ಪರಿಚ್ಛೇದ - 5 : ಪ್ರಪಂಚ ಗುರುತಿಸಿದ ನಿತ್ಯಾನಂದ
This text was machine-transcribed from the printed book and may contain errors. Select the words and choose “Report a mistake”.
ಧ್ಯಾನಪೀಠದ ಆವಿಷ್ಕರಣ
ಆಕರ್ಷಣೀಯವಾದ, ಅದ್ಭುತ ತೇಜಸ್ಸಿನಿಂದ ಕೂಡಿದ ಬಾಲ ಸನ್ಯಾಸಿಯ ಮಾತುಗಳು ಗಾಳಿಯಲ್ಲಿ ಪಸರಿಸಿತು. ನಾಡಿನಾದ್ಯಂತ ದರ್ಶನ ಭಾಗ್ಯ ಪಡೆಯಲು ಬರುತ್ತಿದ್ದ ಭಕ್ತಾದಿಗಳ ಸಂಖ್ಯೆ ದ್ವಿಗುಣವಾಯಿತು. ಪರಮ ಶ್ರದ್ಧಾಳು ಭಕ್ತರು ಸ್ವಾಮೀಜಿಯವರಿಗಾಗಿ ಆಶ್ರಮವನ್ನು ಕಟ್ಟಲು ಬೇಡಿದರು. ಕಟ್ಟಕಡೆಗೆ ಮಣ್ಣಿನಿಂದ ಕಟ್ಟಿದ ಗುಡಿಸಲನ್ನು ಕೇವಲ ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲಾಗುವುದಷ್ಟು ಮಾತ್ರ ಕಟ್ಟಿದರು. ಇಲ್ಲಿ ದಿನಂಪ್ರತಿ ಜನಸ್ತೋಮಕ್ಕೆ ವೈದ್ಯಕೀಯ ಶುಶ್ರೂಷೆ ಧ್ಯಾನದ ಶಿಬಿರಗಳನ್ನು ಮಾಡುತ್ತಾ ಹೋದರು. ಸ್ವಾಮೀಜಿಯವರ ಈ ಧ್ವೇಯ, ಉದ್ದೇಶಗಳು ಸೇಲಂ, ಪುದುಕಟ್ಟೆ ಇನ್ನು ಹಲವು ನಗರಗಳಿಗೆ ಹರಡುತ್ತಿವೆ.
ಕೇಂದ್ರ ಸಂಸ್ಥೆ ಬೆಂಗಳೂರು
ಧ್ಯಾನಪೀಠ ಮೂಡಲು ಒಂದು ವಿಚಿತ್ರವಾದ ಕಥೆಯಿದೆ. ಆದರೆ ಇದು ಸತ್ಯ. ಸ್ವಾಮೀಜಿಯವರು ತಮಿಳುನಾಡಿನಲ್ಲಿರುವಾಗಲೇ ಆಶ್ರಮಕ್ಕಾಗಿ ಒಳ್ಳೆ ಪ್ರಶಸ್ತವಾದ ಜಾಗಕ್ಕಾಗಿ ಹುಡುಕುತ್ತಿದ್ದರು. ತಮ್ಮ ಶಿಷ್ಯರ ಎಷ್ಟೋ ಕೋರಿಕೆಗಳನ್ನು ಈ ವಿಷಯದಲ್ಲಿ ತಿರಸ್ಕರಿಸುದುದೇ ಶಿಷ್ಯರುಗಳಿಗೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗುತ್ತಿರ ಲಿಲ್ಲ. 100 ಎಕರೆ ಜಾಗವು ತಾನಾಗಿ ಒದಗಿ ಬಂದರೂ ಸ್ವಾಮೀಜಿಯವರು ಅದನ್ನು ತಿರಸ್ಕರಿಸಿದರು. ಇಂತಹ ಪ್ರಸಂಗಗಳು ಶಿಷ್ಯರನ್ನು ಸಂದಿಗ್ಧಕ್ಕೆ ಒಳಪಡಿಸುತ್ತಿತ್ತು. ದಿವ್ಯ ದೃಷ್ಟಿಯುಳ್ಳ ಸ್ವಾಮೀಜಿಯವರಿಗೆ ಬೆಂಗಳೂರಿನ ಹೊರವಲಯದಲ್ಲಿರುವ 20 ಎಕರೆಯುಳ್ಳ ಬಿಡದಿಯಲ್ಲಿ ಆಗಲೇ ದೃಗೋಚರವಾಗಿತ್ತು. ಈ ಪವಿತ್ರತಮ ಜಾಗದಲ್ಲಿ 600 ವರ್ಷಗಳ ಒಂದು ಆಲದ ಮರ ಇದ್ದು ಅದರ ಬುಡದಲ್ಲಿ ಮುನೇಶ್ವರನ ಸ್ವಯಂಭುವಿದ್ದು ಮತ್ತು 300 ವರ್ಷಗಳ ಯೋಗಿಯೊಬ್ಬರ ಜೀವಂತ ಸಮಾಧಿ ಯಿದ್ದುದೇ ಕಾರಣ. ಸ್ವಾಮೀಜಿಯವರ ಆದೇಶದಂತೆ ಶಿಷ್ಯರು ಬಿಡದಿಗೆ ತಕ್ಷಣವೇ ಬಂದು ಸ್ವಾಮೀಜಿಯವರು ಒಂದು ವರ್ಷದ ಹಿಂದೆ ಏನು ಉದ್ದೇಶಿಸಿದ್ದರೋ ಅದೇ ರೀತಿ ಎಲ್ಲಾ ಲಕ್ಷಣಗಳನ್ನೂ ಗುರುತುಗಳನ್ನೂ ಹೊಂದಿದ್ದ ಸ್ಥಳವನ್ನು ಬಿಡದಿಯಲ್ಲಿ ಕಂಡು ಆನಂದಪರವಶರಾದರು. ಆದರೆ, ಆ ಜಾಗದ ಒಡೆಯನು ಆ ಸ್ಥಳವನ್ನು ಮಾರಲು ಒಪ್ಪಲಿಲ್ಲ. ಸ್ವಾಮೀಜಿಯವರು ಇದು ಸಾಧ್ಯವಾಗುತ್ತೆ ಎಂದು ಮಂದಸ್ಮಿತವಾಗಿ ನುಡಿದ ಭವಿಷ್ಯ ನಿಜವಾಯಿತು. ಆ ಘಟನೆ ರೋಮಾಂಚಕಾರಿ ಯಾಗಿದೆ. ಅದು ಹೀಗಿದೆ: ಒಂದು ರಾತ್ರಿ ಸ್ವಯಂಭುವಾಗಿರುವ ಮುನೇಶ್ವರ ಆ ಸ್ಥಳದ ಯಜಮಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು ಅಜ್ಞಾನದಿಂದ, ಮೌಢ್ಯದಿಂದ ಮನೆಗೆ ಬಂದಿರುವ ಮಹಾಭಾಗ್ಯವನ್ನು ತಿರಸ್ಕರಿಸದಂತೆ ಕಣ್‌ದೃಷ್ಟಿ ತೆರೆಸಿದ. ಇದಾದ ಮುಂದಿನ ದಿನವೇ ಸ್ವಾಮೀಜಿಯವರ ದೈವಿಕ ಸನ್ನಿಧಿಯಲ್ಲಿ ಆ ಸ್ಥಳದ ಯಜಮಾನ (ಈಗ ಪರಮ ಭಕ್ತ) ಜಾಗವನ್ನು ಆಶ್ರಮಕ್ಕಾಗಿ ದಾನವಾಗಿತ್ತನು.
ಹೀಗೆ, ಧ್ಯಾನಪೀಠವು ಜನವರಿ 1, 2003 ರಲ್ಲಿ ಅಸ್ತಿತ್ವಕ್ಕೆ ಬಂದಿತು. 15 ಕೋಟೆಗಳಷ್ಟು ಖರ್ಚಾಗಲಿರುವ ಈ ಧ್ಯಾನಪೀಠದಲ್ಲಿ ದೈಹಿಕವಾಗಿ - ಮಾನಸಿಕ ಮತ್ತು ಆಧ್ಯಾತ್ಮಿಕ ರೋಗಗಳನ್ನು ಗುಣಪಡಿಸುವ ಕೇಂದ್ರ, ದೊಡ್ಡದೊಂದು ಧ್ಯಾನಮಂದಿರ, ಅದರೊಡನೆ ಶಕ್ತಿಯುತವಾದ ಬೃಹತ್ ಪ್ರಮಾಣದ ಲಿಂಗ, ಗುರುಕುಲ, ಬ್ರಹ್ಮಚಾರಿಗಳಿಗೆ ಮತ್ತು ರೋಗಿಗಳಿಗೆ ಕುಟೀರ, ಬೃಹತ್ತಾದ ಪುಸ್ತಕ ಭಂಡಾರ, ಸಂಶೋಧನಾಲಯ ಒಳಗೊಂಡಿದೆ. ಹೀಗಿರುವ ಆಶ್ರಮದಲ್ಲಿ ಸುಸಜ್ಜಿತ ಧ್ಯಾನಮಂದಿರ, ಹೀಲಿಂಗ್ ಸೆಂಟರ್, ಬ್ರಹ್ಮಚಾರಿಗಳ ಮತ್ತು ರೋಗಿಗಳ ಕುಟೀರ ಗಳು, ಅಡಿಗೆ ಮನೆ ಮತ್ತು ಊಟದ ಮನೆಗಳಿವೆ. ಆಶ್ರಮದ ಇನ್ನಿತರ ಕಾರ್ಯ ಚಟುವಟಿಕೆಗಳು ಅನ್ನ ದಾಸೋಹ, ಹೀಲಿಂಗ್ ಶಿಬಿರಗಳು ಮತ್ತು ಸತ್ಸಂಗಗಳನ್ನು ನಡೆಸುವುದು.
ಆನಂದ ಹೀಲಿಂಗ್ (ಧ್ಯಾನದ ಮುಖಾಂತರ) :
ಆನಂದ ಹೀಲಿಂಗ್ ಸ್ವಾಮೀಜಿಯವರದ್ದೇ ಆದ ಅದ್ಭುತ ವಿಧಾನ ಮತ್ತು ಸಂಶೋಧನೆ. ಇದರಲ್ಲಿ ಧ್ಯಾನದ ಮೂಲಕ ಹೀಲಿಂಗ್ ಮಾಡಲಾಗುತ್ತೆ. ಸ್ವಾಮೀಜಿಯವರಿಂದ ದೀಕ್ಷೆ ಪಡೆದ ಆನಂದ ಹೀಲರ್‌ಗಳು ಸ್ವಾಮೀಜಿಯವರ ದೈಹಿಕ ಹೀಲಿಂಗ್ ಶಕ್ತಿಗೆ ಮಾರ್ಗ ಮತ್ತು ಮುಖಾಂತರವಾಗುತ್ತಾರೆ. ಹೀಲಿಂಗ್ ಕ್ರಿಯೆ ನಡೆಯುವ ಸಂದರ್ಭದಲ್ಲಿ ಹೀಲರ್ ತಮ್ಮ ಕೈಯನ್ನು ರೋಗಿಯ ರೋಗಗ್ರಸ್ತವಾದ ಶರೀರದ ಭಾಗಕ್ಕೆ ಇಟ್ಟು, ಧ್ಯಾನಮಾಡಲಾರಂಭಿಸುತ್ತಾರೆ. ತತಕ್ಷಣದಲ್ಲಿ ಹೀಲಿಂಗ್ ಶಕ್ತಿ ಪ್ರವಹಿಸಿ, ರೋಗಿಯ ಶರೀರವನ್ನು ಪ್ರವೇಶಿಸಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ವ್ಯಾಧಿಗಳನ್ನು ಪರಿಪೂರ್ಣವಾಗಿ ಗುಣಪಡಿಸುತ್ತದೆ. ಹೀಲಿಂಗ್ ವಿಧಾನ ಬಹಳ ಸರಳ. ಅದಕ್ಕೆ ಬೇಕಾದುದು ಹೀಲರ್‌ಗಳ ಮತ್ತು ರೋಗಿಗಳ ತೆರೆದ ಮನಸ್ಸು. ಈ ಆನಂದ ಹೀಲಿಂಗ್‌ನ ವೈಶಿಷ್ಟ್ಯತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಹೀಲರ್‌ಗಳು ಆಧ್ಯಾತ್ಮಿಕ ಪ್ರಗತಿಯನ್ನು ಶೀಘ್ರದಲ್ಲಿ ಹೊಂದಬಹುದು.




ಆನಂದ ಸ್ಪುರಣ ಕಾರ್ಯಕ್ರಮ (ಎ.ಎಸ್.ಪಿ.)
ಬೆಂಗಳೂರಿಗೆ ಬಂದ ಕೆಲ ದಿನಗಳಲ್ಲಿ, ಮಾನವರಲ್ಲಿ ಅಡಗಿರುವ, ಶಕ್ತಿ ಕೇಂದ್ರಗಳಾದ ಷಟ್‌ಚಕ್ರಗಳ ಪಾತ್ರವನ್ನು ವೈಜ್ಞಾನಿಕವಾಗಿ ಅನುಭವವೇದ್ಯವನ್ನಾಗಿ ಮಾಡಿ, ಅವುಗಳ ಮುಖಾಂತರ ಧ್ಯಾನವನ್ನು ಮಾಡಿ ಹೀಲಿಂಗ್ ಕ್ರಿಯೆಯನ್ನು ನೈಜಗೊಳಿಸುವುದಕ್ಕಾಗಿ ಸಂಶೋಧಿಸಿ ರೂಪಿಸಿದ ಕಾರ್ಯಕ್ರಮವೇ ಎ.ಎಸ್.ಪಿ. (ಆನಂದ ಸ್ಪುರಣ ಕಾರ್ಯಕ್ರಮ) ಈಗ ಅದು ಧ್ಯಾನಪೀಠದ ಪ್ರಮುಖ ಕಾರ್ಯಕ್ರಮ ಗಳಲ್ಲಿ ಒಂದಾಗಿದೆ. ಮೊಟ್ಟಮೊದಲನೆಯ ಎ.ಎಸ್.ಪಿ. ನಡೆದದ್ದು ಅಕ್ಟೋಬರ್
2002. ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ಎ.ಎಸ್.ಪಿ. ಭಾರತವಲ್ಲದೆ ಅಮೆರಿಕ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ನಡೆದಿದೆ. ಪ್ರತಿವರ್ಷದ ವಾರದ ಕೊನೆಯ ದಿನಗಳಲ್ಲಿ ಪ್ರಪಂಚದ ನಾನಾ ಕಡೆಯಲ್ಲಿ ಎ.ಎಸ್.ಪಿ. ನಡೆಸಲು ಸ್ವಾಮೀಜಿಯವರು ಸಿದ್ಧರಾಗಿರುತ್ತಾರೆ !
ಧ್ಯಾನಪೀಠ - ಪಾಶ್ಚಾತ್ಯ ದೇಶಗಳಲ್ಲಿ
ಜುಲೈ 2003 ರಲ್ಲಿ ಧ್ಯಾನಪೀಠವು ತನ್ನ ರೆಕ್ಕೆಯನ್ನು ಸಮುದ್ರದ ಆಚೆಗೂ ವಿಸ್ತರಿಸಿತು. ಸ್ವಾಮೀಜಿಯವರು ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಹೀಲಿಂಗ್ ಮತ್ತು ಧ್ಯಾನದ ಮಹತ್ವವನ್ನು ಅಲ್ಲಿನ ಜನಸಮುದಾಯಕ್ಕೆ ತಿಳಿಹೇಳಿದರು. ಸ್ವಾಮೀಜಿಯವರ ಈ ಮಹತ್ವದ ಭೇಟಿ ಜನರ ಮೇಲಿನ ಅನುಕಂಪ, ಪ್ರೀತಿ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿತು. ಇದರ ಫಲಶ್ರುತಿಯೇ ಇವತ್ತು ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ಕೇಂದ್ರಗಳು ಏಷ್ಯಾ, ಯುರೋಪ್ ಮತ್ತು ಅಮೆರಿಕಾ ಖಂಡಗಳಿಗೆ ವಿಸ್ತರಿಸಿದೆ. ಸಂಖ್ಯೆ ದಿನಂಪ್ರತಿ ಬೆಳೆಯುತ್ತಾ ಇದೆ.