KAILASA Library/ಒಂದು ಸಣ್ಣ ಕಥೆ/1. / ಯಾರೂ ಕರೆಯದ ಅತಿಥಿ /Sign in
ಒಂದು ಸಣ್ಣ ಕಥೆ

1. / ಯಾರೂ ಕರೆಯದ ಅತಿಥಿ /

This text was machine-transcribed from the printed book and may contain errors. Select the words and choose “Report a mistake”.

ರೋಗ ಮತ್ತು ನೋವನ್ನು ನಿಮ್ಮ ವೈರಿಗಳೆಂದು ತಿಳಿದುಕೊಂಡು ಅವುಗಳನ್ನು ಏಕೆ ಆಕ್ಷೇಪಣೆ ಮಾಡುತ್ತೀರಾ? ಅವುಗಳು ನೀವು ಗೌರವಿಸಿ, ಆಮಂತ್ರಿಸಿದ ನಿಮ್ಮ ಪ್ರೀತಿಯ ಸ್ನೇಹಿತರಲ್ಲವೆ?

ಏನು, ನಾ ಹೇಳುವುದರಲ್ಲಿ ನಿಮಗೆ ನಂಬಿಕೆ ಇಲ್ಲವೆ? ಕೇಳಿ:

ನಿತ್ತಿ ಮೊದಲಿಯಾರರು ಒಂದು 'ಹೋಟೆಲ್‌'ಗೆ ಹೋಗಿ ಆರ್ಥಿಕ ಪ್ರಮಾಣದಲ್ಲಿ ಭೋಜನ 'ಆರ್ಡರ್' ಮಾಡಿದರು. ಅನೇಕ 'ಪ್ಲೇಟ್‌'ಗಳಲ್ಲಿ ಇಡ್ಲಿ, ದೋಸೆ, ಮತ್ತು ಜಿಲೇಬಿಗಳು ಅವರ ಟೇಬಲ್‌ಗೆ ತಲುಪಿತು. ಅವರು ತಿಂಡಿಗಳನ್ನು ಚಪ್ಪರಿಸಿಕೊಂಡು ತಿಂದರು. ತಿಂದನಂತರ ಅವರು ವೇಟರ್‌ನ್ನು 'ಸಾಕು' ಅಂತ ಸಂಕೇತ ಮಾಡಿದರು. ಆವಾಗ ವೇಟರ್ ಬಂದು ನಿತ್ತಿಯವರಿಗೆ ಒಂದು ಬಿಳಿ ಚೀಟಿಯನ್ನು ನೀಡಿದನು.

"ಇದು ಏನು"? ಎಂದು ನಿತ್ತಿ ಮುಗ್ಧರಾಗಿ 'ಬಿಲ್' ನೋಡುತ್ತ ಕೇಳಿದರು. "ಇದನ್ನು ಏಕೆ ತಂದಿದ್ದೀರಾ? ನಾನು ಇದನ್ನು 'ಆರ್ಡರ್' ಮಾಡಲಿಲ್ಲವಲ್ಲ!"

/ಇದೆ ರೀತಿಯಲ್ಲಿ ನಮ್ಮ ವಿಪರೀತವಾದ ಜೀವನ ನಡತೆಯಿಂದ ನಾವು ನೋವು ಮತ್ತು ರೋಗವನ್ನು ಆಮಂತ್ರಿಸುತ್ತೇವೆ - ಆನಂತರ ಅದನ್ನು ಮರೆತು ಅವುಗಳು ನಮ್ಮ ಬಾಗಿಲಿಗೆ ಅತಿಥಿಗಳಾಗಿ ಬಂದಾಗ ನಾವು ಗೊಣಗುತ್ತೇವೆ!/