KAILASA Library/ಅವರ ಹೆಸರು ನಿತ್ಯಾನಂದ/ಜ್ಞಾನೋದಯದ ನಂತರದ ಮೊದಲ ದಿನಗಳುSign in
ಅವರ ಹೆಸರು ನಿತ್ಯಾನಂದ

ಜ್ಞಾನೋದಯದ ನಂತರದ ಮೊದಲ ದಿನಗಳು

This text was machine-transcribed from the printed book and may contain errors. Select the words and choose “Report a mistake”.

ಪ್ರಪಂಚ ಶಕ್ತಿಯ ಕಾಣದ ಕೈಯಿಂದ ನಡೆಸಲ್ಪಟ್ಟು ಪರಮಹಂಸ ನಿತ್ಯಾನಂದರು ಮಧ್ಯಪ್ರದೇಶದ ಓಂಕಾರೇಶ್ವರದಿಂದ ದಕ್ಷಿಣ ಭಾರತದ ತಮಿಳುನಾಡಿಗೆ ಕಾವೇರಿ ತಟದ ಮೇಲಿನ ಒಂದು ತಾತ್ಕಾಲಿಕ ವಾಸಸ್ಥಾನಕ್ಕೆ ಹೋದರು. ಭಕ್ತರಿಂದ ತರಲ್ಪಟ್ಟ ಊಟದಿಂದ ಜೀವಿಸುತ್ತ, ಹೊರಗಡೆಯೋ ಅಥವಾ ಗುಡಿಸಲು ಒಳಗೋ ಇರುತ್ತ, ಅವರು ಅನೇಕ ಗುಣಪಡಿಸುವ ಚಮತ್ಕಾರಗಳನ್ನು ಮಾಡಿದರು. ಅವರು ದೇವರ ಪೂಜೆಗಳನ್ನು, ಹೋಮಗಳನ್ನು ನಡೆಸಿದರು ಮತ್ತು ಮಾನಸಿಕ ಹಾಗೂ ದಾರ್ಶನಿಕ ಸ್ಥಿತಿಗಳಲ್ಲಿ ವಿಸರ್ಜಿಸಲ್ಪಟ್ಟ ಜನರಿಗೆ ವಾಹಿನ ಪರಿಹಾರಗಳನ್ನು ನೀಡುತ್ತಾ ಸಹಾಯಮಾಡುತ್ತಿದ್ದರು. ಅದ್ಭುತವಾದ ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಯುವ ಸ್ವಾಮೀಜಿಯನ್ನು ಕುರಿತ ಸಮಾಚಾರವು ಕಾಡ್ಗಿಚ್ಚಿನಂತೆ ಹರಡಿತು.