ದೇವಾಲಯಗಳು - ಸತ್ಯದ ಆಗರಗಳು
This text was machine-transcribed from the printed book and may contain errors. Select the words and choose “Report a mistake”.
2005ರಲ್ಲಿ ಅಮೇರಿಕಾದ ಟೆಕ್ಸಸ್ನಲ್ಲಿರುವ ಮೀನಾಕ್ಷೀ ದೇವಾಲಯದಲ್ಲಿ ಪರಮಹಂಸ ನಿತ್ಯಾನಂದರು ನೀಡಿದ- ‘ದೇವಾಲಯಗಳು - ಸತ್ಯದ ಆಗರಗಳು’ ಎಂಬ ಪ್ರವಚನದಿಂದ ಆಯ್ದ ಭಾಗಗಳು.
ವಿಶ್ವ ಶಕ್ತಿ ಮತ್ತು ಪಂಚ ಭೂತಗಳು
ಒಂದು ಮಿಂಚಿನ ಛಳುಕಿನಲ್ಲಿರುವ ಶಕ್ತಿಯನ್ನು ಒಂದು ವಿದ್ಯುತ್ ಕೋಶದಲ್ಲಿ (Battery) ಶೇಖರಿಸಲಾದರೆ ನೀವು ಒಂದು ಊರಿಗೆ ಒಂದು ವರ್ಷಕ್ಕೂ ಮಿಗಿಲಾಗಿ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡಬಹುದು ಎಂದು ಹೇಳಲಾಗುತ್ತದೆ! ವಿಶ್ವಶಕ್ತಿಯು ಅಷ್ಟೊಂದು ಅಗಾಧವಾದದ್ದು. ಈ ದೈವಿಕ ವಿಶ್ವಶಕ್ತಿಯು ನಮ್ಮ ಸುತ್ತಲೂ ಪಂಚಭೂತಗಳಾಗಿ ಆವರಿಸಿದೆ - ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶದ್ರವ್ಯ. ದೇವಸ್ಥಾನಗಳು ನಮಗಾಗಿ ಈ ಚೈತನ್ಯವನ್ನು ಸಂಗ್ರಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಕಟ್ಟಡಗಳು.
ಭೂಮಿಯ ಮೂಲಕ ಪೂಜೆ!
ದೇವಸ್ಥಾನಗಳಲ್ಲಿರುವ ಮೂರ್ತಿಗಳು ನಿರಾಕಾರವಾಗಿರುವ ವಿಶ್ವಶಕ್ತಿಯನ್ನು ಪ್ರತಿನಿಧಿ ಸುತ್ತವೆ. ವಿಗ್ರಹಗಳನ್ನು ಹಿತ್ತಾಳೆ, ತಾಮ್ರ, ಸೀಸ, ಬೆಳ್ಳಿ ಅಥವಾ ಚಿನ್ನ ಇಂತಹ ಭೂಮಿಯ ಮೂಲವಸ್ತುಗಳಿಂದ ತಯಾರಿಸಿರುತ್ತಾರೆ. ಆದ್ದರಿಂದ ವಿಗ್ರಹಾರಾಧನೆಯು ಭೂಮಿಯ ಮುಖೇನ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸುವುದಲ್ಲದೆ ಬೇರೇನಿಲ್ಲ! ನೀವು ವಿಗ್ರಹವನ್ನು ಪೂಜಿಸಿದರೆ, ನೀವು ದೈವಿಕವಾದ ವಿಶ್ವಶಕ್ತಿಯನ್ನು ಪೂಜಿಸುವಿರಿ.

ಆದುದರಿಂದ ವಿಗ್ರಹದ ಪೂಜೆಯು ವಿಗ್ರಹದ ಆಕಾರವನ್ನು ಪೂಜಿಸುವುದಾಗಿರುವುದಿಲ್ಲವೆಂದು ಅರಿಯುವುದು ಮುಖ್ಯ; ಅದು ವಿಗ್ರಹದ ಮುಖೇನ ವಿಶ್ವಶಕ್ತಿಯನ್ನು ಪೂಜಿಸು ವುದಾಗಿರುವುದು.
ನೀರಿನ ಮೂಲಕ ಚೈತನ್ಯವನ್ನು ಬಳಸಿ!
ಪವಿತ್ರ ನದಿಗಳ ನೀರಿನ ಮುಖಾಂತರ ವಿಶ್ವ ಶಕ್ತಿಯನ್ನು ಸುಲಭವಾಗಿ ಬಳಸಿಕೊಳ್ಳಬಹುದು.

ಆದುದರಿಂದಲೇ ಗಂಗಾ ಮತ್ತು ಇತರ ಅಂತಹ ಪವಿತ್ರ ನದಿಗಳಲ್ಲಿ ಸ್ನಾನಮಾಡುವುದನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಬಹಳ ದೇವಸ್ಥಾನಗಳು ನೀರಿನಿಂದ ಕೂಡಿದ ಕಲ್ಯಾಣಿಗಳನ್ನು ಹೊಂದಿದ್ದು ಅವುಗಳು ವಿಶ್ವಶಕ್ತಿಯ ಭಂಡಾರವಾಗಿರುತ್ತವೆ. ನೀವು ಪವಿತ್ರ ನದಿಗಳಲ್ಲಿ ಅಥವಾ ಈ ಕೊಳಗಳಲ್ಲಿ ಮುಳುಗೆದ್ದರೆ, ನೀವು ದೈವಿಕವಾದ ಪ್ರಪಂಚ ಶಕ್ತಿಯೊಂದಿಗೆ ಸಂಪರ್ಕಿಸಿರುತ್ತೀರಿ.
ಅಗ್ನಿಯ ಮುಖಾಂತರ ಅನುಭವಿಸಿ!
ದೇವಸ್ಥಾನಗಳಲ್ಲಿ ವಿಶ್ವಶಕ್ತಿಯನ್ನು ಆವಾಹನೆ ಮಾಡಿ ವಿಸರಿಸಲು ಅಗ್ನಿಹೋಮಗಳನ್ನು ಮಾಡುತ್ತಾರೆ. ಅಗ್ನಿ ಮುಖೇನ ವಿಸರಣವಾದ ವಿಶ್ವಶಕ್ತಿಯನ್ನು ಶೇಖರಿಸಿಟ್ಟ ನೀರಿಗೆ ರವಾನಿಸಲ್ಪಡುತ್ತದೆ, ಮತ್ತು ಈ ನೀರಿನಿಂದ ದೇವಸ್ಥಾನದ ದೇವರುಗಳಿಗೆ ಅಭಿಷೇಕ

ಮಾಡುತ್ತಾರೆ. ಆದ್ದರಿಂದ ಈ ಅಗ್ನಿಹೋಮಗಳು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ದೇವರುಗಳ ಪವಿತ್ರತೆಯನ್ನು ಮಾಡಲು ಅನುವಾಗುವುದು. ಅಗ್ನಿ ಹೋಮಗಳನ್ನು ಕೇವಲ ನೋಡುವುದೇ ದೈವಿಕವಾದ ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಶ್ರಮವಿಲ್ಲದ ಮಾರ್ಗವಾಗಿರುವುದು. ಹಾಗೆಯೇ ಅನೇಕ ದೇವಸ್ಥಾನಗಳ ಗರ್ಭಗುಡಿಯ ದ್ವಾರಗಳ ಬಳಿ ಹಚ್ಚಿರುವ ಹಣತೆಯಲ್ಲಿ ಅಗ್ನಿಯನ್ನು ನೀವು ಕಾಣಬಹುದು.
ವಾಯುವಿನ ಮೂಲಕ ಕಂಪಿಸಿ!
ನೀವು ಮಂತ್ರಗಳನ್ನು ಉಚ್ಚರಿಸಿದಾಗ ಗಾಳಿಯ ಮೂಲಕ ವಿಶ್ವಶಕ್ತಿಯನ್ನು ಬಳಸಿಕೊಳ್ಳ ಬಹುದು. ದೇವಸ್ಥಾನಗಳಲ್ಲಿ ಮಂತ್ರಗಳನ್ನು ನಿರಂತರವಾಗಿ ಉಚ್ಚರಿಸಲಾಗುತ್ತದೆ. ಮಂತ್ರಗಳು

ಶಕ್ತಿಯ ಉಚ್ಛಾರಣೆಗಳು. ಇವುಗಳ ಕಂಪನಗಳು ಅಲ್ಲಿರುವ ಗಾಳಿಯಲ್ಲಿ ತುಂಬಿ ಅದನ್ನು ಶಕ್ತಿಯುತಗೊಳಿಸುವುವು. ಮಂತ್ರೋಚ್ಛಾರಣೆಯಿಂದ ದೇವಸ್ಥಾನದಲ್ಲಿರುವ ಗಾಳಿಯು ಶುದ್ಧವಾಗಿಯೂ ಮತ್ತು ಶಕ್ತಿಯುತವಾಗಿಯೂ ಇರುವುದು. ಮಂತ್ರೋಚ್ಛಾರಣೆಯಾಗುತ್ತಿರುವ ಸ್ಥಳದಲ್ಲಿ ಕೇವಲ ಇರುವುದ ರಿಂದಲೇ ದೈವಿಕವಾದ ವಿಶ್ವಶಕ್ತಿಯ ನಡುವೆ ಇರಲು ಸಾಕಾಗುವುದು.
ಆಕಾಶ ದ್ರವ್ಯದ ಮೂಲಕ ಪುನರುಜ್ಜೀವನ ಹೊಂದಿ!
ಪಂಚಮಹಾಭೂತಗಳಲ್ಲಿ ಒಂದಾದ ಆಕಾಶದ್ರವ್ಯವು ದೈವಿಕವಾದ ವಿಶ್ವಶಕ್ತಿಯ

ಬಹುಮುಖ್ಯವಾದ ರೂಪವಾಗಿದೆ. ಅದು ನಮ್ಮ ಸುತ್ತಲೂ ಇರುವ ಸ್ಥಳವನ್ನು ತುಂಬಿಸಿರುತ್ತದೆ. ದೇವಸ್ಥಾನದ ಕಟ್ಟಡವೇ ಆಕಾಶದ್ರವ್ಯದ ಗರಿಷ್ಠ ಶಕ್ತಿಯನ್ನು ಸಂಗ್ರಹಿಸುವ ಒಂದು ವಿದ್ಯುತ್ ಕೋಶ (battery) ದಂತೆ ವಿನ್ಯಾಸಗೊಳಿಸಲಾಗಿದೆ. ನೀವು ಧ್ಯಾನ ಮಾಡಿದರೆ, ಈ ಸೂಕ್ಷ್ಮವಾದ ಆಕಾಶದ್ರವ್ಯದ ಶಕ್ತಿಯನ್ನು ಬಳಸಿಕೊಂಡು ಅದರ ಮುಖೇನ ದೈವದೊಂದಿಗೆ ಸಂಪರ್ಕವನ್ನು ಹೊಂದಬಹುದು. ಆದುದರಿಂದಲೇ ಅನೇಕ ದೇವಸ್ಥಾನಗಳು ಧ್ಯಾನಮಂಟಪ ಗಳನ್ನು ಅವುಗಳ ಒಂದು ಭಾಗವಾಗಿ ಹೊಂದಿರುತ್ತವೆ.
ದೇವಸ್ಥಾನಗಳಲ್ಲಿ ಜ್ಞಾನೋದಯ ಹೊಂದಿದ ಗುರುಗಳ ಪಾತ್ರ
ಒಬ್ಬ ಧನಿಕನು ಮರಣ ಹೊಂದಿದಾಗ, ಅವನು ತನ್ನ ಸಂಪತ್ತನ್ನು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಬಿಟ್ಟು ಹೋಗುತ್ತಾನೆ. ಜ್ಞಾನೋದಯ ಹೊಂದಿದ ಗುರುಗಳು ದೇಹತ್ಯಾಗ ಮಾಡಿದಾಗ, ಅವರು ತಮ್ಮ ಶಕ್ತಿ, ತಪಸ್ಸು ಮತ್ತು ಒಳ್ಳೆಯತನವನ್ನು ಸಮಸ್ತ ಜನ ಸಮುದಾಯಕ್ಕೆ ಬಿಟ್ಟು ಹೋಗುತ್ತಾರೆ. ದೇವಸ್ಥಾನಗಳನ್ನು ಅವರು ಬಿಟ್ಟು ಹೋದ ಈ ಶಕ್ತಿಯ ಕ್ಷೇತ್ರಗಳಲ್ಲಿ ಕಟ್ಟುತ್ತಾರೆ.
ಈ ದೇವಾಲಯಗಳನ್ನು ಗುರುಗಳು ಅವರು ಜೀವಂತವಾಗಿರುವಾಗಲೇ ಕಟ್ಟಿರುತ್ತಾರೆ, ಇಲ್ಲವೇ ಗುರುಗಳು ದೇಹತ್ಯಾಗ ಮಾಡಿದ ನಂತರ ಜನಗಳು ಅವುಗಳನ್ನು ಕಟ್ಟುತ್ತಾರೆ. ಈ ದೇವಾಲಯಗಳನ್ನು ದೈವಿಕವಾದ ವಿಶ್ವಶಕ್ತಿಯನ್ನು ಬಳಸುವ ಶಾಸ್ತ್ರವಿಧಿಗಳಿಂದ ಮತ್ತಷ್ಟು ಪವಿತ್ರಗೊಳಿಸಲಾಗುತ್ತದೆ. ಈ ದೇವಾಲಯಗಳು ಜನ ಸಮುದಾಯಕ್ಕೆ ಈ ಮಹಾನ್ ಗುರುಗಳ ದೈವಿಕವಾದ ಉಡುಗೊರೆಗಳು.
ಮಾನವ ಸಮೂಹದಲ್ಲಿ ಎರಡು ವರ್ಗ: ಮೊದಲನೆಯ ವರ್ಗದವರು ಸೌರವ್ಯೂಹ ರಚನೆಯಂತೆ ಸ್ವಯಂ ಓಜಸ್ಸನ್ನು ಉತ್ಪಾದಿಸುವವರು. ಅವರು ಎಲ್ಲೇ ಇದ್ದರೂ, ಅವರು ಶಕ್ತಿಯನ್ನು ಉತ್ಪಾದಿಸುವರು; ಶಕ್ತಿಯನ್ನು ಪಸರಿಸುವರು. ಅವರು ಏನೇ ಮಾಡಿದರೂ, ಅದರಲ್ಲಿ ಹಿರಿಮೆಯನ್ನು ಹೊಂದುವರು; ಯಾವುದನ್ನು ಮುಟ್ಟಿದರೂ ಅದು ಅಭಿವೃದ್ಧಿ ಹೊಂದುವುದು. ಅವರೇ ಪ್ರಪಂಚವನ್ನು ಪೋಷಿಸುವವರು. ಅವರೇ ಜ್ಞಾನೋದಯ ಹೊಂದಿದ ಗುರುಗಳು!
ಎರಡನೆಯ ವರ್ಗದ ಜನರೆಂದರೆ ಅವರ ಒಳಗಿನ ಆಕರದಿಂದ ಶಕ್ತಿಯನ್ನು ಉತ್ಪಾದಿಸುವ ಕಲೆಯನ್ನು ಮರೆತಿರುವವರು. ಅವರು ಅಭಿವೃದ್ಧಿ ಹೊಂದಬಹುದು, ಆದರೆ ಅದು ಕೇವಲ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರವಿದ್ದು ಅದೂ 'ಮನಸ್ಸು' ಎಂದು ಕರೆಯುವ ಮೇಲ್ಮೈನ ಶಕ್ತಿಯ ಆಕರದಿಂದ ಮಾತ್ರವಾಗಿರುವುದು. ಅವರ ಶಕ್ತಿಯ ಆಕರವು ಮೇಲ್ಮೈನದಾಗಿರುವುದರಿಂದ, ಅವರಿಗೆ ಬಹು ಆಯಾಮದ ಏಳಿಗೆಯು ಕನಸಾಗಿಯೇ ಉಳಿಯುವುದು. ಇವರೇ ಪ್ರಪಂಚದ ಸಾಮಾನ್ಯವರ್ಗದ ಜನರು. ಮೊದಲನೆಯ ವರ್ಗದ ಜನರು ಎರಡನೆಯ ವರ್ಗದ ಜನರಿಗೆ ಶಕ್ತಿಯನ್ನು ಕೊಡುವ ಮೂಲಕ ಸಹಾಯ ಮಾಡುತ್ತಾರೆ; ಸಾಧಿಸಲು ನಿಖರವಾದ ತಂತ್ರಜ್ಞಾನವನ್ನು ಅವರಿಗೆ ಕೊಡುವ ಮೂಲಕವಾಗಿ.
ವೇದದ ವಿಜ್ಞಾನದ ಪ್ರಕಾರ, ದೇವರ ವಿಗ್ರಹದಲ್ಲಿ ಶಕ್ತಿಯನ್ನು ಸ್ಥಾಪನೆಗೊಳಿಸಲು ಎರಡು ಮಾರ್ಗಗಳಿವೆ; ಒಂದು ಆಗಮ ಪ್ರತಿಷ್ಠೆ ಇನ್ನೊಂದು ಪ್ರಾಣಪ್ರತಿಷ್ಠೆ.
ಆಗಮ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾಪನವು ಎರಡನೆಯ ವರ್ಗದ ಜನರಿಂದ ನಡೆಯುತ್ತದೆ. ಅದು ಸಾಮಾನ್ಯವಾಗಿ ಮಂತ್ರೋಚ್ಚಾರಣೆಯಿಂದಲೇ ನಡೆಯುತ್ತದೆ. ಈ ವಿಧಾನವು ಕೆಲವೇ ವೋಲ್ಟ್ (Volt) ಗಳಷ್ಟು ಮಾತ್ರದ ಶಕ್ತಿಯನ್ನು ಪ್ರತಿಷ್ಠಾಪಿಸುತ್ತದೆ. ಶಕ್ತಿಯ ತೀವ್ರತೆಯು ಮಂತ್ರಗಳ ಸ್ವಭಾವ, ಅದನ್ನು ಪಠಿಸಿದ ನಿಖರತೆ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಪಠಿಸುತ್ತಿರುವ ವ್ಯಕ್ತಿಯ ಮಾನಸಿಕ ಸ್ಥಿತಿಗೆ ಅನುಗುಣವಾಗಿ ನಿರ್ಧಾರಿತವಾಗಿರುತ್ತದೆ.
ಪ್ರಾಣ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾಪನವು ಮೊದಲನೆಯ ವರ್ಗದ ಜನರಿಂದ ನಡೆಯುತ್ತದೆ. ಇಡಿಯ ವಿಶ್ವವನ್ನೇ ಪೋಷಿಸುತ್ತಿರುವ ದೈವಿಕ ವಿಶ್ವಶಕ್ತಿಯ ನೇರ ಸಂಪರ್ಕದಿಂದ ಅದು ಸಂಭವಿಸುವುದು.
ಮೊದಲನೆಯ ವರ್ಗದ ಪರಮಜ್ಞಾನಿಗಳಾದ (ಜ್ಞಾನೋದಯ ಹೊಂದಿದ) ಗುರುಗಳು ದೈವಿಕ ವಿಶ್ವಶಕ್ತಿಯ ಹರಿಯುವಿಕೆಗೆ ಶುದ್ಧ ಕಾಲುವೆಗಳಾಗಿರುವರು. ಅವರು ಪ್ರತಿಷ್ಠಾಪನೆಗೊಳಿಸಲು ಬಯಸುವ ಶಕ್ತಿಯ ಯಾವ ಪ್ರಕಟಣೆಯಾಗಿರಬೇಕೆಂಬುದನ್ನು ಅವರು ಆಯ್ಕೆ ಮಾಡಬಲ್ಲರು. ಅವರು ಸಂಪತ್ತಿನ ಶಕ್ತಿಯನ್ನೋ, ಆರೋಗ್ಯ ಶಕ್ತಿಯನ್ನೋ, ಕರ್ಮವನ್ನು ಬರಿದುಮಾಡಿ
ಜ್ಞಾನೋದಯ ಹೊಂದಿದ
ಗುರುಗಳು ದೇವಸ್ಥಾನದಲ್ಲಿ
ಶಕ್ತಿಯನ್ನು ಪ್ರತಿಷ್ಠಾಪಿಸಿದಾಗ,
ಒಡನೆಯೇ ಆ ದೇವಸ್ಥಾನವು
ಒಂದು ವಿಶ್ವಶಕ್ತಿಯ
ಆಲಯವಾಗುವುದು!
ಒಬ್ಬರನ್ನು ಜೀವನ್ಮರಣ ಚಕ್ರದಿಂದ ಬಿಡುಗಡೆ ಮಾಡುವ ಶಕ್ತಿಯನ್ನೋ, ಅಥವಾ ಬೇರೆ ಇನ್ನಾವುದಾದರೂ ಶಕ್ತಿಯ ವಿಧವನ್ನೋ ಪ್ರತಿಷ್ಠಾಪನೆ ಮಾಡಬಲ್ಲರು. ಸಮಾಜದ ಒಳಿತಿಗಾಗಿ, ಗುರುಗಳು ಆಂತರಿಕ ಪ್ರಪಂಚದ ವಿಜ್ಞಾನದ ಮೇಲೆ ಕೆಲಸಮಾಡಿ, ದೈವಿಕ ಶಕ್ತಿಯ ವಿವಿಧ ರೂಪಗಳನ್ನು ಚರಿತ್ರಾರ್ಹ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇಂದು, ಪ್ರತಿಯೊಂದು ಚರಿತ್ರಾರ್ಹ ದೇವಸ್ಥಾನವೂ ಅದರದೇ ಮಹತ್ವವನ್ನು ಹೊಂದಿದೆ. ಪ್ರತಿ ದೇವರ ವಿಗ್ರಹವೂ, ಪ್ರತಿಷ್ಠಾಪಿಸಲಾದ ಶಕ್ತಿಗೆ ಅನುಗುಣವಾಗಿ, ಅದರದೇ ವರವನ್ನು ನೀಡುತ್ತದೆ. ಆದುದರಿಂದಲೇ ಸಂತಾನ ಭಾಗ್ಯಕ್ಕಾಗಿ ನೀವು ಒಂದು ನಿಧಿ ಷ್ಟವಾದ ದೇವಸ್ಥಾನಕ್ಕೆ ಹೋಗುವಿರಿ; ನಿಮ್ಮ ಅನುರೂಪವಾದ ವ್ಯಕ್ತಿಯನ್ನು ಮದುವೆಯಾಗಲು, ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ; ಗ್ರಹಗಳ ಪರಿಣಾಮಗಳನ್ನು ಉಲ್ಲಂಘಿಸಲು ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ, ಹಣಕಾಸಿನ ಸಮಸ್ಯೆಗೆ ನೀವು ಮತ್ತೊಂದು ದೇವಸ್ಥಾನಕ್ಕೆ ಹೋಗುವಿರಿ. ಈ ಉಪಯೋಗಗಳೆಲ್ಲವೂ ವಿಶೇಷ ಶಕ್ತಿಯ ಪೊಟ್ಟಣಗಳಲ್ಲದೆ ಬೇರೇನೂ ಅಲ್ಲ! ದೇವಸ್ಥಾನಗಳು ಜ್ಞಾನೋದಯ ಹೊಂದಿದ ಗುರುಗಳ ಉಪಸ್ಥಿತಿಗೆ ಬದಲಿಯಾದ ಕಟ್ಟಡಗಳು. ಗುರುಗಳು ತಮ್ಮ ಉಪಸ್ಥಿತಿಯಿಂದಲೇ ಜನಗಳನ್ನು ಗುಣಪಡಿಸುವರು; ಅವರು ಭೌತಿಕ ಹಂತದಲ್ಲಿ ಮಾತ್ರವಲ್ಲದೇ ಅಸ್ತಿತ್ವದ ಹಂತದಲ್ಲಿಯೂ ಗುಣಪಡಿಸುವರು. ಅವರು ಆಧ್ಯಾತ್ಮಿಕತೆಗಾಗಿ ಸ್ಫೂರ್ತಿಯನ್ನು ಜೀವಂತವಾಗಿಡು ವರು. ಅವರ ಉಪಸ್ಥಿತಿಯು ಪಾವಿತ್ರ್ಯತೆಯ ವಾತಾವರಣವನ್ನು ನೀಡುವುದು. ದೇವಸ್ಥಾನಗಳು ಗುರುಗಳಿಂದ ನಿರ್ಮಿತವಾದ ಸ್ಥಳಗಳಾಗಿದ್ದು ಅವರು ನೀಡುತ್ತಿದ್ದದ್ದನ್ನೇ ನೀಡಲು ಇರುವುವು.
ಆನಂದೇಶ್ವರ ದೇವಸ್ಥಾನವನ್ನು ಸಂಪ್ರೋಕ್ಷಣೆಯಿಂದ ಪವಿತ್ರಗೊಳಿ ಸುತ್ತಿದ್ದಾಗ್ದ, ಪರಮಹಂಸ ನಿತ್ಯಾನಂದರು ಹೇಳಿದರು:
'ಒಬ್ಬ ಜ್ಞಾನೋದಯ ಹೊಂದಿದ ಗುರುಗಳು ಮನುಷ್ಯರೂಪದಲ್ಲಿರುವ ವಿಶ್ವಶಕ್ತಿ - ಪವಿತ್ರ ಸಂಪ್ರೋಕ್ಷಣೆಯನ್ನು ಮಾಡಲು ಅರ್ಹರಾಗಿರುವ ಅತಿ ಶ್ರೇಷ್ಠ ಮಾನವ ರೂಪ. ಪರಮಜ್ಞಾನಿಯಾದ ಗುರುಗಳಿಗೆ ಯಾವ ವಿಧದಲ್ಲಿಯೂ ಅಭಿವ್ಯಕ್ತಿಗೊಳಿಸುವ ಚೈತನ್ಯವು ಬರಿದಾಗುವುದೇ ಇಲ್ಲ.' ಉದಾಹರಣೆಗೆ, ಸಾಮಾನ್ಯ ಮನುಷ್ಯನಿಗೆ, ದುಃಖದ ಮನೋ ಭಾವನೆಯೋ ಅಥವಾ ಸಂತಸದ ಮನೋಭಾವನೆಯೋ ಕಣ್ಣೀರಿನ ಮೂಲಕ ಅಭಿವ್ಯಕ್ತಗೊಂಡರೆ ಅದು ಬರಿದಾಗುವುದು; ದೇಹದ ಪಿತ್ತವು (ಮೂಲವಸ್ತು ವಾದ ಅಗ್ನಿ) ಕೋಪದ ಮೂಲಕ ಬರಿದಾಗುವುದು; ಲೈಂಗಿಕ ಕ್ರಿಯೆಯಿಂದ ಕಾಮವು ಬರಿದಾಗುವುದು, ಮಾತುಗಳು ಹೊರಬಂದ ಕೂಡಲೆ ಅವನ ಜೊಲ್ಲಿನಲ್ಲಿ ಅವನ ವಾಕ್ಶಕ್ತಿಯು ಬರಿದಾಗುತ್ತದೆ. ಈ ಎಲ್ಲ ಅಭಿವ್ಯಕ್ತತೆಯ ಶಕ್ತಿಗಳು ಅವನು ಅವುಗಳನ್ನು ಉಪಯೋಗಿಸಿದಾಗ ಬರಿದಾಗುತ್ತವೆ.
ಒಬ್ಬ ಪರಮಜ್ಞಾನಿಯ ಅಭಿವ್ಯಕ್ತತೆಯ ಶಕ್ತಿಯು ಈ ಯಾವುದೇ ರೀತಿಯಿಂದ ಬರಿದಾಗಲಾರದು, ಏಕೆಂದರೆ ಅವರೇ ಮನುಷ್ಯರೂಪದಲ್ಲಿರುವ ವಿಶ್ವ ಶಕ್ತಿ, ಬರಿದಾಗಲಾರದ ಚೈತನ್ಯದ ಆಗರ. ಮತ್ತು ಗುರುಗಳಿಗೆ ಅವರ ಕೆಲಸಗಳನ್ನು ನಡೆಸಲು ದೇಹದ ಅವಶ್ಯಕತೆ ಇಲ್ಲದಿರುವುದರಿಂದ, ಅವರು ತಮ್ಮ ಭೌತಿಕ ದೇಹವನ್ನು ತ್ಯಜಿಸಿದಾಗಲೂ ತಮ್ಮ ಕೆಲಸಗಳನ್ನು ಮಾಡುತ್ತಲೇ ಇರುವರು.
ಅವರಿಂದ ಪಾವನಗೊಳಿಸಿ ಸಚೇತನಗೊಳಿಸಲ್ಪಟ್ಟ ಸ್ಥಳಗಳು ಬರಿದಾಗದ ಚೈತನ್ಯವನ್ನು ಪಸರಿಸುತ್ತವೆ ಮತ್ತು ಅದನ್ನು ಅರಸುತ್ತಾ ಬಂದ ಪ್ರತಿ ಜೀವಿಯನ್ನೂ ಪೋಷಿಸುತ್ತದೆ. ಕೇವಲ ತಮ್ಮ ದೇಹದ ಸಹಾಯವಿಲ್ಲದೆ ಕೆಲಸ ನಡೆಸಬಲ್ಲ ಗುರು ಮಾತ್ರವೇ ತಾವು ಮಾಡುವ ರೀತಿಯಲ್ಲೇ ಕಾರ್ಯಗಳು ಸಿದ್ಧಿಸುವಂತೆ ಮಾಡುವ ಒಂದು ನೈಜವಾದ ಪವಿತ್ರ ಸ್ಥಳವನ್ನು ನಿರ್ಮಿಸಬಲ್ಲರು!'
