ನೀವು ನಿಮ್ಮ ಮೇಲೆಯೇ ನೋವನ್ನು ಆಹ್ವಾನಿಸುತ್ತಿರುವಿರಿ
This text was machine-transcribed from the printed book and may contain errors. Select the words and choose “Report a mistake”.
ನೋವನ್ನು ಅವರೇ ಗೌರವಿಸಿ, ಆಮಂತ್ರಿಸಿದ ಅತಿಥಿ ಎಂದು ಹೇಳಿದರೆ, ಬಹಳ ಜನರು ನಂಬುವುದಿಲ್ಲ ಆದರೆ ಇದು ನಿಜ !
| ಒಂದು ಸಣ್ಣ ಕಥೆ | ನಿತ್ತಿ ಮೊದಲಿಯಾರರು ಒಂದು ಹೋಟೆಲ್ಗೆ ಹೋಗಿ ಅಧಿಕ ಪ್ರಮಾಣದಲ್ಲಿ ಭೋಜನವನ್ನು ಆರ್ಡರ್ ಮಾಡಿದರು. ಅನೇಕ ತಟ್ಟೆಗಳಲ್ಲಿ ಬಿಸಿ ಬಿಸಿ ಇಡ್ಲಿ, ದೋಸೆ ಮತ್ತು ಜಿಲೇಬಿಗಳು ಅವರ ಟೇಬಲ್ಗೆ ತಲುಪಿತು. ಅವರು ತಿಂಡಿಗಳನ್ನು ಚಪ್ಪರಿಸಿಕೊಂಡು ತಿಂದರು. ಹೊಟ್ಟೆ ತುಂಬ ತಿಂದ ನಂತರ ಅವರು ವೇಟರ್ನ್ನು ಸಾಕು ಅಂತ ಸಂಕೇತ ಮಾಡಿದರು. ಆವಾಗ ವೇಟರ್ ನಿತ್ತಿಯವರಿಗೆ ಒಂದು ಬಿಳಿ ಚೀಟಿಯನ್ನು ನೀಡಿದ. |
ಇದು ಏನು? ಎಂದು ನಿಶ್ಚಿ ಏನೂ ತಿಳಿಯದವರಂತೆ ಬಿಲ್ ನೋಡುತ್ತಾ ಕೇಳಿದರು. ಇದನ್ನು ಏಕೆ ತಂದಿದ್ದೀರಾ? ನಾನು ಇದನ್ನು ಆರ್ಡರ್ ಮಾಡಿರಲಿಲ್ಲವಲ್ಲ!
ಇದೇ ರೀತಿಯಲ್ಲಿ ನಾವು ನಮ್ಮ ಹಿಡಿತವಿಲ್ಲದ ಅಭ್ಯಾಸಗಳಿಂದ ಮತ್ತು ಆಯಾಸಕರ ಜೀವನ ನಡತೆಯಿಂದ ನೋವು ಮತ್ತು ರೋಗವನ್ನು ಆಮಂತ್ರಿಸುತ್ತೇವೆ - ಅನಂತರ ಅದನ್ನು ಮರೆತು ರೋಗವು ನಮ್ಮ ಬಾಗಲಿಗೆ ಬಂದಾಗ ನಾವು ಗೊಣಗುತ್ತೇವೆ.
ಈ ಮಾತನ್ನು ಎಂದಿಗೂ ಯಾರೂ ಒಪ್ಪಿಕೊಳ್ಳುವುದಿಲ್ಲ. ಆದರೆ ನಿಜವೇನೆಂದರೆ ಕೆಲವೊಮ್ಮೆ ನಾವು ನಮಗೆ ಬಂದ ರೋಗದಿಂದ ಸುಖಿಸುತ್ತೇವೆ. ಹೇಗೆ ಶರೀರದ ಒಂದು ಭಾಗ ನಿಮ್ಮ ಗಮನವನ್ನು ಪಡೆಯುವುದಕ್ಕೆ ಕಾಯಿಲೆ ಬೀಳುವುದೋ ಅದೇ ರೀತಿಯಲ್ಲಿ ನೀವೂ ಬೇರೆಯವರ ಗಮನ ಸೆಳೆಯಲು ಕಾಯಿಲೆ ಬೀಳುವಿರಿ.
ಈ ತೋರುವಿಕೆಯಲ್ಲಿ ಆಶ್ಚರ್ಯಪಡಬೇಕಾಗಿರತಕ್ಕದ್ದು ಏನೂ ಇಲ್ಲ. ಏಕೆಂದರೆ ಇಂದಿನ ಶ್ರಮದಾಯಕ ಜೀವನಗತಿಯಲ್ಲಿ ಅವರವರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ - ಒಬ್ಬರು ಕಾಯಿಲೆ ಬೀಳುವ ತನಕ ಬೇರೆಯವರಿಗೆ ಅವರ ಕಡೆ ಗಮನ ಕೊಡಲು ಪುರಸತ್ತು ಇರುವುದಿಲ್ಲ. ಬೇರೆಯವರಿಂದ ಗಮನಿಸಲ್ಪಡುವುದು ಮಾನವನ ಮೂಲಭೂತ ಅವಶ್ಯಕತೆ ! ಮಾನವನು ಊಟವಿಲ್ಲದೆ 90 ದಿನ ಬದುಕಬಲ್ಲನು. ಆದರೆ ಬೇರೆಯವರಿಂದ ಗಮನಿಸಲ್ಪಡದೆ 14 ದಿನದಲ್ಲಿಯೇ ಅವನಿಗೆ ಹುಚ್ಚು ಹಿಡಿಯಬಲ್ಲದು ಎಂದು ಮನೋವೈಜ್ಞಾನಿಕ ಪರಿಶೋಧನೆಯು ತಿಳಿಸುತ್ತದೆ. ಇದು ಏಕೆಂದರೆ ಈ ಗಮನವೇ ಒಂದು ಎನರ್ಜಿ, ಒಂದು ಪ್ರಾಣದಾನ. ನಮಗೆ ಗೊತ್ತಿಲ್ಲದೆಯೇ ನಮ್ಮೊಳಗೆ ಬೇರೆಯವರ ಗಮನವನ್ನು ಪಡೆಯುವುದಕ್ಕೆ ಅತ್ಯಂತ ಕೊರಗು ಇದೆ. ಈ ಗಮನವನ್ನು ಪಡೆಯುವುದಕ್ಕೆ ನಮ್ಮಲ್ಲಿ ನಾವು ಒಂದು ಕಡಿಮೆ ಎನರ್ಜಿಯ ರಾಶಿಯನ್ನು (low energy pool) ನಿರ್ಮಿಸುತ್ತೇವೆ ಮತ್ತು ನೆಗಡಿಯಿಂದ ಹಿಡಿದು ಕ್ಯಾನ್ಸರ್ವರೆಗೆ ಎಲ್ಲಾ ರೋಗಗಳನ್ನು ಸಂತೋಷವಾಗಿ ಅನುಭವಿಸುತ್ತೇವೆ.
ನೀವು ಯಾರದಾದರೂ ಇಬ್ಬರ ಸಂಬಂಧವನ್ನು ಸಮೀಪದಿಂದ ವೀಕ್ಷಿಸಿದರೆ, ಭಿಕ್ಷಾಪಾತ್ರೆ ಹಿಡಿದು ಕೈ ಚಾಚಿ ಒಬ್ಬರನೊಬ್ಬರ ಗಮನದ ಭಿಕ್ಷೆಯನ್ನು ಬೇಡುವುದನ್ನು ಕಾಣುವಿರಿ. ಇಬ್ಬರು ಭಿಕ್ಷುಕರ ನಡುವೆ ಒಂದು ಸಕಾರಾತ್ಮಕ ಮತ್ತು ತೃಪ್ತಿಕರವಾದ ಬಾಂಧವ್ಯ ಎಂದಾದರೂ ಸಾಧ್ಯವೆ? ರೋಗಗಳಿಂದ ಮುಕ್ತಿ ಪಡೆಯುವುದಕ್ಕೆ ಗಮನದ ಭಿಕ್ಷೆ ಬೇಡುವುದನ್ನು ಬಿಟ್ಟು ಬಿಡಿ. ನಮ್ಮ ಸಂಪೂರ್ಣ ಜಾಗ್ರತೆ ಇಲ್ಲದೆ ನಡೆಯುವ ಈ ಸೂಕ್ಷ್ಮವಾದ ಮಾನಸಿಕ ಭಿಕ್ಷಾಟನೆಯು ಕಡೆಗೆ ಮಾಮೂಲಿ ಶಾರೀರಿಕ ಭಿಕ್ಷಾಟನೆಗಿಂತ ಅತ್ಯಂತ ಅಪಾಯಕಾರಿ.
ಜೀವನವು ಅನೇಕ ಬಗೆಯ ವಿದ್ಯೆಗಳನ್ನು ಕಲಿಸುತ್ತದೆ. ಅವುಗಳನ್ನು ತಿಳಿಸದುಕೊಳ್ಳುವುದು ನಮ್ಮ ಜವಾಬ್ದಾರಿ - ಆದರೆ ನಾವು ಸದಾ ನಿದ್ರಾಸಂಚಾರದ ಸ್ಥಿತಿಯಲ್ಲಿ ಜೀವಿಸುತ್ತಿರುವುದರಿಂದ ನಾವು ಎಂತಹ ತಾಪತ್ರಯಗಳನ್ನು ಆಮಂತ್ರಿ ಸುತ್ತಿದ್ದೇವೆ ಎಂಬುವುದು ನಮಗೆ ಗೊತ್ತಿರುವುದೇ ಇಲ್ಲ.
ಈ ಮಾತನ್ನು ಉದಾಹರಿಸುವ ಒಂದು ಚಿಕ್ಕ ಕಥೆ :
| ಒಂದು | ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಇಂಜಿನಿಯರ್ ಪ್ರತಿ ದಿನವು |
|---|---|
| ಸಣ್ಣ | ಊಟಕ್ಕೆ ಒಂದೇ ತಿಂಡಿಯನ್ನು ತೆಗೆದುಕೊಂಡು ಬರುತ್ತಿದ್ದನು ಮತ್ತು ಪ್ರತಿದಿನ ಅದು |
| ಕಥೆ | ತನಗೆ ಸೇರದ ತಿಂಡಿ ಎಂದು ಗೊಣಗುತ್ತಾ ಇದ್ದನು. ಅವನ ಕರುಣಾಳು ಸ್ನೇಹಿತರು ತಮ್ಮ |
| ಊಟವನ್ನು ಅವನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವನ ಪಾಡು ನೋಡಲಾರದೆ | |
| ಸ್ನೇಹಿತರು ಬಹಳ ಕರುಣೆಯಿಂದ ಸಲಹೆ ಕೊಟ್ಟರು. ನಿನ್ನ ಹೆಂಡತಿಯನ್ನು ಬೇರೆ | |
| ಯಾವುದಾದರೂ ನಿನಗೆ ಇಷ್ಟವಿದ್ದ ತಿಂಡಿಯನ್ನು ಮಾಡಿ ಕೊಡುವುದಕ್ಕೆ ಹೇಳಬಹುದಲ್ಲ | |
| ? ನಿನಗೆ ಈ ತಿಂಡಿ ಇಷ್ಟವಿಲ್ಲ ಎಂದು ಅವಳಿಗೆ ಗೊತ್ತಿಲ್ಲವೆ? | |
| 'ಎಂತಹ ಹೆಂಡತಿ ?' ಎಂದು ಇಂಜೀನಿಯರು ಆಶ್ಚರ್ಯದಿಂದ ಕೇಳಿದ, 'ನಾನು ಒಬ್ಬ | |
| ಬ್ರಹ್ಮಚಾರಿ. ನನ್ನ ಅಡಿಗೆಯನ್ನು ನಾನೇ ಮಾಡಿಕೊಳ್ಳುತ್ತೇನೆ!' |
ಈ ಕಥೆಯು ಬಹಳ ತಮಾಷೆಯಾಗಿರಬಹುದು. ಆದರೆ ನಿಜವೇನೆಂದರೆ ನಾವೂ ಕೂಡ ನಮ್ಮ ಜೀವನವನ್ನು ಇದೇ ರೀತಿಯಲ್ಲಿ ನಡೆಸಿಕೊಳ್ಳುತ್ತೇವೆ. ಎಚ್ಚರವಿಲ್ಲದೆ ನಾವು ಮೊದಲು ನೋವನ್ನು ದುಃಖವನ್ನು ಆಮಂತ್ರಿಸುತ್ತೇವೆ ಮತ್ತು ನೋವು ಉಂಟಾದಾಗ ಗೊಣಗುತ್ತೇವೆ ಮತ್ತು ಆ ನೋವನ್ನು ನಾಶ ಮಾಡುವ ಮಾತ್ರೆಗಳನ್ನು ಆಶ್ರಯಿಸುತ್ತೇವೆ. ಇದಲ್ಲದೆ ನಿಜವಾಗಿ ಅವಮಾನ ಪಡುವಂತಹ ಮಾತು ಏನೆಂದರೆ ನಾವು ನಮ್ಮ ರೋಗದ ಮೂಲ ಕಾರಣ ನಾವೇ ಎಂದು ಗುರುತಿಸದೆ, ಮೇಲಿಂದ ಮೇಲೆ ಅದೇ ಪೀಡೆಯನ್ನು ಅನುಭವಿಸಲು ಸಿದ್ಧರಾಗಿರುತ್ತೇವೆ. ನಮ್ಮ ದುಃಖಕ್ಕೆ ಕಾರಣ ನಾವೇ ಎಂದು ಗ್ರಹಿಸದೆ, ಸದಾ ಬೇರೆಯವರನ್ನು ಹೊಣೆ ಮಾಡುತ್ತೇವೆ.
ನೋವಿನ ಪರಿಹಾರವೇನು ?
ನೋವನ್ನು ನಿಮ್ಮ ಗಮನದ ಅನುಪಸ್ಥಿತಿ ಎಂದು ಗ್ರಹಿಸಿದರೆ, ಖಂಡಿತ ನಿಮ್ಮ ಏಕಚಿತ್ತ ಗಮನವೇ ಅದರ ಪರಿಹಾರವನ್ನೂ ನೀಡುವುದು. ನಿಮ್ಮ ಇರುವಿಕೆಯನ್ನು ನಿಮ್ಮ ರೋಗವಿದ್ದ ಭಾಗಕ್ಕೆ ತಲುಪಿಸಿ, ನಿಮಗೆ ನೀವೆ ಹೀಲಿಂಗ್ (ಗುಣಪಡಿಸುವಿಕೆ) ಅನ್ನು ನೀಡುವ ಒಂದು ಧ್ಯಾನ ಪದ್ಧತಿಯು (meditation technique) ಇರುವುದು, ನೀವು ಮುಂದಿನ ಸಾರಿ ನೋವನ್ನು ಅನುಭವಿಸಿದಾಗ (ಉದಾಹರಣೆಗೆ ಕಾಲು ನೋವು) ಈ 'ಮೆಡಿಟೇಶನ್' ಅನ್ನು ಪ್ರಯತ್ನಿಸಬಹುದು. ನೋವನ್ನು ನಾಶ ಮಾಡುವ ಆದರೆ ಬೇರೆ ತರಹದ ಅತ್ಯಂತ ಕೆಟ್ಟ ಹಾನಿಯನ್ನು ನೀಡುವ (side effects) ಮಾತ್ರೆಗಳನ್ನು ಬಳಸುವುದಕ್ಕಿಂತ ಈ ಗುಣಪಡಿಸುವ ಮೆಡಿಟೇಶನ್ ಅನ್ನು ಮಾಡುವುದು ಖಂಡಿತ ಇನ್ನೂ ಉತ್ತಮ.
ಧ್ಯಾನದ ವಿಧಾನ : ಒಂದು ಕತ್ತಲು ಕೋಣೆಯಲ್ಲಿ ಮಲಗಿರಿ. ನೀವು ಪೂರ್ಣ ಎಚ್ಚರಿಕೆಯಿಂದ ನಿಮ್ಮ ಸಂಪೂರ್ಣ ದೇಹವನ್ನು ಮರೆಯಲು ಪ್ರಯತ್ನಿಸಿ. ನೋವಿರುವ ಭಾಗದ ಮೇಲೆ ಮಾತ್ರ
ಏಕಾಗ್ರತೆಯಿಂದ ಗಮನಿಸಿ. ನೀವು ನೋವನ್ನು ಅನುಭವಿಸಲು ಆರಂಭಿಸಿದಾಗ, ಉದ್ದೇಶಪೂರ್ವಕವಾಗಿ ನೋವು ಎನ್ನುವ ಪದವನ್ನು ನಿಮ್ಮ ಮನಸ್ಸಿನಿಂದ ತೆಗೆದು ಬಿಡಿ. ನಿಮ್ಮ ಮಾನಸಿಕ ಹರಟೆಯು ನೀವು ನೋವನ್ನು ಅನುಭವಿಸುತ್ತಿದ್ದೀರಾ ಎಂದು ನಿರಂತರ ತಿಳಿಸುತ್ತಾಯಿರುತ್ತದೆ. ಆ ಹರಟೆಯ ಸ್ವಿಚ್ ಅನ್ನು ಆಫ್ ಮಾಡಿ ಬಿಡಿ. ಮನಸ್ಸನ್ನು ತೆರೆದಿಟ್ಟುಕೊಂಡು ಬಹಳ ಅಗಾಧವಾಗಿ ನೀವು ಮನಸ್ಸಿನೊಳಗೆ ವೀಕ್ಷಿಸಿ. ಆಗ ನಿಮ್ಮ ನೋವು, ನಿಮ್ಮ ಮನಸ್ಸು ಮಾಡಿದ ಅತಿಶಯ ಎಂದು ನಿಮಗೆ ತಿಳಿಯುವುದು. ನಿಮ್ಮ ಸಂಪೂರ್ಣ ಎಚ್ಚರಿಕೆಯನ್ನು ನಿಮ್ಮ ನೋವಿನ ಮಧ್ಯಬಿಂದುವಿನ ಮೇಲೆ ಗುರಿ ಇಡಿ, ಆಗ ಆ ನೋವು ಹಾಗೆ ಮುದುರಿ ಹೋಗುತ್ತಾ ಒಂದು ಚಿಕ್ಕ ಬಿಂದುವಿನಂತೆ ಆಗುವುದು. ಈ ಬಿಂದುವಿನ ಮೇಲೆ ನೀವು ಏಕಾಗ್ರ ಗುರಿಯನ್ನು ಇಟ್ಟುಕೊಳ್ಳಿ, ಆಗ ಭಕ್ಕೇನೆ ಒಂದು ಕ್ಷಣದಲ್ಲಿ ನಿಮ್ಮ ನೋವು ಮಾಯವಾಗುವುದನ್ನು ನೀವು ಕಂಡುಹಿಡಿಯುವಿರಿ ಮತ್ತು ಅದರ ಜಾಗದಲ್ಲಿ ಸುಖವನ್ನು ಅನುಭವಿಸುವಿರಿ. ಇದು ಏಕೆಂದರೆ ನೋವು ಮತ್ತು ಸುಖದ ಮೂಲ ಒಂದೇ, ಇವೆರಡು ಬೇರೆ ಹೆಸರಿನ ಒಂದೇ ರೀತಿಯ ಭಾವನೆಗಳು ಉದಾಹರಣೆಗೆ ನೀವು ನಿಮ್ಮ ಸ್ನೇಹಿತರಿಂದ ಅಥವಾ ಅಂಗಮರ್ದಕನಿಂದ ನಿಮ್ಮ ಮೈಯನ್ನು ನೀವಿಸಿಕೊಂಡಿದ್ದರೆ ನಿಮಗೆ ಆರಾಮದ ಅನುಭವ ಆಗಿರಬಹುದು. ಆದರೆ ಇದೇ ಅಂಗಮರ್ದನವನ್ನು ಅಪರಿಚಿತರಿಂದ ಮಾಡಿಸಿಕೊಂಡಿದ್ದರೆ ನಿಮಗೆ ಅದು ಬಹಳ ಚಿತ್ರಹಿಂಸೆ ಎಂದು ತಿಳಿದುಕೊಳ್ಳುವಿರಿ.
ನಿಮ್ಮ ಅನುಭವದ ಸತ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ನೋವಿಗೆ ತನ್ನದೇ ಒಂದು ಅಸ್ತಿತ್ವ ಇಲ್ಲ, ಒಂದು ಜೀವ ಇಲ್ಲ ಎಂದು ತಿಳಿಯುವಿರಿ. ನೋವಿಗೆ ಕೇವಲ ಒಂದು ನಕಾರಾತ್ಮಕ (ನೆಗೆಟಿವ್) ಅಸ್ತಿತ್ವ ಇದೆ. ಅಂದರೆ ಕತ್ತಲೆಯ ಸಮಾನ ಅದು ಕೇವಲ ಒಂದು ಅನುಪಸ್ಥಿತಿ - ಎಚ್ಚರಿಕೆಯ ಅನುಪಸ್ಥಿತಿ, ಬೆಳಕನ್ನು ನೀಡಿದಾಗ ಹೇಗೆ ಕತ್ತಲೆಯು ತಾನಾಗಿ ಮಾಯವಾಗುವುದೋ, ಅದೇ ರೀತಿಯಲ್ಲಿ ನಿಮ್ಮ ಎಚ್ಚರಿಕೆಯ ಶಕ್ತಿಯನ್ನು ನೋವಿನ ಮೇಲೆ ಗುರಿ ಇಟ್ಟಾಗ, ಅದು ತಾನಾಗಿ ತಾನೇ ಕರಗಿ ಹೋಗುವುದು. ಈ ಮೆಡಿಟೇಶನ್ನಿಂದ ಎಂತಹ ನೋವಾದರೂ ಸಹ ಅದನ್ನು ದಾಟಿ ಮುಂದೆ ಹೋಗಿ ನಿವಾರಿಸಿಕೊಳ್ಳಬಹುದು. ನಿಮ್ಮ ನೋವನ್ನು ಧ್ಯಾನದ ಮಾರ್ಗಕ್ಕೆ ತಿರುಗಿಸಿ, ಅದನ್ನು ಒಂದು ಉಪಕರಣವಾಗಿ ಉಪಯೋಗಿಸಿ, ನಿಮ್ಮ ಅಂತರಂಗವನ್ನು ಸಂಪರ್ಕಿಸುವ ಅನುಭವವನ್ನು ಪಡೆಯಲು ನಾನು ನಿಮ್ಮನ್ನು ಆಮಂತ್ರಿಸುತ್ತೇನೆ. ಈ ಧ್ಯಾನದಿಂದ, ನಿಮ್ಮ ನೋವೇ, ನಿಮ್ಮ ದುಃಖವೇ ಆನಂದವನ್ನು ಪಡೆಯುವುದಕ್ಕೆ ಒಂದು ಮಾರ್ಗವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ.