ನೋವು ಒಂದು ಅಮೌಲ್ಯವಾದ ಪಾಠವಾಗಬಲ್ಲದು
This text was machine-transcribed from the printed book and may contain errors. Select the words and choose “Report a mistake”.
| ಒಂದು ಸಣ್ಣ ಕಥೆ | ಇಬ್ಬರು - ಒಬ್ಬ ಜ್ಞಾನಿ, ಇನ್ನೊಬ್ಬ ಸಾಮಾನ್ಯ ಮನುಷ್ಯ. ಒಂದು ಅಮಾವಾಸ್ಯೆಯ ರಾತ್ರಿ ಒಂದು ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದ್ದಕ್ಕಿದಂತೆ ಆಕಾಶದಲ್ಲಿ ಮಿಂಚು ಮಿಂಚಿತು. ಸಾಧಾರಣ ಮನುಷ್ಯನು ಭಯದಿಂದ ನಡುಗಲು ಆರಂಭಿಸಿದ. ಬಿರುಗಾಳಿ ಏಳುವುದು ! ತಕ್ಷಣವೇ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಯಿತು. ಅವನು ಮುಂದೆ ನಡೆದು ಹೋಗಬೇಕೆ ? ಅಥವಾ ಬಿರುಗಾಳಿ ನಿಲ್ಲುವವರೆಗೆ ಒಂದು ಸುರಕ್ಷಿತ ಸ್ಥಳದಲ್ಲಿ ನಿಲ್ಲಬೇಕೆ ? ಈ ಪ್ರಯಾಣವನ್ನು ಆರಂಭಿಸಲೇಬಾರದಾಗಿತ್ತು ಎಂದು ಅವನು ಇಚ್ಛಿಸಿದ. ತಾನು ಅತಿ ಮೂರ್ಖ ಮತ್ತು ದೌರ್ಭಾಗ್ಯಶಾಲಿ ಎಂದು ತನ್ನನ್ನೆ ತಾನೆ ನಿಂದಿಸಿಕೊಂಡ, ಅರ್ಥಾತ್ ಅವನು ಸಂಪೂರ್ಣವಾಗಿ ದುಃಖದಲ್ಲಿ ಮುಳುಗಿಬಿಟ್ಟ. ಇದಕ್ಕೆ ವಿರುದ್ಧವಾಗಿ ಜ್ಞಾನಿಯು ಆ ಕಷ್ಟವನ್ನು ಮುಂದಿನ ರಸ್ತೆ ಚೆನ್ನಾಗಿ ಗಮನಿಸಲು ಉಪಯೋಗಿಸಿಕೊಂಡ, ತಾನು ಸರಿಯಾದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ನಿಶ್ಚಯಪಡಿಸಿ, ಮಿಂಚನ್ನು ಅದು ನೀಡಿದ ಸಹಾಯಕ್ಕೆ ಅಭಿನಂದಿಸಿ ಮುಂದಕ್ಕೆ ನಡೆದ. |
ನೋವು ಈ ಮಿಂಚಿನ ಸಮಾನ ! ಆದರೆ ಅದರಿಂದ ನೀವು ದುಃಖ ಪಡುತ್ತೀರೋ ಅಥವಾ ಅದು ನೀಡಿದ ಪಾಠವನ್ನು ಕಲಿತುಕೊಳ್ಳುತ್ತೀರೋ, ಅದು ನಿಮ್ಮ ಕೈಯಲ್ಲಿ ಇದೆ. ನಿಮ್ಮ ದುಃಖವನ್ನು ನೀವು ನಿಮ್ಮ ಅಂತರಂಗವನ್ನು ವೀಕ್ಷಿಸುವುದಕ್ಕೆ ಉಪಯೋಗಿಸಿದರೆ, ನೀವೇ ನಿಮ್ಮ ನೋವಿನ ಕಾರಣ ಮತ್ತು ನೀವೇ ಅದನ್ನು ಪರಿಹರಿಸಬಹುದು ಎಂದು ತಿಳಿದುಕೊಳ್ಳುವಿರಿ.
ನೀವು ನಿಮ್ಮ ನೋವನ್ನು ಆಳವಾಗಿ ವೀಕ್ಷಿಸಿದಾಗ, ನಿಮ್ಮೊಳಗೆ ಒಂದು ಮುಗ್ಧತೆಯು ತೆರೆದುಕೊಳ್ಳುವುದು ಮತ್ತು ನೀವು ಈ ದೇಹವಲ್ಲ ಎಂಬುವುದನ್ನು ನೀವು ಮನಗಾಣುತ್ತೀರಿ. ಯಾವ ನೋವಿಗೂ ನಿಮ್ಮ ನಿಜವಾದ ಅಸ್ತಿತ್ವವನ್ನು, ನಿಮ್ಮ ಅಂತರಂಗವನ್ನು ಮುಟ್ಟಲು ಸಾಧ್ಯವೇ ಇಲ್ಲ. ನೀವು ನೋವಿನ ಕ್ಷೇತ್ರವನ್ನು ದಾಟಿ ಮುಂದಕ್ಕೆ ಹೋಗಿದ್ದೀರಿ ಎಂದು ನಿಮಗೆ ತಿಳುವಳಿಕೆ ಆದಾಗ ನೀವು ದುಃಖಾತೀತರಾಗುತ್ತೀರಿ (ದುಃಖವನ್ನು ದಾಟಿ ಮುಂದೆ ಹೋಗಿದ್ದವನು). ದೇಹದಿಂದ ನಿರ್ಲಿಪ್ತತೆ ಪಡೆದು ಒಂದು ರೀತಿಯ ಸುಂದರ, ಅಪರೂಪವಾದ ಮುಕ್ತಿಯನ್ನು ಪಡೆಯುವಿರಿ.
ಈ ಸಂಸಾರಿಕ ಜೀವನವನ್ನು ನಿವಾರಿಸಿಕೊಂಡು ಒಂದು ಆಧ್ಯಾತ್ಮಿಕ ಸ್ತರವನ್ನು ತಲುಪುವಿರಿ. ಆವಾಗ ನೀವು ಈ ಪ್ರಪಂಚದಲ್ಲಿ ಒಂದು ಆತ್ಮನ್, ಒಂದು ಜ್ಞಾನಿಯಾಗಿ ಬಾಳುವಿರಿ. ಈ ಲೌಕಿಕ ಪ್ರಪಂಚವು ಸಂಪೂರ್ಣವಾಗಿ ಮಾಯವಾಗುವುದು ಮತ್ತು ಸರಳತೆ, ಆನಂದ ಮತ್ತು ಕರುಣೆಯನ್ನು ಹೊಂದಿರುವ ಅಪ್ರತಿಮವಾದ ಇನ್ನೊಂದು ಪ್ರಪಂಚವು ಉದ್ಭವವಾಗುವುದು.
ಗೀತಾದಲ್ಲಿ ಹೇಳಿದಂತೆ
“ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮ ಕಾಂಚನಃ |
ತುಲ್ಯಾಪ್ರಿಯಾಪ್ರಿಯೊ ಧೀರಸ್ತುಲ್ಯನಿಂದಾತ್ಮ ಸಂಸ್ತುತಿ ॥”
(ಆತ್ಮದಲ್ಲಿ ಸ್ಥಿರನಾಗಿರುವವನು ಸುಖ ಮತ್ತು ದುಃಖವನ್ನು ಸಮ ದೃಷ್ಟಿಯಿಂದ ನೋಡುವನು, ಒಂದು ಮಣ್ಣಿನ ಗಡ್ಡೆಗೂ, ಒಂದು ಕಲ್ಲಿಗೂ ಮತ್ತು ಚಿನ್ನದ ತುಂಡಿಗೂ ಒಂದೇ ಲಕ್ಷ್ಯ ಕೊಡುವನು. ವಿವೇಕವುಳ್ಳನಾಗಿರುವನು, ಮಧುರವಾದದ್ದನ್ನು ಕರ್ಕಶವಾದದ್ದನ್ನು ಒಂದೇ ಭಾವನೆಯಿಂದ ಸ್ವೀಕರಿಸುವನು, ಪ್ರಶಂಸೆ ಮತ್ತು ಆಕ್ಷೇಪಣೆಯನ್ನು ಒಂದೇ ದೃಷ್ಟಿಯಿಂದ ನೋಡುವನು)
ಜ್ಞಾನ ಮತ್ತು ಧ್ಯಾನದಿಂದ, ಎಚ್ಚರಿಕೆ ಮತ್ತು ಸಾಧನೆಯಿಂದ, ನಿತ್ಯಾನಂದಕ್ಕೆ (ನಿತ್ಯ-ಆನಂದಕ್ಕೆ) ಪ್ರವೇಶಿಸಲು, ನಿಶ್ಚಿತವಾಗಿ ನಿಮ್ಮ ನೋವೇ ಒಂದು ಚಮತ್ಕಾರದ ಹೆಬ್ಬಾಗಿಲು ಆಗಿರಬಹುದು.
ನನ್ನ ಆಶೀರ್ವಾದಗಳು ಸದಾ ನಿಮ್ಮ ಜೊತೆಯಲ್ಲಿ ಇರುತ್ತವೆ.
••••••••••