KAILASA Library/ಒಂದು ಸಣ್ಣ ಕಥೆ/3. / 'ಡ್ರೈವರ್' ಯಾರು? /Sign in
ಒಂದು ಸಣ್ಣ ಕಥೆ

3. / 'ಡ್ರೈವರ್' ಯಾರು? /

This text was machine-transcribed from the printed book and may contain errors. Select the words and choose “Report a mistake”.

ಒಮ್ಮೆ ನಿತ್ತಿ ಮೊದಲಿಯಾರರು, ಒಂದು 'ಕಾರು' ಕೊಂಡುಕೊಂಡು ಮೊದಲನೆಯ ಸವಾರಿ ಮಾಡಲು ಹೊರಟರು. ಊರೆಲ್ಲ ಸವಾರಿ ಮಾಡುತ್ತಿದ್ದಾಗ ಜನಗಳು ಅವರನ್ನು ಮೆಚ್ಚಿಕೆಯಿಂದ ನೋಡುತ್ತಾ ನಿಂತರು. ಆದರೆ ನಿಜ ಏನು ಅಂದರೆ ನಿತ್ತಿ ಬಹಳ ಗಾಬರಿಯ ಸ್ಥಿತಿಯಲ್ಲಿದ್ದರು.

ಅದು ಏಕೆ ಅಂದರೆ, ಅವರು ಕಾರನ್ನು 'ಸ್ಟಾರ್ಟ್' ಮಾಡಿದ ಕೂಡಲೆ ಭಕ್ಕನೆ ಒಂದು ವಿಷಯ ಹೊಳೆಯಿತು - ಅವರು ಕಾರನ್ನು ನಿಲ್ಲಿಸುವ ವಿಧಾನ ಒಂದು ಬಿಟ್ಟು, ಬೇರೆ ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದರು !

ಆದರೆ ಅದೃಷ್ಟವಶಾತ್, ಕಾರು ಒಂದು ಮರಕ್ಕೆ ಮಾತ್ರ ಡಿಕ್ಕಿ ಹೊಡೆದು ನಿಂತಿತು!

ಹಾದು ಹೋಗುವ ಒಬ್ಬ ವ್ಯಕ್ತಿ ಆಶ್ಚರ್ಯದಿಂದ ನಿತ್ತಿಯನ್ನು ವಿಚಾರಿಸಿದ, "ನಿಮಗೆ ಏನು 'ಪ್ರಾಬ್ಲೆಮ್'? ಡ್ರೈವ್ ಮಾಡುವುದಕ್ಕೆ ಬರುವುದಿಲ್ಲವಾ?"

"ಖಂಡಿತ ಬರತ್ತೆ" ಎಂದು ನಿತ್ತಿ ಕೋಪದಿಂದ ಕೂಗಿದರು. "ನನಗೆ ಕೇವಲ ನಿಲ್ಲಿಸುವುದಕ್ಕೆ ಬರೋದಿಲ್ಲ!"

/ ಹಾಗಾದರೆ ನೀವು ಏನು ಹೇಳುತ್ತೀರಾ ? ನಿತ್ತಿ ಕಾರನ್ನು ಓಡಿಸುತ್ತಿದ್ದರೋ ಅಥವಾ ಕಾರು ನಿತ್ತಿಯನ್ನು ಓಡಿಸುತ್ತಿತ್ತೋ? ನೀವು ನಿತ್ತಿಯನ್ನು ತಪ್ಪುಗಾರ ಎಂದು ತೀರ್ಮಾನ ಮಾಡುವದಕ್ಕೆ ಮುಂಚೆ ಯೋಚನೆ ಮಾಡಿ ನೋಡಿ - ನೀವು ಕೂಡ, ನಿಲ್ಲಿಸುವ ವಿಧಾನ ಗೊತ್ತಿಲ್ಲದೆ ಇರುವ ಒಂದು ವಾಹನವನ್ನು ಓಡಿಸುತ್ತಿದ್ದೀರಾ - ನಿಮ್ಮ ಮನಸ್ಸು!

ನಿಮ್ಮ ಒಳಗಿನ 'ಹರಟೆ'ಯನ್ನು ಒಂದು ಕ್ಷಣಕ್ಕಾದರೂ ನಿಲ್ಲಿಸಲು ನೋಡಿ. ಸಾಧ್ಯವೇ? ಪ್ರಯತ್ನ ಮಾಡಿದರೂ ನಿಮ್ಮ ಯೋಚನೆಗಳ ಪ್ರವಾಹವನ್ನು 'ಕಂಟ್ರೋಲ್' ಮಾಡುವುದು ಕಷ್ಟವಲ್ಲವೇ ? ಅದು ಹೇಗೆ ಅಂದರೆ ನಿಮ್ಮನ್ನು ಒಂದು ಸೀಟ್‌ಬೆಲ್ಟ್ ಇಂದ ಕಟ್ಟಿ, ಹಾಕಿ ಕಾರು ತಾನೆ ಇಷ್ಟ ಬಂದ ದಿಕ್ಕಿನಲ್ಲಿ ಓಡುತ್ತಾಯಿರುವ ಹಾಗೆ !

ಶಾರೀರಿಕ ಆಪತ್ತಿನಲ್ಲಾದರೆ ನಾವು ನಮ್ಮ ಈ ಒಂದು ಜೀವವನ್ನು ಮಾತ್ರ ಕಳೆದುಕೊಳ್ಳಬಹುದು - ಆದರೆ ನಾವು ನಮ್ಮ ಒಳಗಿನ ಹರಟೆಗೆ ಗುಲಾಮಿಗಳಾದರೆ ನಾವು ಜನ್ಮ ಜನ್ಮಾಂತರ ನಮ್ಮ ಮನಸ್ಸು ರೂಪಿ ವಾಹನದ ವಶದಲ್ಲಿ ಇರಬೇಕಾಗುತ್ತದೆ.

ಅದಕ್ಕೆ, ನೀವು ಪ್ರಪಂಚದ ಸಂಚಾರಕ್ಕೆ ಖಂಡಿತ ನಿಮ್ಮ ಮನಸ್ಸನ್ನು ಉಪಯೋಗಿಸಿಕೊಳ್ಳಿ ಆದರೆ - 'ಯಾರು ಡ್ರೈವರ್' ಎಂದು ಖಂಡಿತ ಮಾಡಿಕೊಳ್ಳಿ.! /