ನಾವು ಏಕೆ ಚಿಂತಿಸುತ್ತೇವೆ ?
This text was machine-transcribed from the printed book and may contain errors. Select the words and choose “Report a mistake”.
ಗಮನವಿಟ್ಟು ಕೇಳಿ, ನನ್ನ ಪ್ರಶ್ನೆಯು “ನಿಮಗೆ ಯಾವ ಯಾವ ವಿಷಯಗಳ ಬಗ್ಗೆ ಚಿಂತೆ ಇದೆ?” ಅಂತ ಅಲ್ಲ. ಏಕೆಂದರೆ ಈ ಪ್ರಶ್ನೆಯ ಉತ್ತರ ಬಹಳ ಸುಲಭ - ಒಂದು ಹತ್ತು ವರ್ಷದ ಮಗುವೂ ಈ ಪ್ರಶ್ನೆಗೆ ಉತ್ತರ ಕೊಡಬಲ್ಲದು.
ಈ ಪ್ರಶ್ನೆಯನ್ನು ಕೇಳಿದರೆ ನಾವೆಲ್ಲರೂ ನಾವು ಚಿಂತಿಸುವ ವಿಷಯಗಳ ಒಂದು ದೊಡ್ಡ ಪಟ್ಟಿಯನ್ನು ಮಾಡಲು ತಯಾರಾಗಿರುವೆವು - ಹಣ, ಸಂಬಂಧಗಳು, ಕಾಯಿಲೆ, ಏನಾದರೂ ಒಂದು ವಿಷಯ ನಮ್ಮ ಚಿಂತೆಗೆ ಕಾರಣವಾಗಿರಬಹುದು. ವಿಚಿತ್ರವಾದ ಮಾತು ಏನೆಂದರೆ ಎರಡು ವಿರುದ್ಧವಾದ ವಿಷಯಗಳು ಬೇರೆ ಬೇರೆಯವರಿಗೆ ಚಿಂತೆಗೆ ಕಾರಣವಾಗಿರಬಹುದು. ಉದಾಹರಣೆಗೆ ಒಬ್ಬರು “ನನಗೆ ಮಕ್ಕಳು ಇಲ್ಲ - ಇದೇ ನನ್ನ ಸಮಸ್ಯೆ” ಎಂದು ಚಿಂತೆಗೆ ಕಾರಣವಾಗಿ ಹೇಳುವರು. ಇದಕ್ಕೆ ವಿರುದ್ಧವಾಗಿ ಇನ್ನೊಬ್ಬರು “ನನಗೆ ಮಕ್ಕಳು ಇದ್ದಾರೆ-ಅದೇ ನನ್ನ ಸಮಸ್ಯೆ!” ಎಂದು ಹೇಳುವರು. ಇದೇ ರೀತಿಯಲ್ಲಿ ಐಶ್ವರ್ಯವಂತರು ದುಡ್ಡು ಇರುವುದು ಒಂದು ಸಮಸ್ಯೆ ಮತ್ತು ಬಡವರು ದುಡ್ಡಿನ ಕೊರತೆಯು ಒಂದು ಸಮಸ್ಯೆ ಎಂದು ಗ್ರಹಿಸುವರು. ಹೀಗೆ ಚಿಂತೆಗಳನ್ನು ಹುಟ್ಟಿಸಿಕೊಂಡಿರುವುದು ಮನುಷ್ಯನ ಸ್ವಭಾವ. ಚಿಂತೆಯನ್ನು ಹುಟ್ಟಿಸಿಕೊಳ್ಳಲು ಅವನಿಗೆ ಆಗದಿದ್ದರೆ - ಅವನಿಗೆ ಏನೂ ಚಿಂತೆ ಇಲ್ಲ ಎಂದು ಚಿಂತಿಸುವನು. ಉದಾಹರಣೆಗೆ ವಯಸ್ಸಾದವರು ಮತ್ತು ನೌಕರಿಯಿಂದ ನಿವೃತ್ತಿಯಾಗಿರುವವರು ತಮಗೆ ಮಾಡುವುದಕ್ಕೆ ಕೆಲಸವಿಲ್ಲ ಮತ್ತು ಚಿಂತಿಸುವುದಕ್ಕೆ ಯಾವುದೇ ವಿಷಯವಿಲ್ಲದಿದ್ದರಿಂದ ಬಾಳುವುದಕ್ಕೆ ಕಾರಣವೇ ಇಲ್ಲವೆಂದು ನನ್ನ ಮುಂದೆ ತಮ್ಮ ತೊಂದರೆಗಳನ್ನು ಹೇಳಿಕೊಳ್ಳುವರು.
ನಮ್ಮೆಲ್ಲರ ಪರಿಸರ ಬೇರೆ ಬೇರೆಯಾಗಿರಬಹುದು, ನಮ್ಮ ನಮ್ಮ ಮಧ್ಯೆಯಲ್ಲಿ ಸಂಸ್ಕೃತಿಯಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ , ವಯಸ್ಸಿನಲ್ಲಿ ವ್ಯತ್ಯಾಸಗಳಿರಬಹುದು ಆದರೂ ತೊಂದರೆಗಳು ಎಲ್ಲರನ್ನೂ ಪೀಡಿಸುವುವು. ಈ ಪ್ರತ್ಯಕ್ಷವಾದ ಪರಿಸ್ಥಿತಿಗಳು ಮಾತ್ರ ಚಿಂತೆಗೆ ಕಾರಣಗಳಾಗಿದ್ದಿದ್ದರೆ ನಾವೆಲ್ಲರೂ ಏಕೆ ಒಂದೇ ರೀತಿ ದುಃಖ ಅನುಭವಿಸುತ್ತಾ ಇದ್ದೇವೆ?
ನಿಮ್ಮ
ಚಿಂತೆಯನ್ನು
ಆಳವಾಗಿ
ಅವಲೋಕಿಸಿ
ನಮ್ಮ ಚಿಂತೆಗಳ ನಿಜವಾದ ಕಾರಣ ನಮ್ಮೊಳಗೇ ಆಳವಾಗಿ ಅಡಗಿಕೊಂಡಿದೆ. ನಿಮ್ಮ ಚಿಂತೆಗಳನ್ನು ಆಳವಾಗಿ ಅವಲೋಕಿಸಿದರೆ ಎಲ್ಲಾ ದುಃಖಗಳಂತೆ ಅದೂ ನಿಮ್ಮ ಜೀವನದಲ್ಲಿ ಬಹಿರಂಗವಾದ ಒಂದು ಘಟನೆ ಅಲ್ಲ - ಹೊರತು ಅದು ನಡೆದ ಘಟನೆಗೆ ನೀವು ನೀಡಿದ ಪ್ರತಿಕ್ರಿಯೆ ಎಂದು ಕಂಡು ಹಿಡಿಯುವಿರಿ. ಯಾವುದೇ ಒಂದು ಸಂದರ್ಭದಲ್ಲಿ ನಿಮಗೆ ಚಿಂತೆ ಆಗುವುದೋ ಇಲ್ಲವೋ, ಅದು ಸಂದರ್ಭಕ್ಕೆ ನೀವು ನೀಡಿದ ಪ್ರತಿಕ್ರಿಯೆಯು ನಿರ್ಧರಿಸುತ್ತದೆ.
ಉದಾಹರಣೆಗೆ ನಿಮ್ಮ ಮಿತ್ರನಿಗೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಅಂತ ಅಂದುಕೊಳ್ಳಿ. ಈ ಸುದ್ದಿಯನ್ನು ನೀವು ಎರಡು ವಿವಿಧ ರೀತಿಯಲ್ಲಿ ಗ್ರಹಿಸಬಹುದು.
ನೀವು ಅವನಿಗೆ ಬಹಳ ಒಳ್ಳೆ ಕೆಲಸ ಸಿಕ್ಕಿದೆ ಎಂದು ಯೋಚಿಸಬಹುದು. ಅಥವಾ ಅಯ್ಯೋ ದೇವರೇ ಅವನಿಗೆ ಎಷ್ಟು ಒಳ್ಳೆ ಕೆಲಸ ಸಿಕ್ಕಿದೆ! ನನ್ನ ಪಾಡು ಏನು? ನಾನು ಏನು ಮಾಡಲಿ? ನನ್ನ ಹೆಂಡತಿ ಏನು ಅನ್ನುತ್ತಾಳೋ ? ನಾನೂ ಬೇರೆ ಕೆಲಸ ಹುಡುಕಬೇಕೇ ? ನಾನು ಬೇರೆ ಒಳ್ಳೆ ಕೆಲಸಕ್ಕೆ ಯೋಗ್ಯವಾಗಿಲ್ಲದಿದ್ದರೆ ಏನು ಮಾಡಲಿ ? ನನ್ನ ಜೀವನದಲ್ಲಿ ಯಾಕೆ ಏನೂ ಸರಿಯಾಗಿ ನಡೆಯುವುದಿಲ್ಲ? ನೋಡಿದಿರಾ ? ಹೀಗೆ ನಿಮ್ಮ ಎಚ್ಚರಿಕೆ ಇಲ್ಲದೇನೇ ನೀವು ಚಿಂತೆಯಲ್ಲಿ ಬಿದ್ದುಹೋದೀರಿ ? ಹೇಗಿದ್ದರೂ ನಿಮ್ಮ ಮಿತ್ರನಿಗೆ ಇಲ್ಲೇ ಕೆಲಸ ಸಿಕ್ಕಿದ್ದ ವಿಷಯದಲ್ಲಿ ಅಷ್ಟೊಂದು ಚಿಂತಿಸುವಂಥದ್ದು ಏನಿದೆ ? ನೀವು ಸದಾಕಾಲ ಹೊರಗಡೆಯ ಅಥವಾ ಸಾಮಾಜಿಕ ವ್ಯವಸ್ಥೆಯ ಮಟ್ಟಕ್ಕೆ ನಿಮ್ಮ ಹೊಂದಾಣಿಕೆಯನ್ನು ಪರೀಕ್ಷಿಸಿಕೊಳ್ಳುತ್ತಿರುವುದರಿಂದ ನಿಮ್ಮೊಳಗೆ ಚಿಂತೆಯು ಉಂಟಾಗುವುದು. ನಾನು ನನ್ನ ನೆರೆಹೊರೆಯಲ್ಲಿರುವ ಜನಗಳ ಸಮಕ್ಷ ಯಶಸ್ವಿಯಾಗಿದ್ದೇನಾ ? ನನ್ನ 'ಬಾಸ್' ಗೆ ನನ್ನ ಬಗ್ಗೆ ಏನು ಅಭಿಪ್ರಾಯ ? ನನ್ನ ಮಕ್ಕಳು ನನ್ನ ಬಗ್ಗೆ ಏನು ತಿಳಿದುಕೊಳ್ಳುವರು ?
ಚಿಂತೆಯು ಒಂದು ಅವಶ್ಯಕತೆ ಆಗಬಲ್ಲದು
ಮಾನವನು ಸದಾಕಾಲ ತನ್ನ ಹೊರಗಿನಿಂದ ಅಥವಾ ಸಮಾಜದಿಂದ ಒಪ್ಪಿಗೆ ಪಡೆಯಲು ಏಕೆ ಬಯಸುವನು ? ಬಹಳ ದುಃಖಕರವಾದ ವಿಷಯ ಏನೆಂದರೆ ಬಹಳ ಹಿಂದೆಯೇ ನಾವೆಲ್ಲರೂ ನಮ್ಮಲ್ಲಿಯೇ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ಸದಾ ನಾವು ನಮ್ಮ ಅಸ್ತಿತ್ವದಲ್ಲಿ ಕೇಂದ್ರೀಕರಿಸಿಕೊಂಡು ಇದ್ದೆವು. ನೀವು ಯಾವುದಾದರೂ ಮಗು 'ಬೇರೆಯರು ಏನು ತಿಳಿದುಕೊಳ್ಳುತ್ತಾರೋ' ಎಂದು ಚಿಂತಿಸುವದನ್ನು ನೋಡಿದ್ದೀರಾ ? ಆದರೆ ನಾವು ದೊಡ್ಡವರಾಗುತ್ತಾ ಇದ್ದ ಹಾಗೆ ಸಮಾಜವು ನಮ್ಮನ್ನು ನಾವು ಬೇರೆಯವರ (ತಂದೆ ತಾಯಿಯರ, ಅಧ್ಯಾಪಕರ, ಸ್ನೇಹಿತರ) ಅಭಿಪ್ರಾಯಗಳ ಆಧಾರದ ಮೇಲೆ ವಿಮರ್ಶಿಸಲು ಹೇಳಿಕೊಟ್ಟು ಪಾತ್ರವಹಿಸುತ್ತದೆ. ಇದರ ಪರಿಣಾಮವಾಗಿ ನಾವು ದೊಡ್ಡವರಾಗುತ್ತಾ ಇದ್ದ ಹಾಗೆ ಮೆಲ್ಲನೆ ನಮ್ಮಲ್ಲಿ ನಾವು ವಿಶ್ವಾಸವನ್ನು ಕಳೆದುಕೊಳ್ಳುತ್ತಾ ಬರುತ್ತೇವೆ. ನಮ್ಮ ದೃಢ ನಂಬಿಕೆಗಳಿಗೆ ಮತ್ತು ನಾವು ಮಾಡಿದ ಕಾರ್ಯಗಳಿಗೆಲ್ಲ ಹೊರಗಡೆಯಿಂದ ಸಮರ್ಥನೆ ಇಲ್ಲದಿದ್ದರೆ, ಸಮಾಜದ 'ಪ್ರಮಾಣ ಪತ್ರ' ಇಲ್ಲದಿದ್ದರೆ ನಾವು ನಮ್ಮ ಅಹಂಕಾರವು ನಮ್ಮ ಪ್ರತಿಷ್ಠೆಯು ಬಿದ್ದು ಹೋಗುವುದು ಎಂದು ಹೆದರುತ್ತೇವೆ. ನೀವು ಚಿಂತೆಯಲ್ಲಿ ಏಕೆ ಮುಳುಗುವಿರಿ? ಇದಕ್ಕೆ ಕಾರಣವಿದೆ: ನೀವು ಚಿಂತೆ ಮಾಡಿದಾಗೆಲ್ಲ ನೀವು ಒಂದು ನಿಶ್ಚಿತವಾದ ಪ್ರಮಾಣಕ್ಕೆ ನಿಮ್ಮ ವಿಮರ್ಶೆನೆಯನ್ನು ಮಾಡಬಲ್ಲಿರಿ ಎಂಬುದು ನಿಮಗೆ ಒಂದು ಭದ್ರತೆಯ ಭಾವನೆಯು ನೀಡುವುದು. ಈ ಮಟ್ಟವು ನಿಮ್ಮ ಅಸ್ತಿತ್ವವನ್ನು ಕೇಂದ್ರೀಕರಿಸಿ ನಿಮ್ಮ ಜೀವನಕ್ಕೆ ಒಂದು ಖಂಡಿತವಾದ ದಿಕ್ಕನ್ನು ಕೊಡುತ್ತಿರುವುದರ ಹಾಗೆ ನಿಮಗೆ ಕಾಣುವುದು. ಚಿಂತೆಯೇ ಇಲ್ಲದಿದ್ದರೆ ನಿಮ್ಮ ಅಸ್ತಿತ್ವಕ್ಕೆ ಒಂದು ಅಕ್ಷೆಯೇ ಇಲ್ಲ ಎಂದು ನಿಮಗೆ ಅನಿಸುವುದು. ಇದೇ ಕಾರಣದಿಂದ ನಮ್ಮಲ್ಲಿ ಬಹಳ ಜನರಿಗೆ ಅವರ ಚಿಂತೆಗಳ ಮೇಲೆ ಬಹಳ ಅಕ್ಕರೆ ಇರುವುದು.
ಕೆಲವರು ನನ್ನಲ್ಲಿ ಬಂದು ಹೇಳುತ್ತಾರೆ ‘ನನ್ನ ಬಿಜಿನೆಸ್’ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ದಿನ ದಿನಕ್ಕೂ ನಷ್ಟ ಜಾಸ್ತಿ ಆಗುತ್ತಾ ಇದೆ ಮತ್ತು ಮುಂದಕ್ಕೆ ಹೋಗಿ ಪರಿಸ್ಥಿತಿಯು ಇನ್ನು ಗಂಭೀರವಾಗುವುದು.
ಆಗ ನಾನು ಅವರನ್ನು ಕೇಳುತ್ತೇನೆ “ನೀವು ಈ ಮಾತನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ನಿಮ್ಮ ‘ಬಿಜಿನೆಸ್’ ಅನ್ನು ಏಕೆ ಈಗಲೇ ಮುಚ್ಚಬಾರದು?”
“ನೀವು ಇದೇನು ಹೇಳುತ್ತಾಇದ್ದೀರಾ? ‘ಬಿಜಿನೆಸ್’ ಅನ್ನು ಮುಚ್ಚಿಬಿಟ್ಟರೆ ನನಗೆ ಮಾಡುವುದಕ್ಕೆ ಏನು ಇರುವುದು?” ಎಂದು ಅವರು ಗಾಬರಿಯಿಂದ ಪ್ರತಿಭಟಿಸುತ್ತಾರೆ.
ಅವರ ನಿಜವಾದ ಅರ್ಥವೇನೆಂದರೆ “ನನಗೆ ಆಗ ಚಿಂತಿಸುವುದಕ್ಕೆ ಏನು ಇರುವುದು?”
ಚಿಂತಿಸುವುದಕ್ಕೆ ನಿಮಗೆ ಏನೂ ವಿಷಯವು ಇಲ್ಲದಿದ್ದರೆ, ನಿಮ್ಮ ಅಹಂಕಾರಕ್ಕೆ, ನಿಮ್ಮ ಸೊಕ್ಕಿಗೆ ಅದರ ಲಂಗರನ್ನು ಕಳೆದುಕೊಂಡ ಹಾಗೆ ಆಗುವುದು - ಅದರ ಬದುಕಿನ ಉದ್ದೇಶವೇ ಕಳೆದುಹೋಗುವುದು. ಇದೇ ಕಾರಣದಿಂದ ನೀವು ದುಃಖದಲ್ಲೇ (ಚಿಂತೆಯಲ್ಲಿಯೇ) ಇರಲು ನಿರ್ಧರಿಸುವಿರಿ, ನೀವು ಅದಕ್ಕೆ ವಿರುದ್ಧವಾದ ಆನಂದದ ಮಾರ್ಗದಲ್ಲಿ ಹೊಂದಿಕೊಳ್ಳಲಾರಿರಿ ಏಕೆಂದರೆ ಆ ಮಾರ್ಗದಲ್ಲಿ ನಿಮ್ಮ ಪ್ರತಿಷ್ಠೆಯು ಇರುವುದಿಲ್ಲ ! ಆನಂದವನ್ನು ಪಡೆಯುವುದಕ್ಕೆ ನಿಮ್ಮ ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಅವಶ್ಯ. ನೀವು ಇದಕ್ಕೆ ತಯಾರಾಗಿದ್ದೀರಾ ? ಇಲ್ಲ - ನೀವು ನಿಮ್ಮ ಈ ಸೊಕ್ಕನ್ನು ಖಾಯಾಮ್ಲಾಗಿಟ್ಟುಕೊಂಡಿರುವುದಕ್ಕೆ, ಚಿಂತಿಸುವುದಕ್ಕೆ ಯಾವುದಾದರೂ ಒಂದು ನೆಪವನ್ನು ಹುಡುಕಿಟ್ಟುಕೊಂಡಿರುವಿರಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮ್ಮನ್ನು ಬಹಳ ತೊಂದರೆಗಳು ಪೀಡಿಸುತ್ತಿರುವಾಗ ಬೇರೆಯವರು ಬಹಳ ಸಂತೋಷವಾಗಿದ್ದಾರೆ ಎಂದು ಚಿಂತಿಸುವಿರಿ. ಆದರೆ ವಿನೋದವಾದ ಮಾತು ಏನೆಂದರೆ ಪ್ರತಿ ಒಬ್ಬರೂ ಹೀಗೆ ಯೋಚಿಸುತ್ತಿರುವುದು. ಅದು ಹೇಗೆ ಸಾಧ್ಯ?
ಒಂದು ದೇಶದ ರಾಜನಿಗೆ ತನ್ನ ಪ್ರಜೆಗಳು ಸಂತೋಷವಾಗಿಲ್ಲ ಎಂದು ಗಮನಕ್ಕೆ ಬಂತು. || ಒಂದು ಇದಕ್ಕೆ ಕಾರಣವೇನೆಂದರೆ ಪ್ರತಿಯೊಬ್ಬರಿಗೂ ತಾನು ಅನುಭವಿಸುತ್ತಿರುವ ದುಃಖ ಚಿಂತೆಗಳು || ಸಣ್ಣ ಮಾತ್ರ ದೊಡ್ಡದು ಆದರೆ ಮತ್ತೊಬ್ಬರ ತೊಂದರೆಗಳೂ ಬಹಳ ಸಣ್ಣ ಪುಟ್ಟದ್ದು ಅಂತ || ಕಥೆ: ಮನಸ್ಸಿಗೆ ಹಚ್ಚಿಕೊಂಡಿದ್ದರು. ||
ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ರಾಜನು ಒಂದು ಮಹಾ 'ಚಿಂತೆ ಬದಲಾಯಿಸುವ ಬೇಡಿಕೆ' ಎಂಬ ಕಾರ್ಯಕ್ರಮವನ್ನು ಘೋಷಣೆ ಮಾಡಿದನು. ಇದರ ಪ್ರಕಾರ ಜನರು ತಮ್ಮ ದೊಡ್ಡ ಚಿಂತೆಗಳನ್ನು ಬೇರೆಯವರಿಗೆ ಕೊಟ್ಟು ಅವರ ಸಣ್ಣ ಪುಟ್ಟ ಚಿಂತೆಗಳನ್ನು ತಾವು ತೆಗೆದುಕೊಳ್ಳಬಹುದಾಗಿತ್ತು. ವಿಶಾಲವಾದ ಒಂದು ಸ್ಥಳವನ್ನು ತಯಾರು ಮಾಡಲಾಗಿತ್ತು - ಅದರ ಮಧ್ಯದಲ್ಲಿ ಒಂದು ದೊಡ್ಡ ಮಡಿಕೆಯನ್ನು ಇರಿಸಲಾಗಿತ್ತು. ಮಡಿಕೆಯೊಳಗೆ ಸಂತೋಷವಾಗಿ ಯಾರೊಬ್ಬರು ತಮ್ಮ ಚಿಂತೆಗಳನ್ನು ಬಿಸಾಡಿ ಬೇರೆ ಯಾರಾದರ ಚಿಂತೆಗಳನ್ನು ಆಯ್ಕೆ ಮಾಡಬಹುದಾಗಿತ್ತು. ಈ ಕಾರ್ಯಕ್ರಮಕ್ಕೆ ಇಡೀ ರಾಜ್ಯದ ಜನರು ಸೇರಿಕೊಂಡಿದ್ದರು. ಅಪರಿಚಿತರು ಸೇರಿ ತಮ್ಮ ಜೊತೆಗೆ ತಂದಿದ್ದ ಚಿಂತೆಗಳ ಬಗ್ಗೆ ಚರ್ಚೆ ಮಾಡಲು ಆರಂಭಿಸಿದರು. ಸರಿಯಾದ ಸಮಯಕ್ಕೆ ಕಾರ್ಯಕ್ರಮದ ಆರಂಭವನ್ನು ಪ್ರಕಟಣೆ ಮಾಡಲಾಯಿತು. ತನ್ನ ಚಿಂತೆಗಳನ್ನು ಅದಲು ಬದಲು ಮಾಡುವುದಕ್ಕೆ ಒಬ್ಬ ಕೂಡ ಮುಂದೆ ಬರಲಿಲ್ಲ ಎಂಬ ಮಾತಿನಲ್ಲಿ ಆಶ್ಚರ್ಯವೇ ಇಲ್ಲ! ತನಗೆ ಪರಿಚಯ ಇದ್ದ ಸಣ್ಣಪುಟ್ಟ ಚಿಂತೆಗಳನ್ನು ಬಿಟ್ಟು ಬೇರೆಯವರ ಪರಿಚಯವಿಲ್ಲದ ಚಿಂತೆಗಳನ್ನು ತೆಗೆದುಕೊಳ್ಳುವುದಕ್ಕೆ ಯಾರೂ ಸಿದ್ಧರಾಗಿರಲಿಲ್ಲ!
ಮನಸ್ಸು ಚಿಂತೆಗಳ ಮಾಲೀಕ
ಚಿಂತೆಗಳಿಂದ ಮುಕ್ತಿ ಪಡೆದು ನೆಮ್ಮದಿಯಿಂದಿರುವುದು ಹೇಗೆ ಎಂದು ವಿಚಾರ ಮಾಡುವುದಕ್ಕೆ ಮುಂಚೆ, ನಾವು ಚಿಂತಿಸಿದಾಗೆಲ್ಲ ನಮ್ಮೊಳಗೆ ಉಂಟಾಗುವ ಸ್ಥಿತಿಯ ಪರಿಶೀಲನೆಯನ್ನು ಮಾಡುವುದು ಅಗತ್ಯ. ನೀವು ಯಾವುದೇ ಒಂದು ವಿಷಯದ ಬಗ್ಗೆ ಚಿಂತೆ ಮಾಡುತ್ತಿರುವಾಗ ನಿಮ್ಮ ಮನಸ್ಸನ್ನು ಸಮೀಪವಾಗಿ ವೀಕ್ಷಿಸಿ. ಒಂದಕ್ಕೊಂದು ಸಂಬಂಧ ಇಲ್ಲದೆ, ಹೆಚ್ಚಾಗಿ ನಕಾರಾತ್ಮಕ ಸ್ವರೂಪವಾಗಿರುವ (ನೆಗೆಟಿವ್) ಯೋಚನೆಗಳ ಪ್ರವಾಹ ಉಂಟಾಗುತ್ತಿರುವುದನ್ನು ನೀವು ಕಂಡು ಹಿಡಿಯುವಿರಿ.
ವಾಸ್ತವವಾಗಿ ನಾವೆಲ್ಲರೂ ಎರಡು ಬಗೆಯ ಮಾತುಗಳನ್ನು ಅನುಸರಿಸುತ್ತೇವೆ - 'ಹೊರಗಿನ ಮಾತು' ಮತ್ತು 'ಒಳಗಿನ ಮಾತು'. ಬೇರೆಯವರ ಜೊತೆ ಸಂಭಾಷಣೆಯನ್ನು ನಾವು ಸಾಮಾನ್ಯವಾಗಿ 'ಮಾತು' ಎಂದು ಕರೆಯುತ್ತೇವೆ. ಆದರೆ ನಮ್ಮೊಡನೇ ನಾವು ನಡೆಸುತ್ತಿರುವ ಮೌನವಾದ ಒಳಗಿನ ಸಂಭಾಷಣೆಯ ಬಗ್ಗೆ ಏನು ಹೇಳೋಣ? ಈ ಹಿಡಿತವಿಲ್ಲದ ಒಳಗಿನ 'ಹರಟೆ', ನಿಮ್ಮ ಮನಸ್ಸಿನ ಒಂದು ಕಾಣಿಕೆ - ಈ ಮನಸ್ಸೇ ನಿಮ್ಮ ಎಲ್ಲಾ ಚಿಂತೆಗಳ ಮೂಲ! ಈ ಒಳಗಿನ ಹರಟೆಯೇ (ಚಿಂತೆ) ನಿಮ್ಮ ಮೇಲೆ ಯಜಮಾನಿಕೆ ಹೊಂದಿಕೊಂಡಿರುವ ನಿಮ್ಮ ನಿಜವಾದ ಮಾಲೀಕ.
ಒಂದು ಕ್ಷಣವೂ ವಿರಾಮ ಇಲ್ಲದೆ ನಿರಂತರವಾದ ಮಾತೇ ಈ ಒಳಗಿನ ಹರಟೆಯ ಒಂದು ಗುಣ. ಇದು ಒಂದು ವಿಧವಾದ ಹುಚ್ಚುತನ. ಮಾನವನಿಗೆ ಈ ಹುಚ್ಚುತನದಿಂದ ಆಗಾಗ್ಗೆ ತಪ್ಪಿಸಿಕೊಳ್ಳುವುದಕ್ಕೆ ಬೇರೆಯವರ ಜೊತೆ ಮಾತನಾಡುವುದು ಒಂದು ದಾರಿ. ಇದೇ ಕಾರಣದಿಂದ ಈ ಪ್ರಪಂಚದಲ್ಲಿ ನಿರಂತರವಾಗಿ ಇಷ್ಟೊಂದು ಮಾತು ನಡೆಯುತ್ತಾ ಇರುವುದು.
'ಒಳಗಿನ ಹರಟೆ' ಅಂದರೆ ಏನು ? ಇದನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಲ್ಲವೇ ?
ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಈ ಪ್ರಯೋಗವನ್ನು ಮಾಡಿ : ಒಂದು ಜಾಗದಲ್ಲಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಯಾವುದೇ ಒಂದು ವಿಷಯದ ಮೇಲೆ ವಿಶೇಷವಾಗಿ ಗಮನಿಸಬೇಡಿ. ಕೆಲವು ಕ್ಷಣಗಳಲ್ಲೇ ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಯೋಚನೆಗಳ ಪ್ರವಾಹ ಆಗುತ್ತಿರುವುದು ನಿಮಗೆ ಗೊತ್ತಾಗುವುದು. ನಿಮಗೆ ಬಂದಿದ್ದ ಯೋಚನೆಗಳನ್ನೆಲ್ಲ ಏನೂ ಬಿಡದೆ, ಪ್ರಾಮಾಣಿಕತೆಯಿಂದ ಒಂದು ಚೀಟಿಯ ಮೇಲೆ ಬರೆಯುತ್ತಾ ಬನ್ನಿ. ಇದೇ ರೀತಿ ಐದು ನಿಮಿಷ ಕಾಲ ಮಾಡಿ. ಇದಾದ ನಂತರ ನೀವು ಚೀಟಿಯ ಮೇಲೆ ಬರೆದಿರುವುದನ್ನು ಓದಿ.
ಓದಿ ಗಾಬರಿ ಆಯಿತೇ ? ಇದೇ ನಿಮ್ಮ ಒಳಗಿನ ಹರಟೆಯ ಒಂದು ದಾಖಲೆ (ರೆಕಾರ್ಡ್). ಒಂದಕ್ಕೊಂದು ಹೊಂದಿಕೆಯಿಲ್ಲದಿರುವ ಯೋಚನೆಗಳು! ಒಂದಕ್ಕೊಂದು ಸಂಬಂಧವಿಲ್ಲದ ಸಂಪೂರ್ಣವಾಗಿ ನಿರರ್ಥಕವಾಗಿರುವ ಯೋಚನೆಗಳು ! ಎಂತಹ ಹುಚ್ಚು ! ನಿಮ್ಮ ತಲೆಯೊಳಗೆ ಒಂದು ಸಂಪೂರ್ಣವಾದ ಹುಚ್ಚಾಸ್ಪತ್ರೆಯನ್ನು ಓಡಿಸುತ್ತಾ ಇರುವಿರಿ ಎಂದು ಈಗ ಗೊತ್ತಾಯಿತೇ ?
ಇದೇ ನಿಮ್ಮ ಮನಸ್ಸಿನ ನಿಜವಾದ ಸ್ವಭಾವ - ಈ ಸಂಪೂರ್ಣವಾಗಿ ಹಿಡಿತವಿಲ್ಲದ ಯೋಚನೆಗಳ ಪ್ರವಾಹ. ಈ ಹುಚ್ಚುತನದ ಒಂದು ಸ್ವರೂಪ ! ಇದೇ ನಿಮ್ಮ ಚಿಂತೆಗಳನೆಲ್ಲ ಹುಟ್ಟಿಸಿರುವ ಮನಸ್ಸು ! ಇದೇ ಮನಸ್ಸಿಗೆ ನಿಮ್ಮ ಜೀವನವನ್ನು ವಹಿಸಿಕೊಟ್ಟಿದ್ದೀರ ! ನೀವು ನಿಮ್ಮ ಮನಸ್ಸಿನ ಬಗ್ಗೆ ಇಷ್ಟು ಅರ್ಥ ಮಾಡಿಕೊಂಡಿದ್ದರೆ ಸಾಕು - ಇದೇ ತಿಳಿವಳಿಕೆಯು ನಿಮ್ಮನ್ನು ಚಿಂತೆಯಿಂದ ಮುಕ್ತಿ ಪಡೆಯುವುದಕ್ಕೆ ವೇಗವರ್ಧಕವಾಗಿರುವುದು.
ಒಮ್ಮೆ ನಿತ್ತಿ ಮೊದಲಿಯಾರರು ಒಂದು 'ಕಾರು' ಕೊಂಡುಕೊಂಡು ಮೊದಲನೆಯ ಸವಾರಿ ಮಾಡಲು ಹೊರಟರು. ಊರೆಲ್ಲ ಸುತ್ತುತ್ತಿದ್ದಾಗ ಜನಗಳು ಅವರನ್ನು ಮೆಚ್ಚಿಕೆಯಿಂದ ನೋಡುತ್ತಾ ನಿಂತರು. ಆದರೆ ನಿಜ ಏನು ಅಂದರೆ ನಿತ್ತಿ ಬಹಳ ಗಾಬರಿಯ ಸ್ಥಿತಿಯಲ್ಲಿದ್ದರು. ಅದು ಏಕೆಂದರೆ, ಅವರು ಹೊರಟ ತಕ್ಷಣವೇ ಅವರಿಗೆ ಒಂದು ವಿಷಯ ಹೊಳೆಯಿತು - ಅವರು ಕಾರನ್ನು ನಿಲ್ಲಿಸುವ ವಿಧಾನ ಒಂದು ಬಿಟ್ಟು ಬೇರೆ ಎಲ್ಲಾ ವಿಷಯಗಳನ್ನೂ ತಿಳಿದುಕೊಂಡಿದ್ದರು!
ಆದರೆ ಅದೃಷ್ಟವಶಾತ್, ಕಾರು ಒಂದು ಮರಕ್ಕೆ ಮಾತ್ರ ಡಿಕ್ಕಿ ಹೊಡೆದು ನಿಂತಿತು!
ಹಾದು ಹೋಗುವ ಒಬ್ಬ ವ್ಯಕ್ತಿ ಆಶ್ಚರ್ಯದಿಂದ ನಿತ್ತಿಯವರನ್ನು ವಿಚಾರಿಸಿದ, "ನಿಮಗೆ ಏನು 'ಸಮಸ್ಯೆ'? ಡ್ರೈವ್ ಮಾಡುವುದಕ್ಕೆ ಬರುವುದಿಲ್ಲವೊ?"
"ಖಂಡಿತ ಬರುತ್ತೆ" ಎಂದು ನಿತ್ತಿ ಕೋಪದಿಂದ ಕೂಗಿದರು. "ನನಗೆ ಕೇವಲ ಅದನ್ನು ನಿಲ್ಲಿಸುವುದಕ್ಕೆ ಬರುವುದಿಲ್ಲ!"
ವಾಸ್ತವವಾಗಿ ನಿತ್ತಿ ಕಾರನ್ನು 'ಡ್ರೈವ್' ಮಾಡುತ್ತಾ ಇರಲಿಲ್ಲ. ಕಾರು ಅವರನ್ನು ಡ್ರೈವ್ ಮಾಡುತ್ತಾ ಇತ್ತು, ಅವರನ್ನು 'ಕಂಟ್ರೋಲ್' ಮಾಡುತ್ತಾ ಇತ್ತು! ಕಾರಿನ ಇಷ್ಟದ ಪ್ರಕಾರ ಅಲ್ಲ ಹೊರತು ನಿಮ್ಮ ಇಚ್ಛೆಯ ಪ್ರಕಾರ ಕಾರನ್ನು ಚಲಿಸುವ ಅಥವಾ ನಿಲ್ಲಿಸುವ ಯೋಗ್ಯತೆ ನಿಮ್ಮಲ್ಲಿದ್ದರೆ ಮಾತ್ರ ನೀವು 'ಡ್ರೈವ್' ಮಾಡುತ್ತಾ ಇರುವಿರಿ ಎಂದು ಹೇಳಬಹುದು.
ಹೀಗೆ ನೀವು ಕೂಡ ನಿಲ್ಲಿಸುವ ವಿಧಾನ ಗೊತ್ತಿಲ್ಲದೆ ಇರುವ ಒಂದು ವಾಹನವನ್ನು ಓಡಿಸುತ್ತಾ ಇದ್ದೀರಾ
- ನಿಮ್ಮ ಮನಸ್ಸು! ನಿಮ್ಮ ಒಳಗಿನ ಹರಟೆಯನ್ನು ಒಂದು ಕ್ಷಣಕ್ಕಾದರೂ ನಿಲ್ಲಿಸಲು ನೋಡಿ. ಸಾಧ್ಯವೇ?
ಒಂದು
ಸಣ್ಣ
ಕಥೆ:
ಪ್ರಯತ್ನ ಮಾಡಿದರೂ ನಿಮ್ಮ ಯೋಚನೆಗಳ ಪ್ರವಾಹವನ್ನು 'ನಿಯಂತ್ರಣ' ಮಾಡುವುದು ಕಷ್ಟವಲ್ಲವೆ? ಅದು ಹೇಗೆ ಅಂದರೆ ನಿಮ್ಮನ್ನು ಒಂದು ಸೀಟ್ಬೆಲ್ಟ್ ಇಂದ ಕಟ್ಟಿಹಾಕಿ ಕಾರು ತಾನೆ ಇಷ್ಟ ಬಂದ ದಿಕ್ಕಿನಲ್ಲಿ ಓಡುತ್ತಾ ಇರುವ ಹಾಗೆ ! ಶಾರೀರಿಕ ಆಪತ್ತಿನಲ್ಲಾದರೆ ನಾವು ನಮ್ಮ ಈ ಒಂದು ಜೀವವನ್ನು ಮಾತ್ರ ಕಳೆದುಕೊಳ್ಳಬಹುದು - ಆದರೆ ನಾವು ನಮ್ಮ ಒಳಗಿನ ಹರಟೆಗೆ ಗುಲಾಮರಾಗಿದ್ದರೆ ನಾವು ಜನ್ಮ ಜನ್ಮಾಂತರ ನಮ್ಮ ಮನಸ್ಸುರೂಪಿ ವಾಹನದ ವಶದಲ್ಲಿ ಇರಬೇಕಾಗುತ್ತದೆ - ಮತ್ತು ಏನು ಗೊತ್ತುಗುರಿ ಇಲ್ಲದೆ, ಎಚ್ಚರಿಕೆ ಇಲ್ಲದೆ ನಮ್ಮ ಜೀವನವು ಒಂದು ಹುಚ್ಚಿನ ಸಮಾನ ನಡೆಯುವುದು.
ಚಿಂತೆಗಳು ಯಾವಾಗ ಕೊರಗು (ಡಿಪ್ರೆಷನ್) ಆಗುವುವು ?
ಡಿಪ್ರೆಷನ್ (Depression) ಅಥವಾ ಕೊರಗು ಬೇರೆ ಏನೂ ಅಲ್ಲ - ಅದು ದೀರ್ಘಕಾಲದ ಚಿಂತೆ ಅಥವಾ ಮನಸ್ಸಿನ ತಲ್ಲಣದ ಒಂದು ವೈದ್ಯಕೀಯ ನಾಮ.
ದೀರ್ಘಕಾಲದ ಚಿಂತೆ ಅಂದರೆ ಏನು ?
ನಮ್ಮ ಮನಸ್ಸು ಅತಿ ಉತ್ತಮವಾಗಿರುವ ಒಂದು ದಾಖಲಿಸುವ ವ್ಯವಸ್ಥೆ (ರೆಕಾರ್ಡಿಂಗ್ ಸಿಸ್ಟಮ್) ಅಥವಾ ಕೂಡಿಡುವಿಕೆಯ ವ್ಯವಸ್ಥೆ ಎಂದು ಹೇಳಬಹುದು. ಅದು ನಿಮ್ಮ 'ನಕಾರಾತ್ಮಕ' ಯೋಚನಾ ಕ್ರಮಗಳು, ನಿಮ್ಮ ತೊಂದರೆಗಳು, ಗೊಂದಲ, ಇವುಗಳನೆಲ್ಲ ಕೂಡಿಟ್ಟುಕೊಂಡಿರುವುದು. ವಾಸ್ತವವಾಗಿ ನಿಮ್ಮ ಮನಸ್ಸು ಒಂದು ಸುದ್ದಿ ಭಂಡಾರ. ನಿಮ್ಮ ಮನಸ್ಸಿಗೆ ನೀವು ಏನು ಹೇಳಿಕೊಡುತ್ತೀರೋ ಅಥವಾ ಯಾವ ಸುದ್ದಿಯನ್ನು, ಅಭಿಪ್ರಾಯಗಳನ್ನು, ವಿಚಾರಗಳನ್ನು ನೀಡುತ್ತೀರೋ, ನಿಮ್ಮ ಮನಸ್ಸು ಅದನ್ನು ಚೆನ್ನಾಗಿ ಕಲಿತುಕೊಂಡು ನಿಮಗೆ ಪದೇ ಪದೇ ಹಿಂತಿರುಗಿಸಿ ತಿಳಿಸುತ್ತಾಇರುವುದು ! ಎಚ್ಚರಿಕೆಯಿಂದಿರಿ !
ಉದಾಹರಣೆಗೆ ನಿಮ್ಮ ‘ಬಿಸಿನೆಸ್’ ನಲ್ಲಿ ನೀವು ಬಹಳ ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಾ ಇದ್ದೀರಾ. ಅದೇ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿಯೂ ಬಹಳ ಮನಸ್ತಾಪವಾಗಿಬಿಟ್ಟು ವಿವಾಹ ವಿಚ್ಛೇದ ಆಗುವ ಸ್ಥಿತಿಗೆ ಬಂದಿರುವುದು. ಈ ಸಂದರ್ಭಗಳಲ್ಲಿ ನಿಮಗೆ ಬಹಳ ನಿರಾಶೆ ಉಂಟಾಗಿ ನೀವು ನಿಮ್ಮದೇ ಏನೋ ದೋಷ ಇದೆ, ಕೊರತೆ ಇದೆ ಎಂದು ನಂಬಲು ಆರಂಭಿಸಬಹುದು. ನಿರಂತರವಾಗಿ ಈ ತತ್ವವನ್ನು ನಿಮಗೆ ನೀವೇ ತಿರುಗಿ ತಿರುಗಿ ಹೇಳಿಕೊಳ್ಳುತ್ತಾ ಬಂದರೆ ನಿಮ್ಮ ಮನಸ್ಸು ರೂಪಿ ರೆಕಾರ್ಡಿಂಗ್ ಸಿಸ್ಟಮ್ ಅಥವಾ ‘ಮೆಮರಿ’ ಯಲ್ಲಿ ಈ ತತ್ವವು ಆಳವಾಗಿ ನೆಲೆಗೊಳ್ಳುವುದು. ಕಾಲ ಕಳೆದಂತೆ ಬೇರೆ ಬೇರೆ ವಿವಿಧ ಸಂದರ್ಭಗಳಲ್ಲಿಯೂ ನಿಮ್ಮ ಮನಸ್ಸು ನಿಮಗೆ ಗೊತ್ತಿಲ್ಲದೆ ನೀವು ನೀಡಿದ ತತ್ವವನ್ನು ತಾನಾಗಿ ತಾನೆ, ನಿಮಗೆ ಹಿಂತಿರುಗಿಸಿ ತಿಳಿಸುತ್ತಾ ಇರುವುದು (Play back ಮಾಡುವುದು). ಪದೇ ಪದೇ ನಿಮಗೆ ಈ ರೀತಿ ಮನಸ್ಸಿನ ತಲ್ಲಣ ಆದರೆ, ನಿಮಗೆ ಪರರಿಗಿಂತ ನೀವು ಬಹಳ ಕಡಿಮೆ ಎಂದು ತಿಳಿಯುವ ಮಾನಸಿಕ ರೋಗ (ಕೀಳರಿಮೆ ಅಥವಾ inferiority complex) ಉಂಟಾಗುವುದು.
ತಪ್ಪು ಆಹಾರ ಪದ್ಧತಿಗಳಿಂದ ನಮ್ಮ ದೇಹದಲ್ಲಿ ಹೇಗೆ ಕೊಬ್ಬು ಉಂಟಾಗಿ ಸಂಗ್ರಹವಾಗುವುದೋ ಅಥವಾ ಕೊಲೆಸ್ಟ್ರಾಲ್ (cholestrol) ಹೇಗೆ ನಿಮ್ಮ ರಕ್ತವಾಹಿನಿಗಳಲ್ಲಿ ಸಂಗ್ರಹವಾಗುವುದೋ ಇದೇ ರೀತಿಯಲ್ಲಿ ಸದಾಕಾಲ ಚಿಂತಿಸುವುದರಿಂದ ಚಿಂತೆಗಳು ನಿಮ್ಮ ಅಂತರಂಗದೊಳಗೆ ಘನೀಕರಿಸುವುದು, (ಗಟ್ಟಿಯಾಗಿ ನಿಲ್ಲುವುದು) - ಮತ್ತು ಹೇಗೆ ‘ಕೊಲೆಸ್ಟ್ರಾಲ್’ ನಿಮ್ಮ ರಕ್ತವಾಹಿನಿಗಳಲ್ಲಿ ತಡೆಗಟ್ಟನ್ನು ಉಂಟುಮಾಡುವುದೋ ಅದೇ ರೀತಿಯಲ್ಲಿ ‘ಡಿಪ್ರೆಷನ್’ ನಿಮ್ಮ ಅಂತರಂಗದೊಳಗೆ ‘ಎನೆರ್ಜಿ’ಯ (ಚೈತನ್ಯದ) ಪ್ರವಾಹವನ್ನು ತಡೆಹಿಡಿಯುವುದು. ನೀವು ಸಂಪೂರ್ಣವಾಗಿ ಕುಗ್ಗಿ ಹೋಗುವಿರಿ - ಇದು ಒಂದು ಸಂಪೂರ್ಣ ಆಶಾರಹಿತವಾದ ಸ್ಥಿತಿ - ನಮ್ಮ ಜೀವನದ ಅಧಿಕಾರವನ್ನು ನಾವೇ ನಿರ್ಮಿಸಿದ ಪೆಡಂಬಭೂತನಿಗೆ ಒಪ್ಪಿಸಿಕೊಟ್ಟಿರುವ ಸ್ಥಿತಿ !
ಶಾರೀರಿಕ ಸ್ತರದಲ್ಲಿ ಚಿಂತೆಯು ಹೊಟ್ಟೆಯ ಕಾಯಿಲೆಗಳಲ್ಲಿ ಕಾಣಿಸಿಕೊಳ್ಳುವುದು (ಪರೀಕ್ಷೆಯ ಅಥವಾ ನೌಕರಿಯ ಸಂದರ್ಶನದ (interview) ದಿನವು ನೀವು ಪದೇ ಪದೇ 'ಬಾತ್ರೂಮ್'ಗೆ ಹೋಗುವ ಅವಶ್ಯಕತೆಯನ್ನು ಗಮನಿಸಿ). ಇದರ ಪ್ರಾಮುಖ್ಯತೆ ಏನೆಂದರೆ ಚಿಂತೆಗೆ ನಾಭಿಯ ಹತ್ತಿರ ಇರುವ ಮಣಿಪೂರಕ ಚಕ್ರದ ಒಡನೆ ಬಹಳ ಸಮೀಪದ ಸಂಬಂಧ ಇದೆ. ನಮ್ಮ ದೇಹದಲ್ಲಿ ಆಹಾರ ಪಚನ ಮತ್ತು ಮಲ ವಿಸರ್ಜನೆಯನ್ನು ಪಾಲಿಸುತ್ತಿರುವ ಈ ಚಕ್ರದ ಚೈತನ್ಯವು ದೀರ್ಘಕಾಲ ಚಿಂತೆಯಿಂದ ಸೆರೆಯಾಗುವುದು ಮತ್ತು ಹೊಟ್ಟೆಯ ಕಾಯಿಲೆಗಳು ಉಂಟಾಗುವುವು.
ಚಿಂತೆಯನ್ನು ಹೇಗೆ ಕೈವಶ ಮಾಡಿಕೊಳ್ಳಬಹುದು
ಚಿಂತೆ ಏನು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ನಮಗೆ ನಮ್ಮ ಮನಸ್ಸಿನ ಸ್ವಭಾವದ ಒಂದು ಅಗಾಧವಾದ ಒಳನೋಟದ ಅವಶ್ಯಕತೆ ಇದೆ. ನಮ್ಮ ಮನಸ್ಸೇ ಚಿಂತೆಗೆ ಒಂದು ಮಾರ್ಗವಾಗಿದ್ದರಿಂದ, ಅದೇ ಮಾರ್ಗದಿಂದ ನಾವು ಚಿಂತೆಯಿಂದ ಹೊರಗೂ ಬರಬಹುದು. ಇದನ್ನು ಬಿಟ್ಟು ನಾವು ಚಿಂತೆಯ ಪರಿಹಾರವನ್ನು ಬೇಡವಾದ ಜಾಗಗಳಲ್ಲಿ (ಹೊರಗಿನ ಪರಿಸ್ಥಿತಿಗಳಲ್ಲಿ) ಹುಡುಕುತ್ತಾ ಇರುತ್ತೇವೆ. ನಾವು ಸದಾ ಅಂದುಕೊಳ್ಳುತ್ತಾ ಇರುತ್ತೇವೆ, ನನಗೆ ಸಾಕಷ್ಟು ಹಣವಿದ್ದಿದ್ದರೆ ನನಗೆ ಏನೂ ಚಿಂತೆಯೇ ಇರುತ್ತಿರಲಿಲ್ಲ, ನಾನು ನೋಡುವುದಕ್ಕೆ ಇನ್ನೂ ಚೆನ್ನಾಗಿದ್ದಿದ್ದರೆ ಎಷ್ಟು ಸಂತೋಷವಾಗಿರುತ್ತಿದ್ದೆ, ಅದಿದ್ದರೆ, ಇದಿದ್ದರೆ...... ಎಂದು
.....ನಿಜವಾಗಿಯೂ ಇದು ಒಂದು ಪ್ರಯೋಜನವಿಲ್ಲದ ಅಭ್ಯಾಸ!
ಒಂದು ರಾತ್ರಿ ನಿತ್ತಿ ಮೊದಲಿಯಾರರು ಅವರ ಮನೆಯ ಅಂಗಳದಲ್ಲಿ ಯಾವುದೋ ವಸ್ತುವನ್ನು ಬಹಳ ಆಸಕ್ತಿಯಿಂದ ಹುಡುಕುತ್ತಿರುವಂತೆ ಕಾಣಿಸಿದರು. ಅವರ ಹೆಂಡತಿಯು ಅವರನ್ನು ಅದರ ವಿಷಯವಾಗಿ ವಿಚಾರಿಸಿದಾಗ ತಾವು ಒಂದು ನಾಣ್ಯವನ್ನು ಕೆಳಗೆ ಬೀಳಿಸಿ ಕೊಂಡಿರುವುದಾಗಿ, ಉತ್ತರಿಸಿದರು. ಹೆಂಡತಿಯೂ ಆಗ ನಾಣ್ಯವನ್ನು ಹುಡುಕಲು ಸಹಾಯ ಮಾಡಿದಳು. ಸ್ವಲ್ಪ ಹೊತ್ತಿನಲ್ಲಿ ನೆರೆಹೊರೆಯಲ್ಲಿರುವ ಸುಮಾರು ಎಲ್ಲ ಜನರೂ ನಾಣ್ಯವನ್ನು ಹುಡುಕಲು ಆರಂಭಿಸಿದರು - ಆದರೂ ಏನು ಪ್ರಯೋಜನವಾಗಲಿಲ್ಲ!
"ನೀವು ನಾಣ್ಯವನ್ನು ಬೀಳಿಸಿದ ಸರಿಯಾದ ಸ್ಥಳ ಯಾವುದು?" ಎಂದು ಛಕ್ಕನೆ ಆ ಗುಂಪಿನಲ್ಲಿದ್ದ ಒಬ್ಬ ಯುವಕನು ನಿತ್ತಿಯವರನ್ನು ಕೇಳಿದ. "ಅರ್ಧ ಗಂಟೆ ಕಾಲ ಹುಡುಕಿದ ಮೇಲೆಯೂ ಏನೂ ಪರಿಣಾಮವಾಗಲಿಲ್ಲವಲ್ಲ!"
"ನಾನು ನಾಣ್ಯವನ್ನು ಮನೆಯ ಒಳಗೆ ಕಳೆದುಕೊಂಡೆ" ಎಂದು ನಿತ್ತಿ ಉತ್ತರ ಕೊಟ್ಟರು.
"ಹಾಗಾದರೆ ನಾವು ಇಲ್ಲಿ ಏಕೆ ಹುಡುಕುತ್ತಿದ್ದೇವೆ?" ಎಂದು ಗುಂಪಿನಲ್ಲಿದ್ದ ಒಬ್ಬ ಆಶ್ಚರ್ಯದಿಂದ ಕೇಳಿದ.
"ಅದೇನು ಸಮಸ್ಯೆ ಎಂದರೆ ನಮ್ಮ ಮನೆಯೊಳಗೆ ದೀಪ ಇಲ್ಲ. ಇಲ್ಲಾದರೆ ಬೀದಿಯ ದೀಪವು ಇದೆ. ಇದರ ಬೆಳಕಿನಲ್ಲಿ ನಾವು ನಾಣ್ಯವನ್ನು ಹುಡುಕಬಹುದು".
ನಿತ್ತಿಯ ಪೆದ್ದುತನವನ್ನು ನೋಡಿ ನಗು ಬಂತೆ? ನಾವು ಕೂಡ ಚಿಂತೆಯ ಕಾರಣಗಳು ಮತ್ತು ಲಕ್ಷಣಗಳು ಗೊತ್ತಿಲ್ಲದೆ, ಇದೇ ರೀತಿಯಲ್ಲಿ ಬೇಡವಾದ ಜಾಗಗಳಲ್ಲಿ ಚಿಂತೆಯಿಂದ ಮುಕ್ತಿ ಪಡೆಯಲು ಪ್ರಯತ್ನಿಸುತ್ತೇವೆ.
ಆದರೆ ನೀವು ಮನಸ್ಸಿನ ಸ್ವಭಾವವನ್ನು ಅರ್ಥ ಮಾಡಿಕೊಂಡರೆ ಸಾಕು, ಚಿಂತೆಯಿಂದ ಮುಕ್ತಿ ಪಡೆಯುವುದು ಬಹಳ ಸುಲಭ !
ಹೇಗೆ ಒಂದೇ ಬೀಗದ ಕೈಯಿಂದ ಬೀಗವನ್ನು ಹಾಕಬಹುದು ಮತ್ತು ತೆಗೆಯಲೂಬಹುದು ಅದೇ ರೀತಿಯಲ್ಲಿ ನಿಮ್ಮ ಒಳಗಿನ ಮನಃಸ್ಥಿತಿಯನ್ನು ನೀವು ಸಂಪೂರ್ಣವಾಗಿ ಕೊರಗಿನಲ್ಲಿ ಮುಳುಗಲು ಉಪಯೋಗಿಸಿಕೊಳ್ಳುತ್ತೀರೋ ಅಥವಾ ಆನಂದದ ಸ್ತರಕ್ಕೆ ಏರಲು ಉಪಯೋಗಿಸಿಕೊಳ್ಳುತ್ತೀರೋ, ಅದು ನಿಮ್ಮ ಕೈಯಲ್ಲಿ ಇದೆ.
ಚಿಂತೆಯನ್ನು ನಿವಾರಿಸಲು ಒಂದು ಸರಳವಾದ ಮಂತ್ರ - ನಿರಂತರ ಪಾಸಿಟಿವ್ (ಸಕಾರಾತ್ಮಕ) ಯೋಚನಾ ಕ್ರಮಗಳು.
ಎಚ್ಚರಿಕೆಯಿಂದಿರಿ ! ಒಂದು ನೆಗೆಟಿವ್ (ನಕಾರಾತ್ಮಕ) ವಿಚಾರವು ಮನಸ್ಸಿನಲ್ಲಿ ಹುಟ್ಟುತ್ತಿರುವ ತಿಳುವಳಿಕೆ ಆದ ತಕ್ಷಣವೇ ಅದರ ಜಾಗದಲ್ಲಿ ಪಾಸಿಟಿವ್ ವಿಚಾರಗಳನ್ನು ನಿಮ್ಮ ಮನಸ್ಸಿಗೆ ನೀಡಲು ಆರಂಭಿಸಿ. ಶುರುವಿನಲ್ಲಿ ನಿಮ್ಮ ಮನಸ್ಸು ನಿಮ್ಮ ಪಾಸಿಟಿವ್ ವಿಚಾರಗಳನ್ನು ಬೇಗ ಸ್ವೀಕರಿಸುವುದಿಲ್ಲ. ನಿಮ್ಮ ಮನಸ್ಸಿನ ಒಂದು ಕೋನವು ವಿರೋಧಿಸುವುದು “ಒಂದಿಷ್ಟು ಪಾಸಿಟಿವ್ ವಿಚಾರಗಳನ್ನು ನೀಡಿ ನನ್ನನ್ನು ಮುರ್ಖನನ್ನಾಗಿ ಮಾಡುತ್ತಿದ್ದೀಯಾ” ಎಂದು.
ಆದರೆ ಸ್ವಲ್ಪ ಸಮಯದಲ್ಲಿಯೇ ನೀವು ನಿಮ್ಮ ಮನಸ್ಸಿನ ಸ್ವಭಾವವನ್ನು ಪರಿವರ್ತಿಸಬಹುದು. ನಿಮ್ಮ ಮಾನಸಿಕ ಕಾರ್ಯಕಲಾಪವನ್ನು (Programming) ಖಂಡಿತ ನೀವೇ ಪರಿವರ್ತಿಸಲು ಸಾಧ್ಯವಿದೆ
- ಅದನ್ನು ಮೊದಲು 'ಪ್ರೋಗ್ರಾಮ್' ಮಾಡಿದವರು ನೀವೇ ಅಲ್ಲವೆ ? ಈಗ 'ಪ್ರೋಗ್ರಾಮ್' ಅನ್ನು ಪರಿವರ್ತಿಸುವುದೂ ನಿಮ್ಮ ಕೆಲಸ !
ಕೇವಲ ನೀವು ನಿಮ್ಮ ಮನಸ್ಸಿಗೆ ಹೇಳಿಕೊಡುವ ಮಾತುಗಳ ಅಥವಾ ವಿಚಾರಗಳ ಪ್ರಕಾರ ಚಿಂತೆಗಳು ಉಂಟಾಗುವವು (ಅಥವಾ ನಾಶವಾಗುವವು) ಅಂತ ಗೊತ್ತಾದ ತಕ್ಷಣವೇ, ಚಿಂತೆಯು ಕೇವಲ ಒಂದು ಭ್ರಮೆ ಎಂದು ನೀವು ಚೆನ್ನಾಗಿ ತಿಳಿಯುವಿರಿ. ಒಳಗಿನ ಹರಟೆಯನ್ನು ನಿವಾರಿಸಿಕೊಂಡು ನೀವು ಮುಂದಕ್ಕೆ ಹೋದರೆ ನೀವು ಜಾಗೃತರಾಗುವಿರಿ ಮತ್ತು ಸಂಪೂರ್ಣವಾಗಿ ಜೀವಂತವಾಗಿರುವಿರಿ. ಚಿಂತಿಸುವುದು ಎಷ್ಟು ಅನಾವಶ್ಯಕ ಎಂಬುದನ್ನು ಕೇವಲ ಅರ್ಥಮಾಡಿಕೊಂಡರೆ, ಬಹಳ ಅಮೂಲ್ಯವಾಗಿರುವ ಮಣಿಪೂರಕ ಚಕ್ರದ ಚೈತನ್ಯವು (ಎನರ್ಜಿಯು) ಬಿಡುಗಡೆ ಆಗುವುದು. ನಿಮ್ಮ ದುಃಖಗಳೇ ಮಾಯವಾಗುವುವು ಮತ್ತು ಅದರ ಜಾಗದಲ್ಲಿ ಸುಖ ಮತ್ತು ದುಃಖ ಇವೆರಡೂ ತಲ್ಲಣ ನೀಡಲಾರದೆ ಇರುವ ಒಂದು ಪರಮಾನಂದದ ಸ್ಥಿತಿ ಉಂಟಾಗುವುದು.
ಜ್ಞಾನ ಮತ್ತು ಧ್ಯಾನದಿಂದ, ಎಚ್ಚರಿಕೆ ಮತ್ತು ಸಾಧನೆಯಿಂದ ನಿತ್ಯಾನಂದಕ್ಕೆ (ನಿತ್ಯ ಆನಂದಕ್ಕೆ) ಪ್ರವೇಶಿಸಲು ನಿಮ್ಮ ದುಃಖ ಚಿಂತೆಗಳೇ ಒಂದು ಹೆಬ್ಬಾಗಿಲು ಆಗಬಹುದು.