ಪರಿಚ್ಛೇದ - 1
This text was machine-transcribed from the printed book and may contain errors. Select the words and choose “Report a mistake”.
ಬಾಲ್ಯ: 12.32 ಬೆಳಿಗ್ಗೆ ಜನವರಿ 1, 1978: ಜನ್ಮ
ಶ್ರೀಯುತರಾದ ಅರುಣಾಚಲಂ ಮತ್ತು ಲೋಕನಾಯಕಿಯವರ ಎರಡನೆಯ ಮಗನಾಗಿ ರಾಜಶೇಖರನು ಆ ಭೂಮಿಯ ಅಲೌಕಿಕ ಸಂಪತ್ತಾಗಿ ಜನಿಸಿದ ಅರುಣಾಚಲಂ ದಂಪತಿಗಳು ಕನ್ಯಾರಾಶಿ, ತುಲಾ ಲಗ್ನದಲ್ಲಿ ಹುಟ್ಟಿದ ತಮ್ಮ ಪುತ್ರನ ಜನನವನ್ನು ಸಾಂಪ್ರದಾಯಿಕ ರೀತಿಯಲ್ಲಿ ವಿಶೇಷವಾಗಿ ಕೊಂಡಾಡಿದರು. ಆದರೆ ಅವರ ಈ ಆನಂದವು ಬಹಳ ಕಾಲ ಉಳಿಯಲಿಲ್ಲ. ತಮ್ಮ ಮಗನು ಜನಿಸಿದ ಹತ್ತನೆಯ ದಿನ ತಮ್ಮ ವಂಶಾ ರೀತ್ಯ ಸಾಂಪ್ರದಾಯಿಕವಾಗಿ ಕುಲಪುರೋಹಿತರನ್ನು ಮಗನ ಜಾತಕವನ್ನು ಬರೆಯಲು ಕರೆಸಿದರು. ಪೂರ್ಣ ಪಾಂಡಿತ್ಯದಿಂದ ಶ್ರೇಷ್ಠನಾದ ಕುಲ ಪುರೋಹಿತನು ಅರುಣಾಚಲಂ, ನಿನ್ನ ವಂಶ ಉದ್ಧಾರವಾಯಿತು. ಈ ಹುಡುಗನು ರಾಜ ಸನ್ಯಾಸಿಯಾಗು ತ್ತಾನೆ. ಸನ್ಯಾಸಿಗಳಿಗೆ ರಾಜ ಮುಕುಟದಂತೆ ಶೋಭಿಸುತ್ತಾನೆ. ನನ್ನ ಪೂರ್ವ ಪುಣ್ಯದ ಫಲ ನಾನು ಈ ಜಾತಕವನ್ನು ಬರೆಯುತ್ತಿರುವುದು ಇದೇ ನನ್ನ ಜನ್ಮದ ಕೊನೆಯ ಜಾತಕ. ಇನ್ನು ಮುಂದೆ ನಾನು ಯಾವ ಜಾತಕವನ್ನೂ ಈ ಪವಿತ್ರ ಕೈಗಳಲ್ಲಿ ಬರೆಯಲಾರೆ. ಹೀಗೆಂದು ಹೇಳಿ ಕುಲಪುರೋಹಿತರು ತಮ್ಮ ಕುಲ ವೃತ್ತಿಗೇ ಮಂಗಳವನ್ನು ಹಾಡುತ್ತಾರೆ. ಈ ವಿಷಯವನ್ನು ತಿಳಿದ ಅರುಣಾಚಲಂ ದಂಪತಿಗಳು ಚಿಂತಾಕ್ರಾಂತರಾಗಿ ಇದಕ್ಕೆ ಪರಿಹಾರ ವಿಲ್ಲವೆ? ವಿಧಿಯ ಕೃಪಾವಾಡವನ್ನು ಯಾವ ರೀತಿಯಲ್ಲೂ ಬದಲಿಸಲು ಸಾಧ್ಯವಿಲ್ಲವೆ? ಎಂದು ಕುಲಪುರೋಹಿತರನ್ನು ಪರಿಪರಿಯಾಗಿ ಬೇಡಿದರು. ನನಗೆ ಗೊತ್ತಿರುವಂತ ಪರಿಹಾರ ಅಸಾಧ್ಯ, ಆದರೆ ಹುಡುಗನ ಕೈಗೆ ಈ ಜಾತಕ ಸಿಗದಂತೆ (ನೋಡಿಕೊಳ್ಳುವ) ಜವಾಬ್ದಾರಿ ನಿಮಗಿದೆ. ಈ ರೀತಿಯಾದಲ್ಲಿ ಹುಡುಗನು ರಾಜ ಸನ್ಯಾಸಿಯಾಗುವ ಘಟನೆ ಮುಂದೂಡಬಹುದು ಅಷ್ಟೆ ಎಂದರು ಕುಲಪುರೋಹಿತರು, ಆದರೆ ವಿಧಿ ಬರಹ ಎಷ್ಟೇ ಅರುಣಾಚಲ ದಂಪತಿಗಳು ಮಗನನ್ನು ಧಾರ್ಮಿಕ - ಆಧ್ಯಾತ್ಮಿಕ ವಿಧಿ, ವಿಧಾನಗಳಿಂದ ದೂರವಿಡಲು ಪ್ರಯತ್ನಿಸಿದರೂ ಭಗವಂತನ ಲೀಲೆಯನ್ನು ತಡೆಯಲಾರದಾರರು. ರಾಜಶೇಖರನು ತನ್ನ ಎರಡನೆಯ ವಯಸ್ಸಿ ನಿಂದಲೇ ಆಧ್ಯಾತ್ಮಿಕದೆಡೆಗೆ ಒಲವನ್ನು ತೋರಿಸಲಾರಂಭಿಸಿದರು.
ತಾತ - ರಾಜ ಮೊದಲಿಯಾರ್ ಅವರೊಡನೆ
ಚಿಕ್ಕ ಹುಡುಗನಾಗಿದ್ದಾಗಿಂದಲೂ ರಾಜಶೇಖರನು ತನ್ನ ತಾತ ರಾಜ ಮೊದಲಿಯಾರ್ ಅವರ ಹೆಗಲೇರಿ ತಿರುವಣ್ಣಾಮಲೈಯಲ್ಲಿರುವ ಎಲ್ಲಾ ದೇವಸ್ಥಾನ ಗಳನ್ನು ಪ್ರದಕ್ಷಿಣೆ ಹಾಕುತ್ತಿದ್ದ. ಆ ಸಮಯದಲ್ಲಿ ತಾತ ಹೇಳುತ್ತಿದ್ದ ಭಕ್ತ ಪ್ರಹ್ಲಾದ, ಭಕ್ತ ಮಾರ್ಕಂಡೇಯ ಮುಂತಾದವರ ಜ್ಞಾನ ಮತ್ತು ಭಕ್ತಿ ಪೂರಕವಾದ ಕಥೆಗಳನ್ನು ಕೇಳಿ ರೋಮಾಂಚಗೊಳ್ಳುತ್ತಿದ್ದ. ದೇವಸ್ಥಾನದ ಪ್ರದಕ್ಷಿಣೆ ಮುಗಿಸಿ ಬಂದ ತಕ್ಷಣ ತಾತ ಹೇಳುತ್ತಿದ್ದ ಕಥೆಗಳನ್ನು ಒಂದೂ ಬಿಡದಂತೆ ವಿವರಿಸಿ ಮನೆಯವರನ್ನು, ಸುತ್ತಮುತ್ತಲಿನವರನ್ನು ಆಶ್ಚರ್ಯಚಕಿತರನ್ನಾಗಿಸುತ್ತಿದ್ದ.
ರಾಜಶೇಖರನ ಮೂರನೆಯ ವರ್ಷದ ಜನ್ಮದಿನಾಚರಣೆಯ ಸಂದರ್ಭ, ಮನೆಯವರಿಗೆ ಹುಡುಗನಿಗೆ ಏನು ಉಡುಗೊರೆ ಕೊಡಬೇಕೆಂದು ಚಿಂತೆ. ಆದರೆ ಮೊದಲಿನಿಂದಲೂ ಸ್ವತಂತ್ರನಾಗಿ ಬೆಳೆದ ಹುಡುಗ ಸ್ವಇಚ್ಛೆಯಿಂದಲೂ, ಸ್ವಯಂ ಪ್ರೇರಿತನಾಗಿಯೂ ಗಣಪತಿಯ ವಿಗ್ರಹವನ್ನು ಬಯಸಿದ. ಈ ಗಣಪತಿಯ ವಿಗ್ರಹವೇ ರಾಜಶೇಖರನ ಸ್ನೇಹಿತ, ಒಡನಾಡಿ. ಅವರೊಡನೆಯೇ ಆತನ ಆಟ, ಪಾಠ, ಜಗಳ ಇತ್ಯಾದಿ. ಅವನ ತಾಯಿ ಆಶ್ಚರ್ಯದಿಂದ ಉದ್ಘೋಷಿಸುತ್ತಾರೆ. ಯಾವ ರೀತಿಯಲ್ಲಿ ನಾನು ಮಗನನ್ನು ಊಟಮಾಡಲೆಂದು ಆಗ್ರಹಿಸುತ್ತಿದ್ದೆನೋ ಅದೇ ರೀತಿಯಲ್ಲಿ ನನ್ನ ಮಗನು ಗಣಪತಿಯ ವಿಗ್ರಹವನ್ನು ಉದ್ದೇಶಿಸಿ ಈಗಲೇ ಬಂದು ನಿನ್ನ ಊಟವನ್ನು ಮಾಡು ಇಲ್ಲದಿದ್ದಲ್ಲಿ ನಿನ್ನನ್ನು ಬಾವಿಗೆ ಎಸೆಯುತ್ತೇನೆ ಎಂದು ಆಗ್ರಹಿಸುತ್ತಿದ್ದ. ರಾಜಶೇಖರನು ಎಲ್ಲರ ಕಣ್ಮಣಿಯಾಗಿದ್ದ. ಎಲ್ಲೋ ತಮ್ಮ ಹೃದಯಾಂತರಾಳದಲ್ಲಿ ಅರುಣಾಚಲಂ ದಂಪತಿಗಳಿಗೆ ಸ್ಪಷ್ಟವಾಗಿ ತಿಳಿದಿದ್ದ ಸತ್ಯವೇನೆಂದರೆ ತಾವು ರಾಜಶೇಖರನ ರಕ್ಷಕರು ಮಾತ್ರವೆಂದು ತಮಗೆ ದೊರೆತ ಈ ಕೆಲ ವರ್ಷಗಳನ್ನು ಅಮೂಲ್ಯವಾದ ಭಾಗ್ಯವೆಂದರಿತ ದಂಪತಿಗಳು ರಾಜಶೇಖರನ ಮೇಲೆ ಪ್ರೇಮ - ಪ್ರೀತಿಗಳ ವರ್ಷವನ್ನೇ ಸುರಿಸಿದರು.
ಅಜ್ಜಿ - ಧನ ಕೋಟಿಯಮ್ಮಾಳ್ ರವರೊಡನೆ
ಎಲ್ಲ ಅಜ್ಜಿಯವರಂತೆಯೇ ಧನಕೋಟಿ ಅಮ್ಮಾಳ್ ಅವರಿಗೆ ತುಂಟ ರಾಜಶೇಖರನನ್ನು ಕಂಡರೆ ಅಪಾರ ಪ್ರೀತಿ. ಒಂದು ದಿನ ರಾಜಶೇಖರ ಮುಂದೆ ಏನಾದರೂ ಬಳುವಳಿಯಾಗಿ ಕೊಡಲು ತಮ್ಮ ಒಡವೆಗಳ ಪೆಟ್ಟಿಗೆಯನ್ನು ತೆಗೆದು ತೋರಿಸುತ್ತಾ ಅವನ ಮನಸೆಳೆದರು. ಅವತ್ತಿನ ದಿನ ಅವರಿಗೆ ತಮ್ಮ ಮೊಮ್ಮಗನಂತಹವನೆಂದು ಗೋಚರಿಸಿತು. ಝಳ ಝಳನೇ ಹೊಳೆಯುತ್ತಿದ್ದ ಆ ವಜ್ರಗಳ ಮಧ್ಯೆ ತಕ್ಷಣ ಹಿಂದು ಮುಂದು ನೋಡದೆ ರಾಜಶೇಖರನು ಆರಿಸಿಕೊಂಡಿದ್ದು ಪವಿತ್ರಮವಾದ ರುದ್ರಾಕ್ಷಿಮಾಲೆ.
ರಘುಪತಿಯೋಗಿಯವರೊಡನೆ
ರಾಜಶೇಖರನ ಬದುಕಿನ ಒಂದು ಅಲೌಕಿಕ ಅದ್ಭುತ ಪವಾಡವೇ ರಘುಪತಿ ಯೋಗಿಗಳ ಮಿಲನ. ಬಹಳ ವರ್ಷಗಳ ಕಠಿಣ ತಪಸ್ಸು ಮತ್ತು ಹಠಯೋಗ ಮುಂತಾದವುಗಳನ್ನು ನಿತ್ಯ ನೈಮಿತ್ತಿಕ ಕರ್ಮವನ್ನಾಗಿ ಇರಿಸಿಕೊಂಡ ರಘುಪತಿಯೋಗಿ ಭಾರತವಲ್ಲದೇ ಟಿಬೇಟ್ ಮತ್ತು ಬರ್ಮಾ ದೇಶದಲ್ಲಿ ಸಂಚರಿಸಿದವರು. ರಾಜಶೇಖರ ನಿಗೆ ಈ ಯೋಗಿ ತನಗಿಂತ ಭಿನ್ನವಾಗಿ, ಆಕರ್ಷಣ ಕೇಂದ್ರವಾಗಿ, ಕುತೂಹಲವಾಗಿ ಗೋಚರಿಸಿದರು. ಐದು ವರ್ಷಗಳ ಸತತ ಸಂಪರ್ಕದಿಂದ ರಾಜಶೇಖರನು ಯೋಗ ರಹಸ್ಯಗಳನ್ನು ರಘುಪತಿ ಯೋಗಿಗಳಿಂದ ಅಭ್ಯಾಸಿಸಿದನು. ಈ ಬಾಲಕನಲ್ಲಿ ಮುಂದೆ ಸನ್ಯಾಸಿಯಾಗುವ ಲಕ್ಷಣಗಳನ್ನು ಗುರುತಿಸಿ, ರಘುಪತಿಯೋಗಿಗಳು ರಾಜಶೇಖರನನ್ನು ತಿರುವಣ್ಣಾಮಲೈಯಲ್ಲಿರುವ ಕೃತ್ತಿಕಾ ಮಂಟಪಕ್ಕೆ ಕರೆದು ಯೋಗದೀಕ್ಷೆಯನ್ನು ಕೊಟ್ಟರು. ಈ ಒಂದು ಉನ್ನತ ಮಟ್ಟದ ಆಧ್ಯಾತ್ಮಿಕ ಸನ್ಮಾನ ಸೌಭಾಗ್ಯ ಇಷ್ಟು ಚಿಕ್ಕ ವಯಸ್ಸಿನಲ್ಲೇ ತನ್ನದಾಗಿಸಿಕೊಂಡ ರಾಜಶೇಖರ. ದೀಕ್ಷಾ ಕೊಡುವ ಘಳಿಗೆಯಲ್ಲಿ ರಾಜಶೇಖರನಿಗೆ ಪರಾಶಕ್ತಿಯ ದರ್ಶನವಾಯಿತು. ಈ ಪರಾಶಕ್ತಿಯೇ ತನ್ನ ಇಷ್ಟದೇವತೆಯೆಂದು ಯೋಗಿ ರಘುಪತಿ ಹೇಳುತ್ತಿದ್ದರು. ಪರಾಶಕ್ತಿಯ ದರ್ಶನದ ಮೌಲ್ಯವನ್ನು ಅರಿಯದೆ ತನ್ನ ಮನೆಗೆ ಹಿಂತಿರುಗಿದ ಕೂಡಲೇ ಒಂದು ಬಳಪದ ಕಲ್ಲಿನಲ್ಲಿ ಅದೇ ಅಂಬಿಕೆಯ ಚಿತ್ರವನ್ನು ಕೆತ್ತಿದ. ಈ ಕೆತ್ತಿದ ಅಂಬಿಕೆಯ ವಿಗ್ರಹ ಈಗಲೂ ಸ್ವಾಮೀಜೀಯವರ ಬಳಿ ಇದೆ.
ಒಂದು ದಿನ ತನ್ನೊಳಗಿನ ಆಂತರಿಕ ತುಡಿತದ ಒತ್ತಡದಿಂದ ರಘುಪತಿಯೋಗಿ ಗಳನ್ನು ಯೋಗಶಕ್ತಿಯು ಯಾವ ಪವಾಡಗಳನ್ನು ಮಾಡುತ್ತದೆ ಎಂದು ತಿಳಿಯಬಯಸಿದ. ತಕ್ಷಣವೇ ರಘುಪತಿಯೋಗಿ ಒಂದು ಶಂಬವನ್ನು ಸೃಷ್ಟಿಸಿ ಅವನಿಗೆ ಕೊಟ್ಟರು. ಆಶ್ಚರ್ಯ ಚಕಿತನಾದ ರಾಜಶೇಖರ ಆ ಶಂಬದ ಮೇಲೆ ಕೆತ್ತಿದ್ದ ದಿನಾಂಕವನ್ನು ಗಮನಿಸಿ ರಘುಪತಿ ಯೋಗಿಗಳು ತನ್ನನ್ನು ಮೋಸಗೊಳಿಸಿದರೆಂದು ಆರೋಪಿಸಿದ. ರಘುಪತಿಯೋಗಿಗಳು ಅವನ ಮಾತನ್ನು ಒಪ್ಪಿ ಶಂಬವನ್ನು ಸೃಷ್ಟಿಸಲಿಲ್ಲವೆಂದು, ಆದರೆ ನೂರಾರು ಮೈಲಿಗಳ ದೂರದಲ್ಲಿರುವ ತಮ್ಮ ಮನೆಯಿಂದ ಸ್ಥಳಾಂತರಿಸಿದರೆಂದು ಹೇಳಿದರು. ಇದೇ ಒಂದು ದೊಡ್ಡ ಪವಾಡವಲ್ಲವೆ !
ಈವತ್ತು ರಾಜಶೇಖರನ ಬಾಲ್ಯದ ಧ್ಯಾನದ ಭಾವಚಿತ್ರಗಳು ನಮಗೆ ದೊರೆತಿದ್ದರೆ, ಅದಕ್ಕೆ ಯೋಗಿ ರಘುಪತಿಗಳೇ ಕಾರಣ ಮತ್ತು ಸ್ತುತ್ಯರ್ಹರು. ಅತ್ಯಾಶ್ಚರ್ಯಚಕಿತನಾದ ರಾಜಶೇಖರ ತನ್ನ ಭಾವಚಿತ್ರವನ್ನು ತೆಗೆಯಲು ಅಗತ್ಯ ಮತ್ತು ಕಾರಣ ಕೇಳಿದಾಗ, ರಘುಪತಿ ಯೋಗಿಗಳು ಮಂದಹಾಸದಿಂದ ಹೇಳಿದರು ನಿನಗೇ ಭವಿಷ್ಯದಲ್ಲಿ ಗೊತ್ತಾಗುತ್ತೆ ಸದ್ಯಕ್ಕೆ ಜಾಗರೂಕತೆಯಿಂದ ಈ ಭಾವಚಿತ್ರಗಳನ್ನು ಕಾಪಾಡು ಎಂದು.
ಪೂಜೆಯೇ - ಒಂದು ಹುಡುಗಾಟ
ಯಾವ ವಯಸ್ಸಿನಲ್ಲಿ ಮಕ್ಕಳುಗಳು ಬೊಂಬೆಯನ್ನಿಟ್ಟುಕೊಂಡು ಆಟ ಪಾಠಗಳಲ್ಲಿ ಮುಳುಗುವರೋ, ಅದೇ ವಯಸ್ಸಿನಲ್ಲಿ ರಾಜಶೇಖರನು ಪೂಜಾ ಮತ್ತು ಧಾರ್ಮಿಕ ವಿಧಿ ಗಳಲ್ಲಿ ಮುಳುಗಿದ್ದನು. ಗಂಟೆಗಟ್ಟಲೆ ಪೂಜೆಯನ್ನು ಮಾಡುತ್ತಾ ತನ್ಮಯನಾಗಿ ಬಾಹ್ಯ ಪರಿವೆ ಇಲ್ಲದೆ ಇರುತ್ತಿದ್ದನು. ತನ್ನ ಮನೆಯವರೆಲ್ಲರೂ ಪೂಜೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿದ್ದನು. ರಾಜಶೇಖರನ್ ಒಳ್ಳೆಯ ಚತುರ ಶಿಲ್ಪಿಯಾಗಿದ್ದರಿಂದ ಸ್ಥಳೀಯ ಕುಲದೇವತೆಗಳ ವಿಗ್ರಹಗಳನ್ನು ಕೆತ್ತಿ ದೇವಸ್ಥಾನದ ಉತ್ಸವಗಳಲ್ಲಿ ಪ್ರದರ್ಶನಕ್ಕಿಟ್ಟು ಜನಜಂಗುಳಿಯನ್ನು ಆಕರ್ಷಿಸುತ್ತಿದ್ದನು. ರಾಜಶೇಖರನಿಂದ ತಯಾರಿಸಲ್ಪಟ್ಟ ಮೂರ್ತಿಗಳು ದೇವಸ್ಥಾನದ ಉತ್ಸವಗಳಿಗೆ ಕೊಂಡೊಯ್ಯುತ್ತಿದ್ದ ವಿಗ್ರಹಗಳಿಗೆ ಸರಿಸಾಟಿಯಾಗಿದ್ದವೆಂದು ಕುಟುಂಬದ ಸದಸ್ಯರು ಇವತ್ತಿಗೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
ಮಾತೂಶ್ರೀ ಕುಪ್ಪಮ್ಮಾಳೊಡನೆ
ಮಾತಾಜಿ ಕುಪ್ಪಮ್ಮ ರಾಜಶೇಖರನ ಜೀವನದ ಚಾಲಕ ಶಕ್ತಿಯಾಗಿದ್ದಳು. ಧನಕೋಟಿಯಮ್ಮಳ ಸ್ನೇಹಿತೆಯಾಗಿದ್ದು ಬಹಳ ಸಾಧುವಾಗಿದ್ದು ರಾಜಶೇಖರನ ಯೋಗಕ್ಷೇಮ ನಿರ್ವಾಹಕಳಾಗಿದ್ದಳು. ಒಂದು ದಿನ ಅರುಣಾಚಲೇಶ್ವರನ ಪೂಜಿಸುತ್ತಿದ್ದ ಸಂದರ್ಭದಲ್ಲಿ ರಾಜಶೇಖರನಿಗೆ ಒಂದು ಯಂತ್ರದ ದರ್ಶನವಾಯಿತು. ಮನೆಗೆ ಬಂದ ಕೂಡಲೇ ಅದನ್ನು ಆತ ಒಂದು ಹಾಳೆಯ ಮೇಲೆ ಪ್ರಾಮಾಣಿಕವಾಗಿ ಬಿಡಿಸಿದ. ಆ ಸಮಯದಲ್ಲಿ ಅಲ್ಲಿದ್ದ ಕುಪ್ಪಮ್ಮಾಳಿಗೆ ಇದನ್ನು ನೋಡಿ ಆನಂದಾತಿರೇಕವಾಯ್ತು ಕಾರಣ ಅದು ಸಾಕ್ಷಾತ್ ಭೂ ಪ್ರಸ್ತಾರ ಶ್ರೀ ಚಕ್ರವಾಗಿತ್ತು. ಈ ಯಂತ್ರದ ಸಾಕ್ಷಾತ್ಕಾರ ಸುಲಭ ಸಾಧ್ಯವೇನಲ್ಲ. ರಾಜಶೇಖರನು ತೀರ ಬಾಲ್ಯದಲ್ಲಿದ್ದುದರಿಂದ, ಮುಗ್ಧನಾದುದ ರಿಂದ ಅವನಲ್ಲಿ ಈ ಬಗ್ಗೆ ಪ್ರಶ್ನೆ ಕೇಳುವ ಪರಿಯೇ ಇಲ್ಲ. ಈ ಘಟನೆಯೇ ರಾಜಶೇಖರನ ಜೀವನದಲ್ಲಿ ತಿರುವಾಯ್ತು.
ಆಳವಾಗಿ ಆಧ್ಯಾತ್ಮದಲ್ಲಿ ಮುಳುಗಿದ್ದ ಕುಪ್ಪಮ್ಮಾಳ್ ರಾಜಶೇಖರನನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅವನನ್ನು ಬೇರೆ ಬೇರೆ ವಿವಿಧ ಆಧ್ಯಾತ್ಮಿಕ ಸಾಧನೆಗಳಲ್ಲಿ ತರಬೇತಿಗೊಳಿಸಿದಳು. ಈ ಸಮಯದಲ್ಲಿ ಆತನ ಆಹಾರ ಮತ್ತು ಇತರ ಅಗತ್ಯಗಳನ್ನು ತಾನೇ ಖುದ್ದಾಗಿ ಗಮನಿಸುತ್ತಿದ್ದಳು. ಕುಪ್ಪಮ್ಮಾಳು ತಾನೇ ರಾಜಶೇಖರನಿಗೆ ಶ್ರೀಚಕ್ರ ಪೂಜೆಯ ವಿಧಾನವನ್ನು ತಿಳಿಸಿ ಶಕ್ತಿಮಂತ್ರದ ದೀಕ್ಷೆಯನ್ನು ಕೊಟ್ಟಳು.
ಯೋಗಿ ರಾಮಸೂರತ್ ಕುಮಾರರೊಡನೆ ಭೇಟಿ
ತಿರುವಣ್ಣಾಮಲೈ ಸಾಂಪ್ರದಾಯಕವಾಗಿ ಪ್ರಪಂಚದಲ್ಲಿರುವ ಎಲ್ಲಾ ಯೋಗಿಗಳಿಗೆ, ಪವಿತ್ರರಾದ ಎಲ್ಲಾ ಸಂತ ಶ್ರೇಷ್ಠರುಗಳಿಗೆ ಆಶ್ರಯತಾಣವಾಗಿದೆ. ಈ ಯೋಗಿಗಳ ಪರಂಪರೆಯಲ್ಲಿ ಬಂದವರೇ ಯೋಗಿ ಸೂರತ್ ಕುಮಾರ್. ಇವರು ತಿರುವಣ್ಣಾಮಲೈ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿದ್ದ ಒಂದು ನಂದಿ ಧ್ವಜಸ್ತಂಭದ ಪಾದದ ಹತ್ತಿರ ನೆಲೆ ಮಾಡಿಕೊಂಡಿದ್ದರು. ತಿರುವಣ್ಣಾಮಲೈಯಲ್ಲಿರುವ ಪ್ರತಿಯೊಬ್ಬ ನಿವಾಸಿಯೂ ಇವರ ಆಶ್ಚರ್ಯಕರ ವರ್ತನೆಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ದಾರಿಯಲ್ಲಿ ಯೋಗಿಯನ್ನು ಕಂಡು ನಿಂತು ತಾವು ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗುವರೆಂದು ಪ್ರಶ್ನಿಸುತ್ತಿದ್ದರು. ಯಾವಾಗಲೂ ಮೌನಿಯಾಗಿರುತ್ತಿದ್ದ ಯೋಗಿಯೂ ಮಕ್ಕಳಾಟದ ಈ ಪ್ರಶ್ನೆಗಳಿಗೇಲ್ಲಾ ಉತ್ತರಿಸುತ್ತಿರಲಿಲ್ಲ. ಒಂದು ದಿನ ರಾಜಶೇಖರನು ಬಹಳ ವಿನೀತನಾಗಿ ಈ ದಿನದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವೆನಾ? ಎಂದು ಈ ಯೋಗಿಯನ್ನು ಪ್ರಶ್ನಿಸಲು ಅವರು ಮಗುವೇ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವೆ ಎಂದು ಉತ್ತರಿಸಿದರು. ಆಶ್ಚರ್ಯಚಕಿತನಾದ ರಾಜಶೇಖರನನ್ನು ಕುರಿತು ಪಕ್ಕದಲ್ಲಿದ್ದ ಒಬ್ಬ ಸಾಧ್ವೀ ಹೋಗು ಮಗನೇ ಈ ಮಾತುಗಳನ್ನು ನೀನು ಈಗ ತಿಳಿಯಲಾರೆ. ಆದರೆ ಅವು ಮುಂದೆ ನಿನಗೆ ಮರೆಯಲಾಗದ ಘಟನೆಗಳಾಗುತ್ತವೆ. ಸತ್ಯವಾಗಿಯೂ ಆ ಮಾತುಗಳು ಮರೆಯಲಾಗದ ಘಟನೆಗಳಾಗಿವೆ.
ಶಿಕ್ಷಕನು ಕಂಡ ಶಬರೀಮಲೆ ಅಯ್ಯಪ್ಪ
ಒಂದು ದಿನ ತರಗತಿಗೆ ತಡವಾಗಿ ಹೋದ ರಾಜಶೇಖರ್ ತರಗತಿಯ ಒಳಗೆ ಪ್ರವೇಶಿಸಲು ಶಿಕ್ಷಕನ ಅಪ್ಪಣೆಗಾಗಿ ಹೊರಗಡೆ ಪ್ರಾಂಗಣದಲ್ಲಿ ನಿಂತ. ಗಣಿತದ ಪಾಠ ನಡೆಯುತ್ತಿತ್ತು. ಶಿಕ್ಷಕನು ಸ್ವಾಮಿ ಅಯ್ಯಪ್ಪನ ಪರಮ ಭಕ್ತ. ತನ್ನ ಕೆಳಗೆ ಬಿದ್ದ ಗಣಿತದ ಪುಸ್ತಕವನ್ನು ತೆರೆಯಲು ಬಗ್ಗಿದ ಕೂಡಲೇ ಪ್ರಾಂಗಣದಲ್ಲಿ ಕಾಯುತ್ತಿದ್ದ ರಾಜಶೇಖರನು ಕಣ್ಣಿಗೆ ಬಿದ್ದ. ತಕ್ಷಣವೇ ಯಾವುದೋ ಒಂದು ಪ್ರಜ್ಞಾತೀತ ಸ್ಥಿತಿಯಲ್ಲಿ ಆಶ್ಚರ್ಯ ಭರಿತನಾದ ರಾಜಶೇಖರನನ್ನೇ ದಿಟ್ಟಿಸುತ್ತಾ, ತನ್ನ ಕೈಗಳೆರಡನ್ನು ಜೋಡಿಸಿ ನಮಸ್ಕಾರ ಮಾಡಿದ. ಸ್ವಲ್ಪ ಸಮಯದ ನಂತರ ತನ್ನ ಮನೆಗೆ ರಾಜಶೇಖರನನ್ನು ಕುಟುಂಬದ ಸದಸ್ಯರೊಡನೆ ಭೋಜನಕ್ಕೆ ಆಹ್ವಾನಿಸಿದ. ಅವರ ಮನೆಗೆ ಹೋದೊಡನೆಯೇ ಆ ಶಿಕ್ಷಕನು ರಾಜಶೇಖರನ ಕಾಲಿಗೆ ಬಿದ್ದು ನಮಸ್ಕರಿಸಿ, ತಾನು ಅವರ ಶಿಷ್ಯನೆಂದು ಘೋಷಿಸಿದ. ತಾನು ತರಗತಿಯಲ್ಲಿ ಅಯ್ಯಪ್ಪನ ದರ್ಶನವನ್ನು ಈ ಬಾಲಕನಲ್ಲಿ ಮಾಡಿದೆನೆಂದು ತಿಳಿಸಿದ. ಆ ಸಮಯದಲ್ಲಿ ರಾಜಶೇಖರನು ಮಾತೇ ಹೊರಡದಂತೆ ಮೂಕವಿಸ್ಮಿತನಾಗಿದ್ದ.