ಆಲೋಚನಾ ಶಕ್ತಿಯ ಅನಾವರಣ
This text was machine-transcribed from the printed book and may contain errors. Select the words and choose “Report a mistake”.
ಶ್ರದ್ಧೆ
ಆಲೋಚನಾ ಶಕ್ತಿಯ ಸಾಧ್ಯತೆಗಳ ಉತ್ತುಂಗಕ್ಕೆ ನಿಮ್ಮನ್ನು ನೀವು ಶ್ರುತಿಗೂಡಿಸಿಕೊಳ್ಳಿ

ನೀವು ನೋಡಿದಂತೆ ನಿಮ್ಮ ವಾಕ್-ಬಲದಿಂದ ನೀವು ಸಂಬಂಧಗಳನ್ನು ರೂಪಿಸಬಹುದು ಅಥವಾ ಒಡೆಯಲೂ ಬಹುದು. ಆಲೋಚನಾ ಶಕ್ತಿಯು ವಾಕ್ ಶಕ್ತಿಗಿಂತ ಬಲವಾದುದು. ಏಕೆಂದರೆ, ನಿಮ್ಮ ಜೀವನವನ್ನೇ ಅದು ರೂಪಿಸಬಹುದು ಅಥವಾ ಒಡೆದುಹಾಕಬಹುದು! ನಿಮಗೆ ತಿಳಿದಿದೆಯೋ ಇಲ್ಲವೋ, ನೀವು ನಂಬುತ್ತೀರೋ ಇಲ್ಲವೋ, ನಿಮ್ಮ ದೇಹದ ಚಲನೆಯನ್ನು ಹೇಗೆ ನಿಯಂತ್ರಿಸುತ್ತೀರೋ ಹಾಗೇಯೇ ಮನಸ್ಸನ್ನೂ ಸಹ ನಿಯಂತ್ರಿಸಬಹುದು. ನೀವು ಏನಾಗಬೇಕು ಎಂಬುದರ ಬಗ್ಗೆ ನಿರ್ಧರಿಸಿ ಮತ್ತು ಘೋಷಿಸಿರಿ. ನಿಮ್ಮ ಅತ್ಯುನ್ನತ ಸಾಧ್ಯತೆಯ ಬಗ್ಗೆ ಇರಬೇಕಾದ ಮನೋಸ್ಥಿತಿಗೆ ಪೂರಕವಾಗಿರುವ ಆಲೋಚನೆಯನ್ನೇ ಪ್ರೋತ್ಸಾಹಿಸುತ್ತಾ ನಿಮ್ಮ ಮನಸ್ಸನ್ನು ತರಬೇತಿಗೊಳಿಸಿ. ಇದಕ್ಕೆ ವಿರುದ್ಧವಾದ ಯೋಚನೆ ಬಂದರೆ ಅದರೊಂದಿಗೆ ಪೂರ್ಣತ್ವ ಮಾಡಿಕೊಳ್ಳಿ.
ನಿಮ್ಮ ಆಲೋಚನೆ ನಿಮ್ಮನ್ನು ರೂಪಿಸಬಹುದು ಅಥವಾ ಒಡೆದುಹಾಕಬಹುದು. ಆಲೋಚನೆ ಬರುವುದು ಆಕಸ್ಮಿಕವಲ್ಲ. ಆಲೋಚನೆಯಲ್ಲಿ ನಿಮ್ಮ ಸ್ವಯಂ ಪ್ರೇರಿತ ಪಾತ್ರವಿರುತ್ತದೆ. ನಿಮ್ಮ ಆಲೋಚನಾ ಧಾಟಿಯನ್ನು ನೀವು ಸ್ವತಃ ಪ್ರೋತ್ಸಾಹಿಸಿ, ಪೋಷಿಸಿ, ಪುಷ್ಟಿಕರಿಸುತ್ತೀರಿ. ದೌರ್ಭಾಗ್ಯವೆಂದರೆ, ಆಲೋಚನೆಯು ಆಕಸ್ಮಿಕವಾದುದು ಹಾಗೂ ಅದರಿಂದಾಗಿ ಅದನ್ನು ನೀವು ನಿಯಂತ್ರಿಸಲು ಆಗುವುದಿಲ್ಲವೆಂದು ನಂಬುತ್ತೀರಿ.
ನಿಮ್ಮ ಆಲೋಚನಾಶಕ್ತಿಯು ಅನಾವರಣಗೊಂಡಾಗ ನಿಮ್ಮ ಆಲೋಚನೆಗಳನ್ನು ನಿಮ್ಮ ಸಾಧ್ಯತೆಗಳ ಉತ್ತುಂಗವನ್ನು ಸಾಧಿಸಲು ಕೇಂದ್ರೀಕರಿಸುತ್ತೀರಿ.
ಶ್ರದ್ಧೆ ಎಂಬುದು ನಿಮ್ಮ ಸಾಧ್ಯತೆಗಳ ಉತ್ತುಂಗದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುವುದು ಎಂದರ್ಥ. ಶ್ರದ್ಧೆಯು ನಿಮ್ಮ ಆಲೋಚನೆಯಲ್ಲಿರುವ ಶಕ್ತಿಯನ್ನು ಅನಾವರಣಗೊಳಿಸಲು ಇರುವ ಕೀಲಿಕೈ.

ಶ್ರದ್ಧೆ ಎಂದರೇನು?
ನಿಮ್ಮ ಅಸ್ತಿತ್ವದ ಅತ್ಯಂತ ಉನ್ನತ ಮಟ್ಟದ ಸಾಧ್ಯತೆಯ ಸ್ಥಿತಿಯಲ್ಲಿ ನಿಮ್ಮನ್ನು ಪ್ರತಿಷ್ಠಾಪಿಸಿಕೊಂಡು, ನಿಮಗೆ ನೀವು ಯಾವ ಮಟ್ಟದಲ್ಲಿ ನಿಮ್ಮನ್ನು ಎತ್ತಿ ಹಿಡಿಯುತ್ತೀರೋ, ನಿಮ್ಮನ್ನು ನೀವು ಇತರರಿಗೆ ಯಾವ ರೀತಿ ಬಿಂಬಿಸುತ್ತೀರೋ, ಹಾಗೂ ಇತರರು, ನೀವು ಅವರಿಗೆ ಹೇಗಿರಬೇಕೆಂಬುದನ್ನು ನಿಮ್ಮಿಂದ ಅಪೇಕ್ಷಿಸುತ್ತಾರೋ, ಆ ಸ್ಥಿತಿಯಿಂದ ಜೀವನದೊಂದಿಗೆ ಸ್ಪಂದಿಸುವುದೇ ಶ್ರದ್ಧೆ. ಅದನ್ನೇ ಗ್ರಹಿಸುತ್ತಾರೆ.
■ ನಾಲ್ಕನೇ ಆಯಾಮವು ಬಹಳ ಸೂಕ್ಷ್ಮವಾದುದು. ಏಕೆಂದರೆ ಅದು ನಿಮಗೆ ನೇರವಾಗಿ ಸಂಬಂಧಿಸಿಲ್ಲ. ಅದನ್ನು ಸ್ವ-ಅನ್ಯಕಾರ ಅಥವಾ ಜೀವನದ ಬಿಂಬ ಎನ್ನಬಹುದು. ಜೀವನದ ಬಿಂಬ ಎನ್ನುವುದು, ನಿಮಗೆ ಅನ್ನಿಸಿದಂತೆ ಜೀವನವನ್ನು ಅನುಭವಿಸುವುದು.
ಉದಾಹರಣೆಗೆ:- ನಾನು ಒಬ್ಬಂಟಿಗ, ಬದುಕು ಜಟಿಲ, ಜೀವನವು ಬಹಳ ಪವಿತ್ರವಾದದು, ಜೀವನ ಎಂಬುದು ಅತಿ ಭಯಂಕರ ಅಥವಾ ಜೀವನವು ನನ್ನ ಎಲ್ಲಾ ಬಯಕೆಗಳನ್ನು ಈಡೇರಿಸುತ್ತದೆ - ಹೀಗೆಲ್ಲಾ ನೀವು ಯೋಚಿಸಬಹುದು. ದಯವಿಟ್ಟು ಅರ್ಥಮಾಡಿಕೊಳ್ಳಿ - ಇದೂ ಸಹ ನಿಮ್ಮ ಪರಿಚಯವೇ! ಏಕೆಂದರೆ ಇದು ನಿಮಗೆ ಇತರರಿಂದ ಹಾಗೂ ಸಂದರ್ಭಗಳಿಂದ ನೀವು ಪಡೆಯುವ ಅನುಭವವನ್ನು ಸೂಚಿಸುತ್ತದೆ.
ಶ್ರದ್ಧೆಯೆಂದರೆ ಈ ನಾಲ್ಕು ಆಯಾಮಗಳಲ್ಲೂ ನೀವು ಉತ್ತುಂಗ ಸಾಧ್ಯತೆಯಲ್ಲಿ ಬದುಕುವುದು.
ಮೂಲ ಆಲೋಚನಾ ವಿನ್ಯಾಸಗಳು - ದ್ವಂದ್ವಗಳ ಉಗಮ ಸ್ಥಾನ
ಭೂತಕಾಲದಲ್ಲಿ ನಾವು ಸೋಲನ್ನು ಅನುಭವಿಸಿದ, ಶಿಕ್ಷೆಗೊಳಗಾದ, ನಿಂದನೆಗೆ ಗುರಿಯಾದ ಅಥವಾ ನಮ್ಮ ಆಪ್ತರೆಸಾವನ್ನು ವೀಕ್ಷಿಸಿದ, ನಮ್ಮನ್ನು ತೊರೆದ - ಹೀಗೆ ಎಲ್ಲವನ್ನೂ ಅನುಭವಿಸಿದಾಗ ನಮ್ಮೊಳಗೆ ಉಂಟಾದ ಅನುಭವಗಳ ಆಧಾರದಿಂದ ಸ್ಪಂದಿಸುವ ಒಂದು ಪೂರ್ವ ನಿರ್ಧಾರಿತ ಮಾರ್ಗವನ್ನು ಆಲೋಚನಾ ವಿನ್ಯಾಸ ಎನ್ನುತ್ತೇವೆ. ಇಂತಹ ಸಮಯದಲ್ಲಿ ನಿರ್ಮಾಣವಾದ ವಿಷ್ಣವದಿಂದ ನೀವು ನಿಮ್ಮ ಬಗ್ಗೆ ಹಾಗೂ ಜೀವನದ ಬಗ್ಗೆ ಒಂದು ಪರಿಕಲ್ಪನೆಯನ್ನು ರೂಪಿಸುತ್ತೀರಿ. ಅಂದರೆ - 'ನಾನು ಅಶಕ್ತ', 'ನಾನು ಪರಾಭವಿ', 'ನನ್ನನ್ನು ಯಾರೂ ಪ್ರೀತಿಸುವುದಿಲ್ಲ', ಅಥವಾ 'ಬದುಕು ಅಪಾಯಕಾರಿ ನಾನು ಎಚ್ಚರವಾಗಿರಬೇಕು' ಇತ್ಯಾದಿ.

ಶ್ರದ್ಧೆಯು ಹೇಗೆ ನಿಮ್ಮ ಆಲೋಚನಾಶಕ್ತಿಯನ್ನು ಅನಾವರಣಗೊಳಿಸುತ್ತದೆ?

ದಯವಿಟ್ಟು ಅರ್ಥಮಾಡಿಕೊಳ್ಳಿ, ನೀವು
ಹೊಂದಿರುವ ಎಲ್ಲಾ ವ್ಯಕ್ತಿತ್ವಗಳೂ ನಿಮ್ಮ
ಬಗ್ಗೆ ನೀವು ಹೊತ್ತಿರುವ ಆಲೋಚನಾ
ವಿನ್ಯಾಸಗಳಷ್ಟೆ. ಇತರರು ನಿಮ್ಮ ಬಗ್ಗೆ
ಇಟ್ಟಿರುವ ಅಭಿಪ್ರಾಯವೂ ಅಷ್ಟೆ, ನೀವು
ಅವರಲ್ಲಿ ಸೃಷ್ಟಿಸಿದ ಅಭಿಪ್ರಾಯವಷ್ಟೆ.
ಹಾಗಾಗಿ ನೀವೇ ನಿಮ್ಮೆಲ್ಲಾ ವ್ಯಕ್ತಿತ್ವಗಳ
ಸೃಷ್ಟಿಕರ್ತರು. ಅರ್ಥಮಾಡಿಕೊಳ್ಳಿ!
ಈಗ ಒಂದು ವ್ಯಕ್ತಿತ್ವವು ಮತ್ತೊಂದು ವ್ಯಕ್ತಿತ್ವದೊಂದಿಗೆ ಜಗಳವಾಡುತ್ತಿದ್ದಾಗ ನಿಮ್ಮ ಆಲೋಚನಾಶಕ್ತಿಯನ್ನು ಕೇಂದ್ರೀಕರಿಸುವುದಾದರೂ ಹೇಗೆ? ನಿಮ್ಮಲ್ಲಿನ ಎಲ್ಲಾ ಶಕ್ತಿಯೂ ಆ ಗೊಂದಲಗಳನ್ನು ನಿಭಾಯಿಸಲು ವ್ಯಯವಾಗುತ್ತದೆ. ನಿಮ್ಮ ಎಲ್ಲಾ ವ್ಯಕ್ತಿತ್ವಗಳೂ ಶ್ರುತಿಗೊಂಡಾಗ, ನಿಮ್ಮ ಆಲೋಚನಾಶಕ್ತಿಯೂ ಒಂದೇ ದಿಕ್ಕಿನೆಡೆ ಸಮನ್ವಯಗೊಂಡು ಲೇಸರ್ ಕಿರಣದಂತೆ ಸ್ಪಷ್ಟ ಹಾಗೂ ತೀಕ್ಷ್ಣವಾಗುತ್ತದೆ. ನಿಮ್ಮ ಆಲೋಚನಾಶಕ್ತಿಯನ್ನು ಜಾಗೃತಗೊಳಿಸುವಿರಿ.
ಶ್ರದ್ಧೆಯು ಮೂಡಿದಾಗ ಪ್ರಜ್ಞಾರಹಿತ ಜೀವನಕ್ಕೆ ಎಡೆಯಿರುವುದಿಲ್ಲ. ಏಕೆಂದರೆ, ಆಗ ನಿಮ್ಮ ಜೀವನದಲ್ಲಿ ಕಾರಣ ಮತ್ತು ಪರಿಣಾಮಗಳು ಹೇಗೆ ಆಟವಾಡುತ್ತಿವೆ ಎಂಬ ಅರಿವು ಸತತವಾಗಿ ಮೂಡಿರುತ್ತದೆ.
ನೀವು ಏನನ್ನು ಕಲ್ಪಿಸಿಕೊಳ್ಳುವಿರೋ ಅದೇ ವಾಸ್ತವಿಕತೆ!
ನಿಮ್ಮನ್ನು ನೀವು ಹೇಗೆ ನಿರ್ಮಿಸಿಕೊಳ್ಳಬೇಕು ಎಂದಿದ್ದೀರೋ ಆ ನಿರ್ಧರದೊಂದಿಗೆ ನಿಮ್ಮ ಆಲೋಚನೆಯೂ ಸಹ ನಡೆಯುತ್ತದೆ. ನಾಲ್ಕು ಆಯಾಮಗಳಲ್ಲೂ ನಿಮ್ಮ ಆಲೋಚನೆಯು ಸಂಪೂರ್ಣವಾಗಿ ಶುದ್ಧಗೊಳ್ಳಬೇಕು. ನಿಮ್ಮ ಅಂತರಂಗದ ಒಳಹೊಕ್ಕು ನಿಮ್ಮ ಬಗ್ಗೆ ನೀವು ಹೊತ್ತಿರುವ ಅಭಿಪ್ರಾಯಗಳನ್ನೆಲ್ಲಾ ಗುರುತಿಸಿ. ನಂತರ ಈ ನಾಲ್ಕು ಬಿಂಬಗಳಲ್ಲಿ, ನಿಮ್ಮ ಉತ್ತುಂಗ
ಸಾಧ್ಯತೆಯನ್ನು ನೀವೇ ನಿಮಗೆ
ಬೇಕಾದ ರೀತಿಯಲ್ಲಿ
ರಚಿಸಬಹುದು. ನಿಮ್ಮ
ಆಲೋಚನೆಯು ಸದಾ ಕಾಲ
ಉತ್ತುಂಗದ ಒಳ ಬಿಂಬ,
ಉತ್ತುಂಗದ ಹೊರಬಿಂಬ,
ಉತ್ತುಂಗದ ಅನ್ಯರ ಬಿಂಬ
ಹಾಗೂ ಉತ್ತುಂಗದ ಜೀವನದ
ಬಿಂಬದೊಂದಿಗೆ
ಸಮನ್ವಯಗೊಳ್ಳಲಿ.

ಸಾಮಾನ್ಯವಾಗಿ, ನಿಮ್ಮ ಒಳಬಿಂಬವು ನೀವು ಇತರರಿಗೆ ತೋರುವ ನಿಮ್ಮ ಹೊರಬಿಂಬಕ್ಕಿಂತ ಕೆಳಮಟ್ಟದಲ್ಲಿರುತ್ತದೆ. ಆದರೆ, ಇದರಲ್ಲೇ ಮುಖ್ಯವಾದ ಸತ್ಯವನ್ನು ತಿಳಿಯಿರಿ – ನೀವು ಇತರರಿಗೆ ಉನ್ನತವಾದ ವ್ಯಕ್ತಿತ್ವವನ್ನು ಬಿಂಬಿಸಬಹುದು ಎಂದರೆ, ಆ ಉತ್ತುಂಗದ ವ್ಯಕ್ತಿತ್ವ ಈಗಾಗಲೇ ನಿಮ್ಮ ಆಲೋಚನಾ ಸ್ತರದಲ್ಲಿದೆ, ನಿಮ್ಮ ದೃಷ್ಟೀಕರಣದ ಸ್ತರದಲ್ಲಿದೆ ಎಂದಾಯಿತು.
ಮತ್ತು, ನಿಮ್ಮನ್ನು ನೀವು ಯಾವ ರೀತಿಯಲ್ಲಿ ಊಹಿಸಿಕೊಳ್ಳುತ್ತೀರೋ, ಅದೆಲ್ಲವನ್ನೂ ನೈಜತೆಯನ್ನಾಗಿ ಮಾಡಲು ಈಗಾಗಲೇ ನಿಮ್ಮಲ್ಲಿ ಸಾಮರ್ಥ್ಯವನ್ನು ಹೊಂದಿದ್ದೀರಿ!
ನಿಮ್ಮ ಒಳಬಿಂಬ ಹಾಗೂ ಹೊರಬಿಂಬಗಳನ್ನು ಸಮನ್ವಯಗೊಳಿಸಲು ಒಂದು ಚಟುವಟಿಕೆ:
- ನಿಮ್ಮ ಪುಸ್ತಕದಲ್ಲಿ ಒಳಬಿಂಬ, ಹೊರಬಿಂಬ ಎಂಬ ಎರಡು ಭಾಗ ಮಾಡಿ.
- ಒಳಬಿಂಬ ಎಂಬ ಭಾಗದಲ್ಲಿ ನಿಮ್ಮ ಪ್ರಮುಖವಾದ ಹತ್ತು ಒಳಬಿಂಬಗಳನ್ನು ಪಟ್ಟಿಮಾಡಿ – ನಿಮ್ಮ ಬಗ್ಗೆ ನಿಮಗಿರುವ ನಂಬಿಕೆಗಳು. ಉದಾ:– ನಾನು ಶಕ್ತಿಹೀನ, ನಾನು ಸ್ನೇಹ ಜೀವಿಯಲ್ಲ, ನಾನು ಅದೃಷ್ಟಹೀನ ಇತ್ಯಾದಿ. ಎರಡನೇ ಪಟ್ಟಿಯಲ್ಲಿ ಅದಕ್ಕೆ ವಿರುದ್ಧವಾಗಿ ನೀವು ತೋರಿಸಿಕೊಳ್ಳುವ ನಿಮ್ಮ ಹೊರಬಿಂಬಗಳನ್ನು ಬರೆಯಿರಿ. ಉದಾ:– ನಾನು ಬಹಳ ಶಕ್ತಿಶಾಲಿ, ಸ್ನೇಹಜೀವಿ, ಅದೃಷ್ಟವಂತ ಇತ್ಯಾದಿ.
ಒಳಬಿಂಬ ಹಾಗೂ ಹೊರಬಿಂಬಗಳನ್ನು ಶ್ರುತಿಗೊಳಿಸಿ
| ಒಳಬಿಂಬ | ಹೊರಬಿಂಬ | ಆರಿಸಿಕೊಂಡ ಬಿಂಬ |
|---|---|---|
| ನಾನು ನಿಶ್ಯಕ್ತ | ★ ನಾನು ಶಕ್ತಿಶಾಲಿ | ನಾನು ಶಕ್ತಿಶಾಲಿ |
| ಮೆಚ್ಚುಗೆ ಇಲ್ಲದವ | ★ ನಾನು ಜನಪ್ರಿಯ | ನಾನು ಜನಪ್ರಿಯ |
| ★ ನಾನು ಜವಾಬ್ದಾರಿಯುತ | ನಾನು ಜವಾಬ್ದಾರಿಯುತ | ನಾನು ಜವಾಬ್ದಾರಿಯುತ |
| ★ ನಾನು ಬುದ್ಧಿಶಾಲಿ | ನಾನು ಮೂರ್ಖ | ನಾನು ಬುದ್ಧಿಶಾಲಿ |
- ಈಗ ನೀವು ಬರೆದಿರುವ ಒಳಬಿಂಬ ಹಾಗೂ ಹೊರಬಿಂಬಗಳನ್ನು ಹೋಲಿಸಿ ನೋಡಿ. ಎರಡೂ ಒಂದೇ ಆಗಿದ್ದಲ್ಲಿ ಅದನ್ನು ಬಿಟ್ಟು ಮುಂದಕ್ಕೆ ಹೋಗಿ.
- ದ್ವಂದ್ವಗಳು ಕಂಡುಬಂದಲ್ಲಿ, ನಿಮ್ಮ ಒಳಬಿಂಬ ಹಾಗೂ ಹೊರಬಿಂಬಗಳನ್ನು ಶ್ರುತಿಗೊಳಿಸಲು ಪ್ರಾರಂಭಿಸಿ - ನೀವು ಎಂದು ಏನನ್ನು ನೀವು ಗ್ರಹಿಸುತ್ತೀರೋ ಮತ್ತು ನಿಮ್ಮನ್ನು ಇತರರಿಗೆ ಹೇಗೆ ವ್ಯಕ್ತಗೊಳಿಸುತ್ತೀರೋ - ಪ್ರತಿಸಲವೂ ಉತ್ತುಂಗದ ಅಭಿಪ್ರಾಯವನ್ನೇ ಆರಿಸಿಒಳ್ಳಿ. ಉದಾ:- ಎಲ್ಲೆಲ್ಲಿ ನಿಮ್ಮ ಹೊರಬಿಂಬವು ನಿಮ್ಮ ಮಮಕಾರಕ್ಕಿಂತ ಪ್ರಬಲವಾಗಿದ್ದಲ್ಲಿ ಅದಕ್ಕೆ ನಿಮ್ಮ ಮಮಕಾರವನ್ನು ಶ್ರುತಿಗೊಳಿಸಿ. ಅಂದರೆ ನಿಮ್ಮನ್ನು ನೀವು ಭಾವಿಸುವ ಮಟ್ಟವನ್ನು ಹೊರಬಿಂಬಕ್ಕೆ ಏರಿಸಿಕೊಳ್ಳಿ. ಅಳತೆಗೋಲಿನ ಮಟ್ಟ ಎಂದಿಗೂ ನಿಮ್ಮ ಹೊರಬಿಂಬವೇ ಆಗಿರಲಿ.
- ನೀವು ಬರೆದಿರುವ ಪ್ರತಿಯೊಂದು ಅಂಶಕ್ಕೂ ಇದನ್ನು ಮಾಡಿ. ಎರಡೂ ವ್ಯಕ್ತಿತ್ವಗಳನ್ನೂ ಹೋಲಿಸಿ. ಎರಡರಲ್ಲಿ ಯಾವ ಗುಣವು ಉತ್ತಮವಾದದ್ದೋ ಅದನ್ನ ಆರಿಸಿಕೊಳ್ಳಿ. ಅದರ ಮುಂದೆಲ್ಲಾ ಒಂದು ನಕ್ಷತ್ರ ಚಿಹ್ನೆಯನ್ನು ಹಾಕಿ.
- ನಿಮ್ಮ ಮಮಕಾರದಲ್ಲಿ ನಿಮ್ಮ ಬಿಂಬ ಉತ್ತಮವಾಗಿದ್ದಲ್ಲಿ ಅದನ್ನು ನೀವು ನಿಮ್ಮ ಹೊರ ಬಿಂಬವಾಗಿ ಬಿಂಬಿಸಲು ರೂಢಿಸಿಕೊಳ್ಳಿ. ಹಾಗೆಯೇ ನಿಮ್ಮ ಹೊರಬಿಂಬದಲ್ಲಿ ನಿಮಗೆ ಉತ್ತಮವಾದ ವಿಷಯ ಕಂಡುಬಂದಲ್ಲಿ, ನಿಮ್ಮ ಒಳಾಬಿಂಬವನ್ನು ಅದಕ್ಕೆ ಸಮನ್ವಯಿಸಿ. ಹೀಗೆ ಈ ಪಟ್ಟಿಯನ್ನು ಬಳಸಿ ಸತತವಾಗಿ ನಿಮ್ಮ ಉನ್ನತ ಅಭಿವ್ಯಕ್ತತೆಯನ್ನು ಶ್ರುತಿಗೊಳಿಸಿಕೊಳ್ಳಿ.

ನಿಮ್ಮ ಆಲೋಚನಾಧಾರೆಗೆ ಶ್ರದ್ಧೆಯನ್ನು ತಂದುಕೊಳ್ಳಿ
ಶ್ರದ್ಧೆಯಿಂದ ಕೂಡಿದ ಆಲೋಚನೆಗೆ ಎರಡು ಹಂತಗಳಿವೆ:
- ಮೊದಲಿಗೆ ನಿಮ್ಮ ನಾಲ್ಕು ಆಯಾಮಗಳು ಹೇಗೆ ಇರಬೇಕೆಂಬುದನ್ನು ಪ್ರಾಮಾಣಿಕವಾಗಿ ವಿಶ್ಲೇಷಿಸಿ, ನಿಜವಾಗಿಯೂ ಜೀವನದಲ್ಲಿ ನಿಮಗೇನು ಬೇಕು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಅತ್ಯುತ್ತಮ ಒಳಬಿಂಬ, ಹೊರಬಿಂಬ, ಇತರರ ಬಿಂಬ ಮತ್ತು ಜೀವನದ ಬಿಂಬ - ಹೀಗೆ ಎಲ್ಲವನ್ನೂ ಒಂದು ಪಟ್ಟಿಮಾಡಿ, ನಿಮ್ಮ ಆಫೀಸಿನ ಮೇಜಿನ ಮೇಲೆ, ನಿಮ್ಮ ಹಾಸಿಗೆಯ ಬದಿಯಲ್ಲಿ, ಹೀಗೆ ಬೆಳಿಗ್ಗೆ ಎದ್ದಾಗ ಮತ್ತು ನಿಮಗೆ ಯಾವಾಗಲೂ ಕಾಣುವ ಸ್ಥಳಗಳಲ್ಲಿ ಹಾಕಿ.
2. ಈಗ, ನೀವು ಹೇಗಿರಬೇಕು, ಏನಾಗಿರಬೇಕು, ಯಾರಾಗಿರಬೇಕು ಎಂಬುದನ್ನು ವಾಸ್ತವವಾಗಿಸಲು ಏನೇನು ಅಡ್ಡಿ ಆತಂಕಗಳು ಇವೆ ಎಂದು ಗಮನಿಸಲು ಪ್ರಾರಂಭಿಸಿ. oath [?] ಅತಿ ದೊಡ್ಡದಾದ ಅಡ್ಡಿ ಎಂದರೆ ಆತ್ಮ ಸಂಶಯ, ಚಿಕ್ಕಂದಿನಿಂದ ನಾವು ಎದುರಿಸಿದ ಸೋಲುಗಳ ನೆನಪುಗಳಿಂದ ಬರುವಂತಹ ನಕಾರಾತ್ಮಕ ಮನೋ ವಿನ್ಯಾಸ.
3. ನಿಮ್ಮಲ್ಲಿ ಇರುವ ಆಲೋಚನಾಧಾಟಿಯು ನಿಮ್ಮ ಅತ್ಯುತ್ತಮ ಸಾಧ್ಯತೆಗೆ ಸಮನ್ವಯದಿಂದಿದ್ದರೆ ಅದನ್ನು ಪ್ರೋತ್ಸಾಹಿಸಿ, ಪೋಷಿಸಿ, ಪುಷ್ಟಿಕರಿಸಿ. ಯಾವ ಆಲೋಚನಾಧಾಟಿಯು ಅದಕ್ಕೆ ಸಮನ್ವಯತೆಯನ್ನು ನೀಡುವುದಿಲ್ಲವೋ ಅದರೊಂದಿಗೆ ಪೂರ್ಣತ್ವವನ್ನು ಮಾಡಿಕೊಳ್ಳಿ. ಪ್ರಜ್ಞಾಪೂರ್ವಕವಾಗಿ, ದೃಢತೆಯಿಂದ ಆ ಆಲೋಚನಾಧಾಟಿಗಳೊಂದಿಗೆ ಪೂರ್ಣತ್ವವನ್ನು ಮಾಡಿಕೊಳ್ಳಿ. ಪ್ರತಿದಿನವೂ ನಿಮ್ಮ ಸಾಧ್ಯತೆಗಳಿಗೆ ಪೂರಕವಲ್ಲದ ಆ ಆಲೋಚನಾಧಾಟಿಗಳೊಡನೆ ಪೂರ್ಣತ್ವ ಮಾಡುತ್ತೀರಿ. ನೀವು ಶ್ರದ್ಧೆಯಿಂದ ಬದುಕಲು ಪ್ರಾರಂಭಿಸಿದಾಗ, ನೀವು ಆಲೋಚನೆ ಮಾಡುವ ಸರಿಯಾದ ಮಾರ್ಗ ಅರಿತು ನಿಮ್ಮ ಆಲೋಚನೆಗಳನ್ನು ನಿಮ್ಮ ಸಾಧನೆಗೆ ಪೂರಕವಾಗಿ ಬಳಸುತ್ತೀರಿ. ಹಿಂದೂ ಧರ್ಮದ ಆಧ್ಯಾತ್ಮಿಕ ಅಭ್ಯಾಸದಲ್ಲಿ ಇದು ಎರಡನೇ ಮಾರ್ಗಸೂಚಿ - ಮನನ - ಶ್ರದ್ಧಾಯುಕ್ತ ಆಲೋಚನೆ.
ನಿಮ್ಮ ಆಲೋಚನೆಯು ಶ್ರದ್ಧೆಯಲ್ಲಿ ಸ್ಥಾಪನೆಗೊಂಡು, ಸತತವಾಗಿ ನಿಮ್ಮ ಉತ್ತುಂಗದ ಸಾಧ್ಯತೆಯತ್ತ ನಿಮ್ಮನ್ನು ವಿಸ್ತಾರಗೊಳಿಸಲಿ. ಯಾವಾಗ ನೀವು ನಿಮ್ಮ ಆಲೋಚನೆಯಲ್ಲಿ ಪ್ರಬಲವಾದ ಸ್ಪಷ್ಟತೆಯನ್ನು ಸಾಧಿಸುವಿರೋ, ಆಗ ನೀವು ಯೋಚಿಸಿದ್ದೆಲ್ಲವೂ ಯಶಸ್ಸು ಕಾಣುತ್ತದೆ. ಆಗ ನೀವು ನಿಮ್ಮ ಆಲೋಚನಾಶಕ್ತಿಯನ್ನು ಅನಾವರಣಗೊಳಿಸಿದ್ದೀರ ಎಂದಾಯಿತು.