KAILASA Library/ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು/ಪರಿಚ್ಛೇದ 3 : ಆಂತರಿಕ ಪಯಣSign in
ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು

ಪರಿಚ್ಛೇದ 3 : ಆಂತರಿಕ ಪಯಣ

This text was machine-transcribed from the printed book and may contain errors. Select the words and choose “Report a mistake”.

ಪರಿವ್ರಾಜಕ ಜೀವನ

ಹದಿನೇಳು ವರ್ಷದವನಿದ್ದಾಗ ರಾಜಶೇಖರನ ಆಧ್ಯಾತ್ಮಿಕ ತೃಷೆ ಪರಾಕಾಷ್ಠೆ ಮುಟ್ಟಿತು. ತನ್ನೊಳಗಿನ ಆಧ್ಯಾತ್ಮಿಕ ಆಕರ್ಷಣೆಯನ್ನು ಕಡೆಗಣಿಸಲಾಗದೇ, ಆತ್ಮಸಾಕ್ಷಾ ತ್ಕಾರಕ್ಕಾಗಿ ಯಾವ ರಕ್ಷಣೆಯೂ ಇಲ್ಲದೆ, ಯಾವ ಬಿಂದು ಗುರಿಯನ್ನು ಮುಟ್ಟಲು ಜೀವನ ವನ್ನು ಒತ್ತೆಯಾಗಿಟ್ಟನೋ, ಅದರ ಭರವಸೆಯೂ ಇಲ್ಲದೇ, ಮನೆಯನ್ನು ತೊರೆದು ಹೊರಟ ರಾಜಶೇಖರ. ಆತನಿಗಿದ್ದ ಒಂದು ಭರವಸೆಯೆಂದರೆ ಹನ್ನೆರಡು ವರ್ಷದವನಿ ದ್ದಾಗ ಅನುಭವಿಸಿದ ದೈವದ ಅನುಭೂತಿ : ಈ ಅನುಭೂತಿಯೇ ಅವನ ಹೃದಯದಲ್ಲಿ ನಿರಂತರ ಆಧ್ಯಾತ್ಮಿಕ ಬೆಂಕಿಯ ಜ್ವಾಲೆಯನ್ನು ಎಬ್ಬಿಸಿತ್ತು. ಹಲವು ವರ್ಷಗಳು ಪರ್ವತ ಶ್ರೇಣಿಗಳಲ್ಲಿ ಸಂಚರಿಸಿ ಎಲ್ಲೆಂದರಲ್ಲಿ ಆಧ್ಯಾತ್ಮಿಕ ತಾಣಗಳಿವೆಯೋ ಅಲ್ಲೆಲ್ಲಾ ತಂಗಿದ್ದು, ದೇಶದ ಉದ್ದಗಲ ಕಾಲ್ನಡಿಗೆಯಲ್ಲಿ ಪಯಣಿಸಿ ಭಾರತ ಮತ್ತು ನೇಪಾಳದ ಅನೇಕ ಗುರು ಗಳಿಂದ ಆಧ್ಯಾತ್ಮಿಕ ತರಬೇತಿ ಶಿಕ್ಷಣ ಪಡೆದ. ಕೆಲವು ಸಲ ಎಲ್ಲೆಂದರಲ್ಲಿ ರೈಲನ್ನು ಹತ್ತಿ, ಅದು ಎಲ್ಲಿಗೆ ಪಯಣಿಸುತ್ತಿದೋ ಎಂಬುದನ್ನು ಲೆಕ್ಕಿಸದೆ, ತನ್ನ ಮನಸ್ಸು ಎಲ್ಲಿ ಇಚ್ಛಿಸು ವುದೋ ಅಲ್ಲೇ ಇಳಿಯುತ್ತಿದ್ದ. ಯಾವಾಗ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುವುದು ಅಹಿ ತಕರವಾದಾಗ ಮತ್ತೊಂದು ದಿಕ್ಕಿನಲ್ಲಿ ಪ್ರಯಾಣಿಸುವುದು ರೈಲ್ವೆ ಸ್ಟೇಷನ್ ಸಿಗುವವ ರೆಗೆ, ಹೀಗೆ ಮುಂದುವರೆಯುತ್ತಿತ್ತು ರಾಜಶೇಖರನ ಪಯಣ. ದೇಹವನ್ನು ಮುಚ್ಚಲು ಮೇಲೆ, ಕೆಳಗೆ ಎರಡು ಬಟ್ಟೆ ತುಂಡು ಮತ್ತು ಒಂದು ಕಮಂಡಲ ಇಷ್ಟೇ ರಾಜಶೇಖರನ ಆಸ್ತಿ. ಪ್ರಪಂಚದಲ್ಲಿ ಹಣವನ್ನು ಯಾವ ಕಾರಣಕ್ಕೂ ಅಪರಿಗ್ರಹ ಮಾಡದ ಶಪಥ ಮಾಡಿ, ಎಲ್ಲಿ ತನ್ನ ಮುಂದಿನ ಹೊಟ್ಟೆ ಪಾಡೆಂದು ತಿಳಿಯದೇ ಯಾವ ರಕ್ಷಣೆಯೂ ಇಲ್ಲದೆ ಸಾಗು ತ್ತಿತ್ತು ರಾಜಶೇಖರನ ಜೀವನದ ಪಯಣ. ಆದರೆ ಆತನಲ್ಲಿರುವ ಆಳವಾದ, ಎಂದಿಗೂ ಹಚ್ಚಹಸುರಾದ, ಆಧ್ಯಾತ್ಮಿಕ ತೃಷೆ ಅವನನ್ನು ಕಠಿಣವಾದ ತಪಶ್ಚರ್ಯೆಯನ್ನು ಆಚರಿ ಸಲು ಧೈರ್ಯವನ್ನು ಶಕ್ತಿಯನ್ನು ಕೊಟ್ಟಿತ್ತು. ಈ ತೃಷೆಯೇ ಆತನ ಪಾದಗಳನ್ನು ಭಾರತದ ಪವಿತ್ರ ತೀರ್ಥಕ್ಷೇತ್ರಗಳನ್ನು ಸ್ಪರ್ಶಿಸುವಂತೆ ಮಾಡಿತು.

ಈ ಸುಸಂದರ್ಭದಲ್ಲೇ ಅನೇಕ ಸಂತ ಶ್ರೇಷ್ಠರುಗಳನ್ನು ಭೇಟಿ ಮಾಡಿದರು. ಶಾಸ್ತ್ರ ಗಳನ್ನು ಉಪನಿಷತ್ತುಗಳನ್ನು, ವೇದ ವೇದಾಂಗಗಳ ಸಾರವನ್ನು ಶತ-ಶತಮಾನಗಳವರೆಗೆ ಬೆಳೆಸುತ್ತಿರುವ ಗಹನವಾದ ಆಧ್ಯಾತ್ಮಿಕ ಸಾರವನ್ನು ಅರೆದು ಕುಡಿದು ಪರಿಣಿತಿಯನ್ನು ಸಾಧಿಸಿದರು. ಮಹಾತ್ಮರ ಜೀವನ-ಸಾಧನೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನೋದಿ

ರಾಜಶೇಖರನ ನಾಡಿ ಮಿಡಿಯಿತು ಹೃದಯವು ಕಲಕಿತು. ಒಂದು ದಿನ ಆಕಸ್ಮಿಕವಾಗಿ Gospel of Ramakrishna ಎಂಬ ಗ್ರಂಥವನ್ನು ನೋಡಿದರು. ಗ್ರಂಥವನ್ನು ಓದುತ್ತಾ ಆನಂದ ತುಂಬಿತರಾದರು. 600 ಪುಟಗಳ ಈ ಬೃಹತ್ ಗ್ರಂಥವನ್ನು ಆಸ್ವಾದಿಸುತ್ತಾ ಹತ್ತು ಗಂಟೆಗಳ ಕಾಲ ಸುದೀರ್ಘವಾಗಿ ಓದಿ ಮುಗಿಸಿದರು. ಈ ಘಟನೆಯೇ ರಾಜಶೇಖರನ ಆಧ್ಯಾತ್ಮಿಕ ತೃಷೆಗೆ, ಪರಾಕಾಷ್ಟೆಗೆ ಸಾಕ್ಷಿ.

ಅಪರೂಪದ ಸಾಕ್ಷಾತ್ಕಾರ ಮತ್ತು ಆಶೀರ್ವಾದ

Gospel of Ramakrishna ಗ್ರಂಥವನ್ನು ಓದಿ ಮುಗಿಸಿದ 3 ದಿನಗಳಲ್ಲಿ ಶ್ರೀರಾಮಕೃಷ್ಣ ಮತ್ತು ಶಾರದಾದೇವಿಯವರು ಬಾಲಸ್ವಾಮಿಗೆ ದರ್ಶನವಿತ್ತು ತಮ್ಮ ಹಸ್ತ ವನ್ನು ಆತನ ಶಿರದಲ್ಲಿಟ್ಟು ಹೃತ್ಪೂರ್ವಕ ಆಶೀರ್ವದಿಸಿದರು. ಆ ದಿನದಿಂದ ಗಾಢವಾದ ಪ್ರೀತಿ ಮತ್ತು ಪೂಜ್ಯ ಭಾವದಿಂದ ಈ ಸಾಧಕ ಶ್ರೀರಾಮಕೃಷ್ಣರನ್ನು ತನ್ನ ಹೃದಯ ಕಮಲ ದಲ್ಲಿಟ್ಟು ಪೂಜಿಸ ತೊಡಗಿದ.