KAILASA Library/ಪರಮಹಂಸ ನಿತ್ಯಾನಂದ/ನಿಮ್ಮ ಪ್ರಶ್ನೆಗಳಿಗೆ ಉತ್ತರSign in
ಪರಮಹಂಸ ನಿತ್ಯಾನಂದ

ನಿಮ್ಮ ಪ್ರಶ್ನೆಗಳಿಗೆ ಉತ್ತರ

This text was machine-transcribed from the printed book and may contain errors. Select the words and choose “Report a mistake”.

ಪ್ರ. ನಾನು ನನ್ನನ್ನು ಸದಾ ಬೇರೆಯವರೊಂದಿಗೆ ಹೋಲಿಕೆ ಮಾಡುವುದರಿಂದ ಬಹಳ ಸಂಕಟ ಪಡುವೆನು. ಈ ಅಭ್ಯಾಸವನ್ನು ನಾನು ಹೇಗೆ ತ್ಯಜಿಸಲಿ?

ಉ. ಹೋಲಿಕೆಯೇ ಸಂಕಟಕ್ಕೆ ಕಾರಣ ಅಂತಾದರೂ ತಿಳಿದುಕೊಂಡಿದ್ದೀರಲ್ಲ! ಇದೇ ಒಂದು ಶುಭಾರಂಭ!

ಬುದ್ಧನು ಬಹಳ ಪ್ರಮುಖವಾದ ಉಪದೇಶವನ್ನು ಮಾಡಿದ್ದಾನೆ : ಪ್ರತಿಯೊಂದಕ್ಕೂ ಸಂಬಂಧದಲ್ಲಿ ಮಾತ್ರ ಬದುಕು ಇದೆ. ಪ್ರತಿಯೊಂದೂ ಸಾಪೇಕ್ಷವಾಗಿರುವುದು - ಮತ್ತು ಬೇರೆ ಯಾವುದಾದರೂ ಜೊತೆ ಸಂಬಂಧದಿಂದಲೇ ಅದಕ್ಕೆ ಅರ್ಥ ಬರುವುದು.

ನಿಮ್ಮನ್ನು ನೀವು ಬೇರೆಯವರ ಜೊತೆ ಹೋಲಿಸಿಕೊಂಡಾಗ ಯಾವ ಯಾವ ಪದಗಳನ್ನು ಉಪಯೋಗಿಸುವಿರಿ ? ಸುಂದರ, ಚತುರ, ಐಶ್ವರ್ಯವಂತ, ದೌರ್ಭಾಗ್ಯಶಾಲಿ, ತರುಣ, ದುರ್ಬಲ, ಹೀಗೆ ಅಲ್ಲವೆ?

ಈಗ ನಿಮ್ಮನ್ನು ಬಿಟ್ಟು ಬೇರೆ ಯಾರೂ ವಾಸಮಾಡದೆ ಇರುವ ಒಂದು ಗ್ರಹದಲ್ಲಿ ಇರುವಂತೆ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ಆಗ ನಿಮ್ಮನ್ನು ನೀವು ಸುಂದರವಾಗಿರುವ ಹಾಗೆಯೋ ಅಥವಾ ಕುರೂಪಿಯಾಗಿರುವ ಹಾಗೆಯೋ ಯೋಚಿಸುವಿರಾ ? ಉದ್ದಕ್ಕೋ ಅಥವಾ ಕುಳ್ಳಗೋ ? ಶ್ರೀಮಂತನೋ ಅಥವಾ ಬಡವನೋ? ಯಾರ ಜೊತೆಗೂ ಹೋಲಿಕೆ ಮಾಡದಿದ್ದರೆ ಈ ಪದಗಳಿಗೆ ಏನೂ ಅರ್ಥವೇ ಇಲ್ಲ. ಕಾರಣವೇನೆಂದರೆ ಇವುಗಳು ಹೋಲಿಕೆಯ ಆಧಾರದ ಮೇಲೆ ನಮ್ಮ ಮನಸ್ಸು ವ್ಯವಸ್ಥಾಪಿಸಿದ ಪರಿಕಲ್ಪನೆಗಳು. ಹೋಲಿಕೆ ಇಲ್ಲದೆ ಈ ಪದಗಳಿಗೆ ಅವುಗಳದೇ ಒಂದು ಅಸ್ತಿತ್ವವೇ ಇಲ್ಲ.

ಈ ಪ್ರಯೋಗವನ್ನು ಮಾಡಿ : ಕೆಲವು ಕ್ಷಣ ನಿಮ್ಮ ಕಣ್ಣನ್ನು ಮುಚ್ಚಿಕೊಳ್ಳಿ, ನೀವು ಈ ಇಡೀ ಪ್ರಪಂಚದಲ್ಲಿ ಒಬ್ಬರೆ ಇದ್ದೀರಾ ಎಂದು ಕಲ್ಪಿಸಿ. ಈಗ ನಿಮ್ಮೊಳಗೆ ನೀವು ಸುಂದರ ಅಥವಾ ಕುರೂಪಿ ಎಂದು ಭಾವಿಸುವಿರಾ ? ಮೂರ್ಖ ಅಥವಾ ಬುದ್ಧಿಶಾಲಿ ? ಈ ಪರಿಕಲ್ಪನೆಗಳೆಲ್ಲ ಮಾಯವಾಗಿ ಕೇವಲ ನಿಮ್ಮ ಅಸ್ತಿತ್ವದ ಅಥವಾ ನಿಮ್ಮ 'ಇರುವಿಕೆ'ಯ ತತ್ವ ಮಾತ್ರ ಉಳಿದುಕೊಂಡಿರುವುದು - ಏಕೆಂದರೆ ಅದು ಒಂದೇ ನಿಜವಾದದ್ದು.

ಬೇರೆಯವರ ಜೊತೆ ಹೋಲಿಸಿಕೊಳ್ಳುವುದು ಮೂರ್ಖತನ - ಅದು ಏಕೆ ಅಂದರೆ ನೀವು ಬೇರೆಯವರಾಗುವುದಕ್ಕೆ ಸಾಧ್ಯವಿಲ್ಲ ಮತ್ತು ಬೇರೆಯವರು ನೀವಾಗುವುದಕ್ಕೆ ಸಾಧ್ಯವಿಲ್ಲ. ನಿಮ್ಮ ಸುತ್ತಲು ತಿರುಗಿ ನೋಡಿ. ಸರಿಯಾಗಿ ನಿಮ್ಮ ಹಾಗೇ ಇರುವವರು ಯಾರಾದರೂ ಕಾಣಿಸುವರಾ? ನೀವು ಎಷ್ಟು ವಿಶೇಷವಾಗಿ (ಸ್ಪೆಷಲ್ ಆಗಿ) ಇದ್ದೀರಾ ಎಂದು ಗೊತ್ತಾಯಿತೇ?

ಒಮ್ಮೆ ಒಬ್ಬ ಜೆನ್ ಬೌದ್ಧ ಧರ್ಮದ ಗುರುಗಳ ಶಿಷ್ಯನು ಅವರನ್ನು ಕೇಳಿದನು "ಹೇಳಿ ಗುರುಗಳೆ, ನಾನು ಯಾವಾಗ ಬುದ್ಧನಂತೆ ಆಗುತ್ತೇನೆ ?" ಇದಕ್ಕೆ ಉತ್ತರವಾಗಿ ಗುರುಗಳು ಶಿಷ್ಯನಿಗೆ ಒಂದು ಜೋರು ಏಟು ಹೊಡೆದರು.

ಅವರು ಏಕೆ ಹೀಗೆ ಮಾಡಿದರು ? ಶಿಷ್ಯನಿಗೆ ಅತಿ ಆಸೆ ಎಂದು ತಿಳಿಸುವುದಕ್ಕಾಗಿಯೇ ? ಅಲ್ಲ - ಶಿಷ್ಯನು ಮುಂಚಿತವಾಗಿಯೇ ಬುದ್ಧನಾಗಿದ್ದಾನೆ ಎಂಬ ಜಾಗೃತಿ ಅವನಲ್ಲಿ ಉಂಟುಮಾಡುವುದಕ್ಕೆ ಗುರುಗಳು ಪೆಟ್ಟು ಕೊಡಬೇಕಾಗಿತ್ತು. ನೀವು ಮುಂಚಿತವಾಗಿಯೇ ಆಗಿರುವುದನ್ನು ಪುನಃ ಆಗಬೇಕೆಂದು ಹೇಗೆ ಇಚ್ಛೆ ಪಡಲು ಸಾಧ್ಯ ?

ನಿಮ್ಮ ಅಂತರಂಗದೊಡನೆ ನಿಮ್ಮ ಅಗಲುವಿಕೆ ಎಷ್ಟರಮಟ್ಟಿಗೆ ಆಗಿಹೋಗಿದೆ ಅಂದರೆ ನಿಮಗೆ ನಿಮ್ಮ ಸ್ವಂತಿಕೆಯೇ ನೆನಪಿಲ್ಲ. ಈ ಮಾತು ನಿಮಗೆ ಸ್ಪಷ್ಟವಾಗಿ ಅರ್ಥವಾದಾಗ, ನಿಮಗೆ ಬೇರೆಯವರ ಜೊತೆ ಹೋಲಿಕೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ - ಮತ್ತು ಸಾಧ್ಯವೂ ಆಗಿರುವುದಿಲ್ಲ. ಈ ಕಾರಣದಿಂದ ಪ್ರತಿಯೊಬ್ಬರು ವಿಶೇಷವಾಗಿ, ಅನನ್ಯವಾಗಿ ಇರುವುದರಿಂದ ನೀವು ಯಾವ ಆಧಾರದ ಮೇಲೆ ನಿಮ್ಮ ಹೊಂದಾಣಿಕೆಯನ್ನು ಮಾಡುವಿರಿ? ನೀವು ಒಂದು ಬಹಳ ಅನನ್ಯವಾದ, ವಿಶೇಷವಾದ, ‘ಸ್ಪೆಷಲ್’ ಆದ ವ್ಯಕ್ತಿ ಎಂದು ಸದಾ ನೆನಪು ಇಟ್ಟುಕೊಂಡು, ಹೋಲಿಕೆ ಮಾಡುವ ಮನೋಭಾವವನ್ನು ತ್ಯಜಿಸಿ.

ಪ್ರ. ನನಗೆ ಬಹಳ ಮೆಚ್ಚಿಕೆಯಾಗಿರುವ ಒಬ್ಬ ಬಹಳ ಒಳ್ಳೆ ಜೀವನ ಸಂಗಾತಿಯು ಸಿಕ್ಕಿದ್ದಾನೆ. ಆದರೆ ನಮ್ಮ ಈ ಪರಿಪೂರ್ಣವಾದ ಸಂಬಂಧವು ಬಹುಕಾಲ ನಿಲ್ಲುವುದೊ ಇಲ್ಲವೋ ಎಂದು ನನಗೆ ಬಹಳ ಚಿಂತೆ.

ಉ. ನಿಮ್ಮ ಸಂಬಂಧವು ಅಷ್ಟು ಪರಿಪೂರ್ಣವಾಗಿರುವುದರಿಂದ ನೀವು ಅದು ಬೇಗನೆ ಕೊನೆಗಾಣುವುದು ಎಂದು ಹೆದರುತ್ತಿರುವಿರಾ? ಇದನ್ನು ಚಿಂತೆಯ ಒಂದು ಶಿಖರ ಎಂದು ಹೇಳಬಹುದು. ಚಿಂತೆ ಮಾಡುವಂಥದ್ದು ಏನು ಇಲ್ಲ ಅಂತ ಚಿಂತೆ ಮಾಡುವುದು ನಿಮ್ಮ ಮನಸ್ಸಿನ ಒಂದು ತುಂಟಾಟ!

ನಿಮ್ಮ ಮನಸ್ಸು ನಿಮ್ಮನ್ನು ಎಂದಿಗೂ ವರ್ತಮಾನದೊಳಗೆ ವಿಶ್ರಮಿಸುವುದಕ್ಕೆ ಬಿಡುವುದಿಲ್ಲ - ಗತಕಾಲ ಮತ್ತು ಭವಿಷ್ಯವನ್ನು ನಿಮ್ಮ ಮೇಲೆ ಹೊರಿಸುವುದೇ ಅದರ ಕೆಲಸ. ಆದರೆ ಗತಕಾಲವನ್ನು ಮತ್ತು ಭವಿಷ್ಯವನ್ನು ಮರೆತು ವರ್ತಮಾನದ ಸಂತೋಷದಲ್ಲಿ ಸಂಪೂರ್ಣವಾಗಿ ಆನಂದಿಸುವುದೇ ಪ್ರೀತಿಯ ಅರ್ಥ.

ನಿಮ್ಮ ಭಯದ ನಿಜವಾದ ಕಾರಣವನ್ನು ಪರೀಕ್ಷಿಸಿ.

ಈಗ ನಿಮಗೆ ಅತಿ ಸೊಗಸಾದ ಸುಂದರವಾದ ಅನುಭವವು ಆಗುತ್ತಾ ಇದೆ. ಇಷ್ಟೊಂದು ಸೌಭಾಗ್ಯಕ್ಕೆ ನೀವು ಯೋಗ್ಯರಲ್ಲ ಎಂದು ನಿಮ್ಮೊಳಗೆ ಒಂದು ಭಾವನೆ ಇದೆ. ಅದಕ್ಕೆ ನೀವು ಯಾವ ಕ್ಷಣದಲ್ಲಿ ಈ ಒಳ್ಳೆ ಕಾಲ ಮುಗಿದುಹೋಗುವುದೋ ಎಂದು ಹೆದರುತ್ತಿದ್ದೀರ. ನನ್ನ ಪ್ರಿಯತಮ'ನು' ಯಾವಾಗ' ನ'ನ'ಗಿಂತ' ಸುಂದ'ರ', ಪ್ರತಿಭಾಶಾಲಿ ಮ'ತು' ಐಶ್ವರ್ಯವಂತಳಾಗಿರುವವಳಿಗೋಸ್ಕರ ನನ್ನನ್ನು ಬಿಟ್ಟು ಹೋಗುವನೋ? ನಾನು ಅದನ್ನು ಹೇಗೆ ತಡೆಯಲಿ? ಅವನು ನನ್ನನ್ನು ಬಿಟ್ಟು ಹೋದರೆ ನನ್ನ ಪಾಡು ಏನು?

ನೀವು ಎಷ್ಟು ಚಿಂತೆ ಮಾಡಿದರೂ, ಆಗುವುದನ್ನು ತಡೆಯುವುದಕ್ಕೆ ಸಾಧ್ಯವೆ? ನೀವು ನಿಮ್ಮ ಸಂಗಾತಿಯ ಮಾಲೀಕರಲ್ಲ. ಯಾವಾಗ ಅವನು ಮನಸ್ಸನ್ನು ಬದಲಾಯಿಸುವನೋ ನಿಮಗೆ ಗೊತ್ತಿಲ್ಲ - ನಿಮ್ಮ ಮನಸ್ಸನ್ನೇ ನೀವು ಅರ್ಥ ಮಾಡಿಕೊಂಡಿಲ್ಲ!

ಮುಂದೆ ಆಗುವುದು ನಿಮ್ಮ ಹಿಡಿತದಲ್ಲಿದೆ ಎಂದು ಅಂದುಕೊಳ್ಳುವುದು ಮೂರ್ಖತನ! ಸಂಬಂಧವನ್ನು ಪಾಲಿಸುವುದಕ್ಕೆ ಅತಿ ಹೆಚ್ಚು ಪ್ರಯತ್ನಪಟ್ಟರೆ ಕೆಲಸ ಕೆಟ್ಟುಹೋಗುವುದು - ನಿಮ್ಮ ಸಂಬಂಧವು ನಾಶವಾಗಬಹುದು. ಕಟ್ಟಕಡೆಯದಾಗಿ, ಎಲ್ಲ ಭಯಶಂಕೆಗಳು, ಸುರಕ್ಷಿತವಿಲ್ಲದ ಭಾವನೆಗಳೂ ನಮ್ಮಲ್ಲಿಯೇ ನಾವು ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಉಂಟಾಗಿರುವುವು. ಪ್ರೇಮದಲ್ಲಿ ಮನುಷ್ಯನಿಗೆ ತನ್ನಲ್ಲಿ ತಾನೆ ವಿಶ್ವಾಸ ಇರುವುದು ಅಗತ್ಯ. ಆಗಲೇ ನೀವು ನಿಮ್ಮ ಸಂಗಾತಿಯಲ್ಲಿ ವಿಶ್ವಾಸ ಇಟ್ಟುಕೊಳ್ಳಬಹುದು. ಬೇರೆ ಏನೂ ದಾರಿಯಿಲ್ಲ.

ಆದರೂ ನಿಮ್ಮ ಸಂಬಂಧವು ನಿಶ್ಚಿತವಾಗಿ ಬಹುಕಾಲ ನಿಲ್ಲುವುದು ಎನ್ನುವುದನ್ನು ಯಾರಿಗೂ ಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ನಿಲ್ಲದಿದ್ದರೂ ಏನು ಚಿಂತೆ? ಬದಲಾವಣೆಯೇ ಈ ಜೀವನದ ಸ್ವಭಾವ. ಈ ಬಾಂಧವ್ಯವು ಈ ಹೊತ್ತು ಇದೆ ಮತ್ತು ಅದು ಸುಂದರವಾಗಿದೆ ಎಂದು ಸ್ವೀಕರಿಸಿ - ನಾಳೆ ಪರಿಸ್ಥಿತಿ ಬದಲಾಯಿಸಬಹುದು ! ಈ ಹೊತ್ತಿನ ಕಾಣಿಕೆಯನ್ನು ಸಂಪೂರ್ಣವಾಗಿ ಆನಂದಿಸಿ. ಸಂಬಂಧ ಮುಗಿದು ಹೋಗುವ ಸಂದರ್ಭದಲ್ಲಿ ದುಃಖ ಪಡುವುದಕ್ಕೆ ಬೇಕಾದಷ್ಟು ಸಮಯ ಇರುವುದು.

ವಾಸ್ತವವಾಗಿ ನೀವು ನಿಮ್ಮ ಸಂಪೂರ್ಣ ಅಂತರಂಗದಿಂದ ಪ್ರೀತಿಸಿದ್ದರೆ, ಪರಿಸ್ಥಿತಿ ಕೆಟ್ಟು ಹೋದರೂ ಆ ಸಂಬಂಧವನ್ನು ತ್ಯಜಿಸುವುದರಲ್ಲಿ ನಿಮಗೆ ದುಃಖ ಇರುವುದಿಲ್ಲ. ಸಂಬಂಧಗಳೂ ಬಹುಕಾಲ ನಿಲ್ಲುವುದಿಲ್ಲ ಅಂತ ಪ್ರೀತಿಸದೇ ಇರುವುದು ಮೂರ್ಖತನ - ಇದು ನಾವು ಒಂದು ದಿನ ಸಾಯುತ್ತೇವೆ ಅಂತ ಸಂಪೂರ್ಣವಾಗಿ ಬಾಳದೇ ಇರುವ ಸಮಾನ!

ಪ್ರ. ನನ್ನನ್ನು ನಾನು ಸುಧಾರಿಸಿಕೊಂಡು ಉತ್ತಮವಾದ ವ್ಯಕ್ತಿ ಆಗಲು ಪ್ರಯತ್ನಿಸುತ್ತಾ ಇದ್ದೇನೆ. ಆದರೂ ನಾನು ಹಿಂದೆ ಮಾಡಿದ ಪಾಪಗಳಿಗೋಸ್ಕರ ಶಿಕ್ಷೆಯನ್ನು ಪಡೆಯುತ್ತೇನೆ ಎಂದು ಚಿಂತಿಸುತ್ತಿರುವೆನು.

ಉ. ನಮಗೆ ಎಂದಿಗೂ ನಮ್ಮ ಪಾಪಗಳಿಗೋಸ್ಕರ ಶಿಕ್ಷೆ ನೀಡಲಾಗದು - ಹೊರತು ನಮ್ಮ ಪಾಪಗಳೇ ನಮಗೆ ಶಿಕ್ಷೆಯನ್ನು ನೀಡುವವು. ಪಾಪವು ಯಾವಾಗಲೂ ಅದರದೇ ಒಂದು ತತ್ಕಾಲದ ಶಿಕ್ಷೆಯನ್ನು ಹೊತ್ತು ಕೊಂಡಿರುತ್ತದೆ - ಇದು ನಮಗೆ ತಿಳಿದಿರುವುದಿಲ್ಲ. ಶಿಕ್ಷೆ ಪಡೆಯುವುದಕ್ಕೆ ಬಹಳ ವಿಳಂಬ ಇದೆ ಎಂಬುವ ಧೈರ್ಯದಿಂದಲ್ಲಿಯೇ ಮಾನವನು ತಪ್ಪು ಮಾಡುವನು. ಈಗ ಪಾಪ ಮಾಡಿ ಅದರ ಪರಿಹಾರವನ್ನು ಮುಂದಕ್ಕೆ (ಕಡೆಯ ಮಹಾ ವಿಚಾರಣೆಯ ದಿನದಲ್ಲಿಯೋ ಅಥವಾ ಮುಂದಿನ ಜನ್ಮದಲ್ಲಿಯೋ!) ಮಾಡಿಕೊಳ್ಳಬಹುದು ಎಂಬುವುದು ಮಾನವನಿಗೆ ತಪ್ಪು ಮಾಡಲು ಧೈರ್ಯ ಕೊಡುವುದು. ಆದರೆ ನಿಜವೇನೆಂದರೆ ಪಾಪ ಮತ್ತು ಶಿಕ್ಷೆ ಯಾವಾಗಲು ಕೂಡಿಕೊಂಡು ಬರುವುವು. ನಾನು ಪಾಪ ಅಂದಾಗೆಲ್ಲ ಕೇವಲ ಕಳ್ಳತನ ಅಥವಾ ಖೂನಿ ಅಂತ ತಿಳಿದುಕೊಳ್ಳಬೇಡಿ - ಎಚ್ಚರಿಕೆ ಇಲ್ಲದೆ ಯಾವ ಕಾರ್ಯ ಮಾಡಿದರೂ ಅದು ಪಾಪ ಎನ್ನಿಸುವುದು. ಉದಾಹರಣೆಗೆ ಪ್ರಮಾಣ ಮೀರಿ ತಿನ್ನುವುದೂ ಒಂದು ಪಾಪ ಮತ್ತು ಇವತ್ತು ಅಲ್ಲ ನಾಳೆ ಅದು ಅದರ ಶಿಕ್ಷೆಯನ್ನು ಖಂಡಿತ ತೆಗೆದುಕೊಂಡು ಬರುವುದು. ನೀವು ಕೋಪ ಮಾಡಿಕೊಂಡಾಗೆಲ್ಲ, ಹೊಟ್ಟೆಕಿಚ್ಚು ಪಟ್ಟಾಗೆಲ್ಲ ಮತ್ತು ದ್ವೇಷ ಸಾಧಿಸಿಕೊಂಡಾಗೆಲ್ಲ ನಿಮ್ಮಮೇಲೆ ನೀವೇ ಹಿಂಸೆ ಮಾಡಿಕೊಳ್ಳುವಿರಿ - ಮತ್ತು ನಿಮ್ಮ ಒಳಗೇ ಒಂದು ತಲ್ಲಣದ ಸ್ಥಿತಿ ಉಂಟಾಗಿ ನಿಮ್ಮ ಶಾಂತಿಯು ಭಂಗವಾಗುವುದು. ಕೆಲವು ನಿಮಿಷಗಳ ಕೋಪವೂ ನಿಮ್ಮ 'ಸಿಸ್ಟಮ್' ಗೆ ವಿಷಯುಕ್ತವಾಗಿರುವುದು ಮತ್ತು ನೀವು ಮತ್ತೊಮ್ಮೆ ನಿಮ್ಮ ಸಾಧಾರಣ ಸ್ಥಿತಿ ಪಡೆಯುವುದಕ್ಕೆ ಸ್ವಲ್ಪ ಹೊತ್ತು ಅಥವಾ ಸ್ವಲ್ಪ ದಿನಗಳೇ ಹಿಡಿಸಬಹುದು. ಇದೇ ನಿಮ್ಮ ಪಾಪ ಮತ್ತು ನಿಮ್ಮ ಶಿಕ್ಷೆ.

ಆತ್ಮದೂಷಣೇ ಅಥವಾ 'ಗಿಲ್ಟ್' (guilt) ನಿಮ್ಮಮೇಲೆ ನೀವೇ ವಿಧಿಸುವ ಬಹಳ ಕಠಿಣವಾದ ಒಂದು ಶಿಕ್ಷೆ. ಇದು ಬಹಳ ಸಾಮಾನ್ಯ. ಮಾನವನು ಅವನು ಚಿಕ್ಕ ಚಿಕ್ಕ, ಅಲಕ್ಷಿಸಬಹುದಾದ ತಪ್ಪುಗಳಿಗೆಲ್ಲ ಬಹು ವರ್ಷಗಳ ಕಾಲ ಅನಾವಶ್ಯಕ ಆತ್ಮದೂಷಣೆಯಿಂದ ದುಃಖಿಸುತ್ತಾನೆ - ನೀವು ಈಗ ಮಾಡುತ್ತಿರುವ ಹಾಗೆ ! ನಿಜವೇನೆಂದರೆ ನೀವು ಈ 'ಗಿಲ್ಟ್' ಅನ್ನು ತ್ಯಜಿಸಿದರೆ ನಿಮ್ಮ ಪಾಪವನ್ನು ತ್ಯಜಿಸುವಿರಿ. ಹೀಗೆ, ಸ್ವರ್ಗ ಮತ್ತು ನರಕ ಇವೆರಡೂ ಮಾನಸಿಕ ಸ್ಥಿತಿಗಳು - ನಿಮ್ಮ ಮನಸ್ಸಿನಲ್ಲಿ ಮಾತ್ರ ಬದುಕಿರುತ್ತವೆ (ಈ ವಿಶ್ವದ ಭೂಪಟದಲ್ಲಿ ಅವು ಕಾಣಲಾರವು) - ಚಿಂತೆ ಮತ್ತು ಆತ್ಮದೂಷಣೆ ಇವೆರಡೂ ಈ ನರಕಕ್ಕೆ ಪ್ರವೇಶಿಸುವ ನಿಶ್ಚಿತವಾದ ದಾರಿಗಳು.

ಆತ್ಮದೂಷಣೆಯ (ಗಿಲ್ಟ್) ಭಾವನೆಯು ನಿಮ್ಮನ್ನು ಅದೇ ತಪ್ಪನ್ನು ಪುನಃ ಮಾಡುವುದನ್ನು ತಡೆಯುತ್ತದೆ. ಇಷ್ಟರಮಟ್ಟಿಗೆ ಮಾತ್ರ ಅದರ ಉಪಯೋಗ ! ನೀವು ಮಾಡಿದ್ದು ತಪ್ಪು ಅಂತ ಗೊತ್ತಾದಾಗ ಈ 'ಗಿಲ್ಟ್'ಅನು ಬಿಟ್ಟು ಹಾಕಿ. ಮಾಡಿದ ತಪ್ಪಿನ ವಿಷಯ ಚಿಂತೆ ಮಾಡುವುದರಲ್ಲಿ ಏನೂ ಪ್ರಾಪ್ತಿ ಆಗುವುದಿಲ್ಲ; ಗತಕಾಲವನ್ನು ಬಿಡದೆ ಅದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚು ಪಾಪ ಯಾವುದೂ ಇಲ್ಲ!

ಪ್ರ. ಜ್ಞಾನೋದಯದ ಇಡೀ ಸಂಗತಿಯ ಬಗ್ಗೆ ನನಗೆ ಬಹಳ ಚಿಂತೆಯಾಗುತ್ತದೆ. ನಾನು ಜ್ಞಾನೋದಯಕ್ಕಾಗಿ ಯೋಗ್ಯವಾದ ರೀತಿಯಲ್ಲಿ ಶ್ರಮಿಸುತ್ತಾ ಇದ್ದೇನಾ?

ಉ. ನೀವು ಜ್ಞಾನೋದಯ ಪಡೆಯುವುದಕ್ಕೆ ಶ್ರಮಿಸುತ್ತಿದ್ದೀರಾ - ಅಷ್ಟೇ ಅಲ್ಲ ಅದರ ಬಗ್ಗೆ ಚಿಂತೆಯೂ ಮಾಡುತ್ತಿದ್ದೀರಾ ! ನಿಮ್ಮದು ಈ ಸ್ಥಿತಿಯಾಗಿದ್ದರೆ ಜ್ಞಾನೋದಯವು ನಿಮಗೆ ಬಹಳ ದೂರ ಆಗುವುದು ! ಜ್ಞಾನೋದಯದ ಬಗ್ಗೆ ಯೋಚನೆ ಮಾಡಲೇ ಬೇಡಿ - ಅದನ್ನು ಸಂಪೂರ್ಣವಾಗಿ ಮರೆತು ಬಿಡಿ - ಇದೇ ಅದರ ಬಳಿ ಹೋಗುವುದಕ್ಕೆ ಒಂದು ದಾರಿ. ಖಂಡಿತ ಅದನ್ನು ಮರೆಯುವುದು ಕಷ್ಟ - ಆದರೆ ಲಕ್ಷ್ಯದ ಮೇಲೆ ಬಹಳ ತೀವ್ರವಾದ ಗುರಿ ಇಟ್ಟುಕೊಳ್ಳುವ ಸಮಸ್ಯೆ ಏನೆಂದರೆ ನೀವು ಪ್ರಯಾಣದ ಉಲ್ಲಾಸವನ್ನು ಕಳೆದುಕೊಳ್ಳುವಿರಿ. ನೀವು ಕೇವಲ ವರ್ತಮಾನಕ್ಕೆ ಸಂಪೂರ್ಣವಾಗಿ ಶರಣಾಗುವಿರಿ ಮತ್ತು ಮುಂದೆ ಹೋಗಿ ನೀವು ನಿಮ್ಮ ಲಕ್ಷ್ಯವನ್ನು ಖಂಡಿತ ತಲುಪುವಿರಿ.

ಜ್ಞಾನೋದಯದ ಬಗ್ಗೆ ಚಿಂತೆ ನಿಮ್ಮ ಅಹಂಕಾರವು ನಿಮ್ಮನ್ನು ಆಡಿಸುತ್ತಿರುವ ಕಡೆಯ ಒಂದು ಆಟ

  • ಅದು ಮಾಡುತ್ತಿರುವ ಕಡೆಯ ಒಂದು ಪ್ರಕಟನೆ! ಎಚ್ಚರಿಕೆಯಿಂದಿರಿ ! ಅದು ನಿಮ್ಮನ್ನು ನಿಮ್ಮ ಗುರಿಯಿಂದ ಬಹಳ ದೂರ ಎಳೆದುಕೊಂಡು ಹೋಗುತ್ತಾ ಇದೆ ! ನೀವು ಕೇವಲ ಒಂದು ಸಂಪೂರ್ಣ ಅಹಂಕಾರವಿಹೀನವಾದ ಸ್ಥಿತಿಗೆ ಬಂದಾಗಲೇ, ಜ್ಞಾನೋದಯವನ್ನು ಪಡೆಯಲು ಸಿದ್ಧರಾಗುವಿರಿ. ಜ್ಞಾನೋದಯವು ಒಂದು ಪ್ರದರ್ಶನ ಅಥವಾ ಕಾರ್ಯ ಅಲ್ಲ! ಅದು ವ್ಯಾಕುಲ ಮತ್ತು ಹೆಣಗಾಟದಿಂದ ಪಡೆಯುವಂಥದ್ದು ಖಂಡಿತ ಅಲ್ಲ! ಇದಕ್ಕೆ ವಿರುದ್ಧವಾಗಿ, ನೀವು ಅದಕ್ಕೆ ತಯಾರಾದಾಗ ನೀವು ತಾನಾಗಿ ತಾನೆ ಸುಗಮವಾಗಿ, ಸರಳವಾಗಿ ಜ್ಞಾನೋದಯದ ಸ್ಥಿತಿಯನ್ನು ಹೊಂದುವಿರಿ. ಇಷ್ಟು ತಿಳಿದುಕೊಂಡು, ನೀವು ಇನ್ನು ಮೇಲೆ ನಿಮಗೆ ಉತ್ತಮವಾದ ಸಾಧನೆಯನ್ನು ಮಾಡಿ. ಆನಂದವಾಗಿರಿ!
Portrait