KAILASA Library/ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು/ಪರಿಚ್ಛೇದ-4 : ಜ್ಞಾನೋದಯ (ಸಾಕ್ಷಾತ್ಕಾರ)Sign in
ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು

ಪರಿಚ್ಛೇದ-4 : ಜ್ಞಾನೋದಯ (ಸಾಕ್ಷಾತ್ಕಾರ)

This text was machine-transcribed from the printed book and may contain errors. Select the words and choose “Report a mistake”.

ಮಹಾವತಾರ ಬಾಬಾಜಿಯವರೊಡನೆ ಒಡನಾಟ

ಜೀವನವೇ ಒಂದು ಬಿಡಿಸಲಾಗದ ಒಂದು ಒಗಟು ರಹಸ್ಯ. ಈ ಜೀವನದಲ್ಲಿ ನಮ್ಮನ್ನು ನಾವು ಮರೆತು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಆಟಪಾಠಗಳಲ್ಲಿ ಮಗ್ನ ರಾದಾಗ, ಆಕಸ್ಮಿಕವಾಗಿ ಜೀವನದ ನೆಲೆಯಾದ ಪರಮ ಸತ್ಯದ ಪರಾಕಾಷ್ಠೆಗೆ ಮುಖಾ ಮುಖಿ ಕೊಂಡೊಯ್ಯುತ್ತದೆ. ಒಂದು ಮಹಾಸುದಿನ ಬಾಲಸ್ವಾಮಿಯು ಹಿಮಾಲಯದ ಲ್ಲಿರುವ ಗಂಗೋತ್ರಿಯಿಂದ ದೂರದಲ್ಲಿರುವ ಪವಿತ್ರವಾದ ತಪೋವನದಲ್ಲಿ ಧ್ಯಾನಮಾ ಡುತ್ತಿರುವಾಗ ಒಂದು ಸುಂದರ ದೃಶ್ಯವನ್ನು ಕಂಡರು. ಒಬ್ಬ ಯುವಕ ಇಳಿಬಿದ್ದ ಸುಂದರವಾದ ಕೇಶರಾಶಿಗಳಿಂದ ಅಲಂಕೃತನಾಗಿದ್ದು ಯೌವ್ವನದಲ್ಲಿ ತುಳುಕುತ್ತಾ ಅಪಾರ ಕೃಪಾದೃಷ್ಟಿಯನ್ನು ಹರಿಸುತ್ತಾ ದಾಪುಗಾಲು ಹಾಕುತ್ತಾ ಬಾಲಸ್ವಾಮಿಯೆಡೆಗೆ ಬಂದ. ಆ ಯುವಕನ ಸೌಂದರ್ಯ, ಗಾಂಭೀರ್ಯ ಮತ್ತು ಮುಖದಲ್ಲಿ ತುಂಬಿ ತುಳುಕುತ್ತಿದ್ದ ತೇಜಸ್ಸು ಅವರು ಪರಮಪೂಜ್ಯ ಮಹಾವತಾರ ಬಾಬಾಜಿಯೇ ಆಗಿರಬೇಕೆಂದು ಬಾಲಸ್ವಾಮಿ ದೃಢ ವಾಗಿ ನಿಶ್ಚಯಿಸಿದ. ಈ ಮಹಾವತಾರ ಬಾಬಾಜೀಯೆ ಮುಪ್ಪನ್ನು ಮೃತ್ಯುವನ್ನು ಗೆದ್ದು ಚಿರಯೌವ್ವನದಲ್ಲಿದ್ದುಕೊಂಡು ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಇಂದಿಗೂ ರಾರಾಜಿಸುತ್ತಿದ್ದಾರೆ. ಬಾಬಾಜಿಯವರು ಬಾಲಸ್ವಾಮಿಯನ್ನು ಹಾದು ಹೋದ ಗಳಿಗೆ ಯಲ್ಲಿ ಸ್ವಾಮಿಯ ಕಣ್ಣುಗಳನ್ನು ದೃಷ್ಟಿಸುತ್ತಾ ಪರಮಹಂಸ ಶ್ರೀ ನಿತ್ಯಾನಂದ ಎಂದು ಉದ್ಘೋಷಿಸಿದರು. ಆಶ್ಚರ್ಯಚಕಿತನಾದ ಬಾಲಸ್ವಾಮಿ ಏನೂ ಉತ್ತರಿಸಲಾರದವ ನಾದ. ಆ ದಿನ ಹೃದಯ ಚಿತ್ರದಲ್ಲಿ ಮೂಡಿದ ಬಾಬಾಜಿಯವರ ಆಕರ್ಷಕ ಚಿತ್ರ ಬಹ ಳಷ್ಟು ಕಾಲ ಅಚ್ಚಳಿಯದೆ ಉಳಿಯಿತು. ಸದ್ಯದಲ್ಲಿ ಈ ನಾಮಧೇಯ ಬಾಲಸ್ವಾಮಿಯಿಂದ ಮರೆಯಾಗಿದ್ದರೂ, ಮುಂದೆ ವಿಧಿವತ್ತಾಗಿ ಸನ್ಯಾಸ ಸ್ವೀಕರಿಸಿದ ಮೇಲೆ ತಮ್ಮ ಗುರು ಗಳಿಂದ ಅದೇ ನಾಮಧೇಯವನ್ನು ನೀಡಲಾಯಿತು. ಆ ಕ್ಷಣದಲ್ಲಿ ಅಗೋಚರನಾಗಿದ್ದು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಮಹಾವತಾರ ಬಾಬಾಜಿಯವರನ್ನು ಬಾಲಸ್ವಾಮಿ ತುಂಬು ಕೃತಜ್ಞತೆಯಿಂದ ಸ್ಮರಿಸಿದರು.

ಓಂಕಾರೇಶ್ವರ ಕಾಡಿನಲ್ಲಿ

ಸ್ವಾಮಿಯ ಪರ್ಯಟನೆ ಕೊನೆಗೆ ಅವರನ್ನು ಮಧ್ಯಪ್ರದೇಶದ ಓಂಕಾರೇಶ್ವರ ಅರಣ್ಯ ಪ್ರಾಂತಕ್ಕೆ ಕರೆದೊಯ್ಯಿತು. ಗಹನವಾದ ಗೊಂಡಾರಣ್ಯದಲ್ಲಿ ನೂರಾರು ಮೈಲಿಗಳ ಜನ ನಿಬಿಡರಹಿತ ಸ್ಥಳದಲ್ಲಿ ಏಕಾಂತವಾಗಿ ಮೌನವಾಗಿ ಸ್ವಾಮಿಯ ಸಾಧನೆ ಮುಂದುವರೆಯಿತು. ವಾರಕ್ಕೆ ಒಂದಾವರ್ತಿ 30 ಕಿಲೋಮೀಟರುಗಳ ಗುಡ್ಡಗಾಡುಗಳನ್ನು ಅತಿಕ್ರಮಿಸಿ ಸಮೀ ಪಿಸುವ ಹಳ್ಳಿಯೊಂದರಲ್ಲಿ ಭಿಕ್ಷಾಟನೆ ಮಾಡಿ ಎರಡು ಅಥವಾ ಮೂರು ರೊಟ್ಟಿಗಳನ್ನು ಸಂಪಾದಿಸಿ ದೇಹಧಾರಣೆಗಾಗಿ ಒಂದು ವಾರದವರೆಗೂ ಉಪಯೋಗಿಸುತ್ತಿದ್ದರು. ಸ್ವಾಮಿಗೆ ಪಕ್ಕದಲ್ಲಿದ್ದ ಗುಡ್ಡದ ಮೇಲಿನ ಒಂದು ಅಚ್ಚುಮೆಚ್ಚಿನ ಸುಂದರ ಬಂಡೆ ಧ್ಯಾನಕ್ಕೆ ಆಸನವಾ ಗಿತ್ತು. ಒಂದು ದಿನ ಸಂಜೆ ಆ ಬಂಡೆಯ ಮೇಲೆ ಕುಳಿತಿದ್ದಾಗ, ಯಾರೋ ಪಕ್ಕದ ಮರಗ ಳಿಂದ ಸರಸರನೆ ತನ್ನೊಡನೆ ದೂರದಿಂದ ಬರುತ್ತಿರುವಂತೆ ಭಾಸವಾಯಿತು. ಜನನಿಬಿಡರ ಹಿತವಾದ ಈ ಕಾಡಿನಲ್ಲಿ ತನ್ನೆಡೆಗೆ ಬರುತ್ತಿರುವವರನ್ನು ಭೇಟಿ ಮಾಡಲು ಬಂಡೆಯಿಂದ ಜಿಗಿದು ಅರ್ಧದಾರಿ ಕ್ರಮಿಸುತ್ತಿರುವಾಗ ಕಂಡದ್ದು ಮನುಷ್ಯರ ಬದಲಿಗೆ ಒಂದು ಭಾರಿ ಕರಡಿ ಸಮೀಪಿಸುತ್ತಿದ್ದದ್ದು. ಹಿಂತಿರುಗಿ ಓಡಲು ಸಮಯವಿಲ್ಲ. ಏಕೆಂದರೆ ಕರಡಿಯು ಆಗಲೇ ಸಮೀಪಿಸಿ ಸ್ವಾಮಿಯನ್ನು ದಿಟ್ಟಿಸಿ ನೋಡುತ್ತಿತ್ತು. ದೇವರ ಸ್ಮರಣೆ ಮಾಡುತ್ತಾ ಅವನ ಕೃಪೆಗಾಗಿ ಪ್ರಾರ್ಥಿಸುತ್ತಾ ಸ್ವಾಮಿ ಅಲ್ಲೇ ಭಯದಿಂದ ನಿಶ್ವೇಷ್ಟಿತರಾಗಿ, ನಿಶ್ಚಲರಾಗಿ ನಿಂತರು. ಈ ಅನಿರೀಕ್ಷಿತ ಕ್ರಿಯೆಯಿಂದ ಅವಕ್ಕಾದ ಕರಡಿಯು ಈ ಬಾಲಸ್ವಾಮಿಯನ್ನು ಸಮೀಪಿಸಿ ಕೆಲಕಾಲ ದೃಷ್ಟಿಸುತ್ತಾ ಮುಂದೆ ಹೊರಟು ಹೋಯಿತು. ಮತ್ತೊಮ್ಮೆ ಈ ಘಟನೆ ಬಾಲಸ್ವಾಮಿಗೆ ಕರುಣಾದೃಷ್ಟಿಯೊಂದು ತನ್ನನ್ನು ಘಳಿಗೆ, ಘಳಿಗೆಗೂ ರಕ್ಷಿಸುತ್ತಿರುವುದು ವೇದ್ಯವಾಯಿತು.

ಪಂಚಾಗ್ನಿ ತಪಸ್ಸು

ತಪಸ್ಸುಗಳಲ್ಲೇ ಅತೀ ಕಷ್ಟಸಾಧ್ಯವಾದುದು ಪಂಚಾಗ್ನಿ ತಪಸ್ಸು. ಈ ತರಹದ ತಪಸ್ಸನ್ನು ಧೈರ್ಯವಂತರು ಮಾತ್ರ ಆಚರಿಸುತ್ತಿದ್ದರು. ಸತ್ಯದ ಅನ್ವೇಷಣೆಯಲ್ಲಿ ತೊಡ ಗಿದ ಬಾಲಸ್ವಾಮಿ ದಯಾದಾಕ್ಷಿಣ್ಯವಿಲ್ಲದೆ, ಸಾಧನೆಯಿಂದ ಹಿಂತಿರುಗಿ ನೋಡಲಿಚ್ಛಿ ಸದೇ, ದೇಹವನ್ನು ದಂಡಿಸಲು ತಯಾರಾದರು. ಯಾವಾಗಲೂ ಜಾಗ್ರತಾವಸ್ಥೆಯಲ್ಲಿದ್ದು ತಲೆಯ ಮೇಲೆ ಕೆಂಪಾಗಿದ್ದ ಕೆಂಡಗಳನ್ನು ಒಳಗೊಂಡ ಮಣ್ಣಿನ ಕುಡಿಕೆ ಇರಿಸಿಕೊಂಡು ಸುತ್ತಲೂ ಜ್ವಾಲೆಗಳನ್ನು ಉಗುಳುತ್ತಿರುವ ಬೆಂಕಿಯ ವೃತ್ತದ ಮಧ್ಯೆ ಧ್ಯಾನ ಮಾಡತೊಡ ಗಿದರು.

ನಂಬಿಕಸ್ತರಾದ ತನಗೆ ಒಳ್ಳೆಯದನ್ನು ಬಯಸುವ ಜನರಿಗೆ ಆ ಬೆಂಕಿಯ ವೃತ್ತ ಆ ರದಂತೆ ಎಚ್ಚರವಹಿಸಲು ಒಪ್ಪಿಸಿ, ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಒಂದು ಕ್ಷಣವನ್ನೂ ವ್ಯರ್ಥಮಾಡದೇ ಧ್ಯಾನದಲ್ಲಿರುತ್ತಿದ್ದರು. ಏಕೆ ಈ ರೀತಿ ಉಗ್ರತಪಸ್ಸು ಆಚ ರಿಸುತ್ತೀರೆಂದು ಕೇಳಿದಾಗ ಒಳಗಿನ ಬೆಂಕಿ (ಸಾಕ್ಷಾತ್ಕಾರ) ನನ್ನನ್ನು ಎಡೆಬಿಡದೆ ದಹಿಸುತ್ತಿ ರುವಾಗ ನಾನು ಸಹಿಸಲಾರೆ. ನನ್ನ ಒಂದೇ ಒಂದು ಆಶಾಭಾವನೆಯೆಂದರೆ ಈ ಹೊರ ಗಿನ ಬೆಂಕಿಯಾದರೂ ಕಡೆಗೆ ನನ್ನ ಒಳಗಿನ ಬೆಂಕಿಯನ್ನು ನಂದಿಸುತ್ತದೆಯೆಂದು ನಂಬುಗೆ ಎಂದರು.

ಮೊಟ್ಟಮೊದಲನೆಯ ಪವಾಡ - ಹೀಲಿಂಗ್ ಗುಣಪಡಿಸುವ ಸಾಮರ್ಥ್ಯ

ತಪೋವನದಿಂದ ಹಿಂದಿರುಗುವಾಗ ಬಾಲಸ್ವಾಮಿಯು ಆಕಸ್ಮಿಕವಾಗಿ ಒದಗಿಬಂದ ಒಂದು ಸೈನಿಕರಿದ್ದ ಟ್ರಕ್ಕನ್ನು ಏರಿ ಪರ್ವತವನ್ನು ಇಳಿಯ ತೊಡಗಿದರು. ಆ ಟ್ರಕ್ ದಾರಿ ಯಲ್ಲಿ ಯದ್ವಾತದ್ವಾ ಪಯಣಿಸುತ್ತಿದ್ದಾಗ ಒಂದು ದೊಡ್ಡ ಅಡಚಣೆಯುಂಟಾಯಿತು. ಆಗ ಬಾಲಸ್ವಾಮಿಗೆ ಆಘಾತವಾಗಿ, ಬೆನ್ನು ಹುರಿಯಲ್ಲಿ ಮೂಳೆ ಮುರಿದು, ವಿಪರೀತ ನೋವುಂಟಾಯಿತು. ಆ ಸೈನಿಕರಲ್ಲಿದ್ದ ವೈದ್ಯನೊಬ್ಬ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬಾಲಸ್ವಾಮಿಗೆ ಆರೈಕೆ ಮಾಡಲು ಉದ್ಯುಕ್ತನಾದ. ಆದರೆ ಬಾಲಸ್ವಾಮಿ ಅದಕ್ಕೊಪ್ಪದೆ ತನ್ನ ಹಸ್ತವನ್ನೇ ನೋವಿನಿಂದ ಸಂತ್ರಸ್ತವಾದ ಬೆನ್ನು ಹುರಿಯ ಜಾಗಕ್ಕೆ ಇಟ್ಟನು. ಆ ಸಮಯದಲ್ಲಿ ಬಾಲಸ್ವಾಮಿಗೇ ಅರಿವಿರಲಿಲ್ಲ ತನ್ನಲ್ಲೆಂತಹ ಅದ್ಭುತ ಸಾಮರ್ಥ್ಯವಿದೆ ಯೆಂದು. ಹರಿದ್ವಾರವನ್ನು ಸೇರಿದ ಕೂಡಲೇ ವೈದ್ಯರ ಒತ್ತಾಯದ ಮೇರೆಗೆ ಬಾಲಸ್ವಾ ಮಿಯನ್ನು ರೇಡಿಯೋ ವಿಕಿರಣಗಳಿಗೆ ಒಳಪಡಿಸಲಾಯಿತು. ಫಲಿತಾಂಶ ಬಾಲಸ್ವಾಮಿ ಯನ್ನು ಹೊರತು ಪಡಿಸಿ ಬೇರೆ ಎಲ್ಲರಿಗೂ ಪರಮಾಶ್ಚರ್ಯ ಉಂಟು ಮಾಡಿತು. ಮೂಳೆ ಮುರಿತವಿದ್ದರೂ ಹೇಗೆ ನೋವಿಲ್ಲದೆ ಈ ಬಾಲಸ್ವಾಮಿ ಓಡಾಡುತ್ತಿದ್ದಾನೆ? ಮುಂದಿನ ದಿನಗಳಲ್ಲಿ ಮೂಳೆ ಮುರಿತವೂ ತನ್ನಷ್ಟಕ್ಕೆ ತಾನೇ ಗುಣವಾಯಿತು. ಆಗಲೂ ಬಾಲಸ್ವಾಮಿ ತನ್ನಲ್ಲಿದ್ದು ಮುಂದೆ ಕೋಟ್ಯಾಂತರ ಮಂದಿಗೆ ಸೇವೆಯನ್ನು ಮಾಡುವ ಈ ಗುಣಪಡಿಸುವ ಹೀಲಿಂಗ್‌ ಚಿಕಿತ್ಸೆಯ ಅದ್ಭುತ ಸಾಮರ್ಥ್ಯದ ಬಗ್ಗೆ ಅರಿವಿರಲಿಲ್ಲ.

ಮೃತ್ಯು ಒಂದು ಅನುಭವ

ಬಾಲಸ್ವಾಮಿಯ ಆಧ್ಯಾತ್ಮಿಕ ತೃಷೆ ಅವರ ಆಧ್ಯಾತ್ಮಿಕ ಪಯಣವನ್ನು ಮುಂದೊ ಯ್ಯುತ್ತಾ ಅಂತಿಮ ಘಟ್ಟಕ್ಕೆ ಪವಿತ್ರತಮವಾದ ಕಾಶಿ ಕ್ಷೇತ್ರಕ್ಕೆ ತಲುಪಿಸಿತು. ಒಂದು ಸಂಜೆ ಕಾಶಿಯ ಅತ್ಯಂತ ಪ್ರಮುಖವಾದ ಮಣಿಕರ್ಣಿಕಾಘಾಟ್‌ ಬಳಿ ಧ್ಯಾನ ಮಾಡುತ್ತಿದ್ದರು. ಅವರ ಕಣ್ಣ ಮುಂದೆಯೇ ನೂರಾರು ಹೆಣಗಳನ್ನು ಅಲ್ಲಿ ಸುಡುತ್ತಿದ್ದರು. ಸ್ವಾಮಿಯವರು ಈ ಮೃತ್ಯುವಿನ ಹಿಂದೆ ಅಡಗಿರುವ ನಿಗೂಢ ರಹಸ್ಯವನ್ನು ಭೇದಿಸಿ ಸ್ವತಃ ಮೃತ್ಯುವನ್ನು ತಾನೇ ಅನುಭವಿಸದೇ ಆ ಸ್ಥಳವನ್ನು ಬಿಟ್ಟು ಕದಲಬಾರದೆಂದು ದೃಢ ಸಂಕಲ್ಪ ಮಾಡಿ ದರು. ಎರಡು ಮೂರು ದಿನಗಳಾದರೂ ಅತ್ತಿತ್ತ ಕದಲದೆ ಯಾವುದಕ್ಕೂ ಗಮನಿಸದೆ ಗಹನವಾದ ಮೌನವನ್ನು ಅವಲಂಬಿಸಿ ಅಲ್ಲೇ ಕುಳಿತರು. ಮಾರನೆಯ ದಿನ ತನ್ನ ಶರೀರವೇ ಕರಗುತ್ತಿರುವಂತೆ ಭಾಸವಾಗತೊಡಗಿತು. ಈ ಅನುಭವ ತನ್ನನ್ನು ಪೂರ್ತ ಆಕ್ರ ಮಿಸುವುದಕ್ಕೆ ಅನುವು ಮಾಡಿಕೊಟ್ಟರು. ನಿಧಾನವಾಗಿ ತನ್ನ ಶರೀರ ಪಾದದಿಂದ ಒಂದೊಂದೇ ಭಾಗವು ನಿಷ್ಕ್ರಿಯ ವಾಗುವುದನ್ನು ಮತ್ತು ಮೃತ್ಯುಗೆ ಒಳಗಾಗುವುದನ್ನು ಅನುಭವಿಸ ತೊಡಗಿದರು. ತತ್‌ಕ್ಷಣವೇ ಭಯವು ಅವರನ್ನು ಆವರಿಸಿತು. ಈ ಭಯವು ಇಂದ್ರಿಯಗಳೆಲ್ಲಾ ಸ್ಫೋಟಗೊಳ್ಳುವಷ್ಟರ ಮಟ್ಟಿಗೆ ಆವರಿಸಿ ಪರಾಕಾಷ್ಠೆಗೆ ಮುಟ್ಟಿತು. ತನ್ನ ಅಸ್ತಿತ್ವವೇ ಇಲ್ಲವಾಯಿತು ಈ ಭಯದ ಮುಂದೆ, ತಾನು ಎದುರಿಸಿ ಹೋರಾಡಲಾ ರೆನೆಂದೆನಿಸಿದಾಗ, ಭಯವು ಸ್ವಾಮಿಯನ್ನು ತಕ್ಷಣವೇ ಮಿಂಚಿನೋಪಾದಿಯಲ್ಲಿ ಸ್ಫೋಟ ಸುತ್ತಾ ಬಿಟ್ಟು ನಿರ್ಗಮಿಸಿತು.

ಈ ನಿರ್ಮಲವಾದ ತಿಳಿಯಾದ ಅನುಭವದ ಸ್ಥಿತಿಯಲ್ಲಿ ವಿಶದವಾದುದೇನೆಂದರೆ, ಇಂದ್ರಿಯಗಳೊಡಗೂಡಿದ ದೇಹದ ಸರ್ವನಾಶ ಮತ್ತು ದೇಹಾPassageತೀತಾನುಭವ. ಆ ದಿನ ಸ್ವಾಮಿಯವರ ಜೀವನದಲ್ಲಿ ಚಿರಸ್ಮರಣೀಯವಾದ ದಿನ ಮೃತ್ಯುವಿನೊಡನೆ ಹೋರಾಡಿ ಮೃತ್ಯುಂಜಯರಾದ ದಿನ.

ಜ್ಞಾನೋದಯದ ಗಳಿಗೆ

ಸ್ವಾಮಿಯ ಜೀವನದಲ್ಲಿ ಮೃತ್ಯು ಭಯವನ್ನು ಜಯಿಸಿದ್ದು ಒಂದು ಮೈಲಿಗಲ್ಲು ಮಾತ್ರ. ಅವರಿಗೆ ಜನ್ಮದ ಪರಿಪೂರ್ಣತೆಯಾದ ಆತ್ಮಸಾಕ್ಷಾತ್ಕಾರವಲ್ಲದೆ ಬೇರೇನೂ ಬೇಕಿಲ್ಲ. ಅದಕ್ಕಾಗಿ ತನ್ನ ಮುಂದಿನ ಜೀವನವನ್ನು ಅತೀ ಕಠಿಣ ತಪಸ್ಸಿಗೆ ಒಳಪಡಿಸಿದರು. ಅದಕ್ಕಾಗಿ ಶರೀರವನ್ನು, ಮನಸ್ಸನ್ನು ಮತ್ತು ಆತ್ಮವನ್ನು ನಿಯಂತ್ರಿಸಲು ಶಮ, ಧಮ, ಉಪ ರತಿ, ತಿತಿಕ್ಷಾ, ಮೌನ, ಪ್ರತ್ಯಾಹಾರ, ಆಸನ, ಪ್ರಾಣಾಯಾಮ, ನಿಯತಕಾಲಿಕ ಧ್ಯಾನ ಮುಂತಾದವುಗಳಿಂದ ದಂಡಿಸಿದರು. ಇದರಿಂದ ಅವರು ಮನಸ್ಸು ಮತ್ತು ಶರೀರ ನಿಗ್ರಹಿಸಲ್ಪಟ್ಟಿತು.

ತನ್ನ ಶರೀರ ಮತ್ತು ಮನಸ್ಸನ್ನು ಗೆದ್ದೊಡನೆಯೇ ಆತ್ಮಸಾಕ್ಷಾತ್ಕಾರವನ್ನು ಪಡೆದಂತಾ ಯಿತೆ ? ತನಗೆ ತಾನೇ ಅರಿವಿಲ್ಲದಂತೆ ಸ್ವಾಮಿಯು ಮಾನಸಿಕವಾಗಿ ದುಃಖಿತನಾದರು. ಹತಾಶನಾಗಿ ಹಲವು ವಿಧವಾದ ಅನುಮಾನಗಳಿಗೆ ಮಾನಸಿಕವಾಗಿ ಆಸ್ಪದವಿತ್ತರು.

ಸಾಕ್ಷಾತ್ಕಾರವೆಂಬುದೊಂದಿಯೆ ? ಈ ಸುಳ್ಳನ್ನು ಪರಂಪರಾಗತವಾಗಿ ಹರಡುತ್ತಿ ರುವುದು ಒಂದು ಪೂರ್ವಯೋಜಿತ ಸಂಚೆ ? ಸತ್ಯವೆನ್ನುವುದು ಇಲ್ಲವೆನ್ನುವುದೇ ಕಟು ಸತ್ಯ. ಈ ಕಠೋರ ಸತ್ಯವನ್ನು ತಿಳಿಯಲು ನಾನು ನನ್ನ ಯೌವ್ವನವನ್ನು ಜೀವನವನ್ನು ಪಣ ವಾಗಿ ಇಟ್ಟೆ. ಈ ರೀತಿಯಾದ ಜೀವನ ನನ್ನನ್ನು ವಂಚಿಸಿತು !

ಈ ರೀತಿ ಆತ್ಮಾವಲೋಕಿಸಿದ ಸ್ವಾಮಿ ತನ್ನ ಎಲ್ಲಾ ಪ್ರಯತ್ನಗಳನ್ನು ಕೊನೆಗೊಳಿಸಿ ಸುಸ್ತಾಗಿ ಬಸವಳಿದು ಕುಳಿತರು. ಹಲವು ವರ್ಷಗಳ ಕಠೋರ ತಪಸ್ಸಿಂದ ಒಂದು ನಿಯಮಿತ ಹದಕ್ಕೆ ಬಂದಿದ್ದ ಶರೀರ ಮತ್ತು ಮನಸ್ಸು ಪೂರ್ತಿಯಾಗಿ ತಿಳಿಯಾಗಿ, ಜಡವಾಯಿತು. ಎಷ್ಟರಮಟ್ಟಿಗೆ ಮನಸ್ಸು ಶರೀರ ಹಗುರವಾಯಿತೆಂದರೆ ಹಲವು ವರ್ಷ ಗಳವರೆಗೆ ಜಪಿಸುತ್ತಿದ್ದ ಮಂತ್ರವೇ ಮರೆತು ಹೋಯಿತು ಸ್ವಾಮಿಗೆ. ಈ ಸ್ಥಿತಿಯನ್ನು ಹೊಂದಿದ ಏಳನೆಯ ದಿನ ಊಹಿಸಲಾಗದೊಂದು ಅದ್ಭುತ ಪವಾಡ ಜರುಗಿತ್ತು. ಅದರ ಬಗ್ಗೆ ಸ್ವಾಮೀಜಿಯವರಿಂದಲೇ ಕೇಳೋಣ :

ನಾನು ಏನನ್ನೂ ಬಯಸದೇ ಇದ್ದ ಆ ಕ್ಷಣದಲ್ಲಿ ಒಳಗಿನಿಂದ ಆನಂದದ ಬುಗ್ಗೆ ಚಿಲುಮೆಯಾಗಿ ಉಕ್ಕಿತು. ಆನಂದದ ಸಾಗರವಾಗಿ ನನ್ನ ಅಸ್ತಿತ್ವವನ್ನು ಎಲ್ಲೆಡೆ ಆವರಿಸಿತು. ಈ ಆನಂದ ಸಾಗರದಲ್ಲಿ ಮುಳುಗಿ, ತೇಲಾಡಿ ನನ್ನಲ್ಲಿ ನಾನು ಕರಗಿ ಹೋದೆ. ನನ್ನಲ್ಲಿರುವ ನಾನು ಮಾಯವಾಯಿತು. ಕಾಲ, ದೇಶ, ದೇಹ, ಮನಸ್ಸು, ನೋಡುವವ, ನೋಡುವ ವಿಷಯ, ಎಲ್ಲವೂ ಮೇಲ್ಕಂಡ ಅನುಭವದಲ್ಲಿ ಕರಗಿ ಹೋಯಿತು ನಾನೊಬ್ಬನೇ ಎಲ್ಲ ವನ್ನು ಮಾರಿದವನು ನಾನೇ ಸರ್ವಸಕ್ತ ಸರ್ವಾಂತರ್ಯಾಮಿ, ಆದಿ ಮಧ್ಯಾಂತ ರಹಿತ ನಾನೇ ಎಂಬ ಶುದ್ಧ ಪ್ರಜ್ಞಾವಸೆ ಉಳಿಯಿತು. ಈ ಪ್ರಜ್ಞೆಯಲ್ಲಿ ನನ್ನ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನ ದೊರಕಿತು. ನನ್ನ ಈ ಅವಸ್ಥೆಯನ್ನು ವರ್ಣಿಸಲು ಮಾತಿನಿಂದ ಸಾಧ್ಯವಿಲ್ಲ.

ಇದಾದನಂತರ ನಾನು ಆನಂದ ಸಮಾಧಿಯಲ್ಲಿ ಒಂಭತ್ತು ತಿಂಗಳು ಕಳೆದೆ. ನನಗೆ ಈ ಸ್ಥಿತಿಯಲ್ಲಿ ನಡೆದ ಯಾವುದೇ ಘಟನೆಗಳೂ ನೆನಪಾಗುತ್ತಿಲ್ಲ. ಬೇರೆಯವರಿಂದ ತಿಳಿದ ವಿಷಯವೇನೆಂದರೆ, ಈ ಸ್ಥಿತಿಯಲ್ಲಿ ನನ್ನ ಶರೀರ ತನ್ನಷ್ಟಕ್ಕೆ ತಾನೇ ಅವಿರತವಾಗಿ ಕೆಲಸ ಮಾಡುತ್ತಿತ್ತು, ಮನಸ್ಸಿನ ಸಹಾಯವಿಲ್ಲದೆ. ನವೆಂಬರ್ 2000, ದೀಪಾವಳಿಯ ಶುಭ ದಿನದಂದು ಜ್ಞಾನೋದಯದ ಘಳಿಗೆಯಲ್ಲಿ ನಿಂತ ಕ್ರಿಯೆಗಳೆಲ್ಲವೂ ನನ್ನೊಳಗೆ ಒಂದೊಂದಾಗಿ ಮೊಟ್ಟ ಮೊದಲಿಗೆ ಪ್ರಾರಂಭವಾಯಿತು. ಅದೊಂದು ಅದ್ಭುತ ಅನುಭವ ಯಾವುದೋ ಒಂದು ಅಪರಿಮಿತ ಶಕ್ತಿ ಸಂಚಾರ ನನ್ನಲ್ಲಿ ಆಗಿ, ಅವಿರತ ಆನಂದದ ಬುಗ್ಗೆಯ ಕೇಂದ್ರ ಬಿಂದುವಿನೊಡಗೆ ಒಂದಾಯಿತು. ಅವುಗಳೆರಡು ಒಂದಾದ ಬಿಂದುವಿನಲ್ಲಿ ಸ್ಪೋಟವಾಗಿ ಆನಂದವಾಗಿರಿ ಎಂಬ ಶಬ್ದಗಳು ಹೊರ ಹೊಮ್ಮಿದವು. ಇದೇ ಪದಗಳನ್ನೇ ನಾನು ಈಗ ಆಶೀರ್ವಾದ ಮಾಡಲು ಉಪಯೋಗಿಸುತ್ತಿರುವುದು!!

ಈ ಪದಗಳ ಸಿಂಚನವಾದೊಡನೆಯೇ ಸ್ವಾಮಿಗೆ ತನ್ನ ಮನಸ್ಸು ಕೆಲಸ ಮಾಡ ತೊಡಗಿದ್ದು ಅರಿವಾಯಿತು. ಈ ಮನಸ್ಸೇ ನಿಧಾನವಾಗಿ ಆಧ್ಯಾತ್ಮಿಕ ಗುರುವಾಗಿ ಸ್ವಾಮಿ ಯನ್ನು ಮುಂದೆ ತಯಾರು ಮಾಡಲು ಸಿದ್ದವಾಗುತ್ತಿತ್ತು. ಆದರೂ ಹಲವು ತಿಂಗಳುಗಳೇ ಬೇಕಾಗಿತ್ತು, ಸ್ವಾಮಿಗೆ ತನ್ನ ಮನಸ್ಸನ್ನು ಹತೋಟಿಯಲ್ಲಿ ಇಡಲು.

ಪ್ರತಿಯೊಂದು ಪರಿಸ್ಥಿತಿಯಲ್ಲೂ ಭಗವಂತನ ಕಾಣದ ಕೈಗೊಂಬೆಯಂತೆ ಇರುವ ಸ್ವಾಮಿ ದಕ್ಷಿಣದ ಕಡೆಗೆ ಮಹಾರಾಷ್ಟ್ರಕ್ಕೆ ಬಂದು ಅಲ್ಲಿಂದ ತಮಿಳುನಾಡಿಗೆ ಬಂದು ಈರೋಡಿನಲ್ಲಿ ಕೆಲಕಾಲ ನೆಲೆ ನಿಂತರು. ತಮಿಳುನಾಡಿನಲ್ಲಿ ಕಾಯಿಲೆಗಳನ್ನು ಗುಣಪ ಡಿಸುವ ಪವಾಡ ಸದೃಶ್ಯ ಈ ಸುಂದರ ಯುವ ಸನ್ಯಾಸಿಯ ಬಗ್ಗೆ ವದಂತಿಗಳು ಕಾಲ್ಗಿಚ್ಚಿ ನಂತೆ ಹರಡಿತು. ಹಲವು ಬಗೆಯ ಜನರು - ನಾಸ್ತಿಕರು ಆಸ್ತಿಕರು, ಶ್ರದ್ಧಾಳುಗಳು, ಸಾಧಕರು, ಶೋಧಕರು, ಬೋಧಕರು, ಕಾಯಿಲೆ ಕಸಾಲೆಗಳಿಂದ ಬಳಲುತ್ತಿರುವವರು, ಆರೋಗ್ಯವಂತರು, ಯುವಕರು, ಸ್ತ್ರೀಯರು, ಪುರುಷರು ಎಲ್ಲರೂ ಮುತ್ತುತ್ತಿದ್ದರು, ಸ್ವಾಮಿಗಳ ದರ್ಶನ ಪಡೆಯಲೆಂದು. ಭಗವಂತನ ಇಚ್ಛೆಯಂತೆ ಪರಮಹಂಸ ನಿತ್ಯಾನಂದ ಸ್ವಾಮಿಗಳ ಉದಯವಾಯಿತು.