ಶ್ರೀ ಆನಂದೇಶ್ವರ - ಆನಂದೇಶ್ವರಿ
This text was machine-transcribed from the printed book and may contain errors. Select the words and choose “Report a mistake”.
ಶ್ರೀ ಆನಂದೇಶ್ವರ ದೇವಸ್ಥಾನವು ಪರಮಹಂಸ ನಿತ್ಯಾನಂದರ ಒಂದು ದಿವ್ಯ ದೃಷ್ಟಿ, ಅದು ಮಾನವ ಜನಾಂಗಕ್ಕೆ ಒಂದು ಕೊಡುಗೆ. ಅದು ಸಾಂಪ್ರದಾಯಿಕ ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಕಲ್ಲಿನ ದೇವಸ್ಥಾನ.
ಈ ಸಹಸ್ರಮಾನದ ಪರಮಜ್ಞಾನಿ ಪರಮಹಂಸ ನಿತ್ಯಾನಂದರು ಇಲ್ಲಿ ಪ್ರಾಣ ಪ್ರತಿಷ್ಠೆ
- ಅಂದರೆ ಕೇವಲ ಪರಮಜ್ಞಾನಿಗಳಾದ ಗುರುಗಳಿಂದ ಮಾತ್ರ ಸಾಧ್ಯವಾಗುವ ಶಕ್ತಿ ಪ್ರತಿಷ್ಠಾಪನೆಯ ವಿಶೇಷ ವಿಧಿವಿಧಾನ ಮಾಡಿರುವರು. ಹೀಗೆ ಮಾಡುವಾಗ ಅವರು ಇಂದು ಭೂಗ್ರಹದಲ್ಲಿ ಒಂದು ಅಪರೂಪವಾದ ಶಿವ ಶಕ್ತಿಯ ಕ್ಷೇತ್ರವನ್ನು ಸಮರ್ಪಿಸಿದ್ದಾರೆ. ಇಲ್ಲಿ ಅವರು ಅನೇಕ ಆಯಾಮಗಳ ಅಂಶಗಳ ಶಕ್ತಿಯನ್ನು ನೆಲೆಗೊಳಿಸಿದ್ದಾರೆ. ಯಾರೇ ಈ ಶಕ್ತಿಯ ಕ್ಷೇತ್ರಕ್ಕೆ ಬಂದರೂ ಅವರು ತಮ್ಮ ಕಷ್ಟಗಳಿಗೆ ಅವು ಭೌತಿಕವಾಗಿರಲಿ, ಇಲ್ಲವೇ ಮಾನಸಿಕವಾಗಿರಲಿ, ಆಧ್ಯಾತ್ಮಿಕವಾಗಿರಲಿ ಅಥವಾ ಹಣಕಾಸಿನ ವಿಷಯವಾಗಿರಲಿ - ತತ್ಕ್ಷಣದ ಪರಿಹಾರವನ್ನು ಹೊಂದುತ್ತಾರೆ.
ಪರಮಹಂಸ ನಿತ್ಯಾನಂದರ ಜನ್ಮದಿನದ ಜಯಂತಿಯ ಸಮಾರಂಭಕ್ಕೆ ಸರಿಹೊಂದಿದಂತೆ 1ನೇ ಜನವರಿ 2007ರಂದು ಕುಂಭಾಭಿಷೇಕದೊಡನೆ ಆನಂದೇಶ್ವರ ದೇವಸ್ಥಾನವನ್ನು ಉದ್ಘಾಟಿಸಲಾಯಿತು.
ಇಲ್ಲಿ ಶಿವನು ಶ್ರೀ ಆನಂದೇಶ್ವರನ ರೂಪದಲ್ಲಿಯೂ ಮತ್ತು ಅವನ ಪತ್ನಿ ಆನಂದೇಶ್ವರಿಯ ರೂಪದಲ್ಲಿಯೂ ಇರುವರು. ವಿಗ್ರಹಗಳು 7½ ಅಡಿ ಎತ್ತರವಿದ್ದು 2½ ಟನ್ ತೂಗುತ್ತವೆ. ಆನಂದೇಶ್ವರಿಯು ಆನಂದೇಶ್ವರನ ಎಡತೊಡೆಯ ಮೇಲೆ ಕುಳਿਤಿದ್ದು ಶಿವಾಲಯಗಳಲ್ಲಿಯೇ ಒಂದು ಅಪರೂಪವಾದ ದೃಶ್ಯವನ್ನು ನೀಡುತ್ತದೆ. ಈ ದೃಶ್ಯವು ಶಿವನು ವಿಜ್ಞಾನ ಭೈರವ ತಂತ್ರವನ್ನು ತನ್ನ ಪತ್ನಿಯಾದ ದೇವಿಗೆ ಬಹಳ ಆತ್ಮೀಯತೆಯಿಂದ ನೀಡುತ್ತಿರುವುದನ್ನು ರೂಪಿಸುತ್ತದೆ.
ವಿಜ್ಞಾನ ಭೈರವ ತಂತ್ರವು ಜ್ಞಾನೋದಯಕ್ಕಾಗಿ ಶಿವನ ಧ್ಯಾನ-ಕೈಪಿಡಿ. 5000ಕ್ಕೂ ಹೆಚ್ಚು ವರ್ಷಗಳ ಹಿಂದೆ ಶಿವನು ದೇವಿಗೆ ನೀಡಿದ 112 ಧ್ಯಾನತಂತ್ರಗಳಿಂದ ಕೂಡಿದೆ.
ಶ್ರೀ ಆನಂದೇಶ್ವರನು ತನ್ನ ಬಲಗೈನಲ್ಲಿ ಡಮರುಗವನ್ನು ಹಿಡಿದಿರುವನು. ಡಮರುಗವ ಶಬ್ದವು ಸೃಷ್ಟಿಯ ಮೊದಲ ಶಬ್ದವನ್ನು ಸಂಕೇತಿಸುತ್ತಿದ್ದು ಅದರಿಂದ ಸಮಸ್ತ ಸೃಷ್ಟಿಯೂ ಸಂಭವಿಸಿತೆಂದು ಹೇಳಲಾಗುತ್ತದೆ. ಅವನ ಎಡದ ಕೈ ಅಗ್ನಿಯನ್ನು ಹಿಡಿದಿದ್ದು ಅದು ಇನ್ನೂ ಅಧಿಕ ಸೃಷ್ಟಿಯು ಸಂಭವಿಸಲು ಒಂದು ಸ್ಥಳದ ಸೃಷ್ಟಿಯನ್ನು ಸಂಕೇತಿಸುತ್ತದೆ! ಅವನ ಮೂರನೆಯ ಕೈ ಸಾಂಕೇತಿಕವಾಗಿ ಅಭಯ( ರಕ್ಷಣೆ) ವನ್ನು ತೋರಿಸುತ್ತದೆ ಮತ್ತು ಅವನ ನಾಲ್ಕನೆಯ ಕೈ ದೇವಿಯನ್ನು ಹಿಡಿದುಕೊಂಡಿದೆ. ಅವನ ಬಲದ ಕಣ್ಣು ಸೂರ್ಯನ ಸಂಕೇತವಾಗಿದ್ದು ಎಡದ ಕಣ್ಣು ಚಂದ್ರನ ಸಂಕೇತವಾಗಿರುತ್ತದೆ. ಹುಬ್ಬುಗಳ ನಡುವೆ ಇರುವ ಅವನ ಮೂರನೆಯ ಕಣ್ಣು ಅಗ್ನಿಯನ್ನು ಸಂಕೇತಿಸುತ್ತದೆ. ಅವನ ಬಲಗಾಲು ಕೆಳಗೆ ನೇತಾಡುತ್ತಿದ್ದು ಅದು ಜನರನ್ನು ಮಾಯೆಯಲ್ಲಿರಿಸುತ್ತದೆ, ಆಗ ಅವರಿಗೆ ಸ್ಪಷ್ಟತೆಯು ಸಂಭವಿಸಲಿ ಎಂದಾಗಿರುತ್ತದೆ. ದೇವಿಯು ಕುಳಿತಿರುವ ಅವನ ಎಡಗಾಲು ಜನರಿಗೆ ಜ್ಞಾನೋದಯವನ್ನು ನೀಡಿ ಮುಕ್ತರನ್ನಾಗಿಸುತ್ತದೆ!
ಆನಂದೇಶ್ವರಿಯು ತನ್ನ ಬಲಗೈನಲ್ಲಿ ಕುಮುದ ಪುಷ್ಪವನ್ನು ಹಿಡಿದಿರುವಳು. ಸೂರ್ಯನ ಬೆಳಕು ಬಿದ್ದಾಗ, ಹೇಗೆ ಕಮಲದ ಹೂ ಅರಳುತ್ತದೆಯೋ ಹಾಗೆ ಚಂದ್ರನ ಬೆಳಕು ಬಿದ್ದಾಗ ಕುಮುದ ಪುಷ್ಪವು ಅರಳುವುದೆಂದು ಪ್ರತೀತಿ! ಇದು ಆನಂದೇಶ್ವರಿಯ ಹೃದಯವು ಅವನಿಗಾಗಿ ಅರಳುತ್ತಿರುವುದನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಅವಳ ಎಡದ ಕೈ, ನೀಡುತ್ತಿರುವ ಭಂಗಿಯಲ್ಲಿದ್ದು ಆನಂದೇಶ್ವರನಿಂದ ಪಡೆದ ಜ್ಞಾನೋದಯವನ್ನು ಇಡಿಯ ಮಾನವ ಕುಲಕ್ಕೆ ನೀಡುತ್ತಿರುವುದನ್ನು ಸೂಚಿಸುತ್ತದೆ!
ಯಾವುದೇ ಪ್ರಾರ್ಥನೆಯನ್ನು
ಅತೀವ ಶಕ್ತಿಯುತವಾದ
ಸನ್ನಿಧಿಯಲ್ಲಿಟ್ಟರೆ, ಆ
ಪ್ರಾರ್ಥನೆಯು ಹಾಗೆಯೇ
ನೆರವೇರುತ್ತದೆ.
ಗರ್ಭಗುಡಿಯು ಆಶ್ರಮದ ದೀಕ್ಷೆಪಡೆದ ಬ್ರಹ್ಮಚಾರಿಗಳಿಂದ ಆಧ್ಯಾತ್ಮಿಕ ವಿಧಿಗಳ ಮುಖಾಂತರ ಸತತವಾಗಿ ಸಚೇತನಗೊಳಿಸಲ್ಪಡುತ್ತಿರುತ್ತದೆ. ವಿಶೇಷ ಸಂದರ್ಭ ಗಳಲ್ಲಿ 1008 ಬಗೆಯ ಆಹಾರ ವಸ್ತುಗಳನ್ನು ಇಲ್ಲಿ ಅರ್ಪಿಸಲಾಗುತ್ತದೆ.

ಶ್ರೀ ಆನಂದೇಶ್ವರ ದೇವಸ್ಥಾನದ ಗರ್ಭಗುಡಿ
ಸ್ವಯಂಭು ಲಿಂಗ
- ಸಹಜವಾಗಿ ಉದ್ಭವವಾದ ಶಿವಲಿಂಗ

ಸ್ವಯಂಭು ಲಿಂಗ
ದೇವಾಲಯಕ್ಕೆ ಸೇರಿ
ಕೊಂಡಂತಿರುವ ಪವಿತ್ರವಾದ
ಆಲದ ಮರದಲ್ಲಿ ಸಹಜವಾಗಿ
ನಿರ್ಮಾಣವಾಗಿರುವ ಗುಹೆ
ಯೊಂದಿದೆ. ಸ್ವಯಂಭು
ಲಿಂಗವು (ಸಹಜವಾಗಿ
ಉದ್ಭವವಾದ ಶಿವಲಿಂಗ)
ಮೊದಲು ಈ ಗುಹಾದ್ವಾರ
ದಲ್ಲಿ ದೊರಕಿತು. ಇದನ್ನು
ಈಗ ಆನಂದೇಶ್ವರ
ದೇವಾಲಯ ಗರ್ಭ
ಗುಡಿಯಲ್ಲಿ ಪ್ರತಿಷ್ಠಾಪನೆ
ಮಾಡಲಾಗಿದೆ. ಇಲ್ಲಿ ಆಲದ
ಮರ ಮತ್ತು ಸ್ವಯಂಭು
ಲಿಂಗವು ಅನಾದಿ
ಕಾಲದಿಂದಲೂ ಇದೆ.
ವರ್ಷಗಳ ನಂತರ, ಆಲದ
ಮರವು ಬೆಳೆದು ತನ್ನ
ಬೇರುಗಳನ್ನು ಹರಡಿದೆ.
ಪರಮಹಂಸ ನಿತ್ಯಾನಂದರು ಹೇಳುತ್ತಾರೆ, ‘ಈ ಸ್ವಯಂಭು ಲಿಂಗವು ದೈವಿಕ ಶಕ್ತಿಯ ಭಂಡಾರವಾಗಿದೆ. ಅದು ನಿರಂತರವಾಗಿ ಪಸರಿಸುತ್ತಿರುವ ಚೈತನ್ಯವು, ಈ ಧ್ಯೇಯೋದ್ದೇಶದ ರಾಜ್ಯವಾದ ಧ್ಯಾನಪೀಠ ಮಹಾಸಂಸ್ಥಾನವನ್ನು ನಿರ್ಮಿಸು ತ್ತಿರುವುದು. ಅದಕ್ಕೆ ಅದನ್ನು ಅರಸುತ್ತಿರುವವರ ಕರ್ಮಗಳನ್ನು ದಹಿಸುವ ಶಕ್ತಿಯಿದೆ. ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾದ ಪೂರೈಸಲಾಗದೇ ಇರುವ ಕಾರ್ಯಗಳಲ್ಲದೇ ಬೇರೇಲ್ಲ.’
ಅನುಭಾವದ (metaphysical) ಅರ್ಥದಲ್ಲಿ, ಈ ಲಿಂಗದ ಶಕ್ತಿಯುತವಾದ ಇರುವು ಸಮಯ ಮತ್ತು ಸ್ಥಳವನ್ನು ದಾಟಿ ಅನಾದಿಕಾಲದಿಂದಲೂ ಇಲ್ಲಿದೆ. ಅದನ್ನು ಪೂಜಿಸುವವರಿಗೆ ಹೊರ ಪ್ರಪಂಚದಲ್ಲಿ ಉತ್ಕೃಷ್ಟತೆಯನ್ನೂ ಮತ್ತು ಆಂತರಿಕ ಪ್ರಪಂಚದಲ್ಲಿ ತೇಜಸ್ಸನ್ನೂ ಉಂಟುಮಾಡುವುದು.
ಸಹಜವಾಗಿ ಉದ್ಭವವಾದ
ಈ ಲಿಂಗವು, ಅದನ್ನು
ಅರಸುತ್ತಾ ಬಂದವರಿಗೆ
ಸಹಜವಾದ ಬುದ್ಧಿವಂತಿಕೆ
ಯನ್ನು
ಪ್ರಚೋದಿಸುತ್ತದೆ!

ಸ್ವಯಂಭು ಲಿಂಗಕ್ಕೆ ಅಭಿಷೇಕ / ಮಂಗಳ ಸ್ನಾನ
ಉಪಶಮನಕಾರಕ ವೃಕ್ಷ (healing tree) ಮತ್ತು ಕಲ್ಪವೃಕ್ಷ

ಕಲ್ಪವೃಕ್ಷ - ಇಷ್ಟಾರ್ಥಗಳನ್ನು ಪೂರೈಸುವ ಮರ! ಪವಿತ್ರ ಆಲದಮರ
ಪರಮಹಂಸ ನಿತ್ಯಾನಂದರ ಆಧ್ಯಾತ್ಮಿಕ ದೃಷ್ಟಿಗೆ ಗೋಚರವಾದ ಮತ್ತು ಆಶ್ರಮದಲ್ಲಿ ಮಾರ್ಗದರ್ಶಕ ಶಕ್ತಿಯೆಂದು ಪೂಜಿಸಲ್ಪಡುತ್ತಿರುವ ಈ ಪವಿತ್ರ ಆಲದ ಮರವು ಆಶ್ರಮದ ಚೈತನ್ಯದ ಕೇಂದ್ರ ಭಾಗವಾಗಿದೆ.
ಅದು ಉಪಶಮನಗೊಳಿಸುವಂತಹ ದೈವಿಕ ಚೈತನ್ಯವನ್ನು ಪಸರಿಸುತ್ತದೆ. ಸಿದ್ಧಿಸುವ ಹಾಗೆ ನಿಮ್ಮ ಆಸೆಗಳನ್ನು ಸಶಕ್ತಗೊಳಿಸುತ್ತದೆ. ಅನುಭಾವದ (metaphysical) ಅರ್ಥದಲ್ಲಿ ಅದು ಅನಾದಿಕಾಲದಿಂದಲೂ ಇಲ್ಲಿದೆ. ಅದು ಒಂದು ಸ್ಥಳವನ್ನು ಒಳಗೊಂಡಿದ್ದು ಸಾಂಕೇತಿಕವಾಗಿ ಶಂಭಾಲ ಎಂಬ ಜ್ಞಾನೋದಯ ಹೊಂದಿದ ಗುರುಗಳ ಸ್ಥಳದೊಂದಿಗೆ ಆನುಭಾವದ ಸಂಬಂಧ ಹೊಂದಿರುತ್ತದೆ. 'ಶಂಭಾಲವು ವಿಶ್ವದ ಕೇಂದ್ರ ಮತ್ತು ಸಪ್ತ ಋಷಿಗಳ ಅನುಭಾವದ ವಾಸಸ್ಥಾನವಾಗಿರುವುದು. ಅದೊಂದು ಆಧ್ಯಾತ್ಮಿಕ ಅನುಭವ.
ಯಾರೊಬ್ಬರು ಗಂಗೋತ್ರಿ ಮತ್ತು ಗೋಮುಖದ ಆಚೆಗಿರುವ 17,500 ಅಡಿಗಳಿಗೂ ಮಿგილಾದ ಎತ್ತರದಲ್ಲಿರುವ ಹಿಮಾಲಯದ ತಪೋವನದಿಂದ ಶಂಭಾಲವನ್ನು ತಲುಪಬಹುದು. ಭೂಗ್ರಹದ ಮೇಲೆ ಕೆಲವೇ ಕೆಲವು ಶಕ್ತಿಯ ಕ್ಷೇತ್ರಗಳು ಶಂಭಾಲಕ್ಕೆ ಹೋಗುವ ಹಾರುದಾಣಗಳಾಗಿರುತ್ತೆ (air strips) . ಈ ಆಲದ ಮರವು ಅಂತಹ ಒಂದು ಶಕ್ತಿಯ ಕ್ಷೇತ್ರ!’, ಎಂದು ಪರಮಹಂಸ ನಿತ್ಯಾನಂದರು ಹೇಳುತ್ತಾರೆ.
ಈ ಸ್ಥಳವು ಮೂರು ಮರಗಳಿ೦ದೊಡಗೂಡಿದೆ.
ಅತ್ತಿ (Fig), ಆಲ (Banyan), ಮತ್ತು ಅರಸ(ಅರಳಿ) (Peepal)

ಇವುಗಳು ಪುಷ್ಪಗಳಿಲ್ಲದೇ ಫಲವನ್ನು ಬಿಡುವುವು. ವೇದ ಸಂಪ್ರದಾಯದಲ್ಲಿ ಇವುಗಳು ಪವಿತ್ರವಾದ ವೃಕ್ಷಗಳಾಗಿದ್ದು ವನಸ್ಪತಿ ಅಥವಾ ‘ಅರಣ್ಯ ರಾಜ’ ಎಂದು ಕರೆಯಲ್ಪಡುತ್ತವೆ. ಈ ಮೂರು ವೃಕ್ಷಗಳು ಕಂಡುಬಂದರೆ ಅಲ್ಲಿ ಬನಶಂಕರ ಅಥವಾ ಶಿವನು ವಾಸಿಸುವನೆಂದು ಪ್ರತೀತಿ!

ಈ ದೈವಿಕ ಕ್ಷೇತ್ರದಲ್ಲಿ ಪುನರುಜ್ಜಿವನವನ್ನು
ಹೊಂದಿರಿ! ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ
ಇದರ ಗುಣಪಡಿಸುವ ಚೈತನ್ಯವನ್ನು ಅನುಭವಿಸಿ.
ನಿರಾಯಾಸವಾಗಿ ಧ್ಯಾನದಲ್ಲಿ ಮಗ್ನರಾಗಿರಿ.
ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಕನಸುಗಳನ್ನು
ನನಸಾಗಿಸಬಲ್ಲ ಒಂದು ವರವನ್ನು ಮನೆಗೆ
ಕೊಂಡೊಯ್ಯಿರಿ.
ಭೂಗ್ರಹದ ಮೇಲಿನ ಒಂದು ವಿರಳವಾದ ಶಕ್ತಿಯ ಕ್ಷೇತ್ರ