4. / ಹಾರುವುದನ್ನು ಕಲಿಯುವುದು /
This text was machine-transcribed from the printed book and may contain errors. Select the words and choose “Report a mistake”.
ಇದು ಒಂದು ಆಧುನಿಕ ಕಟ್ಟುಕಥೆ!
ಮೊದಲನೆಯ ವಿಶ್ವಯುದ್ಧವಾದ ನಂತರ ಏಷ್ಯಾಯಾದ ಒಂದು ಆದಿವಾಸಿಯರ ವಸತಿಯಲ್ಲಿ ಒಂದು ಬೈಪ್ಲೇನನ್ನು (ದ್ವಿಫಲಕ ವಿಮಾನ) ತ್ಯಜಿಸಲಾಗಿತ್ತು. ಯಾವುದೇ ವಿಮಾನ ಯಂತ್ರವನ್ನು ಎಂದಿಗೂ ನೋಡದೆ ಇದ್ದ, ಅದರ ಚಕ್ರಗಳನ್ನು ನೋಡಿ, ಆದಿವಾಸಿಯರು ಅದು ಒಂದು ವಿಚಿತ್ರವಾದ ಎತ್ತಿನ ಗಾಡಿ ಎಂದು ಊಹಿಸಿದರು. ಈ ಹೊಸ ತರಹದ ಎತ್ತಿನ ಗಾಡಿಯ ವಿಷಯ ಹಳ್ಳಿಯಲ್ಲೆಲ್ಲ ಹರಡಿತು. ಬೈಪ್ಲೇನನ್ನು ಎತ್ತುಗಳಿಗೆ ಕಟ್ಟಿ ಅದನ್ನು ಬಹಳ ಹೆಮ್ಮೆಯಿಂದ ವಸತಿಯೆಲ್ಲ ಸುತ್ತಿಸಿದರು. ಹಳ್ಳಿಯ ಜನರು ಈ ದೃಶ್ಯವನ್ನು ಬಹಳ ಮೆಚ್ಚುಗೆಯಿಂದ ನೋಡಿದರು.
ಕೆಲವು ದಿನಗಳನಂತರ ನಗರಕ್ಕೆ ಭೇಟಿ ಕೊಟ್ಟಿದ್ದ ವಸತಿಯ ಒಬ್ಬ ಯುವಕ ವಾಪಸು ಬಂದ. ಬಹಳ ಚತುರನಾದ ಈ ಯುವಕನು ಬೈಪ್ಲೇನಿನಲ್ಲಿರುವ ಚಿಲಕಗಳು ಮತ್ತು ವತ್ತುಗುಂಡಿಗಳನ್ನು ಕಂಡು ಇವುಗಳದ್ದು ಖಂಡಿತ ಏನೋ ಉಪಯೋಗ ಇದೆ ಎಂದು ತೀರ್ಮಾನಿಸಿದ. ಏನೂ ಗೊತ್ತುಗುರಿ ಇಲ್ಲದೆ ಅವನು ಅವುಗಳನ್ನು ಹೀಗೆ ಹಾಗೆ ಒತ್ತಿ, ಅಲಗಾಡಿಸಿ ನೋಡಿದಾಗ ಬೈಪ್ಲೇನಿನ ಚಕ್ರಗಳು ತಿರುಗಿ ಅದು ನೆಲದ ಮೇಲೆ ಸುತ್ತಲು ಶುರು ಆಯಿತು. ಇದನ್ನು ನೋಡಿ ಆದಿವಾಸಿಯರು ಬಹಳ ಆಶ್ಚರ್ಯ ಪಟ್ಟರು - ಎತ್ತಿನಗಾಡಿ ತಾನಾಗಿ ತಾನೇ ಓಡಾಡುತ್ತಾಯಿದೆ ! ದೂರದಲ್ಲಿರುವ ಹಳ್ಳಿಗಳಲ್ಲಿ ಟ್ರ್ಯಾಕ್ಟರ್ಗಳನ್ನು ನೋಡಿದ್ದ ಯುವಕನು ಇದು ಎತ್ತಿನ ಗಾಡಿ ಅಲ್ಲ ಹೊರತು ಇದು ಒಂದು ಟ್ರ್ಯಾಕ್ಟರ್ ಎಂದು ಪ್ರಕಟಣೆ ಮಾಡಿದ! ಅರಿವಿಲ್ಲದ ಆದಿವಾಸಿಗಳು ಈ ಮಾತನ್ನು ಒಪ್ಪಿಕೊಂಡರು ಮತ್ತು ಬೈಪ್ಲೇನನ್ನು ಒಂದು ಟ್ರ್ಯಾಕ್ಟರ್ ಮಾಡುವ ಕೆಲಸಕ್ಕೆ ಬಳಸಲು ಆರಂಭಿಸಿದರು. (ಬಹಳ ಅನಾನುಕೂಲದ ಟ್ರ್ಯಾಕ್ಟರ್ ಆಗಿರಬಹುದು!)
ಬಹಳ ದಿನಗಳು ಕಳೆದ ಮೇಲೆ ಒಬ್ಬ ಸೈನಿಕನು ಆಕಸ್ಮಾತಾಗಿ ಈ ವಸತಿಗೆ ತಲುಪಿದ. ಯುದ್ಧಾನುಭವಿಯಾಗಿದ್ದ ಈ ವ್ಯಕ್ತಿಯು ಬೈಪ್ಲೇನಿನ 'ಇಂಜಿನ್'ನನ್ನು ವೇಗವಾಗಿ ಓಡಿಸಿ, 'ಗೇರ್'ಗಳನ್ನು ಚಲಿಸಿ ಅದನ್ನು ಆಕಾಶಕ್ಕೆ ಹಾರಿಸಿಕೊಂಡು ಹೋದ - ಹೀಗೆ ಮಾಡಿ, ಅವನು ಬೈಪ್ಲೇನನ್ನು ನಿರ್ಮಿಸಿದ ಉದ್ದೇಶವನ್ನು ಪೂರ್ಣ ಮಾಡಿದ.
/ ಇದೇ ನಿಮ್ಮ ಜೀವನದ ಕಥೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ಜೀವನವನ್ನೂ, ನಮ್ಮ ಸಾಮರ್ಥ್ಯವನ್ನೂ ಒಂದು ಎತ್ತಿನಗಾಡಿಯಂತೆ ಬಳಸುತ್ತೇವೆ. ಕೆಲವರು ಅದನ್ನು ಟ್ರ್ಯಾಕ್ಟರಿನ ಸಮಾನ ಉಪಯೋಗಿಸುತ್ತಾರೆ. ಆದರೆ ನಮ್ಮಲ್ಲಿ ಎಷ್ಟು ಜನ ತಮ್ಮ ಸಾಮರ್ಥ್ಯವನ್ನು ಒಂದು ವಿಮಾನಯಂತ್ರಕ್ಕೆ ಪರಿವರ್ತಿಸಬಲ್ಲೆವು? ಹಾರುವ ಶಕ್ತಿ ನಮ್ಮ ಒಳಗೆ ಇದೆ ಆದರೆ 'ಗೇರ್'ಗಳನ್ನು ನಡೆಸುವುದಕ್ಕೆ ಕಲಿಯುವವರೆಗೆ, ಈ ಶಕ್ತಿ ಅಪ್ರಕಟಿತವಾಗಿ ನಿಮ್ಮ ಒಳಗೆ ಅಡಗಿಕೊಂಡೇ ಇರುವುದು. ಈ 'ಗೇರ್'ಗಳೇ ನಿಮ್ಮನ್ನು ಬಹಳ ತಗ್ಗಾದ ಸ್ವರದಿಂದ ಬಹಳ ಎತ್ತರವಾದ ಸ್ವರಕ್ಕೆ ಏರಿಸುವ, ನಾನು ಕಲಿಸಿಕೊಡುವ 'ಮೆಡಿಟೇಷನ್' ಪದ್ಧತಿಗಳು. ನೀವು ಬಳಸಿದ ಪದ್ಧತಿ ಯಾವುದೇ ಆಗಿದ್ದರೂ, ಚಿಂತೆ ಇಲ್ಲ, ಅದು ನಿಮ್ಮಲ್ಲಿ ಮೇಲಕ್ಕೆ ಹಾರುವ ಸಾಧ್ಯತೆ ಉಂಟುಮಾಡಿದರೆ ಸರಿ! /