KAILASA Library/శ్రీ ఆనందేశ్వర దేవాలయం &/ಭಗವಾನ್‌ ದಕ್ಷಿಣಾಮೂರ್ತಿSign in
శ్రీ ఆనందేశ్వర దేవాలయం &

ಭಗವಾನ್‌ ದಕ್ಷಿಣಾಮೂರ್ತಿ

This text was machine-transcribed from the printed book and may contain errors. Select the words and choose “Report a mistake”.

ಪವಿತ್ರ ಆಲದ ಮರದಡಿಯಲ್ಲಿ ಭಗವಾನ್ ದಕ್ಷಿಣಾಮೂರ್ತಿಯು ಕುಳಿತಿರುವನು.

ಭಗವಾನ್ ದಕ್ಷಿಣಾಮೂರ್ತಿ

ದಕ್ಷಿಣ ಎಂದರೆ ದಕ್ಷಿಣ
ದಿಕ್ಕೆಂದೂ ಮೂರ್ತಿ
ಎಂದರೆ ದೇವರು ಎಂದೂ
ಅರ್ಥ.

ದಕ್ಷಿಣ ದಿಕ್ಕಿನತ್ತ ಮುಖ
ಮಾಡಿಕೊಂಡು ಕುಳಿತಿರುವ
ಹಿಂದುಗಳ ದೇವರು,
ಬಹುಶಃ ದಕ್ಷಿಣಾಮೂರ್ತಿ
ಒಬ್ಬನೇ.

ದಕ್ಷಿಣಾಮೂರ್ತಿಯು,
ವಾಸ್ತವವಾಗಿ ಆದಿಕಾಲದ
ಪ್ರಪಥಮ ಹಾಗೂ ಮಹಾರ್
ಗುರುವಾಗಿ ಕುಳಿತಿರುವ
ಶಿವನು. ಗುರುವಾಗಿ ಅವನು
ಮೌನದ ಮುಖೇನ ಮತ್ತು
ಅವನ ಸರ್ವವ್ಯಾಪ್ತಿಯಾಗಿ
ರುವ ಅರಿವಿನ (con-

ಭಗವಾನ್ ದಕ್ಷಿಣಾಮೂರ್ತಿ

sciousness) ಮುಖೇನ ಬೋಧಿಸುವುದರಲ್ಲಿ ಅವನ ಅನನ್ಯತೆಯು ಇರುವುದು.

ದಕ್ಷಿಣಾಮೂರ್ತಿ ಸ್ತೋತ್ರಂ ನಲ್ಲಿ ದಕ್ಷಿಣಾಮೂರ್ತಿಯನ್ನು ಕುರಿತು ಶಂಕರರು ಹಾಡಿರುವ ಸ್ತೋತ್ರವೊಂದು ಇದೆ.

ಚಿತ್ರಂ ವಟ ತರೋರ್ ಮೂರ್ಲೆ
ವೃದ್ಧಾಃ ಶಿಷ್ಯಾ ಗುರೂರ್ ಯುವಾಃ
ಗುರೋಸ್ತು ಮೌನಂ ವ್ಯಾಖ್ಯಾನಂ
ಶಿಷ್ಯಾಸ್ತು ಭಿನ್ನ ಸಂಶಯಾಃ

ಆಲದ ಮರದ ಕೆಳಗೆ ವೃದ್ಧರಾದ ಶಿಷ್ಯರು ಕುಳಿತಿರುವರು ಗುರುವಾದರೋ ಕೇವಲ ಯುವಕ ! ಗುರುವು ಮೌನ ಮುಖೇನ ಮಾತ್ರ ಮಾತನಾಡುವನು ಆದೋ! ಶಿಷ್ಯರ ಸಂಶಯಗಳೆಲ್ಲವೂ ತಮ್ಮಷ್ಟಕ್ಕೇ ಕರಗಿಹೋಗುವುವು!

ದಕ್ಷಿಣಾಮೂರ್ತಿ

ಅರಿವಿನ (consciousness) ಚಿಹ್ನೆಯನ್ನು ತೋರಿಸುತ್ತಿರುವ, ಆನಂದವೇ ಮೂರ್ತಿವೆತ್ತಿರುವ, ಋಷಿ ಮುನಿಗಳಿಂದ ಸುತ್ತುವರಿ ದಿರುವ, ಪರಮ ಸತ್ಯತೆಯಲ್ಲಿ ನೆಲೆಸಿರುವ, ವಯಸ್ಸಿನಲ್ಲಿ ಎಳೆಯವನಾಗಿರುವ, ಮೌನ ದಿಂದ ಸತ್ಯವನ್ನು ವ್ಯಾಖ್ಯಾನಿಸು ತ್ತಿರುವ ಆದರೆ ನಿಜದಲ್ಲಿ ವಾಕ್ಚತುರನಾಗಿರುವ ... ಇದು ಈ ಶಕ್ತಿಯ ಕ್ಷೇತ್ರದ ಒಬ್ಬ ಯುವ ಜ್ಞಾನಿಯನ್ನು, ಈ ದೇವಸ್ಥಾನದ ಸ್ಥಾಪಕ ಮತ್ತು ಗುರುವನ್ನು ನೆನಪಿಗೆ ತರುತ್ತದೆ!