KAILASA Library/ಅವರ ಹೆಸರು ನಿತ್ಯಾನಂದ/ಮುನ್ನುಡಿSign in
ಅವರ ಹೆಸರು ನಿತ್ಯಾನಂದ

ಮುನ್ನುಡಿ

This text was machine-transcribed from the printed book and may contain errors. Select the words and choose “Report a mistake”.

ಮನುಷ್ಯನ ಅಂತಿಮ ಅರಸುವಿಕೆಯು, ಬಾಹ್ಯ ಪ್ರಪಂಚದಲ್ಲಿ ಏನೇ
ಅರಸುತ್ತಿದ್ದರೂ, ಅಂತರಂಗದ ಆನಂದದ ಅರಸುವಿಕೆಯಾಗಿರು
ತ್ತದೆ. ತನ್ನ ಇರುವಿನ ಹಂತದಲ್ಲಿ ಸಂತೃಪ್ತಿಯನ್ನು ಅರಸುತ್ತಾನೆ. ಈ
ಅನ್ವೇಷಣೆಯನ್ನು ಗುರುತಿಸಿದಾಗ ಅವನು ತನ್ನದೇ ಸ್ವಂತ ಆನಂದ
ದತ್ತ ನೆಗಳೆಯು ತಯಾರಾಗುತ್ತಾನೆ. ಪೂರ್ವ ದೇಶಗಳು ಸಾವಿರಾರು
ಜ್ಞಾನೋದಯವನ್ನು ಹೊಂದಿದವರನ್ನು ಉತ್ಪತ್ತಿಸಿದ್ದು ಅವರು
ಮನುಕುಲದ ಮಿಕ್ಕವರನ್ನು ಅದೇ ಮಾರ್ಗದಲ್ಲಿ ನಡೆಸಿದ್ದಾರೆ.

ಈ ದಿನ ಪರಮಹಂಸ ನಿತ್ಯಾನಂದರು ಮಾನ್ಯತೆ ಹೊಂದಿದ ಗುರು
ಗಳು. ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯಲ್ಲಿ ಹುಟ್ಟಿ, ಸತ್ಯಕ್ಕಾಗಿ ಸಹಜ
ವಾದ ವ್ಯಾಮೋಹವನ್ನು ಹೊಂದಿದ ಅವರು ಯೋಗ, ಅಂದರೆ
ಮನಸ್ಸು-ದೇಹ-ಆತ್ಮದ ಸಂಯೋಗ, ಧ್ಯಾನ, ತಂತ್ರ, ವೇದಾಂತ
ಮತ್ತು ಪೌರಾತ್ಯ ಆಧ್ಯಾತ್ಮಿಕ ವಿಜ್ಞಾನಗಳೊಂದಿಗೆ ಅವರ 3
ವರ್ಷದ ಎಳೆಯ ವಯಸ್ಸಿನಿಂದಲೇ ಪ್ರಯೋಗಗಳನ್ನು ನಡೆಸಿದರು.
ಅವರು ಜ್ಞಾನೋದಯವನ್ನು ಹೊಂದುವ ಮೊದಲು ಅಂತರಂಗ
ವಿಜ್ಞಾನದ ಸಹಸ್ರಾರು ತಂತ್ರಗಳೊಂದಿಗೆ ಸಂಶೋಧನೆಗಳನ್ನು ನಡೆಸಿ
ದರು.

ಒಂದೇ ಮನಸ್ಸಿನಿಂದ ಜ್ಞಾನೋದಯದ ಗುರಿಯನ್ನು ಹೊಂದಿ, ಈ
ದಿನ ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರಿಗೆ ಅವರೊಬ್ಬ ಅತಿಶಯ
ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತರ್ಕ
ಬದ್ಧ ನಿಖರತೆ, ಆಧ್ಯಾತ್ಮಿಕ ವಿವೇಕ, ಬದುಕಿನ ಪರಿಹಾರಗಳನ್ನು ಧ್ಯಾನ
ಕಾರ್ಯಕ್ರಮಗಳ ಮುಖೇನ ಮತ್ತು ಅದನ್ನು ಗಳಿಸಲು ಬೇಕಾಗುವ
ಧೈರ್ಯವನ್ನು ಅವರು ನೀಡುತ್ತಿದ್ದಾರೆ. ಇಂದಿನ ಯುವ
ಜನಾಂಗಕ್ಕೆ, ಪ್ರತಿಯೊಬ್ಬರೂ ತಾವೇ ಪ್ರಯೋಗ ಮಾಡಿ ಸಾಧಿಸಬ
ಹುದೆಂಬ ಬೃಹತ್ ಸಾಧ್ಯತೆಯನ್ನು ಅವರು ತೋರುತ್ತಾರೆ.

ಪರಮಹಂಸ ನಿತ್ಯಾನಂದರು ವ್ಯಕ್ತಿಗಳಿಗೆ ತಾವೇ ಜಾಗೃತಗೊಂಡು
ಉನ್ನತ ಆತ್ಮದೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡಲು
ಅವರ ಧೈಯ ಕಾರ್ಯವನ್ನು ಆರಂಭಿಸಿದ್ದಾರೆ. ಭೂಗ್ರಹದ ಮೇಲೆ
ಅಂತರಂಗದ ಆನಂದದ ವಿಜ್ಞಾನವನ್ನು ಪುನರ್ ಸ್ಥಾಪಿಸಲು ಅವರು
ಧ್ಯೇಯವನ್ನು ಹೊಂದಿದ್ದಾರೆ. ತಮ್ಮ ಸಹಜ ಸಾಮರ್ಥ್ಯವನ್ನು
ಯಥಾರ್ಥಗೊಳಿಸಿಕೊಂಡು ಜ್ಞಾನೋದಯ ಹೊಂದಿದ ಜೀವನ
ಸಾಗಿಸಲು ಅವರು ಜನಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರು
ಹೇಳುವರು, ಸತ್ಯವನ್ನು ಕುರಿತು ದೃಢವಾದ ನಿಶ್ಚಯವನ್ನು ಹೊಂದಿ
ಜೀವಿಸುವ ಒಂದು ಜ್ಞಾನೋದಯ ಹೊಂದಿದ ಸಮಾಜವನ್ನು
ನಾವು ಸೃಷ್ಟಿಸಬೇಕು, ಎಂದು. ಪ್ರಪಂಚದಾದ್ಯಂತ ವಿಜ್ಞಾನಿಗಳ
ಳೊಂದಿಗೆ ಕೆಲಸ ಮಾಡುತ್ತಲೂ ಅವರು ವಿಜ್ಞಾನ ಮತ್ತು ಆಧ್ಯಾತ್ಮಿಕ
ತೆಯ ನಡುವೆ ಸೇತುವೆಯನ್ನು ನಿರ್ಮಿಸುತ್ತಿದ್ದಾರೆ.

ಈ ಪುಸ್ತಕವು ಪರಮಹಂಸ ನಿತ್ಯಾನಂದರ ಬೆಳಕಿನೆಡೆಗಿನ ಪಯಣದ
ಇಣುಕು ನೋಟಗಳನ್ನು ನೀಡುತ್ತದೆ. ಕುತೂಹಲಕರವಾದ ಪ್ರಸಂಗ
ಗಳಿಂದ ಮತ್ತು ಶ್ರೇಷ್ಠವಾದ ಸತ್ಯಗಳಿಂದಲೂ ಅದು ಓದುಗನನ್ನು
ಶಬ್ದಗಳ ಹಿಂದಿರುವ ಅಗಾಧವಾದ ಅನುಭವಕ್ಕೆ ಸೆಳೆಯಲು ಪ್ರಯ
ತ್ನಿಸುತ್ತದೆ. ಒಬ್ಬ ಜ್ಞಾನೋದಯ ಹೊಂದಿದ ಗುರುವಿನ ಜೀವಂತ
ತೆಯು ವ್ಯಕ್ತಿಯೊಬ್ಬನಲ್ಲಿ ಆಧ್ಯಾತ್ಮಿಕವಾಗಿ ಉತ್ತಮ ಜೀವನಶೈಲಿಯ
ಡೆಗೆ ದರ್ಶನ ಹೊಂದಲು, ಜ್ಞಾನೋದಯವನ್ನೇ ಹೊಂದುತ್ತಿರೆಂಬ
ಒಂದು ಆಳವಾದ ಹೊಂಬೆಳಕನ್ನು ಉಂಟು ಮಾಡುತ್ತದೆ ಎಂದು
ಹೇಳಲಾಗಿದೆ. ಭೂಗ್ರಹದ ಮೇಲಿನ ಒಬ್ಬ ದೊಡ್ಡ ಗುರುವಿನ ಮನ
ಕಲುಕುವ ಜೀವನಶೈಲಿಯ ಇಣುಕು ನೋಟಗಳಿಗಾಗಿ ಈ ಪುಸ್ತಕವನ್ನು
ಓದಿರಿ.