ಪರಿಚ್ಛೇದ-6 : ಪ್ರಮಾಣ ಪತ್ರಗಳು
This text was machine-transcribed from the printed book and may contain errors. Select the words and choose “Report a mistake”.
ಪ್ರಮಾಣ ಪತ್ರ-1
| ಲಕ್ಷ್ಮಣ್ಣ | ದೂರವಾಣಿ : 3480117 |
|---|---|
| ಮಾಜಿ ಮೇಯರ್ | ನಂ.14, ವಿನಾಯಕ ಲೇ ಔಟ್, |
| ಮಾಜಿ ಚೇರಮನ್ | ಮಾಗಡಿ ಮುಖ್ಯ ರಸ್ತೆ, |
| ಅಖಿಲ ಭಾರತ ಮೇಯರ್ಗಳು | ಬೆಂಗಳೂರು - 560 023. |
| ಬೆಂಗಳೂರು ಮಹಾನಗರ ಪಾಲಿಕೆ |
ಕಳೆದ ನಾಲ್ಕು ವರ್ಷಗಳಿಂದ ನಾನು ಎರಡು ಮೊಣಕಾಲುಗಳ ನೋವಿನಿಂದ ನರಳುತ್ತಿದ್ದೆ. ಹಲವು ವರ್ಷಗಳ ಹಿಂದೆ ಎತ್ತರದ ಸ್ಥಳದಿಂದ ಕೆಳಗೆ ಬಿದ್ದದ್ದು ತೊಂದರೆಗೆ ಕಾರಣ. ವೈದ್ಯರಿಗೆ ತೋರಿಸಿದಾಗ, ಎಕ್ಸ್ರೇ ತೆಗೆದು ಮೊಣಕಾಲುಗಳಲ್ಲಿರುವ ನರಗಳಿಗೆ ಸಂಬಂಧಿಸಿದ ಲಿಗಮೆಂಟ್ ತೊಂದರೆ ಎಂದರು. ನೋವು ನಿವಾರಣೆ ಮಾಡುವ ಗುಳಿಗೆಗಳನ್ನು ತೆಗೆದುಕೊಂಡಾಗ ಸ್ವಲ್ಪ ಸಮಯದವರೆಗೆ ನಿಲ್ಲುತ್ತಿತ್ತು; ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಸ್ವಲ್ಪವೂ ನಡೆಯುವುದಕ್ಕೆ ಅಥವಾ ನಿಲ್ಲುವುದಕ್ಕೆ ಆಗದಂತಹ ಭಯಂಕರ ನೋವು. ಸ್ನಾನದ ಕೋಣೆಯಲ್ಲಿ ಕುಳ್ಳಿರಲು ಸಾಧ್ಯವಿಲ್ಲದ ಅಸಾಧ್ಯ ನೋವು. ವ್ಯಾಯಾಮ ಮತ್ತು ಫಿಜಿಯೋಥೆರಪಿ ಕೂಡ ಒಳ್ಳೆಯ ಫಲಿತಾಂಶ ನೀಡಲಿಲ್ಲ.
ನಾನು ನಿತ್ಯಾನಂದ ಸ್ವಾಮಿಗಳನ್ನು ಭೇಟಿ ಮಾಡಿದಾಗ, ಹೊಸ ಉತ್ಸಾಹ , ಧೈರ್ಯ, ಹುರುಪು ಮೂಡಿತು. ಸ್ವಾಮೀಜಿಯವರ ಬಳಿ 20 ಸಿಟ್ಟಿಂಗ್ ತೆಗೆದುಕೊಂಡ ನಂತರ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನಾನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸ್ವಾಮೀಜಿಯವರ ಆಧ್ಯಾತ್ಮಿಕ ಹೀಲಿಂಗ್ ಚಿಕಿತ್ಸೆ ಸೇವೆಯನ್ನು ಸ್ವೀಕರಿಸಲೆಂದು ಆಶಿಸುತ್ತೇನೆ.
ಇತೀ ಲಕ್ಷ್ಮಣ್ಣ
ಪ್ರಮಾಣ ಪತ್ರ-2
ಎನ್.ಟಿ. ಮತಿವನನ್, ಎಂ.ಎ.
ಅಕೌಂಟ್ಸ್ ಮ್ಯಾನೇಜರ್
ಬೆಂಗಳೂರು ಕೇಬಲ್ಸ್ ಪ್ರೈ ಲಿ.
ಪರ್ಲ್ಮೆಲಿನಾ
2/5, 11ನೇ : ಬಿ : ಕ್ರಾಸ್,
ಚಿನ್ನಮ್ಮ ಲೇ ಔಟ್, ಮಡಿವಾಳ ಅಂಚೆ
ಬೆಂಗಳೂರು - 560 068.
ದೂರವಾಣಿ: ಆಫೀಸ್: 7870258, ಮನೆ: 5505375
ನಾನು ಸುಖೀ ಜೀವನವನ್ನು ನಡೆಸುತ್ತಿದ್ದೇನೆ. ನಾನು ನಿತ್ಯಾನಂದ ಸ್ವಾಮೀಜಿಯವರಿಂದ ಹೀಲಿಂಗ್ ಚಿಕಿತ್ಸೆ ಪಡೆದು ಒಳ್ಳೆಯ ಆರೋಗ್ಯವಂತನಾದುದು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಾನು ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರವಾದ ಹೊಡೆತಗಳಿಂದ ಪೋಸ್ಟೀರಿಯರ್ ಡಿಸ್ಲೋಕೇಷನ್ ಆಫ್ ಹಿಪ್ ಮಲ್ಟಿಪಲ್ ಫ್ರಾಕ್ಟರ್ಸ್ ನನ್ನ ಎಡ ಫಿಬುಲಾ ಮತ್ತು ಬಲ ಥಿಬಿಯಾ ದಲ್ಲಿ ಆಯಿತು. ನನ್ನ ಎಡ, ಬಲ ಕಾಲಿನಲ್ಲಿ ಬಹಳಷ್ಟು ಸರ್ಜರಿಗಳಾಗಿವೆ. ನಾನು 3 ವರ್ಷಗಳವರೆಗೆ ಎಲ್ಲಿಗೂ ಅಲೆದಾಡುವಂತಿರಲಿಲ್ಲ. ಇದಾದನಂತರ, ಕ್ರಚೆಸ್ ಮತ್ತು ಸ್ಟಿಕ್ ನ ಸಹಾಯದಿಂದ ಸ್ವಲ್ಪ ನಡೆಯಲಾರಂಭಿಸಿದೆ. ಇದರಿಂದ ಸ್ವಲ್ಪಮಟ್ಟಿಗೆ ಆರ್ಥೋಪೆಡಿಕ್ ತೊಂದರೆಗಳು ಸರಿಯಾದರೂ ಬಲಗಾಲು ಮಾತ್ರ ಊತದಿಂದ ಮತ್ತು ತೆರೆದ ಹುಣ್ಣಿನಿಂದ ವಾಸಿಯಾಗಲಿಲ್ಲ. ಪ್ಲಾಸ್ಟಿಕ್ ಸರ್ಜರಿ ಎರಡಾವರ್ತಿ ಮಾಡಿದರೂ ಬಲಗಾಲು ಸರಿಯಾಗಲಿಲ್ಲ. ನನ್ನ ಜೀವನವೇ ದುಃಖದಿಂದ ಮತ್ತು ನೋವಿನಿಂದ ಕೂಡಿ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿತ್ತು.
ಒಂದು ದಿನ ನನ್ನ ಸಂಬಂಧಿಕರೊಬ್ಬರಿಂದ ಶ್ರೀ ಸ್ವಾಮಿನಿತ್ಯಾನಂದರ ಬಗ್ಗೆ ತಿಳಿಯಿತು. ಆ ಸ್ವಾಮಿಗಳು ದೈಹಿಕ, ಮಾನಸಿಕ ಖಾಯಿಲೆಗಳಲ್ಲದೆ ವಾಸಿ ಮಾಡಲಾಗದ ಭಯಂಕರ ವ್ಯಾಧಿಯನ್ನೂ ಗುಣಪಡಿಸುತ್ತಾರೆಂದು.
ನಾನು ಶ್ರೀ ಸ್ವಾಮೀಜಿಯವರನ್ನು ಭೇಟಿ ಮಾಡಿದಾಗ, ನನ್ನ ಕಾಲನ್ನು ತೋರಿಸಿ ಎಲ್ಲಾ ದುಃಖ, ದುಗುಡ ನೋವನ್ನು ಅವರ ಪಾದಕ್ಕೆ ಹಾಕಿದೆ - ತಕ್ಷಣವೇ ಸ್ವಾಮೀಜಿಯವರು ತಮ್ಮ ಹೀಲಿಂಗ್ ಪ್ರಭಾವದಿಂದ ಆ ಕಾಲಿನ ಹುಣ್ಣಿನ ಮೇಲೆ ಹೀಲಿಂಗ್ ಚಿಕಿತ್ಸೆಯ ಪ್ರಭಾವದಿಂದ ಚರ್ಮದ ಮೇಲ್ಬದರ ಬೆಳೆಯುತ್ತದೆ ಎಂದರು. ಹೀಲಿಂಗ್ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಪ್ರತಿದಿನ ಬರಲಿಕ್ಕೆ ಸೂಚಿಸಿದರು. ಈಗ
ಪ್ರತಿದಿನ ತಪ್ಪದೇ 20 ದಿನಗಳಿಂದ ಕನ್ನಿಂಗ್ಹ್ಯಾಂ ರೋಡಿನಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋ ಕ್ಯಾಂಪ್ಗೆ ಹೋಗುತ್ತಿದ್ದೇನೆ. ಸ್ವಾಮೀಜಿಯವರ ಆಧ್ಯಾತ್ಮಿಕ ಹೀಲಿಂಗ್ ಚಿಕಿತ್ಸೆ ಶಕ್ತಿಯಿಂದ ಮೊದಲನೆಯದಾಗಿ ನನ್ನ ನೋವು, ನರಳಾಟ ನಿಂತಿತು. ಅದಕ್ಕಾಗಿ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ನಿಲ್ಲಿಸಿದೆ. ಎರಡನೆಯದಾಗಿ, ನನ್ನ ಊದಿಕೊಂಡಿದ್ದ ಕಾಲು ಸಹಜ ಸ್ಥಿತಿಗೆ ಮರಳುತ್ತಿರುವುದಾಗಿ ಕಾಣಿಸುತ್ತಿದೆ. ನಿಜವಾಗಿಯೂ ನನ್ನ ಕುಂಟುವಿಕೆಯು ನಿಂತಿದೆ. ನನ್ನೆರಡು ಕಾಲುಗಳನ್ನು ಸುಲಭವಾಗಿ ಸೇರಿಸಿ ನಡೆಯ ಬಲ್ಲವನಾದೆ. ಇದಕ್ಕಿಂತ ಹೆಚ್ಚಾಗಿ ಚರ್ಮದ ಮೇಲ್ಬದರ ಬೆಳೆದು ಹುಣ್ಣನ್ನು ಮರೆ ಮಾಡಿತು. ಅತ್ಯಾಶ್ಚರ್ಯವಾಗಿ ನನ್ನ ಮಾನಸಿಕ ದುಃಖ ಹೊರಟು ಹೋಯಿತು. ನಡೆಯಲಾಗದ ನನ್ನನ್ನು ನಡೆಯುವಂತೆ ಮಾಡಿತು ಸ್ವಾಮೀಜಿಯವರ ಶಕ್ತಿ. ಶ್ರೀ ಸ್ವಾಮೀಜಿಯವರ ಹೀಲಿಂಗ್ ಚಿಕಿತ್ಸೆ ಅಥವಾ ಆಧ್ಯಾತ್ಮಿಕ ಶಕ್ತಿ ದೈಹಿಕವಾಗಿ, ಮಾನಸಿಕವಾಗಿ ವಾಸಿಯಾಗದ ರೋಗ-ರುಜಿನಗಳಿಂದ ಕಷ್ಟಪಡುತ್ತಿರುವ ಎಲ್ಲರಿಗೂ ಪ್ರಯೋಜನವಾಗಬೇಕು.
ವಂದನೆಗಳೊಂದಿಗೆ,
ನಿಮ್ಮ ಆತ್ಮೀಯ, ಎನ್.ಟಿ. ಮತಿವನನ್
ಪ್ರಮಾಣ ಪತ್ರ - 3
ಎಂ. ಲಕ್ಷ್ಮಣನ್, ಐ.ಪಿ.ಎಸ್., ಕಚೇರಿ: 2384076 ಪೊಲೀಸ್ ಮಹಾನಿರೀಕ್ಷಕರು, ಫ್ಯಾಕ್ಸ್: 2874201 ಜಾಗೃತ ದಳ, ಜಲ ಸಂಪನ್ಮೂಲ ಇಲಾಖೆ ಮನೆ: 6678400 ಬಸವ ಭವನ, 3ನೇ ಮಹಡಿ, ಹೈ ಗ್ರೌಂಡ್ಸ್, ಬೆಂಗಳೂರು - 560 001. ದಿನಾಂಕ: 31-07-2002.
ನಾನು ತೀವ್ರವಾದ ಅಪ್ಪರ್ ಅಬ್ಡಾಮಿನಲ್ ನೋವಿನಿಂದ ಮತ್ತು ಕ್ರಾಂಡ್ಸ್ ನಿಂದ ನರಳುತ್ತಿದ್ದೆ. ವೈದ್ಯರುಗಳು ಇದನ್ನು ಗ್ಯಾಸ್ಟೋಪೆರಿಸಿಸ್ ಎಂದು ವಿಶ್ಲೇಷಿಸಿ ಹೊಟ್ಟೆಗೆ ಸಂಬಂಧಪಟ್ಟ ನರಗಳನ್ನು ನಾಶಪಡಿಸುತ್ತದೆ ಎಂದಿದ್ದರು. ನಾನು 3 ಮೂರು ತಿಂಗಳ ಕಾಲ ಈ ಖಾಯಿಲೆಯಿಂದ ಕರ್ತವ್ಯನಿರ್ವಹಣೆ ಮಾಡಲಾಗಲಿಲ್ಲ. ಬಹಳಷ್ಟು ಸಾರಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಒದಗಿ ಬಂದಿತ್ತು. ಬಹಳಷ್ಟು ಔಷಧಿಗಳನ್ನು ಸೇವಿಸಿದರೂ ಅದು ರೋಗವನ್ನು ಉಲ್ಬಣಗೊಳಿಸುತ್ತಿತ್ತೇ ಹೊರತು ವಾಸಿ ಮಾಡುತ್ತಿರ ಲಿಲ್ಲ. ನನ್ನ ಮನೆಯ ಹತ್ತಿರ ಇರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ಪ್ರಾರ್ಥನೆ ಮಾಡುವಾಗ, ಈ ಹಿಂದೆ ಯಾವತ್ತೂ ನನ್ನನ್ನು ನೋಡಿರದ ಓರ್ವ ಮನುಷ್ಯ ನನ್ನನ್ನು ಭೇಟಿಯಾಗಿ ಶ್ರೀ ನಿತ್ಯಾನಂದ ಸ್ವಾಮಿಗಳ ಬಗ್ಗೆ ಮತ್ತು ಅವರ ಆಧ್ಯಾತ್ಮಿಕ ಹೀಲಿಂಗ್ ಬಗ್ಗೆ ತಿಳಿಸಿದ ನನ್ನ ಮತ್ತು ಸ್ವಾಮೀಜಿಯವರ ಮೊದಲನೆ ಭೇಟಿಯೇ ನನ್ನನ್ನು ಹುರಿದುಂಬಿಸಿತು. 30 ದಿನಗಳ ಸತತ ಹೀಲಿಂಗ್ ಸೆಷನ್ಸ್ ತೆಗೆದುಕೊಂಡ ನಂತರ ನನ್ನ ಆರೋಗ್ಯದಲ್ಲಿ ಅದ್ಭುತ ಮಾರ್ಪಾಡಾಯಿತು. ನನ್ನ ರೋಗ ಮಂಗಮಾಯವಾಯಿತು. ಸ್ವಾಮೀಜಿಯವರು ಹೇಳಿಕೊಟ್ಟ ಮಹಾಮಂತ್ರ ಧ್ಯಾನ ನಮ್ಮಲ್ಲಿ ಶಾಂತಿಯನ್ನು ನೆಮ್ಮದಿಯನ್ನು ತಂದಿತ್ತು. ಇದರ ಜೊತೆಗೆ ಬಹಳಷ್ಟು ಸಂದರ್ಭದಲ್ಲಿ ದೂರವಾಣಿ ಸಂಪರ್ಕ ಮಾಡಿ ಸ್ವಾಮೀಜಿಯವರೊಂದಿಗೆ ದೂರದಿಂದಲೇ ಹೀಲಿಂಗ್ ಮಾಡಿಸಿಕೊಂಡ ಭಾಗ್ಯವಂತ ನಾನು.
ಶ್ರೀ ಸ್ವಾಮೀಜಿಯವರಿಗೆ ಅತ್ಯಂತ ಚಿರಋಣಿ. ಸ್ವಾಮೀಜಿಯವರ ಸೇವೆ ಈ ಸಮಾಜಕ್ಕೆ ಬಹಳಷ್ಟು ಕಾಲ ಒದಗಬೇಕು. ಜನಸಾಮಾನ್ಯರು ಶ್ರೀ ಸ್ವಾಮೀಜಿಯವರ ಈ ಸೇವೆಯನ್ನು ಉಪಯೋಗಿಸಿಕೊಂಡು ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು.
ಇತೀ ಎಮ್. ಲಕ್ಷ್ಮಣ
ಪ್ರಮಾಣ ಪತ್ರ - 4
ಡಾ|| ಎ.ಎಸ್. ರವೀಂದ್ರ,
ರೀಡರ್ ಇನ್ ಕಾಮರ್ಸ್
ಬೆಂಗಳೂರು ವಿಶ್ವವಿದ್ಯಾನಿಲಯ,
ನಂ.30, ಶ್ರೀ ನಿಧಿ, 7ನೇ ಮೈನ್,
ಸಿ. ಹೆಚ್. ಬಿ. ಎಸ್. ಲೇ ಔಟ್,
ವಿಜಯನಗರ, ಬೆಂಗಳೂರು - 560 040.
ದೂರವಾಣಿ : 3404724
ವಯಸ್ಸು : 45 ವರ್ಷ, ಕೇಸ್ : ಕ್ರಾನಿಕ್ ರೀನಲ್ ಫೇಲ್ಯೂರ್
ಎರಡು ವರ್ಷಗಳ ಹಿಂದೆ ನಾನು ರೀನಲ್ ಫೇಲ್ಯೂರ್ನಿಂದ ನರಳುತ್ತಿರುವು ದೆಂದು ತಿಳಿಯಿತು. ಪ್ರಾರಂಭದಲ್ಲಿ ನನ್ನಲ್ಲಿರುವ ಪೊಟ್ಯಾಷಿಯಂ ಅಂಶವನನ್ನು ಕಡಿಮೆ ಮಾಡಲು ಇನ್ಪೇಶೆಂಟ್ ಆಗಿ ಪ್ರಸಿದ್ಧವಾದ ಪ್ರೈವೇಟ್ ಆಸ್ಪತ್ರೆಗೆ ದಾಖಲೆ ಮಾಡಿದ್ದರು. ನನ್ನನ್ನು ಪರೀಕ್ಷಿಸುತ್ತಿದ್ದ ವೈದ್ಯರು ನನಗೆ ಹುಟ್ಟಿನಿಂದ ಒಂದೇ ಒಂದು ಮೂತ್ರಕೋಶ ಇರುವುದಾಗಿಯೂ ಇನ್ನೊಂದು ಅತೀ ಸಣ್ಣದಾಗಿರುವುದರಿಂದ ಮತ್ತು 25% ಮಾತ್ರ ಕೆಲಸ ಮಾಡುತ್ತಿರುವುದರಿಂದ, ಉಳಿಯುವ ಸಾಧ್ಯತೆಗಳು ಬಹಳ ಕಷ್ಟವೆಂದು ಖಡಾಖಂಡಿತವಾಗಿ ಹೇಳಿದರು. ನಾನು ಈ ವಿಷಯ ತಿಳಿದಾಗಿನಿಂದ ಬಹಳ ಸ್ಟ್ರಿಕ್ಕಾಗಿ ಡಯಟರಿ ರಿಸ್ಟ್ರಿಕ್ಷನ್ಸ್ ಮತ್ತು ಮೆಡಿಟೇಷನ್ ಅನುಸರಿಸಿದೆ. ಇಷ್ಟೆಲ್ಲಾ ಮಾಡಿದರೂ ಸಹ ನನ್ನ ದೇಹಸ್ಥಿತಿ ಹದಗೆಟ್ಟು, ಮಾರ್ಚ್ 2002 ರಲ್ಲಿ ತೀವ್ರವಾದ ರೀನಲ್ ಫೇಲ್ಯೂರ್ಗೆ ಸಿಕ್ಕಿ ವಾಂತಿಯಾಗುವಿಕೆ, ನಾಸಿಯಾ, ಎಡಿಮಾ, ಉಸಿರಾಟ ಇಲ್ಲದಿರುವಿಕೆಯಿಂದಾಗಿ ಪ್ರಸಿದ್ಧ ಪ್ರೈವೆಟ್ ಆಸ್ಪತ್ರೆಗೆ ದಾಖಲು ಮಾಡಿದರು. ನನಗೆ ಲೈಫ್ ಸೇವಿಂಗ್ ಮೆಡಿಟೇಷನ್ ಕೊಟ್ಟು ಡಯಾಲಿಸಸ್ ಮಾಡಿದರು. ನನ್ನ ದುಃಖದ ದಿನಗಳು ಪ್ರಾರಂಭವಾಯಿತು. ವಾರದಲ್ಲಿ ನಾಲ್ಕು ಗಂಟೆಗಳ ಕಾಲ ಮೂರು ದಿನಗಳ ಡಯಾಲಿಸಸ್ ಪ್ರಾರಂಭವಾಯಿತು. ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಮಾಡಿಸುವುದಕ್ಕೆ ಯೋಚಿಸತೊಡಗಿದೆ. ಯಾವ ಕ್ಷಣದಲ್ಲಾದರೂ ಭಗವಂತನ ಹೀಲಿಂಗ್ ಟಚ್ ಕಾಯುತ್ತಾ ಇದ್ದೆ. ನನ್ನ ಪ್ರಾರ್ಥನೆ ಭಗವಂತನಿಗೆ ಮುಟ್ಟಿ, ನನ್ನ ಫ್ಯಾಮಿಲಿ ಸ್ನೇಹಿತನಿಂದ ಶ್ರೀ ನಿತ್ಯಾನಂದ ಸ್ವಾಮಿಯವರಿಂದ ಹೀಲಿಂಗ್ ಶಕ್ತಿಯ ಬಗ್ಗೆ ತಿಳಿಯುವಂತಾಯ್ತು. ಅವ್ವತ್ತು ಗುರುವಾಗ ಜೂನ್ 6, 2002, ನನಗೆ ಸ್ವಾಮೀಜಿ ಯವರ ಹೀಲಿಂಗ್ಕ್ಯಾಂಪ್ಗೆ ಹೋಗುವ ಅವಕಾಶ ಲಭಿಸಿತು. ನನಗೆ ಸ್ವಾಮೀಜಿ ಯವರ ಆಕರ್ಷಕ ವ್ಯಕ್ತಿತ್ವ ಹೀಲಿಂಗ್ ಶಕ್ತಿಯ ಬಗ್ಗೆ ಅಪಾರ ಶ್ರದ್ಧೆ ಮತ್ತು ವಿಶ್ವಾಸ ಬೆಳೆದಿತ್ತು. ನಾನು ನನ್ನ ತೊಂದರೆಯನ್ನು ವಿವರಿಸಿದ ಕೂಡಲೇ ಸ್ವಾಮೀಜಿಯವರು ಧೈರ್ಯವಾಗಿರು ಭಗವಂತನ ಆಶೀರ್ವಾದ ನಿನ್ನ ಮೇಲೆ ಇದೆ. ನಿನಗೆ ಗುಣವಾಗುವ ಸಾಧ್ಯತೆಯಿದೆ ಎಂದರು. ಅವರ ಈ ಅಭಯದಿಂದ ಮಂತ್ರ ಮುಗ್ಧನಾದೆ ಮತ್ತು ಭಗವಂತನ ಹೀಲಿಂಗ್ ಟಚ್ ಪಡೆದೆ. ಒಂದು ಹಿತವಾದ ಶಾಖದಿಂದ ಕೂಡಿದ ಶಕ್ತಿಯೊಂದು ನನ್ನಲ್ಲಿ ಪ್ರವೇಶಿಸಿತು. ಹೀಲಿಂಗ್ ತೆಗೆದುಕೊಂಡ 5 ದಿನಗಳ ನಂತರ ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ಹಿಮೊಗ್ಲೋಬಿನ್ ಅಂಶ 6.4 ಗ್ರಾಂ/ಡಿ ಎಲ್ ರಿಂದ 8.2 ಗ್ರಾಂ/ಡಿ ಎಲ್ ಏರಿತು. ಮತ್ತು ಯೂರಿಕ್ ಆ್ಯಸಿಡ್ ಮಟ್ಟ 6 ಎಂ.ಜಿ/ ಡಿ ಎಲ್ ನಾರ್ಮಲ್ ಮಟ್ಟಕ್ಕೆ ಮುಟ್ಟಿತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ಹೆಚ್ಚು ಶಕ್ತಿಯುತನಾದಂತೆ ಭಾಸವಾಗ ತೊಡಗಿತು. ಈಗ ನಾನು ಮುಂದಿನ ದಿನಗಳ ಹೀಲಿಂಗ್ ಚಿಕಿತ್ಸೆಗಾಗಿ ಕಾಯುತ್ತಾ ನಿರೀಕ್ಷಿಸುತ್ತಿದ್ದೇನೆ. ನನಗೆ ನನ್ನ ಹೀಲಿಂಗ್ ದೇವರಾದ ಶ್ರೀ ನಿತ್ಯಾನಂದ ಸ್ವಾಮೀಜಿ ಯವರು ಪೂರ್ಣವಾಗಿ ಗುಣಪಡಿಸುವರೆಂಬ ನಂಬಿಕೆ ಇದೆ.
ಇತೀ ಡಾ|| ರವೀಂದ್ರ
ಪ್ರಮಾಣ ಪತ್ರ -5
ಡಾ|| ಎಸ್.ವಿ. ಸಂಪತ್ ಕುಮಾರ್
ಸ್ಕಿನ್ ಮತ್ತು ವಿ.ಡಿ. ಸ್ಪೆಷಲಿಸ್ಟ್ ಮತ್ತು
ಜನರಲ್ ಪ್ರಾಕ್ಟೀಷನರ್
ಆರ್.ಇ.ಜಿ.ಡಿ. ನಂ.7245
ನಂ.1521, 8ನೇ ಮೈನ್, 5ನೇ ಕ್ರಾಸ್
5ನೇ ಹಂತ, 1ನೇ ಫೇಸ್,
ಬಿ.ಇ.ಎಂ.ಎಲ್. ರಸ್ತೆ
ರಾಜೇಶ್ವರಿನಗರ, ಬೆಂಗಳೂರು - 39.
ದೂರವಾಣಿ : 8604050
ಶ್ರೀ ಸ್ವಾಮಿ ನಿತ್ಯಾನಂದಜಿ
ಶ್ರೀ ರಾಮಕೃಷ್ಣ ಧ್ಯಾನ ಪೀಠಂ
ಅಗ್ರಹಾರಂ
ಪಲ್ಲಪಾಳಯಂ - ಈರೋಡ್
ಸರ್,
ನಾನು ಓಂಕಾರಾಶ್ರಮಕ್ಕೆ ಬಂದು ಶ್ರೀ ಶಿವಪುರಿ ಸ್ವಾಮಿಗಳ ಮುಖಾಂತರ ನಿಮ್ಮನ್ನು ಭೇಟಿಯಾದೆ. ನಾನು ಬಂದಾಗ ನನ್ನ ಶರೀರ ಪೂರ್ತಿ ಅಲ್ಲಲ್ಲಿ ವ್ಯಾಪಿಸಿರುವ ಲಿಪೋಮಸ್ ಅಂದರೆ ಅತಿ ಕೊಬ್ಬಿನಿಂದ ಚಿಕ್ಕ ಚಿಕ್ಕ ಊತಗಳು ವ್ಯಾಪಿಸಿರುವುದರ ಬಗ್ಗೆ ಮತ್ತು ನನ್ನ ಎರಡೂ ಕಾಲುಗಳ ಎನ್ಲಾರ್ಜ್ಮೆಂಟ್ ಆಫ್ ವೈಯಿನ್ಸ್ ಆಗಿರುವ ಬಗ್ಗೆ ನಿವೇದನೆ ಮಾಡಿದ್ದೆ.
ನೀವು ವಿಭೂತಿಯನ್ನು ಕೊಟ್ಟು ಪೇಸ್ಟ್ ರೀತಿಯಲ್ಲಿ ಮಾಡಿ ಆ ಊತಗಳ ಮೇಲೆ ಮತ್ತು ಎನ್ಲಾರ್ಜ್ಡ್ ವೆಹಿಯನ್ಸ್ ಮೇಲೆ ಮಲಗುವ ಮೊದಲು ಹಚ್ಚುವಂತೆ ಹೇಳಿದಿರಿ. ನಾನು ಮತ್ತೆ ನಿಮ್ಮನ್ನು ಕಾಣಲು ಏಪ್ರಿಲ್ 2ನೇ ವಾರದಲ್ಲಿ ಬಂದಿದ್ದೆ. ಇದಾದ ಮೂರು ದಿನಗಳ ಹೀಲಿಂಗ್ ಚಿಕಿತ್ಸೆಯ ನಂತರ ನನ್ನ ಕೊಬ್ಬಿನಿಂದಾದ ಊತ ಮತ್ತು ವೆಹಿಯನ್ಸ್ ಎನ್ಲಾರ್ಜ್ಮೆಂಟ್ ಕಡಿಮೆಯಾಗಿದೆ. ನಾನು ನಿಮಗೆ ಚಿರಋಣಿ. ಭಗವಂತ ನಿಮಗೆ ಸಹಸ್ರಾರು ವ್ಯಾಧಿಗಳನ್ನು ನೋವುಗಳನ್ನು ನಿವಾರಣೆ ಮಾಡುವ ಶಕ್ತಿ ಪ್ರಸಾದಿಸಲಿ.
ಧನ್ಯವಾದಗಳೊಂದಿಗೆ,
ನಿಮ್ಮ ಒಬೀಡಿಯೆಂಟ್ ಪೇಶೆಂಟ್ ಸಂಪತ್ಕುಮಾರ್
ಪ್ರಮಾಣ ಪತ್ರ - 6
ಶ್ರೀ ಪುನೀತವತಿ ತಂಗವೇಲ್
ಮಾಲೀಕರು, ಹೋಟೆಲ್ ನ್ಯಾಷನಲ್
94, ಗ್ರೀನ್ವೇಸ್ ರೋಡ್, ಸೆಂಥಿಲ್ ಇಲ್ಲಂ
ಫೇರ್ ಲ್ಯಾಂಡ್ಸ್, ಸೇಲಂ - 636 016.
ನಾನು ಸೇಲಂನಲ್ಲಿ ವಾಸಿಸುತ್ತಿದ್ದೇನೆ. ನನ್ನ ವಯಸ್ಸು 67. ನಾನು ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುತ್ತೇನೆ. ಮತ್ತೊಂದು ಬಾರಿ ಹರ್ನಿಯಾ ಖಾಯಿಲೆ ಪ್ರಾರಂಭವಾಗಲು ಬಹಳ ತೊಂದರೆಗೆ ಒಳಗಾದೆ. ತಕ್ಷಣವೇ ಡಾಕ್ಟರು ನಾಲ್ಕನೇ ಬಾರಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಿಲ್ಲವೆಂದು ಹೇಳಿದರು. ಈಗಾಗಲೇ ನನಗೆ ಸೋರಿಯಾಸಿಸ್ ಖಾಯಿಲೆ ಇರುವುದರಿಂದ ಶಸ್ತ್ರ ಚಿಕಿತ್ಸೆಯಲ್ಲಿ ಹೊಲಿಗೆ ಬೀಳುವುದು ಕಷ್ಟ ಎಂದು ಹೇಳಿದರು. ಶ್ರೀ ನಿತ್ಯಾನಂದ ಸ್ವಾಮಿಗಳಲ್ಲಿ ನನ್ನ ಈ ಸ್ಥಿತಿಯನ್ನು ನಿವೇದಿಸಿದೆ. ಸ್ವಾಮಿಗಳವರು ತಾನು ನೋಡಿಕೊಳ್ಳುವುದಾಗಿ ಧೈರ್ಯ ವನ್ನಿತ್ತರು. 2002 ಸೆಪ್ಟೆಂಬರ್ ತಿಂಗಳಿನಲ್ಲಿ ಮಣಿಪಾಲ್ ಆಸ್ಪತ್ರೆಗೆ ಹರ್ನಿಯಾ ಚಿಕಿತ್ಸೆಗಾಗಿ ದಾಖಲು ಪಡೆದುಕೊಂಡೆ. ಶಸ್ತ್ರಚಿಕಿತ್ಸೆಯು ಮುಗಿದಾಗ, ತಡೆಯಲಾರದ ನೋವಿನಿಂದ ನರಳಲಾರಂಭಿಸಿದೆ. ಅಲ್ಲಿಗೆ ಬಂದ ಸ್ವಾಮೀಜಿಯವರು ತಕ್ಷಣವೇ ಹೀಲಿಂಗ್ ಚಿಕಿತ್ಸೆಯನ್ನು ಮಾಡಿದರು. ತಕ್ಷಣವೇ ನೋವು ನಿಂತು ಹೋಗಿ ಸಹಜ ಸ್ಥಿತಿಗೆ ಮರಳಿದೆ.
ನಾಲ್ಕು ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಮರಳುವಾಗ ನನಗೆ ನೋವಾಗಲಿ, ಸುಸ್ತಾಗಲಿ ಇರಲಿಲ್ಲ. ನನಗೆ ಚಿಕಿತ್ಸೆಯನ್ನು ಕೊಟ್ಟ ಡಾಕ್ಟರುಗಳು ಆಶ್ಚರ್ಯಪಟ್ಟು ನಿಮ್ಮನ್ನು ಸ್ವಾಮಿಗಳೇ ಕಾಪಾಡಿದರು ಎಂದು ಕೈಯೆತ್ತಿ ನಿತ್ಯಾನಂದ ಸ್ವಾಮಿಗಳಿಗೆ ನಮಸ್ಕರಿಸಿದರು. ನನ್ನ ಸ್ವಂತ ತಾಯಿಗಿಂತ ಹೆಚ್ಚಾಗಿ ಪ್ರೀತಿಯನ್ನು, ಹೀಲಿಂಗ್ ಚಿಕಿತ್ಸೆಯನ್ನು ಕೊಟ್ಟ ಸ್ವಾಮೀಜಿಯವರನ್ನು ಎಷ್ಟು ಜನ್ಮವೆತ್ತರೂ ಮರೆಯುವುದಿಲ್ಲ.
ನನಗೆ ಶಸ್ತ್ರಚಿಕಿತ್ಸೆ ನೀಡಿದ ಜಾಗದಲ್ಲಿ ಹೊಲಿಗೆಗಳು ಸರಿಯಾಗಿ ಬಿದ್ದಿರಲಿಲ್ಲ. ಇದು ಪೂರ್ತಿ ವಾಸಿಯಾಗಲು ಕನಿಷ್ಠ 6 ತಿಂಗಳು ಬೇಕೆಂದು ಡಾಕ್ಟರುಗಳು ಹೇಳಿದರು. ಆದರೆ, ನಿತ್ಯಾನಂದ ಸ್ವಾಮಿಗಳ ಕರುಣೆಯಿಂದ ಹೀಲಿಂಗ್ ಚಿಕಿತ್ಸೆಯಿಂದ ಒಂದು ತಿಂಗಳಲ್ಲಿ ಹೊಲಿಗೆಗಳು ಕೂಡಿಕೊಂಡಿತ್ತು. ಅಲ್ಲಿಂದ ಮುಂದೆ ಈವರೆಗೂ ನಾನು ಆರೋಗ್ಯವಾಗಿ ಸಂತೋಷವಾಗಿ ಕೃತಜ್ಞತೆಯಿಂದ ಅವರನ್ನು ನೆನಸಿ ಬಾಳುತ್ತಿದ್ದೇನೆ. ಸ್ವಾಮಿಗಳ ಸಾನಿಧ್ಯ ದೊರಕಿರುವುದು ನಮ್ಮ ಭಾಗ್ಯ. ಅವರಿಂದ ನನಗೆ ಮರುಜನ್ಮ ವಾಯಿತು. ಅವರ ಪಾದಾರವಿಂದಗಳಲ್ಲಿ ಭಕ್ತಿಪೂರ್ವಕವಾಗಿ ಶರಣಾಗಿದ್ದೇನೆ.
ನಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಅವರ ಕರುಣೆಯಿಂದ ಆರೋಗ್ಯ ಮತ್ತು ಸಂತೋಷದಿಂದ ಕೂಡಿದ್ದೇವೆ.
ಇಂತಿ ಸ್ವಾಮಿಗಳ ಭಕ್ತೆ ಟಿ. ಪುನೀತವತಿ
ಪ್ರಮಾಣ ಪತ್ರ - 7
ಡಾ॥ ಕೆ.ಕೆ. ರಾಜಗೋಪಾಲ್, ಎಂ.ಬಿ.ಬಿ.ಎಸ್., ಡಿ.ಸಿ.ಹೆಚ್., ಮ್ಯಾನೇಜಿಂಗ್ ಡೈರೆಕ್ಟರ್, ಕಮಲಾ ನರ್ಸಿಂಗ್ ಹೋಂ, ಕೆ.ಎಸ್.ಪಿ. ನರ್ಸಿಂಗ್ ಹೋಂ, ಸೇಲಂ - 636 001.
15 ಎಮರ್ಜೆನ್ಸಿ ಬೆಡ್, 10 ವೆಂಟಿಲೇಟರ್ಸ್ ಮತ್ತು ತೀವ್ರ ಚಿಕಿತ್ಸಾ ಘಟಕ, 100 ಹಾಸಿಗೆ ಉಳ್ಳ ಜನರಲ್ ವಾರ್ಡ್ ಇರುವಂತಹ ಒಂದು ಆಸ್ಪತ್ರೆಯನ್ನು ನಡೆಸುತ್ತಾ ಇದ್ದೇನೆ. ಜ್ಞಾನವಿಲ್ಲದೆ ಇರುವ ತೀವ್ರವಾದ ರೋಗಗಳಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಇಟ್ಟು ನೋಡಿಕೊಳ್ಳುತ್ತಿದ್ದೇನೆ.
ನನ್ನ ಮಗನಾದ ಮದನ್ಕುಮಾರ್ಗೆ ವಯಸ್ಸು 27, ಮದುವೆಯಾಗಿ ಒಂದು ವರ್ಷವಾಯಿತು. ದುರಾದೃಷ್ಟದಿಂದ ಬ್ರೈನ್ ಟ್ಯೂಮರ್ ಖಾಯಿಲೆಯಿಂದ ನರಳುತ್ತಿದ್ದಾಗ, ಚೆನ್ನೈ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ 105 ದಿನ ಚಿಕಿತ್ಸೆ ಪಡೆದನು. ಒಂದು ದಿನದ ಆಸ್ಪತ್ರೆಯ ಖರ್ಚು 30,000-00 ರೂಪಾಯಿಗಳು. ಮೇಲ್ಕಂಡ ಆಸ್ಪತ್ರೆಯಲ್ಲಿ ನನ್ನ ಮಗನ ಉಸಿರನ್ನು ಮಾತ್ರ ಕಾಪಾಡಿದರು. ಈ ಆಸ್ಪತ್ರೆಯನ್ನು ಬಿಟ್ಟು ಬರುವಾಗ, ಕಣ್ಣುಗಳನ್ನು ತೆರೆದುಕೊಂಡು ಏನೂ ದಿಕ್ಕುತೋಚದ ಸ್ಥಿತಿಯಲ್ಲಿ ಬಂದೆವು. ರೂಪಾಯಿ 50 ಲಕ್ಷಗಳಷ್ಟು ಔಷಧಿಗಳನ್ನು ಪ್ರಯೋಗ ಮಾಡಿಕೊಟ್ಟರೂ ಸಹ ಸ್ವಲ್ಪಮಟ್ಟಿಗೆ ಆರೋಗ್ಯ ಸುಧಾರಿಸಿತು. ಈ ಔಷಧಿಗಳು ಅಮೆರಿಕಾದಿಂದ ತರಿಸಲಾಯಿತು. ಇಂಥ ಸ್ಥಿತಿಯಲ್ಲಿ ನನಗೆ ನನ್ನ ಡಾಕ್ಟರ್ ಉದ್ಯೋಗವನ್ನು ಗಮನಿಸಲಾಗಲಿಲ್ಲ. ಈ ಸಮಯದಲ್ಲಿ ನಾನು ಶ್ರೀ ಪರಮಹಂಸ ನಿತ್ಯಾನಂದ ಸ್ವಾಮಿಗಳವರನ್ನು ಭೇಟಿಯಾದೆ. ಅವರು ಬೆಂಗಳೂರಿನ ಆಶ್ರಮದ ಹತ್ತಿರದ ಆಸ್ಪತ್ರೆಯಲ್ಲಿ ಮಗನನ್ನು ಸೇರಿಸಲು ಹೇಳಿದರು. ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಮಗನನ್ನು ಸೇರಿಸಲಾಯಿತು. ನಂತರ ಒಂದು ತಿಂಗಳವರೆಗೂ ಸ್ವಾಮಿಗಳ ಆಶ್ರಮದಲ್ಲಿ ಜ್ಞಾನ ಚಿಕಿತ್ಸೆಯನ್ನು ನನ್ನ ಮಗನಿಗೆ ಕೊಡಲಾಯಿತು. ಪ್ರಸ್ತುತ ನನ್ನ ಮಗನು ಒಳ್ಳೆಯ ಆರೋಗ್ಯವನ್ನು ಪಡೆದಿದ್ದಾನೆ. ತಾನೇ ಊಟ ಮಾಡುತ್ತಾನೆ. ಚದುರಂಗ ಆಡವಾಡುತ್ತಾನೆ. 45 ನಿಮಿಷಗಳ ಮಾತನಾಡುತ್ತಾನೆ. ಇನ್ನೆರಡು ಮೂರು ತಿಂಗಳುಗಳಲ್ಲಿ ಪೂರ್ತಿ ಆರೋಗ್ಯವನ್ನು ಪಡೆದುಕೊಳ್ಳುತ್ತಾನೆ. ನನ್ನ ಕುಟುಂಬದ ಸದಸ್ಯರೆಲ್ಲರೂ ಸ್ವಾಮಿಗಳಿಗೆ ಋಣಪಟ್ಟಿರುತ್ತೇವೆಂದು ತಿಳಿಸಲು ಇಚ್ಛಿಸುತ್ತೇನೆ.
ಇಂತಿ ಡಾ|| ಕೆ.ಕೆ. ರಾಜಗೋಪಾಲ್
ಪ್ರಮಾಣ ಪತ್ರ - 8
ಟಿ.ಟಿ. ಧನಶೇಖರ್ ಮ್ಯಾನೇಜಿಂಗ್ ಡೈರೆಕ್ಟರ್, ಕುಟ್ಟಿ ಗ್ರೂಪ್ ಆಫ್ ಕಂಪನೀಸ್, ತಿರುಚೆಂಗಾಡು,
ನಾನು 12 ವರುಷಗಳಿಂದ ಕಾಮಾಲೆ ರೋಗದಿಂದ ನರಳುತ್ತಿದ್ದೆ. ಸರಿಯಾಗಿ ಹಸಿವೆಯಾಗುತ್ತಿರಲಿಲ್ಲ ಮತ್ತು ಜೀರ್ಣವೂ ಆಗುತ್ತಿರಲಿಲ್ಲ. ಇದಕ್ಕಾಗಿ ಚೆನ್ನೈನಲ್ಲಿ ಇರುವ ಜಗತ್ಪ್ರಸಿದ್ಧ ಆಸ್ಪತ್ರೆಯಲ್ಲಿಯೂ, ಡೆಲ್ಲಿಯಲ್ಲಿರುವ ಹೋಮಿಯೋಪಥಿ ಮತ್ತು ಆಯುರ್ವೇದಿಕ್ ವೈದ್ಯರುಗಳಿಂದ ಚಿಕಿತ್ಸೆ ಪಡೆದರೂ ಲಕ್ಷಾಂತರ ರೂಪಾಯಿಗಳು ಖರ್ಚಾಯಿತೇ ವಿನಹಾ ರೋಗ ಗುಣವಾಗಲಿಲ್ಲ. ಬಲವಿಲ್ಲದೆ ನಿಶಕ್ತನಾದೆ. ತುಂಬಾ ದಿನಗಳ ನಂತರ ವಿಪರೀತ ಔಷಧಿ ಸೇವನೆಯಿಂದ ಹುಣ್ಣಾಗಿ ಅದರಿಂದ ಕ್ಯಾನ್ಸರ್ಗೆ ತಿರುಗಿತು. ತಡೆಯಲಾಗದಷ್ಟು ನೋವುಂಟಾಗಿ, ಊಟ ಸೇರದೆ, ನಿದ್ದೆಮಾಡಲಾಗದೆ ತುಂಬಾ ಆತಂಕ ಮತ್ತು ಬೇಸರ ಉಂಟಾಯಿತು.
ಎಲ್ಲಾ ವೈದ್ಯರುಗಳು ನನ್ನ ಕೈಬಿಟ್ಟರು. ನಂತರ 2 ವರ್ಷ 4 ತಿಂಗಳದ ಮೇಲೆ ಜನವರಿ 2001 ರಂದು ಪರಮಹಂಸ ನಿತ್ಯಾನಂದ ಸ್ವಾಮಿಗಳನ್ನು ಸಂಧಿಸುವ ಅವಕಾಶ ದೊರಕಿತು. ಮೊದಲನೆ ಸಾರಿ ನನ್ನ ನೋಡಿದಾಗ, ಅವರು ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ ನಿನ್ನಲ್ಲಿರುವ ಕೊರತೆಯನ್ನು ನಿವಾರಿಸಿಬಿಟ್ಟಿದ್ದೇನೆ. ಇನ್ನು ಮುಂದೆ ಎಲ್ಲರ ತರಹ ಊಟ ಮಾಡಿ, ಆರೋಗ್ಯವಂತನಾಗಿರು ಎಂದು ಹೇಳಿದರು. ಅಂದಿನಿಂದ ನಾನು ಸುಖವಾದ ಮತ್ತು ನೆಮ್ಮದಿಯಾದ ಜೀವನವನ್ನು ಸಾಗಿಸಿದೆನು. ಮನಸ್ಸಿನಲ್ಲಿ ಹೇಳಲರಿಯದ ಆನಂದವನ್ನು ಅನುಭವಿಸಿದೆ. ನನ್ನ ಪುನರ್ಜನ್ಮ ಆಯಿತು. ಅಂದಿನಿಂದ ಮಾಡುವ ಊಟ ಜೀರ್ಣವಾಗಿ ಆರೋಗ್ಯ ವೃದ್ದಿಯಾಯಿತು. ಮನಸ್ಸಿಗೂ ಸಹ ತೃಪ್ತಿಯಾಯಿತು. ಸ್ವಾಮಿಗಳು ಕೊಟ್ಟ ಜ್ಞಾನದಿಂದ ಪೂರ್ಣವಾದ ಸಂತೃಪ್ತಿಯನ್ನು ಪಡೆದೆ. ಅವರಿಂದ ಅಳೆಯಲಾಗದ ಪ್ರೀತಿ, ವಾತ್ಸಲ್ಯ ಮತ್ತು ನೆಮ್ಮದಿಯ ನೆಲೆಯನ್ನು ಕಂಡೆ. ಸಾಧಾರಣವಾಗಿ ಎಲ್ಲ ಜನರಲ್ಲಿ ಇರುವಂತಹ ರಾಗ-ದ್ವೇಷಗಳು , ಕಾಮ-ಕ್ರೋಧಗಳು ನನ್ನಲ್ಲಿ ಇಲ್ಲದೆ ನನ್ನ ಜೀವನದಲ್ಲಿ ಶಾಂತಿ ನೆಲೆಸಿದೆ. ಯಾವ ಒಬ್ಬ ಸಾಧಕನಿಗೂ ಸಿಕ್ಕದ ನೆಮ್ಮದಿ, ತೃಪ್ತಿ, ಆನಂದ, ಶಾಂತಿ ನನಗೆ ಸ್ವಾಮಿಗಳ ಕರುಣೆಯಿಂದ ಸಿಕ್ಕಿರುವುದು ಒಂದು ದೈವ ಕೃಪೆ. ಅವರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.
ಇಂತಿ ಸ್ವಾಮಿಯ ಭಕ್ತ ಧನಶೇಖರ್
ಪ್ರಮಾಣ ಪತ್ರ - 9
ಅನ್ಬಳಗನ್ ದೂರವಾಣಿ : 0427-2400840 ಟಿ.ಎನ್.ಹೆಚ್.ಪಿ. (ಟಿ.ಬಿ.), ಮನೆ : 98427-91967 ಐ.ಎನ್. ತಿರುಮಂಗಲಂ ಪೋಸ್ಟ್ ಆಫೀಸ್, ಸೇಲಂ - 636 008.
ನಾನು ಔಷಧಗಳನ್ನು ವಿತರಿಸುವ ಪ್ರತಿನಿಧಿ. 2002 ನವೆಂಬರ್ ತಿಂಗಳಲ್ಲಿ ಒಂದು ದಿನ ಬೆಳಿಗ್ಗೆ ಜ್ಞಾನವಿಲ್ಲದೆ ಮಲಗಿದ್ದ ಸಮಯದಲ್ಲಿ ನನ್ನನ್ನು ಸೇಲಂನ ಗೋಕುಲಂನಲ್ಲಿರುವ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ವೈದ್ಯರುಗಳು ಪರಿಶೀಲಿಸಿ ರಕ್ತನಾಳದಲ್ಲಿ ಒಂದು ಬಿರುಕು ಉಂಟಾಗಿ ಅಲ್ಲಿಂದ ರಕ್ತವು ಹೊರಕ್ಕೆ ಹರಿಯುತ್ತಿದೆ ಎಂದು ನನ್ನ ಹೆಂಡತಿಗೆ ತಿಳಿಸಿದರು. ನನ್ನ ಹೆಂಡತಿ ತಕ್ಷಣವೇ ನಾವು ಪೂಜಿಸುವ ಶ್ರೀ ನಿತ್ಯಾನಂದಸ್ವಾಮಿಗಳಿಗೆ ಈ ವಿಷಯವನ್ನು ತಿಳಿಸಿದಳು. ಬೆಂಗಳೂರಿನಲ್ಲಿರುವ
ಸ್ವಾಮಿಗಳು ದೂರವಾಣಿಯ ಮೂಲಕ ವಿಷಯವನ್ನು ತಿಳಿದು ನನ್ನ ಹೆಂಡತಿಗೆ ಸಮಾಧಾನವನ್ನು ಮಾಡಿ ವೈದ್ಯರು ಏನೂ ಮಾಡುತ್ತಾರೋ ಅದನ್ನು ಮಾಡಲಿ, ಅಣ್ಣಳಗನ್ ನನ್ನು ನಾನು ಗಮನಿಸುತ್ತೇನೆ, ಚಿಂತೆ ಬೇಡ ಎಂದು ಹೇಳಿದರು. ನನ್ನನ್ನು ಆ ದಿನವೇ ಸೇಲಂನಿಂದ ಚೆನ್ನೈನಲ್ಲಿರುವ ಶ್ರೀರಾಮಚಂದ್ರ ಮಲ್ಟಿ ಸ್ಪೆಷಾಲಿಟೀಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ವೈದ್ಯರು ನಾನು ಐದನೆಯ ಹಂತ ಕೋಮಾ ಸ್ಥಿತಿಯಲ್ಲಿ ಇರುವುದರಿಂದ ಬದುಕುವುದು ಕಷ್ಟವೆಂದು ಹೇಳಿದರು. ವಿಮಾನದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಗಳು ಆಸ್ಪತ್ರೆಗೆ ಬಂದು ನನಗೆ ತಮ್ಮ ಆಶೀರ್ವಾದವನ್ನು ಮತ್ತು ಹೀಲಿಂಗ್ನ್ನು ಕೊಟ್ಟರು.
ಇದಾದನಂತರ, 12 ಗಂಟೆಗಳಲ್ಲಿ ವೈದ್ಯರುಗಳು ಆಶ್ಚರ್ಯಪಡುವಂತಹ ರೀತಿಯಲ್ಲಿ ನನ್ನ ದೇಹದ ಪರಿಸ್ಥಿತಿಯು ಮಹತ್ತರವಾದ ಬದಲಾವಣೆ ಹೊಂದಿತು. ಮುಂದೆ ವೈದ್ಯರುಗಳು ತೆರೆದ ಹೃದಯ ಚಿಕಿತ್ಸೆಯ ಮೂಲಕ ರಕ್ತಸೋರುವಿಕೆಯನ್ನು ತಡೆಗಟ್ಟಿದರು. ಇಂತಹ ಶಸ್ತ್ರಚಿಕಿತ್ಸೆಯಿಂದ ಬದುಕುವುದು ಬಹಳ ಕಷ್ಟ ಮತ್ತು ಅಪರೂಪ ಎಂದು ವೈದ್ಯರುಗಳು ತಿಳಿಸಿದರು. ಸ್ವಾಮೀಜಿಗಳು ಮುಂದೆ 10 ದಿನದವರೆಗೂ ವಿಮಾನದಲ್ಲಿ ಆಸ್ಪತ್ರೆಗೆ ಬಂದು ಹೀಲಿಂಗ್ ಚಿಕಿತ್ಸೆಯನ್ನು ಮಾಡಿದರು. ನಂತರ ನಾನು ಗುಣಮುಖನಾಗಿ, ಆರೋಗ್ಯವಂತನಾಗಿ ಇದ್ದೇನೆ. ಇದು ನನಗೆ ಮರುಜನ್ಮ. ಮುಂದುವರಿದ ವೈಜ್ಞಾನಿಕ ಯುಗದಲ್ಲಿಯೂ ಸಹ ಈ ರೋಗವನ್ನು ನಿವಾರಣೆ ಮಾಡಲು ಸಾಧ್ಯವಿಲ್ಲವೆಂದು ಪರಿಗಣಿಸಿದ್ದರೂ ಸ್ವಾಮಿಗಳ ಕೃಪೆ ಮತ್ತು ಹೀಲಿಂಗ್ ಚಿಕಿತ್ಸೆಯಿಂದ ನಾನು ಆರೋಗ್ಯದಿಂದಿದ್ದೇನೆ. ನಾನು ನನ್ನ ಜೀವನಾದ್ಯಂತ ಸ್ವಾಮಿಗಳಿಗೆ ಚಿರಋಣಿಯಾಗಿರುತ್ತೇನೆ. ನಾನು ಪಡೆದಿರುವ ಆರೋಗ್ಯಕ್ಕೆ ಮತ್ತು ಸಂತೋಷಕ್ಕೆ ಸ್ವಾಮೀಜಿಯವರೇ ಕಾರಣ.
ಇಂತಿ ಸ್ವಾಮಿಗಳ ಭಕ್ತ ಅಣ್ಣಳಗನ್

300 ವರ್ಷಗಳಿಗೂ ಮೇಲ್ಪಟ್ಟು ಪ್ರಾಚೀನಕಾಲದ ಶಕ್ತಿಯಿಂದಿದ್ದ ಆಲದಮರ



ಜನರ ಸಂಕಷ್ಟಗಳನ್ನು, ನೋವುಗಳನ್ನು ನಿವಾರಿಸಲು ಭಗವಂತನೇ ಕಳಿಸಿಕೊಟ್ಟವರು ಶ್ರೀ ನಿತ್ಯಾನಂದ ಸ್ವಾಮೀಜಿ. ನಿತ್ಯಾನಂದ ಸ್ವಾಮಿಗಳು ತಮ್ಮನ್ನು ನಿಸ್ವಾರ್ಥ ಸೇವೆಯಲ್ಲಿ ತೊಡಗಿದುದರಿಂದ, ಈ ‘ಧ್ಯಾನಪೀಠ’ ದಿನೇ ದಿನೇ ಅಭಿವೃದ್ಧಿಯಾಗಬೇಕು. ಇದರಿಂದ ಬಹಳಷ್ಟು ಜನರಿಗೆ ಧಾರ್ಮಿಕ ಸಂದೇಶಗಳು, ವಿಧಿವಿಧಾನಗಳು ತಲುಪಬೇಕು. ಸೂರ್ಯಚಂದ್ರರಿರುವವರೆಗೂ ಇದು ಆಧ್ಯಾತ್ಮಿಕ ಕೇಂದ್ರವಾಗೇ ಇರುತ್ತೆ.
– ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ
“ಶ್ರೀಗಂಧದ ತಂಪು ಮತ್ತು ಮಲ್ಲಿಗೆಯ ಕಂಪಿನಂತೆ ‘ಧ್ಯಾನಪೀಠ’ ದ ಕೀರ್ತಿಯು ನಾಡಿನಾದ್ಯಂತ, ವಿಶ್ವದಾದ್ಯಂತ ಪಸರಿಸಲಿ. ದೇಶ-ವಿದೇಶಗಳಿಂದ ಬರುವವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ದೈಹಿಕ, ಮಾನಸಿಕ ವ್ಯಾಧಿ ಪರಿಹಾರಕ್ಕಾಗಿ ಈ ‘ಧ್ಯಾನಪೀಠ ಕೇಂದ್ರವಾಗಲಿ’.
– ಶ್ರೀ ಶ್ರೀ ಶ್ರೀ ಶಿವಪುರಿಸ್ವಾಮೀಜಿ ಓಂಕಾರಾಶ್ರಮ ಮಹಾಸಂಸ್ಥಾನ
Ebook ISBN: 979-8-88572-466-1
Dhyanapeetam (Dhyana Peeta Charitable Trust)
Ashram: Nithyanandapuri, Kallagopanahalli, Mysore Road, Bidadi - 562 109, Bangalore District
Phone: 7270 181, 56691 844. Secretary: 37803 444. PRO Mobile: 56703 444 Url: www.dhyanapeetam.org Email: [email protected] www.swamisworld.com