ಆನಂದೇಶ್ವರನೊಂದಿಗೆ ಸಹಭಾಗಿತ್ವ ಹೊಂದಿ!
This text was machine-transcribed from the printed book and may contain errors. Select the words and choose “Report a mistake”.
ಸಹಭಾಗಿ ಎಂಬ ಪದದ ಅರ್ಥ ಒಬ್ಬ
ಬಾಳ ಸಂಗಾತಿ ಎಂದೋ, ವ್ಯವಹಾರದ
ಭಾಗಸ್ಥ ಎಂದೋ, ಸಹಪ್ರಯಾಣಿಕ
ಎಂದೋ, ಇಲ್ಲವೇ ಬೇರಿನ್ಯಾವುದಾದರೂ
ಸಂಬಂಧವನ್ನು ಒಳಗೊಂಡಿರುವ
ವಿಷಯವಾಗಿರಬಹುದು.
ಇಂದು, ಎಲ್ಲ ಸಹಭಾಗಿತ್ವ (partner-
ship) ಗಳಲ್ಲೂ ವ್ಯವಹಾರದ
ಸಹಭಾಗಿತ್ವಗಳು ಅತಿ ಹೆಚ್ಚು
ಆತಂಕವನ್ನು ಉಂಟುಮಾಡುವುದು.
ಒಂದು ವ್ಯವಹಾರದ ಸಹಭಾಗಿತ್ವವು
ಯಶಸ್ವಿಯಾಗಬೇಕಾದರೆ, ಬುದ್ಧಿವಂತಿಕೆ
ಮತ್ತು ಸ್ಪೂರ್ತಿಯು ಇರಬೇಕಾಗು
ವುದು. ಯಾವ ಸಹಭಾಗಿತ್ವದಲ್ಲಾದರೂ
ಸಹ, ನೀವು ಬುದ್ಧಿವಂತಿಕೆಯನ್ನು ಸೇರಿಸಿ
ದರೆ, ಅದು ಯಶಸ್ವಿಯಾಗುವುದು.
ನೀವು ಬುದ್ಧಿವಂತಿಕೆಯನ್ನು ಬಿಟ್ಟರೆ, ಆ
ಸಹಭಾಗಿತ್ವಕ್ಕೆ ನೀವು ‘ನಷ್ಟ’ ಎಂದು
ಹೇಳುವ ಪರಿಣಾಮವು ಉಂಟಾಗು
ವುದು. ಇಂದು ಪ್ರಪಂಚದಲ್ಲಿ ಅನೇಕ
ವ್ಯವಹಾರಗಳಿವೆ. ಅವುಗಳಿಗೆ ಹೇಗೆ
ಬುದ್ಧಿವಂತಿಕೆಯನ್ನು ಸೇರಿಸಬೇಕೆಂದು
ನಿಮಗೆ ತಿಳಿದಿದ್ದರೆ, ಅವುಗಳಿಂದ ನಿಮಗೆ
ತಕ್ಕ ಪ್ರತಿಫಲವು ಸಿಗುವುದು! ಅದು
ಯಾವುದೇ ವ್ಯವಹಾರವಾಗಿದ್ದರೂ
ಪರವಾಗಿಲ್ಲ.
ಬುದ್ಧಿವಂತಿಕೆಯು ಚೈತನ್ಯವಲ್ಲದೆ ಬೇರೇ
ನಲ್ಲ ಎಂಬುದು ನಿಮಗೆ ಗೊತ್ತಿತ್ತೇ?
ವಿಶ್ವದ ದೈವಿಕ ಶಕ್ತಿಯೇ ಪರಮೋಚ್ಚ
ಬುದ್ಧಿವಂತಿಕೆ. ಅದನ್ನೇ ವಿಶ್ವದ
ಬುದ್ಧಿವಂತಿಕೆ (Cosmic Intelige-
nce) ಎಂದು ಕರೆಯುವರು.
ಈ ಬುದ್ಧಿವಂತಿಕೆಯೇ ವಿಶ್ವದ ಇಡೀ
ನಾಟಕವನ್ನು ನಡೆಸುತ್ತಿರುವುದು. ನಾವು
ಪವಿತ್ರವಾದ ಗಾಯತ್ರಿಮಂತ್ರ-ವಿಶ್ವದ
ಬುದ್ಧಿವಂತಿಕೆಯು ನಮ್ಮ ಒಳಗಿನ ಧೀಃ
ಶಕ್ತಿಯನ್ನು ಹೊತ್ತಿಸಲು ಪ್ರಾರ್ಥನೆ ಯನ್ನು
ಜಪಿಸುವಾಗ ಈ ಬುದ್ಧಿವಂತಿಕೆಯನ್ನೇ
ನಾವು ಸಂಗ್ರಹಿಸಲು ಪ್ರಯತ್ನಿಸುವುದು.
ವಿಶ್ವಕ್ಕೆ ಅಥವಾ ದೈವಕ್ಕೆ ಶಕ್ತಿ ಮಾತ್ರವಿದ್ದು
ಬುದ್ಧಿಯು ಇರುವುದಿಲ್ಲವೆಂದು
ಯಾವಾಗಲೂ ತಿಳಿದುಕೊಂಡಿರುತ್ತೇವೆ.
ನಾವು ನಮ್ಮ ಸ್ವಂತ ಬುದ್ಧಿಯನ್ನು
ಉಪಯೋಗಿಸಿಕೊಂಡು ದೈವಕ್ಕೆ ಶಕ್ತಿಗಾಗಿ
ಬೇಡಿಕೊಳ್ಳುತ್ತಾ ಯಶಸ್ಸನ್ನು ಕಾಣ
ಬಹುದೆಂದು ಯಾವಾಗಲೂ ನಂಬು
ತ್ತೇವೆ. ಇಲ್ಲಿಯೇ ನಾವು ತಪ್ಪನ್ನು ಮಾಡು
ತಿರುವುದು. ವಿಶ್ವಕ್ಕೆ ಶಕ್ತಿ ಮತ್ತು ಬುದ್ಧಿ
ಎರಡೂ ಇರುವುದು. ವಿಶ್ವದ ಬುದ್ಧಿ
ವಂತಿಕೆಯೇ ನೀವು ತಿನ್ನುತ್ತಿರುವ ರೊಟ್ಟಿ
ಯನ್ನು ನಿಮ್ಮ ದೇಹದಲ್ಲಿ ರಕ್ತವನ್ನಾಗಿ
ಮಾಡುತ್ತಿರುವುದು! ವಿಶ್ವದ ಬುದ್ಧಿವಂತಿ
ಕೆಯೆ ಈ ವಿಶ್ವದ ಪ್ರತಿಯೊಂದು ಜೀವ
ಬಲವನ್ನು ನಡೆಸುತ್ತಿರುವುದು. ಅದು
ದೈವಿಕವಾದ ಮತ್ತು ಬರಿದಾಗಲಾರ
ದಂತಹ 'ಚೈತನ್ಯ - ಬುದ್ಧಿವಂತಿಕೆ'.
ನೀವು ಒಬ್ಬ ಬುದ್ಧಿವಂತ ಹೂಡಿಕೆದಾರ
ರಾಗಿದ್ದರೆ ನೀವು ಬೇರೆಲ್ಲಿಯಾದರೂ
ಹೂಡುವ ಮೊದಲು ಈ 'ಚೈತನ್ಯ -
ಬುದ್ಧಿವಂತಿಕೆ'ಯಲ್ಲಿ ಹೂಡುವಿರಿ!
ಆನಂದೇಶ್ವರನು ಈ ದೈವಿಕ 'ಚೈತನ್ಯ -
ಬುದ್ಧಿವಂತಿಕೆ'ಯ ವ್ಯಕ್ತಿತ್ವ. ಅವನು
ಅಸ್ಪಷ್ಟವಾದ ವಿಶ್ವದ ಬುದ್ಧಿವಂತಿಕೆಯ ಸ್ಪಷ್ಟ
ರೂಪ. ಅವನನ್ನು ನಿಮ್ಮ ವ್ಯವಹಾರದ
ಭಾಗಸ್ಥನನ್ನಾಗಿ ಸೇರಿಸಿಕೊಳ್ಳುವುದರಿಂದ
ನೀವು ವಿಶ್ವದ ಬುದ್ಧಿವಂತಿಕೆಯನ್ನು ಪ್ರಜ್ಞಾ
ಪೂರಕವಾಗಿ ಅಂಗೀಕರಿಸುತ್ತಿದ್ದೀರಿ, ನಿಮ್ಮ
ವ್ಯವಹಾರದ ಸಾಹಸಕ್ಕೆ ತೊಡಗುವ ಮುನ್ನ
ನಿಮ್ಮ ಮನಸ್ಸನ್ನು ವಿಶ್ವದ ಬುದ್ಧಿವಂತಿಕೆ
ಯಲ್ಲಿ ವಿಶ್ರಾಂತಗೊಳಿಸುವಿರಿ; ನೀವು
ನಿಮ್ಮ ಪ್ರಜ್ಞೆ (consciousness)
ಯಲ್ಲಿ ಒಂದು ಅಂತರದೊಂದಿಗೆ
ಕೆಲಸಮಾಡುವಿರಿ; ನೀವು ಫಲಿತಾಂಶದಲ್ಲಿ
ಭಯವಿಲ್ಲದ ವಿಶ್ವಾಸದೊಂದಿಗೆ ಕೆಲಸ
ಮಾಡುವಿರಿ. ಅವನಲ್ಲಿ ಹೂಡುವುದ
ರಿಂದ, ನೀವು ಅಪ್ರಜ್ಞಾಪೂರಕವಾಗಿ
ಉನ್ನತ ಬಹು ಆಯಾಮದ ಶಕ್ತಿ
ಗಳೊಂದಿಗೆ ಸಂಬಂಧಗಳನ್ನು ಬೆಳೆಸಿ
ಕೊಳ್ಳುತ್ತೀರಿ. ಈ ಚೈತನ್ಯಗಳು ಯಾವುದೇ
ಕ್ಲಿಷ್ಟಕರ ಸಮಸ್ಯೆಯನ್ನಾದರೂ ಆನಂದ
ದಿಂದ ನಿಭಾಯಿಸಲು ನಿಮ್ಮನ್ನು
ಸಶಕ್ತಗೊಳಿಸುತ್ತಲಿರುವುವು. ಇವೆಲ್ಲಕ್ಕಿಂತ
ಮಿಗಿಲಾಗಿ, ದೈವತ್ವದೊಂದಿಗೆ ಸಹ
ಭಾಗಿತ್ವವನ್ನು ಹೊಂದುವುದರಿಂದ ನೀವು
ದೈವತ್ವವನ್ನು ಹೊಂದುವತ್ತ ತನ್ನಷ್ಟಕ್ಕೇ
ಅದು ನಿಮ್ಮನ್ನು ನಡೆಸುತ್ತದೆ.
ಇನ್ನೂ ಮುಂದುವರೆದಂತೆ, ಯಾವುದೇ
ಸಹಭಾಗಿತ್ವವು ನಡೆಯಬೇಕಾದರೆ,
ಎರಡೂ ಭಾಗಸ್ಥರು ನಂಬಿಕೆಯನ್ನು ಮತ್ತು
ವಿಶ್ವಾಸವನ್ನು ಹೊಂದಿರಬೇಕು. ನಿಮ್ಮ
ನಿಮ್ಮ ವ್ಯವಹಾರ ಸಾಹಸವನ್ನು ದೈವಿಕ ಸಾಹಸವನ್ನಾಗಿ ಪರಿವರ್ತಿಸಿ!
ಭಾಗಸ್ಥನಲ್ಲಿ ನೀವೆಷ್ಟು ವಿಶ್ವಾಸವನ್ನು
ಹೊಂದಿರುವಿರೋ, ಅಷ್ಟು ಯಶಸ್ಸನ್ನು
ನೀವು ನಿಮ್ಮ ವ್ಯವಹಾರದಲ್ಲಿ ಕಾಣುವಿರಿ.
ನಿಮ್ಮ ಭಾಗಸ್ಥನ ಮೇಲೆ ನೀವೆಷ್ಟು
ನಂಬಿಕೆಯನ್ನು ಇಡುವಿರೋ ಅಷ್ಟರ
ಮಟ್ಟಿಗೆ ಯಶಸ್ಸನ್ನು ನೀವು ನಿಮ್ಮ
ಸಂಬಂಧದಲ್ಲಿ ಕಾಣುವಿರಿ. ದೈವತ್ವ
ದೊಂದಿಗೆ ಸಹಭಾಗಿತ್ವವನ್ನು ಹೊಂದಿ
ದಾಗ ನಂಬುಗೆ ಮತ್ತು ವಿಶ್ವಾಸಗಳು
ಅತ್ಯುನ್ನತ ಮಟ್ಟದಿಂದ ಮೊದಲಾಗುವುವು
ಮತ್ತು ಇದೇ ನಿಮ್ಮಿಂದ ಪ್ರಚಂಡವಾದ
ಕಾರ್ಯಕ್ಷಮತೆಯನ್ನು ಹುಟ್ಟುಹಾಕು
ವುದು. ಇಂತಹ ಪವಿತ್ರವಾದ ದೈವಿಕ
ಶಕ್ತಿಯೊಂದಿಗೆ ನಂಟು ಮಾಡಿಕೊಳ್ಳಿ. ನಿಮ್ಮ
ಸುತ್ತಲೂ ಹೇಗೆ ಕೆಲಸಗಳು ಪೂರೈಸು
ವುವೆಂಬುದನ್ನು ವೀಕ್ಷಿಸಿ. ಆನಂದೇಶ್ವರನ
ವಾತ್ಸಲ್ಯಮಯವಾದ ಕೈಗಳಲ್ಲಿ ವಿರಮಿಸಿ
ಮತ್ತು ನಿಮ್ಮ ಬೆಳವಣಿಗೆಯನ್ನು ವೀಕ್ಷಿಸಿ.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಶಮನಕಾರಕ ವೃಕ್ಷ