5. / ಕುರುಡ ಮತ್ತು ಋಷಿ /
This text was machine-transcribed from the printed book and may contain errors. Select the words and choose “Report a mistake”.
ಒಬ್ಬ ಕುರುಡನು ಹಿಮಾಲಯದ ಬುಡದಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ. ಒಂದು ದಿನ ಅವನು ತನ್ನ ಮನೆಯಿಂದ ಪಕ್ಕದ ಹಳ್ಳಿಗೆ ಹೊರಟನು. ಅವನಿಗೆ ದಾರಿ ಚೆನ್ನಾಗಿ ಅಭ್ಯಾಸವಿತ್ತು - ಆದರೆ ಹಿಂದಿನ ರಾತ್ರಿ ಭಾರಿ ಹಿಮ ಬಿದ್ದದ್ದರಿಂದ ರಸ್ತೆಯು ವದ್ದೆ ಆಗಿ ಜಾರುತ್ತಿತ್ತು.
ಹೀಗೆ ನಡೆಯುತ್ತಿರುವಾಗ ಇದ್ದಕ್ಕಿದಂತೆ, ರಸ್ತೆಯಲ್ಲಿ ಬಿದ್ದಿರುವ ಯಾವುದೋ ವಸ್ತು ಅಡ್ಡಿ ಬಂದು ಅವನು ಎಡವಿಬಿದ್ದ. ಆ ವಸ್ತುವನ್ನು ಅವನು ಎತ್ತಿ ಸ್ಪರ್ಶಿಸಿದಾಗ ಅವನಿಗೆ ಅದು ಒಂದು ಕೋಲಿನ ಆಕಾರದಲ್ಲಿದೆ ಎಂದು ಅನಿಸಿತು. ಈ ಕೋಲನ್ನು ಅವನು ಮುಂದೆ ನಡೆಯುವುದಕ್ಕೆ ಆಧಾರವಾಗಲು ಉಪಯೋಗಿಸಬಹುದು ಎಂದು ಅವನಿಗೆ ಸಂತೋಷವಾಯಿತು.
ಹೀಗೆ ಪ್ರಯಾಣ ಮಾಡುತ್ತಿದ್ದಾಗ ಅವನು ಒಂದು ಮರದ ಹತ್ತಿರ ಬಂದ - ಆ ಮರದ ಕೆಳಗೆ ಒಬ್ಬ ಋಷಿ ಕೂತಿದ್ದರು. ಅವರು ಕುರುಡನನ್ನು ನೋಡಿ ಎಚ್ಚರಿಕೆ ಕೊಟ್ಟರು "ಹುಷಾರಾಗಿರು! ನೀನು ಕೈಯಲ್ಲಿ ಹಿಡಿದಿರುವುದು ಒಂದು ಗಡ್ಡೆಗಟ್ಟಿರುವ ಹಾವು!"
ಕುರುಡನು ಆಶ್ಚರ್ಯದಿಂದ ಹೇಳಿದ "ಹಾವು? ಇಲ್ಲ ಇಲ್ಲ. ಇದು ನನಗೆ ಬಹಳ ಉಪಯೋಗವಾದ ಒಂದು ಆಧಾರ!" ಕುರುಡನಿಗೆ ಗೊಂದಲವುಂಟಾಯಿತು. ಋಷಿ ಹೇಳಿದ್ದು ಸರಿ ಇರಬಹುದೆ? ಆ ಕೋಲನ್ನು ಎಸಿದುಬಿಡಬೇಕೆ? ಆದರೂ ಸಹ ಅವನು ಅನುಮಾನಿಸಿದ. ಎಷ್ಟು ಒಳ್ಳೆ ಕೋಲು ...
ಅವನು ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಆ 'ಕೋಲು' ತನ್ನ ವಿಷದ ಹಲ್ಲುಗಳನ್ನು ಅವನ ಕೈಗೆ ಊರಿತು ಮತ್ತು ಆ ಕ್ಷಣವೇ ಅವನನ್ನು ಕೊಂದು ಹಾಕಿತು.
/ ನೀವು ಒಬ್ಬ ಗುರುವನ್ನು ಹುಡುಕಿಕೊಂಡು ಹೊರಟಾಗ ನಿಮ್ಮನ್ನು ನೀವು ಸರಿಯಾಗಿ ಪರೀಕ್ಷಿಸಿಕೊಳ್ಳಿ. ನಿಮ್ಮನ್ನು ಹೊರುತ್ತಿರುವ ಕೋಲು ಯಾವುದು? ಹಣವೆ? ಅಧಿಕಾರವೆ? ಬುದ್ದಿಯೇ? ಅಭಿಪ್ರಾಯಗಳೆ ?
ಗುರುಗಳಿಗೆ ಇದಾವುದರ ಅವಶ್ಯಕತೆಯೂ ಇಲ್ಲ. ಇವುಗಳೆಲ್ಲ ವಿಷಯುಕ್ತ ಹಾವುಗಳು ಎಂದು ಅವರು ನಿಮ್ಮನ್ನು ಎಚ್ಚರಿಸುತ್ತಾರೆ.
ಆ 'ಕೋಲನ್ನು' ನೀವು ಗಟ್ಟಿಯಾಗಿ ಹಿಡಿದುಕೊಂಡೇ ಇರುತ್ತೀರೋ? ಅಥವಾ ಅದನ್ನು ಬಿಸಾಡಲು ನಿರ್ಧರಿಸುತ್ತೀರೋ, ಅದು ನಿಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ. /
"ಚಿಂತಿಸಬೇಡ, ನಾನು ನಿನ್ನನ್ನು ತಿನ್ನುವುದಿಲ್ಲ. ನಿಜ ಏನೆಂದರೆ, ನಾನೂ ಒಂದು ಕುರಿಯೇ. ನೋಡಕ್ಕೆ ಸ್ವಲ್ಪ ಬೇರೆ ತರಹ ಕಾಣಿಸುತ್ತೇನೆ, ಅಷ್ಟೆ" ಎಂದು ಸಿಂಹವು ಮೃದುವಾಗಿ ಹೇಳಿತು.
ಮರಿಯ ಮನಸ್ಸಿನಲ್ಲಿ ಇನ್ನು ಅನುಮಾನ ಇತ್ತು - ಅದಕ್ಕೆ ಸಿಂಹವು ತನ್ನ ಮಾತನ್ನು ನಿಜವೆಂದು ಸಾಬೀತು ಪಡಿಸಲು ಮರಿಯನ್ನು ಬಿಡುಗಡೆ ಮಾಡಿತು. ಆದರೆ ಪುನಃ ಮರುದಿನ ಬಂದು ಮರಿಯನ್ನು ಮತ್ತೊಮ್ಮೆ ಎಳೆದುಕೊಂಡು ಹೋಯಿತು. ಈ ಸಾರಿ ಮರಿಯ ಭಯ ಸ್ವಲ್ಪ ಕಡಿಮೆ ಆಗಿದ್ದರಿಂದ ಸಿಂಹದ ಜೊತೆಗೆ ಇನ್ನೂ ಸ್ವಲ್ಪ ಜಾಸ್ತಿ ಹೊತ್ತು ಕಳೆಯಿತು. ಪ್ರತಿದಿವಸವೂ ಈ ನಾಟಕವು ಮುಂದುವರೆಯಿತು ಮತ್ತು ಮೆಲ್ಲನೆ ಮರಿಯು ಸಿಂಹವನ್ನು ಮೆಚ್ಚಲು ಆರಂಭಿಸಿತು. ಸ್ವಂತ ಇಚ್ಛೆಯಿಂದ ತನ್ನ ಹೊಸ, ಮನೋರಂಜಕವಾದ ಮಿತ್ರನನ್ನು ಭೇಟಿ ಮಾಡಲು ಹೊರಡುತ್ತಾಯಿತ್ತು.
ಒಂದು ದಿನ ಸಿಂಹವು ಬಹಳ ಚತುರತೆಯಿಂದ ಮೆಲ್ಲನೆ ಕೇಳಿತು, "ನಾವು ಏಕೆ ಕಾಡಿನ ಒಳಭಾಗಕ್ಕೆ ಹೋಗಬಾರದು? ಅಲ್ಲಿರುವ ನದಿಯ ನೀರನ್ನು ಏಕೆ ನಾವು ಕುಡಿಯಬಾರದು?"
"ಬೇಡ ! ನನಗೆ ಕಾಡು ಪ್ರಾಣಿಗಳನ್ನು ಕಂಡರೆ ಬಹಳ ಭಯ !" ಎಂದು ಮರಿಯು ಗಾಬರಿಯಿಂದ ಚೀರಿತು.
" ಅಯ್ಯೋ ಮೂರ್ಖ ! ನಿನ್ನನ್ನು ನೋಡಿದ ಕೂಡಲೆ ಅವು ಭಯದಿಂದ ತಲೆ ತಪ್ಪಿಸಿ ಓಡುತ್ತವೆ" ಎಂದು ಸಿಂಹವು ಯೋಚಿಸಿತು ಆದರೆ ಗಟ್ಟಿಯಾಗಿ ಹೇಳಿತು "ಚಿಂತಿಸಬೇಡ, ನಾನು ನಿನ್ನನ್ನು ಕಾಪಾಡುತ್ತೇನೆ "
7. / ಕಳೆದು ಹೋಗಿದ್ದ ನಾಣ್ಯ /
ಒಂದು ದಿನ ನಿತ್ತಿ ಮೊದಲಿಯಾರರು ಅವರ ಮನೆಯ ಅಂಗಳದಲ್ಲಿ ಯಾವುದೋ ವಸ್ತುವನ್ನು ಬಹಳ ಆಸಕ್ತಿಯಿಂದ ಹುಡುಕುತ್ತಿರುವಂತೆ ಕಾಣಿಸಿದರು. ಅವರ ಹೆಂಡತಿಯು ಅವರನ್ನು ಅದರ ವಿಷಯ ವಿಚಾರಿಸಿದಾಗ ತಾವು ಒಂದು ನಾಣ್ಯವನ್ನು ಕೆಳಗೆ ಬೀಳಿಸಿ ಕೊಂಡಿರುವುದಾಗಿ, ಉತ್ತರಿಸಿದರು. ಹೆಂಡತಿಯೂ ಆವಾಗ ನಾಣ್ಯವನ್ನು ಹುಡುಕಲು ಸಹಾಯ ಮಾಡಿದಳು. ಸ್ವಲ್ಪ ಹೊತ್ತಿನಲ್ಲಿ ನೆರೆಹೊರೆಯಲ್ಲಿರುವ ಸುಮಾರು ಎಲ್ಲ ಜನರೂ ನಾಣ್ಯವನ್ನು ಹುಡುಕಲು ಆರಂಭಿಸಿದರು. ಆದರೂ ಏನು ಪ್ರಯೋಜನವಾಗಲಿಲ್ಲ !
"ನೀವು ನಾಣ್ಯವನ್ನು ಬೀಳಿಸಿದ ಸರಿಯಾದ ಸ್ಥಳ ಯಾವುದು ?" ಎಂದು ಛಕ್ಕನೆ ಆ ಗುಂಪಿನಲ್ಲಿದ್ದ ಒಬ್ಬ ಯುವಕನು ನಿತ್ತಿಯನ್ನು ಕೇಳಿದ. "ಅರ್ಧ ಗಂಟೆ ಕಾಲ ಹುಡುಕಿದ ಮೇಲೆಯೂ ಏನೂ ಪರಿಣಾಮವಾಗಲಿಲ್ಲವಲ್ಲ !"
"ನಾನು ನಾಣ್ಯವನ್ನು ಮನೆಯ ಒಳಗೆ ಕಳೆದುಕೊಂಡೆ" ಎಂದು ನಿತ್ತಿ ಉತ್ತರಕೊಟ್ಟರು.
"ಹಾಗಾದರೆ ನಾವು ಇಲ್ಲಿ ಏಕೆ ಹುಡುಕುತ್ತಿದ್ದೇವೆ?" ಎಂದು ಗುಂಪಿನಲ್ಲಿದ್ದ ಒಬ್ಬ ಆಶ್ಚರ್ಯದಿಂದ ಕೇಳಿದ.
"ಅದೇನು ಸಮಸ್ಯೆ ಎಂದರೆ ನಮ್ಮ ಮನೆಯೊಳಗೆ ದೀಪ ಇಲ್ಲ. ಇಲ್ಲಾದರೆ ಬೀದಿಯ ದೀಪವು ಇದೆ. ಇದರ ಬೆಳಕಿನಲ್ಲಿ ನಾವು ನಾಣ್ಯವನ್ನು ಹುಡುಕಬಹುದು"