ಬಾಳುವುದರ ಶಕ್ತಿಯ
This text was machine-transcribed from the printed book and may contain errors. Select the words and choose “Report a mistake”.
ಜಾಗೃತಿ
ಆಪ್ಯಾಯನಂ - ಸಂಪನ್ನಗೊಳಿಸುವಿಕೆ
ಬಾಳುವುದು ಒಂದು ಶಕ್ತಿ ಪ್ರತಿದಿನವೂ ನೀವು ನಡೆಯುತ್ತಿರುವಿರಿ, ಮಾತನಾಡುತ್ತಿರುವಿರಿ, ಕುಳಿತಿರುವಿರಿ, ಹೇಳುತ್ತಿರುವಿರಿ, ಮುಟ್ಟಿನೋಡುತ್ತಿರುವಿರಿ, ಹೀಗೆ ಮುಂತಾದವು. ಎದನ್ನೆಲ್ಲವನ್ನೂ ಒಟ್ಟುಗೂಡಿಸಿ ನೋಡಿದರೆ ಅದನ್ನು ಬಾಳುವುದು ಎನ್ನುತ್ತೇವೆ! ಬಾಳುವುದೇ ಒ೦ದು ಶಕ್ತಿಯಾಗುತ್ತದೆ! ಸಂಪನ್ನಗೊಳಿಸುವ ಜೀವನಶೈಲಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕವಾಗಿ ಜೀವಶಕ್ತಿಯನ್ನು ಸಜ್ಜುಗೊಳಿಸಬಹುದು.
ಕೇಳಿರಿ! ನಿಮ್ಮನ್ನು ನೀವೇ ಹಾಗೂ ಇ ತ ರ ರ ನ್ನ ಸಂಪನ್ನಗೊಳಿಸುವುದಕ್ಕಾಗಿಯೇ ನೀವು ಹುಟ್ಟಿರುವ ಉದ್ದೇಶ. ನೀವು ಈ ಅರಿವಿನಿಂದ ಕಾರ್ಯೋನ್ಮುಖರಾದರೆ ನೀವು ಅತ್ಯಂತ ಗರಿಷ್ಠತಮವಾಗಿ ಸಜೀವರಾಗಿದ್ದು ಜ್ಞಾನೋದಯದಿಂದ ಬದುಕುತ್ತಿರುವಿರಿ! ಸಂಪನ್ನಗೊಳಿಸುವಿಕೆಯು ನಿಮ್ಮಲ್ಲಿರುವ ಜೀವಶಕ್ತಿಯನ್ನು ಜಾಗೃತಗೊಳಿಸುವ ಒಂದು ಕೀಲಿಕೈ.

ಸಂಪನ್ನಗೊಳಿಸುವಿಕೆ ಎಂದರೇನು?
ಸಂಪನ್ನಗೊಳಿಸುವಿಕೆ ಎಂದರೆ ನೀವು ಸಂಪೂರ್ತಿಯಿಂದಲೂ, ಪ್ರಾಮಾಣಿಕತೆಯಿಂದಲೂ ಸತತವಾಗಿ ನಿಮ್ಮನ್ನೇ ಹಾಗೂ ನಿಮ್ಮ ಸುತ್ತಲೂ ಇರುವ ಜೀವಿಗಳ ವಿಕಸನವನ್ನು ಮಾಡುತ್ತಿರುವುದಕ್ಕೆ ಬದ್ಧರಾಗಿರುವುದು.
ನೀವು ನಿಮ್ಮನ್ನೇ ಹಾಗೂ ನಿಮ್ಮ ಸುತ್ತಲಿರುವ ಎಲ್ಲವನ್ನೂ ಸಂಪನ್ನಗೊಳಿಸುವುದಕ್ಕಾಗಿ ಬದ್ಧರಾದಾಗ,

ನೀವು ಸಮಗ್ರತೆಯುಳ್ಳ ಶ್ರವಣವನ್ನು ಹೊಂದಿದ್ದು, ಶ್ರದ್ಧೆಯುಳ್ಳ ಆಲೋಚನಾಕ್ರಿಯೆಯನ್ನು (ಮನನ) ಹೊಂದಿದ್ದು, ಮತ್ತು ಜವಾಬ್ದಾರಿಯುಳ್ಳ ಘೋಷಣೆ (ನಿಧಿಧ್ಯಾಸನ) ಯನ್ನು ಹೊಂದಿದರೆ, ಆಗ ನೀವು ಸಂಪನ್ನತೆಯಿಂದಿರುವ ಜೀವನವನ್ನು ಬಾಳುತ್ತಿರುವಿರಿ.
ನೀವು ನಿಮ್ಮನ್ನು ಹಾಗೂ ಇತರರನ್ನು ಸಂಪನ್ನಗೊಳಿಸಿದರೆ ಅದು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕಿಂತಲೂ ಉನ್ನತಮಟ್ಟದ ಹೆಜ್ಜೆ. ಸಂಪನ್ನತೆಯೊಂದೇ ನಿಮ್ಮಲ್ಲಿರುವ ಯಾವುದೇ ಅಸಂಪೂರ್ಣತೆಯೋ, ಅಥವಾ ಯಾವುದೇ ಅಶ್ರದ್ಧೆಯೋ ಅಥವಾ ಯಾವುದೇ ಬೇಜವಾಬ್ದಾರಿಯನ್ನೋ ದಹಿಸಿಬಿಡಬಲ್ಲದು! ಸಂಪನ್ನತೆ ಎನ್ನುವುದು ಬೇರೊಬ್ಬರ ಅಸಂಪೂರ್ಣತೆಯನ್ನೋ ಅಶ್ರದ್ಧೆಯನ್ನೋ ಒಳಗೊಂಡಂತೆ ಪ್ರತಿಯೊಬ್ಬರಿಗಾಗಿ ಮತ್ತು ಪ್ರತಿಯೊಂದಕ್ಕಾಗಿ ಜವಾಬ್ದಾರಿಯನ್ನು ವಹಿಸುವುದಾಗಿದೆ
- ಏಕೆಂದರೆ, ಪ್ರತಿಯೊಬ್ಬರೂ ನಿಮ್ಮದೇ ಒಂದು ಭಾಗವಾಗಿರುವರು.
ನಾನೇಕೆ ಬೇರೆಯವರನ್ನು ಸಂಪನ್ನಗೊಳಿಸಬೇಕು?
ನೀವು ಯಾವುದೋ ಒಂದು ನಿರ್ಜನ ಗುಹೆಯಲ್ಲೋ ಅಥವಾ ಅರಣ್ಯದಲ್ಲೋ ಜೀವಿಸುತ್ತಿಲ್ಲವೆಂದು ಅರ್ಥಮಾಡಿಕೊಳ್ಳಿ. ನೀವು ನಿಮ್ಮ ಹೊರಗೆ ಜೀವನವು ಸಂಭವಿಸುತ್ತಿರುವಲ್ಲಿ ಇರುವ ಬೇರೆ ಜನರೊಂದಿಗೆ ಬದುಕುತ್ತಿರುವಿರಿ. ಜೀವನವು ಬೇರೆ ಜನರೊಂದಿಗೆ ಸಂಭವಿಸುತ್ತದೆ! ನೂರಾರು ಜನರೊಂದಿಗೆ ನೀವು ತೊಡಗಿಸಿಕೊಂಡಿರುವಿರಿ ಮತ್ತು ನೂರಾರು ಜನರು ನಿಮ್ಮೊಂದಿಗೆ ತೊಡಗಿಸಿಕೊಂಡಿರುವರು. ಆದ್ದರಿಂದ ಸಹಜವಾಗಿಯೇ ಅಷ್ಟೊಂದು ಜನರು ನಿಮ್ಮ ಜೀವನದಲ್ಲಿ ತೊಡಗಿಸಿಕೊಂಡಿರುವಾಗ ನಿಮ್ಮ ಬದುಕಿನಲ್ಲಿ ಯಾವುದೇ ಪರಿವರ್ತನೆಯನ್ನು ಬಯಸಿದರೆ ನೀವು ಬೇರೆಯವರ ಬದುಕಿನಲ್ಲಿ ಪರಿವರ್ತನೆಯನ್ನು ತರಲು ಕೆಲಸಮಾಡಿದರೇ ನಿಮ್ಮ ಜೀವನದಲ್ಲಿ

ಜವಾಬ್ದಾರನಾಗಿರುತ್ತಾನೆ. ನೀವು ಧನವಂತರಾಗಿದ್ದರೆ ಬಡವರನ್ನು ಧನಿಕರನ್ನಾಗಿಸಲು ಜವಾಬ್ದಾರರಾಗಿರುವಿರಿ. 'ನಿಮ್ಮ ಸಂಪತ್ತೆಲ್ಲವನ್ನೂ ಹಂಚಿಬಿಡಿ!' - ಎಂದು ನಾನು ಹೇಳುತ್ತಿಲ್ಲ. ಇಲ್ಲ! ನೀವು ಹತ್ತು ಜನ ಬಡವರನ್ನು ಆಯ್ದುಕೊಂಡು ನಿಮ್ಮೆಲ್ಲಾ ಸಂಪತ್ತನ್ನು ಅವರಿಗೆ ಹಂಚಿಬಿಟ್ಟರೆ ಆಗ ನಮಗೆ ಹನ್ನೊಂದು ಜನ ಬಡವರು ಸಿಗುವರು, ಅಷ್ಟೆ! ಆದ್ದರಿಂದ, ನಿಮ್ಮ ಸಂಪತ್ತನ್ನು ಬಡವರಿಗೆ ಹಂಚಿಬಿಡಿ ಎಂದು ಹೇಳುತ್ತಿಲ್ಲ. ನಾನು ನಿಮ್ಮನ್ನು ಕೇಳುತ್ತಿರುವುದು ಅವರಿಗೆ ಶಿಕ್ಷಣ ನೀಡಿ ಅವರನ್ನು ಧನಿಕರನ್ನಾಗಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಎಂದು. ನೀವು ಯಾವುದನ್ನೇ ಹೊಂದಿದ್ದರೂ ಅದನ್ನು ಹಂಚಿಕೊಂಡು ಬೆಳೆಸುವುದಕ್ಕೆ ಜವಾಬ್ದಾರರಾಗುವಿರಿ
ಸಂಪನ್ನಗೊಳಿಸುವಿಕೆಯನ್ನು ಕುರಿತಂತೆ ಹಲವು ಸತ್ಯಗಳು
- ಸಂಪನ್ನಗೊಳಿಸುವುದೇ ನಿಮ್ಮ ಸಹಜ ಸ್ವಭಾವ! ನೀವು ಏನನ್ನೇ ಮಾಡಿದರೂ ಅದು ಇತರರನ್ನು ಸಂಪನ್ನಗೊಳಿಸುತ್ತಿರುವುದು ಎಂಬುದನ್ನು ಅರ್ಥಮಾಡಿಕೊಳ್ಳಿ - ನಿಮ್ಮ ಉಸಿರಾಟವೇ ಭೂಗ್ರಹದ ಮೇಲಿರುವ ಗಿಡಮರಗಳನ್ನು ಸಂಪನ್ನಗೊಳಿಸುವುದು.
- ಬೇರೆಯವರನ್ನು ಸಂಪನ್ನಗೊಳಿಸುವುದು ನಿಮ್ಮನ್ನು ಸಂಪನ್ನಗೊಳಿಸುವುದು, ಏಕೆಂದರೆ ಪ್ರತಿಯೊಬ್ಬರೂ ನಿಮ್ಮ ಭಾಗವೇ.
ನೀವು ಬ್ರಹ್ಮಾಂಡದೊಂದಿಗೆ ಲಯಬದ್ಧರಾಗಿ ಜೀವಿಸಿದಾಗ, ನೀವು...
■ ಒಬ್ಬ ಶ್ರದ್ಧಾಯುತ, ಶಕ್ತಿಶಾಲಿ, ಆನಂದಮಯ ಜೀವಿಯಾಗುವಿರಿ.
■ ಜೀವನದೊಂದಿಗೆ ಸಮಯಸ್ಫೂರ್ತಿ ಹಾಗೂ ತಾದಾತ್ಮ್ಯತೆಯೊಂದಿಗೆ ಪ್ರತಿಸ್ಪಂದಿಸುವಿರಿ.
■ ನಿಮಗೆ ಹಾಗೂ ಇತರರಿಗೆ ಅದ್ಭುತಗಳು ಘಟಿಸುವಂತೆ ಮಾಡಲು ಸಶಕ್ತರಾಗುವಿರಿ.


ನಿಮ್ಮ ಬದುಕಿನಲ್ಲಿ ಪವಾಡಗಳು ಸಂಭವಿಸುವಂತೆ ಮಾಡಿರಿ
ಸಿದ್ಧಿಗಳು, ವಿಶೇಷವಾದ ಆಧ್ಯಾತ್ಮಿಕ ಶಕ್ತಿಗಳಾಗಿದ್ದು ನೀವು ಪ್ರಜ್ಞೆಯ ಉನ್ನತ ಸ್ತರಗಳನ್ನು ತಲುಪಿದಾಗ ಅವುಗಳು ಜಾಗೃತಗೊಳ್ಳುತ್ತವೆ. ನೀವು ಸತತವಾಗಿ, ಪ್ರಾಮಾಣಿಕವಾಗಿ ಈ ನಾಲ್ಕು ಶಕ್ತಿಗಳೊಂದಿಗೆ ಕೆಲಸ ಮಾಡಿದಾಗ, ಈ ಅದ್ಭುತ ಪವಾಡಪೂರಿತ ಶಕ್ತಿಗಳು ನಿಮ್ಮಲ್ಲಿ ಜಾಗೃತಗೊಳ್ಳುವುವು.
ನಿಮ್ಮ ಶಬ್ದಗಳಿಗೆ, ಆಲೋಚನೆಗಳಿಗೆ, ಹಾಗು ನಿಮ್ಮ ಜೀವನದಲ್ಲಿ ನೀವು ಮಾಡುವ ಕ್ರಿಯೆಗಳಿಗೆ ಧರ್ಮವನ್ನು ಸೇರಿಸಿರಿ. ನೀವು ಧರ್ಮವನ್ನು ಈ ನಾಲ್ಕು ಶಕ್ತಿಗಳಿಗೆ ಸೇರಿಸಿದಾಗ, ನಿಮ್ಮ ಜೀವನದಲ್ಲಿ ಅದ್ಭುತಗಳು ಸಂಭವಿಸುವುದನ್ನು ನೋಡುವಿರಿ. ಉದಾಹರಣೆಗೆ ನೀವು ಅಸಾಮಾನ್ಯ ಸಂಪೂರ್ಣತೆಯಿಂದ ಬದುಕಿದರೆ, ನಿಮ್ಮ ಪದಗಳನ್ನು ಸಾಕಾರಗೊಳಿಸಲು ಬ್ರಹ್ಮಾಂಡವೇ ಧಾವಿಸಿಬರುವುದು!
ಸರಿಯಾದ ವ್ಯೋಮವನ್ನು ಸೃಷ್ಟಿಮಾಡುವ ಶಕ್ತಿಯನ್ನು ಕುರಿತಂತೆ ಒಂದು ತಮಾಷೆಯಾದ, ಆದರೆ ಗಮನಾರ್ಹವಾದ ಕತೆಯೊಂದಿದೆ. ಬಾಲರಾಜಕುಮಾರ ಪ್ರಹ್ಲಾದನು ಭಗವಾನ್ ವಿಷ್ಣುವಿನ ಕಂಬದೊಳಹೊಕ್ಕಲೇ ಬೇಕು! ಎಂದು ವಿಷ್ಣುವು ಕಿರುಚುತ್ತಾನೆ.
ಆ ಮುಗ್ಧ ಮಗು ಪ್ರಹ್ಲಾದನ ಸಂಪೂರ್ಣತೆ ಹಾಗೂ ಅಧಿಕಾರತೆಯು ಯಾವ ರೀತಿ ಇತ್ತೆಂದರೆ ಅವನ ಬೆರಳು ಎಲ್ಲಿ ನಿಲ್ಲುತ್ತದೆಯೋ ವಿಷ್ಣುವು ಆ ಕಂಬದಲ್ಲಿ ಪ್ರತ್ಯಕ್ಷನಾಗಲೇಬೇಕಿತ್ತು! ನೀವು ಸಾಧ್ಯತೆಯ ಅಂತಹ ಶಕ್ತಿಶಾಲಿಯಾದ ಎಡೆಯನ್ನು ಉಂಟುಮಾಡಿದಾಗ, ದೈವವೂ ಕೂಡ ನಿಮಗಾಗಿ ಅಲ್ಲಿ ಇಳಿಯಲೇ ಬೇಕು!
ಬಯಕೆಯನ್ನು ಸಾಕಾರಗೊಳಿಸುವುದು

ಕೇಳಿ! ಯಾವುದೇ ಸಂಭವಿಸಲು
ನೀವು ಒಂದು ಎಡೆಯನ್ನು
ಸೃಷ್ಟಿಮಾಡಿದಾಗಲೆಲ್ಲಾ
ದುರದೃಷ್ಟದಿಂದ ಅದು
ಸಾಕಾರಗೊಳ್ಳುವ ಸಾಧ್ಯತೆಯ
ಬಗ್ಗೆ ಸಂಶಯಗಳನ್ನೂ ಕೂಡ
ಸೃಷ್ಟಿಮಾಡುವಿರಿ! ನೀವು ಎಡೆಯನ್ನು ಕುರಿತ ಸವಾಲು ಹಾಕಿದರೆ,
ನೀವದಾಗಲೇ ಆ ಎಡೆಯನ್ನು ಕಲುಷಿತಗೊಳಿಸಿರುವಿರಿ ಉದಾಹರಣೆಗೆ
ನೀವು ಯಾವುದೋ ಒಂದು ಕಾಯಿಲೆಯಿಂದ ನರಳುತ್ತಿರುವಿರಿ
ಎಂದುಕೊಳ್ಳೋಣ. ನೀವು ಗುಣಹೊಂದಲು ಒಂದು ಆಂತರಿಕ್ಷವನ್ನು
ಸೃಷ್ಟಿಮಾಡಿಕೊಂಡ ಕ್ಷಣವೇ ಸಾಧ್ಯವಿರುವ ಎಲ್ಲಾ ರೀತಿಯ
ಸಂಶಯಗಳನ್ನೂ ಹೊಂದುವಿರಿ: ಆಂತರಿಕ ಶಕ್ತಿಯ ಬಗ್ಗೆ ಸಂಶಯ, ಸಾಮರ್ಥ್ಯವನ್ನು ಕುರಿತಂತೆ ಇರುವ ನಿಮ್ಮ ಸಂದೇಹಗಳೊಂದಿಗೆ ಪೂರ್ಣತ್ವವನ್ನು ಮಾಡಲೇಬೇಕಾಗಿರುವುದು. ಕುಳಿತುಕೊಳ್ಳಿರಿ. ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಿಮ್ಮಲ್ಲಿರುವ ಕಲ್ಪನೆಯನ್ನು ತೆಗೆದುಕೊಳ್ಳಿರಿ. ಆ ಎಲ್ಲಾ ಅಸಾಧ್ಯತೆಗಳೊಂದಿಗೆ ಪೂರ್ಣತ್ವವನ್ನು ಮಾಡಿರಿ.
■ ಈಗ, ಆ ಸಂಪೂರ್ಣತೆಯ ಆಂತರಿಕಶಕ್ತಿಯೊಂದಿಗೆ ಕುಳಿತುಕೊಳ್ಳಿರಿ. ನಿಮ್ಮ ಕಾರ್ಯ ಚಟುವಟಿಕೆಗಳ ಮೂಲಕ ನಿಮ್ಮ ಸ್ಪೂರ್ತಿಯನ್ನು ಸಾಕಾರಗೊಳಿಸುವುದಾಗಿ ನಿರ್ಧರಿಸಿಕೊಳ್ಳಿ. ನಿಮ್ಮ ಬಯಕೆಯನ್ನು ಸಾಕಾರತೆಗೆ ಪರಿವರ್ತಿಸುವುದೇ ಅದಕ್ಕಾಗಿ ನೀವು ತೆಗೆದುಕೊಳ್ಳುವ ಜವಾಬ್ದಾರಿ. ಸಾಧ್ಯತೆಯ ಎಡೆಯನ್ನು ಸೃಷ್ಟಿಸುವುದು ಹಾಗು ಅದಕ್ಕಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಿಂದ ಅದನ್ನು ನಿಮ್ಮ ಜೀವನದಲ್ಲಿ ಸಾಕಾರಗೊಳಿಸುವುದು.
ನಿಮ್ಮ ಆಂತರಿಕಶಕ್ತಿಯಲ್ಲಿ ನೀವು ಯಾವುದನ್ನೇ
ಸೃಷ್ಟಿಸಿದರೂ ಅದು ನಿಮ್ಮ ಜೀವನದಲ್ಲಿ ಒಂದು
ಪವಿತ್ರ ಸಾಕಾರವಾಗಲಿ ಎಂದು ನಾನು ನಿಮ್ಮನ್ನು
ಆಶೀರ್ವದಿಸುವೆನು.
ಪರಮಹಂಸ ನಿತ್ಯಾನಂದರ ವಿಶ್ವದಾದ್ಯಂತದ ಆಂದೋಲನವು ವೈಯಕ್ತಿಕ ಪರಿವರ್ತನಾತ್ಮಕ ಶಿಬಿರಗಳ ಮೂಲಕ, ಆಧ್ಯಾತ್ಮಿಕ ಧ್ಯಾನಚಿಕಿತ್ಸೆ, ಹಾಗೂ ಮಾನವೀಯ ಸೇವೆಗಳ ಮೂಲಕ ಜನರ ಜೀವನವನ್ನು ಸಂಪನ್ನಗೊಳಿಸುತ್ತಿರುತ್ತದೆ.
ಆಂದೋಲನದ ಅಂತರರಾಷ್ಟ್ರೀಯ ಪ್ರಧಾನ ಕಾರ್ಯಾಲಯವು ಬೆಂಗಳೂರಿನ ಬಳಿ ಇರುವ ಬಿದದಿಯಲ್ಲಿ ಸ್ಥಾಪಿತವಾಗಿದೆ. ಇಲ್ಲಿ ನೀಡಲಾಗುವ ಸೇವಾಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳು ಧ್ಯಾನ, ಯೋಗ, ಸತ್ಸಂಗಗಳು, ಕಾರ್ಪೋರೇಟ್ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಆರೋಗ್ಯ ಶಿಬಿರಗಳು, ಸ್ತ್ರೀ ಮತ್ತು ಯುವ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳು, ಎಲ್ಲಾ ಆಶ್ರಮಗಳಲ್ಲೂ ಅನ್ನದಾನ, ಸಮಗ್ರ ಗುರುಕುಲ ಶಿಕ್ಷಣ ಮತ್ತು ಸಂನ್ಯಾಸ ಜೀವನದ ಮೂಲಕ ಅತ್ಯುತ್ತಮ ವೈದಿಕ ಹಿಂದೂ ಜೀವನಶೈಲಿಯ ಪುನರುಜ್ಜೀವನಗೊಳಿಸುವಿಕೆ – ಇವುಗಳನ್ನು ಒಳಗೊಂಡಿದೆ.

ಪರಮಹಂಸ ನಿತ್ಯಾನಂದರ ವಿಶ್ವದಾದ್ಯಂತದ ಆಂದೋಲನದ ಬಗ್ಗೆ



ಪರಮಪೂಜ್ಯ ಪರಮಹಂಸ ನಿತ್ಯಾನಂದರು
ಜ್ಞಾನೋದಯದೊಂದಿಗೆ ಜೀವಿಸುವ
ವಿಜ್ಞಾನದ ಜಾಗತಿಕ ಗುರುವಾಗಿದ್ದು
ಲಕ್ಷಾಂತರ ಜನರಿಂದ ನಮ್ಮ
ಸಮಕಾಲೀನರಾದ ಪರಮ ಪ್ರಜ್ಞೆಯಿಂದಿರುವ
ಅವತಾರ ಪುರುಷರೆಂದು
ಪೂಜಿಸಲ್ಪಡುತ್ತಿರುವರು. ಅವರು ಪ್ರಪಂಚದ
ಅತ್ಯಂತ ಹಳೆಯದಾದ ಹಿಂದೂ ಧರ್ಮದ
ಶೃಂಗ ಸಭೆಯ
ಮಹಾಮಂಡಲೇಶ್ವರರಾಗಿರುವರು. ಜನರ
ಸ್ವಭಾವದಲ್ಲಿರುವ ಅವರ
ಜ್ಞಾನೋದಯಯುಕ್ತ ಹಾಗು ಅನುಭವಾತ್ಮಕ
ಒಳದೃಷ್ಟಿಯು ಈ ಜ್ಞಾನೋದಯ ಹೊಂದಿದ
ಯುವ ಯೋಗಿಯನ್ನು ಒಬ್ಬ ಅತ್ಯಂತ
ಜನಪ್ರಿಯ ಆಧ್ಯಾತ್ಮಿಕ ಗುರುವನ್ನಾಗಿಯೂ
ಮತ್ತು ೧೬ ದಶಲಕ್ಷ ವೀಕ್ಷಣೆಯೊಂದಿಗೆ
ಯುಟ್ಯೂಬ್ ನಲ್ಲಿ ೧ ಆಗಿಯೂ ಮಾಡಿದೆ.
ಪ್ರತಿ ತಿಂಗಳೂ ಪರಮಹಂಸ ನಿತ್ಯಾನಂದರು
ಇನ್ನರ್ ಅವೇಕನಿಂಗ್ (ಅರ್ಥಾತ್
ಅಂತರ್ಜಾಗೃತಿ)ಎಂಬ ೨೧ ದಿನಗಳ
ಕಾರ್ಯಕ್ರಮವನ್ನು ನಡೆಸುತ್ತಿದ್ದು ಅದೊಂದು
ನಿಮ್ಮಲ್ಲಿರುವ ನಾಲ್ಕು ಶಕ್ತಿಗಳನ್ನು
ಶಕ್ತಿಯುತವಾದ ಬೋಧನೆಗಳಿಂದಲೂ ಮತ್ತು
ಕುಂಡಲಿನೀ ಜಾಗೃತಿಗಾಗಿ ಶಕ್ತಿಶಾಲಿಯಾದ
೨೧ ದೀಕ್ಷೆಗಳಿಂದಲೂ ಬಿಡುಗಡೆ ಮಾಡಲು
ಪರಿವರ್ತನಾ ಕಾರ್ಯಕ್ರಮವಾಗಿರುವುದು.
Nithyananda University Press www.nithyananda.org
Ebook ISBN: 979-8-88572-473-9