KAILASA Library/శ్రీ ఆనందేశ్వర దేవాలయం &/ನಿತ್ಯಾನಂದ ಸೇಕ್ರೆಡ್ ಆರ್ಟ್ಸ್Sign in
శ్రీ ఆనందేశ్వర దేవాలయం &

ನಿತ್ಯಾನಂದ ಸೇಕ್ರೆಡ್ ಆರ್ಟ್ಸ್

This text was machine-transcribed from the printed book and may contain errors. Select the words and choose “Report a mistake”.

(ನಿತ್ಯಾನಂದ ಪವಿತ್ರ ಕಲೆಗಳು)

ದೇವಾಲಯದ ಕೆತ್ತನೆ ಕೆಲಸ

ಭಾರತೀಯ ದೇವಾಲಯಗಳು
ವಿಪುಲವಾದ ಕೆತ್ತನೆಗೆ ಮತ್ತು ಭವ್ಯವಾದ
ಪ್ರಮಾಣಗಳಿಗೆ ಪ್ರಸಿದ್ಧವಾಗಿವೆ.
ಸಮತೋಲನತೆಯ ಬಗ್ಗೆ ತೀಕ್ಷ್ಣವಾದ
ಜ್ಞಾನ ಮತ್ತು ಕೌಶಲ್ಯವಿರುವ ನಿಪುಣ
ಶಿಲ್ಪಿಗಳು ಸಾವಿರಾರು ವರ್ಷಗಳಲ್ಲಿ
ಜಟಿಲವಾದ ಕೈಚಳಕದಿಂದ ಭವ್ಯವಾದ
ದೇವಾಲಯಗಳನ್ನು ನಿರ್ಮಿಸಿದ್ದಾರೆ.

ನಿತ್ಯಾನಂದ ಸ್ವಾಮೀಜಿ ಭಕ್ತರೊಂದಿಗೆ

ಭಾರತದ ದೇವಾಲಯದ ಕಲೆಯು
5000 BC ಯಷ್ಟು ಹಿಂದಿನದು.
ಪ್ರಾಚೀನ ಭಾರತದ ವೇದ
ಸಂಪ್ರದಾಯದ ಪ್ರಕಾರ, ಭಾರತೀಯ
ದೇವಾಲಯದ ಕಲೆಗಳು ವಿಶ್ವಶಕ್ತಿಯ
ಆಭಿವ್ಯಕ್ತತೆಗಳನ್ನು ಅನುಭವಿಸಲು
ಬದುಕಿಗೆ ತಂದಿವೆ.

ನಿತ್ಯಾನಂದ ಸೇಕ್ರೆಡ್ ಆರ್ಟ್ಸ್ ಅನ್ನು ಪುರಾತನವಾದ ದೇವಾಲಯದ ಕಲೆಗಳನ್ನು ಹರಡಲು ಮತ್ತು ಸಂರಕ್ಷಿಸಲು ಹಾಗೂ ಬೆರಗುಗೊಳಿಸುವಂತಹ ದೇವಾಲಯದ ಕಲೆಯ ಕೆಲಸಗಳನ್ನು ಉತ್ಪಾದಿಸಲು ಸ್ಥಾಪಿಸಲಾಗಿದೆ. ಅದು ದೇವರ ವಿಗ್ರಹಗಳು, ದೇವರ ವಾಹನಗಳು, ದೇವಸ್ಥಾನದ ಕಟ್ಟಡಗಳು, ಧ್ವಜ ಸ್ತಂಭಗಳು, ದೇವಾಲಯದ ಆಭರಣಗಳು, ಪೂಜಾ ಸಾಮಗ್ರಿಗಳು ಮತ್ತು ಮುಂತಾದುವುಗಳನ್ನು ಅನುಭವಸ್ಥ ಸ್ಥಪತಿಗಳ (ದೇವಸ್ಥಾನದ

ದೇವಸ್ಥಾನದ ಕಲೆಯ ಪರಿಣತರು

ಕಲೆಯ ಪರಿಣತರು)
ಮಾರ್ಗದರ್ಶನದಲ್ಲಿ ಸಮರ್ಪಣಾ
ಮನೋಭಾವದ ಹಾಗೂ ಕುಶಲ
ಶಿಲ್ಪಿಗಳ ಮುಖೇನ ನೀಡುತ್ತಿದೆ.

ಈ ಇಡೀ ಕೆಲಸವೂ ಆಗಮಶಾಸ್ತ್ರದ ಮೇಲೆ ಆಧಾರಿತವಾಗಿದೆ. ಆಗಮ ಶಾಸ್ತ್ರವು ದೇವಾಲಯಗಳ ಮತ್ತು ವಿಗ್ರಹಗಳ ಮೇಲಿನ ಒಂದು ಪ್ರಾಚೀನ ವಿಜ್ಞಾನ. ಈ ಕಾರ್ಯಗಳ ಇಡೀ ಶ್ರೇಣಿಯು ದೇವಸ್ಥಾನ ಕಲೆಯ ರೇಖಾ ಚಿತ್ರಗಳನ್ನು ಬಿಡಿಸುವುದು, ಕಲ್ಲನ್ನು ಒಡೆಯುವುದು, ಶಿಲೆ, ಲೋಹ, ಲೋಹದ ತಗಡು, ಮರಗೆಲಸ, ದೇವಾಲಯದ ಆಭರಣ ತಯಾರಿಕೆ, ವಿಗ್ರಹಗಳಿಗೆ ವಸ್ತ್ರಗಳ ತಯಾರಿ ಮತ್ತು ಇನ್ನೂ ಹಲವು ಕಾರ್ಯಗಳನ್ನು J ÙÀæéí wÊæ CÊæÃÈä ÖÝWÀ PaÉÕÜ ÜB hæ (Order) ಯನ್ನು ಕಾರ್ಯಗತಿಗೆ ತರುವ ಕೆಲಸ ಮತ್ತು ತಯಾರಾದ ವಸ್ತುಗಳ ಸಾಗಣೆ, ಮುಂತಾದುವು ನಿತ್ಯಾನಂದ ಸೇಕ್ರೆಡ್ ಆರ್ಟ್ಸ್‌ನ ನೇರ ನಿಯಂತ್ರಣದಲ್ಲಿವೆ.

ಗಮನ ಸೆಳೆಯುವ ಗುಣಕ್ಕೆ ಮತ್ತು ಸ್ಪರ್ಧಾತ್ಮಕ ಬೆಲೆಗಳಿಂದ, ಈ ಉತ್ಪನ್ನಗಳು ಪುರಾತನ ವೇದ ಪರಂಪರೆಯನ್ನು ಆಧುನಿಕ ಮಾನವನಿಗೆ ಹೊರಸೂಸುತ್ತಿವೆ. ಪರಮಹಂಸ ನಿತ್ಯಾನಂದರ ದಿವ್ಯ ದೃಷ್ಟಿಯ ಭಾಗವಾಗಿ, ಪ್ರತಿಷ್ಠಾನದ ಈ ರೆಕ್ಕೆಯು ತೀವ್ರಗತಿಯಿಂದ ಬೆಳೆಯುತ್ತಾ ಮನುಕುಲಕ್ಕೆ ಭವ್ಯವಾದ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ.

ದೇವಾಲಯದ ಕಲೆಯು ವೇದೀಯ
ಪದ್ಧತಿಯ ಆನಂದ ದಾಯಕ ಪ್ರಕಟಣೆಗಳು!
ಅವುಗಳನ್ನು ಸಂರಕ್ಷಿಸುವುದು ನಮ್ಮ
ಜವಾಬ್ದಾರಿ.

ಪರಮಹಂಸ ನಿತ್ಯಾನಂದ

ಪರಮಹಂಸ ನಿತ್ಯಾನಂದರು ಇಂದು ನಮ್ಮೊಡನಿರುವ ಒಬ್ಬ ಯುವಜ್ಞಾನೋದಯ ಹೊಂದಿದ ಪರಮಗುರು. ದಕ್ಷಿಣ ಭಾರತದ ಆಧ್ಯಾತ್ಮಿಕ ಶಕ್ತಿಕೇಂದ್ರವಾದ ತಿರುವಣ್ಣಾಮಲೈನಲ್ಲಿ ಹುಟ್ಟಿದ ಅವರು ತೀವ್ರ ತಪಸ್ಸಿನ ತಾಲಿಕೆಯ ವರ್ಷಗಳ ನಂತರ ಅವರ 22ನೆಯ ವಯಸ್ಸಿನಲ್ಲಿ ಜ್ಞಾನೋದಯವನ್ನು ಹೊಂದಿದರು.

ಇಂದು ಅವರು ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ವೇದೀಯ ಕಾಲದಲ್ಲಿ ಪೌರಾತ್ಯ ದೇಶಗಳಲ್ಲಿ ಜನರು ಅಂತರ್ಯದತ್ತ ಹೊರಟರು. ಅವರು ತಮ್ಮದೇ ಅರಿವಿನ ಪರಿಶೋಧನೆಯನ್ನು ನಡೆಸಿದರು. ಅವರು ತಮ್ಮ ಅಂತರ್ಯದ ತೇಜಸ್ಸನ್ನು ಕಂಡುಕೊಂಡರು. ತಾವು ಆಳವಾದ ಅರಿವಿನಿಂದ ಕೂಡಿದ ವಿಶಿಷ್ಟ ಅಸ್ತಿತ್ವದ ಜೀವಿಗಳೆಂದು ಕಂಡುಕೊಂಡರು. ಇದನ್ನು ಅರ್ಥಮಾಡಿಕೊಂಡ ಅವರು, ತಾವು ಹೊರ ಪ್ರಪಂಚದಲ್ಲಿ ವಸ್ತುಗಳನ್ನು ಹಾಗೆಯೇ ಸಿದ್ಧಿಸುವಂತೆ ಮಾಡಬಹು

ಪರಮಹಂಸ ನಿತ್ಯಾನಂದ

ದೆಂದು ಕಂಡುಕೊಂಡರು! ಅವರ ಬದುಕು ಸಂತೃಪ್ತಿಯೆಡೆಗೆ ಒಂದು ಸಹಜ ಹರಿವಾಯಿತು. ಅದೇ ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಬಾಹ್ಯದೆಡೆಗೆ ಹೊರಟರು. ಅವರು ಸಾಧಿ ಸುವುದನ್ನೇನೋ ಮಾಡಿದರು, ಆದರೆ ಏತಕ್ಕಾಗಿ ಸಾಧಿಸಿದೆವು ಎಂದು ಆಶ್ಚರ್ಯಪಡ ಲಾರಂಭಿಸಿದರು. ಅದು ಹಲವು ಸಲ ಖಿನ್ನತೆಯೆಡೆಗೆ ಕರೆದೊಯ್ಯುತ್ತದೆ. ಪ್ರತಿಯೊಂದು ಸಾಧನೆಯ ನಂತರವೂ, 'ಈಗ ಮುಂದೇನು...?' ಎಂಬ ಪ್ರಶ್ನೆಯು ಸತತವಾಗಿ ಎದುರಾಗಲಾರಂಭಿಸಿತು. ಅದಕ್ಕೆ ಅವರ ಬಳಿ ಉತ್ತರವಿರಲಿಲ್ಲ. ಆದುದರಿಂದ ಅವರು ಮತ್ತಷ್ಟು ಸಾಧನೆಗಳನ್ನು ಮಾಡಲಾರಂಭಿಸಿದರು. ಈ ಚಕ್ರವು ಮುಂದುವರಿಯುತ್ತಿತ್ತು. ಪೂರ್ವವಾಗಲೀ ಅಥವಾ ಪಶ್ಚಿಮವಾಗಲೀ, ನಮ್ಮಲ್ಲಿ ಬಹಳಷ್ಟು ಮಂದಿ ನಮ್ಮ ಅಂತರ್ಯದ ಅರಿವಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದೇವೆ. ಆದಾಗಿಯೂ ಸಹ, ನಾವು 'ಆಂತರ್ಯ' ಎಂಬ ಪದವನ್ನು ಕೇಳಿದಾಗ, ಅದನ್ನು ನಮ್ಮ ನಿವೃತ್ತಿ ಜೀವನದಲ್ಲಿ ಮಾಡೋಣವೆಂದು ಭಾವಿಸುತ್ತೇವೆ. ಏನು ಪ್ರಯೋಜನ? ನಾವು ಆನಂದ ಜೀವನದ ವಿಜ್ಞಾನವನ್ನೇ ಕಳೆದುಕೊಳ್ಳುತ್ತಿದ್ದೇವೆ! ನಮಗೆ ಬೇಕಾದುದನ್ನು ನಿಶ್ಚಯವಾಗಿ ನೀಡಬಲ್ಲಂತಹ ಪ್ರಚಂಡವಾದ ಅರಿವನ್ನೇ ಕಳೆದುಕೊಳ್ಳುತ್ತೇವೆ.

ಪರಮಹಂಸ ನಿತ್ಯಾನಂದರು ನಮ್ಮನ್ನು ನಮ್ಮ ಆಳವಾದ ಅರಿವಿಗೆ ಎಚ್ಚರಗೊಳಿಸಲು ಒಂದು ಪ್ರಬಲವಾದ ಆಕಾಂಕ್ಷೆಯೊಂದಿಗೆ ಇಲ್ಲಿದ್ದಾರೆ.

ಅವರ ಪದಗಳಲ್ಲಿಯೇ,

'ನನ್ನ ಧೈಯಯುತ ಕಾರ್ಯವು ಪರಿಶುದ್ಧ ಆನಂದವಾಗಿರುವ ಹೊಸಯುಗದ ಮಾನವನನ್ನು ಸೃಷ್ಟಿಸುವುದಾಗಿದೆ; ಅವನು ಭೌತಿಕ ಪ್ರಪಂಚದಲ್ಲಿ ಒಳ್ಳೆಯ ಆಧ್ಯಾತ್ಮಿಕ ಬಲದೊಂದಿಗೆ ಜೀವಿಸುವವನಾಗಿರುವಂತಹವನು; ಅವನು ಪರಿಪೂರ್ಣತೆಯಿಂದ (Per-fection) ಜೀವಿಸುವ ಬದಲು ಸಂಪೂರ್ಣತೆಯಿಂದ (Totality) ಆನಂದವನ್ನು ಅನುಭವಿಸುವವನಾಗಿರುವನು; ಈ ವಿಶ್ವವು ಒಂದು ವಿಸ್ಮಯಪೂರಕ ವ್ಯವಸ್ಥೆಯಿಂದ ಕೂಡಿದ ಒಂದು ಅದ್ಭುತವಾದ ಅವ್ಯವಸ್ಥೆ ಎಂಬುದನ್ನು ಅರಿತಿರುವನಾಗಿರುವಂತಹವನು; ಅದರೊಂದಿಗೆ ಶೃತಿಗೂಡಿಸಿ ಮುಂದುವರಿಯಲು ಪ್ರಯತ್ನಿಸುವಂತಹವನು. ಅವನು ಪರಮಹಂಸ - ಅಂದರೆ ಜ್ಞಾನೋದಯ ಹೊಂದಿದವನಂತೆ ಜೀವಿಸುವನು! ಅವನ ಜೀವನವೇ ಧ್ಯಾನಯುಕ್ತತೆಯಂತಿರುವುದು. ಅದು ವಿಶ್ವ ಅರಿವಿನಲ್ಲಿ ಆಳವಾಗಿ ಬೇರೂರಿದ್ದು ತಾರ್ಕಣೆಯ (Coincidence) ಶಕ್ತಿಯೊಂದಿಗೆ, ಅನುರೂಪತೆಯೊಂದಿಗೆ ಮುಂದುವರಿಯುವಂತಹವನಾಗಿದ್ದು, ತನಗೂ ಹಾಗೂ ಪರರಿಗೂ ಸೇವೆಸಲ್ಲಿಸುತ್ತಾ ನಿರಾಯಾಸವಾಗಿ ಸಾಧಿಸುತ್ತಿರುವನು.'

ಪರಮಹಂಸ ನಿತ್ಯಾನಂದರು ಮಹಾ ಋಷಿಗಳು ಬಹಳ ಕಾಲದಿಂದಲೂ ಹೇಳುತ್ತಾ ಬಂದಿರುವ 'ಆಂತರಿಕ ಆನಂದ' ಎಂಬ ಪ್ರತಿ ವ್ಯಕ್ತಿಯಲ್ಲೂ ಇರುವ ಅವನ ಬರಿದಾಗದಂತಹ ಚೈತನ್ಯದ ಸೆಲೆಯೊಂದಿಗೆ ಅವನ ಪುನರ್ ಸಂಪರ್ಕವನ್ನೇರ್ಪಡಿಸಲು ಬಂದಿರುವರು. ಅವರು ಪ್ರತಿ ವ್ಯಕ್ತಿಯ ಪ್ರಜ್ಞೆಯನ್ನು ವಿಸ್ಫೋಟಿಸಲು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅವರಿಂದ ಮಾರ್ಗದರ್ಶನ ಹೊಂದಿದ ಪ್ರಪಂಚದಾದ್ಯಂತದ ಅನೇಕ ಜನರು ಆಂತರಿಕ ತೇಜಸ್ಸಿನ ದರ್ಶನಾನುಭವವನ್ನೂ ಹಾಗೂ ಬಾಹ್ಯದ ಉತ್ಕೃಷ್ಟತೆಯನ್ನೂ ಹೊಂದಿದ್ದಾರೆ. ಬಹಳ ಮಂದಿ ಪರಮಹಂಸ ನಿತ್ಯಾನಂದರನ್ನು ಮನುಕುಲಕ್ಕೆ ವಿಶ್ವಶಕ್ತಿಯು ನೀಡಿರುವ ಒಂದು ಅಪೂರ್ವವಾದ ಕೊಡುಗೆಯೆಂಬಂತೆ ಅನುಭವಿಸುತ್ತಿರುವರು.