8. / ನದಿಯನ್ನು ಹೇಗೆ ದಾಟುವುದು /
This text was machine-transcribed from the printed book and may contain errors. Select the words and choose “Report a mistake”.
ಇದು ಒಂದು ಝೆನ್ ಬೌದ್ಧಧರ್ಮದ ಕಥೆ.
ಒಬ್ಬ ಗುರು ಮತ್ತು ಅವನ ಶಿಷ್ಯನು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಎರಡು ಹಳ್ಳಿಗಳ ನಡುವೆ, ಆಳವಿಲ್ಲದ ಒಂದು ಹೊಳೆ ಹರಿಯುತ್ತಿತ್ತು. ಸಾಮಾನ್ಯವಾಗಿ ನೀರಿನಲ್ಲಿ ನಡೆದು ಅವರು ಈ ಹೊಳೆಯನ್ನು ದಾಟುತ್ತಿದ್ದರು. ಆದರೆ ಈ ಸಾರಿ, ಭಾರಿ ಮಳೆ ಬಿದ್ದಿದ್ದರಿಂದ ಹೊಳೆಯು ಒಂದು ಚಿಕ್ಕ ನದಿಯಂತೆ ಉಬ್ಬಿಕೊಂಡಿತ್ತು. ಆಳ ಜಾಸ್ತಿ ಆಗಿದ್ದರಿಂದ ಅವರಿಗೆ ನೀರಿನಲ್ಲಿ ನಡೆಯುವುದಕ್ಕೆ ಸಾಧ್ಯವಾಗಲಿಲ್ಲ.
ಶಿಷ್ಯನ ಮನಸ್ಸಿನಲ್ಲಿ ಗಾಬರಿಯು ಉಂಟಾಗಿ ಅವನು ಗುರುವನ್ನು ಕೇಳಿದ, "ಗುರುಗಳೇ, ಈ ನದಿಯನ್ನು ದಾಟುವುದಕ್ಕೆ ನಾವು ಪ್ರಯತ್ನ ಪಡಬೇಕೆ ?"
ಕಣ್ಣುಗಳು ವಿನೋದದಿಂದ ಮಿನುಗುತ್ತಾ ಗುರುಗಳು ಉತ್ತರ ಕೊಟ್ಟರು. "ಮಗನೇ ಖಂಡಿತ ನದಿಯನ್ನು ದಾಟಬೇಕು. ಆದರೆ ಒಂದು ಮಾತು ಜ್ಞಾಪಕ ಇಟ್ಟುಕೋ. ನಿನ್ನ ಪಾದಗಳು ಒದ್ದೆ ಆಗದಂತೆ ನೋಡ್ಕೋ !"
ಇದೇ ಸಂನ್ಯಾಸತ್ವದ ನಿಜವಾದ ಅರ್ಥ
/ ಸಂ ಸಾರದ ನದಿಯನ್ನು ನಿಮಗೆ ಸಂಸಾರದಿಂದ ಒದ್ದೆ ಮಾಡಿಕೊಳ್ಳದೆ ದಾಟುವುದಕ್ಕೆ ಸಾಧ್ಯವಾದರೆ, ನೀವು ಸಂನ್ಯಾಸತ್ವವನ್ನು ಪಡೆದಿದ್ದೀರಾ! / ಒಂದು ವೇಳೆ ನಾನು ದೊಡ್ಡ ಜ್ಞಾನಿ ಆಗಿರಬಹುದು ಎಂದು ಯೋಚಿಸಿತು. ಈ ರೀತಿ ಯೋಚಿಸುತ್ತಾ ಅದು ಬಹಳ ಹೆಮ್ಮೆಯಿಂದ ನಡೆಯಲು ಆರಂಭಿಸಿತು. ಬೀದಿಯಲ್ಲಿರುವ ಪ್ರಾಣಿಗಳನ್ನೆಲ್ಲ ದುರಹಂಕಾರದ ಭಾವನೆಯಿಂದ ನೋಡಿತು. ಸಂಜೆಯಾಗುತ್ತಿದ್ದಂತೆ ಕತ್ತೆಗೆ ತನ್ನ ಬೆನ್ನ ಮೇಲೆ ಇದ್ದ ಹೊರೆಯಿಂದ ಸುಸ್ತು ಉಂಟಾಯಿತು. ಈ ಹೊರೆಯನ್ನು ಎತ್ತಿ ನಾನು ಏಕೆ ಒದ್ದಾಡಬೇಕು ? ಹೇಗಿದ್ದರೂ ನಾನು ಈಗ ಮಹಾತ್ಮಾನಾಗಿದ್ದೇನೆ. ಯಾರಿಗೂ ಮರ್ಯಾದೆಯನ್ನು ತೋರಿಸುವ ಅವಶ್ಯಕತೆ ನನಗೆ ಇಲ್ಲ ! ಎಂದು ಯೋಚಿಸಿತು.
ಹೀಗೆ ಯೋಚಿಸಿ ಕತ್ತೆಯು ಮೇಲಕ್ಕೆ ಹಾರಿ ತನ್ನ ಬೆನ್ನ ಮೇಲಿದ್ದ ದೇವತೆಯ ಪ್ರತಿಮೆಯನ್ನು ಕೆಳಗೆ ಬೀಳಿಸಿತು. ಈ ದೃಶ್ಯವನ್ನು ಅಲ್ಲಿದ್ದ ಜನರೆಲ್ಲ ಭಯದಿಂದ ನೋಡಿದರು. ಇದರ ಮುಂದಕ್ಕೆ ಏನು ನಡೆಯಿತು ಅಂತ ನೀವೇ ಕಲ್ಪನೆ ಮಾಡಬಹುದು - ನಾನು ಹೇಳಬೇಕಾಗಿಲ್ಲ !
/ ನೀವು ದೈವ ಶಕ್ತಿಯ ಒಂದು ಉಪಕರಣವೆಂದು ನಿಮ್ಮಲ್ಲಿ ಪ್ರತಿ ಕ್ಷಣ ಜಾಗೃತಿ ಇರಬೇಕು. ನಿಮ್ಮ ಅಹಂಕಾರವನ್ನು ಎಂದೂ ಅಡ್ಡಿ ಆಗಲು ಬಿಡಬೇಡಿ. ನಿಮ್ಮ ಅಹಂಕಾರವನ್ನು ತ್ಯಜಿಸಿದರೆ ವಿಶ್ವಶಕ್ತಿಯು ನಿಮ್ಮನ್ನು ಕಾಪಾಡುತ್ತದೆ. ಮಸಿ ಆಗಿದ್ದ ನಿಮ್ಮ ದೀಪವನ್ನು ಆರಿಸಿಬಿಟ್ಟು ಬಾಗಿಲನ್ನು ತೆರೆಯಿರಿ ; ದೈವ ಶಕ್ತಿಯ ಅದ್ಭುತ ಬೆಳದಿಂಗಳು ನಿಮ್ಮ ಮನೆಯಲ್ಲಿ ಹರಡಲಿ !/