ಜನನದ ಸ್ವೀಕಾರ
This text was machine-transcribed from the printed book and may contain errors. Select the words and choose “Report a mistake”.
ಅಧ್ಯಾತ್ಮದ ಅಯಸ್ಕಾಂತ ಅರುಣಾಚಲದ ಪ್ರಕಾಶದಲ್ಲಿ ಮತ್ತು ಅರುಣಾಚಲೇಶ್ವರರಿಂದ ಬಲಪಡಿಸಲ್ಪಟ್ಟ ಶಕ್ತಿ ಕೇಂದ್ರದಲ್ಲಿ ಅರುಣಾಚಲಂ ಮತ್ತು ಲೋಕನಾಯಕಿ ದಂಪತಿಗಳಿಗೆ ಎರಡನೆಯ ಮಗುವಾಗಿ ಪರಮಹಂಸ ನಿತ್ಯಾನಂದರು ಹುಟ್ಟಿದರು.
“ಪ್ರತಿಯೊಂದು ಜೀವಿಯೂ ಭೂಮಿಯ
ಮೇಲೆ ಹುಟ್ಟುವಾಗ, ಹುಟ್ಟುವ ಸಮಯ,
ಸ್ಥಳ ಅದರ ತಂದೆ ತಾಯಿಯರು ಮತ್ತು
ಅದರ ಧ್ವೇಯವನ್ನು ಪ್ರಜ್ಞಾಪೂರಕವಾಗಿ
ನಿರ್ಧರಿಸುವುದು.”
-ಪರಮಹಂಸ ನಿತ್ಯಾನಂದ
ಅರುಣಾಚಲ ಬೆಟ್ಟವು ಒಂದು ಆಧ್ಯಾತ್ಮಿಕತೆಯ ಕಾವಿನ ಪೆಟ್ಟಿಗೆಯಾಗಿದ್ದು (Incubator) ಆಗಾಗ್ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅನ್ವೇಷಕರನ್ನು ತಟ್ಟಿ ಮತ್ತು ಪರಿವರ್ತಿಸುವ ಜ್ಞಾನೋದಯ ಹೊಂದಿದ ಗುರುಗಳಿಗೆ ಜನ್ಮ ನೀಡಿದೆ. ಹೇಗೆ ವೈದ್ಯಕೀಯ ಕಾವಿನ ಪೆಟ್ಟಿಗೆಯು ಒಂದು ಮಗುವನ್ನು ಸಂರಕ್ಷಿಸುವುದೋ ಹಾಗೆ ಆಧ್ಯಾತ್ಮಿಕತೆಯ ಕಾವಿನ ಪೆಟ್ಟಿಗೆಯು ಈ ಜ್ಞಾನೋದಯ ಹೊಂದಿದ ಗುರುಗಳಿಗೆ, ಅವರು ಜನ್ಮತಳೆದಾಗ ಸರಿಯಾದ ವಾತಾವರಣವನ್ನು ನೀಡಲು, ಅವಶ್ಯಕತೆಯಾಗಿರುತ್ತದೆ. ಶೇಷಾದ್ರಿ ಸ್ವಾಮಿಗಳ್, ಭಗವಾನ್ ಶ್ರೀರಮಣ ಮಹರ್ಷಿ ಮತ್ತು ಯೋಗಿ ರಾಮ್ಸೂರತ್ಕುಮಾರ್, ಹೀಗೆ ಹೆಸರಿಸಬಲ್ಲ ಹಲವಾರು ಶ್ರೇಷ್ಠಗುರುಗಳು ಅರುಣಾಚಲದಿಂದ ಆಗಿ ಬಂದವರು.

ಪರಮಹಂಸ ನಿತ್ಯಾನಂದ ಮಗುವಾಗಿದ್ದಾಗ
ಪರಮಹಂಸ ನಿತ್ಯಾನಂದರ ತಾಯಿಯು, ತೀರ್ಥಯಾತ್ರೆಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿರುವ ಪುಣ್ಯಕ್ಷೇತ್ರವಾದ ತಿರುಪತಿಯಲ್ಲಿರುವಾಗ, ತಾನು ಎರಡನೆಯ ಮಗುವಿನ ಗರ್ಭವತಿಯಾಗಿರುವುದಾಗಿ ಕಂಡುಕೊಂಡರು. 1978 ನೇ ಇಸವಿ ಜನವರಿ 1 ನೇ ತಾರೀಕು, ಮಧ್ಯರಾತ್ರಿಯು ಕಳೆದ ಮೇಲೆ ಆಧ್ಯಾತ್ಮಿಕತೆಯ ನರ ಕೇಂದ್ರವಾದ ದಕ್ಷಿಣಭಾರತದಲ್ಲಿರುವ ತಿರುವಣ್ಣಾಮಲೈನಲ್ಲಿ ಪರಮಹಂಸ ನಿತ್ಯಾನಂದರು ಹುಟ್ಟಿದರು. ಅವರಿಗೆ ರಾಜಶೇಖರ ಎಂದು ಹೆಸರಿಡಲಾಯಿತು.

ಇಂದು ಅರುಣಾಚಲ
- ಪವಿತ್ರ ಬೆಟ್ಟ ಶಿವನ ಪ್ರಕಟನೆ. ಪ್ರಪಂಚದಾದ್ಯಂತ ಸಾಧಕರನ್ನು ಸೆಳೆಯುತ್ತಿರುವ ಆಧ್ಯಾತ್ಮಿಕ ಅಯಸ್ಕಾಂತ.
ಕು ಟುಂ ಬ ದ ಪು ರೋ ಹಿ ತ
“ನನ್ನ ಧೈಯ ನನ್ನ ದೈವತ್ವವನ್ನು ನಿರೂಪಿಸುವುದಲ್ಲ; ನನ್ನ ಧೈಯ ನಿಮ್ಮ ದೈವತ್ವವನ್ನು ನಿರೂಪಿಸುವುದು”
-ಪರಮಹಂಸ ನಿತ್ಯಾನಂದ
ಇಂದು
‘ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು
ನನ್ನಲ್ಲಿಗೆ ಬರಬೇಡಿ. ಅದನ್ನು ರೂಪಿಸಲು
ನನ್ನಲ್ಲಿಗೆ ಬನ್ನಿ! ಗ್ರಹಗಳ ಪ್ರಭಾವಗಳನ್ನು
ಉಲ್ಲಂಘಿಸುವುದು ಹೇಗೆಂಬುದನ್ನು
ನಾನು ನಿಮಗೆ ಹೇಳಿಕೊಡುತ್ತೇನೆಯೇ
ವಿನಹ ಅವುಗಳನ್ನು ಹೇಗೆ
ನಿವಾರಿಸಿಕೊಳ್ಳುವುದು ಎಂದಲ್ಲ!
-ಪರಮಹಂಸ ನಿತ್ಯಾನಂದ
ಕುಟುಂಬದ ಪುರೋಹಿತರು ಪರಮಹಂಸ ನಿತ್ಯಾನಂದರ ಜನ್ಮಕುಂಡಲಿಯನ್ನು ಬರೆದಾಗ, ಅವರು ಗ್ರಹಗಳು ಮತ್ತು ನಕ್ಷತ್ರಗಳು ಮೊದಲ ಬಾರಿಗೆ ಅವರು ಕಂಡ ಒಂದು ಅಸಾಧಾರಣ ರೀತಿಯ ಸಂಯೋಗವನ್ನು ಕಂಡರು. ಅವರು ದಿಗ್ಭ್ರಾಂತರಾದ ತಂದೆ ತಾಯಿಗಳಿಗೆ ಆ ಮಗುವು ಒಬ್ಬ ರಾಜಸನ್ಯಾಸಿ (ಪೂಜ್ಯ ಜನರೊಳಗೆ ರಾಜ)ಯಾಗಿ ಬೆಳೆಯುವನೆಂದು ಘೋಷಿಸಿದರು. ಪುರೋಹಿತರು ತಾವು ಆ ಜನ್ಮಕುಂಡಲಿ ಯನ್ನು ಬರೆಯಲು ಅನುಗ್ರಹೀತರಾದವರೆಂದು ಭಾವಿಸಿದರು ಮತ್ತು ಅಲ್ಲಿಂದ ಮುಂದೊಂದೂ ಜ್ಯೋತಿಷ್ಯದ ವೃತ್ತಿಯನ್ನು ಮಾಡು ದನ್ನೇ ನಿಲ್ಲಿಸಿಬಿಟ್ಟರು.
ಯೋ ಗ ಮ ತ್ತು ಪೂ ಜೆ
ರಘುಪತಿ ಯೋಗಿ, ಒಬ್ಬ ಸ್ನೇಹಿತ ಮತ್ತು ಗುರು

ರಘುಪತಿ ಯೋಗಿ
ಪರಮಹಂಸ ನಿತ್ಯಾನಂದರ ತಂದೆತಾಯಿಗಳು ಮಗುವಿನ ಆಧ್ಯಾತ್ಮಿಕ, ಬೆಳವಣಿಗೆಯನ್ನು ಕೇವಲ ಪೋಷಕರಂತೆ, ಅಡ್ಡಪಡಿಸದೆ ಗಮನಿಸಿದರು. ಪರಮಹಂಸ ನಿತ್ಯಾನಂದರು 3 ವರ್ಷದವರಿದ್ದಾಗ ಯೋಗಿರಾಜ ರಘುಪತಿ ಮಹಾರಾಜರನ್ನು ಭೇಟಿಯಾದರು. ರಘುಪತಿ ಯೋಗಿಗಳು ಒಬ್ಬ ಯೋಗಾಭ್ಯಾಸಿಗಳಾಗಿದ್ದು ಮಹತ್ತರ ಕುಶಲತೆಯನ್ನು ಮತ್ತು ಶಕ್ತಿಗಳನ್ನು ಹೊಂದಿದ್ದರು. ಬಿಲ್ಲಿನ ಹುರಿಯಂತೆ ಬಿಗುವಾದ ಶರೀರವನ್ನು ಹೊಂದಿದ್ದು, ಭಾರತ, ಟಿಬೇಟ್ ಮತ್ತು ಬರ್ಮಾಗಳಲ್ಲಿ ಕೈಗೊಂಡ ಅನೇಕ ವರ್ಷಗಳ ಕಠಿಣ ತಪಸ್ಸಿನಿಂದ ಶಿಸ್ತುಗೊಳಿಸಿದ ದೇಹವನ್ನು ಹೊಂದಿದ್ದ ರಘುಪತಿ ಯೋಗಿಗಳು ಪುಟ್ಟ ಪರಮಹಂಸ ನಿತ್ಯಾನಂದರ ಸ್ನೇಹಿತ ಹಾಗೂ ಗುರುಗಳಾಗಿದ್ದರು. ಭವಿಷ್ಯದಲ್ಲಿನ ಸಹಜ ದೂರದೃಷ್ಟಿಯಿಂದ ಅವರು ಪರಮಹಂಸ ನಿತ್ಯಾನಂದರ ದೇಹವನ್ನು ಕಠಿಣ ಯೋಗಾಭ್ಯಾಸದಿಂದ ಮುಂದೆ ಪ್ರದರ್ಶಿಸಬಹುದಾದ ಶಕ್ತಿಯನ್ನು ಹಿಡಿದುಕೊಳ್ಳಲು ಅನುವಾಗುವಂತೆ ತಯಾರುಮಾಡಿದರು.

ಪರಾಶಕ್ತಿ (ಸ್ವರೂಪದಲ್ಲಿಪ್ರತಿನಿಧಿಸಲ್ಪಡುತ್ತಿರುವ ದೈವತ್ವ) ಪರಮಹಂಸ ನಿತ್ಯಾನಂದರ ದೃಷ್ಟಿಗೆ ಗೋಚರಿಸಿದ್ದ ಮತ್ತು ತತ್ ಕ್ಷಣವೇ ಮದುವೆಯಾದ ಸೋಪಿನ ಶಿಲೆ (Soap Stone) ಯಿಂದ ಇಲ್ಲಿ ಕಾಣಿಸುತ್ತಿರುವ ಹಾಗೆ ಕೆತ್ತಿದ್ದು.
"ಯೋಗ ಎಂದರೆ ಮಾನವನ ಮತ್ತು ದೇವರ ಸಂಯೋಗ. ಆರಾಧಿಸುವುದು ಎಂದರೆ ದಿವ್ಯತೆಗೆ ನೇರವಾಗಿ ಕೃತಜ್ಞತೆಯನ್ನುರ್ಪಿಸುವುದು."
-ಪರಮಹಂಸ ನಿತ್ಯಾನಂದ
ಇಂಚು
ರಘುಪತಿ ಯೋಗಿಗಳಿಂದ ಕ್ರಾಂತಿಕಾರಕ
ತರಬೇತಿಯನ್ನು ಪಡೆದದ್ದಕ್ಕೆ ಪರಿಶುದ್ಧ
ಕೃತಜ್ಞತೆಗಳಿಂದ ಪರಮಹಂಸ
ನಿತ್ಯಾನಂದರು ಜ್ಞಾನೋದಯಕ್ಕಾಗಿಯೇ
ಯೋಗ ವಿಜ್ಞಾನ ಮತ್ತು
ತಂತ್ರಗಳನ್ನೊಳಗೊಂಡ
ನಿತ್ಯಾಯೋಗ ಎಂಬುದನ್ನು ವಿನ್ಯಾಸ
ಗೊಳಿಸಿ ಜಾರಿಯಕ್ಕೆ ತಂದರು.
ತರಬೇತಿ ಹೊಂದಿದ ಮತ್ತು
ಮುಡಿಪಾಗಿರುವ ನಿತ್ಯ ಯೋಗಾ
ಚಾರ್ಯರುಗಳು ಈ ವಿಶಿಷ್ಟ ವಿಜ್ಞಾನವನ್ನು
ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ
ಕೊಂಡೊಯ್ಯುತ್ತಿದ್ದಾರೆ.

ಪರಮಹಂಸ ನಿತ್ಯಾನಂದರ 10 ವರ್ಷದವರಿದ್ದಾಗ ಧ್ಯಾನವನ್ನು ಮಾಡುತ್ತಿರುವ ಅತಿ ಹಳೆಯ ಛಾಯಾಚಿತ್ರ
ಪರಮಹಂಸ ನಿತ್ಯಾನಂದರಿಗೆ ರಘುಪತಿ
ಯೋಗಿಗಳಿಂದ ತಿಳಿಯಲ್ಪಡಬೇಕಾದ್ದು (ಮಾನವನ
ಜಾಗತಿಕ ಕ್ಷಣದಲ್ಲಿ ಹೋಲಿಸುವುದು)
ಗಾಳಿಯಲ್ಲಿ ತೇಲುವುದು ಮತ್ತು ಅಂತಹ
ಬೇರೆ ಅತಿಮಾನುಷ ಕ್ರಿಯೆಗಳನ್ನು
ಪ್ರದರ್ಶಿಸಿದರೂ ಸಹ, ಅವರಿಗೆ ಇವೆಲ್ಲವೂ
ಅಧ್ಯಾತ್ಮಿಕ ಬೆಳವಣಿಗೆಯ ಗುಣ
ವೈಶಿಷ್ಟ್ಯಗಳೆಲ್ಲವೆಂದು ಮತ್ತು ಪರಮ
ಸತ್ಯವು ಇವೆಲ್ಲವನ್ನು ಮೀರಿ ಇರುವುದು
ಎಂದು ಅರ್ಥಮಾಡಿಸಿದರು.

ರಘುಪತಿ ಯೋಗಿಗಳೇ ಪರಮಹಂಸ ನಿತ್ಯಾನಂದರು ಅವರ 10ನೆಯ ವಯಸ್ಸಿನಲ್ಲಿ ತಿರುವಣ್ಣಾಮಲೈನಲ್ಲಿ ಪತಂಜಲಿ ಯೋಗ ಸೂತ್ರದ ಮೇಲೆ ಮೊದಲನೆಯ ಸಾರ್ವಜನಿಕ ಭಾಷಣವನ್ನರ್ಪಿಸಿದರು. ಆ ಸಂದರ್ಭಕ್ಕಾಗಿ ಕರಪತ್ರಗಳನ್ನು ಹಂಚುವ ಮೂಲಕ 1000ಕ್ಕೂ ಅಧಿಕ ಜನರನ್ನು ಕರೆ ಮಾಡಿದರು.