ಬಿಲ್ವ ಲಿಂಗ - ಒಂದು ಬನ ಲಿಂಗ
This text was machine-transcribed from the printed book and may contain errors. Select the words and choose “Report a mistake”.
ಯಶಸ್ಸಿಗಾಗಿ ಪ್ರಾರ್ಥಿಸಿ.
ಬನಲಿಂಗಗಳು ಸಹಜವಾಗಿ ಉಂಟಾದ ಶಿವನ
ಪ್ರಕಟನೆಗಳು. ಉತ್ತರ ಭಾರತದ ಪವಿತ್ರವಾದ
ನರ್ಮದಾ ನದಿಯಲ್ಲಿ ಮಾತ್ರ ಇವು
ದೊರೆಯುವುವು. ನದಿಯ ದಡದಲ್ಲಿದ್ದ
ಬಂಡೆಯು ಬನ ಎಂಬ ಅಸುರನನ್ನು
ಆಶೀರ್ವದಿಸಲು ಶಿವನು
ಪಡೆದ ಶಿವಲಿಂಗ ರೂಪವೇ
ಆಗಿತ್ತೆಂದು ನಂಬುತ್ತಾರೆ.
ಆ ಬಂಡೆಯಲ್ಲಿ ಶಿವನು
ವಾಸಿಸುತ್ತಿದ್ದಾನೆ ಆದ್ದರಿಂದ
ನದಿಯಲ್ಲಿ ನಮಗೆ ಕಾಣಿ
ಸಿಗುವ ಶಿಲೆಯ ಚೂರುಗಳು
ಶಿವನ ಅಂಶಗಳು.
ಈ ಬಿಲ್ವಲಿಂಗದ ಬಗ್ಗೆ ಸುಮ್ಮನೆ
ಯೋಚಿಸಿ ಮತ್ತು ನಿಮ್ಮ
ಸಾಹಸಕಾರ್ಯಗಳಲ್ಲಿ
ಯಶಸ್ವಿಯಾಗಿ!

ಬಿಲ್ವ ಲಿಂಗ
ಇಲ್ಲಿ ಕಾಣಸಿಗುವ ಬನಲಿಂಗ ವನ್ನು ಬಿಲ್ವ ಲಿಂಗ ಎಂದು ಕರೆಯುವರು. ಇದನ್ನು ಮಹಾಬಿಲ್ವವೃಕ್ಷ ಎಂದು ಹೇಳುವ ಒಂದು ವಿಶೇಷವಾದ ಬಿಲ್ವ ಮರದಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಲ್ವವು ಶಿವನಿಗೆ ಪವಿತ್ರವಾದದ್ದು. ಸಾಮಾನ್ಯವಾಗಿ ಕಾಣಸಿಗುವ ಬಿಲ್ವ ಎಲೆಗಳು ಮೂರು ಎಲೆಗಳಿಂದ ಕೂಡಿದ ದಂಟಿನ ರೂಪದಲ್ಲಿರುತ್ತವೆ. ಈ ಮಹಾ ಬಿಲ್ವ ವೃಕ್ಷವಾದರೋ ಒಂದು ವಿಶೇಷ ಮರವಾಗಿದ್ದು ಅದರ ಪ್ರತಿ ದಂಟಿನಲ್ಲಿಯೂ ಒಂಭತ್ತು ಎಲೆಗಳಿರುತ್ತವೆ. ಇಂತಹ ವೃಕ್ಷಗಳು ಬಹಳ ವಿರಳವಾಗಿದ್ದು ಅವು ಸಾಕ್ಷಾತ್ ಶಿವನಿಗೇ ವಾಸಸ್ಥಳವನ್ನು ನೀಡುತ್ತವೆ ಎಂದು ಹೇಳುವರು.
ನಿತ್ಯಾನಂದ ಧ್ಯಾನಪೀಠದ ಇತರ ಪವಿತ್ರ ದೇವಾಲಯಗಳು.
ಲಾಸ್ ಏಂಜಲೀಸ್, USA
ಈ ಪವಿತ್ರಸ್ಥಳದಲ್ಲಿ ಕಾಣಸಿಗುವುದು:
ಶ್ರೀ ಆನಂದ ವೆಂಕಟೇಶ್ವರ -
ಉತ್ತರ ಅಮೇರಿಕದಲ್ಲಿನ ಅತಿ
ಎತ್ತರದಂತಹ ದೇವರ ವಿಗ್ರಹ.
ಶ್ರೀ ಆನಂದೇಶ್ವರ -
ಆನಂದೇಶ್ವರಿ - ಪರಮಹಂಸ
ನಿತ್ಯಾನಂದರ ಧೈಯ
ಕಾರ್ಯದ ಪ್ರಮುಖ ದೇವರು
(ಪುಟ್ಟ ಆಕಾರದಲ್ಲಿ)
ದಕ್ಷಿಣಾ ಮೂರ್ತಿ -
ಪರಮಶ್ರೇಷ್ಟ ಗುರುವಾದ ಶಿವನ
ಮೂಲರೂಪ.
ಶಿವಲಿಂಗ - ಶಿವನ
ಪ್ರಕಟನೆಯಾದ ನಿರಾಕಾರ
ರೂಪವಾದ ಲಿಂಗ
(ಗೋಲಾಕೃತಿಯ ರೂಪ).


ಒಹಾಯೋ, ಯು.ಎಸ್.ಎ.
ಈ ಪವಿತ್ರ ಸ್ಥಳದಲ್ಲಿ ಶ್ರೀ ಆನಂದೇಶ್ವರ ಮತ್ತು
ಆನಂದೇಶ್ವರಿಯರಿದ್ದಾರೆ


ಹೈದರಾಬಾದ್, ಭಾರತ ಆನಂದೇಶ್ವರಿಯ ದೇವಸ್ಥಾನ
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಶಮನಕಾರಕ ವೃಕ್ಷ