ನಿಮ್ಮ ನಾಲ್ಕು ಆಂತರಿಕ ಶಕ್ತಿಗಳು
This text was machine-transcribed from the printed book and may contain errors. Select the words and choose “Report a mistake”.
ನೀವು ನಿಮ್ಮ ಜೀವನದಲ್ಲಿ ದ್ವಂದ್ವ, ಒತ್ತಡ, ನೋವು-ನರಳಾಟ ಇದನ್ನೆಲ್ಲ ಶಾಶ್ವತವಾಗಿ ನಿವಾರಿಸಲು ಒಂದು ಮಾರ್ಗವಿದೆ ಎಂದು ತಿಳಿದರೆ ಏನು ಮಾಡುತ್ತೀರಿ?
ಆಲಿಸಿ: ನೀವು ಹಾಗೇ ಮಾಡಬಹುದು!
ನಿಮ್ಮಲ್ಲಿ ನಿಜವಾಗಲೂ ನೀವು ಬಯಸಿದ್ದನ್ನು ವಾಸ್ತವವನ್ನಾಗಿ ಮಾಡಿಕೊಳ್ಳುವ ಶಕ್ತಿ ಹೊಂದಿದ್ದೀರಿ. ಸ್ವ-ಪರಿವರ್ತನೆಯ ಸಂಭವನೀಯ ಶಕ್ತಿ ನಿಮ್ಮಲ್ಲಿಯೇ ಇದ್ದು; ಜೀವನದ ಪ್ರತಿಯೊಂದು ಅಂಶವು ಪುಷ್ಟೀಕರಣ (ಸಮೃದ್ಧ) ಹೊಂದಿ ನಿಮಗೆ ಆರೋಗ್ಯ, ಸಂಪತ್ತು ಮತ್ತು ಅರ್ಥಪೂರ್ಣ ಸಂಬಂಧಗಳಿಂದ ನಿರಂತರ ಆನಂದ ಹೊಮ್ಮುವುದು.
ಪ್ರತಿಯೊಬ್ಬರಲ್ಲೂ ಆಂತರಿಕವಾಗಿ ಅಖಂಡ ಶಕ್ತಿ ಅಡಗಿದೆ, ಅದನ್ನೇ "ಕುಂಡಲಿನಿ" ಎನ್ನುವುದು. ಕುಂಡಲಿನಿ ಎಂದರೆ ನಿಮ್ಮಲ್ಲಿಯೇ ಇರುವ ಸುಪ್ತಶಕ್ತಿ, ಇದನ್ನು ನೀವು ಎಂದೂ ಬಳಸಿಯೇ ಇಲ್ಲ ಮತ್ತು ಇದರ ಬಗ್ಗೆ ನಿಮಗೆ ತಿಳಿದೇ ಇರುವುದಿಲ್ಲ!. ಕುಂಡಲಿನಿಯು ನಿಮ್ಮಲ್ಲಿ ನಾಲ್ಕು ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಅದೇ ಆ ನಿಮ್ಮ ನಾಲ್ಕು ಶಕ್ತಿ. ಈ ಎಲ್ಲಾ ಆಂತರಿಕ ಶಕ್ತಿಗಳು ನಿಮ್ಮ ಕುಂಡಲಿನಿ ಶಕ್ತಿಯ ಅಭಿವ್ಯಕ್ತಿ.

ನಿಮ್ಮ ನಾಲ್ಕು ಆಂತರಿಕ ಶಕ್ತಿಗಳನ್ನು ಭೇಟಿ ಮಾಡಿ
ಈ ಮಹಾನ್ ಶಕ್ತಿಗಳನ್ನು ನಿಮ್ಮೊಳಗೆ ಅನಾವರಣಗೊಳಿಸುವ ಮುನ್ನ ನೀವು ನಿಮ್ಮ ಬಗ್ಗೆ ಇನ್ನಷ್ಟು ಅರಿತುಕೊಳ್ಳಬೇಕು. ನೀವು ತಿಳಿದಿರುವಿರೋ ಇಲ್ಲವೋ, ನೀವು ನಂಬುವರೋ ಇಲ್ಲವೋ, ನಿಮ್ಮ ಒಳಗೆ ನಾಲ್ಕು ಅಖಂಡ ಶಕ್ತಿಗಳು ನೆಲೆಸಿವೆ. ಅವು ನಿಮ್ಮ ಜೀವನದ ನಾಲ್ಕು ಪ್ರಮುಖ ಆಯಾಮಗಳಿಗೆ ಸಂಬಂಧಿಸಿವೆ – ನಿಮ್ಮ ಮಾತು, ನಿಮ್ಮ ಯೋಚನೆ, ನಿಮ್ಮ ಭಾವನೆ ಹಾಗೂ ನಿಮ್ಮ ಬದುಕು. ಪ್ರತಿ ಆಯಾಮದಲ್ಲೂ ನೀವು ನಿಮ್ಮ ಉನ್ನತ ಸಾಧ್ಯತೆಯನ್ನು ಜಾಗೃತಗೊಳಿಸಿದಾಗ, ಅದು ಜೀವನಕ್ಕೆ ಮಹತ್ ಶಕ್ತಿ ಹಾಗು ಆಧಾರವಾಗುತ್ತದೆ.
ಇವು ನಿಮ್ಮ ನಾಲ್ಕು ಆಂತರಿಕ ಶಕ್ತಿಗಳು –
- ಮಾತಿನ ಶಕ್ತಿ ಅಥವಾ ವಾಕ್ಶಕ್ತಿ (ಸಂಸ್ಕೃತದಲ್ಲಿ)
- ಆಲೋಚನಾ ಶಕ್ತಿ ಅಥವಾ ಮನೋಶಕ್ತಿ
- ಭಾವನಾ ಶಕ್ತಿ ಅಥವಾ ಪ್ರೇಮಶಕ್ತಿ
- ಬದುಕುವ ಶಕ್ತಿ ಅಥವಾ ಆತ್ಮಶಕ್ತಿ

ನೀವು ನಿಮಗೆ ಮತ್ತು ಇತರರಿಗೆ ಕೊಡುವ ಮಾತುಗಳು ಮತ್ತು ಹೊಣೆಗಳಿಂದ ನಿಮ್ಮ ಜೀವನವು ಕಟ್ಟಿರುತ್ತದೆ. ಅದು ಅರಿವಿಲ್ಲದೆ ಅಥವಾ ಪ್ರಜ್ಞೆಯಿಲ್ಲದೆ ಇರಬಾರದು. ನಿಮ್ಮ ಜೀವನದ ಸಾಮರ್ಥ್ಯವು ನೀವು ನಿಮಗೆ ಮತ್ತು ಇತರರಿಗೆ ಕೊಡುವ ಮಾತುಗಳು ಮತ್ತು ಹೊಣೆಗಳ ಮೇಲೆ ನಿಂತಿರುತ್ತದೆ. ನಿಮ್ಮ ಮಾತುಗಳಲ್ಲಿ ಅರಿವಿದ್ದರೆ, ನಿಮ್ಮ ಜೀವನವು ಅರಿವಿನಿಂದಿರುತ್ತದೆ. ನಿಮ್ಮ ಮಾತುಗಳಲ್ಲಿ ಅರಿವಿಲ್ಲದಿದ್ದರೆ, ನಿಮ್ಮ ಜೀವನವು ಅರಿವಿಲ್ಲದಂತಿರುವುದು.
ಆದ್ದರಿಂದ, ಸಂಪೂರ್ತಿಯು ನಿಮ್ಮ ಜೀವನದ ಮೂಲ ತತ್ವವಾಗಿರುತ್ತದೆ. ಸಂಪೂರ್ತಿ ನಿಮ್ಮ ಜೀವನ ಶಕ್ತಿಯ ಒಂದು ಭಾಗ. ಈ ಶಕ್ತಿಯಿಂದಾಗಿಯೆ ನೀವು ಹಾಗು ಪ್ರಪಂಚವು ಸಾಗುತ್ತಿರುವುದು!
ಸಂಪೂರ್ತಿ ಅಂದರೆ ಏನು?
ಸಂಪೂರ್ತಿಯು ನಾವು ನಮ್ಮ ಜೀವನದಲ್ಲಿ ಮಾಡುವ ದೊಡ್ಡ ಹೊಣೆಗಳಷ್ಟೆ ಅಲ್ಲ. ಅದು ಯಾವುದೇ ಸ್ವಾಭಾವಿಕವಾಗಿ ನಿಮಗೆ ಹೇಳಿಕೊಳ್ಳುವ - "ನಾನು ಪ್ರತಿದಿನ ಬೆಳಗ್ಗೆ ಬೇಗ ಎದ್ದು ಯೋಗ ಅಭ್ಯಾಸ ಮಾಡುತ್ತೇನೆ' ಅಥವಾ ನಿಮ್ಮ ಸ್ನೇಹಿತರಿಗೆ ಹೇಳುವ 'ನಾವು ೫ ಗಂಟೆಗೆ ಸಿಗೋಣ' ಎಂಬ ಮಾತಾಗಿರಬಹುದು. ನೀವು ಯಾವ ಮಾತು ನಿಮಗೆ ಮತ್ತು ಇತರರಿಗೆ ಕೊಡುತ್ತೀರಿ ಅನ್ನುವುದು ಮುಖ್ಯವಾಗುವುದಿಲ್ಲ, ನೀವು ಅದನ್ನು ನಿಮ್ಮ ಜೀವನವಂತೆ ಗೌರವಿಸುವುದು – ನಿಶ್ಚಯವಾದ ಸಂಪೂರ್ತಿ.

ತತ್ತ್ವಗಳು
ನಾಲ್ಕು ಶಕ್ತಿಗಳ ಮೂಲ ನಾಲ್ಕರಲ್ಲಿ ಪ್ರತಿಯೊಂದು ಶಕ್ತಿಯು ಒಂದೊಂದು ಆಧ್ಯಾತ್ಮಿಕ ಸೂತ್ರದಿಂದ ಮಾರ್ಗದರ್ಶಿತವಾಗಿದ್ದು, ಅದನ್ನು 'ತತ್ತ್ವ' ಎನ್ನುತ್ತೇವೆ.
ಪ್ರತಿ ತತ್ತ್ವವು ಒಂದೊಂದು ಆಂತರಿಕ ಶಕ್ತಿಯನ್ನು ಅನಾವರಣಗೊಳಿಸಲು ಇರುವ ಒಂದು ಕೀಲಿ.
■ ಮಾತಿನ ಶಕ್ತಿಯನ್ನು ಪಡೆಯಲು ನಾವು ಸಂಪೂರ್ಣತೆಯನ್ನು ಪಾಲಿಸಬೇಕು.
■ ಮನೋಶಕ್ತಿಯನ್ನು ರೂಢಿಸಿಕೊಳ್ಳಲು ಶ್ರದ್ಧೆಯನ್ನು ಪಾಲಿಸಬೇಕು.
■ ಭಾವನಾಶಕ್ತಿ ಅಥವಾ ಪ್ರೇಮಶಕ್ತಿಯನ್ನು ಪಡೆಯಲು ಜವಾಬ್ದಾರಿಯನ್ನು ನಿರ್ವಹಿಸಬೇಕು.
■ ನೀವು ಇತರರನ್ನು ಸಮೃದ್ಧ (ಸಂಪನ್ನ)ಗೊಳಿಸಲು
ನಿರ್ಧರಿಸಿದ ಕ್ಷಣದಿಂದಲೇ ನೀವು ಬದುಕುವ ಶಕ್ತಿಯ
ಅನುಭವ ಪಡೆಯಲು ಆರಂಭಿಸುತ್ತೀರಿ.
| ಸಂಪೂರ್ತಿ | ಮಾತಿನ ಶಕ್ತಿ > |
|---|---|
| ಶ್ರದ್ಧೆ | ಆಲೋಚನಾ ಶಕ್ತಿ > |
| ಜವಾಬ್ದಾರಿ | ಭಾವನಾ ಶಕ್ತಿ > |
| ಸಂಪನ್ನಗೊಳಿಸುವಿಕೆ | ಬದುಕುವ ಶಕ್ತಿ > |


ಸಂಪೂರ್ತಿಯು ನಿಮ್ಮ ಮಾತುಗಳಿಗೆ ಪ್ರಬಲತೆಯನ್ನು ನೀಡುತ್ತದೆ.
ಸಂಪೂರ್ತಿಯು ನಿಮ್ಮ ಮಾತುಗಳ ಪ್ರಬಲತೆಯನ್ನು ಬಿಡಿಸುವ ಸಂಕೇತ.
ಸಂಪೂರ್ತಿಯಲ್ಲಿ ಎರಡು ವಿಧದ ಆಯಾಮಗಳಿವೆ - ನೀವು ನಿಮಗೆ ಕೊಡುವ ಮಾತುಗಳನ್ನು ಗೌರವಿಸುವುದು, ನೀವು ಇತರರಿಗೆ ಕೊಡುವ ಮಾತುಗಳನ್ನು ಗೌರವಿಸುವುದು. ಒಳ್ಳೆಯ ಮಾತುಗಳು ನಿಮ್ಮಿಂದ ಶುರುವಾಗುವುದು. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಮೊದಲ ವ್ಯಕ್ತಿ ಯಾರು? ನೀವು!
ನೀವು ನಿಮಗೆ ಕೊಡುವ ಮಾತುಗಳನ್ನು ಗೌರವಿಸಿದ್ದಲ್ಲಿ, ನಿಮ್ಮ ಮೇಲಿನ ವಿಶ್ವಾಸವು ಬೆಳೆಯುವುದು - ನಿಮ್ಮ ಮೇಲಿನ ಆತ್ಮಸಂದೇಹವು ಕರಗಿಹೋಗುವುದು.
ನೀವು ಪ್ರಬಲರಾಗುತ್ತೀರಿ! ನೀವು ಇತರರಿಗೆ ಕೊಡುವ ಮಾತುಗಳನ್ನು ಗೌರವಿಸಿದ್ದಲ್ಲಿ, ಇತರರಿಗೆ ನಿಮ್ಮ ಮೇಲಿನ ವಿಶ್ವಾಸವು ಬೆಳೆಯುವುದು. ಆ ವ್ಯಕ್ತಿಯ ಜೊತೆ ನಿಮ್ಮ ಸಂಬಂಧವು ಪ್ರಬಲವಾಗುವುದು!


ನೀವು ಮಾತುಗಳನ್ನು ಅರಿವಿನಿಂದ ಉಪಯೋಗಿಸಬೇಕು - ಏಕೆ?
- ಮಾತುಗಳನ್ನು ಅರಿವಿನಿಂದ, ಪ್ರಜ್ಞೆಯಿಂದ ಉಪಯೋಗಿಸಿದ್ದಲ್ಲಿ, ಮಾತುಗಳ ಪರಿಣಾಮ ನಿಮ್ಮ ಮೇಲೆ ಮತ್ತು ಇತರರ ಮೇಲೆ ಹೇಗೆ ಬೀರುತ್ತದೆ ಎಂದು ಗ್ರಹಿಸುವಲ್ಲಿ ಸಹಾಯಕವಾಗುತ್ತದೆ.
- ಸರಿಯಾದ ಮಾತುಗಳನ್ನು ಉಪಯೋಗಿಸುವುದರಿಂದ ನೀವು ನಿಮ್ಮ ಬಗೆಗಿನ ಯೋಚನೆಯೂ ಹಾಗೂ ಭಾವನೆಯೂ ತಕ್ಷಣವೆ ಬದಲಾಗುವುದು. ನೀವು ಸರಿಯಾದ ಮಾತುಗಳಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದಲ್ಲಿ, ನಿಮ್ಮ ದೈಹಿಕ ಪ್ರತಿಕ್ರಿಯೆಯ ಬದಲಾವಣೆಯನ್ನು ಗಮನಿಸಬಹುದು.
- ಸರಿಯಾದ ಮಾತುಗಳು ನಿಮ್ಮ ಆಂತರಿಕ ಮನವನ್ನು ಸಂಘರ್ಷವಿಲ್ಲದೆ ನೆಮ್ಮದಿಯಿಂದಿಡುವುದು, ನಿಮ್ಮ ಆರೋಗ್ಯ ಹಾಗು ದೀರ್ಘಾಯು ವ್ಯಕ್ತವಾಗಿ ಸುಧಾರಿಸುವುದು.
- ಸರಿಯಾದ ಮಾತುಗಳನ್ನು ನಿಮಗೆ ಹಾಗೂ ಇತರರಿಗೆ ಸೃಷ್ಟಿಸಿ ಹಾಗೂ ವ್ಯಕ್ತಪಡಿಸುವುದರಿಂದ ನೀವು ನಿಮಗೆ ಬೇಕಾದ ಪ್ರತ್ಯಕ್ಷ ವಾಸ್ತವಿಕತೆಯನ್ನು ರೂಪಗೊಳಿಸಬಹುದು!
ನೀವು ನಿಮ್ಮ ಮಾತುಗಳ ಪ್ರಬಲತೆಯಿಂದ ನಿಮ್ಮ ವಾಸ್ತವಿಕತೆಯನ್ನು ಸೃಷ್ಟಿಸಬಹುದು!

ನೀವು ಉಚ್ಚರಿಸುವ ಮಾತುಗಳೇ ನೀವು! ನಿಮಗೆ ಹಾಗೂ ಇತರರಿಗೆ ಮಾತಾಡುವ ಮಾತುಗಳೇ ನೀವಾಗುತ್ತೀರಿ. ನೀವು 'ನಾನು ರೋಗಿ', 'ನಾನು ರೋಗಿ' ಎಂದು ಹೇಳುತ್ತಾಯಿದ್ದರೆ, ನೀವು ಸಹಜವಾಗಿ ರೋಗಿಯೇ ಆಗುವಿರಿ. ಅದೇ ರೀತಿ ಯಾವಾಗಲು ನೀವು ನಾನು ಆರೋಗ್ಯಕರವಾಗಿದ್ದೇನೆ ಎಂದು ಹೇಳಿಕೊಳ್ಳುವುದರಿಂದ, ನಿಮ್ಮ ಧೈರ್ಯ ಹಾಗು ಶಕ್ತಿಯು ಜಾಗರೂಕವಾಗುವುದು. ನೀವು ಬಹಳ ಆರೋಗ್ಯಕರವಾಗಿರುತ್ತೀರಿ! ಪ್ರಪಂಚ ಶಕ್ತಿಯು ನಿಮ್ಮೊಳಗೆ ಉದ್ಭೋಧವಾಗುವುದು ಹಾಗು ನಿಮ್ಮ ಘೋಷಣೆಗಳು ವಾಸ್ತವಿಕತೆಯಾಗುವುದು. ಸರಿಯಾದ ಮಾತುಗಳನ್ನು ಆಯ್ಕೆಮಾಡುವುದು ಮುಖ್ಯ, ಏಕೆಂದರೆ ನೀವು ನಿಮ್ಮ ವಾಸ್ತವಿಕತೆಯನ್ನು ನಿಮ್ಮ ಮಾತುಗಳ ಪ್ರಬಲತೆಯಿಂದ ಸೃಷ್ಟಿಸಬಹುದು! ಅದು ನೀವು ನಿಮಗೆ ಹಾಗೂ ಇತರರಿಗೆ ಕೊಡುವ ಮಾತುಗಳನ್ನು ಸರಳವಾಗಿ ಗೌರವಿಸುವುದರಿಂದ ಸಾಧ್ಯ.

ಆಲಿಸುವುದರಿಂದ ನಿಮ್ಮ ಮಾತುಗಳಿಗೆ ಸಂಪೂರ್ತಿಯನ್ನು ತರುತ್ತದೆ
ನೀವು ಯಾವಾಗ ನಿಮ್ಮ ಮಾತುಗಳನ್ನು ನಿಜವಾಗಿಯೂ ಆಲಿಸಿದ್ದೀರಿ(ಕೇಳಿದ್ದೀರಿ)?
ನಾವು ಎಂದಿಗೂ ನಮ್ಮ ಮತ್ತು ಇತರರ ಮಾತುಗಳನ್ನು ನಿಜವಾಗಿಯೂ ಕೇಳುವುದಿಲ್ಲ. ನೀವು ನಿಜವಾಗಿಯೂ ನಿಮ್ಮೊಳಗಿನ ಮಾತುಗಳನ್ನು ಕೇಳಿದರೆ, ನೀವು ಸಹಜವಾಗಿ ನಿಮಗೆ ಹಾಗೂ ಇತರರಿಗೆ ಕೊಡುವ ಮಾತುಗಳೆಲ್ಲಾ ಬಹಳ ಅರಿವಾಗುತ್ತದೆ.

ನಾನು ಮಾತುಗಳನ್ನು ಈಡೇರಿಸದಿದ್ದಾಗ ಏನಾಗಬಹುದು?

ನೀವು ಕೊಟ್ಟಿರುವ ಮಾತುಗಳನ್ನು ಈಡೇರಿಸಲು ಅತಿ ಸಾಧ್ಯವಾಗುವಷ್ಟು ಪೂರೈಸಲು ಹೋಗಿ, ಒಂದು ವೇಳೆ ಅದು ಸಾಧ್ಯವಾಗದಿದ್ದಾಗ, ನೀವು ನಿಮ್ಮೊಳಗೆ ಹಾಗು ಇತರರ ಜೊತೆ ಮಾತಾಡಿ ನಾನು ನನ್ನ ಮಾತುಗಳನ್ನು ಈಡೇರಿಸುವುದಕ್ಕೆ ಆಗುತ್ತಿಲ್ಲವೆಂದು ಹೇಳಿ ಪೂರ್ಣಪಡಿಸಬಹುದು, ನಂತರ ಯಾವುದೇ ಕೊಟ್ಟಿರುವ ಮಾತುಗಳಿಂದ ನೋವು ಅಥವಾ ತಪ್ಪಿತಸ್ಥಭಾವನೆ; ಅಥವಾ ಇನ್ನಿತರ ಗುಂಗಿಲ್ಲದಿರಬಹುದು.
ಈಡೇರಿಸಿ ಅಥವಾ ಪೂರ್ಣಗೊಳಿಸಿ! ತಿಳಿದುಕೊಳ್ಳಿ ಪೂರ್ಣತ್ವವು ಸಂಪೂರ್ತಿಯೆಂದು. ಸಂಪೂರ್ತಿ ಎಂದರೆ ನೀವು ಒಳ ಹಾಗು ಹೊರ ಮನಸ್ಸಿನಲ್ಲಿ ಮಾತಾಡುವ ಪ್ರತಿಯೊಂದು ಮಾತುಗಳನ್ನು ಪೂರ್ಣತ್ವಕಡೆಗೊಯ್ಯುವುದು. ನೀವು ಸಂಪೂರ್ತಿ ಸ್ಥಿತಿಯಲ್ಲಿದ್ದಾಗ, ನಿಮ್ಮ ಮಾತುಗಳಲ್ಲಿ ಪ್ರಬಲತೆಯು ತೆರೆಯುವುದು.

ಪೂರ್ಣತ್ವಕ್ಕೆ ಎರಡು ಬಗೆಯ ತಂತ್ರಗಳಿವೆ.
ಅ. ನಿರಂತರ ಪೂರ್ಣತ್ವಕ್ಕೆ ತಂತ್ರ

ಪೂರ್ಣತ್ವವೆಂದರೇನು?
ಪೂರ್ಣತ್ವವೆಂದರೆ ನಿಮ್ಮ ಮತ್ತು ಇತರರ ಯಾವುದೇ ಭೂತಕಾಲದ ಸನ್ನಿವೇಶಗಳು, ಮಾತುಗಳು, ಪ್ರತಿಕ್ರಿಯೆಗಳು ಅಥವಾ ನೆನಪುಗಳ ಗುಂಗಿಲ್ಲದ ಕ್ರಿಯೆಯಿಂದ ಬದುಕುವುದು.
ಗುಂಗಿಲ್ಲವೆಂದರೆ ನೀವು ನಿಮ್ಮ ಭೂತಕಾಲವನ್ನು ನೆನಸದೆ ಇರುವುದಲ್ಲ. ನೀವು ಪೂರ್ಣತ್ವದಲ್ಲಿದ್ದರೆ, ನೀವು ಭೂತಕಾಲದ ಸನ್ನಿವೇಶಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ನೆನಸಬಹುದು, ಆದರೆ ನಿಮಗೆ ದುಃಖ ಅಥವಾ ಕೋಪ ಅಥವಾ ತಪ್ಪಿತಸ್ಥ ಭಾವನೆಯುಂಟುಮಾಡಲು ಅವುಗಳಿಗೆ ಯಾವುದೇ ಪ್ರಬಲತೆಯಿರುವುದಿಲ್ಲ.
ಸಂಪೂರ್ತಿಯು ಒಂದು ಸುಂದರ ಅನುಸಾರವಾಗಿ, ನೀವು ನಿಮ್ಮ ಮಾತುಗಳಿಂದ ನಿಮ್ಮೊಳಗೆ ಹಾಗು ಇತರರಿಗೆ ಅಪೂರ್ಣತೆಯನ್ನು ಉಂಟುಮಾಡುವದರಿಂದ ರಕ್ಷಿಸುತ್ತದೆ.
ಯಾವುದೇ ಭೂತಕಾಲದ ಸಂಗತಿಗಳು ನೀವು ಬದುಕು ನಡೆಯುವ ಹಾಗೆ

ಆ. ಸ್ವಯಂಪ್ರೇರಿತ ಪೂರ್ಣತ್ವಕ್ಕೆ ತಂತ್ರ
ಪೂರ್ಣತ್ವವು ನಿಮ್ಮ ಜೀವನದ ಎಲ್ಲಾ ಆಗುಹೋಗುಗಳನ್ನು ಅವಿವೇಕದಿಂದ ಸ್ವೀಕರಿಸುವುದಲ್ಲ. ಅದು ಸುಮ್ಮನೆ ಬದುಕು ಹೇಗೆ ನಡೆಯುವುದೋ ಹಾಗೆ ವಿರೋಧಪಡಿಸದಿರುವುದು.
ನಮ್ಮ ಎಲ್ಲಾ ಅಪೂರ್ಣತೆಗಳ ಮೂಲ - ನಾವು 'ನಮ್ಮ ಬದುಕು ಈ ರೀತಿ ಇರಬಾರದು' ಎಂಬ ಯೋಚನೆಯನ್ನು ಮಾಡುವುದು. ಆದ್ದರಿಂದ ನಾವು ನಮ್ಮ ಇಡೀ ಬದುಕನ್ನು ಪ್ರಶ್ನಿಸುತ್ತಿರುತ್ತೇವೆ - 'ಏಕೆ, ಏಕೆ, ಏಕೆ?' ಏಕೆ ಬದುಕು ಕೆಟ್ಟದಾಗಿದೆಯೆಂದು? ಏಕೆ ಈ ರೀತಿ ನನಗಾಯಿತು? ಏಕೆ ಒಳ್ಳೆಯವರಿಗೆ ಕೆಟ್ಟದಾಗುತ್ತದೆ?
ಸ್ವಯಂಪ್ರೇರಿತ ಪೂರ್ಣತ್ವವು ಅಥವಾ ಶೀಘ್ರ ಪೂರ್ಣತ್ವವೆಂದರೆ - ಪ್ರತ್ಯೇಕ ಘಟನೆಯಲ್ಲಿ ನಮ್ಮ ತಪ್ಪು ತಿಳುವಳಿಕೆಯಿಂದ ನಮಗೆ ಉಂಟಾಗುವ ಸಂಘರ್ಷವನ್ನು ಬಿಡುವುದು. ಅದು ಸಾಧ್ಯವಾಗುತ್ತದೆ!
'ಏಕೆ ಬದುಕು ಹೀಗಿದೆಯೆಂದು'? ಕೇಳಬೇಡಿ.
ಅದರ ಬದಲು, ತೀರ್ಮಾನಿಸಿ.
"ಇದೇ ಬದುಕು" ಎಂದು! ಆದ್ದರಿಂದ ಈಗ ಏನು?
- ನಾನು ಇದನ್ನು ಸ್ವೀಕರಿಸಿ ಮುಂದೆ ಸಾಗುವುದೇ?
- ನಾನು ಇದನ್ನು ನಿರಾಕರಿಸಿ ಮುಂದೆ ಸಾಗುವುದೇ?
- ಅಥವಾ, ಇದನ್ನು ನನಗೆ ಬೇಕಾದ ಹಾಗೆ ಬದಲಾಯಿಸುವುದೇ? ಈ ರೀತಿಯ ತಿಳಿವಳಿಕೆಯಿಂದ ಯಾವುದೇ ನಿರ್ಧಾರ ಮಾಡಿದರೆ ಅದು ನಿಮಗೆ ಸರಿಯಾಗಿರುತ್ತದೆ. ನೀವು ಪೂರ್ಣತೆಯಿಂದ ನಡೆದುಕೊಂಡರೆ, ನೀವು ನಿಮ್ಮೊಳಗೆ ಹಾಗು ಹೊರಗೆ ನಡೆಯುವ ಯಾವುದೇ ಸಂಘರ್ಷವನ್ನು ನಿವಾರಿಸಲು ಪ್ರಬಲವಾಗಿರುತ್ತೀರಿ.
ಪೂರ್ಣತೆಯು ನಿಮಗೆ ಏನು ಮಾಡಬಹುದು?
- ನೀವು ಪೂರ್ಣತ್ವದ ಕ್ರಿಯೆಯಿಂದ ನಿಮ್ಮ ದುಃಖದ ನೆನಪುಗಳನ್ನು ಮತ್ತೆ ಮತ್ತೆ ಜೀವಿಸಿದರೆ, ನಿಮ್ಮ ಮೇಲಿರುವ ಅವುಗಳ ಪ್ರಬಲತೆಯು ಕಳೆದುಹೋಗುತ್ತದೆ.
- ನೀವು ಸ್ವಯಂಪ್ರೇರಿತವಾಗಿ ಹಾಗು ಶ್ರಮ ರಹಿತದಿಂದ ಜೀವಿಸುವ ಯೋಗ್ಯತೆಯನ್ನು ಮತ್ತೆ ಪಡೆಯುತ್ತೀರಿ.
- ನೀವು ಸಂಪೂರ್ತಿಯಿಂದ ಬದುಕಲು ಆರಂಭಿಸುತ್ತೀರಿ, ಅದರಿಂದ ಮಾತುಗಳಲ್ಲಿ ಪ್ರಬಲತೆಯನ್ನು ಹೂಡಿಸುತ್ತೀರಿ.
- ನೀವು ಒಬ್ಬ ಅದ್ವಿತೀಯ ಆತ್ಮವಾಗುತ್ತೀರಿ - ನಿಮ್ಮ ಒಳಮನಸ್ಸು, ದೇಹ ಹಾಗು ಮನಸ್ಸು ನಿಮ್ಮ ಹಿಡಿತದಲ್ಲಿರುತ್ತದೆ!
