ನಿಮ್ಮ ಪ್ರಶ್ನೆಗಳಿಗೆ ಉತ್ತರ
This text was machine-transcribed from the printed book and may contain errors. Select the words and choose “Report a mistake”.
••••••••••
ಈ ಪ್ರಪಂಚದ ದುಃಖ - ಕಷ್ಟಗಳನ್ನು ಪರಿಹರಿಸಲು ಜ್ಞಾನೋದಯವೇ ಒಂದು ದಾರಿಯೇ?
ಒಂದು ವಿಷಯವನ್ನು ನೀವು ಮೊದಲು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಜ್ಞಾನೋದಯವು ದುಃಖದಿಂದ ತಪ್ಪಿಸಿಕೊಳ್ಳುವ ಒಂದು ದಾರಿ ಅಲ್ಲ. ಇದಕ್ಕೆ ವಿರುದ್ಧವಾಗಿ, ಜ್ಞಾನೋದಯವು, ನೋವಿನ ಲಕ್ಷಣಗಳ ಒಂದು ಅಗಾಧವಾದ ಒಳನೋಟದ ಪರಿಣಾಮ, - ನಾನು ಏಕೆ ದುಃಖಗೊಂಡಿದ್ದೇನೆ ? ಈ ದುಃಖವನ್ನು ಉಂಟುಮಾಡುತ್ತಿರುವಂಥದ್ದು ನನ್ನಲ್ಲಿ ಏನಿದೆ ? ಈ ವಿಷಯಗಳ ಪೂರ್ಣ ಜ್ಞಾನದಿಂದಲೇ ಜ್ಞಾನೋದಯವು ಆಗುವುದು.
ನೋವಿನ ಕಾರಣಗಳ ಮತ್ತು ಲಕ್ಷಣದ ಕೇವಲ ಒಂದು ಸ್ಪಷ್ಟ ಪರಿಜ್ಞಾನದಿಂದಲೇ, ನೋವು ತಾನಾಗಿ ತಾನೆ ಇಂಗಿ ಹೋಗುವುದು - ಏಕೆಂದರೆ ಅದಕ್ಕೆ ನಮ್ಮೊಳಗೆ ಬದುಕಿರುವುದಕ್ಕೆ ಇನ್ನಾವ ಉದ್ದೇಶವು ಇಲ್ಲದೆ ಆಗಿ ಹೋಗುವುದು. ಈ ತಿಳುವಳಿಕೆಯು ಒಂದು ಅಪಾರ ಆನಂದದ ಸ್ಥಿತಿಯನ್ನು ಉಂಟುಮಾಡುವುದು - ಈ ಸ್ಥಿತಿಯೇ ಜ್ಞಾನೋದಯ!
ನೀವು ಇದಕ್ಕೆ ಮುಂಚೆ ಯಾವುದನ್ನು ಸುಖ ಮತ್ತು ತೃಪ್ತಿ ಎನ್ನುತ್ತಿದ್ದರೋ, ಅದು ನಿಜವಾದ ಸುಖವಲ್ಲ, ನಿಜವಾದ ತೃಪ್ತಿಯಲ್ಲ - ಎಂಬುವ ಸತ್ಯವನ್ನು ಜ್ಞಾನೋದಯವು ತೋರ್ಪಡಿಸುತ್ತದೆ. ಜ್ಞಾನೋದಯವು ನಿಮ್ಮ ಮೇಲೆ ಪರಮಸುಖವನ್ನು ಮತ್ತು ಆತ್ಮಾನಂದವನ್ನು ಸುರಿಸುತ್ತದೆ. ನಿಮಗೆ ನಿಜದ ರುಚಿಯನ್ನು ಜ್ಞಾನೋದಯವು ನೀಡುತ್ತದೆ.
ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ, ನೀವು ನೋವಿನ ಪ್ರತಿಬಂಧವನ್ನು (pain barrier) ದಾಟುವವರೆಗೆ, ನೋವಿನ ಇಡಿ ವಿಸ್ತಾರವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವವರೆಗೆ, ಜ್ಞಾನೋದಯವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಜ್ಞಾನೋದಯವು ನೋವಿನಿಂದ ಅಥವಾ ದುಃಖದಿಂದ ತಪ್ಪಿಸಿ ಕೊಳ್ಳುವುದಕ್ಕೆ ಆಗುವುದಕ್ಕೆ ಒಂದು ಸುಲಭವಾದ ದಾರಿಯು ಖಂಡಿತ ಅಲ್ಲ.
ಒಂದು ದೃಷ್ಟಿಯಿಂದ ನೋಡಿದರೆ, ನೀವು ನಿಮ್ಮ ದುಃಖ ಪೀಡೆಗಳ ಉಪಕಾರ ಸ್ಮರಣೆಯನ್ನು ಮಾಡಬೇಕು. ಏಕೆಂದರೆ ಅವುಗಳೇ ನಿಮ್ಮನ್ನು ಸತ್ಯ ಮತ್ತು ಅತೀತದ ಅನ್ವೇಷಣೆಗೆ ದಾರಿ ತೋರಿಸಿದ ವೇಗವರ್ಧಕಗಳಲ್ಲವೇ?
ಯಾರಾದರೂ ನನ್ನನ್ನು ಅವಮಾನ ಮಾಡಿದಾಗ ನನಗೆ ಬೇಗನೆ ಕೋಪ ಬರುವುದು ಮತ್ತು ಮನಸ್ಸಿಗೆ ಬಹಳ ನೋವು ಉಂಟಾಗುವುದು. ಇದನ್ನು ನಾನು ಹೇಗೆ ತ್ಯಜಿಸಲಿ?
> ಇದನ್ನು ಏಕೆ ತ್ಯಜಿಸಲು ಪ್ರಯತ್ನ ಮಾಡುತ್ತೀರಾ ? ನೋವು, ಕೋಪ, ಅವಮಾನ ಈ > ಭಾವನೆಗಳನ್ನೆಲ್ಲ ನೀವು ಒತ್ತಿಟ್ಟರೆ ಅವುಗಳು ನಿಮ್ಮ ಒಳಗಿನ ವ್ಯವಸ್ಥೆಯಲ್ಲಿಯೇ ಅಡಗಿಕೊಂಡು > ಇರುವುದು. ಒತ್ತಿಟ್ಟ ಭಾವನೆಗಳು ಬಹಳ ಅಪಾಯಕಾರಿ. ಸ್ವಲ್ಪ ಕೋಪ, ಸ್ವಲ್ಪ ಮನಸ್ಸಿನ ಬೇಜಾರು > ಇವುಗಳು ಕಾಲ ಕಳೆದಂತೆ ಹುಣ್ಣಾಗಿ, ಮನಸ್ಸಿನಲ್ಲಿ ಉಗ್ರವಾದ ದ್ವೇಷ ಖಾಯಂ ಆಗುವುದು.
ನಿಮ್ಮ ಭಾವನೆಗಳ ವಿಮರ್ಶನೆಯನ್ನು ಮಾಡುವ ಬದಲು ಅವುಗಳನ್ನು ಸ್ವೀಕರಿಸಲು ಪ್ರಯತ್ನ ಮಾಡಿ. ನಿಮ್ಮ ಮನಸ್ಸಿಗೆ ನೋವಾಗಿದೆಯೇ ? ಸರಿ, ಈಗ ಈ ನೋವಿನ ಭಾವನೆಯೊಳಗೆ ಪ್ರವೇಶಿಸಿ ಮತ್ತು ಸಂಪೂರ್ಣವಾಗಿ ಅನುಭವಿಸಿ. ಅದನ್ನು ತ್ಯಜಿಸಬೇಡಿ, ತಿರಸ್ಕರಿಸಬೇಡಿ, ಆದರೆ ನಿಮ್ಮನ್ನು ನೀವೇ ಕನಿಕರಿಸಲೂ ಬೇಡಿ. ಈ ಭಾವನೆಗಳನ್ನು ನಿಮ್ಮನ್ನು ನೋಯಿಸಿದವರ ಕಡೆಗೂ ತಿರುಗಿಸಬೇಡಿ. ಸುಮ್ಮನೆ ಈ ಭಾವನೆಗಳು ನಿಮ್ಮೊಳಗೆ ಆಟ ಆಡುವುದನ್ನು ವೀಕ್ಷಿಸಿ. ಈ ಸಾಧನೆಯನ್ನು ಪೂರೈಸುವುದಕ್ಕೆ ಸ್ವಲ್ಪ ಸಮಯ ಹಿಡಿಸಬಹುದು. ಸ್ವಲ್ಪ ದಿನಗಳೇ ಆಗಬಹುದು ! ಇದಾದನಂತರ ನಿಮ್ಮೊಳಗೆ ನೀವು ಎಂದೂ ಕಲ್ಪಿಸದ ಪರಿವರ್ತನೆಗೆ ಸಾಕ್ಷಿಯಾಗುವಿರಿ. ಎಷ್ಟಾದರೂ ಭಾವನೆಗಳು ಒಂದು ಪ್ರಚಂಡವಾದ ಶಕ್ತಿಯ (ಎನೆರ್ಜಿಯ) ಸ್ವರೂಪವಲ್ಲವೇ ? ನೀವು ಯಾವ ಕ್ಷಣದಲ್ಲಿ ನೋವನ್ನು ಸಂಪೂರ್ಣವಾಗಿ ಸ್ವೀಕರಿಸಿ, ನಿಮ್ಮ ಜೀವನದಲ್ಲಿ ಅದರ ವಿಶೇಷತೆಯನ್ನು ಗ್ರಹಿಸುತ್ತೀರೋ, ಅದೇ ಕ್ಷಣದಲ್ಲಿ ನೋವಿನ ಗುಣವೇ ಬದಲಾಯಿಸುವುದು. ಯಾವ ಶಕ್ತಿಯು ಅಥವಾ ಎನರ್ಜಿಯು ನೋವಿನ, ದುಃಖದ, ಕೋಪದ ಸ್ವರೂಪವಾಗಿ ನಿಮ್ಮಲ್ಲಿ ಸುತ್ತಾಡುತ್ತಿತ್ತೋ, ಅದೇ ಶಕ್ತಿಯು ಪ್ರೀತಿ, ಪ್ರೇಮ, ಮತ್ತು ಆನಂದದ ದಿವ್ಯ ಭಾವನೆಗಳ ಸ್ವರೂಪಕ್ಕೆ ಪರಿವರ್ತಿತವಾಗುವುದು.
ಇದೇ ಶಕ್ತಿಯು ಕರುಣೆ ಅಥವಾ ಸಹಾನುಭೂತಿ - ನಮ್ಮೆಲ್ಲರಲ್ಲಿರುವ ಒಂದು ಮೌನವಾದ ಶಕ್ತಿ, ವಿಕಟವಾದುದ್ದನ್ನು ಸೌಂದರ್ಯಕ್ಕೆ ಪರಿವರ್ತಿಸುವ ಶಕ್ತಿ ಮತ್ತು ನಮ್ಮಲ್ಲಿ ಉಂಟಾಗುವ ಈ ಕರುಣೆಯ ಭಾವನೆಯು ನಮಗೆ ಶ್ರೇಯಸ್ಸನ್ನು ನೀಡುವುದು.
ನಂಬಿಕೆ ಬರುತ್ತಾ ಇಲ್ಲವೇ ? ಹೌದು, ಅದನ್ನು ನೀವೇ ಅನುಭವಿಸುವವರೆಗೆ, ನಂಬುವುದು ಕಷ್ಟ. ಈ ಸಾಧನೆಗೆ ಒಂದು ಅವಕಾಶ ಕೊಟ್ಟು ನೋಡಿ !
ಪ್ರೀತಿ ಮತ್ತು ನೋವು ಏಕೆ ಯಾವಾಗಲು ಕೂಡಿಕೊಂಡು ಇರುವವು ? ನಾನು ನನ್ನ ಎಲ್ಲಾ ಸಂಬಂಧಗಳಲ್ಲೂ ನನ್ನ ಸಂಗಾತಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ಕೊಡುತ್ತೇನೆ. ಆದರೂ ಕಡೆಯಲ್ಲಿ ನನ್ನನ್ನು ಅವರೆಲ್ಲ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.
ಮೊದಲನೆಯದಾಗಿ ನೀವು ನಿಮ್ಮ ಪ್ರೇಯತಮಗೆ ನಾನು ಸ್ವಾತಂತ್ರ್ಯ ಕೊಡುತ್ತಾ ಇದ್ದೇನೆ ಎಂಬ
ಯೋಚನೆಯೇ ತಪ್ಪಲ್ಲವೆ ? ಪ್ರೀತಿಯ ಅರ್ಥವೇ ಸಂಪೂರ್ಣ ಮತ್ತು ಬೇಷರತ್ತು ಸ್ವಾತಂತ್ರ್ಯ
ಕೊಡುವುದು. ನೀವು ನಿಮ್ಮ ಅಭಿಪ್ರಾಯದಲ್ಲಿ ಸಾಕಷ್ಟು ಸ್ವಾತಂತ್ರ್ಯವನ್ನು ಕೊಡುತ್ತಾ ಇದ್ದೀರಾ
ಅಂತ ಹೇಳುವುದರಲ್ಲೇ ನಿಮ್ಮ ಕೊಡುವಿಕೆಯಲ್ಲಿ ಸ್ವಲ್ಪ ಹಿಡಿತ ಇದೆ ಎಂದು ಸ್ಪಷ್ಟವಾಗಿ
ತೋರ್ಪಡಿಸುತ್ತದೆ. ನಿಮ್ಮ ಪ್ರಿಯತಮೆಯ ಮೇಲೆ ಯಜಮಾನಿಕೆ ಹೊಂದಬೇಕೆನಿಸುವುದು
ಸ್ವಾಭಾವಿಕ. ಅದು ನಿಮ್ಮ ಅಹಂಕಾರವು ಆಡಿಸುತ್ತಿರುವ ಒಂದು ಆಟ ! ನಿಮ್ಮ ಸಂಗಾತಿಗೆ ನಿಮ್ಮ ಬಂಧನದಿಂದ ಸ್ವಲ್ಪ ಹೊತ್ತು ಕಾಲ ವಿಮೋಚನೆಯ ಅವಶ್ಯಕತೆ ಇದೆ ಎಂಬುವುದು ನಿಮಗೆ ಕಲ್ಪಿಸಲು ಸಾಧ್ಯವೇ ಇಲ್ಲ, ಅಲ್ಲವೇ ? ಸ್ವಾತಂತ್ರ್ಯ ಕೊಡುವುದು ಬಹಳ ಉತ್ತಮವಾದದ್ದು ಎಂಬ ನಂಬಿಕೆಯಲ್ಲಿಯೇ ನೀವು ನಡೆದುಕೊಂಡಿರುತ್ತೀರ. ಆದರೆ ನಿಮ್ಮ ಪ್ರಿಯತಮೆಯು ನಿಜವಾಗಿಯೂ ಈ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡಾಗ, ನೀವು ನಿಮ್ಮ ಅನುಚಿತ ಉಪಯೋಗವಾಗಿದೆ ಎಂದು ಭಾವಿಸುತ್ತೀರ. ನೀವು ಕೊಟ್ಟಿದ್ದ ಸ್ವಾತಂತ್ರ್ಯವನ್ನು ತನಗೆ ಇಷ್ಟ ಬಂದಿದ್ದ ಕೆಲಸಕ್ಕೆ ಅಥವಾ ಬೇರೆಯವರ ಜೊತೆ ಇರುವುದಕ್ಕೆ ಯಪಯೋಗಿಸುತ್ತಾಳೆ ಅಂತ ನೀವು ಎಂದಿಗೂ ಕಲ್ಪಿಸಿರಲಿಲ್ಲವಲ್ಲವೇ ?
ಇಷ್ಟೆಲ್ಲ ಆದಮೇಲೆಯೂ ನಾನು ನನ್ನ ಸಂಬಂಧಗಳಲ್ಲಿ ಸ್ವಾತಂತ್ರ್ಯವನ್ನು ನೀಡಿದಾಗೆಲ್ಲ ನನಗೆ ಮೋಸವಾಗುವುದು ಅಂತ ನಿರ್ಣಯವನ್ನು ಮಾಡಿದರೆ ಅದು ಬಹಳ ತಪ್ಪು !
ಸ್ವಲ್ಪ ಯೋಚನೆ ಮಾಡಿ ನೋಡಿ, ಇದರಲ್ಲೆಲ್ಲ ನಿಮ್ಮದೂ ತಪ್ಪಿದೆ ಅಲ್ಲವೆ ? ಪ್ರೇಮಿಗಳು ತಮಗೆ ಗೊತ್ತಿಲ್ಲದೆ ಒಬ್ಬರಿಂದೊಬ್ಬರು ಪಟ್ಟಿರುವ ಅಪೇಕ್ಷೆಗಳ ಬಂಗಾರದ ಪಂಜರದಲ್ಲಿ ಒಬ್ಬರನೊಬ್ಬರು ಸೆರೆಯಿಡುವರು. ಈ ಕಾರಣದಿಂದಲೇ ಸಾಮಾನ್ಯವಾಗಿ ಪ್ರೀತಿಯ ಸಮೇತವಾಗಿ ನೋವು ಉಂಟಾಗುವುದು. ಆದರೆ ನಿಜವಾದ ಪ್ರೇಮ, ಸೆರೆಯಲ್ಲಿ ಅರಳುವುದಕ್ಕೆ ಸಾಧ್ಯವಿಲ್ಲ. ಹೀಗೆ ಒಬ್ಬರನೊಬ್ಬರು ಸೆರೆಯಲ್ಲಿಟ್ಟಿದ್ದರೆ, ಸ್ವಲ್ಪ ಸಮಯ ಕಳೆದ ಮೇಲೆ ನೀವು ಈ ಪ್ರೀತಿಯೇ ಒಂದು ದೊಡ್ಡ ಸಂಕಟ ಮತ್ತು ಪ್ರೀತಿಸದೆ ಇರುವುದು ಇನ್ನೂ ಉತ್ತಮ ಎಂದು ಭಾವಿಸುವಿರಿ. ಆದರೆ ನೀವು ನಿಮ್ಮ ಹೃದಯದ ಬಾಗಿಲನ್ನು ಪ್ರೇಮಕ್ಕೆ ಮುಚ್ಚಿಕೊಂಡರೆ ಈ ಜೀವನದಲ್ಲಿ ಇನ್ನೇನು ಬಾಕಿ ಇದೆ ? ಪ್ರೇಮವು ಸುಖಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ದಾರಿಯಾಗಬಹುದು ಅಥವಾ ನರಕವಾಗಬಹುದು. ಪ್ರೇಮವನ್ನು ನೋವಾಗಿ ಅಥವಾ ದುಃಖವಾಗಿ ಅನುಭವಿಸಿದರೆ ನೀವು ಪ್ರೇಮದ ನಿಜವಾದ ಉದ್ದೇಶವನ್ನೇ ಕಳೆದುಕೊಂಡಿದ್ದೀರ. ಎಂದಿಗೂ ಕಲ್ಪಿಸಿರಲಿಲ್ಲವಲ್ಲವೆ ?
ಭಾರತ ದೇಶದಲ್ಲಿ ನಾವು ಬಹಳ ಹಿಂದಿನಿಂದ ಬಂದಿದ್ದ 'ಕರ್ಮ' ಸಿದ್ಧಾಂತ (ಅನಿವಾರಣೀಯ ದುಃಖ ಅನುಭವ)ವನ್ನು ನಂಬಿಕೊಂಡು ಬಂದಿದ್ದೇವೆ. ಜೀವನದಲ್ಲಿ ನಮಗೆ ದುಃಖದ ಅನುಭವ ಅಗತ್ಯವೇ ?
ಮೊದಲನೆಯದಾಗಿ, ದುಃಖ ಪಡುವುದು ಜೀವನಕ್ಕೆ ಸಹಜವಲ್ಲ. ಆದರೆ ಅದು ನಮ್ಮ ಮನಸ್ಸಿನ ಒಂದು ಸ್ಥಿತಿ, ಎಂದು ನೀವು ಚೆನ್ನಾಗಿ ತಿಳಿದುಕೊಳ್ಳಬೇಕು. ನಿಮ್ಮ ಜೀವನದಲ್ಲಿ ದುಃಖವು ಒಂದು ಘಟನೆ ಅಲ್ಲ ಹೊರತು ಅದು ಒಂದು ಘಟನೆಗೆ ನೀವು ನೀಡಿದ ಪ್ರತಿಕ್ರಿಯೆ. ನೀವು ಯಾವುದೇ ಒಂದು ಸಂದರ್ಭದಲ್ಲಿ ದುಃಖ ಪಡುತ್ತೀರೋ ಇಲ್ಲವೋ, ಅದು ಆ ಸಂದರ್ಭಕ್ಕೆ ನಿಮ್ಮ ಪ್ರತಿಕ್ರಿಯೆಯು ನಿರ್ಧರಿಸುತ್ತದೆ.
ನೀವು ಯಾವ ಯಾವ ಸಂದರ್ಭಗಳಲ್ಲಿ ದುಃಖ ಪಡುತ್ತೀರಾ ? ನೀವು ಕಾಯಿಲೆ ಬಿದ್ದಾಗಲೇ ? ನಿಮ್ಮ ಪಕ್ಕದ ಮನೆಯವರು ಹೊಸ ಕಾರು ಕೊಂಡುಕೊಂಡಾಗಲೇ ? ನಿಮ್ಮ ಪ್ರಿಯತಮ/ಪ್ರಿಯತಮೆಯು ಬೇರೆಯವರಿಗೋಸ್ಕರ ನಿಮ್ಮನ್ನು ಬಿಟ್ಟು ಹೋದಾಗಲೇ ? ಆದದ್ದೆಲ್ಲ ಬಹಳ ಅನ್ಯಾಯವೆಂಬ ಭಾವನೆ ಇಲ್ಲದೆ ಮತ್ತು ಕೋಪವಿಲ್ಲದೆ ನೀವು ಈ ಸಂದರ್ಭಗಳನ್ನು ಅವು ಇದ್ದ ಹಾಗೆ ಸ್ವೀಕರಿಸಿದರೆ ಬಹುಶಃ ನಿಮಗೆ ಅಷ್ಟು ಕಷ್ಟವಾಗುವುದಿಲ್ಲ. ಈಗ ನಿಮ್ಮ ಪಕ್ಕದ ಮನೆಯವರು ಹೊಸ ಕಾರು ಕೊಂಡುಕೊಳ್ಳುವ ವಿಷಯದೊಳಗೆ ಏನು ದುಃಖ ಇದೆ ? ನಿಮ್ಮ ಪ್ರಿಯತಮೆಯು ನಿಮ್ಮನ್ನು ಬಿಟ್ಟು ಹೋದರೆ ಖಂಡಿತ ಆ ಕ್ಷಣಗಳಲ್ಲಿ ಮನಸ್ಸಿಗೆ ದುಃಖ ಉಂಟಾಗುವುದು. ಆದರೆ ನೀವು ಆ ಕ್ಷಣಗಳ ವಿರೋಧ ಮಾಡದೆ ಅವುಗಳನ್ನು ಸ್ವೀಕರಿಸಿ ಅವುಗಳ ಅನಿವಾರ್ಯತೆಯನ್ನು ಸ್ವಾಗತಿಸಲು ಪ್ರಯತ್ನ ಮಾಡಿ. ಆದರೆ ಯಾವುದೇ ಪ್ರತಿಕ್ರಿಯೆಯನ್ನು ನೀಡಬೇಡಿ. ಅದು ಏಕೆಂದರೆ ನಿಮ್ಮ ನಕಾರಾತ್ಮಕ (ನೆಗೆಟಿವ್) ಪ್ರತಿಕ್ರಿಯೆಗೆ ಮಾತ್ರ ನಿಮ್ಮನ್ನು ಸಂಕಟಪಡಿಸುವ ಶಕ್ತಿಯು ಇರುವುದು. ನೀವು ದುಃಖಿ ಪಡುತ್ತೀರೋ ಇಲ್ಲವೋ ಅದು ನಿಮ್ಮ ಕೈಯಲ್ಲಿ ಇದೆ. ಏಕೆಂದರೆ ನಿಮ್ಮೊಳಗಿನ ಮೌನವಾದ ಅನುಮತಿ ಇಲ್ಲದೆ ನಿಮಗೆ ದುಃಖ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಮಾತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾ ಇದೆ, ಅಲ್ಲವೆ?
ನಿಮ್ಮ ವ್ಯಕ್ತಿಗತ ವಿಮರ್ಶೆ ಇಲ್ಲದೆ ನಿಮ್ಮ ಅನುಭವಗಳನ್ನು ವೀಕ್ಷಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ವಿವಿಧ ಕಷ್ಟಗಳ ಮೂಲವನ್ನು (ಕೆಲವು ಕಾಣಿಸಿಕೊಂಡಿರುವಂಥದ್ದು ಕೆಲವು ಅಡಗಿಕೊಂಡಿರುವಂಥದ್ದು) ಚೆನ್ನಾಗಿ ಗುರುತಿಸಲು ಕಲಿತುಕೊಳ್ಳಿ. ಈ ವಿದ್ಯೆಯನ್ನು ನಿಮಗೆ ಒಂದೇ ದಿವಸದಲ್ಲಿ ಗಳಿಸಲು ಸಾಧ್ಯವಿಲ್ಲ. ಆದರೆ ನಿರಂತರ ಸಾಧನೆಯಿಂದ ಈ ಕೌಶಲ್ಯವನ್ನು ಪಡೆಯಬಹುದು.
ಕಾಯಿಲೆ ಬೀಳುವುದಕ್ಕೆ ಒಂದು ಬಹಳ ಸೂಕ್ಷ್ಮವಾದ ಕಾರಣ ಇರಬಹುದು. ನೀವು ಆ ನೋವಿನಿಂದ ಸುಖಿ ಪಡುತ್ತಿರಬಹುದು!
ಉದಾಹರಣೆಗೆ ನೀವು ಕಾಯಿಲೆ ಬಿದ್ದಾಗ ನೀವು ಬೇರೆಯವರಿಂದ ಬಯಸಿದ ಆರೈಕೆ ಮತ್ತು ಗಮನ ಪಡೆದು ಸುಖಿಸುತ್ತಿರಬಹುದು. ಕೆಲವೊಮ್ಮೆ ನೀವೇ ನಿಮಗೆ ಅಥವಾ ಬೇರೆಯವರಿಗೆ ಗಾಯಗೊಳಿಸುವುದರಲ್ಲಿ ಸುಖ ಪಡೆಯುತ್ತೀರ - ಇದು ಏಕೆ ಎಂಬುದನ್ನು ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ಇದೇ ಸುಖವನ್ನು ನೀವು ಅಥವಾ ಬೇರೆಯವರು ಗಾಯಹೊಂದದೆ, ಬೇರೆ ಉತ್ತಮವಾದ ದಾರಿಯಿಂದ ಗಳಿಸಲು ಸಾಧ್ಯವೆ ಎಂದು ನೀವು ಯೋಚಿಸಬೇಕು.
ಎಚ್ಚರಿಕೆಯಿಂದಿರಿ - ಇದೇ ಮೊದಲನೆಯ ಹೆಜ್ಜೆ.
ಸಂದರ್ಭವನ್ನು ಸಂಪೂರ್ಣವಾಗಿ ಸ್ವೀಕರಿಸಿ – ಇದು ಎರಡನೆಯ ಹೆಜ್ಜೆ.
ಎಚ್ಚರಿಕೆಯೊಡನೆ ಸ್ವೀಕಾರ – ದುಃಖ ನಿವಾರಣೆಗೆ ಇದೇ ಒಂದು ದಾರಿ.
ನಿಮ್ಮ ಪ್ರಶ್ನೆಯ ಎರಡನೆಯ ಭಾಗ – ಜೀವನದಲ್ಲಿ ದುಃಖದ ಅನುಭವ ಅಗತ್ಯವೆ?
ಹೌದು, ಒಂದು ವಿಧವಾಗಿ ದುಃಖದ ಅನುಭವ ಅಗತ್ಯ. ಅದು ಏಕೆಂದರೆ ದುಃಖವು ನಿಮ್ಮ ವೈಕ್ತಿಕತ ವಿಕಾಸಕ್ಕೆ ಒಂದು ಪ್ರಭಾವವುಳ್ಳ ವೇಗವರ್ಧಕವಾಗಿರುವುದು. ಬೀಜದ ಒಳಗಿದ್ದ ಒಂದು ಸಣ್ಣ ಗಿಡದ ಸಸಿಯು ಹೊರಗೆ ಬಂದು, ಬೆಳೆದು ಅರಳುವುದಕ್ಕೆ ಹೇಗೆ ಬೀಜ ಸೀಳಿ ಹೊರಗೆ ಬರುವುದೋ, ಅದೇ ರೀತಿಯಲ್ಲಿ ದುಃಖದ ಅನುಭವವೂ ನಿಮ್ಮ ಅಹಂಕಾರವನ್ನು ಸಮರ್ಥಿಸಿ, ರಕ್ಷಿಸುತ್ತಿರುವ ನಿಮ್ಮ ತಪ್ಪು ಯೋಚನಾ ಕ್ರಮಗಳನ್ನು ಚೂರು ಚೂರು ಮಾಡಿ, ನಿಮ್ಮನ್ನು ಜಾಗ್ರತೆಯ ದಿಕ್ಕಿನಲ್ಲಿ ಹೊರಡಿಸುವುದು. ಅಹಂಕಾರ ರೂಪೀ ಬೀಜದಿಂದ ನೀವು ಹೊರಗೆ ಬಂದಾಗ ನೀವು ನಿಜವನ್ನು ಸ್ಪಷ್ಟವಾಗಿ ಕಾಣುವಿರಿ. ನಿಮ್ಮ ಮತ್ತು ನಿಮ್ಮ ದುಃಖದ ನಡುವೆ ಒಂದು ಸೂಕ್ಷ್ಮವಾದ ಅಗಲುವಿಕೆಯನ್ನು ಗ್ರಹಿಸುವಿರಿ - ದುಃಖ ನಿಮ್ಮದು ಅಲ್ಲ, ನಿಮಗೆ ಸಹಜವಾದದ್ದು ಅಲ್ಲ. ವಾಸ್ತವವಾಗಿ ದುಃಖವು ಕೇವಲ ಸಂದರ್ಭಕ್ಕೆ ನೀವು ನೀಡಿದ ಪ್ರತಿಕ್ರಿಯೆ. ಈ ಸತ್ಯವನ್ನು ನೀವು ತಿಳಿದುಕೊಂಡಮೇಲೆ ನಿಮಗೆ ದುಃಖವನ್ನು ಅನುಭವಿಸಲು ಸಾಧ್ಯವೇ ಇಲ್ಲ. ದುಃಖವನ್ನು ಪೂರ್ಣ ಎಚ್ಚರಿಕೆಯಿಂದ ಸ್ವೀಕರಿಸುವುದರಲ್ಲಿ ನೀವು ಅದನ್ನು ವಾಸ್ತವವಾಗಿ ತ್ಯಜಿಸುವಿರಿ.
ಪರಮಾನಂದವನ್ನು ಪಡೆಯುವುದಕ್ಕೆ ದುಃಖವೇ ಒಂದು ದಾರಿ ಎಂಬುದು ನಿಜವಲ್ಲ, ಆದರೆ ದುಃಖ ನೀಡಿದ ಪಾಠದಿಂದ ಅದು ಕೇವಲ ನಮ್ಮದೊಂದು ಭ್ರಮೆ ಎಂದು ತಿಳಿದುಕೊಳ್ಳಬಹುದು. ದುಃಖದ ಅನುಭವವು, ದುಃಖ ಪಡುವುದೇ ಅನಾವಶ್ಯಕ ಎಂದು ತೋರ್ಪಡಿಸುತ್ತದೆ. ಈ ದುಃಖವನ್ನೇ ನಾನು 'ಅವಶ್ಯಕ ದುಃಖದ ಅನುಭವ' ಎಂದು ಕರೆಯುತ್ತೇನೆ.
ನೀವು ದುಃಖವನ್ನು ತ್ಯಜಿಸಿದರೆ ಆನಂದವು ಉಂಟಾಗುವುದು ಅಂತ ಹೇಳುತ್ತೀರ ಆದರೆ ಆನಂದವು ನಮ್ಮನ್ನು ತ್ಯಜಿಸಿದಾಗ ಮತ್ತೊಮ್ಮೆ ದುಃಖ ಉಂಟಾಗುವುದು. ನಾನು ದುಃಖದ ಸ್ಥಿತಿಯಿಂದ ಆನಂದಕ್ಕೆ ಹೇಗೆ ಏರಲಿ?
ನೀವು ಮೊದಲು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ ದುಃಖ ಮತ್ತು ಆನಂದ ಒಂದಕ್ಕೊಂದು ವಿರುದ್ಧವಿಲ್ಲ. ಆನಂದಕ್ಕೂ ದುಃಖಕ್ಕೂ ಏನೂ ಸಂಬಂಧವೇ ಇಲ್ಲ. ಸುಖವು ದುಃಖದ ವಿರುದ್ಧ- ಮತ್ತು ಎಲ್ಲಾ ವಿಪರೀತವಾದ ಗುಣಗಳ ರೀತಿಯಲ್ಲಿ ಒಂದು ಗುಣದ ವಿಹೀನದಲ್ಲಿ ಇನ್ನೊಂದಕ್ಕೆ ಜೀವವೇ ಇಲ್ಲ (ಅರ್ಥವೇ ಇಲ್ಲ). ಹೀಗೆ, ನೀವು ದುಃಖವನ್ನು ಅನುಭವಿಸಿಲ್ಲದಿದ್ದರೆ ಸುಖ ಅನುಭವಿಸುವುದಕ್ಕೂ ಸಾಧ್ಯವಿಲ್ಲ. ದುಃಖದ ವಿಹೀನದಲ್ಲಿಯೇ ನೀವು ಸುಖವನ್ನು ಅನುಭವಿಸಲು ಸಾಧ್ಯ. ಭಾರತದ ಧರ್ಮಗ್ರಂಥಗಳಲ್ಲಿದ್ದ ಒಂದು ಮುಖ್ಯವಾದ ವಿಷಯವೇನೆಂದರೆ ಸುಖ ಮತ್ತು ದುಃಖ ಇವೆರಡು ಭಾವನೆಗಳನ್ನು ದುಃಖ ಪದದಿಂದ ಸೂಚಿಸಲಾಗಿದೆ. ಇದು ಏಕೆಂದರೆ ದುಃಖ ಮತ್ತು ಸುಖ ಈ ಎರಡರ ಕಡೆಯ ಪರಿಣಾಮ ದುಃಖ.
ಸುಖ ಮತ್ತು ದುಃಖದ ತತ್ತ್ವಗಳನ್ನು ತ್ಯಜಿಸುವ ಪರಿಣಾಮವೇ ಆನಂದ - ಮತ್ತು ಈ ಎರಡು ತತ್ತ್ವಗಳನ್ನು ನೀವು ಒಟ್ಟಿಗೆ ತ್ಯಜಿಸಬೇಕು. ಬೇರೆ ಏನೂ ದಾರಿ ಇಲ್ಲ! ದುಃಖ ಮತ್ತು ಸುಖ ಇವೆರಡು ನಿಮ್ಮೊಳಗೆ ತಲ್ಲಣವನ್ನು ನೀಡಲಾರದೆ ಇದ್ದರೆ ಪರಮಾನಂದವು ನಿಮ್ಮೊಳಗೆ ಪ್ರವಾಹ ಆಗುವುದು. ಈ ಪರಮಾನಂದವು ದುಃಖ-ಸುಖದ ಸ್ತರಗಳನ್ನು ಮೀರಿದ ಒಂದು ಸ್ಥಿತಿ. ಪರಮಾನಂದವು ಒಂದು ಸಂಪೂರ್ಣ ಸ್ವರಮೇಳ, ಒಳಗಿನ ಪೂರ್ಣ ಮೌನ, ಸಂಪೂರ್ಣ ಶಾಂತಿ.
ನನ್ನ ಮಾತು ಅರ್ಥವಾಯಿತೇ?
