KAILASA Library/ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು/ಭೂಮಿಕಾSign in
ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು

ಭೂಮಿಕಾ

This text was machine-transcribed from the printed book and may contain errors. Select the words and choose “Report a mistake”.

ಮಾನವ ಜನ್ಮ ಅಮೌಲ್ಯವಾದುದು; ಪರಮ ಪಾವನವಾದುದು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಸಮರಸವಾಗಿ ಸಾಧಿಸಲು ಬರುವ ಧನ್ಯಜೀವನಕ್ಕೆ ಕಾರಣವಾದುದು. ಹೀಗಿದ್ದರೂ ಇದರ ಬೆಲೆಯನ್ನರಿಯದೆ ಬಹುಜನರು ತಾಪತ್ರಯಗಳಿಗೆ ಸಿಲುಕಿ ನೆಮ್ಮದಿ ಕಾಣದೆ ನರಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ವಿಷಾದಕ್ಕೆ ಕಾರಣ ಅಜ್ಞಾನಕ್ಕೆ ವಶರಾದ ಜನ ಆತ್ಮವೆಂಬುದು ಬೇರೆ ಇಲ್ಲ ದೇಹವೇ ಆತ್ಮ, ಶಾಶ್ವತ ಆತ್ಮ ಇರಬಹುದಾದರೂ ಅದನ್ನು ತಿಳಿಯುವ ಅವಶ್ಯಕತೆಯೂ ಇಲ್ಲ ಎಂದು ಭಾವಿಸಿದ್ದಾರೆ. ಆದುದರಿಂದ ಗೊತ್ತುಗುರಿಗಳಿಲ್ಲದ ಆಜ್ಞೇಯವಾದ ಪ್ರವಾಹವಾಗಿದೆ ಈ ಜೀವನ. ಆದುದರಿಂದ ಆಹಾರ, ನಿದ್ರೆ, ಜನಾಂಗವನ್ನು ಬೆಳೆಸುವಿಕೆ, ವಾದ ವಿವಾದ, ವಿನೋದ ವಿಲಾಸಗಳಲ್ಲಿ ರಮಿಸುವಿಕೆ, ಬುದ್ದಿಯ ವ್ಯಾಯಾಮದಿಂದ ಪ್ರಕೃತಿಯ ಕೆಲವು ರಹಸ್ಯಗಳನ್ನು ಭೇದಿಸಲು ಹೆಣಗಾಡುವಿಕೆ ಮತ್ತು ಈ ವಿಷಯಗಳ ಸಾಧನೆಯಲ್ಲಿ ಇತರರಿಗೆ ನೆರವಾಗುವಿಕೆ ಇಷ್ಟೇ ಜೀವನದ ಲಕ್ಷ್ಯ ಎಂದು ಮೊದಲಾದ ಸಿದ್ದಾಂತ ಮಾಡಿಕೊಂಡು ಸತ್ಯದಿಂದ ದೂರವಾಗುತ್ತಿದ್ದಾರೆ. ಹೀಗಿರುವಾಗ ಹಲವು ವಿಚಾರ ಪರರೂ, ಅಭ್ಯಾಸ ಶೂರರೂ ಆದ ಮಹನೀಯರು ಜೀವನದ ತಿರುಳು, ಪುರುಳು, ವಿಧಿ, ವಿಧಾನಗಳನ್ನು ತಪೋಜ್ಞಾನ ಸಮಾಧಿಗಳಿಂದ ತಿಳಿಯಲು ಹೊರಟು ಸಾಧನೆಯನ್ನು ಮಾಡಿ ಅದರ ಫಲವಾಗಿ ಇದ ಮಿತ್ಥಂ ಇದು ಹೀಗೆಯೇ ಎಂದು ನಿಷ್ಕರ್ಷೆಯಿಂದ ತಿಳಿದವರೂ ಉಂಟು. ಇವರೇ ಜ್ಞಾನಿಗಳು, ಮಹರ್ಷಿಗಳು, ಯೋಗಿಗಳು, ಸಂತರು. ಭಾರತ ಭೂಮಿಯ ಪವಿತ್ರ ವಾತಾವರಣದಲ್ಲಿ ಇಂತಹ ಮಹಾತ್ಮರು ವಿಶೇಷವಾಗಿ ಬೆಳೆದು ಬಂದು ತಮಾತ್ಮಸ್ಥಂ ಯೇನು ಪಶ್ಯಂತೀ ಧೀರಾಃ ತೇಷಾಂ ಶಾಂತೀ ಶಾಶ್ವತೀ ನೇತರೇಷಾಂ ಎಂದು ತಮ್ಮ ಅನುಭವವನ್ನು ಲೋಕಕ್ಕೆ ಘೋಷಿಸಿದರು. ಅಹಿಂಸೆ, ದಯೆ, ದಾನ ಮುಂತಾದ ಆತ್ಮಗುಣ ಸತ್ಕರ್ಮಗಳಿಗೂ ಪೂರ್ಣವಾದ ಸುಖಶಾಂತಿಗಳಲ್ಲಿಯೇ ವಿಶ್ರಾಂತಿಯೆಂಬು ದನ್ನು ತೋರಿಸಿಕೊಟ್ಟರು. ತಮ್ಮ ಅನುಭವದಿಂದ ಸಿದ್ಧವಾದ ಸತ್ಯಗಳಿಗನುಗುಣವಾಗಿ ಸಂಸ್ಕೃತಿ ನಾಗರೀಕತೆಗಳನ್ನು ರೂಪಿಸಿ ವಿದ್ಯೆಗಳ ಮತ್ತು ಕಲೆಗಳ ಮೂಲಕ ಶುದ್ಧವಾದ ಐಹಿಕ, ಪಾರಮಾರ್ಥಿಕ ಜೀವನಗಳ ವಿಧಾನವನ್ನು ದಯಪಾಲಿಸಿದರು. ಇದಕ್ಕನು ಗುಣವಾಗಿ ಸತ್ಸಂಪ್ರದಾಯ ದೇಹದಲ್ಲೂ ದೇಶದಲ್ಲೂ ದಯಪಾಲಿಸಿದರು.

ಇಂತಹವರ ಸಾಲಿನಲ್ಲಿ ಶ್ರೀರಾಮಕೃಷ್ಣ, ವಿವೇಕಾನಂದ, ರಮಣ, ಬುದ್ಧ, ಕ್ರೈಸ್ತ ಮುಂತಾದವರು ಅಗ್ರಗಣ್ಯರು. ಇತ್ತೀಚೆಗೆ ಈ ಸಾಲಿಗೆ ಸೇರ್ಪಡೆಯಾದ ಮಹಾನ್ ಯೋಗಿ, ಶ್ರೀ ಶ್ರೀ ಶ್ರೀ ನಿತ್ಯಾನಂದ ಪರಮಹಂಸರು. ಶ್ರೀ ನಿತ್ಯಾನಂದರು ಶ್ರೇಷ್ಠ ಗುರುಗಳು. ಅವರಲ್ಲಿ ಒಬ್ಬ ಯೋಗಿಯಲ್ಲಿರಬೇಕಾದ ಸಕಲ ಗುಣಗಳು ಅಂದರೆ, ಶೋತ್ರೀಯ, ಅಕುಟಿಲ, ಅಕಾಮಹತ, ಬ್ರಹ್ಮನಿಷ್ಠ, ಆತ್ಮಸಿದ್ಧ, ಸ್ಥಿರ ಬುದ್ಧಿ, ಅನಘ, ಸತ್ವಸ್ಥ, ಜಿತೇಂದ್ರಿಯ, ದೀರ್ಘ ಬಂಧು, ದಯಾಳು, ಡಂಭಪೂಜಾದಿ ರಹಿತ, ಸ್ವಪರ ಹಿತಪರ, ಬ್ರಹ್ಮದಲ್ಲಿ ಉಪರತ, ಪ್ರಶಾಂತ, ಮುಂತಾದ ಗುಣಗಳು ಮನೆ ಮಾಡಿಕೊಂಡಿವೆ.

ಅವರ ಮಾತುಗಳು ಯೋಚಿಸಿ ಸಂಧಾನ ಮಾಡಿದ ವಚನಗಳಲ್ಲ, ದೈವೀ ಸ್ಪೂರ್ತಿಯು ಸಹಜವಾಗಿ ತುಂಬಿದಾಗ ಚಿಮ್ಮಿ ಬರುತ್ತಿದ್ದ ಚೈತನ್ಯದ ಸ್ರೋತಸ್ಸುಗಳು; ಪರಮ ಪ್ರೇಮದಿಂದ ಧುಮುಕಿದ ವಿಷ್ಣು ನದಿಯ ಪ್ರವಾಹಗಳು; ಜಾಡ್ಯದ ದೈತ್ಯನನ್ನು ಹೊಡೆದೋಡಿಸುವ ನರಸಿಂಹನ ಸಿಂಹನಾದಗಳು; ಆತ್ಮ ವಿಜಯದ ದುಂಧುಭಿನಾದ ಗಳು; ಆತ್ಮಸಾಧನೆಯನ್ನು ಉದ್ಬೋಧಿಸುವ ಸುಪ್ರಭಾತ ಕಾಲದ ಮಂಗಳ ವಾದ್ಯ ಘೋಷಗಳು. ರಜಸ್ತಮೋಗುಣಗಳನ್ನು ದಾಟಿ, ತಪೋಜ್ಞಾನ ಸಮಾಧಿಗಳಿಂದ ಬಂದ ಆಪ್ತ ವಾಕ್ಯಗಳು. ಯಾರು ಆದಿಮಧ್ಯಾಂತ ರಹಿತರಾಗಿ, ಜರಾ, ಜನ್ಮ - ವ್ಯಾಧಿ -ವಿಪತ್ತಿಗಳಿಂದ ದೂರವಾಗಿರುವರೋ, ಯಾವ ಜ್ಞಾನ ಸೂರ್ಯನು ದಿವಿಯಿಂದ ಭುವಿ ಯವರೆಗೂ ತನ್ನ ಅವತಾರ ಚಕ್ರದ 27ನೇ ಪಾದ ವಿನ್ಯಾಸವನ್ನು ಮಾಡುತ್ತಿದ್ದಾರೆಯೋ, ಅಂತಹ ಶ್ರೀ ಶ್ರೀ ಶ್ರೀ ನಿತ್ಯಾನಂದ ಪರಮಹಂಸ ಯೋಗಿಗಳಿಗೆ ಪ್ರಾಣ ಪ್ರಣಾಮಗಳು.

ಪರಮಹಂಸ ನಿತ್ಯಾನಂದ ಸ್ವಾಮಿಗಳು ಸನಾತನ ಆರ್ಯ ಭಾರತದ ಸಂಸ್ಕೃತಿ ಪ್ರತೀಕಗಳಾದ, ವೇದ-ವೇದಾಂಗ, ಉಪನಿಷತ್ತು, ತಂತ್ರ, ಯಂತ್ರ, ಮಂತ್ರ, ಗೀತಾ ಪುರಾಣ ಇತಿಹಾಸಗಳಲ್ಲದೆ ಬೌದ್ಧ, ಜೈನ, ಸೂಫಿ, ವೈಷ್ಣವ, ಶೈವ, ಶಕ್ತ, ವೇದಾಂತ, ಕ್ರೈಸ್ತ, ಇಸ್ಲಾಂ ಮತಗಳ ಸಾರವನ್ನೆಲ್ಲಾ ಅಭ್ಯಸಿಸಿ, ಒಂದೂಗೂಡಿಸಿ ಸಮಸ್ತ ಜೀವಕೋಟೆಗಳ ಉದ್ಧಾರಕ್ಕಾಗಿ ಮತ್ತು ಅವರ ಭೌತಿಕ, ನೈತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸುಧಾರಣೆಗಾಗಿ ಧ್ಯಾನ-ಹೀಲಿಂಗ್-ಚಿಕಿತ್ಸೆಯ ಮೂಲಕ ಅಪಾರ ಸೇವೆಯಾಗುತ್ತಿದ್ದಾರೆ. ಇವೆಲ್ಲದ ಆನಂದ ಹೀಲಿಂಗ್, ಆನಂದ ಸ್ಫುರಣ ಪ್ರೋಕ್ಷಾಂ, ಆನಂದ ಸಂಪೋಕ್ಷೇಣ, ದುಃಖಹರಣ ಮುಂತಾದ ಇನ್ನೂ ಹಲವು ವಿಧವಾದ ಧ್ಯಾನದ ಆವಿಷ್ಕಾರಗಳನ್ನು ಜಗತ್ತಿನಲ್ಲಿರುವ ಎಲ್ಲಾ ಜೀವಕೋಟೆಗಳ ಉದ್ಧಾರಕ್ಕಾಗಿ ಕೊಟ್ಟಿದ್ದಾರೆ. ಇಂತಹ ಮಹಾಮಹಿಮರ ಜಯಂತಿಯ ಶುಭ ಪರ್ವದಂದು ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಸಂತೋಷ. ಭಗವದ್ವಿಷಯವಾದ ಈ ಗ್ರಂಥದ ಪ್ರಕಾಶನದಲ್ಲಿ ನಿರ್ಲಿಪ್ತ ನಿರಂಜನ ಭಾವದಿಂದ ನೆರವಾಗಿರುವ ನನ್ನ ಧ್ಯಾನಪೀಠದ ಸ್ವಯಂಸೇವಕರಿಗೂ, ಭಕ್ತರಿಗೂ ಓಂ ನಮೋ ನಿತ್ಯಾನಂದಾಯ ಎಂದು ಕೃತಜ್ಞತೆಯನ್ನು ಸಮರ್ಪಿಸೇನೇ. ಗುರುಸೇವೆಗೆ ಬೇಕಾದ ಆತ್ಮಶಕ್ತಿ, ಬುದ್ಧಿ ಶಕ್ತಿ, ಕಾರ್ಯಶಕ್ತಿಗಳನ್ನು ನಮ್ಮಲ್ಲಿ ತುಂಬುತ್ತಿರುವ ಶ್ರೀ ನಿತ್ಯಾನಂದ ಸ್ವಾಮಿಗಳ ಪಾದಾರವಿಂದದಲ್ಲಿ ಸಮರ್ಪಿಸಿ, ಪ್ರಸಾದ ರೂಪವಾಗಿರುವ ಈ ಗ್ರಂಥವನ್ನು ಸಹೃದಯರಾದ ಜನತಾ ಜನಾರ್ದನರಿಗೆ ಸಮರ್ಪಿಸುತ್ತೇನೆ.

ಬೆಂಗಳೂರು
ಗುರುವಾರ
1-1-2004

ಇತೀ
ಗುರುಪಾದರೇಣು
ರಘುನಾಥ

ನಿತ್ಯಾನಂದ ಜೀವನ ಗಂಗಾ

ಶ್ರೀ ಶ್ರೀ ನಿತ್ಯಾನಂದ ಪರಮಹಂಸ ಸ್ವಾಮಿಗಳ ಸಚಿತ್ರ ಮಾಲಿಕೆಗಳೊಂದೊಡ ಗೂಡಿದ ಸಂಕ್ಷಿಪ್ತ ಜೀವನ ಚರಿತ್ರೆ.

ಅವತಾರ: ನಿಜವಾದ ಧೈಯೋದ್ದೇಶಗಳು ಇದ್ದಲ್ಲಿ ಜ್ಞಾನವು ನಿಶ್ಚಯವಾಗಿ ಸಿಗುವುದು ಎಂಬುದನ್ನು ಜಗತ್ತಿಗೆ ತೋರಿಸಲು ಅರಳಿದ ಅದ್ಭುತವಾದ ಒಂದು ಸುಗಂಧಯುತವಾದ ಸುವರ್ಣ ಪುಷ್ಪವೇ ನಿತ್ಯಾನಂದ ಪರಮಹಂಸರು. ಇವರು ಸ್ವಸಾಮರ್ಥ್ಯದಿಂದ, ಸ್ವಾನುಭವದಿಂದ, ಕಾಲ ದೇಹ ದೇಶಗಳನ್ನು ಮೀರಿ ದೈವೀ ಶಕ್ತಿಯನ್ನು, ಸತ್ಯಸಾಕ್ಷಾತ್ಕಾರವನ್ನು ಪಡೆದಿರುತ್ತಾರೆ. ಜೀವನದಲ್ಲಿ ನೊಂದವರಿಗೆ - ಬೆಂದವರಿಗೆ ದಾರಿದೀಪವಾಗಿರುವವರು. ಆಧ್ಯಾತ್ಮಿಕ ಪಿಪಾಸುಗಳಿಗೆ ಶ್ರೇಷ್ಠವಾದ ಗುರುಗಳು.

ಬನ್ನಿರಿ ಈ ನಿತ್ಯಾನಂದ ಗಂಗೆಯಲ್ಲಿ ಮಿಂದು, ಪಾಪಗಳನ್ನು ಕಳೆದುಕೊಂಡು ಪುನೀತರಾಗೋಣ.

ಜನ್ಮ ರಹಸ್ಯ

ಕೇವಲ ಪದ ಪುಂಜಗಳಲ್ಲಿ ದೇಶಕಾಲಾತೀತವಾದ ಅನುಭವವನ್ನು ಹೊರವಡಿಸು ವುದು ಅಸಾಧ್ಯ ಆದರೂ ಪ್ರಯತ್ನಿಸುತ್ತೇನೆ ಎಂದು ಹೇಳಿ ಸ್ವಾಮೀಜಿಯವರು ಆಶ್ಚರ್ಯ ಮತ್ತು ಕುತೂಹಲ ಭರಿತರಾದ ಭಕ್ತಾದಿಗಳನ್ನು ಕುರಿತು ತಮ್ಮ ಅತ್ಯದ್ಭುತ ಮತ್ತು ಆಲೌಕಿಕ ಜನ್ಮ ರಹಸ್ಯವನ್ನು ಈ ಭೌಗೋಳಿಕ ಪ್ರಪಂಚಕ್ಕೆ ಅವತರಿಸಿದ ಪರಿಯನ್ನು ಈ ರೀತಿ ವಿವರಿಸಿದರು.

ನಾನು (ಆತ್ಮ) ಈ ಶರೀರವನ್ನು ಪ್ರವೇಶಿಸುವುದಕ್ಕೆ ಮೊದಲು ಪೂರ್ತಿಯಾಗಿ ಜಾಗ್ರತಾವಸ್ಥೆಯಲ್ಲಿದ್ದೆ. ಈ ಪೃಥ್ವಿಯು ಸಂಪೂರ್ಣವಾಗಿ ಕಡುಕತ್ತಲಿನಿಂದ ಆವರಿಸಿತ್ತು. ಇಡೀ ಜಗತ್ತೇ ಸಂಪೂರ್ಣವಾಗಿ ಮೌನವ್ರತವನ್ನು ಆಚರಿಸುತ್ತಿತ್ತು. ನನ್ನ ಕೆಳಗೆ ಪೃಥ್ವಿಯ ಒಂದು ಸಣ್ಣ ಭೂ ಭಾಗವು ಅಂದರೆ ದಕ್ಷಿಣ ಭಾರತವು ನನ್ನ ಅನುಭವಗ್ರಾಹ್ಯವಾಗಿತ್ತು. ತಕ್ಷಣದಲ್ಲಿ ಒಂದು ಪ್ರಕಾಶಮಯವಾದ ನಕ್ಷತ್ರ ಪುಂಜವು ಆಕಾಶದಲ್ಲಿ ಬೆಳಕಿನ ಒಂದು ಸ್ಫೋಟದಿಂದ ಪ್ರಜ್ವಲಿಸುತ್ತಿರುವುದನ್ನು ಕಂಡೆ. ಆ ಕ್ಷಣದಲ್ಲಿ ಮಿಂಚಿನಂತೆ ನಾನು ಈ ಶರೀರವನ್ನು ಧಾರಣೆ ಮಾಡಿ ಜನ್ಮ ತಾಳಿದೆ. ನನ್ನ ಮುಂದಿನ ದೃಗ್ಗೋಚರವೇ ಅರುಣಾಚಲ, ತಿರುವಣ್ಣಾಮಲೈಯಲ್ಲಿರುವ ಪವಿತ್ರತಮ ಪರ್ವತ ಶಿಖರ ಮತ್ತು ನಾನು ಮತ್ತೊಂದಾವರ್ತಿ ಶರೀರ ಧಾರಣ ಮಾಡಿದ ಘಟನ ಅನುಭವ ವೇದ್ಯವಾಗಿತ್ತು.