KAILASA Library/ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ/ಭಾವನಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವುದುSign in
ನಿಮ್ಮ ನಾಲ್ಕು ಅಂತಃಶಕ್ತಿಗಳನ್ನು ಜಾಗೃತಗೊಳಿಸಿರಿ

ಭಾವನಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವುದು

This text was machine-transcribed from the printed book and may contain errors. Select the words and choose “Report a mistake”.

ಉಪಾಯನಂ - ಜವಾಬ್ದಾರಿ

ನೀವೇ ಮೂಲ

ಭಾವನಾತ್ಮಕ ಶಕ್ತಿ ಎಂದರೆ ನಿಮ್ಮ ಜೀವನದ ಎಲ್ಲ ಆಗು ಹೋಗುಗಳ ಮೂಲ ನೀವೇ ಎಂದು ನೀವು ಅರಿಯುವ ಸಾಮರ್ಥ್ಯವಲ್ಲದೆ ಮತ್ತೇನು ಅಲ್ಲ. ಈ ಅರಿವು ನಿಮಗಾದರೆ, ನಿಮ್ಮ ಜೀವನದ ಮೇಲೆ ನಿಮಗೆ ಒಂದು ಬಲವಾದ ಹಿಡಿತ ಸಿಗುತ್ತದೆ ಮತ್ತು ನೀವು ಬೇರೆಯವರ ಜೀವನದ ಮೇಲೆ ಒಂದು ಸಕಾರಾತ್ಮಕ ಪ್ರಭಾವ ಬೀರುವ ಶಕ್ತಿ ನಿಮಗೆ ಕೊಡುತ್ತದೆ.

ಭಾವನಾತ್ಮಕ ಶಕ್ತಿಯು ಅನಾವರಣಗೊಳ್ಳುವುದು ನಿಮ್ಮನ್ನು ನೀವು ಒಬ್ಬ ನಾಯಕನೆಂದು ಅರಿತಾಗ ಮತ್ತು ನಿಮ್ಮ ಸುತ್ತ ಮುತ್ತಲಿನ ಎಲ್ಲಾ ಆಗು-ಹೋಗುಗಳಿಗೆ ನೀವು ಜವಾಬ್ದಾರಿ ತೆಗೆದುಕೊಂಡಾಗ! ಜವಾಬ್ದಾರಿಯು ನಿಮ್ಮ ಭಾವನಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವ ಕೀಲಿಕೈ.

People praying

ಜವಾಬ್ದಾರಿ ಎಂದರೇನು?

ಜವಾಬ್ದಾರಿ ಎಂದರೆ ನಿಮ್ಮ ಜೀವನದ ಎಲ್ಲಾ ಆಗು-ಹೋಗುಗಳಿಗೆ ನೀವೇ ಮೂಲ, ಆದ್ದರಿಂದ ನೀವೇ ಜವಾಬ್ದಾರರು ಎಂಬ ಸತ್ಯವನ್ನು ಅರಿತು ಬಾಳುವುದು ಮತ್ತು ಪ್ರತಿಕ್ರಿಯೆ ತೋರುವುದು.

ಯಾರೋ ಒಬ್ಬ, ಯಾರು ಅಲ್ಲ, ಯಾರಾದರೂ, ಪ್ರತಿಯೊಬ್ಬರು

ಈ ಸಣ್ಣ ಕಥೆ ನಮಗೆಲ್ಲರಿಗೂ ಗೊತ್ತಿದೆ!

ಒಂದಾನೊಂದು ಕಾಲದಲ್ಲಿ ಯಾರೋ ಒಬ್ಬ, ಯಾರೂ ಅಲ್ಲ, ಯಾರಾದರೂ, ಪ್ರತಿಯೊಬ್ಬರು ಎಂಬ ಹೆಸರಿನ ನಾಲ್ಕು ಜನರಿದ್ದರು. ಒಮ್ಮೆ ಒಂದು ಬಹು ಮುಖ್ಯವಾದ ಕೆಲಸ ಮಾಡುವುದಿತ್ತು. ಅದನ್ನು ಮಾಡುವವರು ಯಾರು? ಪ್ರತಿಯೊಬ್ಬರಿಗು ಯಾರೋ ಒಬ್ಬನು ಮಾತಾಡುತ್ತಾನೆಂದು ಖಾತ್ರಿ ಇತ್ತು. ಯಾರಾದರೂ ಮಾಡಬಹುದಿತ್ತು, ಆದರೆ ಯಾರೂ ಮಾಡಲಿಲ್ಲ. ಇದು ಪ್ರತಿಯೊಬ್ಬರ ಕೆಲಸವೆಂದು ಯಾರೋ ಒಬ್ಬನಿಗೆ ಕೋಪ ಬಂತು. ಪ್ರತಿಯೊಬ್ಬರು ಅಂದುಕೊಂಡರು ಯಾರಾದರೂ ಮಾಡಬಹುದು ಎಂದು, ಆದರೆ ಯಾರೂ ಅರಿಯಲಿಲ್ಲ, ಅದನ್ನು ಪ್ರತಿಯೊಬ್ಬರು ಮಾಡುವುದಿಲ್ಲ ಎಂದು. ಈ ಕಥೆ ಕೊನೆಗೊಂಡದ್ದು ಹೀಗೆ ಯಾರಾದರೂ ಮಾಡಬಹುದಾಗಿದ್ದ ಕೆಲಸವನ್ನು ಯಾವನೂ ಮಾಡಲಿಲ್ಲವಾದ್ದರಿಂದ ಪ್ರತಿಯೊಬ್ಬರು ಯಾರೋ ಒಬ್ಬನನ್ನು ದೂರಿದರು.

ಗುರುಕುಲದ ವಿದ್ಯಾರ್ಥಿಗಳು
Nithyananda seated on an ornate seat

ನನ್ನೊಳಗೆ ಏನಾಗುತ್ತದೆಯೊ ಅದಕ್ಕೆ ನಾನು ಜವಾಬ್ದಾರಿ ಎಂದರೆ ಒಪ್ಪಬಹುದು. ನನ್ನ ಹೊರಗೆ ಆಗುವ ಸಂಗತಿಗಳಿಗೆ ನಾನು ಹೇಗೆ ಜವಾಬ್ದಾರನಾಗಲು ಸಾಧ್ಯ? ಉದಾಹರಣೆಗೆ, ನನ್ನ ಜೀವನದಲ್ಲಿ ಯಾವುದಾದರು ಅಪಘಾತವಾದರೆ ಅದಕ್ಕೆ ನಾನು ಹೇಗೆ ತಾನೆ ಜವಾಬ್ದಾರನು? ಪ್ರತಿಯೊಬ್ಬರು ಈ ಪ್ರಶ್ನೆ ಕೇಳುತ್ತಾರೆ

ಆಲಿಸಿ: ಕಾರಣ ಕರ್ತೃವಾಗಿರುವುದಕ್ಕೆ ಜವಾಬ್ದಾರರಾಗಿರುವುದಕ್ಕೆ ಒಂದು ಬಹು ಮುಖ್ಯ ವ್ಯತ್ಯಾಸವಿದೆ.

ಕೆಲವು ಬಾರಿ ಕೆಲವು ಘಟನೆಗಳು ನಡೆಯಲು ನೀವು ಕಾರಣರಾಗಿರುವುದಿಲ್ಲ. ಆದರೆ ಅದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ಅದಕ್ಕೆ ನೀವು ಜವಾಬ್ದಾರರಾಗಿಯೇ ಇರುತ್ತೀರಿ. ಉದಾಹರಣೆಗೆ, ನಿಮ್ಮ ದೇಶದ ರಾಜಕೀಯ ಭ್ರಷ್ಟಾಚಾರಕ್ಕೆ ನೀವು ಕಾರಣ ಕರ್ತೃ ಅಲ್ಲದಿರಬಹುದು, ಆದರೆ ಆ ದೇಶದ ಒಬ್ಬ ಪ್ರಜೆಯಾಗಿ, ನೀವು ಜವಾಬ್ದಾರರಾಗಿರುತ್ತೀರಿ! ನಿಮ್ಮ ತರ್ಕದ ಪ್ರಕಾರ ನೀವು ಕಾರಣರಾಗಿಲ್ಲದಿರಬಹುದು, ಆದರ ಅರ್ಥ ನೀವು ನಿಜದಲ್ಲಿ ಜವಾಬ್ದಾರರಲ್ಲ ಎಂಬುದಲ್ಲ.

ನೀವು ತಿಳಿದುಕೊಳ್ಳಬೇಕಾದ್ದೇನೆಂದರೆ, ನೀವು ಜವಾಬ್ದಾರಿ ತೆಗೆದುಕೊಳ್ಳದ ಹೊರತು ನೀವು ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ ಮತ್ತು ನಿಮ್ಮ ಅಂತರಾಕಾಶವನ್ನು ವಿಸ್ತರಿಸಲೂ ಸಾಧ್ಯವಿಲ್ಲ.

Nithyananda blessing a follower

ಜವಾಬ್ದಾರಿಯು ನಿಮ್ಮನ್ನು ಸಾಮರ್ಥ್ಯವುಳ್ಳವರನ್ನಾಗಿ ಮಾಡುತ್ತದೆ.

ನಮಗೆ ಯಾವಾಗಲೂ ಜವಾಬ್ದಾರಿ ಎಂದರೆ ಹೊರೆ ಎನ್ನಿಸುತ್ತದೆ.

ಇಲ್ಲ! ಅದು ಸಾಮರ್ಥ್ಯ. ಜವಾಬ್ದಾರಿಯು ನಿಮ್ಮನ್ನು ಸೀದ ನಾಯಕತ್ವದ ಪ್ರಜ್ಞೆಗೆ ಕರೆದೊಯ್ಯುತ್ತದೆ. ಯಾವಾಗ ತನಕ ನೀವು ನಿಮ್ಮ ಕುಟುಂಬದ ಜವಾಬ್ದಾರಿ ತೆಗೆದುಕೊಂಡಿರುತ್ತೀರೋ, ನೀವು ನಿಮ್ಮ ಕುಟುಂಬಕ್ಕೆ ಮುಖ್ಯಸ್ಥರಾಗಿರುತ್ತೀರಿ. ನಿಮ್ಮ ಸಮಾಜಕ್ಕೆ ಜವಾಬ್ದಾರಿ ತೆಗೆದುಕೊಂಡಾಗ ನಿಮ್ಮ ಸಮಾಜಕ್ಕೆ ನಾಯಕರಾಗುತ್ತೀರ. ನಿಮ್ಮ ಜವಾಬ್ದಾರಿ ತೆಗೆದುಕೊಳ್ಳುವ ಮನೋಭಾವವು ವಿಸ್ತರಿಸಿದಂತೆ ನಿಮ್ಮ ನಾಯಕತ್ವದ ಗುಣಮಟ್ಟವು ವಿಸ್ತರಿಸುತ್ತದೆ. ಇಡೀ ವಿಶ್ವಕ್ಕೆ ಜವಾಬ್ದಾರರು. ಎನಿಸುವ ನಿರ್ಧಾರವು ಜ್ಞಾನೋದಯವು! ಎಲ್ಲಕ್ಕೂ ನಾನು ಜವಾಬ್ದಾರ ಎನಿಸುವುದು ಮತ್ತು ಆ ಅನಿಸಿಕೆಯನ್ನು ಬಾಳುತ್ತೇನೆ ಎಂದು ಘೋಷಿಸುವುದು ಜವಾಬ್ದಾರಿಯುತ ಘೋಷಣೆ ನಿಮ್ಮ ಭಾವನಾತ್ಮಕ ಶಕ್ತಿಯನ್ನು ಅನಾವರಣ ಗೊಳಿಸುತ್ತದೆ.

ನಿಮ್ಮ ಸುತ್ತಮುತ್ತಲಿನ ಎಲ್ಲ ಆಗು ಹೋಗುಗಳಿಗೆ ನೀವೆ ಜವಾಬ್ದಾರರು ಎಂದು ನಿಮಗೆ ಅನಿಸಿದ ತಕ್ಷಣವೆ ನಿಮಗನಿಸುತ್ತದೆ "ರಸ್ತೆಯ ಮೇಲೆ ಬಿದ್ದಿರುವ ಎಲ್ಲ ಕಸಕ್ಕೆ ನಾನು ಜವಾಬ್ದಾರಿ ತೆಗೆದುಕೊಂಡರೆ, ಇಡೀ ದಿನ ನಾನು ರಸ್ತೆಯನ್ನು ಸ್ವಚ್ಛ ಮಾಡುತ್ತಿರ ಬೇಕಾಗುತ್ತದೆ! ಬೇರೆ ಏನನ್ನು ನಾನು ಮಾಡಲು ಸಾಧ್ಯವೇ ಆಗುವುದಿಲ್ಲ!'

ಹೊಟ್ಟೆ ಕಿಚ್ಚು, ಹತಾಶೆ ಇವೆಲ್ಲ ನಿಮ್ಮ ಶಕ್ತಿ-ಹೀನತೆ ಬೇರೆ ಬೇರೆ ರೀತಿಯಲ್ಲಿ ತೋರುವುದು! ನಿಮ್ಮ ಜೀವನದಲ್ಲಿ ಎಲ್ಲಕ್ಕೂ ನೀವೇ ಜವಾಬ್ದಾರಿಯನ್ನು ಭಾವಿಸಿದಾಗ ನಿಮಗೆ ಎಲ್ಲದರಲ್ಲೂ ಆನಂದವೇ ಕಾಣುತ್ತದೆ, ಏಕೆಂದರೆ ಯಾವುದೂ ನಿಮ್ಮನ್ನು ನಿತ್ರಾಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮನ್ನು ನೀವು ಜವಾಬ್ದಾರಿಯಿಂದ ಬಲವಂತರನ್ನಾಗಿ ಮಾಡಿಕೊಳ್ಳಿ ಮತ್ತು ಭಾವನಾತ್ಮಕ ಶಕ್ತಿಯನ್ನು ಅನಾವರಣಗೊಳಿಸಿ.

ಭಾವನಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವುದರಿಂದ –

  • ತಾಕತ್ತು ಮತ್ತು ಪರಿಪೂರ್ಣತೆಯ ಅಂತರಾಕಾಶದಿಂದ ವರ್ತಿಸಿ
  • ಪರಿಹಾರದ ಮೇಲೆ ಗಮನವಿರಿಸಿ, ತಾಪತ್ರಯದ ಮೇಲಲ್ಲ.
  • ನಿಮ್ಮ ಅಂತರಾಕಾಶವನ್ನು ವಿಸ್ತರಿಸಿ ಮತ್ತು ಹೊಸ ಸಾಧ್ಯತೆಗಳನ್ನು ತೆರೆಯಿರಿ.
  • ಉತ್ಕೃಷ್ಟ ಮಟ್ಟದ ಹಿಡಿತವನ್ನು ನಿಮ್ಮ ಜೀವನದ ಮೇಲೆ ತಂದುಕೊಳ್ಳಿ.
  • ನಿಮ್ಮನ್ನು ನೀವು ಮುಂದಿನ ಉನ್ನತ ಮಟ್ಟದ ಯಶಸ್ಸಿಗೆ ಮೇಲೇರಿಸಿಕೊಳ್ಳಿ ಮತ್ತು ನವೀನ ವ್ಯಕ್ತಿಯಾಗಿ ವಿಕಸಿಸಿ.
ಭಾವನಾತ್ಮಕ ಶಕ್ತಿಯ ವೃತ್ತಚಿತ್ರ