್ಞ, ಜೌಸ್ಪೆನ್ಸ್ಕಿ ಎಂಬುವವ - ಒಮ್ಮೆ ತತ್ವಜ್ಞಾನಿ ಗುರ್ಡೆಫ್ನನ್ನು ಕಲಿಯುವುದಕ್ಕಾಗಿ ಸಂಪರ್ಕಿಸಿದ. ಅಧ್ಯಾಪಕ ಮತ್ತು ಜೆನ್ ಗುರುವಿನ ತರಹ ಜೌಸ್ಪೆನ್ಸ್ಕಿ ಕೆಲವು ಅನುಮಾನಗಳ ಪರಿಹಾರವನ್ನು ಗುರ್ಡೆಫ್ನಿಂದ ಬಯಸಿದ್ದ.
ಯಾವಾಗಲೂ ತುಂಬಾ ಬುದ್ಧಿವಂತ ಹಾಗೂ ಸಫಲವಾದ ಜನಗಳಿಗೇ ಈ ಎಲ್ಲಾ ಅನುಮಾನಗಳೂ ! ಹಸಿದ ಮನುಷ್ಯನಿಗೆ ಆಧ್ಯಾತ್ಮಿಕತೆಯ ಬಗ್ಗೆ ಯೋಚನೆ ಮಾಡುವುದಕ್ಕೆ ಅಭಿರುಚಿಯಾಗಲೀ... ಸಮಯವಾಗಲೀ ಸ್ವಾಭಾವಿಕವಾಗಿ ಇರುವುದಿಲ್ಲ. ಯಾವಾಗ ನಿಮ್ಮ ಬಟ್ಟಲು, ಸಂಪತ್ತು, ಜ್ಞಾನ ಮತ್ತು ಸಫಲತೆಗಳಿಂದ ತುಂಬಿರುತ್ತದೆಯೋ ಆಗ ನಿಮಗೆ ಇನ್ನೂ ಏನನ್ನೋ ಕಳೆದುಕೊಂಡ ಹಾಗೆ ಯಾವುದೋ ಸ್ವಾದಿಷ್ಟವಾದ ರುಚಿ ಲೋಪವಾದ ಅರಿವಾಗುತ್ತದೆ. ಆಗ ನೀವು ಆಧ್ಯಾತ್ಮಿಕತೆಯ ಕಡೆ ಹೆಜ್ಜೆ ಇಡಿ.
ಜೌಸ್ಪೆನ್ಸ್ಕಿ, ಗುರ್ಡೆಫ್ನ ಬಳಿ ಬರುವಾಗಲೇ ಆತನೊಬ್ಬ ಪ್ರಸಿದ್ಧವಾದ
ಗಣಿತಜ್ಞನಾಗಿದ್ದು ಗಣಿತಶಾಸ್ತ್ರದಲ್ಲಿ ತನ್ನ ಹೆಜ್ಜೆ ಮೂಡಿಸಿದ್ದ. ತನ್ನ ಬುದ್ಧಿ ಶಕ್ತಿಯ ಬಗ್ಗೆ ಅವನಿಗೆ ಸ್ವಾಭಾವಿಕವಾಗಿಯೇ ಹೆಮ್ಮೆ ಇತ್ತು. ಆಗಲೇ ಅವನು ಜನಜನಿತವಾಗಿದ್ದ.
ಇದ್ದಾಗ್ಯೂ, ಗುರ್ಡ್ಜೆಫ್ನಿಂದ ತಾನು ಕಲಿಯುವುದು ಏನೋ ಇದೆ ಎಂದು ತಿಳಿಯುವ ಸಾಮರ್ಥ್ಯ caos್ಪ್ನ್ಸ್ಕಿ ನಲ್ಲಿ ಸಾಕಷ್ಟಿತ್ತು. ಹೀಗಾಗಿ ಗುರ್ಡ್ಜೆಫ್ನ ಬಳಿ ಸಾರಿ, ಆತ ಹೇಳಿದ... ಗುರುವೇ, ನಿಮ್ಮಿಂದ ನಾನು ಕಲಿಯಬಹುದಾದ ಬೇಕಾದಷ್ಟು ವಿಷಯಗಳಿವೆ, ನನಗೆ ಬೋಧಿಸುವಿರಾ ?
ಆಗಬಹುದು, ಗುರ್ಡ್ಜೆಫ್ ಹೇಳಿದರು. ಕಲಿಯುವವರಿಗಾಗಿ ಅವರಲ್ಲಿ ಬೇರೆ ದಾರಿಯೇ ಇತ್ತು. ಜೆನ್ ಗುರುವಿನಂತಹದ್ದಲ್ಲ ! ಅವರು ಸುಮ್ಮನೆ ಹೇಳಿದರು. ನಾನು ಪ್ರಾರಂಭಿಸುವುದಕ್ಕೆ ಮೊದಲು ನಿನಗೆ ಈಗಾಗಲೇ ಗೊತ್ತಿರುವ ವಿಷಯಗಳ ಬಗ್ಗೆ ಒಂದು ಪಟ್ಟಿಯನ್ನು ಏಕೆ ಮಾಡಬಾರದು ? ಆಗ ನಾವು ಆ ವಿಷಯಗಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಮತ್ತು ನಾನು ನೀನು ಅಗತ್ಯವಾಗಿ ತಿಳಿಯಬೇಕಾಗಿರುವ ವಿಷಯಗಳ ಬಗ್ಗೆ ಕೇಂದ್ರೀಕರಿಸಬಹುದು.
ಹೀಗಾಗಿ caos್ಪ್ನ್ಸ್ಕಿ ಒಂದು ಕಾಗದ ಮತ್ತು ಲೇಖನಿಯೊಡನೆ ಪಟ್ಟಿ ಮಾಡಲು ಪಕ್ಕದ ಕೋಣೆಗೆ ಹೋಗಿ ಕುಳಿತುಕೊಂಡ.
caos್ಪ್ನ್ಸ್ಕಿ “ನನ್ನ ನೆನಪುಗಳು” ಎಂದು ನಂತರ ಬರೆಯುತ್ತಾನೆ.
ಅಲ್ಲಿ ಕುಳಿತು, ಮೊದಲ ಬಾರಿಗೆ, ನನ್ನ ಪಟ್ಟಿಯಲ್ಲಿ ಒಂದೇ ಒಂದು ವಸ್ತುವನ್ನೂ ಸೇರಿಸಲಾರೆ ಎಂಬ ಅರಿವಾಯಿತು ! ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದೇನೆ ಎಂದು ಖಚಿತವಾಗದೆ, ಅದನ್ನು ಪಟ್ಟಿಯಲ್ಲಿ ಬರೆಯಲು ನನಗೆ ಆಗದು. ಗುರ್ಡ್ಜೆಫ್ನಿಂದ ತಪ್ಪಿಸಿಕೊಳ್ಳಲು ಯಾವುದೇ ಅಗತ್ಯವಿಲ್ಲದಿರುವ ಎಲ್ಲಾ ವಸ್ತುಗಳನ್ನು ನೀವು ಹೊರಗೆ ಎಸೆದಾಗ ಉಂಟಾಗುವ ಪರಿಣಾಮ - ಆ ಶೂನ್ಯತೆ....!
ಇದು 'ಏಕಾಂತತೆ' ಮತ್ತು 'ಏಕಾಂಗಿತನ' ನಡುವೆ ಇರುವ ವ್ಯತ್ಯಾಸದ ಹಾಗೆ! ಮೊದಲನೇ ವಿಧದ ಶೂನ್ಯತೆಯನ್ನು, ಯಾವುದಾದರೂ ಸಮಯದಲ್ಲಿ ನೀವೆಲ್ಲಾ ಅನುಭವಿಸಿರುತ್ತೀರಿ. ಕೆಲವರಿಗೆ ಇದು ಶಾಶ್ವತವಾದ ಸ್ಥಿತಿಯೇ ಆಗಿದೆ.
ಸಮಾಜ, ಮಾಧ್ಯಮ ಏನಿದೆ ಅದು ಈ ತರಹದ ಶೂನ್ಯತೆಯನ್ನೇ ಉಂಟು ಮಾಡುವುದು. ಇದು ನಿಮ್ಮೊಳಗೆ ನುಸುಳಲು ಸುಲಭವಾದ ದಾರಿ, ಏಕೆಂದರೆ ಅದು ನಿಮ್ಮ ದುರ್ಬಲತೆ. ವಾಸ್ತವವಾಗಿ ಎಲ್ಲಾ ವ್ಯಾಪಾರಿ ಮುದ್ರೆಗಳೂ ಈ ತತ್ವದ ಮೇಲೇ ಕೆಲಸ ಮಾಡುವುದು. ಅವರ ಉತ್ಪಾದನೆಯನ್ನು ನೀವು ಹೊಂದದಿದ್ದರೆ, ನಿಮ್ಮ ಜೀವನದಲ್ಲಿ ಏನೋ ಕೊರತೆ ಇದೆ ಎಂಬ ಮನೋಭಾವನೆ ಉಂಟುಮಾಡುವುದು. ಕೆಲ ವಿಧದಲ್ಲಿ ಅಪೂರ್ಣ ಮತ್ತು ಬರಿದು ಎನಿಸುವಂತೆ ಮಾಡುವುದು.
ವ್ಯಾಪಾರದಲ್ಲಿ "ಅಗತ್ಯತೆಯನ್ನು ಸೃಷ್ಟಿಮಾಡುವುದು" ಎನ್ನುವುದು ಒಂದು ಲೋಕೋಕ್ತಿ. ಊಹಿಸಿ...! ಅವರ ಕೆಲಸ ನಿಮಗೆ ಈಗಲೇ ಬೇಡವೆನಿಸಿದ್ದನ್ನು ಅಗತ್ಯ ಎಂದು ಸೃಷ್ಟಿಸುವುದು ಮತ್ತು ಆ ಅಗತ್ಯತೆಯನ್ನು ಪೂರೈಸುವ ಸಲುವಾಗಿ ಅದರ ಉತ್ಪಾದನೆಯನ್ನು ಒಳಗೆ ಬಿಡುವುದು. ವೃತ್ತಿನಿರತರು ವ್ಯವಸ್ಥಿತವಾಗಿ ಮಾಡುವುದನ್ನು, ಸಮಾಜ ಅವ್ಯವಸ್ಥಿತವಾಗಿ ಮಾಡುತ್ತದೆ. ನೀವು ಸರಿಯಾದ ರೀತಿಯ ಗಂಡ ಅಥವಾ ಹೆಂಡತಿಯನ್ನು ಹೊಂದದಿದ್ದಲ್ಲಿ, ಬೇಕೆನಿಸಿದಷ್ಟು ಮಕ್ಕಳನ್ನು ಹೊಂದದಿದ್ದಲ್ಲಿ, ಕೆಲವೇ ವಿಧವಾದ ಕೆಲಸ ಹೊಂದದಿದ್ದಲ್ಲಿ, ಶೂನ್ಯತೆಯ ಅನುಭವವಾಗುವಂತೆ ಮಾಡಲಾಗುತ್ತದೆ.
ಒಂದು ಸಣ್ಣ ಕಥೆ:
ಶಿವ ಪುರಾಣದಲ್ಲಿ, ಶಿವ ಮತ್ತು ಬ್ರಹ್ಮಕಪಾಲದ ಬಗ್ಗೆ ಒಂದು ಕಥೆ ಇದೆ.
ತುಂಬಿರುವಂತೆ ಕಂಡರೂ, ನಿಜವಾಗಿ ಅದು ಒಳಗೆ ಟೊಳ್ಳಾಗಿತ್ತು. ಆಕೆಯು ಸಿಕ್ಕಿಹಾಕಿಕೊಳ್ಳುವ ಮೊದಲು ಎಷ್ಟು ಜನ ಗಿರಾಕಿಗಳ ಮೇಲೆ ಈ ಚಮತ್ಕಾರ ಮಾಡಿರಬಹುದು ಎಂದು ನನಗೆ ಆಶ್ಚರ್ಯವಾಯಿತು. ಏಕೆಂದರೆ ಪ್ರತಿಯೊಬ್ಬರನ್ನೂ ಯಾವಾಗಲೂ ನೀವು ಮೋಸಮಾಡಲಾರಿರಿ! ವಿಶೇಷವಾಗಿ ಗುರುವನ್ನು ನೀವು ಮೋಸಮಾಡಲಾರಿರಿ.
ನೀವು ಗಮನಿಸಿದಲ್ಲಿ, ನಾನ್ಸೆನ್ ಹಾಗೂ ಗುರ್ಡೆಫ್ ತಮ್ಮ ಅನುಯಾಯಿಗಳ ಮೇಲೆ ಎರಡು ತದ್ವಿರುದ್ಧವಾದ ಉಪಾಯಗಳನ್ನು ಉಪಯೋಗಿಸಿದರು. ಪ್ರೊಫೆಸರ್ ಈಗಾಗಲೇ ಒಳಗೆ ತುಂಬಿ ಹೋಗಿರುವುದಾಗಿ (ಪೂರ್ಣವಾಗಿರುವನಾಗಿ) ಅವರಿಗೆ ನಾನ್ಸೆನ್ ತೋರಿಸಿಕೊಟ್ಟರು. ಗುರ್ಡೆಫ್, ಔಸ್ಪೆನ್ಸ್ಕಿ ಗೆ ಆತನೊಳಗಿದ್ದ ಶೂನ್ಯತೆಯ ಅರಿವುಂಟಾಗುವಂತೆ ಮಾಡಿದ.
ಆದರೆ ವಿಶೇಷವಾಗಿ ಇಬ್ಬರೂ ಒಂದನ್ನೇ ಹೇಳುತ್ತಿದ್ದಾರೆ. ಏಕೆಂದರೆ ಪೂರ್ಣತೆ ಮತ್ತು ಶೂನ್ಯತೆ ಎರಡೂ ವಿಶೇಷವಾಗಿ ಒಂದೇ!! ನೆಲಗಡಲೆ ಬೀಜದ ಮಾರಾಟಗಾರಳಂತೆ ನಾವು ಒಳಗಿರುವ ಶೂನ್ಯತೆಯನ್ನು ಮುಚ್ಚಿಕೊಳ್ಳಲು, ಪೂರ್ಣತೆಯಿಂದ ತುಂಬಿದಂಥಹ ಸುಳ್ಳು ಭಾವನೆಯನ್ನು ಸೃಷ್ಟಿಸುತ್ತೇವೆ.
ಆದುದರಿಂದಲೇ ಗುರುವೆಗೆ ದ್ವಿವಿಧವಾದ ಗೊತ್ತುಪಡಿಸಿದ ಪಾಠ ಹೇಳುವುದಿದೆ. ಪ್ರಥಮವಾಗಿ, ವರ್ಷಗಳಿಂದಲೂ ನೀವು ನಿಮ್ಮೊಳಗೆ ಸಂಗ್ರಹಿಸಿರುವ ಕಸವನ್ನು ನಾನು ಗುಡಿಸಬೇಕು. ಆಗ ನಾನು ನಿಮ್ಮಲ್ಲಿ ಸರಿಯಾದ ರೀತಿಯ ಶೂನ್ಯತೆಯನ್ನು, ಸ್ಪಷ್ಟವಾದ ಶೂನ್ಯತೆಯನ್ನು ಸೃಷ್ಟಿಸಬೇಕು. ನೀವು ಸ್ವೀಕರಿಸಲು ತಯಾರಿರುವಂತೆ ನಾನು ಮಾಡಬೇಕು. ಬರಿದಾಗುವುದು(ಶೂನ್ಯತೆ ಹೊಂದುವುದು) ಅಷ್ಟು ಸುಲಭವಲ್ಲ! ಬರಿದಾಗುವುದು(ಶೂನ್ಯವಾಗುವುದು) ಪ್ರಪಂಚದಲ್ಲಿ ತುಂಬಾ ಭಯಪಡಿಸುವಂತಹದ್ದು.
ಮಾರ್ಚ್ 2004 ರಲ್ಲಿ ಭಾರತೀಯ ಸಂಜಾತ ವಿಜ್ಞಾನಿ ಡಾ|| ಕೂಸೆ ತಲೆಯಾರ್ ಖಾನ್ ಅಪಾರ ಶಕ್ತಿಯನ್ನು ಬಿಡುಗಡೆಮಾಡುವ ಅಣು ವಿಭಜನೆಯ ಬಗ್ಗೆ ವಿಸ್ಮಯ ಪಡುವಂತಹ ಸಾಧನೆಯೊಂದನ್ನು ಪ್ರಕಟ ಪಡಿಸಿದ. ಅದನ್ನು ಆತ “ಹೂಜಿಯಲ್ಲಿ ಸೂರ್ಯನನ್ನು ಮಾಡುವುದು” ಎಂದು ಕರೆದ.
ಪ್ರಾಯೋಗಿಕವಾಗಿ, ಮೂಲಭೂತವಾದ ಸಲಕರಣೆಗಳನ್ನು ಉಪಯೋಗಿಸಿ, ಆ ವಿಜ್ಞಾನಿ ಮತ್ತು ಅವನ ತಂಡ ಅಪಾರ ಶಕ್ತಿ ಬಿಡುಗಡೆ ಮಾಡುವ ಅಣು ವಿಭಜನೆಯನ್ನು ಸಾಧಿಸುವುದರಲ್ಲಿ ಯಶಸ್ವಿಯಾದರು ಮತ್ತು ಸೂರ್ಯನಿಂದ ಸೃಷ್ಟಿಸಲ್ಪಟ್ಟ ಶಕ್ತಿಗೆ ಹೋಲಿಸಬಹುದಾದ ಶಕ್ತಿಯನ್ನು ಉತ್ಪತ್ತಿ ಮಾಡುವಂತಹದ್ದನ್ನು ಸಾಧಿಸಿದರು!.
ಇದು “ಹೂಜಿಯಲ್ಲಿ ಸೂರ್ಯನನ್ನು ಮಾಡುವುದು” ಎನ್ನುವುದು ಎಷ್ಟು ನಂಬಲು ಸಾಧ್ಯವಿಲ್ಲವೋ ಹಾಗೇ ಇತ್ತು..... ಆದರೆ ಇದು ಘಟಿಸಿತು.
ನಾವು ಆಶ್ಚರ್ಯ ಪಡಬೇಕಾಗಿಲ್ಲ- ನಾವು ಪ್ರತಿಯೊಬ್ಬರೂ ಹೂಜಿಯಲ್ಲಿನ ಸೂರ್ಯನಲ್ಲದೆ ಬೇರೇನೂ ಅಲ್ಲ! !.
ಐದು ಅಥವಾ ಆರು ಅಡಿ ದೇಹದ ಅಳತೆಗೆ ಹಿಂಡಿ, ಮೂರು ಆಯಾಮಗಳ ಚೌಕಟ್ಟಿನಲ್ಲೇ ಜೀವಿಸುತ್ತಾ, ನಿಮಗೆ ನಿಮ್ಮ ಅಂತಃಸತ್ವದ ಅರಿವೇ ಇಲ್ಲವಾಗಿದೆ, ದೈಹಿಕವಾಗಿ, ಮಾನಸಿಕವಾಗಿ ಅಥವಾ ಆಧ್ಯಾತ್ಮಿಕವಾಗಿ.
ನೀವು ತಾಂತ್ರಿಕತೆ ತಾನು ಯಾವಕಾಲಕ್ಕೂ ಸೃಷ್ಟಿಸಲಾಗದ ಶ್ರೇಷ್ಠವಾದ ಜ್ಞಾನದ ವಿಸ್ಮಯ. 15 ಕೋಟಿ (50 ಟ್ರಿಲಿಯನ್) ಅಣುಕೋಶಗಳಿಂದ
ಉದಾಹರಣೆಗೆ, ಮುಂಬರುವ ಹತ್ತು ದಿನಗಳಲ್ಲಿ ಭೂಕಂಪವಾಗುತ್ತದೆ ಎಂಬುದನ್ನು ನೀವು ಹೇಳಬಲ್ಲಿರಾ ? ಹಿಂದಿನವಾರ ನಡೆದ ಒಂದು ಮಾತುಕತೆಯ ಖಚಿತ ಪದಗಳನ್ನು ನೀವು ಜ್ಞಾಪಿಸಿ ಕೊಳ್ಳಬಲ್ಲಿರಾ ? ನೀವು ಬೆಳಗ್ಗೆ ನಿಮ್ಮ ಕೆಲಸಕ್ಕೆ ಹೋದ ದಾರಿಯಲ್ಲಿ ಎಷ್ಟು ಮರಗಳನ್ನು ಅಥವಾ ಎಷ್ಟು ಕಂಬಗಳನ್ನು ದಾಟಿದಿರಿ ಎಂದು ಹೇಳಬಲ್ಲಿರಾ ? ಬಹುಷಃ ಸಾಧ್ಯವಿಲ್ಲ !
ಆದರೆ ಸಮ್ಮೋಹನ ಸ್ಥಿತಿಯಲ್ಲಿ ಅಥವಾ ಯಾವಾಗ ನಿಮ್ಮ ಸುಪ್ತಪ್ರಜ್ಞೆ ಜಾಗೃತಗೊಂಡಿರುವುದೋ ಆ ಪರಿಸ್ಥಿತಿಗಳಲ್ಲಿ ನೀವು ನಿಖರವಾಗಿ ಹೇಳಬಲ್ಲಿರಿ. ಸಾಧಾರಣವಾಗಿ ಎಲ್ಲರೂ ಹೇಳುವ ಸಾಧ್ಯತೆ ಇದೆ !!
ನಮ್ಮ ಪ್ರಜ್ಞಾ ಬುದ್ಧಿಯನ್ನು ಬೆಳೆಸುವುದರಲ್ಲಿಯೇ ನಾವು ಎಷ್ಟು ಶ್ರಮ ವಹಿಸಿದ್ದೇವೆ ಎಂದರೆ ನಾವು ನಮ್ಮ ಸುಪ್ತ ಪ್ರಜ್ಞೆಯೊಂದಿಗೆ, ಸಹಜಗುಣದೊಂದಿಗೆ ಸಂಬಂಧವನ್ನು ಕಳೆದುಕೊಂಡುಬಿಟ್ಟಿದ್ದೇವೆ. ವ್ಯವಸ್ಥಿತ ಸೃಷ್ಟಿಯೊಂದಿಗೆ ನಾವು ನಮ್ಮ ಆಧ್ಯಾತ್ಮಿಕ ಸಂಬಂಧವನ್ನೇ ಕಳೆದುಕೊಂಡುಬಿಟ್ಟಿದ್ದೇವೆ. ಸಹಜಗುಣವೆಂದರೆ ಬೇರೇನೂ ಅಲ್ಲ. ನಮ್ಮ ಸುಪ್ತ ಪ್ರಜ್ಞೆಯಲ್ಲಿ ಸಂಗ್ರಹವಾಗಿರುವ ಸೃಷ್ಟಿಯ ಒಟ್ಟಾರೆ ಚಾತುರ್ಯವಷ್ಟೆ. 20 ನೇ ಶತಮಾನದ ಮನಶ್ಶಾಸ್ತ್ರಜ್ಞ ಕಾರ್ಲ್ ಜಂಗ್ ಇದನ್ನು ವಿವರಿಸಲು "ಸಾಮುದಾಯಿಕ ಜಾಗೃತಾವಸ್ಥೆ" ಎಂಬ ಪದ ಸೂಚಿಸಿದ.
ನಿಮಗಿದು ತಿಳಿದಿದೆಯೋ ಇಲ್ಲವೋ, ನೀವಿದನ್ನು ನಂಬುತ್ತೀರೋ ಇಲ್ಲವೋ, ನೀವಿದನ್ನು ಒಪ್ಪುತ್ತೀರೋ (ಸ್ವೀಕರಿಸುತ್ತೀರೋ) ಇಲ್ಲವೋ.. ವಿಶ್ವದ ಪ್ರತಿಯೊಂದು ವಸ್ತುವಿನೊಡನೆ ನಮ್ಮ ಸಂಬಂಧ ಜೋಡಿಸಲ್ಪಟ್ಟಿದೆ. ಚಕ್ರದ ಕೀಲಿನಂತೆ, ಮೇಲ್ನೋಟಕ್ಕೆ ನಾವು ಬೇರೆಯೇ ಗುರುತಿರುವವರಂತೆ ಕಾಣುತ್ತೇವೆ. ಆದರೆ ನಾವು ಆಳವಾಗಿ ಹೋದಾಗ, ಕೇಂದ್ರ ಒಂದೇ ಎಂಬುದು ನಮಗರಿವಾಗುತ್ತದೆ.
ಪ್ರಶ್ನೆ ಕೇಳುವುದರಲ್ಲಿ ವಿಶೇಷ ತಜ್ಞನಾದ ಸಿ. ಐ. ಎ. ಯ ಕ್ಲೀವ್ ಬ್ಯಾಕ್ಸ್ಸ್ಟರ್, ಒಂದು ಕಣ್ಣೆರೆಸುವ ಪ್ರಯೋಗವನ್ನು ಮಾಡಿದ. ವಿವಿಧ ವಿದ್ಯುತ್ ಪ್ರಚೋದನೆಗೆ ಗಿಡಗಳು ಪ್ರತಿಕ್ರಿಯಿಸುವುದಕ್ಕೆ ತಡೆ ಒಡ್ಡಲು ಒಂದು ಪ್ರಯೋಗಾತ್ಮಕವಾಗಿ ಬ್ಯಾಕ್ಸ್ಸ್ಟರ್ನು ಅವನ ಕಛೇರಿಯಲ್ಲಿನ ಕುಂಡದಲ್ಲಿದ್ದ ಗಿಡವೊಂದನ್ನು ಸುಳ್ಳನ್ನು ಕಂಡುಹಿಡಿಯುವ ಯಂತ್ರಕ್ಕೆ ಸಂಪರ್ಕ ನೀಡಿದ. ಈ ಯಂತ್ರ ನಮ್ಮ ದೇಹದಲ್ಲಿನ ವಿದ್ಯುತ್ ಬದಲಾವಣೆಗಳನ್ನು ಒಂದು ಗ್ರಾಫ್ ಮೇಲೆ ಗುರುತಿಸುತ್ತದೆ (ಇ. ಸಿ. ಜಿ. ನಮ್ಮ ಹೃದಯದ ಚಟುವಟಿಕೆಯ ಬದಲಾವಣೆಯನ್ನು ಗುರುತಿಸುವ ಹಾಗೆ). ದುರ್ಬಲ ಪ್ರಚೋದನೆಗೆ ಯಾವಾಗ ಗಿಡ ಯಾವುದೇ ಪ್ರತಿಕ್ರಿಯೆ ತೋರಲಿಲ್ಲವೋ, ಬ್ಯಾಕ್ಸ್ಸ್ಟರ್ ಅದರ ಎಲೆಯೊಂದನ್ನು ಸುಡಲು ತೀರ್ಮಾನಿಸಿ, ಪ್ರಯತ್ನಿಸಿದ. ಆ ಆಲೋಚನೆ ಅವನ ಮೆದುಳಲ್ಲಿ ಮೂಡಿದ ಕ್ಷಣದಲ್ಲೇ, ಗಿಡ ದಿಗ್ಭ್ರಮೆಗೊಳಿಸುವಂತಹ ಪ್ರತಿಕ್ರಿಯೆಯನ್ನು ಗ್ರಾಫ್ ಮೇಲೆ ಗುರುತಿಸುವುದನ್ನು ಆತ ಕಂಡ ! ಆಶ್ಚರ್ಯಚಕಿತನಾಗಿ ಬ್ಯಾಕ್ಸ್ಸ್ಟರ್ ಈ ಪ್ರಯೋಗವನ್ನು ಬೇರೆ ಗಿಡಗಳ ಸಂಗಡ ಪ್ರಯೋಗಿಸಿದ ಮತ್ತು ಆತ ಕಂಡಿದ್ದು ತೊಂದರೆ ಕೊಡುತ್ತಿದ್ದ ಗಿಡ ಎಂದು ಯೋಚಿಸಿದ ಒಂದೇ ಅಲ್ಲ, ಆದರೆ ಆ ಕೋಣೆಯಲ್ಲಿದ್ದ ಎಲ್ಲಾ ಗಿಡಗಳೂ ಈ ಪ್ರತಿಕ್ರಿಯೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಗುರುತಿಸಿದವು! ನಂತರ ಆತ ಕಂಡು ಹಿಡಿದದ್ದೇನೆಂದರೆ, ಗಿಡಗಳು ಆತನ ಧ್ವನಿಗೆ ಸೂಕ್ಷ್ಮವಾಗಿ ಸಂವೇದಿಸುವುದಲ್ಲದೇ ಮತ್ತು ಆತ ಕೋಣೆಯಲ್ಲಿ ಇರುವುದಕ್ಕೂ ಸಹ ಸಂವೇದಿಸುತ್ತಿದ್ದವು.
ಈ ಪ್ರಯೋಗವು ಟೆಲಿಪತಿ (ಇತರರ ಮನಸ್ಸಿನ ಇಂಗಿತವನ್ನು ದೂರದಿಂದಲೇ ಪತ್ತೆ ಹಚ್ಚುವ ವಿದ್ಯೆ) ಗಿಂತ ಹೆಚ್ಚು ಚಕಿತ ಪಡಿಸುವಂತಹದು ಎಂದು ಸಾಬೀತಾಯಿತು. (ಟೆಲಿಪತಿ - ಇದು ಒಬ್ಬ ಮನುಷ್ಯನ ಮೆದುಳಿನ ಪ್ರಕಟಿಸದೆ ಬದುಕುತ್ತೇವೆ ಮತ್ತು ಸಾಯುತ್ತೇವೆ.
ಕುರುಡ ಮತ್ತು ಕೋಲಿನ ಕಥೆಯನ್ನು ನೀವು ಕೇಳಿದ್ದೀರೇನು ?
ಕುರುಡನೊಬ್ಬನಿಗೆ ವಿಸ್ಮಯಕಾರಿಯಾಗಿ ಗುಣಪಡಿಸುವುದನ್ನು ಬಹಳ ಮೇಧಾವಿ ವೈದ್ಯನೊಬ್ಬ ಮುಂದಿಸಿದ.
"ಒಮ್ಮೆ ಶಸ್ತ್ರ ಚಿಕಿತ್ಸೆ ಆಯಿತೆಂದರೆ, ನೀವು ನೋಡಲು ಸಾಧ್ಯವಾಗುತ್ತದೆ" ವೈದ್ಯ ಹೇಳಿದ. ಆಗ ನೀನು ನಿನ್ನ ಕೋಲನ್ನು ದೂರ ಎಸೆದುಬಿಡಬಹುದು !
"ನನಗೆ ನೀವು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ ವೈದ್ಯರೇ", ಕುರುಡ ಹೇಳಿದ.
ಶಸ್ತ್ರ ಕ್ರಿಯೆಯ ನಂತರ ನಾನು ನೋಡಲು ಸಾಧ್ಯವಾಗುತ್ತದೆಯೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ನನ್ನ ಕೋಲಿಲ್ಲದೆ ನಾನು ಹೇಗೆ ತಾನೇ ನಡೆಯ ಬಲ್ಲೆ ?
ನೀವು ನೋಡಲು ಶುರು ಮಾಡುವುದರೊಳಗೆ, ನಿಮಗೆ ಕೋಲಿನ ಅಗತ್ಯ ಇನ್ನು ಬೇಕಿಲ್ಲ ಎಂಬುದು ಹೇಗೆ ತಾನೇ ತಿಳಿಯುತ್ತದೆ ? ಆಂತರ್ಯವನ್ನು ನೋಡಲು ಇರುವ ಭಯವನ್ನು ಬಿಡುವ ತನಕ, ನಮ್ಮ ನಿಜವಾದ ಪ್ರಚಂಡ ಸಾಮರ್ಥ್ಯದ ಅರಿವು ನಮಗೆ ಹೇಗೆ ಆಗುತ್ತದೆ ?
ಧ್ಯಾನವೆಂದರೆ ಈ ಆಂತರ್ಯವನ್ನು ನೋಡುವ ಕ್ರಿಯೆಯಲ್ಲದೆ ಬೇರೇನೂ ಅಲ್ಲ.
ಇದು ಮೇರೆಯಿಲ್ಲದ ಶಕ್ತಿ ಮತ್ತು ಸೃಷ್ಟಿಯ ಚಾತುರ್ಯವನ್ನು ಮೆಲ್ಲಗೆ ತಟ್ಟುವ ವಿಧಾನ.
ಇದೊಂದು ಗೊತ್ತು ಗುರಿಯಿಲ್ಲದ ತತ್ವಜ್ಞಾನದ ಹೇಳಿಕೆಯಲ್ಲ !
ಕೆಲವು ತಿಂಗಳುಗಳ ಹಿಂದೆ ಒಬ್ಬ ಮನುಷ್ಯ ತನ್ನ ಹದಿನಾಲ್ಕು ವರ್ಷ ವಯಸ್ಸಿನ ಮಗನನ್ನು ನನ್ನ ಬಳಿ ಕರೆ ತಂದ. ಬೇರೊಬ್ಬ ಹುಡುಗನನ್ನು ಒಂದು ಗಾಜಿನ ಚೂರಿನಿಂದ ಕೆಟ್ಟದಾಗಿ ಗಾಯಗೊಳಿಸಿದ್ದಕ್ಕಾಗಿ ಆ ಹುಡುಗ ಶಾಲೆಯಿಂದ ಹೊರಹಾಕಲ್ಪಟ್ಟಿದ್ದ.
ನಾನು ಆ ಹುಡುಗನನ್ನು ಏಕೆ ಹಾಗೆ ಮಾಡಿದೆ ಎಂದು ಕೇಳಿದಾಗ, ಆ ಹುಡುಗ ಕೊಟ್ಟ ಉತ್ತರ ನನಗೆ ಅನಿರೀಕ್ಷಿತವಾಗಿತ್ತು. ಅವನು ಹೇಳಿದ "ನನಗೆ ಬೇಸರವಾಗಿತ್ತು". ನೀವು ಊಹಿಸಬಲ್ಲಿರಾ! ಹದಿನಾಲ್ಕನೇ ವಯಸ್ಸಿನಲ್ಲಿ, ಆ ಮಗು ಸಾಮಾನ್ಯ ಜೀವನ ನೀಡುವ ಎಲ್ಲದರೊಂದಿಗೆ ಎಷ್ಟು ಬೇಸತ್ತಿದ್ದನೆಂದರೆ, ಪರಿಶೋಧಿಸಲು ಅವನಿಗುಳಿದಿದ್ದೇನೆಂದರೆ "ಹಿಂಸೆ" ಒಂದೇ!
ಅತೀವ ಬೇಸರ ನಮ್ಮ ಕಾಲದ ಒಂದು ವಿಶೇಷ ಕಾಯಿಲೆ! ಐದು ವರ್ಷ ವಯಸ್ಸಾಗುವುದರಲ್ಲೇ, ಹುಡುಗನಾಗಲೀ, ಹುಡುಗಿಯಾಗಲೀ, "ಬೇಸರ (ದಣಿವು) ಎಂಬ ಪದದ ಅರ್ಥವನ್ನು ತಿಳಿದುಕೊಂಡುಬಿಟ್ಟಿರುತ್ತಾರೆ.
ಅವರ ಬಗ್ಗೆ ಇದು ಏನನ್ನು ಹೇಳುತ್ತದೆ? ಆಸಕ್ತಿಯಿಂದ ನೋಡುವುದು ಮತ್ತು ಮಾಡುವುದನ್ನೆಲ್ಲವನ್ನೂ ಅವರು ಐದು ವರ್ಷ ವಯಸ್ಸಾಗುವುದರಲ್ಲೇ ಸಂಪೂರ್ಣವಾಗಿ ಮುಗಿಸಿಬಿಟ್ಟಿದ್ದಾರೆಂದು!
ನಿರುತ್ಸಾಹದೊಂದಿಗೆ, ಆತುರ, ಒತ್ತಡ ಮತ್ತು ಬೇಸರ (ದಣಿವು) ಇವು ನಮ್ಮ ಆಧುನಿಕ ಜೀವನ ಶೈಲಿಯ ಕೊಡುಗೆಗಳು. ಇದೊಂದು ಪಟ್ಟಣದ ಶ್ರೀಮಂತ ಮತ್ತು ಅತಿಯಾದ ಬುದ್ಧಿವಂತರ ಕುರುಹು. ಸುಮ್ಮನೆ ದೂರ ಎಸೆಯುತ್ತಿದ್ದೇವೆ. ಪ್ರ ತಿ ಕ್ಷ ಣವನ್ನು ಪ್ರತಿ ಹನಿಯನ್ನು ಹೇಗೆ ಅನುಭವಿಸುವುದೆಂಬುದು ನಮಗೆ ತಿಳಿದಿಲ್ಲ.
ಸತ್ಯವೇನೆಂದರೆ, ಬದುಕು ಇರುವುದರ ಹಾಗೆಯೇ ಅದನ್ನು ನೋಡುವುದನ್ನು ನಾವು ಮರೆತಿದ್ದೇವೆ. ನಮ್ಮ ಸುತ್ತಮುತ್ತಲಿನ ಎಲ್ಲವನ್ನೂ ನಾವು ನಮ್ಮದೇ ಆದ ಆಕಾಂಕ್ಷೆ, ವಾಡಿಕೆಗಳು ಮತ್ತು ಭಯಗಳೆಂಬ ಬಣ್ಣ ಬಣ್ಣದ ಗಾಜಿನ ಮೂಲಕವೇ ನೋಡುತ್ತೇವೆ.
ಇವತ್ತು ಪರಿಮಾಣ ಭೌತಶಾಸ್ತ್ರ ಎಷ್ಟರಮಟ್ಟಿಗೆ ಹೇಳುತ್ತ ದೆಂದರೆ - “ವಾಸ್ತವವೆಂಬುದು ನಮ್ಮ ಮಾನಸಿಕ ಕಲ್ಪನೆ ಮಾತ್ರ”. ಇದನ್ನೇ ನಮ್ಮ ಪೂರ್ವಜರಾದ ಜ್ಞಾನೋದಯ ಹೊಂದಿದ ಋಷಿಗಳು “ಮಾಯೆ”, “ಭ್ರಮೆ” ಎಂದು ಕರೆದರು. ಮಾಯೆ ಎಂಬುದು, ವಾಸ್ತವವನ್ನು ನಮ್ಮ ದುರಾಸೆ ಮತ್ತು ಭೀತಿಯಿಂದ ವಿರೂಪಗೊಳಿಸಿದ್ದಲ್ಲದೆ ಬೇರೇನೂ ಅಲ್ಲ.
ನಮ್ಮ ಕಾಲದಲ್ಲಿ ಆನಂದವನ್ನು ಕೊಲ್ಲುವ ಮತ್ತೊಬ್ಬನನ್ನು ನಾವು ಹೊಂದಿದ್ದೇವೆ, ಅದೇ ಮೆದುಳಿನಲ್ಲಿರುವ ಜ್ಞಾನ. ನಮ್ಮ ಬದುಕು ಸರ್ವಥಾ ಅತಿಯಾಗಿ ಮೆದುಳಿಗೆ ಸಂಬಂಧಪಟ್ಟಿದೆ. ನಾವು ಬಾಳುವುದು ಹೆಚ್ಚಾಗಿ ನಮ್ಮ ಬುದ್ಧಿಶಕ್ತಿಯಿಂದಲೇ ಮತ್ತು ಸ್ವಲ್ಪವಾಗಿ ಅನುಭವದಿಂದ. ನೀವು ಗಮನಿಸಿದರೆ, ಹೆಚ್ಚಾಗಿ ಈ ಅರ್ತಿ ಬುದ್ಧಿವಂತ ಜನರೇ ತುಂಬಾ ಸುಲಭವಾಗಿ ಖಿನ್ನತೆ (ಬೇಸರ) ಕ್ಕೊಳಗಾಗುವುದು. ಅವರು ಜ್ಞಾನದಿಂದ ಅಂಧರಾಗಿದ್ದಾರೆಂದು ನೀವು ಹೇಳಬಹುದು ! ಏಕೆಂದರೆ ಜ್ಞಾನ ಒಂದು ವಿದ್ಯೆಯನ್ನು ಸರ್ವಸ್ವದಿಂದಲೇ ಮಾಡುತ್ತದೆ. ತಿಳಿದಿರುವ ಹಾಗೂ ಅನಿರೀಕ್ಷಿತೆಯಿಂದ ತುಂಬಿರುವ ಒಂದು ಪೆಟ್ಟಿಗೆಯೊಳಗೆ ಚೈತನ್ಯ (ಜೀವನ) ವನ್ನು ಹೊಂದಿಸಲು ಜ್ಞಾನ ಹವಣಿಸುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಾವು ಏನನ್ನು ಕಾಣಲು ನಿರೀಕ್ಷಿಸುತ್ತೇವೋ ಅದನ್ನೇ ನಾವು ಕಾಣುವುದು.
ನಾವು ಜೀವನ ಬಹಳ ಬೇಸರವಾದದ್ದು ಎಂದು ತಿಳಿದರೆ ಆಶ್ಚರ್ಯವೇನಿಲ್ಲ!
ನಾನು ಜ್ಞಾನದ ಮೇಲೆ ದೋಷ ಹೊರಿಸುತ್ತಿಲ್ಲ. ನಮ್ಮ ನಿತ್ಯ ಜೀವನ ನಡೆಸಲು ಜ್ಞಾನದ ಅವಶ್ಯಕತೆ ಇದೆ. ಜೀವನ ಬೇಸರ ಎಂದೆನಿಸುವುದೂ ತಪ್ಪಲ್ಲ. ಖಿನ್ನತೆ (ಬೇಸರ) ಯನ್ನು ಅನುಭವಿಸುವುದು ಕೆಲವೊಮ್ಮೆ ಸಾಮಾನ್ಯವಾದದ್ದು! ನಾನು ಹೇಳಿದಂತೆ, ಖಿನ್ನತೆ ಶ್ರೇಷ್ಠ ಪ್ರಜ್ಞಾ ಶಕ್ತಿಯ ಒಂದು ಕುರುಹು. ಬೇಸರವಾಗಿರುವ ಎಮ್ಮೆಯನ್ನು ಯಾವಾಗಲಾದರೂ ನೋಡಿದ್ದೀ ರೇನು? ಆದ್ದರಿಂದ ಖಿನ್ನತೆ ಹೊಂದುವುದರ ಬಗ್ಗೆ ತಪ್ಪಿತಸ್ಥ ಭಾವನೆ ಬೇಡ!
ನಾನು ನಿಮಾಗೆ ಏನು ಹೇಳುತ್ತಿದ್ದೀನೆಂದರೆ, ಪ್ರಾಯೋಗಿಕ ತಿಳುವಳಿಕೆಗೋಸ್ಕರ, ಜ್ಞಾನ ಅರಿವಿನ ಬದಲು ಎಂಬುದಲ್ಲ. ಜೀವನದ ನಿತ್ಯ ವಿಸ್ಮಯದೆಡೆಗೆ ನೀವು ಕುರುಡಾಗುವಂತೆ ಮಾಡಲು ನಿಮ್ಮ ಜ್ಞಾನದ ಹಾದಿಯನ್ನು ಬಿಡಬೇಡ.
ಜಾಗ್ರತಾವಸ್ಥೆಯಲ್ಲಿ ಬದುಕಲು ನೀವು ಪ್ರತಿಕ್ಷಣವೂ ಸ್ವಲ್ಪವಾದರೂ ತುಂಬಾ ವಿಭಿನ್ನವಾಗಿ ಇರುವ ಅಗತ್ಯವಿಲ್ಲ. ನಿಜವಾಗಿ ಜೀವನವನ್ನು ಅಭಿನಂದಿಸಲು ನೀವು ಅಪಘಾತವೊಂದನ್ನು ಅನುಭವಿಸಬೇಕಾದ್ದಿಲ್ಲ ಅಥವಾ ಪರದೇಶಕ್ಕೆ ರಜೆಯ ಮೇಲೆ ಹೋಗಬೇಕಾದ್ದಿಲ್ಲ !
ಅತ್ಯಂತ ಸ್ಪಷ್ಟವಾಗಿರಿ : ಹೋಗಲು ಹೇಳಿಕೊಳ್ಳುವಂತಹ ವಿಭಿನ್ನವಾದ ಸ್ಥಳ ಯಾವುದೂ ಇಲ್ಲ. ಮಾಡಲು ಪ್ರಚಂಡವಾದ ವಿಭಿನ್ನ ಕಾರ್ಯಗಳಾವೂ ಇಲ್ಲ. ಇದನ್ನು ನೀವು ಹೀಗೆಯೇ ನೋಡಲು ಇಷ್ಟಪಡುತ್ತೀರಿ !
ಆದುದರಿಂದ ನನ್ನನ್ನು ಕೇಳಬೇಡಿ, ನನ್ನ ಜೀವನ ಸಾಮಾನ್ಯವಾಗಿದೆ. ತುಂಬಾ ಖಿನ್ನತೆಯಿಂದಿದೆ. ಆಶ್ಚರ್ಯದಿಂದ ಗಮನಿಸಲು ಅಲ್ಲಿ ಏನಿದೆ ?
ನಿಮಗೆ ಆಶ್ಚರ್ಯವಾಗ ಬಹುದು. ನಿಮ್ಮ ನಿತ್ಯ ಜೀವನದಲ್ಲೂ ಸ್ಪಷ್ಟ ಅರಿವಿನ ಸಾಧ್ಯತೆಯಿದೆ. ತಿಂಗಳಿಗೊಮ್ಮೆ ಯಾದರೂ ಬದಲಾಯಿಸುವುದು ಅಗತ್ಯ ಎಂದು ಭಾವಿಸುತ್ತಾರೆ!
ನಮ್ಮ ಸುತ್ತ ಇರುವಂಥಾದ್ದರಿಂದ ನಾವು ಬೇಸರಗೊಂಡಿದ್ದೇವೆ, ಒಬ್ಬರಿಗೊಬ್ಬರು ಮತ್ತು ಅಂತಿಮವಾಗಿ ನಮಗೆ ನಾವೇ ಬೇಸರಗೊಂಡಿದ್ದೇವೆ. ಸತ್ಯವೇನೆಂದರೆ, ನಮ್ಮನ್ನು ನಾವು ಎಷ್ಟು ಬೇಸರ ತರಿಸುವವರು ಎಂದು ಕಾಣುತ್ತೇವೆಂದರೆ ಐದು ನಿಮಿಷ ಕೂಡ ನಾವು ಒಂಟಿಯಾಗಿ ಕಳೆಯಲಾರೆವು. ನಾವು ಎಷ್ಟೊಂದು ನಿರಾಸಕ್ತರು ಎಂಬುದನ್ನು ನೋಡಲು ನಮಗೆ ಭಯವಾಗುತ್ತದೆ. ನಮ್ಮ ಎಲ್ಲಾ ಸಮಾಜೀಕರಣ ನಮ್ಮಿಂದ ನಾವು ತಪ್ಪಿಸಿಕೊಳ್ಳುವುದಷ್ಟೇ ಅಲ್ಲದೆ ಬೇರೇನಲ್ಲ.
ಅತ್ಯಂತ ಸ್ಪಷ್ಟವಾಗಿರಿ : ಜೀವನವೆಂಬುದು ಬೇಸರವಲ್ಲ, ಮನೋಭಾವವಷ್ಟೇ ಬೇಸರ ಪಡಿಸುವುದಂತಹುದು! ಮನಸ್ಸೇ ಜಗತ್ತನ್ನು ಪ್ರತಿಫಲಿಸುವುದು ಮತ್ತು ಕನ್ನಡಿಯ ಮೇಲೆ ಧೂಳಿದ್ದರೆ, ಪ್ರಪಂಚ ಹೇಗೆ ತಾನೇ ಉಲ್ಲಾಸಕರವಾಗಿ ಕಂಡೀತು ?
ಮನಸ್ಸು ನಿಮ್ಮನ್ನು ಜೀವನದೆಡೆ ಭಾವನಾಶೂನ್ಯವನ್ನಾಗಿ ಮಾಡುತ್ತದೆ. ಯಾವುದಾದರೂ ಸರಿಯೇ, ಹೊಂದಿಕೊಂಡು ಬಿಡುವುದು ಮನಸ್ಸಿನ ಸ್ವಭಾವ. ಯಾವಾಗ ನೀವು ಯಾವುದಕ್ಕಾದರೂ ಅಭ್ಯಾಸವಾಗಿ ಬಿಡುತ್ತೀರೋ, ಅದನ್ನು ಮಾನ್ಯ ಮಾಡಲು ಪ್ರಾರಂಭ ಮಾಡುತ್ತೀರಿ. ಆದುದರಿಂದಲೇ ನಿಮ್ಮದೇ ಉದ್ಯಾನದಲ್ಲಿರುವ ಹೂವುಗಳು ಎರಡನೇ ಬಾರಿಗೆ ನೋಡುವಷ್ಟು ಮಹತ್ವದ್ದಾಗಿರುವುದಿಲ್ಲ. ನಿಮ್ಮ ಹೆಂಡತಿ ಯಾವಾಗಲೂ ನೀವು ಹೊರಗೆ ಭೇಟಿಯಾಗುವ ಹೆಂಗಸಿನಷ್ಟು ಹಿತವಾಗಿರುವುದಿಲ್ಲ.
ಈ ದಿನ ಹೊಸದನ್ನೇನಾದರೂ ಪ್ರಯತ್ನಿಸಿ : ನಿಮ್ಮ ಉದ್ಯಾನದಲ್ಲಿ ಅಥವಾ ನಿಮ್ಮ ಸ್ವಂತ ರಸ್ತೆಯಲ್ಲಿ ಒಮ್ಮೆ ಅಡ್ಡಾಡಿ ನೋಡಿ, ಇಲ್ಲಿಯವರೆಗೆ ನೀವು ಗಮನಿಸಬೇಕಾದ ಎಷ್ಟೋ ವಸ್ತುಗಳನ್ನು ಕಳೆದುಕೊಂಡಿದ್ದೀರಿ.
ಎಷ್ಟು ಮರಗಳು ಅರಳಿ ನಿಂತಿವೆ ? ಎಷ್ಟು ಬಣ್ಣಗಳು ?
ಎಷ್ಟು ಮನೆಗಳು ಹೊಸದಾಗಿ ಬಣ್ಣ ಬಳಿಯಲ್ಪಟ್ಟಿವೆ ?
ಎಷ್ಟು ತರಹದ ಶಬ್ದಗಳನ್ನು ನೀವು ಕೇಳುವಿರಿ ?
ನೀವು ನಡೆಯುವಾಗ, ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯನ್ನು ಗಮನಿಸಿ. ಮುಖಾರವಿಂದದ ಮೇಲೆ ಬೀಳುವ ಸೂರ್ಯ ರಶ್ಮಿಯತ್ತ, ಮೈಮೇಲೆ ಬೀಸುವ ತಂಗಾಳಿಯತ್ತ ಗಮನವಿರಲಿ.
ಪೂರ್ಣ ಮನಸ್ಸಿನೊಂದಿಗೆ ನಡೆಯಿರಿ.
ಇಷ್ಟು ದಿನವೂ ನೀವು ಎಷ್ಟೊಂದು ಕಳೆದುಕೊಂಡಿದ್ದೀರಿ ಎಂದು ತಿಳಿಯಲು ನಿಮಗೆ ಸೋಜಿಗವಾಗುತ್ತದೆ ! ಜೀವನವೆಂಬುದು ಅಂಥಹ ಅಮೂಲ್ಯವಾದ ಕೊಡುಗೆ. ಆದರೆ ಅದನ್ನು ನೀವು ನಿರ್ಲಕ್ಷ್ಯವಾಗಿ ತೆಗೆದುಕೊಂಡಿದ್ದೀರಿ. ಯಾವಾಗ ಜೀವನವೇ ಅಷ್ಟೊಂದು ನವೀನವಾಗಿ ಮತ್ತು ಬದಲಾವಣೆಗಳನ್ನು ಒಳಗೊಂಡಿದೆಯೋ, ನಿಮಗೆ ಬೇಸರವಾಗುವುದು ಹೇಗೆ ತಾನೇ ಸಾಧ್ಯ ?
ತುಂಬು ಮನಸ್ಸಿನಿಂದಿರುವುದು ಒಂದು ಅದ್ಭುತವಾದ ಧ್ಯಾನದ ತಂತ್ರ. ನೀವು ಪ್ರಜ್ಞಾವಸ್ಥೆಯಲ್ಲಿರುವಾಗ ನಿಮ್ಮ ಬುದ್ಧಿ (ಮನಸ್ಸು) ಗೆ ಮಾತನಾಡಲು ನೀವು ಅವಕಾಶವನ್ನೇ ಕೊಡುವುದಿಲ್ಲ ! ನೀವು ಯಾವಾಗ ಸಂಪೂರ್ಣವಾಗಿ ವರ್ತಮಾನದ ಒಳಗೆ ಪ್ರವೇಶಿಸುತ್ತೀರೋ, ಮನಸ್ಸು ನಿಮ್ಮ ಮೇಲೆ ಭೂತವನ್ನಾಗಲೀ, ಭವಿಷ್ಯವನ್ನಾಗಲೀ ಹೇರಲು ಸಾಧ್ಯವಿಲ್ಲ. ಯಾವುದೇ ನೆನಪುಗಳಿಲ್ಲ, ಯೋಜನೆಗಳಿಲ್ಲ. ಬರಿಯ ಸಧ್ಯದ ಕ್ಷಣದ ಸಂಪೂರ್ಣ ಅರಿವು ಮಾತ್ರ. ಸುಮ್ಮನೆ ಅರಿವಿನೊಡನೆ, ಶೂನ್ಯ ಮನಸ್ಸಿನ ಅನುಭವಕ್ಕೆ ನೀವು ಇಳಿಯುತ್ತೀರಿ. ಸಂಪೂರ್ಣ ಸಂಕಲ್ಪದಿಂದ ನೀವು ಜ್ಞಾನೋದಯ ಹೊಂದಬಹುದು !
ಜ್ಯೋತಿಷ್ಯ ಪ್ರತಿಪಾದಿಸಲು ಒಂದು ಚಮತ್ಕಾರದ ವಿಷಯ! ಏಕೆಂದರೆ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು ಸಮಸಂಖ್ಯೆಯಲ್ಲಿದ್ದಾರೆ.
ಅವಿಶ್ವಾಸಿಗಳಿಗೆ, ಜ್ಯೋತಿಷ್ಯ ಒಂದು ರುಜುವಾತು ಪಡಿಸಿದ ವಿಜ್ಞಾನ ಎಂದು ತೋರಿಸ ಬೇಕಾಗಿದೆ. ವಿಶ್ವಾಸಿಗಳಿಗೆ, ಇದೇ ಅಂತಿಮವಾದ ವಿಜ್ಞಾನವಲ್ಲ ಎಂದು ಮನಗಾಣಿಸಬೇಕಾಗಿದೆ. ಜ್ಯೋತಿಷ್ಯದಿಂದ ನುಡಿಯುವ ಭವಿಷ್ಯದಾಚೆ ದಾರಿಯೊಂದಿದೆ!
ನಾನು ಎರಡನ್ನೂ ಮಾಡಲು ಪ್ರಯತ್ನಿಸುತ್ತೇನೆ.
ಪುರಾತನ ಕಾಲದಿಂದಲೂ ಪ್ರಪಂಚದಾದ್ಯಂತದ ಬ್ಯಾಬಿಲೋನಿಯನ್ನರು, ಗ್ರೀಕರು, ರೋಮನ್ನರು, ಅರಬರು ಹಾಗೂ ಹಿಂದೂಗಳ ಸಂಸ್ಕೃತಿಯಲ್ಲಿ ಜ್ಯೋತಿಷ್ಯವನ್ನು ಅಭ್ಯಾಸ ಮಾಡಲಾಗಿದೆ.
ಜ್ಯೋತಿಷ್ಯದಲ್ಲಿ ಮೂಲಭೂತವಾದ ತರ್ಕವೆಂದರೆ ಸೃಷ್ಟಿಯ ಚಮತ್ಕಾರ ಜೀವನದ ಮೇಲೆ ಮತ್ತು ಭೂಮಿಯಲ್ಲಿನ ಘಟನೆಗಳ ಮೇಲೆ ಹೇಗಾಗುತ್ತದೆ ಎಂಬುದು.
ಇದು ಖಂಡಿತವಾಗಿಯೂ ಸತ್ಯ.
ಭೂಮಿ ಪ್ರತ್ಯೇಕವಾಗಿಡಲ್ಪಟ್ಟ ಒಂದು ಗ್ರಹವೇನಲ್ಲ. ನಮಗೆ ಅನುಭವ ಇದೆಯೋ ಇಲ್ಲವೋ. ನಾವೆಲ್ಲರೂ ಆಕಾಶದ ಪ್ರಯಾಣಿಕರು! ಹೊರ ಆಕಾಶದಲ್ಲಿನ ಘಟನೆಗಳು ನಿಶ್ಚಯವಾಗಿಯೂ ನಮ್ಮ ಜೀವನದ ಮೇಲೆ ಪರಿಣಾಮ ಬೀರಬಲ್ಲವು.
ಹೇಗೆ?
ಸೂರ್ಯ, ಚಂದ್ರ ಮತ್ತು ಗ್ರಹಗಳೆಲ್ಲವೂ ಭೂಮಿಯ ಮೇಲಿನ ಜೀವತರಂಗಗಳ ಮೇಲೆ ಪ್ರಭಾವ ಬೀರುವಂತಹ, ತಮ್ಮದೇ ಆದ ಕಾಂತಕ್ಷೇತ್ರ, ಗುರುತ್ವಾಕರ್ಷಣ ಶಕ್ತಿ ಮತ್ತು ರಶ್ಮಿ ಪ್ರಸಾರವನ್ನು ಹೊಂದಿವೆ.
ಸೂರ್ಯ ಮತ್ತು ಚಂದ್ರ ನಮ್ಮ ಜೀವನದ ಮೇಲೆ ನಿತ್ಯವೂ ಪರಿಣಾಮ ಬೀರುವುದು ನಮಗೆಲ್ಲರಿಗೂ ತಿಳಿದಿದೆ. ಪ್ರತಿನಿತ್ಯ ಸೂರ್ಯನ ಸ್ಥಾನಕ್ಕನುಗುಣವಾಗಿ, ಶಾರೀರಿಕ ಉಷ್ಣತೆಯ ಬದಲಾವಣೆ, ಹೃದಯ ಬಡಿತ, ಇತ್ಯಾದಿಗಳನ್ನು ಅನುಭವ ಹೊಂದುತ್ತೇವೆ.
ಪ್ರಪಂಚದ ಎಲ್ಲಾ ಸಂಸ್ಕೃತಿಯವರಲ್ಲೂ, ಪೌರ್ಣಮಿಯ ವೇಳೆ ಹುಚ್ಚು (ಚಂದ್ರರೋಗ) ಜಾಸ್ತಿಯಾಗುವುದರ ಬಗ್ಗೆ ಸಾಕ್ಷಿ ನಮಗೆ ಸಿಗುತ್ತದೆ. ಚಂದ್ರರೋಗಿ ಎಂಬ ಪದ ಹುಟ್ಟಿದ್ದೇ ಚಾಂದ್ರಮಾನದಿಂದ (ಚಂದ್ರನಿಂದ)
ಇದು ಬರೀ ಮೂಢ ನಂಬಿಕೆಯಲ್ಲ ಎಂದು ಪ್ರಯೋಗಗಳಿಂದ ಸಿದ್ದ ಮಾಡಲ್ಪಟ್ಟಿದೆ. ಹುಚ್ಚಾಗಿ ವರ್ತಿಸುವುದು ಅಂದರೆ ಆಘಾತಕರವಾಗಿ ಗಾಡಿ ಚಾಲನೆ ಮಾಡುವುದು, ಮಾತ್ಸರ್ಯದಿಂದ ಕಿಚ್ಚಿಡುವುದು ಮತ್ತು ನರಹತ್ಯೆ ಇವೆಲ್ಲವೂ ಹುಣ್ಣಿಮೆಯಂದೇ ಜಾಸ್ತಿಯಾಗುತ್ತವೆ ಎಂಬುದಕ್ಕೆ ದಿ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕ್ಲೈಮಟಾಲಜಿ ಬಹಳ ವಿಸ್ತೃತವಾದ ಸಾಕ್ಷ್ಯಾಧಾರಗಳನ್ನು ಹೊಂದಿದೆ. ಜರ್ಮನಿಯಲ್ಲಿ ನಡೆದ ಪ್ರಯೋಗಗಳಿಂದ, ಚಂದ್ರನ ಕ್ಷಯವೃದ್ಧಿಗಳು, ಉಸಿರಾಟ ಮತ್ತು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪರಸ್ಪರ ಸಂಬಂಧ ಇದೆ ಹಾಗೂ ಮರಣದ ಕಾಲದ ಮೇಲೂ ಪ್ರಭಾವ ಬೀರುತ್ತವೆ ಎಂಬುದನ್ನು ಸಿದ್ಧಮಾಡಿ ತೋರಿಸಿವೆ!
ಸೂರ್ಯ ಧಗಧಗಿಸುವಾಗ ಅಥವಾ ಸೂರ್ಯನ ಮೇಲೆ ಬೇರೆ ಅಡಚಣೆಗಳುಂಟಾದಾಗ, ಹುಚ್ಚಾಸ್ಪತ್ರೆಗಳಿಗೆ ಸೇರುವವರ ಸಂಖ್ಯೆ
ನಿಮ್ಮ ಜನನದ ವೇಳೆಯಲ್ಲಿನ ಗ್ರಹಗಳ ಸ್ಥಾನಗಳು ನೀವು ಯಾವ ವೃತ್ತಿಯಲ್ಲಿ ತೊಡಗುತ್ತೀರಿ ಎಂಬುದನ್ನು ಹೇಗೆ ತಾನೇ ತೀರ್ಮಾನಿಸಬಲ್ಲವು?
ಆದರೆ ಪ್ರಯೋಗಗಳು ಇದು ಸಾಧ್ಯ ಎಂದು ತೋರಿಸಿಕೊಟ್ಟಿವೆ !
ಮೈಕೇಲ್ ಗಾಕ್ವೆಲಿನ್ ಎಂಬ ಪ್ರಯೋಗಶೀಲ ವ್ಯಕ್ತಿಯೊಬ್ಬ, ಸ್ಟ್ರಾಸ್ಬರ್ಗ್ ಸೈಕೋಫಿಸಿಯಾಲಾಜಿಕಲ್ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿದ್ದು, 1084 ಪ್ರಖ್ಯಾತ ವೈದ್ಯರನ್ನು ಪರಿಶೀಲನೆ ಮಾಡಿ, ಅವರಲ್ಲಿ ಸಾಕಷ್ಟು ಮಂದಿ, ಮಂಗಳ ಅಥವಾ ಶನಿ ಗ್ರಹಗಳು ಉಭ್ರಾವಸ್ಥೆಯಲ್ಲಿದ್ದಾಗ ಹುಟ್ಟಿದವರು ಎಂಬ ವಿಸ್ಮಯವನ್ನು ಕಂಡುಹಿಡಿದ. ಅದರ ಫಲಿತಾಂಶ ಆಕಸ್ಮಾತ್ ಆಗಿ ಹುಟ್ಟುವವರ ಸಂಖ್ಯೆಗಿಂತ 10 ಮಿಲಿಯನ್ ಪಟ್ಟಿನದ್ದಾಗಿತ್ತು !
ಇನ್ನೊಂದು ಪ್ರಯೋಗದಲ್ಲಿ, ವರ್ನಾನ್ ಕ್ಲಾರ್ಕ್ ಎಂಬ ಅಮೇರಿಕನ್ ಮನಃಶಾಸ್ತ್ರಜ್ಞನೊಬ್ಬ ವಿವಿಧ ವೃತ್ತಿಯ ಜನರ ಸಮೂಹದಿಂದ ಜಾತಕಗಳನ್ನು ಸಂಗ್ರಹಿಸಿದ. ವ್ಯಕ್ತಿಯ ವೃತ್ತಿ ಯಾವುದಿರಬಹುದೆಂಬ ಬಗ್ಗೆ ಭವಿಷ್ಯ ನುಡಿಗಾಗಿ ಈ ಜಾತಕಗಳನ್ನು ಆತ 20 ಜ್ಯೋತಿಷಿಗಳಿಗೆ ನೀಡಿದ. 20 ರಲ್ಲಿ 17 ಮಂದಿ ಸರಿಯಾದ ವೃತ್ತಿಯ ಬಗ್ಗೆ ಖಚಿತವಾಗಿ ನುಡಿದರು. ಅದು ಆಕಸ್ಮಾತ್ ಆಗಿ ನಿರೀಕ್ಷಿಸಿದ್ದಕ್ಕಿಂತ 100 ಪಟ್ಟು ಹೆಚ್ಚಾಗಿತ್ತು ! ಪ್ರತಿಬಾರಿಯೂ ಪರೀಕ್ಷೆಯನ್ನು ಕಠಿಣಗೊಳಿಸುತ್ತಾ ಕ್ಲಾರ್ಕ್ ಈ ಪರೀಕ್ಷೆಗಳನ್ನು ಮತ್ತೆ ಮತ್ತೆ ಮಾಡಿದ. ಆತನಿಗೆ ಮತ್ತೆ ಅದೇ ಪ್ರಭಾವಯುತವಾದ ಉತ್ತರವೇ ಸಿಕ್ಕಿತು !
ಭಾರತದಲ್ಲಿ, ಪುರಾತನ ಕಾಲದಿಂದಲೂ, ವ್ಯಕ್ತಿ ಬದುಕಿನಲ್ಲಿ ಯಾವ ದಾರಿಯನ್ನು ಅವಲಂಬಿಸುತ್ತಾನೆ ಎಂದು ಕರಾರುವಕ್ಕಾಗಿ ನಿರ್ಧರಿಸಲು ಜ್ಯೋತಿಷ್ಯವನ್ನು ಬಳಸುತ್ತಿದ್ದರು.
ಒಂದು ಮಗು ಗುರುಕುಲಕ್ಕೆ ಕಾಲಿಟ್ಟಾಗ, ಜ್ಯೋತಿಷ್ಯವನ್ನು ಉಪಯೋಗಿಸಿ,
ಗ್ರಹಗಳ ವೈಯುಕ್ತಿಕ ಹಾಗೂ ಒಟ್ಟಾರೆ ಪ್ರಭಾವವನ್ನು ಗಮನಿಸಬೇಕು. ಇದಲ್ಲದೆ, ಗ್ರಹಗಳು ನಮ್ಮ ಮೇಲಷ್ಟೇ ಅಲ್ಲದೆ ಪರಸ್ಪರವಾಗಿಯೂ ಪ್ರಭಾವ ಬೀರುತ್ತವೆ.
ಇದು ಬಹಳ ಕಷ್ಟಕರವಾದ ಕೆಲಸ. ಹೀಗಾಗಿ ಹೆಚ್ಚು ಜ್ಯೋತಿಷಿಗಳು ಈ ದಿನಗಳಲ್ಲಿ ಕೆಲವು ಮೂಲ ಬದಲಾವಣೆಗಳನ್ನು ಮಾತ್ರ ಉಪಯೋಗಿಸುತ್ತಾರೆ. ಅಂತಿಮವಾಗಿ ಅವು ಸರಿಯಾಗಿಲ್ಲದ ಫಲಿತಾಂಶ ಕೊಡುತ್ತವೆ. ಇದೆಲ್ಲದರ ಮೇಲೆ, ಫಲಿತಾಂಶಗಳು ವ್ಯಾಖ್ಯಾನಕ್ಕೆ ತೆರೆದದ್ದೇ ಆಗಿವೆ. ಅವು ವಿಜ್ಞಾನವೆಲ್ಲವನ್ನೂ ಸ್ವಲ್ಪ ನಂಬಲರ್ಹವೆಂದು ಮಾಡುತ್ತವೆ.
ಈ ಕಾರಣಗಳಿಗಾಗಿಯೇ ಜ್ಯೋತಿಷ್ಯವು ನಂಬಲರ್ಹವಾದ ವಿಜ್ಞಾನವಾಗಿ ಈ ದಿನಗಳಲ್ಲಿ ಕಂಡು ಬರುತ್ತಿಲ್ಲ.
ಜ್ಯೋತಿಷ್ಯವನ್ನು ರುಜುವಾತು ಪಡಿಸಲಿಕ್ಕಾಗಲೀ ಅಥವಾ ರುಜುವಾತು ಪಡಿಸದಿರುವುದಕ್ಕಾಗಲೀ ನಾನಿಲ್ಲಿ ಇಲ್ಲ. ನಾನಿಲ್ಲಿರುವುದು ಅದು ಮೋಸಗೊಳಿಸದಂತೆ ಮಾಡಲು.
ಜ್ಯೋತಿಷ್ಯ ನಿಮ್ಮ ಮೇಲೆ ಕೆಲಸ ಮಾಡುತ್ತಿರುವ ಪ್ರಭಾವಗಳ ಬಗ್ಗೆ ಒಂದು ಪ್ರಾಮಾಣಿಕವಾದ ಅಭಿಪ್ರಾಯವನ್ನು ಕೊಡಬಲ್ಲದು. ಇದು ನಿಮಗೆ ಸಮಸ್ಯೆಯನ್ನು ತೋರಿಸಬಲ್ಲದೇ ಹೊರತು ಪರಿಹಾರವನ್ನು ತೋರಿಸಲಾರದು.
ಧ್ಯಾನ ನಿಮಗೆ ಪರಿಹಾರವನ್ನು ತೋರಿಸಬಲ್ಲದು. ಧ್ಯಾನವೆಂದರೆ ಬೇರೇನಲ್ಲ
- ಸೃಷ್ಟಿಯ ಶಕ್ತಿಯೆಡೆಗೆ ಸಂಬಂಧವೇರ್ಪಡುವಂತಹ ಮಾರ್ಗ. ಸೂರ್ಯನಿಗೂ, ಚಂದ್ರನಿಗೂ ಮತ್ತು ನಿಮಗೂ ಮಾರ್ಗದರ್ಶನ ಮಾಡುವಂತಹ ಶಕ್ತಿ. ನೀವು ಯಾವಾಗ ಸೃಷ್ಟಿಯೊಡನೆ ಸಾಮರಸ್ಯದಿಂದ ಕೆಲಸ ಮಾಡುತ್ತೀರೋ, ನಿಮಗೆ ಸ್ವಾಭಾವಿಕವಾಗಿಯೇ ಈ ಪ್ರಭಾವಗಳಿಂದ ಉತ್ತಮ ರಕ್ಷಣೆ ಸಿಗುತ್ತದೆ. ಯಾರಾದರೂ ಮಳೆಯಲ್ಲಿ ತೋಯ್ದರೆ ಶೀತ ಹಿಡಿಯುತ್ತದೆ. ಆದರೆ ಮಳೆ ಅಂಗಿ ಧರಿಸಿದಲ್ಲಿ ಖಂಡಿತವಾಗಿಯೂ ಸಹಾಯವಾಗುತ್ತದೆ.
ಪೌರ್ಣಮಿಯಂದು ಎಲ್ಲರೂ ಹುಚ್ಚರಾಗುತ್ತಾರೇನು ?
ಆ ರೀತಿ ಇಲ್ಲ! ಪೂರ್ಣ ಚಂದ್ರ ಈಗಾಗಲೇ ನಿಲುವಿಲ್ಲದ ಮನಸ್ಸನ್ನು ಮಾತ್ರ ನಾಟುತ್ತದೆ. ನಿಮ್ಮ ಸ್ಥಿತಿ ದೃಢವಾಗಿದ್ದಲ್ಲಿ ಈ ವಿಷಯಗಳು ನಿಮ್ಮನ್ನೇನೂ ಮಾಡಲಾರವು.
ಧ್ಯಾನ ನಿಮ್ಮನ್ನು ಆಧ್ಯಾತ್ಮಿಕವಾಗಷ್ಟೇ ಅಲ್ಲದೆ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಹ ಶಕ್ತಿಯುತವನ್ನಾಗಿ ಮಾಡುತ್ತದೆ.
ಧ್ಯಾನದಿಂದ ನೀವು ಜ್ಯೋತಿಷ್ಯದಿಂದಾಚೆಗೆ ಹೋಗಬಹುದು.