11. / ಬುದ್ಧನಾಗುವದಿಕೆ /
This text was machine-transcribed from the printed book and may contain errors. Select the words and choose “Report a mistake”.
ಝೆನ್ ಬೌದ್ಧಧರ್ಮದ ಗುರುಗಳು ತಮ್ಮ ಶಿಷ್ಯರಿಗೆ ಬಹಳ ಅಭೂತಪೂರ್ವಕವಾದ ಪದ್ಧತಿಗಳನ್ನು ಬಳಸಿ ಶಿಕ್ಷಣ ನೀಡುವುದರಲ್ಲಿ ಪ್ರಸಿದ್ಧರು.
ಒಬ್ಬ ಝೆನ್ ಗುರುವಿನ ಒಬ್ಬ ಶಿಷ್ಯನು ಬಹಳ ಬುದ್ಧಿವಂತನು, ಪರಿಶ್ರಮಿ ಮತ್ತು ಪ್ರಾಮಾಣಿಕನಾಗಿದ್ದನು. ಆದರೆ ಅವನ ಸಮಸ್ಯೆ ಏನೆಂದರೆ ಜ್ಞಾನೋದಯವನ್ನು ಪಡೆಯುವುದಕ್ಕೆ ನಿಧಾನವಾದ ಮತ್ತು ಪ್ರಯಾಸವುಳ್ಳ ಪದ್ಧತಿಗಳನ್ನು ಸಾಧನೆ ಮಾಡುವುದಕ್ಕೆ ಬೇಕಾಗಿರುವ ಸಹನಶೀಲತೆ ಅವನಲ್ಲಿ ಇರಲಿಲ್ಲ.
ಈ ಕಾರಣದಿಂದ ಅವನು ಪ್ರತಿ ದಿವಸ ಗುರುವನ್ನು ಒಂದೇ ಪ್ರಶ್ನೆ ಕೇಳುತ್ತಿದ್ದನು. "ಹೇಳಿ ಗುರುಗಳೆ, ನಾನು ಯಾವಾಗ ಬುದ್ಧನಂತೆ ಆಗುತ್ತೇನೆ ?" ಗುರುಗಳು ಏನು ಮಾತನಾಡದೆ ಕೇವಲ ಒಂದು ಮುಗುಳು ನಗೆ ನಗುತ್ತಿದ್ದರು.
ಹಗಲು ಇರುಳು ಗುರುವಿನ ಅಪ್ಪಣೆ ಪ್ರಕಾರ ಸಾಧನೆ ಮಾಡಿದ ಮೇಲೆಯೂ ಏನೂ ಪರಿಣಾಮ ಗಳಿಸಿಲ್ಲದಾಗ ಶಿಷ್ಯನಿಗೆ ನೈರಾಶ್ಯ ಉಂಟಾಯಿತು. ಈ ಕಾರಣದಿಂದ ಅವನ ಜ್ಞಾನೋದಯವನ್ನು ಪಡೆಯುವ ಬಯಕೆಯು ಅವನನ್ನು ಮರುಳು ಮಾಡಿತು.
ಕೊನೆಗೆ ಒಂದು ದಿನ ಅವನು ಇದು ಒಂದು ಅಯೋಗ್ಯವಾದ ಅನ್ವೇಷಣೆ ಎಂದು ನಿಶ್ಚಯಿಸಿ ಅವನ ಗುರುವಿನ ಬಳಿಗೆ ಹೋಗಿ ಆಗ್ರಹಪಡಿಸಿದ "ನಾ ನಿಮ್ಮನ್ನು ಬಿಟ್ಟು ಹೋಗುವುದಕ್ಕೆ ಮುಂಚೆ ಒಂದು ಮಾತು ಹೇಳಿ. ನಾನು ಯಾವಾಗಾದರೂ ಬುದ್ಧನಂತೆ ಆಗುತ್ತೇನಾ ?"
ಶಿಷ್ಯನ ಕಪಾಳಕ್ಕೆ ಒಂದು ಜೋರು ಏಟೇ ಗುರುವಿನ ಉತ್ತರ !
ಏಟು ಬಿದ್ದಿದ್ದ ತತ್ ಕ್ಷಣವೇ ಶಿಷ್ಯನು ತನ್ನ ನಿಜವಾದ ಸ್ವಭಾವವೇನೆಂದು ಜಾಗೃತಿಗೊಳಿಸಿದ.
/ ಗುರುಗಳು ನೀಡಿದ ಏಟಿನ ಅರ್ಥವೇನು ? ಶಿಷ್ಯನಿಗೆ ಅತಿ ಆಸೆ ಎಂದು ಎಚ್ಚರಿಸುವುದಕ್ಕಾಗಿಯೇ? ಖಂಡಿತ ಅಲ್ಲ. ಶಿಷ್ಯನು ಮುಂಚಿತವಾಗಿಯೇ ಬುದ್ಧನಾಗಿದ್ದಾನೆ ಎಂಬ ಜಾಗೃತಿ ಉಂಟುಮಾಡುವುದಕ್ಕೆ ಗುರುಗಳು ಪೆಟ್ಟು ಕೊಡಬೇಕಾಗಿತ್ತು. ನೀವು ಮುಂಚಿತವಾಗಿಯೇ ಆಗಿರುವುದನ್ನು ಪುನಃ ಆಗಬೇಕೆಂದು ಹೇಗೆ ಇಚ್ಛೆ ಪಡಲು ಸಾಧ್ಯ ?
ನಮ್ಮ ಅಂತರಂಗದ ದೈವತ್ವವನ್ನು ಗ್ರಹಿಸದೆ, ನಾವು ಎಚ್ಚೆತ್ತಿಲ್ಲದೆ ಒಂದು ನಿದ್ರಿಸುತ್ತಿರುವ ಬುದ್ಧನಂತೆ ನಮ್ಮ ಜೀವಮಾನವನ್ನು ಕಳೆಯುತ್ತೇವೆ. ಸಿಂಹ ಮತ್ತು ಕುರಿಯ ಕಥೆಯಲ್ಲಾದ ರೀತಿಯಲ್ಲಿ ನಿಮ್ಮ ನಿಜವಾದ ಸ್ವಭಾವವನ್ನು ಗುರುವೇ ತೋರ್ಪಡಿಸಬೇಕು !/