ಮನಸ್ಸು ನೋವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದೇ?
This text was machine-transcribed from the printed book and may contain errors. Select the words and choose “Report a mistake”.
ಸಾಮಾನ್ಯವಾಗಿ ಮಾನಸಿಕ ಹಾಗೂ ಭಾವನಾತ್ಮಕ ಸ್ತರದಲ್ಲಿ ಉಂಟಾಗುವ ನೋವು ನಮ್ಮ ಯಾವುದೇ ಒಂದು ತೀರ್ಮಾನ ಅಥವಾ ವಿಮರ್ಶೆಯ ಪರಿಣಾಮ, ವರ್ತಮಾನಕ್ಕೆ ವಿರೋಧವೇ ಸದಾ ನೋವಿನ ಮೂಲ, ನೀವು ವರ್ತಮಾನವನ್ನು ಸ್ವೀಕರಿಸಿದ ಕೂಡಲೆ ನಿಮ್ಮ ನೋವು ಮಾಯವಾಗುವುದು. ಮುಖ್ಯವಾಗಿ, ನೀವು ಈ ಸ್ತರಗಳಲ್ಲಿ ನೋವು ಅನುಭವಿಸಿದಾಗೆಲ್ಲ ಅದರ ಒಂದು ಅಂಶವು ನಿಮ್ಮ ಶರೀರದಲ್ಲಿ ಉಳಿದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ನೋವು ಸ್ವಲ್ಪ ಸಮಯದಲ್ಲಿಯೇ ನಿಮ್ಮ ಸುತ್ತಲೂ ಒಂದು ನಕಾರಾತ್ಮಕ ಚೈತನ್ಯ ಕ್ಷೇತ್ರವನ್ನು (negative energy field) ನಿರ್ಮಿಸುತ್ತದೆ - ಇದನ್ನು ನಾವು
ದುಃಖ ಶರೀರ (Pain body) ಅಂತ ಕರೆಯುತ್ತೇವೆ. ಈ ದುಃಖಿತ ಶರೀರವು ಮೇಲಿಂದ ಮೇಲೆ ದುಃಖವನ್ನು ಆಕರ್ಷಿಸುತ್ತದೆ, ಈ ದುಃಖ ಶರೀರವೇ ನಮ್ಮ ಅನೇಕ ನೋವುಗಳಿಗೆ ಮತ್ತು ನೋವಿನ ಕ್ರಮ ವಿಧಾನಕ್ಕೆ ಹೊಣೆಯಾಗಿರುತ್ತದೆ.
ಭಾವನಾತ್ಮಕ ಅಸಮತೋಲನತೆಯು ಶರೀರದಲ್ಲಿ ಅಗಾಧವಾದ ತಲ್ಲಣವನ್ನು ಉಂಟು ಮಾಡುವುದು ಎಂದು ವೈದ್ಯಕೀಯ ಪರಿಶೋಧನೆಯು ತೋರ್ಪಡಿಸುತ್ತದೆ. ಉದಾಹರಣೆಗೆ ಲೈಂಗಿಕ ನಿಯಂತ್ರಣದಿಂದ ಬೆನ್ನು ನೋವು ಉಂಟಾಗಬಹುದು, ಮನಸ್ಸಿನಲ್ಲಿ ಅಧಿಕ ಜವಾಬ್ದಾರಿಯ ತಿಳಿಯುವಿಕೆ ಇದ್ದರೆ ಅದು ಭುಜಗಳ ನೋವಿಗೆ ಕಾರಣವಾಗಬಹುದು.
ಒಂದು ಅತಿ ಜನಭರಿತ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನೀವು ಎಲ್ಲಾ ಬಗೆಯ ಜನಗಳ ಜೊತೆ ತುಂಬಿರುವಿರಿ. ಆದರೆ ನಿಮ್ಮ ಅಂತರಂಗವು ಅವರನ್ನು ಸ್ಪರ್ಶಿಸುವುದಿಲ್ಲ - ನಿಮ್ಮ ಮನಸ್ಸು ನಿಮ್ಮ ವಿವೇಕವು ನಿಮ್ಮನ್ನು ಬಿಡುವುದಿಲ್ಲ. ಈ ಕಾರಣದಿಂದ ನಿಮ್ಮ ಅಂತರಂಗವು ಇನ್ನೂ ಆಳವಾಗಿ ನಿಮ್ಮೊಳಗೆ ಮುದುರಿ ಹೋಗುವುದು.
| ಒಂದು | ಕಲ್ಕತ್ತಾ ನಗರದಲ್ಲಿ ಎರಡು ಸಣ್ಣ ಆಶ್ರಮಗಳಿವೆ. ಈ ಎರಡು ಆಶ್ರಮಗಳ ಅಧ್ಯಕ್ಷರ |
|---|---|
| ಸಣ್ಣ | ನಡುವೆ ಮನಸ್ತಾಪ ಇತ್ತು. ಒಂದು ದಿನ ಒಬ್ಬ ಹಿರಿಯ ಅಧಿಕಾರಿ ಮೊದಲನೆಯ |
| ಕಥೆ | ಆಶ್ರಮಕ್ಕೆ ಭೇಟಿ ಕೊಟ್ಟರು ಮತ್ತು ಇನ್ನೊಂದು ಆಶ್ರಮಕ್ಕೆ ಅವರ ಜೊತೆಯಲ್ಲಿ |
| ಹೋಗುವುದಕ್ಕೆ ಅಧ್ಯಕ್ಷರನ್ನು ಆಮಂತ್ರಿಿಸಿದರು. ಅಧ್ಯಕ್ಷರ ಮನಸ್ಸಿನಲ್ಲಿ ಧರ್ಮಸಂಕಟ | |
| ಉಂಟಾಯಿತು. ಆಮಂತ್ರಣವನ್ನು ತಿರಸ್ಕರಿಸುವುದೂ ಕಷ್ಟ ಆದರೆ ಅವರಿಗೆ | |
| ಹೋಗುವುದಕ್ಕೂ ಮನಸ್ಸಿರಲಿಲ್ಲ. ಛಕ್ಕನೆ ಅವರ ದೇಹದಲ್ಲಿ ಅವರಿಗೆ ಜೋರು ಜ್ವರದ | |
| ಅನುಭವ ಆಯಿತು. ಈ ಕಾರಣದಿಂದ ಅವರು ಇನ್ನೊಂದು ಆಶ್ರಮಕ್ಕೆ ಹೋಗುವುದನ್ನು | |
| ತಪ್ಪಿಸಿಕೊಂಡರು. ನಾನು ಈ ಘಟನೆಯನ್ನು ಕಣ್ಣಾರೆ ನೋಡಿದ್ದೇನೆ. ಅಧಿಕಾರಿಯು |
ಅಲ್ಲಿಂದ ಹೊರಟ ತಕ್ಷಣವೇ ಅವರ ಜ್ವರ ಇಳಿದು ದೇಹವು ಸಾಮಾನ್ಯ ತಾಪಕ್ಕೆ ಬಂತು.
ನಾವೆಲ್ಲರು ಸೋಮವಾರ ಬೆಳಿಗ್ಗೆಯ ನಿರುತ್ಸಾಹವನ್ನು ಅನುಭವಿಸಿಲ್ಲವೆ? (Monday Morning Blues) ಮಕ್ಕಳು ಕೂಡ ಅವರನ್ನು ಇಷ್ಟವಿಲ್ಲದ ಕೆಲಸ ಮಾಡುವುದಕ್ಕೆ ಬಲವಂತ ಮಾಡಿದರೆ, ಜ್ವರದ ಲಕ್ಷಣಗಳನ್ನು ತೋರಿಸುತ್ತಾರೆ. (ಉದಾಹರಣೆಗೆ ಸ್ಕೂಲಿಗೆ ಹೋಗಬೇಕಾದಾಗ!) ಈ ರೀತಿಯ ರೋಗವು ನಮ್ಮಲ್ಲಿ ನೆಮ್ಮದಿ ಇಲ್ಲದಿದ್ದರೆ ಕಾಣಿಸಿಕೊಳ್ಳುವುದು. ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ಎರಡು ವಿರುದ್ಧವಾದ ದಿಕ್ಕಿನಲ್ಲಿ ನಿಮ್ಮನ್ನು ಎಳೆಯುವುದರಿಂದ ಹೀಗೆ ಆಗುವುದು. ನಿಮ್ಮಲ್ಲಿ ನೀವು ಆರಾಮವಾಗಿಲ್ಲದಿರುವ (dis-ease) ಸ್ಥಿತಿಯನ್ನೇ ರೋಗ (disease) ಎಂದು ಕರೆಯಲಾಗುವುದು.
| ಒಂದು ದಿನ ಸುಂದರವಾದ ಒಬ್ಬ ಯುವಕನನ್ನು ನಮ್ಮ ಹೀಲಿಂಗ್ ಕೇಂದ್ರಕ್ಕೆ ಅವರ | ತಂದೆತಾಯಿಯರು ಕರೆದುಕೊಂಡು ಬಂದರು. ಅವನ ಸಮಸ್ಯೆ - ಅನಿರೀಕ್ಷಿತ | ದೃಷ್ಟಿಹೀನತೆ, ಹುಡುಗನು ಬಹಳ ಆರೋಗ್ಯವುಳ್ಳವನಾಗಿದ್ದರೂ ಇದ್ದಕ್ಕಿದ್ದ ಹಾಗೆ ಒಂದು | ವಾರದ ಹಿಂದೆ ಅವನು ಅಂಧನಾಗಿಬಿಟ್ಟ, ಎಲ್ಲಾ ವೈದ್ಯಕೀಯ ಪರೀಕ್ಷೆಗಳೂ ಅವನ | ಕಣ್ಣುಗಳಲ್ಲಿ ಉತ್ತಮ ದೃಷ್ಟಿ ತೋರಿಸಿದ್ದವು. ಆದರೂ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ | ಎಂದು ವಿವರಿಸಿ ಅವನ ತಂದೆ ತಾಯಿ ಅಳುತ್ತಾ ಹೇಳಿದರು. | | ಯುವಕನ ಒಳಗಿನ ಶಕ್ತಿಯನ್ನು ಶೋಧಿಸಿ ನಾವು ಅವನೊಡನೆ ಏಕಾಂತದಲ್ಲಿ | ಮಾತನಾಡುವುದಕ್ಕೆ ಸ್ವಲ್ಪ ಹೊತ್ತು ಕೇಳಿದೆ. ಏಕಾಂತದಲ್ಲಿ ಮಾತನಾಡುವುದಕ್ಕೆ ಬಿಟ್ಟಾಗ | ಹುಡುಗನು ತನ್ನ ತೊಂದರೆಗಳನ್ನೆಲ್ಲ ನನ್ನ ಮುಂದೆ ಹೇಳಿಕೊಂಡ. ಅವನು ಒಂದು | ಹುಡುಗಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ, ಆದರೆ ಅವನ ತಂದೆತಾಯಿಯರು | ಅವಳನ್ನು ನೋಡುವುದನ್ನು ಬಲವಂತದಿಂದ ನಿಲ್ಲಿಸಿದರು ಎಂದು ಹುಡುಗನು ಹೇಳಿದ. | ನಾನು ತಕ್ಷಣವೇ ಸಮಸ್ಯೆಯ ಮೂಲ ಕಾರಣವನ್ನು ಕಂಡು ಹಿಡಿದೆ. ಹುಡುಗಿಯ ಒಂದು
| ಚಿತ್ರಪಟವನ್ನು ಒದಗಿಸಿ ಅದರ ಮೇಲೆ ಮೂರು ದಿನಗಳ ನಿರಂತರ ಧ್ಯಾನ | | ಮಾಡುವುದಕ್ಕೆ ಸಲಹೆ ಕೊಟ್ಟೆ. ಅಸಾಧಾರಣವಾಗಿರುವ ಈ ಪರಿಹಾರವನ್ನು ಕೇಳಿ, | | ಅದೂ ಒಂದು ಆಧ್ಯಾತ್ಮಿಕ ಬೋಧಕರ ಬಾಯಿಂದ, ಅವನ ತಂದೆ ತಾಯಿ ಬೆರಗಾದರು, | | ಆದರೆ ಆ ಧ್ಯಾನವಿಧಾನವು ಸಫಲವಾಯಿತು - ಹುಡುಗನು ಮೂರು ದಿನಗಳಲ್ಲಿಯೇ | | ಅವನ ಕಣ್ಣಿನ ದೃಷ್ಟಿಯನ್ನು ತಿರುಗಿ ಸಂಪೂರ್ಣವಾಗಿ ಪಡೆದುಕೊಂಡನು. |
ಹೀಗೆ ಏಕೆ ಆಯಿತು?
ಹುಡುಗನು ಯಾವುದನ್ನು ಎಲ್ಲಕ್ಕಿಂತ ಹೆಚ್ಚು ನೋಡಲು ಇಚ್ಛಿಸಿದನೋ ಅದನ್ನು ನೋಡದೆ ಇರುವುದಕ್ಕೆ ಅವನನ್ನು ಬಲವಂತ ಮಾಡಿದಾಗ ಅವನ ವಿವೇಕವು ಏನೂ ನೋಡುವುದೇ ಬೇಡ ಎಂದು ನಿರ್ಧರಿಸಿತು. ಅವನ ಮಾನಸಿಕ ಸ್ಥಿತಿಯೇ ಅವನ ದೃಷ್ಟಿ ಹೀನತೆಗೆ ಕಾರಣವಾಗಿತ್ತು. ನಮ್ಮ ಜ್ಞಾನೇಂದ್ರಿಯಗಳ ಮೇಲೆ ಪ್ರಚಂಡವಾದ ಮನಸ್ಸಿನ ಶಕ್ತಿಯು ಎಷ್ಟರಮಟ್ಟಿಗೆ ಇದೆ ! ನಮ್ಮ ಮನಸ್ಸೇ ಎಲ್ಲಕ್ಕಿಂತ ಹೆಚ್ಚಿನದು.
ಭಾಗವತ ಪುರಾಣದಲ್ಲಿ ರಾಧೆ ಹುಟ್ಟಿದ ಕೆಲವು ಕ್ಷಣದಲ್ಲಿಯೇ ಕೃಷ್ಣನ ಜನ್ಮ ವಾಯಿತು ಎಂದು ತಿಳಿಸಲಾಗಿದೆ. ಪುಟ್ಟ ರಾಧೆಯು ಬಹಳ ಕ್ಷೇಮದಲ್ಲಿದ್ದಳು. ಆದರೆ ಅವಳ ಒಂದು ವಿಷಯ ಬಹಳ ಅಸಾಧಾರಣವಾಗಿತ್ತು - ಅವಳು ತನ್ನ ಕಣ್ಣುಗಳನ್ನು ತೆಗೆಯುತ್ತಾ ಇರಲಿಲ್ಲ. ಸ್ವಲ್ಪ ದಿನಗಳ ನಂತರ ರಾಧೆಯನ್ನು ಕರೆದುಕೊಂಡು ಅವಳ ತಾಯಿಯು ಪುಟ್ಟ ಕೃಷ್ಣನನ್ನು ನೋಡಲು ಅವನ ಮನೆಗೆ ಹೋದಳು ಕೃಷ್ಣನ ಸಾನ್ನಿಧ್ಯಕ್ಕೆ ಬಂದ ತಕ್ಷಣವೇ ರಾಧೆಯು ಅವಳ ಕಣ್ಣುಗಳನ್ನು ತೆರೆದು ಕೃಷ್ಣನ ದರ್ಶನವನ್ನು ಪಡೆದಳು.
ನಮ್ಮಲ್ಲಿ ಬಹಳಷ್ಟು ಜನ
ನಮ್ಮ ಶರೀರದೊಂದಿಗೆ
ಇರುವುದಿಲ್ಲ
ಬಹಳ ವರ್ಷಗಳು ಕಳೆದ ಮೇಲೆ ಅವಳ ಗೆಳತಿಯು ರಾಧೆಯನ್ನು ಇದರ ವಿಷಯ ಕೇಳಿದಾಗ ರಾಧೆಯು ವ್ಯಾಖ್ಯಾನಿಸಿದಳು. ನೋಡುವುದಕ್ಕೆ ಇನ್ನೇನಿತು ? ಕೃಷ್ಣನಿಗಾಗಿಯೇ ನಾನು ಈ ಜನ್ಮವನ್ನು ತೆಗೆದುಕೊಂಡಿರುವುದು. ಈ ಕಾರಣದಿಂದಲೇ ನಾನು ಕೃಷ್ಣನ ಸಾನ್ನಿಧ್ಯಕ್ಕೆ ಬರುವವರೆಗೆ ನನ್ನ ಕಣ್ಣನ್ನು ತೆರೆಯಲಿಲ್ಲ ಇದು ಕೇವಲ ಒಂದು ಕಥೆಯಾಗಿರಬಹುದು. ಆದರೆ ನಮ್ಮ ದೇಹದ ಮೇಲಿರುವ ಮನಸ್ಸಿನ ಪ್ರಚಂಡವಾದ ಶಕ್ತಿಯನ್ನು ತೋರ್ಪಡಿಸುತ್ತದೆ.
ಇಷ್ಟೇ ಅಲ್ಲ ದೇಹವು ಮನಸ್ಸಿಗೆ ಬರೆದ ಪ್ರಾರ್ಥನಾ ಪತ್ರವೇ ನೋವು ಎಂದು ಹೇಳಬಹುದು. ನನಗೆ ಸ್ವಲ್ಪ ಗಮನ ಕೊಡು ಅಂತ ದೇಹ ಪ್ರಾರ್ಥಿಸುವುದು. ಇದು ಏಕೆ ಅಂದರೆ ನಿಮ್ಮ ಗಮನವೇ ನಿಮ್ಮ ಶಕ್ತಿ ನಿಮ್ಮ ಚೈತನ್ಯ.
ನೀವು ನಿಮ್ಮ ಗಮನವನ್ನು ಎಲ್ಲೆಲ್ಲಿ ಗುರಿಯಿಡುತ್ತೀರೋ ನಿಮ್ಮ ಚೈತನ್ಯವೂ ಅಲ್ಲಲ್ಲೇ ಹೋಗಿ ತಲುಪುವುದು ಮತ್ತು ನೀವು ಅದೇ ದಾರಿಯಲ್ಲಿ ನಿಮ್ಮ ಬೆಳವಣಿಗೆ ಕಾಣುವಿರಿ.