ದೇವಸ್ಥಾನದ ಇಣುಕು ನೋಟಗಳು
This text was machine-transcribed from the printed book and may contain errors. Select the words and choose “Report a mistake”.
ಭಾರತೀಯ ದೇವಸ್ಥಾನಗಳು ಮಾನವ ದೇಹದ ಸಾಂಕೇತಿಕ ಪ್ರತಿಬಿಂಬ. ಬ್ರಹ್ಮಾಂಡ ಜಗತ್ತು ಸೂಕ್ಷ್ಮ ಜಗತ್ತಿನಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಮಹಾನ್ ವಿಶ್ವವು ಮಾನವನ ದೇಹದಲ್ಲಿ ಪ್ರತಿಬಿಂಬಿತವಾಗಿರುತ್ತದೆ. ದೇವಸ್ಥಾನವನ್ನು ಪ್ರವೇಶಿಸಿದಾಗ ನಾವು ಸೂಕ್ಷ್ಮಜಗತ್ತಿನ ಒಂದು ಚೂರಲ್ಲದೇ ಬೇರೇನಲ್ಲ ಎಂಬ ಅರಿವು ನಮ್ಮನ್ನು ಪ್ರವೇಶಿಸುವುದು. ಈ ಅರಿವು ನಮ್ಮೊಳಗೆ ವೃದ್ಧಿಗೊಂಡಾಗ, ನಾವು ಬ್ರಹ್ಮಾಂಡದೊಂದಿಗೆ ಐಕ್ಯಗೊಳ್ಳಲಾರಂಭಿಸುತ್ತೇವೆ.
ನಮ್ಮ ದೇಹವು ಐದು ಭಾಗಗಳನ್ನು ಹೊಂದಿದೆ - ತಲೆ, ಕುತ್ತಿಗೆ, ಎದೆ, ಕಾಲುಗಳು ಮತ್ತು ಪಾದಗಳು - ಅಂತೆಯೇ ದೇವಸ್ಥಾನವೂ ಅದಕ್ಕೆ ಸರಿಯಾದ ಐದು ಭಾಗಗಳನ್ನು ಹೊಂದಿರುತ್ತದೆ.
ಗರ್ಭಮಂದಿರ - ದೇವಸ್ಥಾನದ ಗರ್ಭಗುಡಿ. ಇದು ಮೂಲದೇವರ ಗರ್ಭಗೃಹವಾಗಿದ್ದು ಮನುಷ್ಯನ ಶಿರವನ್ನು ಪ್ರತಿನಿಧಿಸುತ್ತದೆ. ದೇವಮೂರ್ತಿಗೆ ದೃಷ್ಟಿ, ಜೀವ ಮತ್ತು ಉಸಿರನ್ನು ತುಂಬಲಾಗಿದ್ದು ಅದನ್ನು ಒಂದು ವಾಸ್ತವಿಕ (vir-tual) ಜೀವಂತ ಶಕ್ತಿಯನ್ನಾಗಿಸುತ್ತದೆ.
ಅರ್ಧಮಂಟಪ - ಇದು ಗರ್ಭಮಂದಿರದ ಮುಂದಿರುವ ಆವರಣದ ಸ್ಥಳವಾಗಿದ್ದು ಮನುಷ್ಯ ರೂಪದ ಕುತ್ತಿಗೆಯನ್ನು ಪ್ರತಿನಿಧಿಸುತ್ತದೆ.
ಮಹಾಮಂಟಪ- ಇದು ಒಳಗಿನ ಸ್ಥಳದ ಹೊರಗಿನ ಪ್ರದೇಶವಾಗಿದ್ದು ಮನುಷ್ಯ ರೂಪದ ಎದೆಯ ಭಾಗವನ್ನು ಪ್ರತಿನಿಧಿಸುತ್ತದೆ.
ಪ್ರಾಕಾರಗಳು - ಇದು ಪ್ರದಕ್ಷಿಣೆಯ ಜಾಗ ಮತ್ತು ಪೌಳಿಯನ್ನೊಳಗೊಂಡಿದ್ದು ಮನುಷ್ಯ ರೂಪದ ಕಾಲುಗಳನ್ನು ಪ್ರತಿನಿಧಿಸುತ್ತದೆ.
ಗೋಪುರ - ಇದು ದೇವಸ್ಥಾನದ ಮಹಾದ್ವಾರವಾಗಿದ್ದು ಮನುಷ್ಯ ರೂಪದ ಪಾದಗಳನ್ನು ಪ್ರತಿನಿಧಿಸುತ್ತದೆ.
ಇಲ್ಲಿ, ಪರಮಹಂಸ ನಿತ್ಯಾನಂದರು ದೇವಸ್ಥಾನ ವನ್ನು ನಿರ್ಮಿಸುವ ಕೆಲಸವನ್ನು ಶ್ರೀ ಎಂ.ಎಸ್. ಶಿವಪ್ರಕಾಶಂ ರವರಿಗೆ ಒಪ್ಪಿಸಿದ್ದಾರೆ. ಅವರು ಶ್ರೀರಂಗಂ ರಾಜಗೋಪುರ ಸ್ಥಪತಿಯಾಗಿದ್ದು ದಕ್ಷಿಣ ಭಾರತದ ಶ್ರೀರಂಗಂ ದೇವಸ್ಥಾನದಲ್ಲಿ ವಿಶ್ವದಲ್ಲೇ ಅತಿ ಎತ್ತರವಾದ ದೇವಸ್ಥಾನ ಗೋಪುರವನ್ನು ನಿರ್ಮಿಸಿರುವರು. ಸ್ಥಪತಿ ಎಂಬ ಹೆಸರನ್ನು ಹಿಂದೂ ದೇವಾಲಯಗಳ ವಿನ್ಯಾಸಗಳನ್ನು ಕಲ್ಪಿಸಿ ಕಟ್ಟುವ ನಿಪುಣರಿಗೆ ನೀಡುವ ಹೆಸರು. ಶ್ರೀ ಎಂ.ಎಸ್. ಶಿವಪ್ರಕಾಶಂ ರವರು ಒಂಭತ್ತು ತಲೆಮಾರುಗಳಿಂದ ಈ ಕಸುಬಿನಲ್ಲಿರುವ ಕುಟುಂಬದಿಂದ ಬಂದವರು.

ಸ್ವಾಮೀಜಿಯವರು ದೇವಸ್ಥಾನದ ಮುಖ್ಯ ಸ್ಥಪತಿಯೊಂದಿಗೆ.

ಭೂಮಿ ಪೂಜೆ
( ಭೂತಾಯಿಗೆ ಪೂಜೆ)
ಇದು ದೇವಸ್ಥಾನದ
ನಿರ್ಮಾಣವನ್ನು
ಪ್ರಾರಂಭ ಮಾಡುವ ಸ್ಥಳದ
ಪೂಜೆ.
ಭೂಮಿ ಪೂಜೆ - ಮೊದಲು ಭೂತಾಯಿಯನ್ನು ಪೂಜಿಸಲಾಗುವುದು
ಆಶ್ರಮವಾಸಿಗಳು
ಗುರುಗಳ ಆನಂದ
ದಾಯಕ
ಮೇಲ್ವಿಚಾರಣೆಯಲ್ಲಿ
ನಿರ್ಮಾಣ ಕೆಲಸದಲ್ಲಿ
ಪಾಲ್ಗೊಳ್ಳುತ್ತಿರುವರು!
ದೇವಸ್ಥಾನದ ನಿರ್ಮಾಣ
ಕೆಲಸದಲ್ಲಿ ಅನುಪಮ
ಹೊಂದಾಣಿಕೆ!


ಪರಮಹಂಸ ನಿತ್ಯಾನಂದರು
ಕುಶಲ ಕರ್ಮಿಗಳ
ಕಾರ್ಯಾಗಾರದಲ್ಲಿ ದೇವರ
ವಿಗ್ರಹಗಳ ತಯಾರಿಯಲ್ಲಿ
ಸ್ವಯಂ ಮೇಲ್ವಿಚಾರಣೆ
ಯನ್ನು ಮಾಡುತ್ತಿರುವರು.
ವಿಗ್ರಹಗಳ ತಯಾರಿ - ಸ್ವಯಂ ಮೇಲ್ವಿಚಾರಣೆ
ಪ್ರತಿಷ್ಠಾಪನೆಗೆ ಮೊದಲು
‘ಕೋಡಿಕಣ್ ರಥಯಾತ್ರ’ದ
ಪತಾಕೆಯಡಿ ವಿಗ್ರಹಗಳ
ಭವ್ಯವಾದ ಮೆರವಣಿಗೆ ನಡೆದು,
ದಕ್ಷಿಣ ಭಾರತದ ಕೋಟಿಗೂ
ಮಿგილಾದ ನೇತ್ರದ್ವಯಗಳಿಗೆ
ದರ್ಶನವನ್ನು ನೀಡಿತು.
ಕೋಟಿ ಮಂದಿಗೆ ದರ್ಶನ

೧೧-೧೨ ಡಿಸೆಂಬರ್ ೨೦೦೬ - ಭೂಗ್ರಹದ ಚರಿತ್ರೆಯಲ್ಲಿ ಸಂಭವಿಸಿದ ಚರಿತ್ರಾರ್ಹ ಘಟನೆ - ಮಧ್ಯರಾತ್ರಿಯ ನಂತರ ಗರ್ಭಗುಡಿಯಲ್ಲಿ ಆನಂದೇಶ್ವರ ಮೂರ್ತಿಯ ಪ್ರತಿಷ್ಠಾಪನೆ

ದೇವಸ್ಥಾನದ ಭವ್ಯ ಉದ್ಘಾಟನೆ
೧ ಜನವರಿ ೨೦೦೭ - ಪರಮಹಂಸ
ನಿತ್ಯಾನಂದರ 30ನೆಯ ಜನ್ಮೂತ್ಸವಕ್ಕೆ
ಸರಿಹೊಂದಿದಂತೆ ದೇವಸ್ಥಾನದ ಭವ್ಯ
ಉದ್ಘಾಟನೆ
ಅಂಬಾಳ್ - ಅವಳನ್ನು ಪ್ರಾರ್ಥಿಸಿ ಸಂತಾನ
ಭಾಗ್ಯವನ್ನು ಪಡೆಯಿರಿ!
ಅವಳೇ ಸರ್ವಾಂತರ್ಯಾಮಿಯಾದ
ವಿಶ್ವಶಕ್ತಿಯ ಸ್ತ್ರೀ ರೂಪ.

ಅಂಬಾಳ್ - ಅವಳನ್ನು ಪ್ರಾರ್ಥಿಸಿ ಸಂತಾನ ಭಾಗ್ಯವನ್ನು ಪಡೆಯಿರಿ!
ಮಹಾಮೇರು - ಮಾನಸಿಕ ಶಕ್ತಿಯನ್ನು
ಗಳಿಸಲು ಮತ್ತು ನೀವು ಇಚ್ಚಿಸುವುದನ್ನು
ಸಾಧಿಸಲು ಇರುವ ಒಂದು ದೈವಿಕ ಸೆಲೆ.
ಮಹಾ ಮೇರುವು ಸಮಗ್ರ ವಿಶ್ವದ
3 - ಆಯಾಮದ ನಿರೂಪಣೆಯಾಗಿದ್ದು
ಅದು ಎಲ್ಲ ಜೀವಂತ ಹಾಗೂ ನಿರ್ಜೀವ
ವಸ್ತುಗಳನ್ನೊಳಗೊಂಡಿರುವುದು. ಅದು
'ಆತ್ಮ'ವನ್ನು ಪ್ರತಿನಿಧಿಸುತ್ತದೆ. ಅದಕ್ಕೆ
ಯಾವುದೇ ಜಾತಿ, ಬಣ್ಣ, ನಂಬುಗೆ (ಮತ)
ಅಥವಾ ಲಿಂಗದ ತೊಂದರೆಗಳಿರುವುದಿಲ್ಲ.
ಅದು ಪರಿಶುದ್ಧವಾದ ದೈವಿಕ ಚೈತನ್ಯದ
ಕಂಪನಗಳನ್ನು ಹೊರಡಿಸುತ್ತಿರುತ್ತದೆ.
ಅದನ್ನು ಪೂಜಿಸುವವರು ದೈವಿಕ
ಚೈತನ್ಯದಿಂದ ಕಂಪಿಸುತ್ತಾರೆ ಹಾಗೂ
ಸಮಾಜದ ಒಳಿತಿಗಾಗಿ ಅದನ್ನು
ಪಸರಿಸುತ್ತಾರೆ.

ಮಹಾಮೇರು - ಸಮಗ್ರ ವಿಶ್ವವನ್ನು ಪೂಜಿಸಿ!

ಈ ಮೇರುವು ಒಬ್ಬ ಪರಮಜ್ಞಾನಿಗಳಾದ
ಗುರುಗಳಿಂದ ಸಚೇತನಗೊಳಿಸಲ್ಪಟ್ಟಂತಹ ಒಂದು
ಅಪೂರ್ವವಾದ ವೈಶಿಷ್ಟ್ಯತೆಯನ್ನು ಹೊಂದಿದೆ.
ಮೇರುವನ್ನು ಸರಿಯಾದ ರೀತಿಯಲ್ಲಿ
ಸಚೇತನಗೊಳಿಸಿದರೆ ಅದಕ್ಕೆ ಇನ್ನೂ ಹೆಚ್ಚು
ಪವಿತ್ರಗೊಳಿಸುವ ಅವಶ್ಯಕತೆಯೂ ಕೂಡ ಇಲ್ಲವೆಂದು
ಹೇಳಲಾಗಿದೆ.
ವಿಭೂತಿಯನ್ನು ಹಚ್ಚಿರುವ ಶಿವನ
ರೂಪದಲ್ಲಿರುವ ಮಹಾಮೇರು ಹಾಗೂ
ಅವನ ಸಂಗಾತಿ ಅಂಬಾಳ್
ಗುರು ಪೂಜಾ - ಗುರುವಿಗೆ ನಮ್ಮ ವಂದನೆಗಳು. ದಿನಕ್ಕೆರಡು ಬಾರಿ ಸಲ್ಲಿಸುವ ಈ ಪೂಜೆಯು ಗುರುವನ್ನು ಜ್ಞಾಪಿಸಿಕೊಳ್ಳುವ, ಗೌರವಿಸುವ ಹಾಗೂ ಅವರ ಬಗ್ಗೆ ಯೋಚಿಸುವ ಒಂದು ವೈಯಕ್ತಿಕ ಮಾರ್ಗ. ಗುರುವು ನಮ್ಮಮೇಲೆ
ಅಷ್ಟೊಂದು ಕರುಣೆಯಿಂದ
ನೀಡಿರುವ ಪ್ರತಿ
ಯೊಂದಕ್ಕೂ ನಮ್ಮ ಕೃತಜ್ಞತೆ
ಗಳನ್ನು ಅರ್ಪಿಸಲು ಇರುವ
ಅವಕಾಶ. ಈ
ಅರ್ಪಣೆಯು ನಮ್ಮ
ಅರಿವಿನಲ್ಲಿ ಒಂದು ಬದ
ಲಾವಣೆಯನ್ನು ಉಂಟು
ಮಾಡಿ ನಮ್ಮನ್ನು ಉನ್ನತ
ದೈವಿಕ ಚೈತನ್ಯದ ಲೋಕಕ್ಕೆ
ಕರೆದೊಯ್ಯುತ್ತದೆ.

ಗುರುಪೂಜೆ - ಗುರುಗಳಿಗೆ ಕೃತಜ್ಞತೆಯನ್ನು ಅರ್ಪಿಸುವುದು

ಆರತಿ - ಬೆಳಗಿಸಿರುವ ಕರ್ಪೂರ ಮತ್ತು ಇತರ ವಸ್ತುಗಳ ಅರ್ಪಣೆ
ಆರತಿಯನ್ನು ಆಲದಮರದ ಅಡಿಯಲ್ಲಿ ಹಾಗೂ ಶ್ರೀ ಆನಂದೇಶ್ವರನಿಗೆ ನಿತ್ಯವೂ ಸಲ್ಲಿಸಲಾಗುವುದು. ಕರ್ಪೂರವು ದೇವರಿಗೆ ತನ್ನನ್ನೇ ತಾನು ಸಮರ್ಪಿಸಿಕೊಳ್ಳುವಾಗ ತಾನೇ ಪೂರ್ತಿಯಾಗಿ ಉರಿದು ಹೋಗು ವುದು. ಅದು ನಮ್ಮೊಳಗಿರುವ ಸುಟ್ಟು ಹಾಕಬೇಕಾಗಿರುವ ಅಸ್ಪಷ್ಟವಾಂಛೆಗಳನ್ನು ನಿರೂಪಿಸುತ್ತದೆ. ದೇವರ ಪದತಲದಲ್ಲಿ ಆಶ್ರಯವನ್ನು ತೆಗೆದುಕೊಂಡರೆ, ನಮ್ಮ ಅಸ್ಪಷ್ಟ ವಾಂಛೆಗಳು ಸಂಪೂರ್ಣವಾಗಿ ಉರಿದು ಹೋಗುತ್ತವೆ ಎಂಬುದರ ಸಾಂಕೇತಿಕ ನಿರೂಪಣೆ. ಹಾಗೂ ಅದು ತಾನು ಉರಿದುಹೋಗುತ್ತಿರುವಾಗ ಒಂದು ಒಳ್ಳೆಯ ಪರಿಮಳವನ್ನು ಸಹ ಬೀರುತ್ತದೆ. ಸಮಾಜಸೇವೆಯಲ್ಲಿ ನಮ್ಮ ವಾಂಛೆಗಳನ್ನು ಉರಿಸಿಬಿಟ್ಟಾಗ, ನಾವೂ ಸಹ ಪ್ರೀತಿ ಹಾಗೂ ಸಂತೋಷದ ಪರಿಮಳವನ್ನು ಎಲ್ಲರಿಗೂ ಹರಡುತ್ತೇವೆ.

ಆರತಿ - ಆಲದ ಮರದ ಬಳಿ
ಯಾಗಶಾಲೆ - ದೈವದೊಂದಿಗೆ
ಸಂಪರ್ಕವನ್ನು ಹೊಂದಲು
ಇರುವ ನಿಮ್ಮ ಶಕ್ತಿ ಸ್ಥಳ! ಇಲ್ಲಿಯೇ
ಅಗ್ನಿಮುಖೇನ ಶಾಸ್ತ್ರವಿಧಿಗಳನ್ನು
(ಯಾಗ) ನಡೆಸಲಾಗುವುದು.
ಯಾಗಗಳು ವಿಶ್ವಶಕ್ತಿಯೊಂದಿಗೆ
ಅಗ್ನಿಮುಖೇನ ಸಂಪರ್ಕ
ಹೊಂದಲು ಇರುವ ಒಂದು
ಶಕ್ತಿಶಾಲಿಯಾದ ಮಾರ್ಗ.

ಯಾಗಶಾಲೆ - ಅಗ್ನಿ ಮುಖೇನ ಸಂಪರ್ಕ !

ತುಲಾಭಾರಂ - ನಿಮ್ಮ ಭಕ್ತಿಯನ್ನು ಅರ್ಪಿಸಿ.
ತುಲಾಭಾರಂ - ದೇವರ ತೂಕದಷ್ಟು ಬೆಲೆಯುಳ್ಳ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಸಮರ್ಪಿಸುವುದು ಹಿಂದಿನ ಕಾಲದಿಂದ ನಡೆದು ಬಂದಿರುವ ಒಂದು ಪದ್ಧತಿ. ಈ ಸಮರ್ಪಣೆಯು ಒಂದು ದೈವಭಕ್ತಿಯ ಕ್ರಿಯೆಯಾಗಿದ್ದರೆ ತಕ್ಕಡಿಯು ತತ್ಕ್ಷಣವೇ ಮೇಲೇರುವುದು! ಕೃಷ್ಣನ ಸಮಯದಲ್ಲಿ ಇದು ಹೀಗೆಯೇ ನಡೆಯಿತು. ಕೃಷ್ಣನ ಪ್ರಿಯಳಾದ ರುಕ್ಮಿಣಿಯು ಹಾಕಿದ ಒಂದು ತುಳಸಿ ದಳವು ಅವನ ತೂಕದ ತಕ್ಕಡಿಯನ್ನು ಮೇಲಕ್ಕೆ ಎತ್ತಿತು! ಭೂಗ್ರಹದ ಮೇಲೆ ಆಗಿಂದಾಗ್ಗೆ ಗುರುಗಳು ಸಂಭವಿಸುತ್ತಿರುತ್ತಾರೆ. ಅವರಿಗೆ ನಮ್ಮ ಭಕ್ತಿಯನ್ನು ಸಮರ್ಪಿಸುವುದರಿಂದ ನಮ್ಮ ಒಳಗಿನ ಹಾಗೂ ಹೊರಗಿನ ಸ್ಥಳಗಳಲ್ಲಿ ಬಹಳಷ್ಟು ಒಳ್ಳೆಯದು ಉಂಟಾಗಬಲ್ಲದು. ಮತ್ತೊಮ್ಮೆ ಸಂಭವಿಸಿರುವ ಒಬ್ಬ ಮಹಾರ್೯ ಗುರುಗಳಿಗೆ ಸಮರ್ಪಿಸಲು ದೊರೆತಿರುವ ನಮ್ಮ ಜೀವನಾವಧಿಯ ಸದವಕಾಶ ಇಲ್ಲಿದೆ.
ಮಹೇಶ್ವರ ಪೂಜ - ಗತಿಸಿದ ಆತ್ಮಗಳ ಚಿರಶಾಂತಿಗಾಗಿ ಮಾಡುವ ಸಮರ್ಪಣೆ. ವಿಶ್ವ

ಮಹೇಶ್ವರ ಪೂಜ - ವಿಶ್ವಶಕ್ತಿಗೆ ಸಮರ್ಪಣೆ!
ಶಕ್ತಿಯ ಮಾಧ್ಯಮಗಳೆಂದು
ಪರಿಗಣಿಸಲಾಗಿರುವ ಒಬ್ಬ
ಜ್ಞಾನೋದಯ ಹೊಂದಿದ
ಗುರುಗಳು ಮತ್ತು ಅವರ
ದೀಕ್ಷೆಹೊಂದಿದ ಸನ್ಯಾಸಿಗಳಿಗೆ
ನೀಡುವುದರಿಂದ ಗತಿಸಿದ
ಆತ್ಮಗಳು ಹಾಗೂ ವಿಶ್ವ ಶಕ್ತಿಯೇ
ಈ ಸಮರ್ಪಣೆಗಳನ್ನು ಸ್ವೀಕರಿಸು
ವುವೆಂದು ನಂಬಲಾಗಿದೆ.
ಧ್ವಜ ಸ್ತಂಭ - ವಿಜಯಕ್ಕಾಗಿ ಇಲ್ಲಿ ಪ್ರಾರ್ಥಿಸಿ! ಇದು ವಿಜಯದ ಧ್ವಜಸ್ತಂಭವಾಗಿದ್ದು ದೇವಸ್ಥಾನದ ಮಹಾದ್ವಾರದ ಬಳಿ ಕಾಣಸಿಗುವುದು. ಪ್ರತಿಷ್ಠಾನದ ಧ್ವಜವನ್ನು ಇದು ಹೊತ್ತಿರುವುದು. ಈ 67 ಅಡಿ ಎತ್ತರದ ಧ್ವಜ ಸ್ತಂಭವನ್ನು ಒಂದೇ ಮರದಿಂದ ಕೆತ್ತಲಾಗಿದ್ದು ಅದನ್ನು ಲೋಹದಿಂದ ಅಲಂಕರಿಸಲಾಗಿದೆ. ಇದು ಪರಮಹಂಸದ, ಗುರುಗಳ, ಶ್ರೀ ಆನಂದೇಶ್ವರ - ಆನಂದೇಶ್ವರಿಯರ ಹಾಗೂ ಆಲದ ಮರದ ಬಹಳ ಜಟಿಲವಾದ ಕೆತ್ತನೆಗಳಿಂದ ಕೂಡಿದೆ.
ಬಲಿ ಪೀಠ - ನಿಮ್ಮ ಅಹಂಭಾವವನ್ನು
ಒಪ್ಪಿಸಿಬಿಡಲು ಇರುವ ಒಂದು ಪೀಠ. ಇದು
ದೇವಸ್ಥಾನದ ಪೂಜಾರಿಯು ಕಾಗೆ ಮತ್ತಿತರ
ಹಕ್ಕಿಗಳಿಗೆ ಆಹಾರವನ್ನು ನೀಡಲು ಇರುವ
ಪೀಠವಾಗಿರುವುದು, ಈ ಪೀಠವು
ಅಹಂಭಾವವನ್ನು ತ್ಯಾಗಮಾಡಲು ಇರುವ
ಪೀಠವೂ ಆಗಿರುವುದು.

ಧ್ವಜಸ್ತಂಭ - ವಿಜಯಕ್ಕಾಗಿ ಇಲ್ಲಿ ಪ್ರಾರ್ಥಿಸಿ!

ಬಲಿ ಪೀಠ - ನಿಮ್ಮ ಅಹಂಭಾವವನ್ನು ಒಪ್ಪಿಸಿ ಬಿಡಿ!
ಇದು ಅಹಂಭಾವವನ್ನು ದೈವದ
ಬಲಿಪೀಠದ ಮೇಲೆ ಒಪ್ಪಿಸಿ
ಬಿಡುವ ಸಂಕೇತವಾಗಿದೆ. ಅದರ
ಮುಂದೆ ಸಾಷ್ಟಾಂಗ ನಮಸ್ಕಾರ
ಮಾಡುವುದರಿಂದ, ಯಾರೊ
ಬ್ಬರು ಪ್ರಜ್ಞಾಪೂರಕವಾಗಿ ತಮ್ಮ
ಅಹಂಭಾವವನ್ನು ಪ್ರಭುವಿಗೆ
ಒಪ್ಪಿಸುವಂತೆ ಆಗುವುದು.

ನಂದಿ - ಆನಂದೇಶ್ವರನಿಗೆ ನಿಮ್ಮ ದೈವಿಕ ದೂತ! ನಂದಿಯು ಪವಿತ್ರವಾದ ವೃಷಭವಾಗಿದ್ದು ಶಿವನ ವಾಹನವಾಗಿದೆ. ಅದು ನಮ್ಮದೇ ಆತ್ಮದ ಪ್ರತೀಕ. ಯಾವಾಗಲೂ ಅದು ಶಿವ ನಿಗೆ ನೇರವಾಗಿ ಕುಳಿತಿರು ವುದಾಗಿ ಕಂಡುಬರುವುದು. ಅದು ಅವನತ್ತ ಅಪಾರವಾದ ಭಕ್ತಿಯಿಂದ ಹಾಗೂ ಆರಾಧನಾ ಭಾವದಿಂದ ತಲ್ಲೀನವಾಗಿ ನೋಡುತ್ತಿರುವುದು. ಅದು ತಿಳಿಯಪಡಿಸು ವುದೆನೆಂದರೆ ನಾವು ಹೊರಪ್ರಪಂಚದ ಚಟುವಟಿಕೆಗಳಲ್ಲಿ ಮುಳುಗಿರುವಾಗ, ನಾವು ನಮ್ಮ ಪೂರ್ಣ ಆಂತರಿಕ ಗಮನವನ್ನು ದೈವತ್ವದೆಡೆಗೆ ತಿರುಗಿಸಬೇಕು ಎಂದು.
ಆನಂದ ನಂದಿ - ಗೋ ಆಶ್ರಯವಾದ ಗೋಶಾಲೆಯ ಒಂದು ಕರು. ಪರಮಹಂಸ ನಿತ್ಯಾನಂದರು ಕರುವಿನ ಬಗ್ಗೆ ಹೀಗೆ ಘೋಷಿಸಿದರು. ಈ ಕರುವು ಸಾಕ್ಷಾತ್ ಪರಶಿವನ ಪವಿತ್ರ ವೃಷಭವಾದ ನಂದಿ. ಅದು ಸರಿಯಾದ ಸಮಯದಲ್ಲಿ ಅಂದರೆ ನನ್ನ ಜಯಂತಿಯ ದಿನದಂದು ಸರಿಯಾಗಿ ಪ್ರದೋಷ ಸಮಯದಲ್ಲಿ ನನ್ನ ಸ್ವಂತ ವಸತಿಯ

ಆನಂದ ನಂದಿ - ಶಿವನ ಪವಿತ್ರ ವೃಷಭವು ಜನ್ಮವನ್ನು ತಳೆದಿದೆ!
ಎದುರೇ, ನನ್ನ ಭವಿಷ್ಯ ನುಡಿ
ಯಂತೆ ಪ್ರಜ್ಞಾಪೂರಕ ಜನ್ಮವನ್ನು
ತಳೆಯಿತು! ಅದು ನನ್ನೊಡನೆ
ಇರಲು ಬಂದಿದೆ! ಅದನ್ನು ಆನಂದ
ನಂದಿ ಎಂದು ಕರೆಯಲಾಗು
ವುದು. ಅದನ್ನು ಪ್ರತಿ ದಿನವೂ
ಪೂಜಿಸಿ. ಅದು ಬೆಳೆದಂತೆ ನೀವು
ಅನೇಕ ಅದ್ಭುತಗಳನ್ನು
ನೋಡುವಿರಿ.

ಅನ್ನದಾನ - ಪ್ರಸಾದ
ವನ್ನು ಆನಂದೇಶ್ವರನ
ದೈವಿಕ ಕ್ಷೇತ್ರದಲ್ಲಿ
ಸ್ವೀಕರಿಸಿರಿ. ದಾರಿದ್ರ್ಯದಿಂದ
ಮುಕ್ತರಾಗಿ ಕುಬೇರ ಶಕ್ತಿ
(ಅಭ್ಯುದಯ) ಗೆ ನಿಮ್ಮ
ಜೀವನವನ್ನು ಒಳಹೊಕ್ಕಲು
ದಾರಿ ಮಾಡಿಕೊಡಿ.
ಅನ್ನದಾನ - ಪ್ರಭುವಿನ ಆಶೀರ್ವಾದ
ಶಕ್ತಿ ಸ್ಥಳ - ಒಂದು ವಿಶೇಷ ಶಕ್ತಿಯ ಪ್ರತಿಷ್ಠಾಪನೆ

ಶಕ್ತಿ ಸ್ಥಳ - ಎಂಟು ಸ್ತ್ರೀ ರೂಪದಲ್ಲಿರುವ ವಿಶ್ವ ಶಕ್ತಿಯ - ಅಷ್ಟಲಕ್ಷ್ಮಿಯ ಸಮಗ್ರ ಸ್ಥಳ. ಈ ದೈವಿಕ ಸ್ಥಳವು ಎಂಟು ದೈವಿಕ ಶಕ್ತಿಗಳಾದ ಆರೋಗ್ಯ, ಆಹಾರ, ಧೈರ್ಯ, ಅದೃಷ್ಟ ಸಂತಾನ, ಧನ, ಜಯ ಮತ್ತು ವಿದ್ಯೆಯನ್ನು ಪಸರಿಸುತ್ತದೆ.